ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಸನ್ನಿಧಿಯಲ್ಲಿ, ಸೆಪ್ಟೆಂಬರ್ 7, 2025 (ಭಾನುವಾರ) ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಪೂಜಾ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ.
ಈ ದಿನ ಮಧ್ಯಾಹ್ನ 12.00 ಗಂಟೆಗೆ ಮಹಾಪೂಜೆ ನಡೆಯಲಿದ್ದು, ಸಂಜೆ 5.00 ಗಂಟೆಗೆ ರಾತ್ರಿ ಪೂಜೆ ನೆರವೇರಲಿದೆ. ಆದರೆ ಸಂಜೆ 5.00 ಗಂಟೆಯ ನಂತರ ಶ್ರೀ ದೇವರ ದರ್ಶನ ಇರುವುದಿಲ್ಲ ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕನತೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭಕ್ತರು ಈ ಬದಲಾವಣೆಗೆ ಸಹಕಾರ ನೀಡುವಂತೆ ದೇವಾಲಯದ ವತಿಯಿಂದ ವಿನಂತಿಸಲಾಗಿದೆ.
إرسال تعليق