ನವರಾತ್ರಿ ವಿಶೇಷ | ಕುಕ್ಕೆ KSS ಕಾಲೇಜಿನಲ್ಲಿ ಹುಲಿ ಕುಣಿತದ ಸಂಭ್ರಮ.

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ (KSS College) ನಲ್ಲಿ ನವರಾತ್ರಿ ಹಬ್ಬದ ಅಂಗವಾಗಿ ಹುಲಿ ಕುಣಿತ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ವಿಶೇಷ ಆಕರ್ಷಣೆಯಾಗಿ ಪರಿಣಮಿಸಿತು.

ಸೆಪ್ಟೆಂಬರ್ 21, 2025ರಂದು ಜವೆನೆರು ಕುಕ್ಕೆ ತಂಡ ಹಾಗೂ ಸೆಪ್ಟೆಂಬರ್ 24, 2025ರಂದು ಕುಕ್ಕೆ ಟೈಗರ್ಸ್ ತಂಡದಿಂದ ಹುಲಿವೇಷ ಪ್ರದರ್ಶನ ನಡೆಯಿತು. ಹಬ್ಬದ ಸಂಭ್ರಮವನ್ನು ವಿದ್ಯಾರ್ಥಿಗಳು ಉತ್ಸಾಹದಿಂದ ಅನುಭವಿಸಿದರು.

ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಂಶುಪಾಲರಾದ ಡಾ. ದಿನೇಶ್ ಪಿ.ಟಿ ಅವರ ಮಾರ್ಗದರ್ಶನ ಹಾಗೂ ವ್ಯವಸ್ಥೆ ಲಭ್ಯವಿತ್ತು. ಉಪನ್ಯಾಸಕರಾದ ಡಾ. ಪ್ರಸಾದ್ ಎನ್, ಶ್ರೀಲತ ಕಮೀಲ, ಡಾ. ವಿನ್ಯಾಸ್ ಹೊಸೊಳಿಕೆ, ಸೃಜನ್ ಮುಂಡೋಡಿ ಸೇರಿದಂತೆ ಅನೇಕ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದು, ಹುಲಿವೇಷ ತಂಡಗಳಿಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದರು.

ಈ ಕಾರ್ಯಕ್ರಮವು ವಿದ್ಯಾರ್ಥಿಗಳಲ್ಲಿ ಉತ್ಸವದ ಉಲ್ಲಾಸವನ್ನು ಹೆಚ್ಚಿಸುವುದರ ಜೊತೆಗೆ ನವರಾತ್ರಿಯ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸಿತು.

Post a Comment

Previous Post Next Post