ದನ ಕಳವು ಹಾಗೂ ಹಿಂಸೆ ಪ್ರಕರಣ: ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು!

📍 ಸ್ಥಳ: ಬೈಲುಗುತ್ತು, ಸಜೀಪನಡು, ಬಂಟ್ವಾಳ
📅 ದಿನಾಂಕ: 06.06.2025

ಬಂಟ್ವಾಳ ತಾಲೂಕಿನ ಸಜೀಪನಡು ಗ್ರಾಮದ ಬೈಲುಗುತ್ತು ಎಂಬಲ್ಲಿ ದಿನಾಂಕ 06 ಜೂನ್ 2025 ರಂದು ಸಂಜೆ ವೇಳೆಗೆ ದನದ ಕಳವು ಹಾಗೂ ಹಿಂಸಾತ್ಮಕವಾಗಿ ಕಟ್ಟಿಹಾಕಿದ ಕುರಿತು ಮಹಿತಿಯ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಲೋಲಾಕ್ಷ ಕೆ ನೇತೃತ್ವದ ತಂಡ ಸ್ಥಳ ಪರಿಶೀಲನೆ ನಡೆಸಿದೆ.

ಪೊಲೀಸರು ಸ್ಥಳಕ್ಕೆ ದೌಡಾಯಿಸಿದಾಗ ಇಬ್ರಾಹಿಂ ಎಂಬಾತನು ದನವೊಂದನ್ನು ಎಲ್ಲಿಂದಲೋ ಕಳವು ಮಾಡಿಕೊಂಡು ಬಂದು, ವಿದ್ಯುತ್ ಕಂಬಕ್ಕೆ ಹಿಂಸಾತ್ಮಕವಾಗಿ ಕಟ್ಟಿಹಾಕಿರುವುದು ಕಂಡುಬಂದಿದೆ. ತನಿಖೆಯಿಂದ ದನವನ್ನು ವಧೆ ಮಾಡುವ ಉದ್ದೇಶ ಇಟ್ಟಿರುವ ಶಂಕೆಯು ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ಸಂಖ್ಯೆ 66/2025 ದಾಖಲಾಗಿದ್ದು, ಹೀಗಾಗಿವೆ ದಾಖಲಾಗಿರುವ ಸೆಕ್ಷನ್ಗಳು:

🔸 ಕರ್ನಾಟಕ ಗೋವಧೆ ನಿಷೇಧ ಮತ್ತು ಪಶು ಸಂರಕ್ಷಣೆ ಅಧಿನಿಯಮ 2020
(ಕಲಂ: 4, 7, 12)
🔸 ಪಶು ಕ್ರೂರತೆ ತಡೆಯುವ ಅಧಿನಿಯಮ, 1960
(ಕಲಂ: 11(D))
🔸 ಭಾರತೀಯ ದಂಡ ಸಂಹಿತೆ (BNS), 2023
(ಕಲಂ: 303(2))

ಪೊಲೀಸರು ಆರೋಪಿಯ ವಿರುದ್ಧ ಕಾನೂನು ಕ್ರಮ ಕೈಗೊಂಡಿದ್ದು, ತನಿಖೆ ಮುಂದುವರಿಯುತ್ತದೆ.

Post a Comment

أحدث أقدم