ಯಕ್ಷಗಾನ ಕಲಾವಿದ ಕಡಬ ಶ್ರೀನಿವಾಸ ರೈ ಸಹಿತ 55 ಮಂದಿ ಸಾಧಕರಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ.

                        ಶ್ರೀನಿವಾಸ ರೈ

ಕಡಬ: ಯಕ್ಷಗಾನ ಕಲಾವಿದ ಕಡಬ ಶ್ರೀನಿವಾಸ ರೈ ಸಹಿತ 55 ಮಂದಿ ಸಾಧಕರಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. 20 ಸಂಸ್ಥೆಗಳಿಗೆ ಪ್ರಶಸ್ತಿ ಘೋಷಿಸಲಾಗಿದೆ.

ನ.1ರಂದು ಬೆಳಗ್ಗೆ 9ಕ್ಕೆ ನಗರದ ನೆಹರೂ ಮೈದಾನದಲ್ಲಿ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಸ್ಪೀಕರ್ ಯು.ಟಿ.ಖಾದರ್ ಅವರ ಸಮ್ಮುಖ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಪ್ರದಾನಿಸಲಿದ್ದಾರೆ.

ಕಡಬ ಶ್ರೀನಿವಾಸ ರೈ ಅವರು ಮರ್ದಾಳ ಸಮೀಪದ ಕೊಡಂದೂರು ರಾಮಣ್ಣ ರೈ ಮತ್ತು ಕುಸುಮಾವತಿ ದಂಪತಿ ಪುತ್ರ.

ಕರ್ನಾಟಕ ಮೇಳದಲ್ಲಿ 5 ವರ್ಷ , ಪುತ್ತೂರು ಮೇಳದಲ್ಲಿ 2 ವರ್ಷ, ಕದ್ರಿಮೇಳದಲ್ಲಿ 2 ವರ್ಷ,ಮಂಗಳದೇವಿ ಮೇಳದಲ್ಲಿ 7 ವರ್ಷ ,ಇದೀಗ ಬಪ್ಪನಾಡು ಮೇಳದಲ್ಲಿ ಇವರ ಸೇವೆ ಮುಂದುವರೆಸುತ್ತಿದ್ದಾರೆ. ಕಾಡ ಮಲ್ಲಿಗೆ,ಎಲ್ಲೂರ್ದ ಮಲ್ಲಿ ,ಕಚ್ಚೂರ ಮಲ್ದಿ ಇವರಿಗೆ ಹೆಸರು ತ೦ದುಕೊಟ್ಟ ಯಕ್ಷಗಾನಗಳು

Comments

Popular posts from this blog

ಕುಕ್ಕೆ ಸುಬ್ರಹ್ಮಣ್ಯ ರಥಬೀದಿಯಲ್ಲಿ ಭಕ್ತನ ಮೇಲೆ ಸೌಟಿನಿಂದ ಹಲ್ಲೆ – ವೈರಲ್ ವಿಡಿಯೋ, ದೇವಸ್ಥಾನ ಮೆನೇಜರ್ ಮೌನಕ್ಕೆ ಸಾರ್ವಜನಿಕ ಆಕ್ರೋಶ!

ರಾಮಕುಂಜದಲ್ಲಿ ಹೀಗೊಂದು ಬೇನರ್ - ಬೇನರ್ ಅಳವಡಿಸಿ ತಾಕತ್ತು ತೋರಿದ ಜನರು!

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಕಲಿ ವಸತಿಗೃಹ ವೆಬ್‌ಸೈಟ್ ಮೂಲಕ ಸೈಬರ್ ವಂಚನೆ ಆರೋಪ: ಭಕ್ತರು ಎಚ್ಚರ ವಹಿಸುವಂತೆ ಮನವಿ