Posts

Showing posts from December, 2024

ಸುಬ್ರಹ್ಮಣ್ಯ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಚುನಾವಣೆ ನೂತನ ಸಮೀತಿ ರಚನೆ.ಅಧ್ಯಕ್ಷರಾಗಿ ಶ್ರೀಮತಿ ಪ್ರೇಮ ಬಿ ಆಯ್ಕೆ.

Image
ಸುಬ್ರಹ್ಮಣ್ಯ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಚುನಾವಣೆಯು ದಿನಾಂಕ 8.12 2024 ರಂದು ನಡೆಯಲಾಯಿತು11 ಮಂದಿ ಸದಸ್ಯರು ಅವಿರೋಧವಾಗಿ ಆಯ್ಕೆ ಆಗಿರುತ್ತಾರೆ. ದಿನಾಂಕ 11 12 2024ರಂದು ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯ ರಿಟರ್ನಿಂಗ್ ಅಧಿಕಾರಿಯಾಗಿರುವ ಶ್ರೀಮತಿ ಶೋಭಾ ಮೇಡಂ ಇವರ ಅಧ್ಯಕ್ಷತೆಯಲ್ಲಿ ನಡೆಯಿತು, ನೂತನ ಅಧ್ಯಕ್ಷರಾಗಿ ಶ್ರೀಮತಿ ಪ್ರೇಮ ಬಿ ಆಯ್ಕೆ ಆಗಿರುತ್ತಾರೆ ಉಪಾಧ್ಯಕ್ಷರಾಗಿ ಶ್ರೀಮತಿ ಲಲಿತ ಏನ್ ಇವರು ಆಯ್ಕೆಯಾಗಿರುತ್ತಾರೆ ನಿರ್ದೇಶಕರಾಗಿ  ಶ್ರೀಮತಿ ಹರಿಣಾಕ್ಷಿ, ಶ್ರೀಮತಿ ಕಮಲ, ಶ್ರೀಮತಿ ರುಕ್ಮಿಣಿ ,ಶ್ರೀಮತಿ ಸುಮಿತ್ರ ,ಶ್ರೀಮತಿ ಸೀತಮ್ಮ ,ಶ್ರೀಮತಿ ರುಕ್ಮಿಣಿ .ಡಿ,ಶ್ರೀಮತಿ ಶೇಷಮ್ಮ, ಶ್ರೀಮತಿ ಲಲಿತ ಶ್ರೀಮತಿ ಲತಾ ಪಿ, ಆಯ್ಕೆಯಾಗಿರುತ್ತಾರೆ.

ಮಾಜಿ ಪ್ರಧಾನಿ, ಖ್ಯಾತ ಅರ್ಥಶಾಸ್ತ್ರಜ್ಞ ಮನಮೋಹನ್‌ ಸಿಂಗ್‌ ಇನ್ನಿಲ್ಲ.

Image
ನವದೆಹಲಿ : ಡಿ,26,ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಮನಮೋಹನ್‌ ಸಿಂಗ್‌ (92) ಅವರು ಇಂದು ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ನಿಧನರಾದರು. ಆರೋಗ್ಯ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಸಿಂಗ್‌ ಅವರನ್ನು ತುರ್ತು ಚಿಕಿತ್ಸಾ ಘಟಕಕ್ಕೆ ಕರೆತರಲಾಗಿತ್ತು. ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಕಾರಣ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿತ್ತು. ಆದರೆ, ರಾತ್ರಿ ಹೊತ್ತಿಗೆ ಅವರು ಕೊನೆಯುಸಿರೆಳೆದಿದ್ದಾರೆ. ಮನಮೋಹನ್ ಸಿಂಗ್ ಅವರು 1991-96ರ ಅವಧಿಯಲ್ಲಿ ಪಿವಿ ನರಸಿಂಹರಾವ್ ನೇತೃತ್ವದ ಸರ್ಕಾರದಲ್ಲಿ ದೇಶದ ಹಣಕಾಸು ಸಚಿವರಾಗಿ ಪ್ರಾಮುಖ್ಯತೆಯನ್ನು ಗಳಿಸಿದರು. ಆರ್ಥಿಕತೆಯನ್ನು ಪರಿವರ್ತಿಸುವ ವ್ಯಾಪಕ ಸುಧಾರಣೆಗಳನ್ನು ತಂದರು. ಯುಪಿಎಯ ಎರಡು ಅವಧಿಯ ಪ್ರಧಾನಿಯಾಗಿ ಅವರು (2004 ಮತ್ತು 2014) ಸೇವೆ ಸಲ್ಲಿಸಿದರು. ಈ ವರ್ಷದ (2024) ಆರಂಭದ ವರೆಗೆ ರಾಜ್ಯಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ಏಪ್ರಿಲ್‌ನಲ್ಲಿ ರಾಜ್ಯಸಭೆಯಿಂದ ನಿವೃತ್ತರಾದರು. ಗಾಂಧಿ ಕುಟುಂಬ ಹೊರತು ಪಡಿಸಿ ಕಾಂಗ್ರೆಸ್‌ನಲ್ಲಿ ಹೆಚ್ಚು ಅವಧಿಯ ಪ್ರಧಾನಿ ಆಗಿದ್ದ ಹೆಗ್ಗಳಿಕೆ ಇವರದ್ದು.

ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ವಿಶ್ವ ಹೃದಯ ಸಮ್ಮೇಳನಕ್ಕೆ ಆಗಮಿಸುವ ಪಾದಯಾತ್ರೆಗಳಿಗೆ ಉಪಹಾರ ವ್ಯವಸ್ಥೆ.

Image
ಸುಬ್ರಹ್ಮಣ್ಯ ಡಿ.26.: ರಿಷಿ ಸಂಸ್ಕೃತಿ ವಿದ್ಯಾ ಕೇಂದ್ರ( ರಿ)ಸಿದ್ದ ಸಮಾಧಿ ಯೋಗ ಇವರ ವತಿಯಿಂದ ಡಿಸೆಂಬರ್ 27, 28,29 ಮೂರು ದಿನಗಳ ಕಾಲ ಸುಬ್ರಹ್ಮಣ್ಯದಲ್ಲಿ ವಿಶ್ವ ಹೃದಯ ಸಮ್ಮೇಳನ ಜರಗಲಿರುವುದು. ಈ ಸಮ್ಮೇಳನಕ್ಕೆ ಮಂಗಳವಾರ ಮಂಗಳೂರಿನಿಂದ ಪಾದಯಾತ್ರೆ ಆರಂಭಗೊಂಡು ಇಂದು ಬೆಳಿಗ್ಗೆ ಏನಕಲ್ಲಿಗೆ ತಲುಪಿದ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಪಾದಯಾತ್ರೆಗಳಿಗೆ ಬೆಳಗಿನ ಉಪಹಾರ ವ್ಯವಸ್ಥೆಯನ್ನು ಏರ್ಪಡಿಸಲಾಯಿತು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್, ಪೂರ್ವ ಅಸಿಸ್ಟೆಂಟ್ ಗವರ್ನರ್ ಶಿವರಾಮ ಎನಕ್ಕಲ್, ಪೂರ್ವ ಅಧ್ಯಕ್ಷ ಮೈಲಪ್ಪ ಸಂಕೇಶ, ಸದಸ್ಯರಾದ ನವೀನ್ ವಾಲ್ತಾಜೆ, ಉಪಸ್ಥಿತರಿದ್ದರು ಇದೇ ಸಂದರ್ಭದಲ್ಲಿ ರೋಟರಿ ಡಿಸ್ಟ್ರಿಕ್ಟ್ 3170 ಜಮಖಂಡಿ ರಾಮತೀರ್ಥದ ನಿರ್ದೇಶಕರಾದ ಲಕ್ಷ್ಮಿಕಾಂತ್ ರವರು ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಅಧ್ಯಕ್ಷ ಚಂದ್ರಶೇಖರ್ ನಾಯರ್ ಅವರಿಂದ ಧ್ವಜವನ್ನು ಸ್ವೀಕರಿಸಿದರು .ಒಟ್ಟು 80 ಜನ ಪಾದಯಾತ್ರೆಗಳು ಬೆಳಗಿನ ಉಪಹಾರ ಸೇವಿಸಿ ಸುಬ್ರಹ್ಮಣ್ಯ ದತ್ತ ಪಾದಯಾತ್ರೆ ಆರಂಭಿಸಿದರು.

ಕುಕ್ಕೆ ಸುಬ್ರಹ್ಮಣ್ಯ ಯಾತ್ರೆಗೆ ಬರುವ ಭಕ್ತರು ರಸ್ತೆ ಬದಿಯಲ್ಲಿ ಅಡುಗೆ,ಊಟ _ಉಳಿದ ತಟ್ಟೆ, ಪ್ಲಾಸ್ಟಿಕ್,ಆಹಾರ ಪದಾರ್ಥ ಚರಂಡಿಗೆ .

Image
ಕುಕ್ಕೆ ಸುಬ್ರಹ್ಮಣ್ಯ ; ಡಿ,25. ರಜೆ, ವರ್ಷಾಂತ್ಯ, ಹೆಚ್ಚಿನ ಸಂಖ್ಯೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರು. ಅಯ್ಯಪ್ಪ ವೃತದಾರಿಗಳು,ಶಾಲಾ ,ಕಾಲೇಜು ಮಕ್ಕಳು,ಹೀಗೆ ಕುಕ್ಕೆಗೆ ಬರುವವರು ಬಸ್ ಹಾಗೂ ಇನ್ನಿತರ ವಾಹನಗಳಲ್ಲಿ ಆಗಮಿಸುತ್ತಾರೆ. ಬಸ್ ಹಾಗೂ ವಾಹನಗಳನ್ನು ರಸ್ತೆ ಬದಿಯಲ್ಲಿ , ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿ ಅಡುಗೆ ಮಾಡುವುದು ಸಾಮಾನ್ಯವಾಗಿ ಕಂಡುಬರುತ್ತಿದೆ. ಇದರಿಂದ ಯಾರಿಗೂ ಸಮಸ್ಯೆ ಅಲ್ಲ. ಊಟ ಮಾಡಿದ ಮೇಲೆ ಉಳಿದ ತ್ಯಾಜ್ಯ, ಪ್ಲಾಸ್ಟಿಕ್,ಊಟ ಮಾಡಿದ ತಟ್ಟೆ ಗಳನ್ನು,ರಸ್ತೆ ಬದಿಯಲ್ಲಿ, ಚರಂಡಿಯಲ್ಲಿ ಎಸೆದು ಹೋಗುತ್ತಿದ್ದಾರೆ. ತ್ಯಾಜ್ಯಗಳನ್ನು ಎಸೆಯುವುದರಿಂದ ಸಮಸ್ಯೆಯಾಗುತ್ತಿದೆ. ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ಈ ಬಗ್ಗೆ ಪ್ರಸ್ತಾಪ ಆಗಿದ್ದರು ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಅಬಿವೃದ್ಧಿ ಅಧಿಕಾರಿ ಹಾಗೂ ಆಡಳಿತ ಕಮಿಟಿ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ. ಇಂದು ಕುಕ್ಕೆ ಸುಬ್ರಹ್ಮಣ್ಯ ಕುಮಾರಧಾರ ಸೇತುವೆಯಿಂದ ಕುಲ್ಕುಂದ ಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಬಸ್ ನಿಲ್ಲಿಸಿ ಅಡುಗೆ ಮಾಡುತ್ತಿರುವ ದೃಶ್ಯ ಕಂಡು ಬಂತು. ಬಸ್ ಹೋದ ಸ್ವಲ್ಪ ಸಮಯದಲ್ಲಿ ಬಂದು ವೀಕ್ಷಿಸಿದಾಗ ಆ ಬಸ್ಸಿನಲ್ಲಿ ಇದ್ದವರೆಲ್ಲ ತಾವು ಊಟ ಮಾಡಿದ ತಟ್ಟೆಗಳನ್ನು ಉಳಿದ ಆಹಾರಗಳನ್ನು ನೀರಿನ ಬಾಟಲ್ ಗಳನ್ನು ರಸ್ತೆಯ ಇ...

ಕೇರ್ಪಡ:ಮಹಿಷಮರ್ದಿನೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ.

Image
ಕೇರ್ಪಡ :ಮಹಿಷಮರ್ದಿನೀ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಂಭ್ರಮ ಜ.1ರಿAದ 07ರತನಕ ವಿರಾಟ್ ದೈವೀ ಕಾರ್ಯಕ್ರಮ:ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಸಮಾಗಮ ಸುಬ್ರಹ್ಮಣ್ಯ: ಕಡಬ ತಾಲೂಕಿನ ಎಡಮಂಗಲ ಗ್ರಾಮದ ಮುರುಳ್ಯದ ಕೇರ್ಪಡ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವವು 7 ದಿನಗಳ ಕಾಲ ನಡೆಯಲಿದೆ.ಜ.01ರಿಂದ 7ರ ತನಕ ವಿವಿಧ ವೈದಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ಸಮಾಗಮದೊಂದಿಗೆ ನೆರವೇರಲಿದೆ.ಕ್ಷೇತ್ರದ ತಂತ್ರಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವವು ನಡೆಯಲಿದೆ. ಸುಮಾರು ಅಂದಾಜು ರೂ. 70 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಕಾರ್ಯಗಳು ಮತ್ತು ಬ್ರಹ್ಮಕಲಶೋತ್ಸವ ನೆರವೇರಲಿದೆ ಎಂದು ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಸಂತ ನಡುಬೈಲು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 12 ವರ್ಷದ ಬಳಿಕ ಮತ್ತೆ ಭಾಗ್ಯ: ಸುಮಾರು 800 ವರ್ಷ ಇತಿಹಾಸ ಇರುವ ದೇವಸ್ಥಾನ ಇದಾಗಿದೆ. 2009ರಲ್ಲಿ ಈಗಿರುವ ನಮ್ಮ ಸಮಿತಿ ಅಸ್ಥಿತ್ವಕ್ಕೆ ಬಂದಾಗ ಮಣ್ಣಿನ ಗೋಡೆಯನ್ನು ಹೊಂದಿದ್ದ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಲು ಚಿಂತನೆ ಮಾಡಿದೆವು. 2012ರಲ್ಲಿ ಅಷ್ಟಬಂಧ ಬ್ರಹ್ಮಕಲಶೋತ್ಸವ ನೆರವೇರಿತ್ತು.ಇದೀಗ 12 ವರ್ಷದ ಬಳಿಕ ನಮ್ಮದೇ ವ್ಯವಸ್ಥಾಪನಾ ಸಮಿತಿಗೆ ಬ್ರಹ್ಮಕಲಶೋತ್ಸವ ಕಾರ್ಯ ನೆರವೇರಿಸಲು ಶ್ರೀ ದೇವಿಯು ಅವಕಾಶ ನೀಡಿರುವುದು ಭಾಗ್ಯ ಎಂದರು...

ಡಿ .29 ಕುಕ್ಕೆ ಸುಬ್ರಹ್ಮಣ್ಯದಲ್ಲಿ ರಾಜ್ಯಮಟ್ಟದ ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ.

Image
ಸುಬ್ರಹ್ಮಣ್ಯ ಡಿ.13: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ತುಮಕೂರು, ನೇತ್ರಾವತಿ ವಲಯ ಮಂಗಳೂರು ವತಿಯಿಂದ ಡಿಸೆಂಬರ್ 29ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ರಥ ಬೀದಿಯಲ್ಲಿ ರಾಜ್ಯಮಟ್ಟದ ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ ನಡೆಯಲಿರುವುದು .ಈ ಯೋಗ ಶಿಬಿರದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಾದ ಬೆಂಗಳೂರು ,ಮೈಸೂರು, ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ,ಹಾಸನ ,ತುಮಕೂರು ಹಾಗೂ ಉಳಿದ ಕಡೆಗಳಿಂದ ಸುಮಾರು 3000 ಯೋಗ ಬಂಧುಗಳು ಭಾಗವಹಿಸಲಿರುವರು. ಸಾಮೂಹಿಕ ಯೋಗ ಕಾರ್ಯಕ್ರಮಗಳು ಬೆಳಗ್ಗೆ 5:00ಯಿಂದ 7 ಗಂಟೆ ತನಕ ನಡೆಯಲಿರುವುದು .ಕಾರ್ಯಕ್ರಮದ ಉದ್ಘಾಟನೆಯನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಅಧಿಕಾರಿ ಜುಬಿನ್ ಮಹಾಪಾತ್ರ ಹಾಗೂ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗೊಂಡಿ ನೆರವೇರಿಸಲಿರುವರು. ದೂರದ ಊರುಗಳಿಂದ ಬರುವ ಯೋಗ ಬಂದುಗಳಿಗೆ ತಂಗಲು ಶ್ರೀ ದೇವಳದ ಸಂಸ್ಥೆಗಳಲ್ಲಿ ,ಛತ್ರಗಳಲ್ಲಿ ವ್ಯವಸ್ಥೆ ಮಾಡಲಾಗುವುದು ,ಹಾಗೂ ಬೆಳಗಿನ ಉಪಹಾರವನ್ನು ಶ್ರೀ ದೇವಳದ ವತಿಯಿಂದ ನೀಡಲಿರುವರೆಂದು ಸಂಘಟಕರು ತಿಳಿಸಿರುತ್ತಾರೆ.

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಕುಟುಂಬ ಭೇಟಿ.

Image
ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಡಿ.23 ರಂದು ಮಧ್ಯಾಹ್ನ ಕರ್ನಾಟಕ ಅರಣ್ಯ ಸಚಿವ ಈಶ್ವರ್ ಖಂಡ್ರೆ , ಪತ್ನಿ ಗೀತಾ ಖಂಡ್ರೆ ,ಮಗ ಬಿದರ್ ಸಂಸದ ಸಾಗರ್ ಖಂಡ್ರೆ ಹಾಗೂ  ಪತ್ನಿ ಗೀತಾ ಖಂಡ್ರೆ ಸಹೋದರರಾದ ಹೈಕೋರ್ಟ್ ಎಸ್.ಪಿ.ಪಿ ವಿಜಯ ಕುಮಾರ್ ಮಜ್ಜಿಗೆ ಹಾಗೂ ವಕೀಲ ಗಂಗಾಧರ್ ಮಜ್ಜಿಗೆ, ಕಾಂಗ್ರೆಸ್ SC ಮೋರ್ಚಾದ ಅಧ್ಯಕ್ಷ ಲಕ್ಷ್ಮಿ ನಾರಾಯಣ ಸ್ವಾಮಿ ಭೇಟಿ ನೀಡಿ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು.ಈಶ್ವರ್ ಖಂಡ್ರೆ ಮತ್ತು ಮಗ ಸಾಗರ್ ಖಂಡ್ರೆ ಬೆಲ್ಲ ಮತ್ತು ಕಡ್ಲೆಬೆಳೆಯಿಂದ ಧರ್ಮಾಧಿಕಾರಿಗಳ ಮುಂದೆ ತುಳ ಭಾರ ಸೇವೆ ಮಾಡಿಸಿದರು.  ಸಚಿವರ ಭೇಟಿ ವೇಳೆ ಮಂಗಳೂರು ಡಿಸಿಎಫ್ ಮರಿಯಪ್ಪ ಕರಿಕಳನ್, ಅರಣ್ಯ ಇಲಾಖೆಯ (FMS) ಮಂಗಳೂರು DCF ಶ್ರೀಕಾಂತ್ ಖಣದಾಳಿ ಬೆಳ್ತಂಗಡಿ ಆರ್.ಎಫ್.ಓ ತ್ಯಾಗರಾಜ್, ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ಗೌಡ ಮತ್ತಿತರ ಕಾರ್ಯಕರ್ತರು ಭಾಗಿಯಾಗಿದ್ದರು.

ಡಿ.25: ಸಿರಿಬಾಗಿಲು ಶಾಲಾ ವಾರ್ಷಿಕೋತ್ಸವ

Image
ಕಡಬ : ಕೊಂಬಾರು ಗ್ರಾಮದ ಸಿರಿಬಾಗಿಲು ಸರಕಾರಿ ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ. ಹಾಗೂ ಹಳೆ ವಿದ್ಯಾರ್ಥಿ ಸಂಘದ ಸಹಯೋಗದೊಂದಿಗೆ ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಕ್ರೀಡೋತ್ಸವ ಸಿರಿಬಾಗಿಲು ಶಾಲೆಯಲ್ಲಿ ಡಿ.25ರಂದು ನಡೆಯಲಿದೆ.    ಬೆಳಗ್ಗೆ ಗಂಟೆ 9ಕ್ಕೆ ಕಾರ್ಯಕ್ರಮವನ್ನು ಕೊಂಬಾರು ಗ್ರಾ.ಪಂ. ಸದಸ್ಯ ಚೆನ್ನಕೇಶವ ಕೈಂತಿಲ ಉದ್ಘಾಟಿಸುವರು. ಸಂಜೆ 4ಕ್ಕೆ ಬಹುಮಾನ ವಿತರಣೆ ನಡೆಯಲಿದೆ. ಗ್ರಾ.ಪಂ. ಸದಸ್ಯ ಗಣೇಶ್ ಪಿಲಿಕಜೆ ಬಹುಮಾನ ವಿತರಿಸುವರು. ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ಚೆನ್ನಕೇಶವ ಗೌಡ ಕಟ್ಟೆ ಇಡ್ಯಡ್ಕ ಅಧ್ಯಕ್ಷತೆ ವಹಿಸುವರು. ಬಂಟ್ರ ಕ್ಲಸ್ಟರ್ ಸಮೂಹ ಸಂಪನ್ಮೂಲ ವ್ಯಕ್ತಿ ಕುಮಾರ್ ಕೆ.ಜೆ., ಧರ್ಮಸ್ಥಳ ಯೋಜನೆಯ ಮೇಲ್ವಿಚಾರಕ ರವಿಪ್ರಸಾದ್, ಎಸ್.ಡಿ.ಎಂ.ಸಿ. ಮಾಜಿ ಅಧ್ಯಕ್ಷ ಮನೋಹರ ಕಟ್ಟೆ, ಹಳೆ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಗಣೇಶ್ ಅನಿಲ ಮುಖ್ಯ ಅತಿಥಿಗಳಾಗಿರುವರು.

ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಕುಮಾರಪಾದಕ್ಕೆ ಪೂಜೆ.

Image
 ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನ ವತಿಯಿಂದ ಕುಮಾರಪರ್ವತದ ತುತ್ತ ತುದಿಯಲ್ಲಿರುವ ಕುಮಾರ ಪಾದಕ್ಕೆ ಮತ್ತು ಸಮೀಪದಲ್ಲಿರುವ ವಾಸುಕಿಗೆ ಸಂಪ್ರದಾಯದಂತೆ ಡಿ.21 ಪೂಜೆ ನೆರವೇರಿಸಲಾಯಿತು.     ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕ ವೇ|ಮೂ। ಸೀತಾರಾಮ ಯಡಪಡಿತ್ತಾಯ ಅವರು ಪೂರ್ವಶಿಷ್ಟ ಸಂಪ್ರದಾಯದ ಪ್ರಕಾರ ಮಾರ್ಗಶಿರ ಬಹುಳ ಷಷ್ಠಿಯ ದಿನದಂದು ಪಂಚಾಮೃತ ಅಭಿಷೇಕ ನೆರವೇರಿಸಿ ಪೂಜೆ ನೆರವೇರಿಸಿದರು.   ಕುಕ್ಕೆ ಸುಬ್ರಹ್ಮಣ್ಯದಿಂದ ಸುಮಾರು 12 ಕಿ.ಮೀ. ದೂರವಿರುವ ಎತ್ತರದ ಪರ್ವತ ಏರಿ ಪೂಜೆಯಲ್ಲಿ ಭಕ್ತರು ಭಾಗವಹಿಸಿ ಪ್ರಸಾದ ಸ್ವೀಕರಿಸಿದರು. ವರ್ಷಕ್ಕೊಂದು ಬಾರಿ ಮಾತ್ರವೇ ಇಲ್ಲಿ ದೇವಸ್ಥಾನದ ವತಿಯಿಂದ ಪೂಜೆ ನೆರವೇರಿಸಲಾಗುತ್ತದೆ. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ ಸೇರಿದಂತೆ ಅಧಿಕಾರಿಗಳು, ಸಿಬ್ಬಂದಿಗಳು, ಕ್ಷೇತ್ರದ ಭಕ್ತರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ ರೋಟರಿ ವತಿಯಿಂದ ಸೈಬರ್ ಕ್ರೈಂ ಹಾಗೂ ಪೋಕ್ಸೋ ಕಾಯ್ದೆ ಬಗ್ಗೆ ಮಾಹಿತಿ ಕಾರ್ಯಕ್ರಮ.

Image
ಸುಬ್ರಹ್ಮಣ್ಯ ಡಿ .23: ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಕುಮಾರಸ್ವಾಮಿ ಪ್ರೌಢಶಾಲಾ ಹಾಗೂ ಪದವಿಪೂರ್ವ ಕಾಲೇಜಿನ ಎಲ್ಲಾ ವಿದ್ಯಾರ್ಥಿನಿಯರಿಗೆ ಸೈಬರ್ ಕ್ರೈಂ ಹಾಗೂ ಪೋಕ್ಸೋ ಕಾಯ್ದೆ ಬಗ್ಗೆ ಮಾಹಿತಿ ಶಿಬಿರವನ್ನು ಶನಿವಾರ ವಿದ್ಯಾಲಯದ ಸಭಾಂಗಣದಲ್ಲಿ ಏರ್ಪಡಿಸಲಾಯಿತು. ಪುತ್ತೂರು ಮಹಿಳಾ ಠಾಣೆಯ ಪೊಲೀಸ್ ಉಪ ನಿರೀಕ್ಷಕಿ ಸವಿತಾ ಅವರು ಸೈಬರ್ ಕ್ರೈಂ ಹಾಗೂ ಪೋಕ್ಸೋ ಕಾಯ್ದೆ ಬಗ್ಗೆ ವಿವರವಾದ ಮಾಹಿತಿಗಳನ್ನು ವಿದ್ಯಾರ್ಥಿನಿಯರಿಗೆ ನೀಡಿದರು. ಹಾಗೆಯೇ ವಿದ್ಯಾರ್ಥಿನಿಯ ರೊಂದಿಗೆ ಚರ್ಚಾಗೋಷ್ಠಿ ಕೂಡ ನಡೆದು ಪ್ರಶ್ನೆಗಳಿಗೆ ಉತ್ತರಿಸಿದರು. ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಹಾಗೂ ಶಾಲಾ ಸಂಚಾಲಕ ಚಂದ್ರಶೇಖರ ನಾಯರ್ ಅಧ್ಯಕ್ಷತೆ ವಹಿಸಿದ್ದರು ಮುಖ್ಯ ಅತಿಥಿಗಳಾಗಿ ಕಡಬ ತಾಲೂಕು ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಶಿವಪ್ರಸಾದ್ ಮೈಲೇರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಭೆಯಲ್ಲಿ ಪದವಿ ಪೂರ್ವ ವಿದ್ಯಾಲಯದ ಪ್ರಾಂಶುಪಾಲ ಡಾl ಸಂಕೀರ್ಥ ಹೆಬ್ಬಾರ್ ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ವಿದ್ಯಾರತ್ನ ಹಾಗೂ ವಿದ್ಯಾರ್ಥಿನಿಯರೊಂದಿಗೆ ಎಲ್ಲಾ ಶಿಕ್ಷಕಿ, ಉಪನ್ಯಾಸಕಿ ವೃಂದ ದವರು ಕೂಡ ಹಾಜರಿದ್ದರು.

ಗಾಳಿ ತುಂಬುವಾಗ ಸ್ಪೋಟಗೊಂಡ ಟಯರ್-ಘಟನೆಯ ದೃಶ್ಯಾವಳಿ ಸಿ ಸಿ ಕ್ಯಾಮೆರಾದಲ್ಲಿ ಸೆರೆ

Image
ಉಡುಪಿ ;ಗಾಳಿ ತುಂಬುವಾಗ ಸ್ಪೋಟಗೊಂಡ ಟಯರ್ ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ 66ರ ಸಮೀಪ ಘಟನೆ ಕೆಪಿಎಸ್ ಪಿಯು ಕಾಲೇಜ್ ಹಿಂಭಾಗದಲ್ಲಿ ನ ಟಯರ್ ಪಂಚರ್ ಶಾಪ್  ಬಸ್ಸಿನ ಟೈಯರಿಗೆ ಗಾಳಿ ತುಂಬುವ ಸಂದರ್ಭ ಸಿಡಿದ ಟಯರ್ ಗಾಯಗೊಂಡ ಯುವಕ  ಅಬ್ದುಲ್ ರಜೀದ್ (19)  ಖಾಸಗಿ ಶಾಲೆ ಬಸ್ಸುಂದರ  ಟಯರ್ ಪ್ಯಾಚ್ ಗೆಂದು ಬಂದಿದ್ದ  ಗಾಳಿ ತುಂಬಿದ ಕೆಲವೇ ನಿಮಿಷಗಳಲ್ಲಿ ಟೈಯರ್ ಸಿಡಿದು ಸ್ಪೋಟ ಗಾಳಿ ತುಂಬಿಸುತ್ತಿದ್ದ ಯುವಕ ಎದ್ದು ನಿಲ್ಲುವಷ್ಟರಲ್ಲಿ ಸ್ಪೋಟ ಟಯರ್ ನ ಸಿಡಿತಕ್ಕೆ ಸುಮಾರು ಕೆಲವು ಅಡಿ ಎತ್ತರಕ್ಕೆ ಎಸೆಯಲ್ಪಟ್ಟ ಯುವಕ ಅಪಘಾತದ ಹೊಡೆತಕ್ಕೆ ಯುವಕನ  ಕೈ ಮುರಿತ ಹೆಚ್ಚಿನ ಚಿಕಿತ್ಸೆಗಾಗಿ  ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಘಟನೆಯ ದೃಶ್ಯಾವಳಿ ಸಿ ಸಿ ಕ್ಯಾಮೆರಾದಲ್ಲಿ ಸೆರೆ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪ ಮನೆಯಿಂದ ಬೆಳ್ಳಂಬೆಳಗ್ಗೆ ಕಳ್ಳತನ ..! ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Image
ಕುಕ್ಕೆ ಸುಬ್ರಹ್ಮಣ್ಯ : ಸಂಪುಟ ನರಹಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ವಸತಿ ಗೃಹದಲ್ಲಿ ವಾಸವಿದ್ದ ಅರ್ಚಕರೋರ್ವರ ಮನೆಯಿಂದ ನವರತ್ನಗಳಿರುವ ಚಿನ್ನದ ತುಳಸಿಯ ಮಣಿಸರ ಸಹಿತ ಲಕ್ಷ ರೂ ಮೌಲ್ಯದ ಚಿನ್ನಾಭರಣ ಕಳವಾಗಿರುವ ಘಟನೆ ಸುಬ್ರಹ್ಮಣ್ಯದಿಂದ ವರದಿಯಾಗಿದೆ. ಸುಬ್ರಹ್ಮಣ್ಯ ಮಠದಲ್ಲಿ ಅರ್ಚಕರಾಗಿರುವ ಆನಂದ ಭಟ್ ಎಂಬವರ ಮನೆಯಿಂದ ಡಿ.22 ರಂದು ಬೆಳಗ್ಗಿನ ಜಾವ ಕಳ್ಳತನ ನಡೆದಿದೆ. ಡಿ.22 ರ ಮುಂಜಾನೆ 4:30 ರ ಸಮಯಕ್ಕೆ ಪೂಜೆ ಸಲುವಾಗಿ ಮಠಕ್ಕೆ ತೆರಳಿದ್ದು ಮಧ್ಯಾಹ್ನ ವೇಳೆ ಮರಳಿ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ. ಮನೆಯಲ್ಲಿನ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದಲ್ಲದೆ, ಕಪಾಟಿನಲ್ಲಿದ್ದ ಚಿನ್ನಾಭರಣಗಳು ಕಳ್ಳನವಾಗಿದ್ದು ಒಟ್ಟು ಮೌಲ್ಯ 1,15,000 ಎಂದು ಠಾಣೆಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸುಬ್ರಹ್ಮಣ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಘಟನಾ ಸ್ಥಳಕ್ಕೆ ಸುಬ್ರಹ್ಮಣ್ಯ ಪಿ ಎಸ್.ಐ ಕಾರ್ತಿಕ್, ಅಪರಾಧ ಸ್ಥಳ ಪರಿಶೀಲನಾಧಿಕಾರಿ ಅರ್ಪಿತಾ,ಸುಮನ್ ಬಿ.ಎಂ, ಶ್ವಾನದಳದ ಜಯಪ್ರಕಾಶ್, ಬೆರಳಚ್ಚು ತಜ್ಞರಾದ ಸಚಿನ್, ಉದಯ ಆಗಮಿಸಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ಶ್ರೀ ದೇವರ ಸೇವೆ ಸಲ್ಲಿಸಿದ ಪಾಕಪ್ರವೀಣ ಕೃಷ್ಣ ಪ್ರಶಾಂತ್ ಸರಳಿ ಅವರಿಗೆ ಹವ್ಯಕ ಸಾಧಕರತ್ನ ಪ್ರಶಸ್ತಿ.

Image
     ಸರಳ ವ್ಯಕ್ತಿತ್ವದ ಪ್ರಶಾಂತ್ ಸರಳಿಗೆ               ಹವ್ಯಕ ಸಾಧಕ ರತ್ನದ ಕಿರೀಟ. ಕುಕ್ಕೆ ಸುಬ್ರಹ್ಮಣ್ಯ ;ಸಾಧನೆಗೆ ದೊಡ್ಡ ಉದ್ಯೋಗ, ತುಂಬಾ ದುಡ್ಡು ಬೇಕು,ಪ್ರಭಾವಿಗಳ ಬೆಂಬಲ ಬೇಕು,ಯಾವುದಾದರೂ ಒಂದು ಕ್ರೀಡಾಪಟುವಾಗಿರಬೇಕು.ಕಲೆ ಸಾಹಿತ್ಯ ದಲ್ಲಿ ಪ್ರಾವೀಣ್ಯತೆ ಪಡೆದಿರಬೇಕು,ಎಂದೇನಿಲ್ಲ . ನಾವು ಮಾಡುವ ಕೆಲಸ ಕಾರ್ಯದ ಮೇಲೆ ಅಥವಾ ಉದ್ಯೋಗ,ಅದು ಚಿಕ್ಕದಾಗಿರಲಿ, ದೊಡ್ಡದೇ ಆಗಿರಲಿ, ಮಾಡುವ ಉದ್ಯೋಗದಲ್ಲಿ ಶ್ರದ್ಧೆ, ಪ್ರಾಮಾಣಿಕತೆ, ಕೆಲಸ ಕಾರ್ಯದ ಮೇಲೆ ಪ್ರೀತಿ ಇದ್ದರೆ ನಾವು ಮಾಡುವಂತ ಯಾವುದೇ ಉದ್ಯೋಗ ಇರಬಹುದು, ಕಲೆ ,ಸಾಹಿತ್ಯ,ಕ್ರೀಡಾ ರಂಗ, ಅಲ್ಲದೆ ಅಡುಗೆ ಮಾಡುವ ಕಲೆ ಯಲ್ಲಿಯೂ ಸಾಧಿಸಬಹುದು,ಎಲ್ಲರ ಮೆಚ್ಚುಗೆಗೆ ಪಾತ್ರರಾಗಬಹುದು ಎಂದು ಇಲ್ಲೊಬ್ಬರು ಸಾಧಿಸಿ ತೋರಿಸಿದ್ದಾರೆ.ಅವರೇ ಬೆಳ್ತಂಗಡಿ ತಾಲೂಕು ಇಳಂತಿಲ ಗ್ರಾಮ. ಸರಳಿ ದಿ/ಮಹಾಬಲೇಶ್ವರ ಭಟ್, ಕಮಲಾವತಿ ದಂಪತಿಗಳ ಸುಪುತ್ರ.ಶ್ರೀ ಕೃಷ್ಣ ಪ್ರಶಾಂತ ಸರಳಿ. ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಅದು ಅಲ್ಲದೆ ವಿಶ್ವ ಹವ್ಯಕ ಸಮ್ಮೇಳನದಲ್ಲಿ ನೀಡಲಾಗುವ “ಹವ್ಯಕ ಸಾಧಕರತ್ನ” ಪ್ರಶಸ್ತಿಗೆ ಪುರಸ್ಕೃತರಾಗಿದ್ದಾರೆ. ಶ್ರೀ ಕೃಷ್ಣ ಪ್ರಶಾಂತ ಸರಳಿ ಅವರು ಪಾಕ ಪ್ರವೀಣರಾದ ರವಿ ಕುಂಠಿಣಿ ಹಾಗೂ ಕಿರಣ ಕುಂಠಿಣಿ ,ಅವರ ಶಿಷ್ಯ ರಾಗಿ ಸುಮಾರು 18 ವರ್ಷ ಅಡುಗೆ ಮಾಡುವ ಕಲೆಯನ್ನ ಕರಗತ ಮಾ...

ಕಾಂಚನಾ ಸುಂದರ ಭಟ್ ನಿವೃತ್ತ ವಿದ್ಯಾಧಿಕಾರಿ.ಒಂದು ಕಿರು ಪರಿಚಯ;

Image
                 * ಕಾಂಚನ ಸುಂದರ ಭಟ್*                       *ನಿವೃತ್ತ ವಿದ್ಯಾಧಿಕಾರಿ *.             *************************                            * ಪರಿಚಯ *   ಕಾಂಚನ ಸುಂದರ ಭಟ್ ಜನಿಸಿದ್ದು, ನೇತ್ರಾವತಿ- ಕುಮಾರಧಾರ ನದಿಗಳ ಸಂಗಮ ಕ್ಷೇತ್ರ ದಕ್ಷಿಣ ಕನ್ನಡದ ಉಪ್ಪಿನಂಗಡಿ ಸಮೀಪದ ಸಂಗೀತ ಕಾಶಿ ಎನಿಸಿದ ಕಾಂಚನ. ಸಂಸ್ಕಾರವಂತ ಕೃಷಿ ಕುಟುಂಬದಲ್ಲಿ ಜನಿಸಿ, ಬಡತನ, ಕಷ್ಟಕಾರ್ಪಣ್ಯಗಳ ಹಳ್ಳಿ ಬದುಕು ಕಂಡವರು. ಶಿಕ್ಷಕರಾಗಿ ವೃತ್ತಿಗೆ ಸೇರಿ ಮುಖ್ಯ ಶಿಕ್ಷಕ, ಸಹಾಯಕ ಶಿಕ್ಷಣಾಧಿಕಾರಿ,ಕ್ಷೇತ್ರ ಶಿಕ್ಷಣಾಧಿಕಾರಿ, ವಿದ್ಯಾಧಿಕಾರಿ ಹೀಗೆ ದಕ್ಷಿಣ ಕನ್ನಡದಲ್ಲಿ ಬಹು ವಿಧದ ಶೈಕ್ಷಣಿಕ ಪಾತ್ರಗಳು ಇವರದಾಯಿತು. ಬೋಧನೆಯ ಅನುಭವದಿಂದ ಪಕ್ವಗೊಂಡು ಬೋಧಿಸುವ ಸಹಸ್ರಾರು ಶಿಕ್ಷಕರ ಕಣ್ಮನಗಳಲ್ಲಿ ಕನಸುಗಳ ಬಿತ್ತಿ ಚೆಲುವು ತುಂಬಿದರು. ಇಪ್ಪತ್ತನೆಯ ಶತಮಾನದ ಕೊನೆಯಲ್ಲಿ ಶಾಲೆಗಳೆಂದರೆ ಕೊರತೆಗಳದೇ ಸಾಮ್ರಾಜ್ಯ.ಕೊಠಡಿ, ಶೌಚಾಲಯ, ಭೂದಾಖಲೆ, ಪೀಠೋಪಕರಣ, ಶಿಕ್ಷಕರು ಹೀಗೆ ಎಷ್ಟು ಸಾಧ್ಯವೊ ಅವೆಲ್ಲವನ್ನು ತನ್ನ ವ್ಯಾಪ್ತಿಯ ಶಾಲ...

ಕೊಯಿಲ & ಹಿರೆಬಂಡಾಡಿ ಕಸ ಸಮರ..!

Image
ಕಸ ಎಸೆದವರ ಎರಡು ಮನೆಯವರ ಮೇಲೆ ಕಾನೂನುಕ್ರಮ.10,000 ಸಾವಿರ ದಂಡ ವಸೂಲಿ ಮಾಡಿದ ಕೊಯಿಲ ಗ್ರಾಮ ಪಂಚಾಯತ್. ಕೊಯಿಲ ;ತಾಲೂಕಿನ ಗಡಿ ಭಾಗದಲ್ಲಿ ಕಸದ ರಾಶಿ: ತ್ಯಾಜ್ಯದ ಉಸ್ತುವಾರಿ ಯಾರಿಗೆ? ಕೊಯಿಲ & ಹಿರೆಬಂಡಾಡಿ ಕಸ ಸಮರ..! ಎಂಬ ಶೀರ್ಷಿಕೆ ಅಡಿಯಲ್ಲಿ ಕೊಯಿಲ ಗ್ರಾಮದ ,ಬಡ್ಡಮೆ ಗಂಡಿಬಾಗಿಲು ಇಂದ ಬೊಳುಮ್ಬುಡ ತೆರಳುವ ರಸ್ತೆ. ರಸ್ತೆ ಬದಿಯಲ್ಲಿ ಸರಕಾರಿ ಜಾಗದಲ್ಲಿ ವಾಹನಗಳಲ್ಲಿ ಕಸ,ತ್ಯಾಜ್ಯಗಳನ್ನು ತಂದು ಸುರಿಯುತ್ತಾರೆ.ಎಂದು ಡಿ.11ರಂದು ಸ್ಥಳದ ಚಿತ್ರ, ವಿಡಿಯೋ ,ಸರ್ವೇ ನಂಬರ್,ಸ್ಥಳದ ದಿಶಾಂಕ್ ನಕ್ಷೆ,ದಾಖಲೆಗಳನ್ನು ಮಾದ್ಯಮದಲ್ಲಿ   ವರದಿಮಾಡಿದ್ದೆವು. ಉಭಯ ತಾಲೂಕು ಹಾಗೂ ಗ್ರಾಮಗಳ ಗಡಿಯಲ್ಲಿ ಕಸದ ರಾಶಿ, ತ್ಯಾಜ್ಯಗಳನ್ನೂ ಸುರಿದಿದ್ದಾರೆ, ಎಂದು ಕೊಯಿಲ ಹಾಗೂ ಹಿರೇಬಂಡಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಿಗೆ ಹಾಗೂ ವರ್ಡ್ ಸದಸ್ಯರಿಗೆ  ತಿಳಿದ್ದೆವು. ತಕ್ಷಣ ಕ್ರಮಕ್ಕೆ ಮುಂದಾದ ಅಧ್ಯಕ್ಷೆ ಪುಷ್ಪಶುಭಾಷ್ ಶೆಟ್ಟಿ,ಪಂಚಾಯತ್ ಸದಸ್ಯರು  ಹಾಗೂ ಗ್ರಾ. ಪಂ.ಅಬಿವೃದ್ಧಿ ಅಧಿಕಾರಿ ಸಂದೇಶ; ಗಡಿ ವಿವಾದ ಹಾಗೂ ಕಸದ ವಿಲೇವಾರಿ ಬಗ್ಗೆ ತಕ್ಷಣ ಕ್ರಮಕ್ಕೆ ಮುಂದಾದ ಕೊಯಿಲ ಗ್ರಾಮ ಪಂಚಾಯತ್ ಅಧ್ಯಕ್ಷೆ ಪುಷ್ಪಶುಭಾಷ್ ಶೆಟ್ಟಿ ಹಾಗೂ ಸದಸ್ಯರು, ಗ್ರಾ. ಪಂ.ಅಬಿವೃದ್ಧಿ ಅಧಿಕಾರಿ ಸಂದೇಶ,  ಡಿ.12 ರಂದು ನಾವು ತಿಳಿಸಿದ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ,...

ಡಿ 25 ರಂದು ಕಡಬ ಒಕ್ಕಲಿಗ ಗೌಡ ಸೇವಾ ಸಂಘದ ಆಡಳಿತ ಕಛೇರಿ ಉದ್ಘಾಟನೆ, ವಾರ್ಷಿಕ ಕ್ರೀಡಾಕೂಟ.

Image
ಕಡಬ ;ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ವತಿಯಿಂದ ಹೊಸಮಠದದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಸಮುದಾಯ ಭವನದಲ್ಲಿ ಸಂಘದ ಆಡಳಿತ ಕಛೇರಿಯ ಉದ್ಘಾಟನಾ ಸಮಾರಂಭ ಹಾಗೂ ಸಮುದಾಯದ ತಾಲೂಕು ಮಟ್ಟದ ವಾರ್ಷಿಕ ಕ್ರೀಡಾಕೂಟ ಡಿಸೆoಬರ್ 25 ನೇ ಬುಧವಾರ ನಡೆಯಲಿದೆ, ಎಂದು ಕಡಬ ತಾಲೂಕು ಒಕ್ಕಲಿಗ ಗೌಡ ಸೇವಾ ಸಂಘದ ಅಧ್ಯಕ್ಷ ಸುರೇಶ್ ಗೌಡ ಬೈಲು ಹೇಳಿದರು. ಅವರು ಶನಿವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸಮುದಾಯದ  ಎಲ್ಲಾ ಜನರನ್ನು  ಒಗ್ಗೂಡಿಸುವ ಹಾಗೂ ಸಂಘಟನಾತ್ಮಕ ದೃಷ್ಠಿಯಿಂದ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ, ತಾಲೂಕಿನ 42 ಗ್ರಾಮಗಳಿಂದ ಸುಮಾರು ಆರು ಸಾವಿರ ಸಮಾಜ ಬಾಂಧವರು ಸೇರುವ ನಿರೀಕ್ಷೆಯಿದೆ ಎಂದರು.  ಸದೃಢ ಸಮಾಜ ನಿರ್ಮಾಣ ಧ್ಯೇಯದೊಂದಿಗೆ ನಿರ್ಮಾಣವಾಗುತ್ತಿರುವ ಸಮುದಾಯ ಭವನದಲ್ಲಿ ಸಂಘದ ಕಛೇರಿ ಉದ್ಘಾಟನೆಯಾಗುತ್ತಿದ್ದು, ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಉದ್ಘಾಟನೆ ನೆರವೇರಿಸಿ ಆಶೀರ್ವಚನ ನೀಡಲಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ದೈಪಿಲ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಅರ್ವಗುತ್ತು, ಬೆಂಗಳೂರಿನ ಉದ್ಯಮಿ ನಟರಾಜ್, ಲೋಕೋಪಯೋಗಿ ಇಲಾಖಾ ಇಂಜಿನಿಯರ್ ಪ್ರಮೋದ್ ಕುಮಾರ್ ಕೆ.ಕೆ. ಹಾಗೂ ಇತರ ಗಣ್ಯರು ಭಾಗವಹಿಸಲಿದ್ದಾರೆ. ಇದೇ ವೇಳೆ ಸಮುದಾಯದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಹೇಳಿದ ಸುರೇಶ್ ಗೌಡ ...

ಕುಕ್ಕೆ ಸುಬ್ರಹ್ಮಣ್ಯ -ಕಲ್ಮಕಾರು ಆನೆ ದಾಳಿ ಅಯ್ಯಪ್ಪ ವೃತದಾರಿ ಗಂಭೀರ.

Image
 ಕಲ್ಮಕಾರು ; ಗ್ರಾಮದ ಚರಿತ್ ಎಂಬವರ ಮೇಲೆ ಆನೆ ದಾಳಿ ಮಾಡಿ ಗಂಭೀರ ಗಾಯವಾದ ಘಟನೆ ಇಂದು ಬೆಳಗ್ಗೆ ವರದಿಯಾಗಿದೆ. ಅಯ್ಯಪ್ಪ ವೃತದಾರಿ ಚರಿತ್ ಎಂಬವರು ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ. ಬೆಳಗ್ಗಿನ ವೇಳೆ ತೋಡಿನಲ್ಲಿ ಬಟ್ಟೆ ತೊಳೆಯುತಿದ್ದಾಗ ನಡೆದ ಘಟನೆ ಇದಾಗಿದ್ದು ಬೆನ್ನು ಮತ್ತು ತಲೆಯ ಭಾಗಕ್ಕೆ ಹೆಚ್ಚಿನ ಗಾಯವಾಗಿರುವುದಾಗಿ ತಿಳಿದು ಬಂದಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ರಾಜ್ಯಮಟ್ಟದ ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ.ಡಿ .29 ರಂದು ನಡೆಯಲಿದೆ.

Image
ಸುಬ್ರಹ್ಮಣ್ಯ ಡಿ.13: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ತುಮಕೂರು, ನೇತ್ರಾವತಿ ವಲಯ ಮಂಗಳೂರು ವತಿಯಿಂದ ಡಿಸೆಂಬರ್ 29ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ರಥ ಬೀದಿಯಲ್ಲಿ ರಾಜ್ಯಮಟ್ಟದ ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ ನಡೆಯಲಿರುವುದು .ಈ ಯೋಗ ಶಿಬಿರದಲ್ಲಿ ರಾಜ್ಯಾದ್ಯಂತ ಸುಮಾರು 3000 ಯೋಗ ಬಂಧುಗಳು ಭಾಗವಹಿಸಲಿರುವರೆಂದು ಸಂಘಟಕರು ತಿಳಿಸಿರುತ್ತಾರೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ನೂತನ ಬೆಳ್ಳಿಯ ಪಲ್ಲಕಿ ಸೇವೆ -ಶ್ರೀ ದೇವಳಕ್ಕೆ ನೂತನ ಬೆಳ್ಳಿಯ ಪಲ್ಲಕಿಯ ಆಗಮನ.

Image
ಕುಕ್ಕೆ ಸುಬ್ರಹ್ಮಣ್ಯ ; ಡಿ ,15, ಬಾಗಲಕೋಟೆ  ಉದ್ಯಮಿ ನಾಗರಾಜ ಕುಲಕರ್ಣಿ, ಭಾರ್ಗವಿ ಕುಲಕರ್ಣಿ, ಭೀಮಾಜಿ, ವೈ.ಎಸ್. ಗಲಗಲಿ ಜಮಖಂಡಿ ಮತ್ತು ಕುಟುಂಬಸ್ಥರು ಸೇರಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಶ್ರೀ ದೇವರಿಗೆ ನೂತನ ಬೆಳ್ಳಿಯ ಪಲ್ಲಕಿಯ ಸೇವೆ,ನೀಡಲಿದ್ದು ಅದರ ಪುರಪ್ರವೇಶ ಇಂದು (ಡಿ.15 ) ರಂದು ನಡೆಯಿತು. ಅದ್ದೂರಿ ಮೆರವಣಿಗೆಯಲ್ಲಿ ಅದನ್ನು ದೇವಸ್ಥಾನಕ್ಕೆ ತರಲಾಯಿತು. ಕಾಶಿಕಟ್ಟೆಯಿಂದ ಆನೆ ಬಿರುದಾವಲಿಗಳಿದ್ದು ಮೆರವಣಿಗೆಯಲ್ಲಿ ಬರಲಾಯಿತು. ಈ ಸಂದರ್ಭ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಪಲ್ಲಕಿ ದಾನಿಗಳ ಕುಟುಂಬ ಸ್ನೇಹಿತ ಶ್ರೀಕುಮಾರ್ ಬಿಲದ್ವಾರ, ಮಾಸ್ಟರ್ ಪ್ಲಾನ್ ಸದಸ್ಯ ಸತೀಶ್ ಕೂಜುಗೋಡು ಮತ್ತಿತರರು ಉಪಸ್ಥಿತರಿದ್ದರು. ನಾಳೆ (ಡಿ.16) ರಂದು ಇದರ ಸಮರ್ಪಣೆ ಆಗಲಿರುವುದಾಗಿ ತಿಳಿದು ಬಂದಿದೆ. 

ವಿದ್ಯುತ್ ಕಂಟ್ರಾಕ್ಟರ್ ದಾರರ ಸಂಘದ ರಾಜ್ಯಾಧ್ಯಕ್ಷ ಸುಬ್ರಹ್ಮಣ್ಯ ಬೇಟಿ.

Image
ಸುಬ್ರಹ್ಮಣ್ಯ, ಡಿ.15: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯ ಅಧ್ಯಕ್ಷ ರಮೇಶ್ ಅವರು ಮನೆಯವರೊಂದಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಅವರು ಸರ್ಪಸಂಸ್ಕಾರ ನಾಗ ಪ್ರತಿಷ್ಠೆ ಆಶ್ಲೇಷ ಬಲಿ ಇತ್ಯಾದಿ ಸೇವೆಗಳನ್ನ ಮಾಡಿ ಶ್ರೀ ದೇವರ ಪ್ರಸಾದ ಸ್ವೀಕರಿಸಿದರು. ಸುಳ್ಯ ತಾಲೂಕು ವಿದ್ಯುತ್ತು ಗುತ್ತಿಗೆದಾರರ ಸಂಘದ ಮಾಜಿ ಅಧ್ಯಕ್ಷ ವಸಂತಕುಮಾರ ಕಿದಿಲ ಬರಮಾಡಿಕೊಂಡರು.

ಗ್ರಾಮದ ಆರೋಗ್ಯ ಕುರಿತು ಒಂದು ದಿನದ ಮುಖಾ-ಮುಖಿ ತರಬೇತಿ ಕಾರ್ಯಕ್ರಮ.

Image
ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವತಿಯಿಂದ ರಾಜೀವ್ ಗಾಂಧಿ ಸೇವಾ ಕೇಂದ್ರ  ಕುಮಾರಧಾರ ಸಭಾಭವನದಲ್ಲಿ.  ಡಿ .12,ಗುರುವಾರದಂದು ಗ್ರಾಮ ಆರೋಗ್ಯ ಕುರಿತು ಒಂದು ದಿನದ ಮುಖಾ-ಮುಖಿ ತರಬೇತಿ ಕಾರ್ಯಕ್ರಮ ನಡೆಯಿತು.  ಗ್ರಾಮ ಪಂಚಾಯತ್  ಉಪಾಧ್ಯಕ್ಷರಾದ ಶ್ರೀ ಎಚ್.ಎಲ್. ವೆಂಕಟೇಶ್ ರವರು ತರಬೇತಿ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ನಾರಾಯಣ ಎನ್.ಎಸ್. ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ತರಬೇತಿ ಕಾರ್ಯಕ್ರಮದ ಕೇಂದ್ರ ಬಿಂದು ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಪ್ರಮೀಳಾ  ಕ್ಷೇತ್ರ ಆರೋಗ್ಯ ಶಿಕ್ಷಣ ಅಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸುಳ್ಯ ಇವರು ಸಂಪೂರ್ಣವಾಗಿ ಆರೋಗ್ಯ ಮಾಹಿತಿ ತರಬೇತಿ ನೀಡಿರುತ್ತಾರೆ. ಇನ್ನೋರ್ವೆ ಸಂಪನ್ಮೂಲ ವ್ಯಕ್ತಿಯಾಗಿ ಶ್ರೀಮತಿ ಉಷಾ  ಮಹಿಳಾ ಮೇಲ್ವಿಚಾರಕರು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ ಸುಳ್ಯ ಇವರು ಬಾಲ್ಯ ವಿವಾಹದ ಕುರಿತಾಗಿ ಸಂಪೂರ್ಣ ಮಾಹಿತಿ ನೀಡಿರುತ್ತಾರೆ. ಸಭಾ ವೇದಿಕೆಯಲ್ಲಿ ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳಾದ ಶ್ರೀಮತಿ ಭಾಗ್ಯ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳಾದ ಶ್ರೀಮತಿ ತಾರಾ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಶ್ರೀಮತಿ ನವ್ಯಾ & ಶ್ರೀಮತಿ ಶಾಂತರವರು ಉಪಸ್ಥಿತರಿದ್ದರು. ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಕುಕ್ಕೆ ಶ್ರೀ ಸುಬ್ರಹ್...

ಕುಕ್ಕೆ ಸುಬ್ರಹ್ಮಣ್ಯ ಕೆ.ಎಸ್, ಎಸ್, ಕಾಲೇಜ್ ಎದುರು.ರಾಜ್ಯರಸ್ತೆಯಲ್ಲೇ ಜಲ್ಲಿ, ಸಿಮೆಂಟ್ ಮಿಶ್ರಣಮಾಡಿ ಕಟ್ಟಡ ಕಾಮಗಾರಿ....!

Image
ಕುಕ್ಕೆ ಸುಬ್ರಹ್ಮಣ್ಯ ; ರಾಜ್ಯರಸ್ತೆ ಮೇಲೆ ಹಾಗೂ ಫುಟ್ಪಾತ್ ಮೇಲೆ ನೂತನ ಕಟ್ಟಡ ನಿರ್ಮಾಣ ಮಾಡಲು ಬೇಕಾದ ಜಲ್ಲಿ, ಸಿಮೆಂಟ್, ಹಾಕಲು ಅವಕಾಶ ಇದ್ಯ? ರಾಜ್ಯರಸ್ತೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಪರ್ಕ ಮಾಡುವ ಪ್ರಧಾನರಸ್ತೆ ಯಲ್ಲಿ ಯಾವುದೇ ತಡೆ ಬೇಲಿ ಅಥವಾ ಶೆಡ್ನೆಟ್ ಹಾಕದೆ ಕಾಮಗಾರಿಗೆ ಅವಕಾಶ ಇದ್ಯ? ಒಂದು ಕಟ್ಟಡ ನಿರ್ಮಾಣ ಮಾಡುವಾಗ ಯಾವುದೇ  ಬೆಂಕಿ ಅವಘಡಗಳು ಸಂಭವಿಸಿದ ಸಂದರ್ಭದಲ್ಲಿ ಹಾಗೂ ಇನ್ನಿತರ ತುರ್ತು ಸಂದರ್ಭ ಕಟ್ಟಡದ ಸುತ್ತ ಅಗ್ನಿಶಾಮಕ ವಾಹನ ಹೋಗಲು ಅವಕಾಶ ಬೇಡವೇ?   ಕಟ್ಟಡ ನಿರ್ಮಾಣಕ್ಕೆ ರಸ್ತೆಯನ್ನು , ಪುಟ್ಬಾತ್ ಅನ್ನು ಉಪಯೋಗ ಮಾಡಿದರೆ, ಕುಕ್ಕೆ ದೇವಳದ ಮಾಸ್ತರ್ ಪ್ಲಾನ್ ಕಾಮಗಾರಿ ಯಲ್ಲಿ ನಿರ್ಮಾಣವಾದ ರಸ್ತೆ, ಫುಟ್ಬಾತ್,ಒಳಚರಂಡಿ ಈರೀತಿ ಸಾರ್ವಜನಿಕ  ಸ್ವತ್ತುಗಳು ಹಾಳಾಗುವುದಿಲ್ಲವೇ? ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು, ಸುಬ್ರಹ್ಮಣ್ಯ ದೇವಳದ ಪಿಡಬ್ಲ್ಯೂಡಿ ಅಧಿಕಾರಿಗಳು ಈ ಬಗ್ಗೆ ಯಾಕೆ ಕ್ರಮ ಕೈಗೊಂಡಿಲ್ಲ? ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆಗಳಾಗುತ್ತಿದೆ.

ಯೂತ್ ಕ್ಲಬ್ ದೊಡ್ಡಕೊಪ್ಪದ ವತಿಯಿಂದ ಶ್ರೀ ಸಿದ್ದಿವಿನಾಯಕ ಸಭಾಭವನದಲ್ಲಿ 7ನೇ ವರ್ಷದ ಸಭಾ ಕಾರ್ಯಕ್ರಮ.

Image
ಕಡಬ : ನಮ್ಮಲ್ಲಿ ಸ್ವ ಮೌಲ್ಯ ಮಾಪನದ ಅಗತ್ಯವಿದೆ,ದುಂದು ವೆಚ್ಚಕ್ಕೆ ಕಡಿವಾಣ ಹಾಕುವ ಮೂಲಕ ಯುವ ಸಮುದಾಯ ಜವಾಬ್ದಾರಿಯುತ ಹೆಜ್ಹೆ ಇಡಬೇಕಾಗಿದೆ ಎಂದು ನಿವೃತ್ತ ಶಿಕ್ಷಕ ಸುಂದರ ಗೌಡ ಅಭಿಪ್ರಾಯ ಪಟ್ಟರು. ಅವರು ಯೂತ್ ಕ್ಲಬ್ ದೊಡ್ಡಕೊಪ್ಪದ ವತಿಯಿಂದ ಶ್ರೀ ಸಿದ್ದಿವಿನಾಯಕ ಸಭಾಭವನದಲ್ಲಿ ನಡೆದ 7 ವರ್ಷದ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು. ಊರಿನ ಅಭಿವೃದ್ಧಿ ಮತ್ತು ಪ್ರತಿಭೆಗೆ ಪ್ರೊತ್ಸಾಹ ನೀಡುವ ವೇದಿಕೆಯಾಗಿ ಸಂಘಟನೆ ಬಲಗೊಳ್ಳಬೇಕು,ನಮ್ಮಲ್ಲಿ ಬದ್ದತೆ ಇದ್ದಾಗ ಇಂತಹ ಬಲಿಷ್ಠ ಸಂಘ ಮುನ್ನಡೆಸಲು ಸಾಧ್ಯವೆಂದರು. ಬಿಜೆಪಿ ಯುವ ಮೋರ್ಚಾ ಸುಳ್ಯ ಮಂಡಲ ಇದರ ಕಾರ್ಯದರ್ಶಿ ಆರ್. ದಿವಾಕರ ಕುಂಬಾರ ಅವರು ಮಾತಾನಾಡಿ, ಸಮುದಾಯಕ್ಕೆ ಬೆಳಕು ಚೆಲ್ಲುವ ಕಾರ್ಯದ ಮೂಲಕ ಸಂಘಟನೆ ಸಾಮಾಜಿಕವಾಗಿ ಗುರುತಿಸಿಕೊಂಡಿದೆ, ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು, ಸಮುದಾಯ ಮತ್ತು ಊರು ಅಭಿವೃದ್ಧಿಯಾಗಲು ಸಂಘಟನಾತ್ಮಕ ಪ್ರಯತ್ನ ಅಗತ್ಯ ವೆಂದರು. ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಯೂತ್ ಕ್ಲಬ್ ದೊಡ್ಡಕೊಪ್ಪ ಇದರ ಅಧ್ಯಕ್ಷ ಪ್ರಕಾಶ ಪಿ ಅವರು ಮಾತಾನಾಡಿ ಉತ್ತಮ ಅಂಕಗಳನ್ನು ಗಳಿಸುವ ಮೂಲಕ ಸಮುದಾಯದ ಮಕ್ಕಳು ಮುಖ್ಯವಾಹಿನಿಗೆ ಬರಬೇಕು, ಶಿಕ್ಷಣಕ್ಕೆ ಹೆಚ್ವಿನ ಒತ್ತು ನೀಡಬೇಕೆಂದರು. ಕುಂಬಾರ ಸೇವ ಸಂಘದ ಅಧ್ಯಕ್ಷ ಕುಂಞಣ್ಣ ಕುಂಬಾರ, ಶ್ರೀ ಸಿದ್ದಿವಿನಾಯಕ ಭಜನಾ ಮಂಡಳಿ ಆದ್ಯಕ್ಷ ದೇವಣ್ಣ ಜೆ , ಯೂತ್ ಕ್ಲಬ್ ನ ಗ...

ನೆಲ್ಯಾಡಿ, ಟೂರಿಸ್ಟ್ ಟ್ಯಾಕ್ಸಿ ಸ್ಟ್ಯಾಂಡ್ ಉದ್ಘಾಟನೆ.

Image
ನೆಲ್ಯಾಡಿ .ಕಡಬ ತಾಲೂಕು ಕೌಕ್ರಾಡಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನೆಲ್ಯಾಡಿ ಪೇಟೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿಮೆನ್ಸ್ ಮತ್ತು ಮ್ಯಾಕ್ಸಿ ಕ್ಯಾಬ್ ಅಸೋಸಿಯೇಷನ್ ವತಿಯಿಂದ ಸದಸ್ಯರ ಪ್ರವಾಸಿ ವಾಹನಗಳಿಗೆ ನಿಗದಿತವಾದ ನಿಲುಗಡೆ ಸ್ಥಳವನ್ನು ಸ್ಥಳೀಯ ಟ್ಯಾಕ್ಸಿ ಚಾಲಕರ ಸಮ್ಮುಖದಲ್ಲಿ ಟ್ಯಾಕ್ಸಿ ಸ್ಟಾಂಡಿನ ನಾಮ ಫಲಕಕ್ಕೆ ಹೂವಿನ ಹಾರ ಹಾಕುವುದರ ಮೂಲಕ ಉದ್ಘಾಟೀಸಲಾಯಿತು. ಕೌಕ್ರಾಡಿ ಗ್ರಾಮ ಪಂಚಾಯತಿನ ಅಧ್ಯಕ್ಷರಾದ ಲೋಕೇಶ್ ಬಾಣಜಾಲು ಅವರು ಉದ್ಘಾಟನೆ ನಡೆಸಿಕೊಟ್ಟರು . ಪವಿತ್ರ ಕ್ಷೇತ್ರ ಗಳಾದ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳ ಇದರ ಮಧ್ಯ ಭಾಗದಲ್ಲಿರುವಂತಹ ಅಭಿವೃದ್ಧಿ ಹೊಂದುತ್ತಿರುವ ನೆಲ್ಯಾಡಿ ಪೇಟೆಯಲ್ಲಿ ಒಂದು ಟ್ಯಾಕ್ಸಿ ಸ್ಟ್ಯಾಂಡ್ ಅಗತ್ಯವಿದೆ ಎಂಬ ಸದಸ್ಯ ಚಾಲಕ ಮಿತ್ರರ ಕೋರಿಕೆಯಂತೆ ಕೌಕ್ರಾಡಿಗ್ರಾಮ ಪಂಚಾಯತಿನ ಅಧ್ಯಕ್ಷರು ಟ್ಯಾಕ್ಸಿ ಸ್ಟಾಂಡ್ ಗೆ ಅನುಮತಿಯನ್ನು ನೀಡಿರುತ್ತಾರೆ.  ದಕ್ಷಿಣ ಕನ್ನಡ ಜಿಲ್ಲಾ ಟ್ಯಾಕ್ಸಿಮೆನ್ಸ್ ಮ್ಯಾಕ್ಸಿಕ್ಯಾಬ್ ಸಂಘದ ಅಧ್ಯಕ್ಷರಾದ ಆನಂದ ಕೆ ಮತ್ತು ಸಂಘಟನಾ ಕಾರ್ಯದರ್ಶಿಯಾದ ಉದಯಕುಮಾರ್ ಎಣ್ಣೆತೋಡಿಯವರು ಈ ಸಂದರ್ಭದಲ್ಲಿ ಮಾತನಾಡಿ ಟ್ಯಾಕ್ಸಿಸ್ಟಾಂಡ್ ನ ಅಗತ್ಯತೆ ಮತ್ತು ಸದಸ್ಯರಿಗೆ ಸಂಘಟನೆ ಬಗ್ಗೆ ವಿವರಿಸಿದರು . ಸಂಘದ ನೆಲ್ಯಾಡಿ ಭಾಗದ ಅಧ್ಯಕ್ಷರಾದ ಶೇಖರ್ ಶೆಟ್ಟಿ, ದಯಾನಂದ ಆದರ್ಶ್ ಮತ್ತು ನೆಲ್ಲ್ಯಾಡಿಯ ರಿಕ್ಷಾ ...