Posts

Showing posts from October, 2024

ಯಕ್ಷಗಾನ ಕಲಾವಿದ ಕಡಬ ಶ್ರೀನಿವಾಸ ರೈ ಸಹಿತ 55 ಮಂದಿ ಸಾಧಕರಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ.

Image
                         ಶ್ರೀನಿವಾಸ ರೈ ಕಡಬ: ಯಕ್ಷಗಾನ ಕಲಾವಿದ ಕಡಬ ಶ್ರೀನಿವಾಸ ರೈ ಸಹಿತ 55 ಮಂದಿ ಸಾಧಕರಿಗೆ ದ.ಕ.ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. 20 ಸಂಸ್ಥೆಗಳಿಗೆ ಪ್ರಶಸ್ತಿ ಘೋಷಿಸಲಾಗಿದೆ. ನ.1ರಂದು ಬೆಳಗ್ಗೆ 9ಕ್ಕೆ ನಗರದ ನೆಹರೂ ಮೈದಾನದಲ್ಲಿ ನಡೆಯುವ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ಸ್ಪೀಕರ್ ಯು.ಟಿ.ಖಾದರ್ ಅವರ ಸಮ್ಮುಖ ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡುರಾವ್ ಪ್ರದಾನಿಸಲಿದ್ದಾರೆ. ಕಡಬ ಶ್ರೀನಿವಾಸ ರೈ ಅವರು ಮರ್ದಾಳ ಸಮೀಪದ ಕೊಡಂದೂರು ರಾಮಣ್ಣ ರೈ ಮತ್ತು ಕುಸುಮಾವತಿ ದಂಪತಿ ಪುತ್ರ. ಕರ್ನಾಟಕ ಮೇಳದಲ್ಲಿ 5 ವರ್ಷ , ಪುತ್ತೂರು ಮೇಳದಲ್ಲಿ 2 ವರ್ಷ, ಕದ್ರಿಮೇಳದಲ್ಲಿ 2 ವರ್ಷ,ಮಂಗಳದೇವಿ ಮೇಳದಲ್ಲಿ 7 ವರ್ಷ ,ಇದೀಗ ಬಪ್ಪನಾಡು ಮೇಳದಲ್ಲಿ ಇವರ ಸೇವೆ ಮುಂದುವರೆಸುತ್ತಿದ್ದಾರೆ. ಕಾಡ ಮಲ್ಲಿಗೆ,ಎಲ್ಲೂರ್ದ ಮಲ್ಲಿ ,ಕಚ್ಚೂರ ಮಲ್ದಿ ಇವರಿಗೆ ಹೆಸರು ತ೦ದುಕೊಟ್ಟ ಯಕ್ಷಗಾನಗಳು

ದೀಪಾವಳಿ ಹಬ್ಬದ ಶುಭಾಶಯಗಳು .

Image
ಬೆಳಕು ಕತ್ತಲೆ ಎರಡೂ ನಮ್ಮೊಳೆಗೇ ಇವೆ. ದೀಪ ಆರಿಸುವುದು, ಆರದಂತೆ ಕೈ ಹಿಡಿಯುವದು ನಮ್ಮ ಕೈಯಲ್ಲಿಯೇ ಇದೆ.. ಸಮೃದ್ಧಿ, ಸಂಪ್ರೀತಿ, ಸಮಾನತೆ, ಸೌಜನ್ಯತೆ ದೀಪದ ಬೆಳಕಿನಂತೆ ಎಲ್ಲೆಡೆ ಹರಡಲಿ.  ನಮ್ಮ ಭಾರತ ದೇಶದ ಎಲ್ಲ ಜನತೆ ಗಳಿಗೆ ಒಳ್ಳೆಯದಾಗಲಿ, ನ್ಯೂಸ್ ಪ್ಯಾಡ್ ವೀಕ್ಷಕರಿಗೆ, ನಮ್ಮನ್ನು ಪ್ರೋತ್ಸಾಹಿಸುವ ನಿಮಗೆಲ್ಲರಿಗೂ ಮತ್ತು ನಿಮ್ಮ ಕುಟುಂಬದವರಿಗೆ ಈ ದೀಪಾವಳಿ ಶುಭಾಶಯಗಳು.

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಪುರುಷರ ಮತ್ತು ಮಹಿಳೆಯರ ಗುಡ್ಡಗಾಡು ಓಟ.

Image
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮಟ್ಟದ ಅಂತರ್ ಕಾಲೇಜು ಪುರುಷರ ಮತ್ತು ಮಹಿಳೆಯರ ಗುಡ್ಡಗಾಡು ಓಟವನ್ನು ದಿನಾಂಕ 30/10/2024 ರಂದು ಹಮ್ಮಿಕೊಳ್ಳಲಾಯಿತು. ಪುರುಷರ ವಿಭಾಗದ ಗುಡ್ಡಗಾಡು ಓಟವನ್ನು ದಕ್ಷಿಣ ವಲಯ ಖೋ ಖೋ ಕ್ರೀಡಾಪಟು ಮತ್ತು ಕೆ ಎಸ್ ಎಸ್ ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಪ್ರಸ್ತುತ ರೈಲ್ವೆ ಉದ್ಯೋಗಿಯಾಗಿರುವ ಬಾಲಭಾಸ್ಕರ ಅವರು ಹಸಿರು ನಿಶಾನೆಯ ಮೂಲಕ ಚಾಲನೆ ನೀಡಿದರು. ಮಹಿಳೆಯರ ವಿಭಾಗವನ್ನು ರಾಷ್ಟ್ರೀಯ ಕ್ರೀಡಾಪಟು ಮತ್ತು ಕೆ.ಎಸ್.ಎಸ್ ಕಾಲೇಜಿನ ಪೂರ್ವ ವಿದ್ಯಾರ್ಥಿ ಹಾಗೂ ಪ್ರಸ್ತುತ ಪುತ್ತೂರಿನ ಕೊಂಬೆಟ್ಟು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿಯಾದ ಶ್ರೀಮತಿ ಗೀತಾಂಜಲಿ ಹಸಿರು ನಿಶಾನೆಯ ಮೂಲಕ ಚಾಲನೆ ನೀಡಿದರು. ಸ್ಪರ್ಧೆಯು ಏನೆಕಲ್ಲಿನ ಬಾಲಾಡಿಯಿಂದ ಆರಂಭವಾಗಿ ಕಾಲೇಜಿನ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತು. ನಂತರ ಸಮಾರೋಪ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ ಪಿ ಟಿ ವಹಿಸಿದರು. ಸುಳ್ಯದ ನೆಹರು ಮೆಮೊರಿಯಲ್ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ಎಂ ರಾಧಾಕೃಷ್ಣ ಅತಿಥಿಯಾಗಿದ್ದರು. ಕಾರ್ಯಕ್ರಮದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ. ಪ್ರಸನ್ನ ಕೆ .ಬಿ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ತುಕಾರಾಮ್ ಏನೆಕಲ...

ನೀರಕಟ್ಟೆ ಎಂಬಲ್ಲಿ ಬುಲೆಟ್ ಟ್ಯಾಂಕರ್ ಅಪಘಾತ.

Image
ಉಪ್ಪಿನಂಗಡಿ; ಅಕ್ಟೋಬರ್, 29, ಬಜತ್ತೂರು ಗ್ರಾಮದ ನೀರಕಟ್ಟೆಯಲ್ಲಿ ಎಂಬಲ್ಲಿ ಸುಮಾರು 9.30 ಗಂಟೆಗೆ ಬೆಂಗಳೂರಿನಿಂದ ಮಂಗಳೂರು ಕಡೆಗೆ ಬರುತ್ತಿದ್ದ ಖಾಲಿ ಬುಲೆಟ್ ಟ್ಯಾಂಕರ್ ,ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನೀರಕಟ್ಟೆ ಎಂಬಲ್ಲಿ ಮಗುಚಿ ಬಿದ್ದು ಅಪಘಾತ ಸಂಭವಿಸಿದೆ ಎಂದು ಮಾಹಿತಿ ಲಭ್ಯವಾಗಿದೆ.  ರಾಷ್ಟ್ರೀಯ ಹೆದ್ದಾರಿ ಆದ್ದರಿಂದ ವಾಹನಗಳ ಸಂಖ್ಯೆ ಹೆಚ್ಚಿರುವ ಕಾರಣ, ಉಳಿದ ವಾಹನಗಳಿಗೆ ಸಂಚಾರಕ್ಕೆ ಅಡಚಣೆ ಆಗಿದೆ ಎಂದು ಪ್ರತ್ಯಕ್ಷ ದರ್ಶಿಗಳು ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಉಪ್ಪಿನಂಗಡಿ ಪೊಲೀಸರು ,11ಗಂಟೆ ಸುಮಾರಿಗೆ ಸುಗಮ ಸಂಚಾರಕ್ಕೆ  ವ್ಯವಸ್ಥೆ ಮಾಡಿದ ಉಪ್ಪಿನಂಗಡಿ ಪೊಲೀಸ್ ಸಿಬ್ಬಂದಿ ಸತೀಶ್ ಹಾಗೂ ರಾಮಣ್ಣ.

ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಪಂಜ ಶಾಲೆಗೆ ಧ್ವನಿವರ್ಧಕ ಪರಿಕರಗಳ ಹಸ್ತಾಂತರ.

Image
ಸುಬ್ರಹ್ಮಣ್ಯ ಅ.29: ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಅಗತ್ಯವುಳ್ಳ ಧ್ವನಿವರ್ಧಕ ಪರಿಕರಗಳ ಕೊಡುಗೆಯನ್ನು ಇಂದು ಮಂಗಳವಾರ ಹಸ್ತಾಂತರಿಸಲಾಯಿತು.  ಕೊಡುಗೆಗಳನ್ನು ಹಸ್ತಾಂತರಿಸಿ ಮಾತನಾಡಿದ ಪಂಜದ ಹಿರಿಯ ಸಹಕಾರಿ ಧುರೀಣ ಲಯನ್ಸ್ ಜಿಲ್ಲಾ ರಾಯಭಾರಿ ಜಾಕೆ ಮಾಧವ ಗೌಡ ಮಾತನಾಡಿ ಸಮಾಜ ಸೇವೆಯೇ ರೋಟರಿಯ ಮುಖ್ಯ ಉದ್ದೇಶವಾಗಿಟ್ಟುಕೊಂಡು ಸರಕಾರಿ ಶಾಲೆಗಳ ಮೂಲಭೂತ ಸೌಕರ್ಯಗಳನ್ನು ಮನಗಂಡು ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಅನುಕೂಲವಾಗುವ ಪ್ರತಿಭಾ ಪ್ರದರ್ಶನ ,ಪಾಠೇತರ ಚಟುವಟಿಕೆ, ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಧ್ವನಿವರ್ಧಕಗಳ ಕೊಡುಗೆ ಅಗತ್ಯವಾಗಿದೆ ಎಂದರು.  ಧ್ವನಿವರ್ಧಕ ಕೊಡುಗೆಗಳ ಪ್ರಯೋಜಕರಾದ ಸುಬ್ರಮಣ್ಯ ರೋಟರಿ ಕ್ಲಬ್ಬಿನ ಪೂರ್ವ ಅಧ್ಯಕ್ಷ ವಸಂತಕುಮಾರ ಕೇದಿಲ ಅವರು ತನ್ನೂರಿನ ಸರಕಾರಿ ಶಾಲೆಗೆ ಧ್ವನಿವರ್ಧಕದ ಕೊಡುಗೆ ನೀಡಲು ತುಂಬಾ ಸಂತೋಷ ಪಡುತ್ತಿದ್ದೇನೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ಚಂದ್ರಶೇಖರ್ ನಾಯರ್ ವಹಿಸಿದ್ದರು ವೇದಿಕೆಯಲ್ಲಿ ಸುಬ್ರಹ್ಮಣ್ಯ ಇನ್ನರ್ವೇಲ್ ಕ್ಲಬ್ಬಿನ ಅಧ್ಯಕ್ಷ ಶೃತಿ ಮಂಜುನಾಥ್ ಶಾಲಾ ಮೇಲೆ ಸುವಾರಿ ಹಾಗೂ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಸೋಮಶೇಖರ ನೇರಳ, ಹಿರಿಯ ರೋಟರಿ ಸದಸ್ಯ ಸುದರ್ಶನ ಶೆಟ್ಟಿ, ರೋಟರಿ ವಲಯ ಜೊನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ...

ಕುಕ್ಕೆ ಸುಬ್ರಹ್ಮಣ್ಯ ಸಮೀಪ ಬೃಹತ್ ಗಾತ್ರದ ಕಾಳಿಂಗ ಸರ್ಪ ಪತ್ತೆ.

Image
ಕಾಲಿಂಗ ಸರ್ಪದ ನೋಟ  ಆಹಾರ ಅರಸುತ್ತಾ ಬಂದಿದೆ   ಕುಕ್ಕೆ ಸುಬ್ರಹ್ಮಣ್ಯ : ಕಾಳಿಂಗ ಸರ್ಪವು ಜಗತ್ತಿನ ಅತಿ ಉದ್ದವಾದ ವಿಷಕಾರಿ ಹಾವು, ಇಂತಹ ಬೃಹತ್ ಗಾತ್ರದ ಬರೋಬ್ಬರಿ 12 ಅಡಿ ಉದ್ದದ ಕಾಳಿಂಗ ಸರ್ಪವೊಂದು ಕುಕ್ಕೆ ಸುಬ್ರಹ್ಮಣ್ಯದ ಕೈಕಂಬದಲ್ಲಿ ಪತ್ತೆಯಾಗಿದೆ. ಮನೆಯೊಂದರ ಬಳಿ ಈ ಬೃಹತ್ ಗಾತ್ರದ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿ ಕೆಲ ಹೊತ್ತು ಆತಂಕದ ಸೃಷ್ಠಿಸಿಸಿದೆ. ಆಹಾರವನ್ನು ಹರಿಸಿಕೊಂಡು ಈ ಕಾಳಿಂಗ ಸರ್ಪ ಬಂದಿರಬಹುದೆಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಾವಿನ ಗಾತ್ರ ನೋಡಿದಾಗಲೇ ಮೈಜುಂ ಎನ್ನುವಂತಿದೆ. ಸ್ಥಳೀಯರು ಇದರ ಚಿತ್ರ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ನೆರೆದಿದ್ದವರು ಯಾರು ತೊಂದರೆ ಮಾಡದ ಕಾರಣ ಅಲ್ಲೇ ಸಮೀಪದ ಕಾಡಿನತ್ತ ತೆರಳಿರುವುದಾಗಿ ಮಾಹಿತಿ ಲಭಿಸಿದೆ.  ಈ ಬಗ್ಗೆ ವನ್ಯ ಜೀವಿ ಸಂರಕ್ಷಣಕಾರ ಭುವನ ಕೈ ಕಂಬ ಅವರ ನ್ಯೂಸ್ ಪ್ಯಾಡ್  ಜೊತೆ ಮಾತನಾಡಿ, ಈ ಕಾಳಿಂಗ ಸರ್ಪ ಬಹಳ ಕಪ್ಪಾಗಿದೆ, ಇದಕ್ಕೆ ಕಾರಣ ಇತ್ತೀಚೆಗೆ ಈ ಹಾವು ತನ್ನ ಪೊರೆಯನ್ನು ಇತ್ತೀಚೆಗೆ ಕಳಚಿದೆ ,ಹೀಗಾಗಿ ಈ ಸಂದರ್ಭದಲ್ಲಿ ಹಸಿವು ಹೆಚ್ಚಾಗಿರುತ್ತದೆ,ಹೀಗಾಗಿ ಆಹಾರ ಹರಸಿ ಬಂದಿರುವುದು ಎಂದಿದ್ದಾರೆ. ಈ ಬಗ್ಗೆ ಸುಬ್ರಹ್ಮಣ್ಯ ವಲಯ ಅರಣ್ಯಾಧಿಕಾರಿಗಳ ಬಳಿ ಮಾಹಿತಿ ಕೇಳಿದ್ದು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ ಎಂದು ತಿಳಿಸಿದ್ದಾರೆ. ಈ ವಿಡಿಯೋ ವೀಕ್ಷಿಸಿ ...