Posts

Showing posts from August, 2025

ಕಡಬ: ಸಾಮಾಜಿಕ ಜಾಲತಾಣ ಪೋಸ್ಟ್‌ ಕುರಿತು ಪ್ರಕರಣ ದಾಖಲೆ.

Image
ಆಗಸ್ಟ್‌ 30, 2025 ರಂದು ಕಡಬ ತಾಲೂಕಿನ 35 ವರ್ಷದ ನಿವಾಸಿ ಕೆ. ಅಬ್ದುಲ್‌ ಹಕೀಂ ಅವರು ತಮ್ಮ ಸಾಮಾಜಿಕ ಜಾಲತಾಣ ಪರಿಶೀಲಿಸುವಾಗ, ಒಂದು ಫೇಸ್‌ಬುಕ್ ಖಾತೆಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ರೀತಿಯ ವಿಷಯ ಪ್ರಕಟವಾಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಕಡಬ ಪೊಲೀಸ್‌ ಠಾಣೆಯಲ್ಲಿ ಅಕ್ರಮ ಸಂಖ್ಯೆ 59/2025 ಅಡಿಯಲ್ಲಿ BNS-2023ರ ಸೆಕ್ಷನ್ 353(2), 299 ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ. ಪೊಲೀಸರು ಈ ಸಂಬಂಧ ಕಾನೂನು ಕ್ರಮ ಕೈಗೊಂಡಿದ್ದು, ಮುಂದಿನ ತನಿಖೆ ನಡೆಯುತ್ತಿದೆ.

ಕಾವೂರು ಠಾಣಾ ವ್ಯಾಪ್ತಿಯಲ್ಲಿ ಜುಗಾರಿ ಪತ್ತೆ – 17 ಜನ ಬಂಧನ.

Image
ಮಂಗಳೂರು :ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೊಲ್ಪುಗುಡ್ಡೆ ಗ್ರಾಮದಲ್ಲಿರುವ ಮನೆಯಲ್ಲಿ ಅಕ್ರಮವಾಗಿ ಜುಗಾರಿ ಆಟ ನಡೆಯುತ್ತಿದೆ ಎಂಬ ಮಾಹಿತಿಯ ಆಧಾರದ ಮೇಲೆ ಪೊಲೀಸರು ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 17 ಮಂದಿ ಆರೋಪಿಗಳು ಬಂಧಿತರಾಗಿದ್ದಾರೆ. ಪೊಲೀಸರು ಸ್ಥಳದಿಂದ ಸುಮಾರು ₹1.92 ಲಕ್ಷ ನಗದು ಹಾಗೂ 18 ಮೊಬೈಲ್ ಫೋನ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ನಗದು ಮತ್ತು ಸಾಮಗ್ರಿಗಳ ಒಟ್ಟು ಮೌಲ್ಯವು ಸುಮಾರು ₹4 ಲಕ್ಷ ಎಂದು ಅಂದಾಜಿಸಲಾಗಿದೆ. ಈ ಕಾರ್ಯಾಚರಣೆ ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀ ಶ್ರೀಕಾಂತ ಕೆ ಅವರ ಮಾಹಿತಿಯ ಮೇರೆಗೆ, ಕಾವೂರು ಠಾಣಾ ಪಿಎಸ್‌ಐ ಮಲ್ಲಿಕಾರ್ಜುನ ಬಿರಾದಾರ್ ಅವರ ನೇತೃತ್ವದಲ್ಲಿ ನಡೆದಿದ್ದು, ಪೊಲೀಸರು ಸ್ಥಳದಲ್ಲೇ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರ ವಿರುದ್ಧ ಕಾನೂನು ಪ್ರಕಾರ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ ಸಹಾಯಕ ಪೊಲೀಸ್ ಆಯುಕ್ತರ ಕಚೇರಿಯ ಸಿಬ್ಬಂದಿ ಚಂದ್ರು, ರೇಜಿ, ದಾಮೋದರ, ಹಾಲೇಶ್ ಹಾಗೂ ಠಾಣಾ ಸಿಬ್ಬಂದಿ ಎಎಸ್‌ಐ ಜಯರಾಮ್, ಮಂಜುನಾಥ, ನಾಗರಾಜ್ ಮತ್ತು ಇತರರು ಪಾಲ್ಗೊಂಡಿದ್ದರು. ಪೊಲೀಸರು ಸಾರ್ವಜನಿಕರಿಗೆ ಅಕ್ರಮ ಜುಗಾರಿ, ಪಣದಾಟಗಳಲ್ಲಿ ತೊಡಗಿಕೊಳ್ಳದಂತೆ ಎಚ್ಚರಿಕೆ ನೀಡಿದ್ದಾರೆ.

ಬಂಟ್ವಾಳದಲ್ಲಿ ಸುಳ್ಳು ದೂರು ಪ್ರಕರಣ – ಸಾಮಾಜಿಕ ಜಾಲತಾಣದಲ್ಲಿ ತಪ್ಪು ಮಾಹಿತಿ ಹಂಚಿಕೆ ವಿಚಾರದಲ್ಲೂ FIR.

Image
ಬಂಟ್ವಾಳ :ಜೂನ್ 13, 2025 ರಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಉಮ್ಮರ್ ಫಾರೂಕ್ ಎಂಬವರು ದೇರಾಜೆ ಬಳಿ ಇಬ್ಬರು ಅಪರಿಚಿತರು ಕೊಲೆ ಯತ್ನ ನಡೆಸಿದ್ದಾರೆಂದು ದೂರು ನೀಡಿದ್ದರು. ಆದರೆ ತನಿಖೆಯಲ್ಲಿ ದೂರು ಸುಳ್ಳು ಎಂದು ದೃಢಪಟ್ಟ ಹಿನ್ನೆಲೆಯಲ್ಲಿ, ಆಗಸ್ಟ್ 26, 2025 ರಂದು ಉಮ್ಮರ್ ಫಾರೂಕ್ ವಿರುದ್ಧ ಠಾಣಾ ಅ.ಕ್ರ. 128/2025ರಲ್ಲಿ ಭಾರತೀಯ ದಂಡ ಸಂಹಿತೆಯ ಕಲಂ 192, 353(1)(ಬಿ), 230(1), 248(ಎ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದರೊಂದಿಗೆ, ಆಗಸ್ಟ್ 28, 2025 ರಂದು ಫೇಸ್‌ಬುಕ್ ಪೇಜ್‌ನಲ್ಲಿ ಈ ಸಂಬಂಧ ಕಾನೂನುಬದ್ಧ ಆಧಾರವಿಲ್ಲದೆ ಸುಳ್ಳು ಮಾಹಿತಿ ಹಂಚಿಕೆಯಾಗಿದೆ ಎಂಬ ದೂರಿನ ಆಧಾರದ ಮೇಲೆ, ಅಶ್ರಫ್ ವಿರುದ್ಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ. 130/2025ರಲ್ಲಿ ಕಲಂ 353(1)(B)(2), 192 BNS ಅಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಈ ಪ್ರಕರಣಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘವು ಶೇಕಡ 100 ಸಾಲ ವಸೂಲಾತಿ ಮಾಡಿರುವುದಕ್ಕೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಪ್ರಶಸ್ತಿ .

Image
ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸರ್ವತೋಮುಖ ಪ್ರಗತಿಯ ಸಾಧನೆಗೆ ಸಂಬಂಧಿಸಿದ ಕೇಂದ್ರ ಸಹಕಾರಿ ಬ್ಯಾಂಕಿನಿಂದ ನಿರಂತರ 9 ವರ್ಷಗಳಿಂದ ಪ್ರಶಸ್ತಿಗಳನ್ನು ಪಡೆದುಕೊಂಡು ಬಂದಿರುತ್ತದೆ. 2020 ನೇ ಇಸವಿಯಲ್ಲಿ ಮಂಗಳೂರಿನಲ್ಲಿ ನಡೆದ ರಾಜ್ಯಮಟ್ಟದ ಸಹಕಾರಿ ಸಪ್ತಾಹದಲ್ಲಿ ಜಿಲ್ಲಾ ಮಟ್ಟದಲ್ಲಿಯೇ ಉತ್ತಮ ಸಹಕಾರಿ ಸಂಘ ಎಂಬ ಪ್ರಶಸ್ತಿಯನ್ನು ಪಡೆದಿದೆ. ಕಳೆದ ಸಾಲಿನಲ್ಲಿ ಸಂಘವು ಶೇಕಡ 100 ಸಾಲ ವಸೂಲಾತಿ ಮಾಡಿರುವುದಕ್ಕೆ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಪ್ರಶಸ್ತಿಯನ್ನು ಪಡೆದಿರುತ್ತದೆ. ಪ್ರಸ್ತುತ ವರ್ಷ ಸಂಘವು ಶೇಕಡ 100 ಸಾಲ ವಸೂಲಾತಿ ಮಾಡಿರುವುದಕ್ಕೆ ತಾರೀಕು 30-08-2025 ರಂದು ನಡೆದ ದ.ಕ ಕೇಂದ್ರ ಸಹಕಾರಿ ಬ್ಯಾಂಕಿನ ಮಹಾಸಭೆಯಲ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.           ಸಂಘದ ಪರವಾಗಿ ಪ್ರಶಸ್ತಿಯನ್ನು ಸಂಘದ ಅಧ್ಯಕ್ಷರಾದ ಶ್ರೀ ಬಾಲಕೃಷ್ಣ ಬಾಣಜಾಲು ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ ರೈ ಕೆ.ಎಂ ಉಪಾಧ್ಯಕ್ಷರಾದ ರವಿಚಂದ್ರ ಹೊಸವಕ್ಲು ನಿರ್ದೇಶಕರಾದ ಶ್ರೀಮತಿ ಉಷಾ ಅಂಚನ್, ಭಾಸ್ಕರ ರೈ, ಶ್ರೀಮತಿ ಶೇಷಮ್ಮ,ಬಾಬು ನಾಯ್ಕ, ಸಿಬ್ಬಂದಿ ಧನುಷ್ ರವರುಗಳಿಗೆ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ/ ಎಂ ಎನ್ ರಾಜೇಂದ್ರ ಕುಮಾರ್ ಉಪಾಧ್ಯಕ್ಷರಾದ ವಿನಯಕುಮಾರ್ , ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕರಾದ ರಮೇಶ್ ,ಜಿಲ್ಲಾ ಸಹಕಾರಿ ...

ನೂಜಿಬಾಳ್ತಿಲ: ಬೆಥನಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳಿಂದ ದಸರಾ ಕ್ರೀಡಾಕೂಟದಲ್ಲಿ ಪದಕಗಳ ಸುರಿಮಳೆ.

Image
ಅಗಸ್ಟ್ 30 ರಂದು ಸವಣೂರಿನಲ್ಲಿ ನಡೆದ ಕಡಬ ತಾಲೂಕು ಮಟ್ಟದ ದಸರಾ ಕ್ರೀಡಾಕೂಟದಲ್ಲಿ ನೂಜಿಬಾಳ್ತಿಲದ ಬೆಥನಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ತಮ್ಮ ಅದ್ಭುತ ಕ್ರೀಡಾ ಪ್ರದರ್ಶನದಿಂದ ಪದಕಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ವಿದ್ಯಾರ್ಥಿಗಳ ವೈಯಕ್ತಿಕ ಹಾಗೂ ತಂಡದ ಸ್ಪರ್ಧೆಗಳಲ್ಲಿ ಸಾಧನೆ ಹೀಗಿದೆ: ನಿಶಾ ಜಿ.ಎಸ್. (ದ್ವಿತೀಯ ವಾಣಿಜ್ಯ ವಿಭಾಗ) 800 ಮೀ – ಪ್ರಥಮ 400 ಮೀ – ದ್ವಿತೀಯ 3000 ಮೀ – ತೃತೀಯ ಪ್ರಮೀಳಾ (ಪ್ರಥಮ ಕಲಾ ವಿಭಾಗ) 3000 ಮೀ – ಪ್ರಥಮ 800 ಮೀ – ದ್ವಿತೀಯ 1500 ಮೀ – ದ್ವಿತೀಯ ಅಪೇಕ್ಷಾ (10ನೇ ತರಗತಿ) 400 ಮೀ – ಪ್ರಥಮ 100 ಮೀ – ದ್ವಿತೀಯ 200 ಮೀ – ದ್ವಿತೀಯ ಮೋಕ್ಷಾ ಪಿ. (10ನೇ ತರಗತಿ) 1500 ಮೀ – ಪ್ರಥಮ 3000 ಮೀ – ದ್ವಿತೀಯ 800 ಮೀ – ತೃತೀಯ ಪ್ರೀತಿ ಆರ್. (9ನೇ ತರಗತಿ) 100 ಮೀ – ತೃತೀಯ 200 ಮೀ – ತೃತೀಯ 400 ಮೀ – ತೃತೀಯ ರಿಲೆ (ಮಹಿಳಾ ವಿಭಾಗ) 4×100 ಮೀ – ಪ್ರಥಮ (ಪ್ರಮೀಳಾ, ಮೋಕ್ಷ, ನಿಶಾ ಜಿ.ಎಸ್., ಅಪೇಕ್ಷಾ) 4×400 ಮೀ – ಪ್ರಥಮ (ಪ್ರಮೀಳಾ, ಮೋಕ್ಷ, ನಿಶಾ ಜಿ.ಎಸ್., ಅಪೇಕ್ಷಾ) ವರ್ಷಿತ್ (10ನೇ ತರಗತಿ) 1500 ಮೀ – ದ್ವಿತೀಯ 10,000 ಮೀ – ತೃತೀಯ ನೋಯಲ್ (ಪ್ರಥಮ ಕಲಾ ವಿಭಾಗ) 100 ಮೀ – ಪ್ರಥಮ 200 ಮೀ – ತೃತೀಯ ಯೋಗಿತ್ (...

🌸 “ಹಳ್ಳಿಯ ಕನಸುಗಳಿಂದ ರಾಜ್ಯದ ಶಿಖರದವರೆಗೆ – ಡಾ. ಎಂ. ಪದ್ಮನಾಭರ ನೆನಪುಗಳ ಸಂಚಿಕೆ” 🌸

Image
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆಯ ನಿವೃತ್ತ ಪ್ರಭಾರ ಜನರಲ್ ಮ್ಯಾನೇಜರ್.  ಡಾ ಎಂ ಪದ್ಮನಾಭ ಬೆಂಗಳೂರು. **********************     *ನೆನಪುಗಳ ಸಂಕಲನ*  ಅದು ಸಾವಿರದ ಒಂಬೈನೂರ ಐವತ್ತರ ದಶಕ.ಸ್ವಾತಂತ್ರ್ಯ ಬಂದು ಕೆಲವೇ ವರ್ಷಗಳು ಕಳೆದಿತ್ತಷ್ಟೇ. ಅಂದು ಶಾಲಾ ಕಾಲೇಜುಗಳು ಬಲು ವಿರಳ. ಕಲಿಯಲೇ ಬೇಕೆಂಬ ಛಲವಿದ್ದವರು ಹಾಗೂ ಆರ್ಥಿಕ ಶ್ರೀಮಂತರು ನಗರ ಪ್ರದೇಶಗಳಿಗೆ ಹೋಗಿ ಕಲಿಯಬೇಕಿತ್ತು. ಕುಟುಂಬದ ಆಪ್ತರ ಮನೆಯಲ್ಲಿದ್ದು ಶಾಲೆಗೆ ಹೋಗುವುದು ಅಂದು ರೂಢಿಯಾಗಿತ್ತು. ಜನಸಾಮಾನ್ಯರಿಗಿದು ಕೈಗೆಟುಕದ ಆಕಾಶ ನಕ್ಷತ್ರವಾಗಿತ್ತು. ಕುಲಕಸುಬು ನಂಬಿ ಬದುಕುವುದೇ ಅನಿವಾರ್ಯವಾಗಿದ್ದ ಕಾಲವದು. ಅದರಲ್ಲೂ ಹಳ್ಳಿಯ ಮಡಿವಂತರ ಕುಟುಂಬದ ಮಕ್ಕಳನ್ನು ಎಲ್ಲೆಂದರಲ್ಲಿ ಕಳುಹಿಸಲು ಹಿರಿಯರು ಸುತಾರಾಂ ಒಪ್ಪಲಾರರು. ಇಂತಹ ದಿನ ಮಾನಗಳಲ್ಲಿ ಇಂಜಿನಿಯರಿಂಗ್- ವೈದ್ಯಕೀಯ ಶಿಕ್ಷಣದ ಕನಸು ಕಂಡವರೇ ಇಲ್ಲ. ಬಹಳ ಮಂದಿಗೆ ಸಂಶೋಧನ ಕ್ಷೇತ್ರಕ್ಕೆ ಧುಮುಕಿ ಡಾಕ್ಟರೇಟ್ ಪಡೆಯಬಹುದೆಂಬ ಅರಿವೇ ಇರಲಿಲ್ಲ.ಅಂತಹ ಕಾಲಘಟ್ಟದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಪ್ರೊ ಎಸ್ ಎಮ್ ವೀರ ರಾಘವ ಆಚಾರ್ ಅವರ ಪ್ರೇರಣೆಯಿಂದ ರಾಮಕುಂಜ ದಲ್ಲಿ ಮೊಟ್ಟಮೊದಲು ಡಾಕ್ಟರೇಟ್ ಪದವಿ ಪಡೆದ, ತೀರ ಹಳ್ಳಿಯಲ್ಲಿ ಜನಿಸಿದ ಮೀಯಾಳ ಪದ್ಮನಾಭ ಎಂಬವರು ಡಾ.ಎಂ ಪದ್ಮನಾಭ ಎಂಬ ಗೌರವದ ಅಭಿದಾನ ಪಡೆದು, ರಾಜ್ಯ ಸರಕಾರದ ಪ್ರತಿಷ್ಠಿತ ಸಂಸ್ಥೆ ಕರ್ನಾಟಕ ರಾಜ್ಯ ಹಣಕಾ...

ಕುಕ್ಕೆ: ಶ್ರೀ ದೇವರ ಪಾಲಕಿಗೆ ರಜತ ಗೊಂಡೆ ಸಮರ್ಪಣೆ.

Image
ಸುಬ್ರಹ್ಮಣ್ಯ : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಪಾಲಕಿಗೆ ರಜತ ಗೊಂಡೆಯನ್ನು ಸೇವಾರೂಪದಲ್ಲಿ ಉದ್ಯಮಿ ನಾಗರಾಜ ಕುಲಕರ್ಣಿ (ಬೆಂಗಳೂರು) ಮತ್ತು ಕುಟುಂಬಸ್ಥರು ಶುಕ್ರವಾರ ಸಮರ್ಪಿಸಿದರು. ಹಿಂದಿನ ಸಂದರ್ಭದಲ್ಲೂ ಬೆಳ್ಳಿಯ ಪಾಲಕಿಯನ್ನು ದೇವಳಕ್ಕೆ ಸಮರ್ಪಣೆ ಮಾಡಿದ ಇವರು, ಈ ಬಾರಿ ನೂತನ ಪಲ್ಲಕ್ಕಿಗೆ 12 ಬೆಳ್ಳಿಯ ಗೊಂಡೆಗಳು ಸಮರ್ಪಿಸಿ ಭಕ್ತಿಭಾವ ಪ್ರದರ್ಶಿಸಿದರು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಶ್ರೀ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್. ಇಂಜಾಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜು, ದಾನಿಗಳ ಸ್ನೇಹಿತ ಶ್ರೀಕುಮಾರ್ ಬಿಲದ್ವಾರ, ಶಿಷ್ಟಚಾರ ಅಧಿಕಾರಿ ಜಯರಾಮ್ ರಾವ್, ಶಿವರಾಮ್ ಮತ್ತಿತರರು ಉಪಸ್ಥಿತರಿದ್ದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಭಕ್ತರು ಭಕ್ತಿಭಾವದಿಂದ ಸೇವಾ ಸಮರ್ಪಣೆ ಮಾಡುವ ಸಾಂಪ್ರದಾಯಿಕ ಪರಂಪರೆಯ ಇನ್ನೊಂದು ನಿದರ್ಶನವಾಗಿ ಈ ಕಾರ್ಯಕ್ರಮ ಕಂಗೊಳಿಸಿತು.

ನೆಲ್ಯಾಡಿಯಲ್ಲಿ 43ನೇ ವರ್ಷದ ಭವ್ಯ ಸಾರ್ವಜನಿಕ ಶ್ರೀ ಗಣೇಶೋತ್ಸವ : ಧಾರ್ಮಿಕ–ಸಾಂಸ್ಕೃತಿಕ ಕಾರ್ಯಕ್ರಮ, ಶೋಭಾಯಾತ್ರೆ.

Image
ನೆಲ್ಯಾಡಿ : ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ನೆಲ್ಯಾಡಿ-ಕೌಕ್ರಾಡಿ ಹಾಗೂ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ನೆಲ್ಯಾಡಿ-ಕೌಕ್ರಾಡಿ ಇವರ ವತಿಯಿಂದ 43ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆ.27ರಂದು ನೆಲ್ಯಾಡಿ-ಕೌಕ್ರಾಡಿ ಶ್ರೀ ಶಬರೀಶ ಕಲಾಮಂದಿರದಲ್ಲಿ ಭಕ್ತಿಭಾವ, ಶ್ರದ್ಧೆ, ಸಾಂಸ್ಕೃತಿಕ ವೈಭವಗಳೊಂದಿಗೆ ವಿಜೃಂಭಣೆಯಿಂದ ನೆರವೇರಿತು. ಬೆಳಿಗ್ಗೆ ಪ್ರಧಾನ ಅರ್ಚಕ ಶ್ರೀಧರ ನೂಜಿನ್ನಾಯ ಅವರ ಪೌರೋಹಿತ್ಯದಲ್ಲಿ ಗಣಪತಿ ದೇವರ ಪ್ರತಿಷ್ಠೆ ನಡೆದು, ಬಳಿಕ ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂಡಳಿ ಹಾಗೂ ಪಡುಬೆಟ್ಟು ಶ್ರೀ ವಿಷ್ಣುಮೂರ್ತಿ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ 8.15ಕ್ಕೆ ಶ್ರೀ ಅಯ್ಯಪ್ಪಸ್ವಾಮಿ ದೇವರಿಗೆ ಸೀಯಾಳಾಭಿಷೇಕ ಮತ್ತು ಗಣಹೋಮ ನಡೆಯಿತು. ನಂತರ ಶ್ರೀ ಶಬರೀಶ ಕಲಾಮಂದಿರದಲ್ಲಿ ಛದ್ಮವೇಷ ಸ್ಪರ್ಧೆ, ಶ್ರೀಕೃಷ್ಣ ವೇಷ ಸ್ಪರ್ಧೆ ನಡೆದಿದ್ದು, ಸುರೇಶ್ ಪಡಿಪಂಡ ನಿರೂಪಿಸಿದರು. ಧರ್ಮಜಾಗೃತಿ ಸಭೆ: ಕಾರ್ಯಕ್ರಮದ ಅಂಗವಾಗಿ ನಡೆದ ಧರ್ಮಜಾಗೃತಿ ಸಭೆಯಲ್ಲಿ ಪುತ್ತೂರು ಸರಕಾರಿ ಪಿಯು ಕಾಲೇಜಿನ ಪ್ರಾಂಶುಪಾಲ ಪ್ರೋ.ಸುಬ್ಬಪ್ಪ ಕೈಕಂಬ ಧಾರ್ಮಿಕ ಉಪನ್ಯಾಸ ನೀಡಿ, ಸೇವೆಗೆ ಫಲಾಪೇಕ್ಷೆ ಬೇಡ, ಆತ್ಮವೇ ದೇವರು ಎಂಬ ಭಾವನೆ ಬಂದಾಗಲೇ ಧರ್ಮಜಾಗೃತಿ ಮೂಡುತ್ತದೆ. ಭಕ್ತಿ ಇರುವ ಸ್ಥಳದಲ್ಲೇ ದೇವರ ಅನುಗ್ರಹ ಸಿಗುತ್ತದೆ ಎಂದು ಹೇಳಿದರು. ಸೇವ...

ಕೊಲೆ ಪ್ರಕರಣದ ಆರೋಪಿಗೆ ಜೀವಾವಧಿ ಶಿಕ್ಷೆ.

Image
ಬೆಳ್ತಂಗಡಿ:ಬೆಳ್ತಂಗಡಿ ಉಜಿರೆಯಲ್ಲಿ 2014ರಲ್ಲಿ ನಡೆದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಪ್ರಕರಣದ ವಿವರ: 2014ರ ಮಾರ್ಚ್ 1ರಂದು ಉಜಿರೆಯಲ್ಲಿರುವ ವಸತಿಗೃಹದಲ್ಲಿ ನಡೆದ ಕೊಲೆ ಪ್ರಕರಣವನ್ನು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಕ್ರಮ ಸಂಖ್ಯೆ 126/2014, IPC ಸೆಕ್ಷನ್ 302, 201ರಡಿಯಲ್ಲಿ ದಾಖಲಿಸಲಾಗಿತ್ತು. ಆರೋಪಿಯಾಗಿದ್ದ ಚಿಕ್ಕಮಗಳೂರು ಮೂಲದ ಬಾಳಪ್ಪ ಎಂ. ಕಳ್ಳೊಳ್ಳಿ ಎಂಬಾತನನ್ನು ಬಂಧಿಸಿ, ತನಿಖೆ ನಡೆಸಿ, ಸೂಕ್ತ ಸಾಕ್ಷಾಧಾರಗಳನ್ನು ಸಂಗ್ರಹಿಸಿ ಬೆಳ್ತಂಗಡಿ ಪೊಲೀಸ್ ಠಾಣಾ ನಿರೀಕ್ಷಕ ಲಿಂಗಪ್ಪ ಪೂಜಾರಿ ರವರು ದೋಷಾರೋಪಣಾ ಪಟ್ಟಿಯನ್ನು ಮಾನ್ಯ CJ&JMFC ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಹೆಚ್ಚುವರಿಯಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿ (SC/ST Act) ಪ್ರಕರಣ ದಾಖಲಿಸಲಾಗಿತ್ತು. ಈ ಸಂಬಂಧ ಹೆಚ್ಚುವರಿ ದೋಷಾರೋಪಣಾ ಪಟ್ಟಿಯನ್ನು ಆಗಿನ ಬಂಟ್ವಾಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾಗಿದ್ದ ರಾಹುಲ್ ಕುಮಾರ್ ಶಹಪುರ್ (IPS) ರವರು ಮಂಗಳೂರು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ನ್ಯಾಯಾಲಯದ ತೀರ್ಪು: ಮಂಗಳೂರು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮಾನ್ಯ ನ್ಯಾಯಾಧೀಶರಾದ ಜಗದೀಶ್ ರವರು 28-08-2025ರಂದು ತೀರ್ಪು ಪ್ರಕಟಿಸಿ, ಆರೋಪಿ ಬಾಳಪ್ಪ ಎಂ. ಕಳ್ಳೊಳ್ಳಿಗೆ IPC ಸೆಕ್ಷನ...

ಫರಂಗಿಪೇಟೆ ಗಣೇಶೋತ್ಸವ ಬ್ಯಾನರ್ ಹರಿದು ಹಾಕಿದ ಪ್ರಕರಣ – ಆರೋಪಿಯ ಬಂಧನ.

Image
ಬಂಟ್ವಾಳ : ಫರಂಗಿಪೇಟೆ ಸೇವಾಂಜಲಿ ಭವನದಲ್ಲಿ ಆಗಸ್ಟ್ 24ರಿಂದ 29ರವರೆಗೆ ನಡೆಯುತ್ತಿರುವ ಗಣೇಶೋತ್ಸವ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಹಾಕಿದ್ದ ಶುಭಕೋರಿದ ಬ್ಯಾನರ್ ಹರಿದು ಹಾಕಿದ ಘಟನೆ ನಡೆದಿದೆ. ಪಿರ್ಯಾದುದಾರರಾದ ಫರಂಗಿಪೇಟೆ ನಿವಾಸಿ ಚಂದ್ರಶೇಖರ್ ಆಳ್ವ (55) ಅವರು ಅಗತ್ಯ ಇಲಾಖೆಯಿಂದ ಪೂರ್ವಾನುಮತಿ ಪಡೆದು, ಆಗಸ್ಟ್ 25ರಂದು ಸುಮಾರು ರೂ.3,500/- ವೆಚ್ಚದಲ್ಲಿ ಕುಂಪಣ ಮಜಲು ಕ್ರಾಸ್ ಬಳಿ ಬ್ಯಾನರ್ ಅಳವಡಿಸಿದ್ದರು. ಆದರೆ ಆಗಸ್ಟ್ 27ರ ರಾತ್ರಿ, ಸ್ಥಳೀಯ ನಿವಾಸಿ ಹೈದರ್ ಎಂಬಾತನು ಸದ್ರಿ ಬ್ಯಾನರ್ ಹರಿದು ಹಾಕಿದ ಆರೋಪ ಕೇಳಿಬಂದಿದೆ. ಈ ಕೃತ್ಯದಿಂದಾಗಿ ಸುಮಾರು ರೂ.3,500/- ನಷ್ಟವಾಗಿರುವುದಲ್ಲದೇ, ಧಾರ್ಮಿಕ ಭಾವನೆಗೆ ಧಕ್ಕೆ ತಂದು ಸಾರ್ವಜನಿಕರಲ್ಲಿ ಪ್ರಚೋದನೆ ಉಂಟಾಗುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ದೂರು ಆಧರಿಸಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ.129/2025 ರಂತೆ, BNS 2023ರ ಕಲಂ 299, 192, 353 (1)(b), 57, 324(4) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಹೈದರ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಕೊಲ್ಲಮೊಗರು ಗ್ರಾಮದಲ್ಲಿ ಭ್ರಷ್ಟಾಚಾರ ಪ್ರಕರಣ! – ಗ್ರಾಮಸ್ಥರಿಂದ ಶಾಂತಿಯುತ ಪ್ರತಿಭಟನಾ ಕರೆ.

Image
ಸುಬ್ರಹ್ಮಣ್ಯ , ಆ.28:ಕೊಲ್ಲಮೊಗರು ಗ್ರಾಮದ ಪಂಚಾಯತ್ ಸಿಬ್ಬಂದಿಯಿಂದ ನಡೆದಿರುವ ಕಳವು ಮತ್ತು ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಗ್ರಾಮಸ್ಥರು ಆ.29, ಶುಕ್ರವಾರ ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಶಾಂತಿಯುತ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ. ಗ್ರಾಮ ಪಂಚಾಯತ್‌ನ ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಅವರು ಸುಮಾರು 3 ತಿಂಗಳ ಹಿಂದೆ ಪಂಚಾಯತ್‌ಗೆ ಬಂದ ಪೀಠೋಪಕರಣಗಳನ್ನು ಕಳವು ಮಾಡಿದ ಆರೋಪದ ಹಿನ್ನೆಲೆಯಲ್ಲಿ ಅಮಾನತು ಮಾಡಲ್ಪಟ್ಟಿದ್ದರು. ಈ ಪ್ರಕರಣವನ್ನು ಗ್ರಾಮ ಸಭೆಯಲ್ಲಿಯೇ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಬಹಿರಂಗಪಡಿಸಿ, ಇಲಾಖಾವಾರು ತನಿಖೆ ನಡೆಸುವ ನಿರ್ಣಯ ಕೈಗೊಳ್ಳಲಾಗಿತ್ತು. ಆದರೆ, 25/08/2025ರಂದು ಆರೋಪಿಯು ಮತ್ತೆ ಕರ್ತವ್ಯಕ್ಕೆ ಹಾಜರಾದ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ. ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರಿಗೆ ವಿಚಾರಿಸಿದಾಗ, ಇದರ ಬಗ್ಗೆ ಯಾವುದೇ ಮಾಹಿತಿ ನೀಡದಿರುವುದು ಗ್ರಾಮಸ್ಥರ ಅಸಮಾಧಾನಕ್ಕೆ ಕಾರಣವಾಗಿದೆ. ಗ್ರಾಮಸ್ಥರ ಪ್ರಕಾರ, ಗ್ರಾಮ ಸಭೆಯಲ್ಲಿ ಕೈಗೊಂಡ ನಿರ್ಣಯವನ್ನು ಗಾಳಿಗೆ ತೂರಿ, ತನಿಖೆಯಿಲ್ಲದೇ ಸಿಬ್ಬಂದಿಯನ್ನು ಕರ್ತವ್ಯಕ್ಕೆ ಹಾಜರು ಮಾಡಿರುವುದು ತೀವ್ರ ಖಂಡನೀಯ. ಆದ್ದರಿಂದ ಶೀಘ್ರವೇ ತನಿಖಾ ಸಮಿತಿ ರಚಿಸಿ ನಿಜಾಸತ್ಯ ಹೊರತರಬೇಕು ಹಾಗೂ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕೆಂಬ ಒತ್ತಾಯ ಗ್ರಾಮಸ್ಥರದು. ಈ ಹಿನ್ನೆಲೆಯಲ್ಲಿ ಆ.29ರಂದು ಕೊಲ್ಲಮೊಗರು ಗ್ರಾಮ ಪಂಚಾಯತ್ ...

ಪುಂಜಾಲಕಟ್ಟೆ: ಧ್ವನಿವರ್ಧಕ ಕಾನೂನು ಉಲ್ಲಂಘನೆ – ಗಣೇಶೋತ್ಸವ ಸಮಿತಿಯ ವಿರುದ್ಧ ಪ್ರಕರಣ.

Image
ಬಂಟ್ವಾಳ , ಆ.28:ಬಂಟ್ವಾಳ ತಾಲೂಕು ಪಿಲಾತಬೆಟ್ಟು ಗ್ರಾಮದ ಬಂಗ್ಲೆ ಮೈದಾನದ ಬಳಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಪುಂಜಾಲಕಟ್ಟೆ ವತಿಯಿಂದ ಆಗಸ್ಟ್ 27 ರಂದು ರಾತ್ರಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದ ವೇಳೆ ಕಾನೂನು ಉಲ್ಲಂಘನೆಯ ಪ್ರಕರಣ ದಾಖಲಾಗಿದೆ. ಮಾಹಿತಿ ಪ್ರಕಾರ, ರಾತ್ರಿ 10.45 ಗಂಟೆಗೆ ಧ್ವನಿವರ್ಧಕ ಬಳಸಿ ಕಾರ್ಯಕ್ರಮ ನಡೆಯುತ್ತಿರುವುದನ್ನು ಕಂಡು, ಪುಂಜಾಲಕಟ್ಟೆ ಪೊಲೀಸ್ ಠಾಣೆಯ ಪಿ.ಎಸ್.ಐ ಸ್ಥಳಕ್ಕೆ ತೆರಳಿ, ಧ್ವನಿ ಮಾಲಿನ್ಯ ನಿಯಂತ್ರಣ ಕಾಯ್ದೆ ಹಾಗೂ ಈಗಾಗಲೇ ನೀಡಲಾಗಿದ್ದ ನೋಟಿಸ್‌ ಕುರಿತು ಆಯೋಜಕರಿಗೆ ತಿಳಿಸಿ, ಧ್ವನಿವರ್ಧಕ ನಿಲ್ಲಿಸಲು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಆಯೋಜಕರು ಆ ಸಮಯದಲ್ಲಿ ಧ್ವನಿವರ್ಧಕವನ್ನು ನಿಲ್ಲಿಸಿದ್ದರು. ಆದರೆ, ರಾತ್ರಿ 11.50 ಗಂಟೆಗೆ ಪುನಃ ಧ್ವನಿವರ್ಧಕ ಬಳಸಿ ಕಾರ್ಯಕ್ರಮ ನಡೆಸುತ್ತಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಮತ್ತೊಮ್ಮೆ ವಿಚಾರಿಸಿದಾಗ, ಸಮಿತಿ ಅಧ್ಯಕ್ಷ ಕೌಶಿಕ್ ಶೆಟ್ಟಿ, ಪದಾಧಿಕಾರಿಗಳು ಹಾಗೂ ಪುನೀತ್ ಮಡಂತ್ಯಾರು, ತಾರನಾಥ ಕಜೆಕ್ಕಾರು, ಗುರು ಮಡಂತ್ಯಾರು, ನಾಟಕ ಆಯೋಜಕರು ಸೇರಿದಂತೆ 10–15 ಜನರ ಗುಂಪು ಸೇರಿ ಪೊಲೀಸರೊಂದಿಗೆ ವಾಗ್ವಾದ ನಡೆಸಿ, “ಪೊಲೀಸ್ ಗೆ ಧಿಕ್ಕಾರ” ಎಂದು ಘೋಷಣೆ ಕೂಗಿ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದರೆಂದು ವರದಿಯಾಗಿದೆ. ಈ ಹಿನ್ನೆಲೆಯಲ್ಲಿ, ಅ.ಕ್ರ 52/2025 ಅಡಿಯಲ್ಲಿ BNS-2023 ಕಲಂ 189(2), 191(2), 191(3), 1...

ಆ.31: ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ ಹೊಸ್ತಾರೋಗಣೆ – ದರುಶನದಲ್ಲಿ ವ್ಯತ್ಯಯ.

Image
ಸುಬ್ರಹ್ಮಣ್ಯ :ನಾಗಾರಾಧನೆಯ ಮಹತ್ವದ ಪುಣ್ಯತಾಣವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಆಗಸ್ಟ್ 31, ಆದಿತ್ಯವಾರ ಹೊಸ್ತಾರೋಗಣೆ (ನವಾನ್ನ ಬೋಜನ) ಕಾರ್ಯಕ್ರಮ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಭಕ್ತರಿಗೆ ದರುಶನ ಮತ್ತು ಸೇವೆಗಳಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಲಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಬೆಳಿಗ್ಗೆ 5.15ಕ್ಕೆ ಶ್ರೀ ದೇವರಿಗೆ ಮಹಾಭಿಷೇಕ ನೆರವೇರಲಿದೆ. ನಂತರ 7.30ಕ್ಕೆ ತೆನೆ ತರುವುದು ಮತ್ತು ಕದಿರು ಪೂಜೆ ನಡೆಯಲಿದ್ದು, ಬಳಿಕ ಭಕ್ತರಿಗೆ ಕದಿರು ವಿತರಣೆ ನೆರವೇರಲಿದೆ. ದರಶನ ವ್ಯತ್ಯಯ: ಹೊಸ್ತಾರೋಗಣೆಯ ನಿಮಿತ್ತ ಬೆಳಿಗ್ಗೆ 10 ಗಂಟೆಯ ನಂತರದಿಂದ ಮಾತ್ರ ಭಕ್ತರಿಗೆ ಶ್ರೀ ದೇವರ ದರುಶನಕ್ಕೆ ಅವಕಾಶ ಕಲ್ಪಿಸಲಾಗುವುದು. ಅಲ್ಲದೆ, ಆಶ್ಲೇಷ ಬಲಿ ಸೇವೆ ಬೆಳಿಗ್ಗೆ 9 ಗಂಟೆಯಿಂದ ಆರಂಭವಾಗಿ ಎರಡು ಪಾಳಿಗಳಲ್ಲಿ ನಡೆಯಲಿದೆ. ಭಕ್ತರು ತಾಳ್ಮೆಯಿಂದ ಸಹಕರಿಸಬೇಕೆಂದು ದೇವಳದ ಪ್ರಕಟಣೆ ತಿಳಿಸಿದೆ.

ಸೆ.07: ಚಂದ್ರಗ್ರಹಣದ ನಿಮಿತ್ತ ಕುಕ್ಕೆ ದೇವಳದಲ್ಲಿ ದೇವರ ದರುಶನ ಹಾಗೂ ಸೇವೆಗಳಲ್ಲಿ ವ್ಯತ್ಯಯ.

Image
ಸುಬ್ರಹ್ಮಣ್ಯ : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸೆ.   07 ರಂದು ಆದಿತ್ಯವಾರ ಚಂದ್ರಗ್ರಹಣ ಇರುವುದರಿಂದ ಈ ದಿನ ಶ್ರೀ ದೇವಳದಲ್ಲಿ ದಿನ ನಿತ್ಯದ ಸೇವೆ ಮತ್ತು ದರುಶನ ಹಾಗೂ ಭಕ್ತಾದಿಗಳ ಸೇವಾ ಸಮಯಗಳಲ್ಲಿ ವ್ಯತ್ಯಯ ಉಂಟಾಗಲಿದೆ. ಭಕ್ತರು ಸಹಕರಿಸಬೇಕು ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ. ** ಮದ್ಯಾಹ್ನ 11 ಗಂಟೆಗೆ ಮಹಾಪೂಜೆ** ಆದಿತ್ಯವಾರ ಶ್ರೀ ದೇವರ ಮಧ್ಯಾಹ್ನದ ಮಹಾಪೂಜೆ ಯು ಬೆಳಗ್ಗೆ 11 ಗಂಟೆಗೆ ನಡೆಯಲಿದೆ.ರಾತ್ರಿಯ ಮಹಾಪೂಜೆಯು ಸಂಜೆ ಗಂಟೆ 5 ಕ್ಕೆ ನೆರವೇರಲಿದೆ. ** ರಾತ್ರಿ ಬೋಜನ ಇಲ್ಲ** ಆದಿತ್ಯವಾರ ರಾತ್ರಿ ಭೋಜನ ಪ್ರಸಾದ ಇರುವುದಿಲ್ಲ.ಅಲ್ಲದೆ ಸಾಯಂಕಾಲದ ಆಶ್ಲೇಷ ಬಲಿ ಸೇವೆ ಇರುವುದಿಲ್ಲ. **ಸರ್ಪಸಂಸ್ಕಾರ ಆರಂಭ ಇಲ್ಲ:** ಆದಿತ್ಯವಾರ ಸರ್ಪಸಂಸ್ಕಾರ ಸೇವೆ ಆರಂಭವಾಗುವುದಿಲ್ಲ.ಶನಿವಾರ ಆರಂಭಗೊಂಡ ಸೇವೆಯು ಆದಿತ್ಯವಾರ ಕೊನೆಗೊಳ್ಳುತ್ತದೆ.ಆದರೆ ಆದಿತ್ಯವಾರ ಸೇವಾರಂಭ ಇಲ್ಲ. ಸಾಯಂಕಾಲ ಗಂಟೆ 5.00 ರಿಂದ ಶ್ರೀ ದೇವರ ದರುಶನ ಇರುವುದಿಲ್ಲ. ಸೆ. 08 ರಂದು ಪಂಚಾಮೃತ ಮಹಾಭಿಷೇಕ ಸೇವೆ ಇರುವುದಿಲ್ಲ. ಆದುದರಿಂದ ಭಕ್ತರು ಸಹಕರಿಸಬೇಕು ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ “ನಮ್ಮ ಸಂಸ್ಕೃತಿ – ಸ್ವಚ್ಛ ಸಂಸ್ಕೃತಿ” ಶ್ರಮದಾನ ಪೂರ್ವಭಾವಿ ಸಭೆ.

Image
ಕುಕ್ಕೆ ಸುಬ್ರಹ್ಮಣ್ಯ , ಆಗಸ್ಟ್ 28, 2025 (ಗುರುವಾರ): ಕಡಬ ತಾಲೂಕು ಪಂಚಾಯತ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಹಾಗೂ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಸಂಯುಕ್ತ ಆಶ್ರಯದಲ್ಲಿ “ನಮ್ಮ ಸಂಸ್ಕೃತಿ – ಸ್ವಚ್ಛ ಸಂಸ್ಕೃತಿ” ಧ್ಯೇಯವಾಕ್ಯದೊಂದಿಗೆ ಬೃಹತ್ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಸಂಬಂಧ ಪೂರ್ವಭಾವಿ ಸಭೆ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್‌ನ ಕುಮಾರಧಾರ ಸಭಾಂಗಣದಲ್ಲಿ ನೆರವೇರಿತು. ಸಭೆಯ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತಾ ಅವರು ವಹಿಸಿದ್ದರು. ಮುಖ್ಯ ಅಂಶಗಳು ಸಭೆಯ ಆರಂಭದಲ್ಲಿಯೇ ಗ್ರಾಮಸ್ಥರು ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಹಾಗೂ ಮುಖ್ಯಸ್ಥರು ಕಡ್ಡಾಯವಾಗಿ ಹಾಜರಿರಬೇಕು ಎಂದು ಒತ್ತಾಯಿಸಿದರು. ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರು ಪ್ರಾಸ್ತಾವಿಕ ಭಾಷಣ ಮಾಡುತ್ತಾ, ಈ ಹಿಂದೆ ಪುತ್ತೂರಿನಲ್ಲಿ 10 ದಿನಗಳ ಕಾಲ ನಡೆದ ಸ್ವಚ್ಛತಾ ಕಾರ್ಯಕ್ರಮದ ಯಶಸ್ಸಿನ ಕುರಿತು ವಿವರಿಸಿದರು. ದಕ್ಷಿಣ ಕನ್ನಡ ಜಿಲ್ಲಾ ನರೇಗಾ ಯೋಜನೆಯ ಓಂಬುಡ್ಸ್‌ಮ್ಯಾನ್ ಶೀನಾ ಶೆಟ್ಟಿ ಅವರು “ಸ್ವಚ್ಛ ಸಂಸ್ಕೃತಿ – ನಮ್ಮ ಸಂಸ್ಕೃತಿ”ಯ ಉದ್ದೇಶ ಮತ್ತು ಅದರ ಕಾರ್ಯಗತಗೊಳಿಸುವಿಕೆ ಕುರಿತು ವಿವರವಾದ ಮಾಹಿತಿ ನೀಡಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪ್ಲಾಸ್ಟಿಕ್ ಮುಕ್ತ ಕ್ರಮಗಳು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ...

ಅರಸಿನಮಕ್ಕಿ: ಅಂಗಡಿಗೆ ಅಕ್ರಮ ಪ್ರವೇಶ –ಹೇರ್ ಡ್ರೆಸ್ ಮಾಡುತ್ತಿದ್ದ ವ್ಯಕ್ತಿ ಮೇಲೆ ಹಲ್ಲೆ ಪ್ರಕರಣ.

Image
ಬೆಳ್ತಂಗಡಿ ತಾಲೂಕಿನ ಅರಸಿನಮಕ್ಕಿಯಲ್ಲಿ ಹಲ್ಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆಗಸ್ಟ್ 25, 2025 ರಂದು ಬೆಳಿಗ್ಗೆ ಸುಮಾರು 9.50 ಗಂಟೆಗೆ ಅರಸಿನಮಕ್ಕಿ ಪ್ರಜ್ಞಾ ಹೇರ್ ಡ್ರೆಸ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ರಜತ್‌ ಬಂಡಾರಿ ಎಂಬವರು ಹಲ್ಲೆಗೆ ಗುರಿಯಾದ ಘಟನೆ ನಡೆದಿದೆ. ಮಾಹಿತಿಯಂತೆ, ಕಿರಣ್ ಶಿಶಿಲ ಎಂಬಾತನು KA21M5560 ನಂಬರಿನ ಕಾರಿನಲ್ಲಿ ಅಂಗಡಿಯ ಬಳಿ ಬಂದು, ಅಕ್ರಮವಾಗಿ ಅಂಗಡಿಗೆ ಪ್ರವೇಶಿಸಿ, ರಜತ್‌ ಬಂಡಾರಿಗೆ ಅವಾಚ್ಯವಾಗಿ ಬೈದು, ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಪಿರ್ಯಾದಿ ದಾಖಲಾಗಿದೆ. ಈ ಸಂಬಂಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅ.ಕ್ರ 58/2025 ಅಡಿ ಕಲಂ 329(4), 352, 115(2), 351(2), 110 ಬಿಎನ್ಎಸ್-2023ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ. 👉 ಪ್ರಕರಣದ ತನಿಖೆ ಮುಂದುವರಿದಿದ್ದು, ಹೆಚ್ಚಿನ ವಿವರಗಳು ಬಹಿರಂಗವಾಗಬೇಕಾಗಿದೆ.

ಬಂಟ್ವಾಳ: ಸುಳ್ಳು ದೂರು ನೀಡಿದ ವ್ಯಕ್ತಿ ವಿರುದ್ಧ ಪ್ರಕರಣ ದಾಖಲು – ನ್ಯಾಯಾಂಗ ಬಂಧನ.

Image
ಬಂಟ್ವಾಳ , ಆ.27 :ಸಜೀಪ ಮುನ್ನೂರು ನಿವಾಸಿ ಉಮರ್ ಪಾರೂಕ್ (48) ಎಂಬವರು ಕೊಲೆ ಯತ್ನವಾಗಿದೆ ಎಂಬಂತೆ ನೀಡಿದ ದೂರು ಸುಳ್ಳು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ. ಮೂಲ ಮಾಹಿತಿ ಪ್ರಕಾರ, ದಿನಾಂಕ 11.06.2025 ರಂದು ಮುಂಜಾನೆ ಜೀಪ್‌ನಲ್ಲಿ ನಂದಾವರದಿಂದ ದೇರಳಕಟ್ಟೆ ಕಡೆ ತೆರಳುತ್ತಿದ್ದಾಗ, ಸಜೀಪನಡು ಗ್ರಾಮದ ದೇರಾಜೆ ಬಸ್ ನಿಲ್ದಾಣದ ಬಳಿ ಇಬ್ಬರು ಅಪರಿಚಿತರು ತಲವಾರು ಬೀಸಿ ಕೊಲೆ ಮಾಡಲು ಯತ್ನಿಸಿದರು ಎಂದು ಉಮರ್ ಪಾರೂಕ್ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದರಿಂದಾಗಿ ಅ.ಕ್ರ.68/2025, ಕಲಂ 109, 324(4) ಜೊತೆ 3(5) BNS-2023 ರಂತೆ ಪ್ರಕರಣ ದಾಖಲಾಗಿತ್ತು. ಆದರೆ, ಪೊಲೀಸ್‌ ತನಿಖೆಯಲ್ಲಿ ಪ್ರಕರಣವು ಸಂಪೂರ್ಣ ಸುಳ್ಳು ಎಂದು ದೃಢಪಟ್ಟಿದ್ದು, ಈ ಬಗ್ಗೆ ಮಾನ್ಯ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿದೆ. ತನಿಖೆಯ ನಂತರ ಉಮರ್ ಪಾರೂಕ್ ಅವರು ಸಾರ್ವಜನಿಕರನ್ನು ಪ್ರಚೋದಿಸಿ, ಗಲಭೆ ಉಂಟಾಗುವಂತೆ ಮಾಡಿದ್ದು, ಭಯಭೀತಿಯನ್ನು ಸೃಷ್ಟಿಸಿದ್ದು, ಜೊತೆಗೆ ಉದ್ದೇಶಪೂರ್ವಕವಾಗಿ ಸುಳ್ಳು ಆಪಾದನೆ ಸಲ್ಲಿಸಿದ್ದಕ್ಕಾಗಿ ಅವರ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ.128/2025, ಕಲಂ 192, 353(1)(b), 230(1), 248(A) BNS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಉಮರ್ ಪಾರೂಕ್ ಅವರನ್ನು ದಸ್ತಗಿರಿ ಮಾಡಿ ಬಂಟ್ವಾಳದ ಎಸಿಜೆ ...

🎶 ಕುಕ್ಕೆ ಸುಬ್ರಹ್ಮಣ್ಯ ಸಾರ್ವಜನಿಕ ಗಣೇಶೋತ್ಸವ – ಸಾಂಸ್ಕೃತಿಕ ಕಾರ್ಯಕ್ರಮ ಭಕ್ತಿ ವೈಭವ 🎶

Image
ಕುಕ್ಕೆ ಸುಬ್ರಹ್ಮಣ್ಯ, 27 ಆಗಸ್ಟ್: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತಿ ಸಂಭ್ರಮದೊಂದಿಗೆ ಆರಂಭಗೊಂಡಿರುವ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಬುಧವಾರ ಸಂಜೆ ಅದ್ದೂರಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯೆಯರಾದ ಶ್ರೀಮತಿ ಪ್ರವೀಣ ರೈ, ಶ್ರೀಮತಿ ಸೌಮ್ಯ ಭರತ್, ಶ್ರೀಮತಿ ಲೀಲಾ ಮನೋಹರ್, ಸಮಿತಿ ಸದಸ್ಯರಾದ ಅಶೋಕ್ ನೇಕ್ರಾಜೆ, ಪ್ರಸಿದ್ಧ ಸಂಗೀತ ಕಲಾವಿದ ಡಾ. ವಿದ್ಯಾಭೂಷಣ್, ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೆ. ಯಜೇಶ್ ಆಚಾರ್ಯ, ಸಂಚಾಲಕ ವೆಂಕಟ್ರಾಜ್, ಪ್ರಧಾನ ಕೋಶಾಧಿಕಾರಿ ಶ್ರೀಕೃಷ್ಣ ಶರ್ಮ, ಹಾಗೂ ಕುಮಾರಸ್ವಾಮಿ ವಿದ್ಯಾಲಯದ ಮುಖ್ಯಸ್ಥರಾದ ಗಣೇಶ ನಾಯರ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಭಕ್ತಿ ಭಾವದಿಂದ ಕೂಡಿದ ಸಂಗೀತ–ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದ್ದು, ಭಕ್ತರಲ್ಲಿ ಆಧ್ಯಾತ್ಮಿಕ ಶಾಂತಿ ಹಾಗೂ ಸಂತೋಷವನ್ನು ಹರಡಿದವು. ಸ್ಥಳೀಯ ಹಾಗೂ ಅತಿಥಿ ಕಲಾವಿದರ ಮನಮೋಹಕ ಭಜನೆ, ಕೀರ್ತನೆ, ಸಂಗೀತ ವಾದನಗಳಿಂದ ಕಾರ್ಯಕ್ರಮ ಭಕ್ತಿಪರ ವಾತಾವರಣವನ್ನು ಸೃಷ್ಟಿಸಿತು. ಉತ್ಸವ ಸಮಿತಿಯ ಪ್ರಮುಖರು, ಭಕ್ತಾದಿಗಳು, ಗಣ್ಯರು ಹಾಗೂ ಸ್ಥಳೀಯರ ನೂರಾರು ಮಂದಿ ಭಾಗವಹಿಸಿ ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಯಶಸ್ವಿಗ...