Posts

Showing posts from January, 2025

ಕಡಬ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ರಮೇಶ್ ಕಲ್ಪುರೆ ಆಯ್ಕೆ.

Image
ಕಡಬ ; ಕಡಬ ತಾಲೂಕಿನ ಪ್ರತಿಷ್ಠಿತ ಕಡಬ ಕೃಷಿ ಪತ್ತಿನ ಸಹಕಾರಿ ಸಂಘದ 2025ರ ಸಂಘದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ರಮೇಶ್ ಕಲ್ಪುರೆ ಆಯ್ಕೆಯಾಗಿದ್ದಾರೆ ಹಾಗೂ ಉಪಾಧ್ಯಕ್ಷರಾಗಿ ಎ ಪಿ ಗಿರೀಶ್ ಆಯ್ಕೆಯಾಗಿದ್ದಾರೆ. ನಿರ್ದೇಶಕರಾದ ತಮ್ಮಯ್ಯ ಗೌಡ ಸುಳ್ಯ, ಪುರುಷೋತ್ತಮ ಕಲ್ಲಂತಡ್ಕ, ರಘುಚಂದ್ರ ಗೌಡ ಕೊಣಾಜೆ, ರಾಮಚಂದ್ರ ಗೌಡ ಎಲುವಾಳೆ, ಲತಾ ರೈ ಎ., ವಸಂತಿ ಗೌಡ ಪುಯಿಲ, ಹರಿಶ್ಚಂದ್ರ ಪಿ., ಸತೀಶ್ಚಂದ್ರ ರೈ ಮೈಕಾಜೆ, ಸದಾನಂದ ಪಿ., ತನಿಯಪ್ಪ ಹಾಗೂ ಎಸ್‌ಸಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ಪ್ರದೀಪ್ ಉಪಸ್ಥಿತರಿದ್ದರು. ಸಹಕಾರ ಸಂಘಗಳ ಪುತ್ತೂರು ಸಹಾಯಕ ನಿಬಂಧಕರ ಕಚೇರಿಯ ಮಾರಾಟಾಧಿಕಾರಿ ಶೋಭಾ ಎನ್.ಎಸ್. ಅವರು ಚುನಾವಣ ಪ್ರಕ್ರಿಯೆಯನ್ನು ನಡೆಸಿಕೊಟ್ಟರು. 

ಕುಕ್ಕೆ ದೇವಳಕ್ಕೆ ತಮಿಳು ಚಿತ್ರ ನಿರ್ದೇಶಕ ಅತ್ಲೇ ಭೇಟಿ, ಅನ್ನದಾನಕ್ಕೆ ದೇಣಿಗೆ.

Image
ಸುಬ್ರಹ್ಮಣ್ಯ ಜ.31: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ತಮಿಳುನಾಡಿನ ಖ್ಯಾತ ಚಿತ್ರ ನಿರ್ದೇಶಕ ಅತ್ಲೇ ಅವರು ಕುಟುಂಬ ಸಮೇತ ಭೇಟಿ ನೀಡಿ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು .ತದನಂತರ ಶ್ರೀ ದೇವಳದ ಕಚೇರಿಯಲ್ಲಿ ಭಕ್ತಾದಿಗಳ ಅನ್ನದಾನಕ್ಕಾಗಿ ರೂಪಾಯಿ 10 ಲಕ್ಷದ ಬ್ಯಾಂಕ್ ಚೆಕ್ ಅನ್ನು ಕಾರ್ಯನಿರ್ವಹಣಾಧಿಕಾರಿಯವರಿಗೆ ನೀಡಿರುವರು. ಈ ಸಂದರ್ಭದಲ್ಲಿ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗೊಂಡಿ ಅತ್ಲೇ ಅವರನ್ನು ಶಾಲು ಹೊಂದಿಸಿ ಸ್ಮರಣೆಗೆ ನೀಡಿ ಗೌರವಿಸಿದರು. ದೇವಳದ ಶಿಷ್ಟಾಚಾರ ಅಧಿಕಾರಿ ಜಯರಾಮರಾವ್ ಉಪಸ್ಥಿತರಿದ್ದರು.

ಕುಕ್ಕೆ:ಎಸ್‌ಎಸ್‌ಪಿಯುನ ರಾಜ್ಯ ಮಟ್ಟದ ಕ್ರೀಡಾಳುಗಳಿಗೆ ಗೌರವಾರ್ಪಣೆ.

Image
ಸುಬ್ರಹ್ಮಣ್ಯ : ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಎಸ್.ಎಸ್.ಪಿ.ಯು ಕಾಲೇಜಿನ ನಾಲ್ಕು ಮಂದಿ ವಿದ್ಯಾರ್ಥಿಗಳು ಟೆನ್ನಿಕಾಯ್ಟ್ ಮತ್ತು ಟ್ವೆಕಾಂಡೋ ಟೇಕ್ವಾಂಡೋ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದರು.ಇವರಿಗೆ ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಪದಕ ಮತ್ತು ಪ್ರಮಾಣ ಪತ್ರ ನೀಡಿ ಶುಕ್ರವಾರ ಗೌರವಿಸಿದರು ಮತ್ತು ಆಶೀರ್ವದಿಸಿದರು.  ಪದವಿಪೂರ್ವ ಕಾಲೇಜು ಬಾಲಕರ ವಿಭಾಗದ ರಾಜ್ಯ ಮಟ್ಟದ ಟೆನ್ನಿಕಾಯ್ಟ್ ಸ್ಪರ್ಧೆಯಲ್ಲಿ ದ.ಕ ಜಿಲ್ಲಾ ತಂಡವು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿತ್ತು.ಈ ತಂಡದಲ್ಲಿದ್ದ ಕಾಲೇಜಿನ ಪ್ರಥಮ ಕಲಾ ವಿಭಾಗದ ವಿದ್ಯಾರ್ಥಿ ಯಜ್ಞೇಶ್ ದೇವರಗದ್ದೆ ಅವರನ್ನು ಆರಂಭದಲ್ಲಿ ಗೌರವಿಸಿದರು.ಬಳಿಕ ರಾಜ್ಯ ಮಟ್ಟದ ಬಾಲಕಿಯರ ವಿಭಾಗದ ಟೆನ್ನಿಕಾಯ್ಟ್ ಪಂದ್ಯಾಟದಲ್ಲಿ ಭಾಗವಹಿಸಿದ್ದ ಸುಪ್ರಿಯಾ ಸುಬ್ರಹ್ಮಣ್ಯ ಮತ್ತು ಕೃತೀಕ್ಷಾ ಹಾಗೂ ರಾಜ್ಯ ಮಟ್ಟದ ಟೇಕ್ವಾಂಡೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಚಾಣಸ್ಯ ಕಟುವಾಲ್ ಛೇತ್ರಿ ಅವರನ್ನು ಪ್ರಾಚಾರ್ಯರು ಅಭಿನಂದಿಸಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಹಿರಿಯ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್, ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್, ಹಿರಿಯ ಉಪನ್ಯಾಸಕಿ ಜಯಶ್ರೀ.ವಿ.ದಂಬೆಕೋಡಿ, ಉಪನ್ಯಾಸಕರಾದ ಮನೋಜ್ ಕುಮಾರ್ ಬಿ.ಎಸ್, ಪ್ರವೀಣ್.ಎ, ರತ್ನಾಕರ ಸುಬ್ರಹ್ಮಣ್ಯ, ಉಪನ್ಯಾಸಕಿಯರಾದ ಸವಿತಾ ಕೈಲಾಸ್,ಸು...

ಪುತ್ತೂರು ಉಪ ವಿಭಾಗದ ನೂತನ ಪ್ರೊಬೇಷನರಿ ಸಹಾಯಕ ಆಯುಕ್ತರು ಐಎಎಸ್ ಅಧಿಕಾರಿ ಪಿ.ಶ್ರವಣ್ ಕುಮಾರ್.

Image
ದಕ್ಷಿಣ ಕನ್ನಡ ; ಪುತ್ತೂರು ಉಪ ವಿಭಾಗದ ಸಹಾಯಕ ಆಯುಕ್ತರಾಗಿದ್ದ ಜುಬಿನ್ ಮೊಹಪಾತ್ರ ಅವರ ವರ್ಗಾವಣೆಯಿಂದ  ತೆರವಾಗಿರುವ ಸ್ಥಾನಕ್ಕೆ ಪ್ರೊಬೇಷನರಿ ಐಎಎಸ್ ಅಧಿಕಾರಿ ಪಿ.ಶ್ರವಣ್ ಕುಮಾರ್ ಅವರು ಪ್ರಭಾರ ವಹಿಸಿಕೊಂಡಿದ್ದಾರೆ. ಐಎಎಸ್ ಅಧಿಕಾರಿ ಪಿ.ಶ್ರವಣ್ ಕುಮಾರ್  ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿಯಾಗಿ ಕಳೆದ ಜೂನ್ 1ರಿಂದ ಕರ್ತವ್ಯದಲ್ಲಿರುವ ಪಿ.ಶ್ರವಣ್ ಕುಮಾರ್ ಅವರು 2023ನೇ ಬ್ಯಾಚ್‌ ನ ಐಎಎಸ್ ಅಧಿಕಾರಿಯಾಗಿದ್ದಾರೆ. 2023ರಲ್ಲಿ ಐಎಎಸ್‌ ಗೆ ಆಯ್ಕೆಯಾಗಿರುವ ಇವರು ರಾಯಚೂರಿನ ಕಲ್ಲೂರು ಗ್ರಾಮದವರು. ಬೆಂಗಳೂರಿನ ಆರ್.ವಿ.ಕಾಲೇಜ್ ಆಫ್ ಎಂಜಿನಿಯರಿಂಗ್‌ನಿಂದ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್‌ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದುಕೊಂಡಿರುವ  ಇವರು ಆ ಬಳಿಕ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿದ್ದರು. ಭಾರತೀಯ ರಕ್ಷಣಾ ಇಲಾಖೆಯ ರಾಜ್ಯ ಸೇವೆಯಲ್ಲಿ ತರಬೇತಿಯನ್ನೂ ಪಡೆದುಕೊಂಡಿದ್ದರು.  ಇದಕ್ಕೂ ಮೊದಲು ಅವರು ಐಆರ್‌ಎಸ್‌ನಲ್ಲಿ ಸೇವೆ ಸಲ್ಲಿಸಿದ್ದರು. ನಿರ್ಗಮಿತ  ಸಹಾಯಕ ಆಯುಕ್ತರು ನೂತನ ಆಯುಕ್ತರಿಗೆ  ಅಧಿಕಾರ ಹಸ್ತಾಂತರಿಸಿದರು. ಜುಬಿನ್ ಮೊಹಪಾತ್ರ ಅವರನ್ನು ರಾಯಚೂರು ನಗರ ಪಾಲಿಕೆ ಆಯುಕ್ತರಾಗಿ ನೇಮಕಗೊಳಿಸಿ ವರ್ಗಾವಣೆ ಮಾಡಲಾಗಿದೆ.

ಭರತನಾಟ್ಯ ಸ್ನಾತಕೋತ್ತರ ಪದವಿ: ಚೈತನ್ಯ ಕೋಟೆಅವರಿಗೆ ಅವಳಿ ಚಿನ್ನದ ಪದಕ:

Image
ಸುಬ್ರಹ್ಮಣ್ಯ : ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ, ಮೈಸೂರು ಇಲ್ಲಿ ಭರತನಾಟ್ಯ ಸ್ನಾತಕೋತ್ತರ ಪದವಿಯಲ್ಲಿ (ಮಾಸ್ಟರ್ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ ) ವ್ಯಾಸಂಗ ಮಾಡುತ್ತಿದ್ದ ವಿದುಷಿ ಚೈತನ್ಯ ಕೋಟೆ ಅವರು ಅಂತಿಮ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ವಿ.ವಿಗೆ ಪ್ರಥಮ ರ‍್ಯಾಂಕ್ ಗಳಿಸಿ ಅವಳಿ ಚಿನ್ನದ ಪದಕ ಪಡೆದಿದ್ದಾರೆ.  ಇವರು ವಿಶ್ವವಿದ್ಯಾಲಯದ ನಡೆದ ವಾರ್ಷಿಕ ಘಟಿಕೋತ್ಸವದಲ್ಲಿ ಎರಡು ಚಿನ್ನದ ಪದಕಗಳನ್ನು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್, ನವ ದೆಹಲಿಯ ಕೇಂದ್ರ ಸಂಸ್ಕೃತ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಶ್ರೀನಿವಾಸ್ ವರಖೇಡಿ, ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಾಗೇಶ್.ವಿ.ಬೆಟ್ಟಕೋಟೆ ಉಪಸ್ಥಿತರಿದ್ದರು.ಚೈತನ್ಯ ಕೋಟೆ ಅವರು ವಿದುಷಿ ಅಂಶುಮಾಲ ಉಬರಡ್ಕ ಮತ್ತು ಕರ್ನಾಟಕ ಕಲಾಶ್ರೀ ವಿದ್ವಾನ್ ಕುಡ್ಕಾಡಿ ವಿಶ್ವನಾಥ ರೈ ಇವರ ಶಿಷ್ಯೆ.ಕುಕ್ಕೆ ಸುಬ್ರಹ್ಮಣ್ಯದ ಬೂದಿಪಳ್ಳ ಭಾಸ್ಕರ ಕೋಟೆ ಮತ್ತು ವೀಣಾ ಕೋಟೆ ದಂಪತಿಗಳ ಪುತ್ರಿ ಹಾಗೂ ತಿರುಮಲ ಭಟ್ ಅವರ ಪತ್ನಿ.sಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನ ಹಿರಿಯ ವಿದ್ಯಾರ್ಥಿನಿ.

ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಸೇರಿದಂತೆ ರಾಜ್ಯದಲ್ಲಿ ಒಟ್ಟು 12 ಐಎಎಸ್ ಅಧಿಕಾರಿಗಳ ವರ್ಗಾವಣೆ.

Image
ಪುತ್ತೂರು : ಅತ್ಯಂತ ಕ್ರೀಯಾಶೀಲ ಅಧಿಕಾರಿಯಾಗಿ ಜನರ ಪ್ರೀತಿಗೆ ಪಾತ್ರರಾಗಿದ್ದ ಪುತ್ತೂರು ಉಪವಿಭಾಗದ ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಆವರಿಗೆ ದಿಢೀರ್ ವರ್ಗಾವಣೆಯಾಗಿದೆ. ಮುಂದಿನ ಆದೇಶದ ವರೆಗೆ ರಾಯಚೂರು ನಗರ ಪಾಲಿಕೆಯ ಆಯುಕ್ತರಾಗಿ ನಿಯೋಜಿಸಲಾಗಿದೆ. ಇವರು ಪುತ್ತೂರು ಉಪವಿಭಾಗದ ಸುಳ್ಯ ಬೆಳ್ತಂಗಡಿ ಕಡಬ ವ್ಯಾಪ್ತಿಯಲ್ಲಿ ಅಧಿಕಾರ ವಹಿಸಿಕೊಂಡ ಕೆಲವೇ ಸಮಯದಲ್ಲಿ ಜನಸ್ನೇಹಿಯಾಗಿ ಗುರುತಿಸಿಕೊಂಡಿದ್ದರು. ಕುಕ್ಕೆ ಸುಬ್ರಹ್ಮಣ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಜವಾಬ್ದಾರಿ ವಹಿಸಿಕೊಂಡು ಹಲವು ಬದಲಾವಣೆಗಳನ್ನು ಮಾಡಿದ್ದರು. ಐಎಎಸ್ ಹಾಗೂ ಐಪಿಎಸ್ ಎರಡೂ ವಿಭಾಗದಲ್ಲಿ ಕೆಲಸ ಮಾಡಿದ್ದ ಅವರು ಓರ್ವ ಸಾಮಾಜಿಕ ನ್ಯಾಯ ಪರ ಅಧಿಕಾರಿಯಾಗಿದ್ದರು. ವರ್ಗಾವಣೆಯಾದ ಇತರ ಅಧಿಕಾರಿಗಳ ವಿವರ ಇಲ್ಲಿದೆ. ಡಾ. ಶಿವಶಂಕರ ಎನ್., ಐಎಎಸ್ (ಕೆಎನ್: 2012), ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಉಪ ಆಯುಕ್ತರನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾಯಿಸಲಾಗಿದೆ ಮತ್ತು ಮುಂದಿನ ಆದೇಶದವರೆಗೆ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್, ಬೆಂಗಳೂರು ವೈಸ್ ಶ್ರೀ ಮಹಾಂತೇಶ ಬಿಳಗಿ, ಐಎಎಸ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಶ್ರೀ ಮಹಾಂತೇಶ ಬಿಳಗಿ, IAS (ಕೆಎನ್: 2012). ವ್ಯವಸ್ಥಾಪಕ ನಿರ್ದೇಶಕರು, ಬೆಂಗಳೂರು ಎಲೆಕ್ಟ್ರಿಸಿಟಿ ಸಪ್ಲೈ ಕಂಪನಿ ಲಿಮಿಟೆಡ್, ಬೆಂಗಳೂರು ಅವರನ್ನು ತಕ್ಷಣದಿಂದ ಜಾ...

ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥರ ಗೋಸಂರಕ್ಷಣೆಯ ಕಾಳಜಿ

Image
*ಗೋವು ನಮಗೇಕೆ ಪೂಜನೀಯ*   ಕ್ಷೀರಸಾಗರದಲ್ಲಿ ಉದ್ಭವಿಸಿದ ಉಪಯುಕ್ತ ವಸ್ತುಗಳಲ್ಲಿ ಪ್ರಮುಖವಾದದು ಕಾಮಧೇನು. ಇದು ಗೋಸಂತತಿಯ ಆದಿ ರೂಪ. ಸಮುದ್ರಮಥನ ಕಾಲದಲ್ಲಿ ಮಾನವ ಜಾತಿಗೆ ದೊರೆತ ಅಮೂಲ್ಯ 14 ರತ್ನಗಳಲ್ಲಿ ಒಂದು ಸುರಭಿ. ಗೋವಿನ ದಿವ್ಯತೆ,ಪವಿತ್ರತೆ ಮತ್ತು ಮಹಿಮೆಗಳ ಬಗೆಗೆ ವೇದ ಪುರಾಣ ಮತ್ತು ಇತಿಹಾಸಗಳಲ್ಲಿ ವಿಫುಲ ವರ್ಣನೆ, ದೃಷ್ಟಾಂತ ಕಥೆಗಳಿವೆ. ವೈದಿಕ ಮಹರ್ಷಿಗಳು,ಸಂತ ಮಹಾತ್ಮರು, ಗೋವಿನ ಕುರಿತು ಆಳವಾದ ಪರಿಶೀಲನೆ, ಅಧ್ಯಯನ,ಅಂತರಂಗದ ಧ್ಯಾನದಿಂದ ಗೋವಿನ ವಿರಾಟ್ ದರ್ಶನ ಪಡೆದು ಧನ್ಯರಾಗಿರುತ್ತಾರೆ.ಸಕಲ ಚರಾಚರ ಜೀವಿಗಳ ಅಸ್ತಿತ್ವಕ್ಕೆ ಗೋವುಗಳೇ ಕಾರಣ. ಅನಂತ ವಿಶ್ವ ಜೀವನವು ಗೋವುಗಳನ್ನು ಆಧರಿಸಿದೆ ಎಂದು ಶಾಸ್ತ್ರ ಗ್ರಂಥಗಳು ಹೇಳಿವೆ.ಅದು ಇಂದಿಗೂ ಕೂಡ ಸತ್ಯ.  ಗೋವಿನಲ್ಲಿ 33 ಕೋಟಿ ದೇವತೆಗಳು ಆವಾಸವಾಗಿದ್ದಾರಂತೆ. ಮನುಷ್ಯನ ಸಕಲ ಇಚ್ಛೆಗಳನ್ನು ಪೂರ್ಣಗೊಳಿಸುವ ಗೋವು ಪೃಥ್ವಿ,ಸರಸ್ವತಿ ಈ ಮೂರು ಸಮಾನಾರ್ಥಕ ಪದಗಳು. ವಿದ್ಯೆ,ಗೋವು,ಭೂಮಿ ಈ ಮೂರನ್ನು ದಾನ ಮಾಡಬೇಕು. ಅವುಗಳ ಫಲವು ಏಕಪ್ರಕಾರವಾಗಿ ಇರುವುದು.  ಒಬ್ಬ ವ್ಯಕ್ತಿ ಮೃತನಾದಾಗ ಉತ್ತರಕ್ರಿಯೆಯ ಸಂದರ್ಭ ಸಪಿಂಡೀಕರಣದಲ್ಲಿ ಪ್ರತ್ಯಕ್ಷ ಗೋದಾನ ಮಾಡುವ ಮೂಲಕ ವೈತರಣಿ ನದಿ ದಾಟಿ ಸ್ವರ್ಗ ಸೇರಲು ಅವಕಾಶವಿದೆ. ಗಾಯತ್ರಿ ಮಂತ್ರ ಫಲಿಸಲು ಗೋಪೂಜೆ- ಗೋರಕ್ಷಣೆ ಅಗತ್ಯ. ಒಂದು ಕಾಲದಲ್ಲಿ ವಸ್ತು ವಿನಿಮಯಕ್ಕೆ, ಸಂಭಾವನೆಗೆ,ದಾನ ರೂಪದಲ್...

ದೇಸಿತಳಿಯ ಸಾಕಲು ಕಷ್ಟಗುವ ಹಾಗೂ ಬೀಡಾಡಿಹೋರಿಗಳ ರಕ್ಷಣೆಗೆ ಹೋರಿಶಾಲೆ ತೆರೆದ ರವಿಕೃಷ್ಣಪ್ರಸಾದ್.

Image
ಕುಕ್ಕೆ ಸುಬ್ರಹ್ಮಣ್ಯ :ಜ;23, ಪುತ್ತೂರು,ಸುಳ್ಯ,ಕಡಬ ಈ ಭಾಗದ ಕೃಷಿಕರು ಗಮನಿಸಿ.  ಮನೆಯಲ್ಲಿ ಸಾಕಲು ಕಷ್ಟವಾಗುವ ದೇಸಿ ತಳಿಯ ಹೋರಿಗಳನ್ನು ಸಾಕಲು ರವಿಕೃಷ್ಣಪ್ರಸಾದ್ ಎಂಬವರು ಪುತ್ತೂರು ತಾಲೂಕು ,ಬಡಗನ್ನೂರು, ಮೈಂದನಡ್ಕ,ಎಂಬಲ್ಲಿ 12 ಎಕ್ರೆ ತಮ್ಮ ಸ್ವಂತ ಭೂಮಿಯಲ್ಲಿ ಹೋರಿಶಾಲೆ ತೆರೆದಿದ್ದಾರೆ.  ಬೀಡಾಡಿ ಹೋರಿಗಳನ್ನು ಹಾಗೂ ಕೃಷಿಕರು ತಮ್ಮ ಮನೆಯಲ್ಲಿ ಸಾಕಲು ಕಷ್ಟವಾಗುವಂತ ದೇಶಿ ತಳಿಯ ಹೋರಿಗಳನ್ನು ಬಡಗನ್ನೂರು ಹೋರಿ ಶಾಲೆಗೆ ತಂದುಬಿಟ್ಟರೆ. ಹೋರಿಗಳನ್ನು ಸಾಕುವ ವ್ಯವಸ್ಥೆಯನ್ನು ಕೃಷ್ಣಪ್ರಸಾದ್ ಅವರು ಮಾಡಿದ್ದಾರೆ.  ತಮ್ಮ 12 ಎಕರೆ ಭೂಮಿಯಲ್ಲಿ ಈ ಹೋರಿಗಳನ್ನು ಸ್ವಾತಂತ್ರ್ಯವಾಗಿ ಬಿಡಲಾಗುತ್ತದೆ.  ಹೋರಿಗಳಿಗೆ ಬೇಕಾದಷ್ಟು ಹುಲ್ಲು, ನೀರು ಎಲ್ಲ ಈ ಕೃಷಿ ಭೂಮಿಯಲ್ಲಿ ಲಭ್ಯವಿದೆ. ಹೋರಿ ಶಾಲೆಗೆ ಹೋರಿಗಳನ್ನು ತಂದು ಬಿಡಲು ಅದರ ದಾಖಲೆ ಪತ್ರಗಳು ಹಾಗೂ ಪಶು ವೈದ್ಯರು ನೀಡುವ ದಾಖಲೆ ಪತ್ರಗಳನ್ನು ನೀಡಬೇಕು.  ಮಾಧ್ಯಮದ ಮೂಲಕ ರವಿಕೃಷ್ಣಪ್ರಸಾದ್ ಅವರನ್ನು ಮಾತನಾಡಿಸಿದಾಗ ನಾನು ನನ್ನ ಸ್ವಂತ 12 ಎಕ್ರೆ  ಜಾಗದಲ್ಲಿ ಹೋರಿಗಳನ್ನು ಮಾತ್ರ ಪಡೆದು ಅದರ ರಕ್ಷಣೆ ಮಾಡುವ ಒಂದು ಕೆಲಸಕ್ಕೆ ಕೈ ಹಾಕಿದ್ದೇನೆ.  ಗೋವುಗಳು ಕಟುಕರ ಪಾಲಾಗುವುದನ್ನ ತಡೆಯುವ ದೃಷ್ಟಿಯಿಂದ ಈ ಒಂದು ಕಾರ್ಯವನ್ನ ಮಾಡುತ್ತಿದ್ದೇನೆ, ದೆಸಿತಳಿಯ ಹೋರಿಗಳ ರಕ್ಷಣೆ ಆಗಬೇಕು ನನ್ನ ಬಳಿ 12 ಎಕ್ರೆ ಭೂಮಿ ಇದೆ ಎಷ್ಟು ...

ಏನಕ್ಕಲ್ ರೈತ ಯುವಕ ಮಂಡಲ ಸಭಾಭವನಕ್ಕೆ ಪೆಡಸ್ಟಲ್ ಫ್ಯಾನ್ ಕೊಡುಗೆ.

Image
ಸುಬ್ರಹ್ಮಣ್ಯ ; ಜ.22: ಎನೇಕಲ್ ರೈತ ಯುವಕ ಮಂಡಲದ ಸಭಾಭವನಕ್ಕೆ ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಫೆಡಸ್ಟಲ್ ಫ್ಯಾನ್ ಅನ್ನು ರವಿವಾರ ನಡೆದ ಸಮಾರಂಭದಲ್ಲಿ ಕೊಡುಗೆಯಾಗಿ ನೀಡಲಾಯಿತು. ಏನಕ್ಕಲ್ಲ ರೈತ ಯುವಕ ಮಂಡಲದ ಕಟ್ಟಡ ಸಮಿ ರಚನಾ ಸಮಿತಿ ಅಧ್ಯಕ್ಷ ರಾಮಕೃಷ್ಣ ಮಲ್ಲಾರ ಅವರು ಸುಬ್ರಮಣ್ಯ ರೋಟರಿ ಕ್ಲಬ್ ಪ್ರಯೋಜಕರಾದ ಜೊನಲ್ ಲೆಫ್ಟಿನೆಂಟ್ ವಿಶ್ವನಾಥ ತೋಟ ಹಾಗೂ ಸದಸ್ಯ ದಿನೇಶ್ ಎಣ್ಣೆಮಜಲ್ ಅವರಿಂದ ಕೊಡುಗೆಯಾಗಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ ನಾಯರ್ ಪೂರ್ವ ಅಧ್ಯಕ್ಷರುಗಳಾದ ಶಿವರಾಮ ಏನೇಕಲ್, ಮೈಲಪ್ಪ ಸಂಕೇಶ, ಇನ್ನರ್ವೇಲ್ ಕಾರ್ಯದರ್ಶಿ ಚಂದ್ರ ಹೊನ್ನಪ್ಪ, ಇನ್ನರ್ವೆಲ್ ಪೂರ್ವ ಅಧ್ಯಕ್ಷ ಲೀಲಾ ಕುಮಾರಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಏನೇಕಲ್ಲು ಕೇಂದ್ರದ ಅಧ್ಯಕ್ಷ ಲಕ್ಷ್ಮಣಗೌಡ ,ಮುಖ್ಯ ಅತಿಥಿ ಸುಬ್ರಹ್ಮಣ್ಯ ಪ್ರಾಪ್ತಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ತ್ರಿಮೂರ್ತಿ, ನೇತ್ರ ಚಿಕಿತ್ಸಾ ಕೇಂದ್ರದ ವೈದ್ಯಾಧಿಕಾರಿಗಳು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಸುಬ್ರಹ್ಮಣ್ಯ ಐನೆಕಿದು ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷರಾಗಿ ಎಚ್.ಎಲ್ ವೆಂಕಟೇಶ್, ಉಪಾಧ್ಯಕ್ಷರಾಗಿ ದುಗ್ಗಪ್ಪ ನಾಯ್ಕ ಆಯ್ಕೆ*

Image
ಸುಬ್ರಹ್ಮಣ್ಯ ಐನೆಕಿದು  ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಮುಂದಿನ  ಅಧ್ಯಕ್ಷರಾಗಿ ಎಚ್ ಎಲ್ ವೆಂಕಟೇಶ್ ಆಯ್ಕೆಯಾಗಿದ್ದಾರೆ.    ಚುನಾವಣಾ ಅಧಿಕಾರಿಯಾಗಿ ಶೋಭಾ ಅವರು ಕಾರ್ಯ ನಿರ್ವಹಿಸಿದರು. ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆಯ ಮೈತ್ರಿ 7  ಪಡೆದು ಆಡಳಿತ ಚುಕ್ಕಾಣಿ ಹಿಡಿದಿತ್ತು. ಕಾಂಗ್ರೆಸ್ 5 ಸ್ಥಾನ ಗೆದ್ದಿತ್ತು.  ಎಚ್ .ಎಲ್ ವೆಂಕಟೇಶ್ ಅವರನ್ನು ಜಯಪ್ರಕಾಶ್ ಕೂಜುಗೋಡು ಸೂಚಿಸಿದರು, ಭಾರತಿ ದಿನೇಶ್ ಅನುಮೋದಿಸಿದರು. ಉಪಾಧ್ಯಕ್ಷ ದುಗ್ಗಪ್ಪ ನಾಯ್ಕ ಅವರನ್ನು ಕಿರಣ್ ಪೈಲಾಜೆ ಸೂಚಿಸಿದರು, ಗಿರೀಶ್ ಆಚಾರ್ಯ ಅನುಮೋದಿಸಿದರು. ಅಧ್ಯಕ್ಷ ಸ್ಥಾನಕ್ಕೆ ಮೋಹನ್ ದಾಸ್ ರೈ, ಉಪಾಧ್ಯಕ್ಷ ಸ್ಥಾನಕ್ಕೆ ಮಾದವ ದೇವರಗದ್ದೆ ನಾಮಪತ್ರ ಸಲ್ಲಿಸಿ  ಹಿಂತೆಗೆತ ಮಾಡಿದರು.  ನಿರ್ದೇಶಕರುಗಳಾದ ಯಶೋದ ಕೃಷ್ಣ, ರವೀಂದ್ರ ಕುಮಾರ್ ರುದ್ರಪಾದ, ಸೋಮಶೇಖರ್ ಕಟ್ಟೆಮನೆ. ಈ ಸಂದರ್ಭ ಡಿಸಿಸಿ ಬ್ಯಾಂಕ್ ಪ್ರತಿನಿಧಿ ಮನೋಜ್, ಸೊಸೈಟಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪ್ರಕಾಶ್ ಕೆ.ಎಸ್, ಗುಮಾಸ್ತ ಜಯಪ್ರಕಾಶ್ ಕುಲ್ಕುಂದ ಮತ್ತಿತರರು ಉಪಸ್ಥಿತರಿದ್ದರು.

ಗುತ್ತಿಗಾರು ಸರಣಿ ಕಳ್ಳತನ ಆರೋಪಿ ಬಂಧನ, ಸುಬ್ರಹ್ಮಣ್ಯ ಪೊಲೀಸ್ ರಿಂದ ಕಾರ್ಯಾಚರಣೆ.

Image
ಕುಕ್ಕೆ ಸುಬ್ರಹ್ಮಣ್ಯ ;ಜ,21,ಸುಬ್ರಮಣ್ಯ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣ ಸಂಖ್ಯೆ04/2025 ಕಳ್ಳತನ ಪ್ರಕರಣಕ್ಕೆ ಸಂಬಂಧ ಪಟ್ಟ ಆರೋಪಿಯನ್ನು ಪತ್ತೆಮಾಡಿ ಬಂಧಿಸುವಲ್ಲಿ ಯಶಸ್ವಿಯಾದ ಸುಬ್ರಹ್ಮಣ್ಯ ಪೊಲೀಸ್ ರ ತಂಡ.  ಗುತ್ತಿಗಾರು ಹೋಟೆಲ್,ಮುತ್ತಪ್ಪ ದೇವಸ್ಥಾನ, ತರಕಾರಿ ಅಂಗಡಿ ಬೀಗ ಮುರಿದು ಕಳ್ಳತನ ಮಾಡಿ ತಲೆಮೆರೆಸಿಕೊಂಡಿದ್ದ ಆರೋಪಿ ಕೊಲ್ಲಮೊಗ್ರು ನಿವಾಸಿ ಕರುಣಾಕರ ಎಂಬತನನ್ನು ಬಂಧಿಸಿ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕ್ಯಾಮೆರ &ಇತರ ಸಾಕ್ಷಾಧರದಿಂದ ಪತ್ತೆ ಹಚ್ಚಿದ್ದು ಈ ಕಳ್ಳತನ ಪ್ರಕರಣ ಭೇದಿಸಲು ಸುಳ್ಯ ಸಿಪಿಐ ತಿಮ್ಮಪ್ಪ ನಾಯ್ಕ್ ರವರ ಮಾರ್ಗದರ್ಶನದಲ್ಲಿ,ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ ಕೆ , ಎಸ್ ಐ -ಮಹೇಶ್ ಪಿ ಸುಬ್ರಹ್ಮಣ್ಯ ಬೀಟ್ ಸಿಬ್ಬಂದಿ ಆಕಾಶ್, ಸತೀಶ್ ಹಾಗೂ ಮಹೇಶ್, ನವೀನ್ ರವರು ಸೊತ್ತು ಪತ್ತೇಯಲ್ಲಿ ಯಶಸ್ವಿ ಆಗಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನಿಂದ ಸಾಧಕರಿಗೆ ಸನ್ಮಾನ.

Image
ಸುಬ್ರಹ್ಮಣ್ಯ ಜ.21: ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ವತಿಯಿಂದ ಲಯನ್ಸ್ ಜಿಲ್ಲೆ317 ರ ಜಿಲ್ಲಾ ಗವರ್ನರ್ ಅವರ ಅಧಿಕೃತ ಭೇಟಿಯ ಸಂದರ್ಭದಲ್ಲಿ ಗ್ರಾಮೀಣ ಪರಿಸರದಲ್ಲಿ ಸಾಧನೆಯನ್ನು ಮಾಡಿದ ಸಾಧಕರನ್ನು ಸೋಮವಾರ ಏನಕ್ಕಲ್ಲ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಸನ್ಮಾನಿಸಲಾಯಿತು. ಯೋಗದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಧನೆಯನ್ನು ಮಾಡಿದ ಕುಮಾರಸ್ವಾಮಿ ವಿದ್ಯಾಲಯದ ಎಂಟನೇ ತರಗತಿಯ ವಿದ್ಯಾರ್ಥಿ ಗೌರಿತ ರಾಜೇಶ್ವರಿ, ಗ್ರಾಮೀಣ ವೈದ್ಯರಾಗಿ ಹಾವು ಕಡಿತ ಹಾಗೂ ಇನ್ನಿತರ ಗಾಯಗಳಿಗೆ ಮತ್ತು ಅನಾರೋಗ್ಯಗಳಿಗೆ ಔಷಧಿಯನ್ನು ನೀಡುತ್ತಾ ಬಂದಿದ್ದ ನಾಗೇಶ್ ಕೆಂಚಮ್ಮ ನೆಕ್ರಾಜ ,ಸುಬ್ರಹ್ಮಣ್ಯದಲ್ಲಿ ರಥ ಕಟ್ಟುವ ಕಾಯಕದಲ್ಲಿ ಕಳೆದ 35 ವರ್ಷಗಳಿಂದ ನಿರಂತರವಾಗಿ ದುಡಿಯುತ್ತಿರುವ ತನಿಯಪ್ಪ ಕೋಡಿಕಜ, ಹಾಗೂ ರಥದ ಸಾಮಗ್ರಿಗಳು ಹಾಗೂ ಇನ್ನಿತರ ಸಾಮಗ್ರಿಗಳನ್ನು ಸ್ವತಃ ನೀಡುತ್ತಾ ಬಂದಿರುವ ವಿಠಲ ಮೂಲ್ಯ ಅವರುಗಳನ್ನ ಲಯನ್ಸ್ ಜಿಲ್ಲೆ 317ರ ಜಿಲ್ಲಾ ಗವರ್ನರ್ ಭಾರತಿ ಬಿ. ಎಂ. ಅವರು ಶಾಲು ಹೊದಿಸಿ ಸ್ಮರಣಕೆ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ರಾಜೇಶ ಎನ್.ಎಸ್ .ಲಯನ್ಸ್ ಪ್ರಾಂತೀಯ ಅಧ್ಯಕ್ಷ ಗಂಗಾಧರ ರೈ ,ವಲಯ ಅಧ್ಯಕ್ಷ ಪ್ರೊ ರಂಗಯ್ಯ ಶೆಟ್ಟಿಗಾರ್, ನಿಕಟ ಪೂರ್ವ ಅಧ್ಯಕ್ಷ ರಾಮಚಂದ್ರ ಪಳಂಗಾಯ, ಕಾರ್ಯದರ್ಶಿ ಕೃಷ್ಣ ಕುಮಾರ ಬಾಳುಗೋಡು, ಖಜಾಂಜಿ ಮೋಹನ್ದಾಸ್ ರೈ ವೇದಿಕೆಯಲ್ಲಿ ಉಪಸ್ಥಿತರ...

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ರಾಜ್ಯ ವಿಧಾನಪರಿಷತ್ ವಿರೋಧ ಪಕ್ಷ ನಾಯಕರ ಭೇಟಿ.

Image
ಸುಬ್ರಹ್ಮಣ್ಯ ಜ.20: ಕರ್ನಾಟಕ ರಾಜ್ಯ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪತ್ನಿ ಹಾಗೂ ಮಗಳೊಂದಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಇಂದು ಸೋಮವಾರ ಭೇಟಿ ನೀಡಿದರು. ಶ್ರೀ ದೇವಳದಲ್ಲಿ ದೇವರ ದರ್ಶನ ಮಾಡಿದ ನಂತರ ಪುರೋಹಿತ ರಮೇಶ್ ಅಸ್ರಣ್ಣರವರು ದೇವರ ಪ್ರಸಾದ ನೀಡಿ ಶಾಲು ಹಾಕಿ ಗೌರವಿಸಿದರು. ಕ್ಷೇತ್ರದ ದೈವ ಹೊಸಳ್ಳಿಗಮ್ಮನ ದರ್ಶನ ಮಾಡಿದ ನಂತರ ದೇವಳದ ಆಡಳಿತ ಕಚೇರಿಯಲ್ಲಿ ಕಾರ್ಯ ನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗೊಂಡಿ ಅವರು ನಾರಾಯಣಸ್ವಾಮಿಯವರನ್ನ ಶಾಲು ಹೊದಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್ ಹಾಗೂ ಶಿಷ್ಟಾಚಾರ ಅಧಿಕಾರಿ ಜಯರಾಮರಾವ್ ಉಪಸ್ಥಿತರಿದ್ದರು.

ರಾಷ್ಟ್ರೀಯ ರೈಫಲ್ಸ್ ಸ್ಪರ್ಧೆಯಲ್ಲಿ ಸುಬ್ರಹ್ಮಣ್ಯದ ಹಿಮಾಂಷು ಎಂ.ಎಸ್. ಚಾಂಪಿಯನ್.

Image
ಸುಬ್ರಹ್ಮಣ್ಯ ಜ.20: ಇತ್ತೀಚೆಗೆ ಮಧ್ಯಪ್ರದೇಶದ ಭೂಪಾಲ್ ನಲ್ಲಿ ನಡೆದ 67ನೇ ರಾಷ್ಟ್ರೀಯ ರೈಫಲ್ಸ್ ವೈಯಕ್ತಿಕ ಶೂಟಿಂಗ್ ಸ್ಪರ್ಧೆಯಲ್ಲಿ ಸುಬ್ರಹ್ಮಣ್ಯ ಸಮೀಪದ ವೆಂಕಟಪುರದ ಹಿಮಾಂಷು ಎಂ.ಎಸ್. ಹುಡುಗರ ವಿಭಾಗದ ವೈಯಕ್ತಿಕ ಚಾಂಪಿಯನ್ಶಿಪ್ ನೊಂದಿಗೆ 22ನೇ ಸ್ಥಾನದಲ್ಲಿ ಶ್ರೇಷ್ಠ ಸಾಧನೆಯನ್ನು ಮಾಡಿರುತ್ತಾರೆ. ಇವರಿಗೆ ಪ್ರಥಮೇಶ್ ಅವರು ಕೋಚ್ ಆಗಿ ತರಬೇತಿ ನೀಡಿರುವರು. ಇದಲ್ಲದೆ ಇವರು ಕರ್ನಾಟಕ ರಾಜ್ಯ ರೈಫಲ್ಸ್ ಅಸೋಸಿಯೇಷನ್ ವತಿಯಿಂದ ಕೇರಳದ ತಿರುವನಂತಪುರ ಹಾಗೂ ಗೋವಾದಲ್ಲಿ ನಡೆದ ಏರ್ ರೈಫಲ್ಸ್ ಸ್ಪರ್ಧೆಯಲ್ಲಿ ಕೂಡ ಭಾಗವಹಿಸಿರುತ್ತಾರೆ. ಬೆಂಗಳೂರಿನ ಚಿಕ್ಕಬಾಣಾವರ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ 8ನೇ ತರಗತಿ ಓದುತ್ತಿರುವ ಇವರು ಬೆಂಗಳೂರಿನ ಕಂಪನಿಯಲ್ಲಿ ಪ್ರೊಡಕ್ಷನ್ ಮ್ಯಾನೇಜರ್ ಆಗಿರುವ ಕುಳಕುಂದ ಸಮೀಪದ ವೆಂಕಟಪುರದ ಶಿವಪ್ರಸಾದ್ -ವಿಜಯಲಕ್ಷ್ಮಿ ದಂಪತಿಯ ಪುತ್ರ ಆಗಿರುತ್ತಾರೆ.

ಕಾಂಚನೋತ್ಸವ-2025.ಕಾಂಚನೋತ್ಸವ ಕಾರ್ಯಕ್ರಮಕ್ಕೆ ಎಲ್ಲರಿಗೂ ಹಾರ್ದಿಕ ಸ್ವಾಗತ.

Image
ಕಾಂಚನ ; ಜ.25 ಹಾಗೂ 26 ರಂದು ಕರ್ನಾಟಕ ಶಾಸ್ತ್ರೀಯ ಸಂಗಿತಕಾರ್ಯಕ್ರಮದೊಂದಿಗೆ ಕಾಂಚನೋತ್ಸವ ನಡೆಯಲಿದೆ. ಕಾಂಚನ ಶ್ರೀ ಲಕ್ಷ್ಮೀನಾರಾಯಣ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ (ರಿ.)  71 ನೇ ವಾರ್ಷಿಕ ಸಂಗೀತ ಸಂಭ್ರಮವನ್ನು ಆಯೋಜನೆ ಮಾಡಲಾಗಿದೆ.  ಜ.25 ಮೊದಲನೇ ದಿನದಂದು  09:30 ಗಣಹೋಮ,  ಬೆಳಗ್ಗೆ 10:00: ಅಭಿಷೇಕ್ ಎನ್ ಎಸ್ ಮತ್ತು ದಿ ಕರ್ನಾಟಿಕ್ ತಂಡದಿಂದ ನಾಮ ಸಂಕೀರ್ತನೆ,  10:30, ಅತಿಥಿ ಕಲಾವಿದರು ಮತ್ತು ವಿದ್ಯಾರ್ಥಿಗಳಿಂದ ಸಂಗೀತ ಸೇವೆ.  ಸಂಜೆ 6ಗಂಟೆಗೆ ಕರ್ನಾಟಕ ಶಾಸ್ತ್ರೀಯ ಗಾಯನ ಕಛೇರಿ, ಜ: 26 ರಂದು ಬೆಳಗ್ಗೆ 08:30 ,ಊಂಚಾ ವೃತ್ತಿ ಕಾರ್ಯಕ್ರಮ.  "ಉತ್ಸವ ಸಂಪ್ರದಾಯ ಕೃತಿಗಳ" ನಿರೂಪಣೆಯೊಂದಿಗೆ ಸಂಗೀತ ನಡಿಗೆ ಮತ್ತು ಸಂತ ತ್ಯಾಗರಾಜರ "ದಿವ್ಯ ನಾಮ ಸಂಕೀತನೆಗಳು" 10:00: ಗೋಷ್ಠಿ ಗಾಯನ ಸಂತ ಪುರಂದರದಾಸರ "ಪಿಳ್ಳಾರಿ ಗೀತೆಗಳು" ಮತ್ತು  ಸಂತ ತ್ಯಾಗರಾಜರ "ಪಂಚರತ್ನ ಕೃತಿಗಳು". 11:30 ,ಸಂಗೀತ ಸೇವೆ ಸಂಜೆ 6 ರಿಂದ ಕರ್ನಾಟಕ ಶಾಸ್ತ್ರೀಯ ಗಾಯನ ಕಛೇರಿ ನಡೆಯಲಿದೆ.  ಕಾಂಚನದಲ್ಲಿ ಕಾಂಚನೋತ್ಸವ ಕಾರ್ಯಕ್ರಮಕ್ಕೆ ಎಲ್ಲರಿಗೂ ಹಾರ್ದಿಕ ಸ್ವಾಗತ. ನೀವೂ ಬನ್ನಿ, ಕುಟುಂಬ ಹಾಗೂ ಸ್ನೇಹಿತರ ಸಮೇತ ಬಂದು ನಮ್ಮ ಆದರಾತಿಥ್ಯವನ್ನು ಸ್ವೀಕರಿಸಿ ಎಂದು ಆಯೋಜಕರು ಮಾದ್ಯಮ ಮೂಲಕ ಕೇಳಿಕೊಂಡಿದ್ದಾರೆ.

ಏನೇಕಲ್ ನಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಉದ್ಘಾಟನೆ.

Image
ಸುಬ್ರಹ್ಮಣ್ಯ ಜ.19: ನಮಗೆ ನಮ್ಮ ಜೀವನದಲ್ಲಿ ಎರಡು ಕಣ್ಣುಗಳು ಎಷ್ಟು ಮುಖ್ಯವೋ ಅಷ್ಟೇ ಅದನ್ನ ಕಾಪಾಡಿಕೊಂಡು ಬರುವುದು ಕೂಡ ಮುಖ್ಯ .ರೋಟರಿ ಅಂತಹ ಅಂತರಾಷ್ಟ್ರೀಯ ಸಂಸ್ಥೆ ಸಮಾಜದಲ್ಲಿ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಮಾಡುವುದರೊಂದಿಗೆ ಆರೋಗ್ಯದ ಕಡೆ ಹೆಚ್ಚು ಗಮನವಿಟ್ಟು ಆರೋಗ್ಯ ತಪಾಸಣೆ ಶಿಬಿರ, ಕಣ್ಣಿನ ತಪಾಸಣಾ ಶಿಬಿರ ನಡೆಸುತ್ತಾ ಬಂದಿರುವುದು ಶ್ಲಾಘನೀಯ. ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕಾಗಿ ಸುಬ್ರಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾl ತ್ರಿಮೂರ್ತಿ ಹೇಳಿದರು. ಅವರು ರವಿವಾರ ಏನಕ್ಕಲ್ಲಿನಲ್ಲಿ ರೋಟರಿ ಕ್ಲಬ್ ಸುಬ್ರಹ್ಮಣ್ಯ ,ಗ್ರಾಮ ಪಂಚಾಯತ್ ಸುಬ್ರಮಣ್ಯ, ಪ್ರಾಥಮಿಕ ಆರೋಗ್ಯ ಕೇಂದ್ರ ಸುಬ್ರಹ್ಮಣ್ಯ, ಪುತ್ತೂರು ರೋಟರಿ ಕಣ್ಣಿನ ಆಸ್ಪತ್ರೆ ,ಪ್ರಸಾದ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ ಮಂಗಳೂರು ,ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (ಅಂದತ್ವ ನಿವಾರಣ ವಿಭಾಗ) ಮಂಗಳೂರು, ಡಾ. ಬಿ ದಯಾನಂದ ಪೈ ಹಾಗೂ ಸತೀಶ ಪೈ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಸೆಂಚುರಿ ಗ್ರೂಪ್ ಬೆಂಗಳೂರು ,ರೈತ ಯುವಕ ಮಂಡಲ ಎನೇಕಲ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಏನಿಕ್ಕಲ್, ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಸುಬ್ರಹ್ಮಣ್ಯ ಘಟಕ ಇವುಗಳ ಸಂಯುಕ್ತ ಆಶಯದಲ್ಲಿ ಏನೇ ಕಲ್ ರೈತ ಯುವಕ ಮಂಡಲದ ಸಭಾಂಗಣದಲ್ಲಿ ಉಚಿತ ...

ಅಧಿಕಾರಿಗಳೇ ಸ್ವಲ್ಪ ಇತ್ತ ಗಮನಿಸಿ ನಮ್ಮ ಸುತ್ತಮುತ್ತ ಭಿಕ್ಷುಕರಿದ್ದಾರೆ.ಭಿಕ್ಷಾಟನೆ ಮಾಡುವುದು ಕಾನೂನು ರೀತಿ ಅಪರಾಧ ಅಲ್ಲವೇ..?

Image
ಕುಕ್ಕೆ ಸುಬ್ರಹ್ಮಣ್ಯ; ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಎಲ್ಲರೂ ಭಕ್ತರೇ, ಶ್ರೀ ದೇವರ ಮುಂದೆ ನಾವೆಲ್ಲ ಸಮಾನರು ನಾವೆಲ್ಲ ಒಂದೇ, ಒಂದಲ್ಲ ಒಂದು ರೀತಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರ ಅನುಗ್ರಹದಿಂದ ನಾವೆಲ್ಲರೂ ಚೆನ್ನಾಗಿದ್ದೇವೆ ಶ್ರೀ ದೇವರ ಪ್ರಸಾದವನ್ನು ಸ್ವೀಕರಿಸುತ್ತೇವೆ.  ಬಿಕ್ಷುಕರು, ಮಾನಸಿಕವಾಗಿ ತೊಂದರೆಗೊಳಗಾದವರು ನಮ್ಮ ಹಾಗೆ ಅವರು ಭಿಕ್ಷಾಟನೆ ಮಾಡಿ ಅವರ ಹೊಟ್ಟೆಪಾಡಿಗೆ ಒಂದಷ್ಟು ದುಡ್ಡು ಮಾಡುತ್ತಾರೆ, ಒಂದು ಹೊತ್ತಿನ ಊಟ ಮಾಡುತ್ತಾರೆ.  ಮಾನವೀಯತೆ ,ಮನುಷ್ಯತ್ವದ ನೆಲೆಯಲ್ಲಿ ಕುಕ್ಕೆಗೆ ಬರುವ ಭಕ್ತರು ಭಿಕ್ಷುಕರಿಗೆ ದುಡ್ಡು ನೀಡುತ್ತಾರೆ.  ಭಾರತ ದೇಶದ ಕಾನೂನಿನ ಪ್ರಕಾರ ಭಿಕ್ಷಾಟನೆ ಮಾಡುವುದು ಅಪರಾಧ. ದೆಹಲಿ ಹೈಕೋರ್ಟ್ ಮಹತ್ವದ ತೀರ್ಪಿನಲ್ಲಿ ( ಹರ್ಷ್ ಮಂದರ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಮತ್ತು ಕಾರ್ನಿಕಾ ಸಾವ್ನಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ ) 1959 ರ ಬಾಂಬೆ ಪ್ರಿವೆನ್ಶನ್ ಆಫ್ ಭಿಕ್ಷಾಟನೆ ಕಾಯಿದೆಯನ್ನು ಅಸಂವಿಧಾನಿಕ ಎಂದು ಪರಿಗಣಿಸಿದೆ , ಇದು ಆರ್ಟಿಕಲ್ 14 (ಕಾನೂನಿನ ಮುಂದೆ ಸಮಾನತೆ) ಅನ್ನು ಉಲ್ಲಂಘಿಸುತ್ತದೆ. ) ಮತ್ತು ಅನುಚ್ಛೇದ 21 (ಜೀವನದ ಹಕ್ಕು ಮತ್ತು ವೈಯಕ್ತಿಕ ಸ್ವಾತಂತ್ರ್ಯ) ಬೇರಾವುದೇ ಜೀವನೋಪಾಯವನ್ನು ಹೊಂದಿರದ ವ್ಯಕ್ತಿಗಳ ಹಕ್ಕುಗಳನ್ನು ಹುಡುಕುವುದು ಜೀವನಾಂಶಕ್ಕಾಗಿ ಭಿಕ್ಷೆ. 1959ರ ಬಾಂಬೆ ಪ್ರಿವೆನ್ಶನ್ ಆಫ್ ಭಿಕ್ಷಾಟನೆ ಕಾಯಿದ...

ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನಿಂದ ನಿರಂತರ ಸಮಾಜ ಸೇವಾ ಚಟುವಟಿಕೆಗಳು.

Image
ಸುಬ್ರಹ್ಮಣ್ಯ ಜ.18: ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಪ್ರಸಕ್ತ ಸಾಲಿನಲ್ಲಿ ಸುಬ್ರಮಣ್ಯ ದ ಆಸು ಪಾಸುಗಳಾದ ಹರಿಹರ ಕೊಲ್ಲಮಗರು ಮರ್ದಾಳ ಮುಂತಾದ ಗ್ರಾಮೀಣ ಪ್ರದೇಶಗಳಲ್ಲಿ ಸುಮಾರು ನಾಲ್ಕು ಲಕ್ಷ ರೂಪಾಯಿಗಳ ಸಮಾಜ ಸೇವಾ ಚಟುವಟಿಕೆಗಳನ್ನು ನಡೆಸಿರುತ್ತದೆ ಎಂದು ಕ್ಲಬ್ ಅಧ್ಯಕ್ಷ ರಾಜೇಶ್ ಏನ್ .ಎಸ್. ಶನಿವಾರ ಪತಿಗಗೋಷ್ಠಿಯಲ್ಲಿ ತಿಳಿಸಿರುತ್ತಾರೆ. ಮರ್ಧಾಳದ ಬೆಥನಿ ಜೀವನ್ ಜ್ಯೋತಿ ವಿಶೇಷ ಚೇತನ ಮಕ್ಕಳ ಶಾಲೆಗೆ ಮಧ್ಯಾಹ್ನದ ಭೋಜನ ಅನ್ನದಾನಕ್ಕೆ 10000/= ರೂಗಳ ಧನಸಹಾಯವನ್ನು ಕಳೆದೆರಡು ವರ್ಷಗಳಿಂದ ನೀಡುತ್ತಾ ಬಂದಿರುತ್ತದೆ .ಹಾಗೆಯೇ ದೇವರ ಗದ್ದೆಯ ಕೊರಗಜ್ಜನ ಕಟ್ಟೆಯ ಮೇಲ್ಚಾವಣಿ ರಚಿಸಲು ಒಂದು ಲಕ್ಷ ಧನಸಹಾಯ ನೀಡಿರುತ್ತಾರೆ. ಹರಿಹರದ ಕ್ರೀಡಾ ಸಂಘದವರು ಖರೀದಿಸುವ ಆಂಬುಲೆನ್ಸ್ ಗೆ 50,000 /=ಧನಸಹಾಯ ನೀಡಿರುವರು ಕಲ್ಮಕೂರು ಗ್ರಾಮದ ಕ್ಯಾನ್ಸರ್ ಸಮಸ್ಯೆಯಿಂದ ಬಳಲುತ್ತಿರುವ ಶ್ರೀಮತಿ ಪದ್ಮಾವತಿ ಅವರಿಗೆ ರೋ 10,000/= ಧನ ಸಹಾಯ ನೀಡಿರುವರ ಸುಬ್ರಹ್ಮಣ್ಯದ ಮೃತ ರಿಕ್ಷಾ ಚಾಲಕ ಪುಟ್ಟಣ್ಣನವರಿಗೆ ಗ್ರಹ ನಿರ್ಮಾಣಕ್ಕೆ 10000/= ಕಲ್ಲಾಜೆ ಅಂಗನವಾಡಿ ನಲಿಕಲಿಗೆ 5000 /=ಕಲ್ಲಮೊಗರು ಕೆವಿಜಿ ಸಂಸ್ಥೆಯಲ್ಲಿ ಓದುತ್ತಿರುವ ಬಡ 3 ಮಕ್ಕಳಿಗೆ 3000 /=ದಂತೆ ಏಳು ವಿದ್ಯಾರ್ಥಿಗಳಿಗೆ ರೂ 21000/= ಜಿಲ್ಲಾ ಕಾರ್ಯಕ್ರಮಗಳಿಗೆ 63000/= ಲೈನ್ಸ್ ಜಿಲ್ಲೆಗೆ 5,000 /=ಜಿಲ್ಲಾ ಪ್ರಾಜೆಕ್ಟಿಗೆ 5,000/= ನೀಡುತ್ತಾ ಬರಲಾಗಿದೆ ಎಂದ...

ಮಾರುತಿ ವೆಘನರ್ ಹಾಗೂ ಸುಝುಕಿ ಅಕ್ಸಸ್ ಮೊಟರ್ ಸೈಕಲ್ ಮದ್ಯೆ ರಸ್ತೆ ಅಪಘಾತ.ಶ್ರೀಧರ್ ಪುತ್ರನ್ ಗಂಭೀರ...!

Image
ಕುಕ್ಕೆ ಸುಬ್ರಹ್ಮಣ್ಯ; ಜ.15,ಮಾರುತಿ ವೆಘನರ್ ಹಾಗೂ ಸುಝುಕಿ ಅಕ್ಸಸ್ ಮೊಟರ್ ಸೈಕಲ್.ಮದ್ಯೆ ಕುಲ್ಕುಂದ ಎಂಬಲ್ಲಿ ರಸ್ತೆ ಅಪಘಾತ ಸಂಭವಿಸಿದೆ. ಸುಝುಕಿ ಅಕ್ಸಸ್ ಮೊಟರ್ ಸೈಕಲ್ ಸವಾರ ಎಸ್, ಎಸ್, ಪಿ,ಯು ಕಾಲೇಜು ಕುಕ್ಕೆ  ಸುಬ್ರಮಣ್ಯ ಎಂಬಲ್ಲಿ ಗಣಕಶಾಸ್ತ್ರ ಉಪನ್ಯಾಸಕರಾದ ಸುಮಾರು 45 ವರ್ಷ ಪ್ರಾಯದ ಶ್ರೀಧರ್ ಪುತ್ರನ್ ಎಂಬವರು ಗಂಭೀರ ಗಾಯಗೊಂಡಿದ್ದಾರೆ. ಅವರನ್ನು ಪುತ್ತೂರು ಸಿಟಿ ಆಸ್ಪತ್ರೆಗೆ ಆಂಬುಲೆನ್ಸ್ ವಾಹನದಲ್ಲಿ ಕರೆದುಕೊಂಡು ಹೋಗಿದ್ದಾರೆ. ಮೊಟರ್ ಸೈಕಲ್ ಸಹಸವರ ಭವ್ಯ ಕುಲ್ಕುಂದ ಎಂಬವರಿಗೆ ತರಚು ಗಾಯಗಳಾಗಿದ್ದು ಅವರನ್ನು ಸುಬ್ರಮಣ್ಯ ಸದಾನಂದ ಆಸ್ಪತ್ರೆಗೆ ಸೇರಿಸಲಾಗಿದೆ. ಕಾರಿನ ಪ್ರಯಾಣಿಕರು ಭದ್ರಾವತಿ ಮೂಲದವರಾಗಿದ್ದು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಯಾತ್ರೆಗೆ ಬರುತ್ತಿರುವ ಸಂದರ್ಭದಲ್ಲಿ ಕುಲ್ಕುಂದ ಎಂಬಲ್ಲಿ ಈ ದುರ್ಘಟನೆ ಸಂಭವಿಸಿದೆ.

ಕುಕ್ಕೆ:ಮಾ.24ರಂದು ಮಾಂಗಲ್ಯ ಭಾಗ್ಯ ಸರಳ ಸಾಮೂಹಿಕ ವಿವಾಹ:ಅರ್ಜಿಆಹ್ವಾನ.

Image
ಕುಕ್ಕೆ ಸುಬ್ರಹ್ಮಣ್ಯ : ಕರ್ನಾಟಕ ಸರಕಾರದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿರುವ ನಾಗಾರಾಧನೆಯ ಪುಣ್ಯ ತಾಣ ಮತ್ತು ರಾಜ್ಯದ ನಂಬರ್ ವನ್ ಆದಾಯದ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮಾ.24ರಂದು ಜನಸಾಮಾನ್ಯರ ಅನುಕೂಲಕ್ಕಾಗಿ ಸರಳ ಸಾಮೂಹಿಕ ವಿವಾಹ ಮಾಂಗಲ್ಯ ಭಾಗ್ಯ ನಡೆಯಲಿದೆ. ಸಾಮೂಹಿಕ ವಿವಾಹವಾಗಲು ಬಯಸುವವರು ಶ್ರೀ ದೇವಳದ ಕಚೇರಿಯಿಂದ ಅರ್ಜಿ ಫಾರಂ ಪಡೆದು ಫೆ.20ರ ಒಳಗೆ ತಮ್ಮ ಅರ್ಜಿಯನ್ನು ಶ್ರೀ ದೇವಳಕ್ಕೆ ಸಲ್ಲಿಸಬಹುದು ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ. * ಫೆ.20ರ ಒಳಗೆ ನೋಂದಾಣಿ*  ಮಾ.24 ರಂದು ಬೆಳಗ್ಗೆ 11.00 ರಿಂದ 12.00ರ ವರೆಗೆ ನೆರವೇರುವ ವೃಷಭ ಲಗ್ನ ಸುಮೂಹುರ್ತದಲ್ಲಿ ವಿವಾಹ ನೆರವೇರಲಿದೆ.ಫೆ.20 ವಧು-ವರರು ನಿಗದಿ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.ಫೆ.24ರಂದು ನೋಂದಾಯಿತ ವಧು-ವರರ ವಿವರಗಳನ್ನು ದೇವಳದಲ್ಲಿ ಪ್ರಕಟಿಸಲಾಗುವುದು.ಫೆ.28 ಅಕ್ಷೇಪಣೆ ಸಲ್ಲಿಸಲು ಕೊನೆಯ ದಿನಾಂಕವಾದರೆ, ಮಾ.5ರಂದು ವಧುವರರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು. * *ಅಗತ್ಯ ದಾಖಲೆಗಳು *  ವಧು-ವರರು ತಮ್ಮ ಪೂರ್ಣ ವಿಳಾಸದೊಂದಿಗೆ ಜನನ ದಿನಾಂಕವನ್ನು ದೃಢೀಕರಿಸುವ ಶಾಲಾ ದೃಢಪತ್ರ ಪ್ರತಿ, ಪಾಸ್‌ಪೋರ್ಟ್ ಸೈಜ್‌ನ 2 ಪೋಟೋ, ಆಧಾರ್ ಕಾರ್ಡ್, ರೇಷನ್ ಕಾರ್ಡ್, ವಧು-ವರರ ಬ್ಯಾಂಕ್ ಖಾತೆ ಸಂಖ್ಯೆಯ ದಾಖಲೆ ಪ್ರತಿ, ಅವಿವಾಹಿತರು ಎಂಬುದಾಗಿ ಪಂಚಾಯತ್ ಅಭಿವೃದ್ಧಿ ಅಧಿ...

ಗೋಶಾಲೆಯಂತಾದ ಕುಕ್ಕೆ ಸುಬ್ರಮಣ್ಯ ರಥಬೀದಿ..!ರಥಬೀದಿಯಲ್ಲಿ ವಾರಿಸುದಾರರಿಲ್ಲದ ಗೋವುಗಳು..!

Image
ಕುಕ್ಕೆ ಸುಬ್ರಮಣ್ಯ; ಗೋವುಗಳನ್ನು ದೇವರೆಂದು ಹಿಂದೂ ಸಂಪ್ರದಾಯದಲ್ಲಿ ಭಕ್ತಿಯಿಂದ ಆರಾಧನೆ ಮಾಡುತ್ತೇವೆ. ನಮ್ಮ ಉದ್ದೇಶ ಗೋವುಗಳಿಗೆ ಹಿಂಸೆ ಮಾಡಬೇಕು ಅಥವಾ ಅದರ ಸ್ವತಂತ್ರ್ಯ ಕಸಿದು ಕೊಳ್ಳಬೇಕು ಎಂಬುದಲ್ಲ.  ಕುಕ್ಕೆ ಸುಬ್ರಹ್ಮಣ್ಯ ರಥ ಬೀದಿಯಲ್ಲಿ ಹಾಗೂ ಸುಬ್ರಹ್ಮಣ್ಯ ಪೇಟೆಯಲ್ಲಿ ಸಾರ್ವಜನಿಕರಿಗೆ ಕುಕ್ಕೆಗೆ ಬರುವ ಭಕ್ತರಿಗೆ, ಪುಟ್ಟ ಮಕ್ಕಳಿಗೆ ,ವೃದ್ಧರಿಗೆ ಯಾರಿಗೂ ಗೋವುಗಳಿಂದಯಾವುದೇ ರೀತಿಯಲ್ಲಿ ಹಾನಿ  ಹಾಗೂ ಯಾವುದೇ ಪ್ರಾಣಪಾಯ,ಸಂಭವಿಸಬಾರದು ಎಂಬುದು ನಮ್ಮ ಉದ್ದೇಶ.  ಇದೀಗ ರಥ ಬೀದಿ ಗೋಶಾಲೆ ಯಂತಾಗಿದೆ; ಹೌದು ರಥ ಬೀದಿ ತುಂಬೆಲ್ಲ ಯಾವುದೇ ವಾರಿಸುದಾರರು ಇಲ್ಲಾದ ಗೋವುಗಳು ಆಹಾರ ಅರಸಿ ಬರುತ್ತವೆ,  ಇದರ ಜೊತೆ ತುಂಬಾ ಬಲಶಾಲಿಯಾದ ಹೋರಿಗಳು,ಹಸು,ಕರುಗಳು ಗುಂಪಾಗಿ ಕಂಡುಬರುತ್ತದೆ. ಈ ಹೋರಿಗಳು ಗುದ್ದಾಟಶುರು ಮಾಡಿಕೊಳ್ಳುತ್ತೇವೆ. ಇನ್ನೊಂದೆಡೆ ವಂಶಾಬಿವೃದ್ಧಿಗೆ ಒಂದು ಹಸುಗಳ ಹಿಂದೆ ಸುಮಾರು ಹೋರಿಗಳು ಗುಂಪಾಗಿ ದಾಳಿ ಮಾಡುತ್ತವೆ. ಭಕ್ತರಿಗೆ ಹಾನಿ ಮಾಡುವ ಸಾಧ್ಯತೆ; ರಥಬೀದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಸೇರಿದ ಸಂದರ್ಭದಲ್ಲಿ ಬಲಶಾಲಿಯಾದ ಈ ಹೋರಿಗಳ ಗುದ್ದಾಟ ನಡೆದರೆ,ಗುಂಪಾಗಿ ದಾಳಿ ಮಾಡಿದರೆ ಪುಟ್ಟ ಮಕ್ಕಳಿಗೆ, ವೃದ್ಧರಿಗೆ, ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬಂದ ಭಕ್ತರಿಗೆ,ಪ್ರಾಣಪಾಯ ಸಂಭವಿಸುವ ಸಾಧ್ಯತೆಗಳಿದೆ.  ...

ಕುಕ್ಕೆ ಸುಬ್ರಮಣ್ಯ ಮುಖ್ಯರಸ್ತೆಯನ್ನೇ ಬಸ್ ನಿಲ್ದಾಣ ಮಾಡಿದ ಸರ್ಕಾರಿ ಬಸ್ಸುಗಳು.

Image
ಕುಕ್ಕೆ ಸುಬ್ರಹ್ಮಣ್ಯ; ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ, ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಆಡಳಿತ ಅಧಿಕಾರಿಗಳು, ಸುಬ್ರಹ್ಮಣ್ಯ ಪೊಲೀಸ್ ಠಾಣೆ ಸಬ್ ಇನ್ಸ್ಪೆಕ್ಟರ್ ,ಗ್ರಾಮ ಪಂಚಾಯಿತಿ ಹೀಗೆ ಎಲ್ಲರೂ ಸೇರಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬರುವ ಭಕ್ತರಿಗೆ ವಾಹನ ಸವಾರರಿಗೆ ಯಾವುದೇ ರೀತಿಯ ಸಮಸ್ಯೆಗಳಾಗಬಾರದು ಎಂಬ ದೃಷ್ಟಿಯಲ್ಲಿ ಕುಕ್ಕೆ ಸುಬ್ರಮಣ್ಯ ಕಾಶಿ ಕಟ್ಟೆಯಿಂದ ದೇವಸ್ಥಾನಕ್ಕೆ ಸಂಪರ್ಕಿಸುವ ಪ್ರಧಾನ ರಸ್ತೆ ಏಕ ಮುಖ ಸಂಚಾರ ನಿಯಮವನ್ನ ಮಾಡಿದ್ದಾರೆ.  ಈ ಒಂದು ನಿಯಮಕ್ಕೆ ಸಾರ್ವಜನಿಕರಿಂದ ವಾಹನ ಸವಾರರಿಂದ ಮೆಚ್ಚುಗೆ ವ್ಯಕ್ತವಾಗಿದೆ.  ದೊಡ್ಡ ಸಮಸ್ಯೆ ಇಲ್ಲಿದೆ; ಇದೀಗ ದೊಡ್ಡ ತಲೆನೋವಾಗಿ ಪರಿಣಮಿಸಿರುವುದು ಸರಕಾರಿ ಬಸ್ ನಿಲ್ದಾಣ, ಈ ಸರಕಾರಿ ಬಸ್ ನಿಲ್ದಾಣಕ್ಕೆ ಬರುವ ಬಸ್ ಗಳು ರಸ್ತೆಯಲ್ಲಿ ಪಾರ್ಕ್ ಮಾಡೋದು ರಸ್ತೆಯಲ್ಲಿ ವಾಹನವನ್ನು ಹಿಂದೆಮುಂದೆ ತೆಗೆಯುವುದು, ಇದರಿಂದ ವಾಹನ ಸವಾರರಿಗೆ ಅದೇ ಬಸ್ಸಿನಲ್ಲಿ ಬಂದು ಇಳಿದು ದೇವಸ್ಥಾನಕ್ಕೆ ಹೋಗುವ ಭಕ್ತರಿಗೆ ತೀರ ಸಮಸ್ಯೆ ಉಂಟಾಗಿದೆ.  ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಪರ್ಕಿಸುವ ಮುಖ್ಯರಸ್ತೆ ಇದಾಗಿದ್ದು ಜೊತೆಗೆ ಸುಳ್ಯ ಭಾಗಕ್ಕೆ ಸಂಚರಿಸುವ ರಾಜ್ಯ ರಸ್ತೆಯು ಇದೇ ಆಗಿದೆ ಆದ್ದರಿಂದ ಎಲ್ಲ ವಾಹನಗಳು ಇದೇ ರಸ್ತೆಯನ್ನ ಅವಲಂಬಿಸಿಕೊಂಡು ಸುಳ್ಯ ಭಾಗಕ್ಕೆ ಮಡಿಕೇರಿ ಭಾಗಕ್ಕೆ ಸಂಚರಿಸಬೇಕಾಗಿದೆ. ಈ ಸರಕಾರಿ ಬ...