Posts

Showing posts from February, 2026

ಕುಮಾರಸ್ವಾಮಿ ವಿದ್ಯಾಲಯದಲ್ಲಿ ವಿಜ್ಞಾನ ಮಾಡೆಲ್ ಪ್ರದರ್ಶನ.

Image
ಸುಬ್ರಮಣ್ಯ ಫೆಬ್ರವರಿ 28 : ಸುಬ್ರಹ್ಮಣ್ಯದ ಕುಮಾರಸ್ವಾಮಿ ಪ್ರಾಥಮಿಕ ಪ್ರೌಢ ಹಾಗೂ ಪದವಿಪೂರ್ವ ಕಾಲೇಜಿನಲ್ಲಿ ರಾಷ್ಟ್ರೀಯ ವಿಜ್ಞಾನ ದಿನವಾದ ಇಂದು ಶನಿವಾರ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳೇ ತಯಾರಿಸಿದಂತಹ ವಿಜ್ಞಾನ ಮಾದರಿ ಗಳನ್ನು ಪ್ರದರ್ಶಿಸಲಾಯಿತು.  ಸುಮಾರು ಹತ್ತಕ್ಕೂ ಮಿಕ್ಕಿ ವಿಜ್ಞಾನ ಮಾದರಿ ಗಳನ್ನು ತಯಾರಿಸಿದ ವಿದ್ಯಾರ್ಥಿಗಳು ಅವುಗಳನ್ನು ವೀಕ್ಷಿಸಿದ ಸಂಸ್ಥೆಯ ಎಲ್ಲ ವಿದ್ಯಾರ್ಥಿಗಳಿಗೆ ವಿವರಣೆ ನೀಡುವಲ್ಲಿ ಸಫಲರಾದರು. ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ಸಂಸ್ಥೆಯ ಅಧ್ಯಾಪಕ ವೃಂದದವರು ಸಹಕರಿಸಿದ್ದರು.  ಈ ಸಂದರ್ಭದಲ್ಲಿ ಸಂಸ್ಥೆಯ ಸಂಚಾಲಕ ಚಂದ್ರಶೇಖರ್ ನಾಯರ್ ವಿದ್ಯಾರ್ಥಿಗಳ ಮಾಡೆಲ್ ಪ್ರದರ್ಶನಗಳನ್ನ ವೀಕ್ಷಿಸಿ ಪ್ರಶಂಸೆ ಪಟ್ಟರು. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕಿ ವಿದ್ಯಾರತ್ನ ಹಾಗೂ ಶಿಕ್ಷಕ ವೃಂದದವರು ವಿದ್ಯಾರ್ಥಿಗಳಿಗೆ ಮಾಡೆಲ್ ತಯಾರಿಸುವಲ್ಲಿ ಮಾರ್ಗದರ್ಶನ ಮಾಹಿತಿ ಹಾಗೂ ಪ್ರೋತ್ಸಾಹ ನೀಡುತ್ತಿದ್ದರು.

ನಾಳೆಯಿಂದ (ಫೆಬ್ರವರಿ.28) ದ್ವಿತೀಯ ಪಿಯುಸಿ ಪರೀಕ್ಷೆ-1 ಆರಂಭ: ಆತ್ಮವಿಶ್ವಾಸ, ಶಿಸ್ತು ಮತ್ತು ಸಮರ್ಪಕ ತಯಾರಿಯೇ ಯಶಸ್ಸಿನ ಗುಟ್ಟು!!

Image
ಫೆಬ್ರವರಿ 28, 2026 ರಿಂದ ಮಾರ್ಚ್ 17, 2026 ರವರೆಗೆ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆ–1 ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಹಾರ್ದಿಕ ಶುಭಾಶಯಗಳು! ಇಡೀ ರಾಜ್ಯದ ವಿದ್ಯಾರ್ಥಿಗಳು ಈ ಮಹತ್ವದ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಜ್ಜಾಗಿದ್ದಾರೆ. ಎರಡು ವರ್ಷಗಳ ನಿರಂತರ ಪರಿಶ್ರಮ, ಶಿಸ್ತುಬದ್ಧ ಅಧ್ಯಯನ ಮತ್ತು ಗುರುಗಳ ಮಾರ್ಗದರ್ಶನದ ಫಲಶ್ರುತಿಯೇ ಈ ಪರೀಕ್ಷೆ. ಉನ್ನತ ಶಿಕ್ಷಣದ ದಾರಿಯಲ್ಲಿಯೂ ಹಾಗೂ ಸರ್ಕಾರಿ–ಖಾಸಗಿ ಉದ್ಯೋಗಾವಕಾಶಗಳ ದೃಷ್ಟಿಯಿಂದಲೂ ಇದು ಮಹತ್ವದ ಹಂತವಾಗಿದೆ. ವಿದ್ಯಾರ್ಥಿಗಳೇ, ಪರೀಕ್ಷೆಯ ಅಂತಿಮ ಹಂತದಲ್ಲಿ ಸಮಾಧಾನ, ಆತ್ಮವಿಶ್ವಾಸ ಮತ್ತು ಧೈರ್ಯ ನಿಮ್ಮ ಬಲವಾಗಿರಲಿ. ಯಶಸ್ಸು ನಿಮ್ಮ ಪರಿಶ್ರಮಕ್ಕೆ ಖಚಿತ ಪ್ರತಿಫಲ ನೀಡುತ್ತದೆ. ಪರೀಕ್ಷಾ ತಯಾರಿಯ ಅಂತಿಮ ಸೂಚನೆಗಳು: ✓ ಈಗಾಗಲೇ ಉತ್ತಮ ತಯಾರಿ ಮಾಡಿಕೊಂಡಿರುವ ನೀವು ಯಾವುದೇ ಆತಂಕಕ್ಕೆ ಒಳಗಾಗಬೇಡಿ. ✓ ಹೊಸ ವಿಷಯಗಳನ್ನು ಕಲಿಯಲು ಯತ್ನಿಸುವುದಕ್ಕಿಂತ, ಓದಿರುವ ಪಾಠಗಳ ಪುನರಾವರ್ತನೆಗೆ ಹೆಚ್ಚು ಆದ್ಯತೆ ನೀಡಿ. ✓ ಸಂಕ್ಷಿಪ್ತ ನೋಟ್ಸ್‌ಗಳನ್ನು ಓದಿ, ಪ್ರಮುಖ ಅಂಶಗಳನ್ನು ಮನನ ಮಾಡಿ. ✓ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್ ಬಳಕೆಯನ್ನು ಕಡಿಮೆ ಮಾಡಿ; ಆರೋಗ್ಯಕರ ಆಹಾರ ಸೇವಿಸಿ, ಸಾಕಷ್ಟು ನೀರು ಕುಡಿಯಿರಿ. ✓ ಪ್ರತಿದಿನ ಕನಿಷ್ಠ 6–7 ಗಂಟೆಗಳ ಸಮರ್ಪಕ ನಿದ್ರೆ ಪಡೆಯಿರಿ. ✓ ಪರೀಕ್ಷೆಯ ದಿನ ಕನಿಷ್ಠ 30 ನಿಮಿಷಗಳ ಮುಂಚಿತವಾಗಿ ಪರೀಕ್ಷಾ ಕೇಂದ...

ಕುಕ್ಕೆ ಕ್ಷೇತ್ರದ ಶಿಕ್ಷಣ ಸಂಸ್ಥೆಯಲ್ಲಿ ಸಮಾಜಮುಖಿ ಕಾರ್ಯಕ್ರಮ.

Image
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ದಿನಾಂಕ 26.02.2026ರ ಗುರುವಾರ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ. ಸಮಾಜ ಸೇವೆಯ ಮಹತ್ವವನ್ನು ಮನದಟ್ಟುಗೊಳಿಸುವ ಉದ್ದೇಶದಿಂದ ಈ ಶಿಬಿರವನ್ನು ನಡೆಸಲಾಗುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮಹಾವಿದ್ಯಾಲಯದ ಪ್ರಾಂಶುಪಾಲರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. ರಕ್ತದಾನವು ಜೀವ ಉಳಿಸುವ ಮಹತ್ತರ ದಾನವಾಗಿದ್ದು, ತುರ್ತು ಪರಿಸ್ಥಿತಿಗಳಲ್ಲಿ ಅನೇಕ ರೋಗಿಗಳಿಗೆ ಇದು ಜೀವಧಾರೆಯಾಗುತ್ತದೆ. ಈ ನಿಟ್ಟಿನಲ್ಲಿ ಮಹಾವಿದ್ಯಾಲಯವು ಸಾಮಾಜಿಕ ಜವಾಬ್ದಾರಿಯನ್ನು ಅರಿತು ಮಾನವೀಯ ಕಾರ್ಯಕ್ಕೆ ಮುಂದಾಗಿದೆ. ಶಿಬಿರದಲ್ಲಿ ಆರೋಗ್ಯ ತಪಾಸಣೆ ಬಳಿಕ ಅರ್ಹ ದಾನಿಗಳಿಂದ ರಕ್ತ ಸಂಗ್ರಹಿಸಲಾಗುತ್ತದೆ. ಸಾರ್ವಜನಿಕರು ಹಾಗೂ ಯುವಕರು ಈ ಶಿಬಿರದ ಸದುಪಯೋಗವನ್ನು ಪಡೆದುಕೊಂಡು ರಕ್ತದಾನ ಮಾಡುವ ಮೂಲಕ ಮಾನವೀಯತೆ ತೋರಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಮಹಾವಿದ್ಯಾಲಯವನ್ನು ಸಂಪರ್ಕಿಸಲು ಕೋರಲಾಗಿದೆ.

*ಶ್ರೀರಾಮ ವಿದ್ಯಾಲಯದಲ್ಲಿ ಉಚಿತ ಕಣ್ಣಿನ ತಪಾಸಣಾ ಶಿಬಿರ*

Image
ಶ್ರೀ ರಾಮ ವಿದ್ಯಾಲಯ ಸೂರ್ಯ ನಗರ ನೆಲ್ಯಾಡಿಯಲ್ಲಿ ಫೆಬ್ರವರಿ 18 ಬುಧವಾರದಂದು ಅಶ್ವಿನಿ ಆಸ್ಪತ್ರೆ ನೆಲ್ಯಾಡಿ ಇದರ ಸಹಯೋಗದೊಂದಿಗೆ ಹತ್ತನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರ ನಡೆಯಿತು. ಡಾ| ರವಿಶಂಕರ್ ಎಂ. ಶ್ರೀ ದುರ್ಗಾ ಕ್ಲಿನಿಕ್ ನೆಲ್ಯಾಡಿ ಇವರು ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ , ಮನುಷ್ಯರಲ್ಲಿ ಕಣ್ಣು ಒಂದು ಮುಖ್ಯ ಅಂಗವಾಗಿದೆ. ಸಾರ್ವಜನಿಕರಿಗೆ ಉಪಯುಕ್ತವಾಗುವಂತಹ ಇಂತಹ ಸೇವೆ ಇನ್ನಷ್ಟು ನಡೆಯಲಿ, ಎಲ್ಲರೂ ಸದುಪಯೋಗಪಡಿಸಿಕೊಳ್ಳುವಂತಾಗಲಿ ಎಂದು ಹೇಳಿ ಶುಭ ಹಾರೈಸಿದರು. ಅತಿಥಿಗಳಾಗಿ ಆಗಮಿಸಿದ್ದ ಪಿ .ಎಲ್. ಡಿ ಬ್ಯಾಂಕ್ ಪುತ್ತೂರು ಇದರ ಅಧ್ಯಕ್ಷರಾದ ಶ್ರೀಯುತ ಭಾಸ್ಕರ ಎಸ್. ಗೌಡ ಇಚಿಲಂಪಾಡಿಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಣ್ಣಿನ ತಪಾಸಣಾ ಅಧಿಕಾರಿಗಳಾಗಿ ಆಗಮಿಸಿದ ಡಾ|ಎಸ್. ಎಂ. ಅಶ್ವಿನ್ ಸಾಗರ್ ಕಣ್ಣಿನ ಆರೋಗ್ಯದ ಬಗ್ಗೆ ಮಕ್ಕಳಿಗೆ ಮಾಹಿತಿಯನ್ನು ನೀಡಿದರು.   ಕಾರ್ಯಕ್ರಮದ ವೇದಿಕೆಯಲ್ಲಿ ಕನ್ನಡ ಮಾಧ್ಯಮದ ಮುಖ್ಯ ಗುರುಗಳಾದ ಶ್ರೀಯುತ ಗಣೇಶ್ ವಾಗ್ಲೆ ಹಾಗೂ ಆಂಗ್ಲ ಮಾಧ್ಯಮದ ಮುಖ್ಯ ಶಿಕ್ಷಕಿ ಶ್ರೀಮತಿ ಕಾವ್ಯ ಮಾತಾಜಿ ಉಪಸ್ಥಿತರಿದ್ದರು.ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವಿದ್ಯಾಲಯದ ಅಧ್ಯಕ್ಷರಾದ ಶ್ರೀಯುತ ಡಾ |ಮುರಳಿಧರ ರವರು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕನ್ನಡ ಮಾಧ್ಯಮ ವಿಭಾಗದ ಮ...

*ಕೌಕ್ರಾಡಿ ಗ್ರಾಮ ಪಂಚಾಯತ್ ಸದಸ್ಯರಿಗೆ ಗೌರವ ಸನ್ಮಾನ *.**

Image
ಫೆ.19 ರಂದು ಕಡಬ ತಾಲೂಕು ಕೌಕ್ರಾಡಿ ಗ್ರಾಮಪಂಚಾಯತ್ ಸಭಾಂಗಣದಲ್ಲಿ ಗ್ರಾಮ ಪಂಚಾಯತ್ ಸದಸ್ಯರನ್ನು ಗ್ರಾಮಾ ಭಿವೃದ್ಧಿ ಅಧಿಕಾರಿ ಮತ್ತು ಪಂಚಾಯತ್ ಕಾರ್ಯದರ್ಶಿಗಳ ನೇತೃತ್ವದಲ್ಲಿ ಪಂಚಾಯತ್ ಸಿಬಂದಿಗಳು ಶಾಲು ಹೊದಿಸಿ ಸ್ಮರಣಿಕೆ ನೀಡಿ ಗೌರವಿಸಿದರು.    ಈ ಸಂದರ್ಭದಲ್ಲಿ ಮಾತನಾಡಿದ ಅಧ್ಯಕ್ಷರಾದ ಉದಯ ಕುಮಾರ್ ಗೌಡ ಅಧ್ಯಕ್ಷನಾಗಿ ಕಳೆದ 15 ತಿಂಗಳಿನಿಂದ ನನ್ನಿಂದ ಸಾಧ್ಯವಾದಷ್ಟು ಗ್ರಾಮದ ಅಭಿವೃದ್ಧಿ ಕಾರ್ಯಗಳಲ್ಲಿ ನಿಸ್ವಾರ್ಥ ಮನೋಭಾವದಿಂದ ಪ್ರಾಮಾಣಿಕವಾಗಿ ತೊಡಗಿಸಿಕೊಂಡಿದ್ದೇನೆ . ಅಲ್ಲದೆ ಸದಸ್ಯರ ಮತ್ತು ಪಂಚಾಯತ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳುಹಾಗೂ ಸಂಜೀವಿನಿ ಒಕ್ಕೂಟದವರು ನೀಡಿದ ಸಹಕಾರವನ್ನು ತುಂಬು ಮನಸ್ಸಿನಿಂದ ಶ್ಲಾಘಿಸಿದರು. ಸದಸ್ಯರುಗಳು ಅನಿಸಿಕೆ ವ್ಯಕ್ತಪಡಿಸಿ ಅಧ್ಯಕ್ಷರು ಮತ್ತು ಪಂಚಾಯತ್ ಸಿಬ್ಬಂದಿಗಳು ನೀಡಿದ ಸಹಕಾರವನ್ನು ನೆನಪಿಸಿಕೊಂಡರು. ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೋಹನ್ ಕುಮಾರ್, ಕಾರ್ಯದರ್ಶಿ ದೇವಿಕಾ,ಉಪಾಧ್ಯಕ್ಷರು ವನಿತಾ ಸದಸ್ಯರಾದ ಜನಾರ್ಧನ, ಸುಧಾಕರ್,ಲೋಕೇಶ್ ಬಿ, ರೋಹಿ, ದಿನೇಶ್,ವಿಶ್ವನಾಥ್ ಗೌಡ, ಮಹೇಶ್ ಸವಿತ, ದೇವಕಿ, ಪುಷ್ಪಾವತಿ, ಭವಾನಿ, ಶೈಲಾ, ಡೈಸಿ, ರತ್ನಾವತಿ, ಸಂದ್ಯಾ,ಗುತ್ತಿಗೆದಾರ ವಿನೋದ್ ಕುಮಾರ್  ಪಂಚಾಯತ್ ಸಿಬ್ಬಂದಿಗಳಾದ ಕಸ್ತೂರಿ, ಮಂಜುಳಾ, ವಿದ್ಯಾ ಕಟ್ಟೆಮಜಲು, ಪುರಂದರ, ವಿದ್ಯಾ, ಪ್ರೇಮಾ,ಅಶ್ರಫ್ ಮತ್ತು ಸಂಜೀವಿನಿ ಒಕ್ಕೂಟದ...

🚌 ರಾಮಕುಂಜದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಹೆಡ್‌ಲೈಟ್ ದೋಷ: ಪತ್ರಕರ್ತನ ಸಾಮಾಜಿಕ ಜವಾಬ್ದಾರಿ ಶ್ಲಾಘನೀಯ.

Image
ಕಡಬ: ಮಂಗಳೂರುನಿಂದ ಕಡಬ ಕಲ್ಲುಗುಡ್ಡೆ ಕಡೆಗೆ ಸಂಚರಿಸುತ್ತಿದ್ದ Karnataka State Road Transport Corporation (ಕೆಎಸ್‌ಆರ್‌ಟಿಸಿ) ಬಸ್‌ ರಾಮಕುಂಜ ತಲುಪುತ್ತಿದ್ದಂತೆ ರಾತ್ರಿ ಸುಮಾರು 8 ಗಂಟೆ ಸುಮಾರಿಗೆ ತಾಂತ್ರಿಕ ದೋಷ ಉಂಟಾಯಿತು. ಬಸ್‌ನ ಎದುರಿನ ಹೆಡ್‌ಲೈಟ್ ಹಾಗೂ ಒಳಗಿನ ಲೈಟ್‌ಗಳು ಏಕಾಏಕಿ ನಿಂತು ಉರಿಯದ ಸ್ಥಿತಿ ನಿರ್ಮಾಣವಾಗಿದ್ದು, ಪ್ರಯಾಣಿಕರಲ್ಲಿ ಆತಂಕ ಉಂಟಾಯಿತು. ಹಿಂದಿನಿಂದ ಬರುತ್ತಿದ್ದ ನವೀನ್ ಕಲ್ಲಾಜೆ ಅವರು ಸಮಸ್ಯೆಯನ್ನು ಗಮನಿಸಿ ಪತ್ರಕರ್ತ ದಿವಾಕರ ಯಂ ಅವರ ಗಮನಕ್ಕೆ ತಂದರು. ಘಟನೆ ತಿಳಿದ ಕೂಡಲೇ ದಿವಾಕರ ಅವರು ಬಸ್ ಕಡಬದತ್ತ ಸಾಗುತ್ತಿದ್ದ ವೇಳೆ ವಿಡಿಯೋ ಚಿತ್ರೀಕರಿಸಿ ಚಾಲಕರ ಗಮನ ಸೆಳೆದರು. ಚಾಲಕರು ತಕ್ಷಣವೇ ಬಸ್ ನಿಲ್ಲಿಸಿ ಪರಿಶೀಲನೆ ನಡೆಸಿದರು. ಈ ಬಸ್ ಕಲ್ಲುಗುಡ್ಡೆ ಕಡೆಗೆ ಆ ದಿನದ ಕೊನೆಯ ಸರ್ವೀಸ್ ಆಗಿದ್ದು, ಮುಂದಿನ ದಿನ ಬೆಳಿಗ್ಗೆ ಮಕ್ಕಳ ಶಾಲಾ ಪ್ರವಾಸವೂ ನಿಗದಿಯಾಗಿದ್ದ ಕಾರಣ ಪ್ರಯಾಣಿಕರು ಹಾಗೂ ಕಂಡಕ್ಟರ್ ಬಸ್ ಮುಂದುವರಿಸಲು ವಿನಂತಿಸಿದರು. ಬಳಿಕ ಕಡಬ ಪೇಟೆ ತಲುಪಿದಾಗ ಸಮಸ್ಯೆಯ ಗಂಭೀರತೆ ಮತ್ತೊಮ್ಮೆ ತಿಳಿಸಲಾಯಿತು. ದಿವಾಕರ ಅವರು ಆಲಿ ಹಳೆ ಸ್ಟೇಷನ್ ಹಾಗೂ ರಮೀಜ್ ಪಿಜಕ್ಕಳ ಅವರ ಸಹಕಾರದಿಂದ ಕಡಬದ ಸ್ಥಳೀಯ ಎಲೆಕ್ಟ್ರಿಷಿಯನ್‌ರನ್ನು ಕರೆಸಿ ತುರ್ತು ದುರಸ್ತಿ ಮಾಡಿಸಿದರು.ಕೇವಲ ₹50 ವೆಚ್ಚದಲ್ಲಿ , ದುರಸ್ತಿ ಕಾರ್ಯದ ಬಳಿಕ ಬಸ್ ಸುರಕ್ಷಿತವಾಗಿ ಮುಂದಿನ ಪ್ರಯಾಣ ಆರಂಭಿಸಿತು. ...

ಕಡಬ ಪೊಲೀಸ್ ಠಾಣೆಯಲ್ಲಿ ಸ್ವಾಧೀನಪಡಿಸಿಕೊಂಡ ಹುಂಜ ಕೋಳಿಗಳ ಬಹಿರಂಗ ಹರಾಜು.

Image
ಕಡಬ: ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಧೀನಪಡಿಸಿಕೊಂಡಿರುವ ಒಟ್ಟು ಮೂರು ಹುಂಜ ಕೋಳಿಗಳನ್ನು ಮಾನ್ಯ ನ್ಯಾಯಾಲಯದ ಆದೇಶದಂತೆ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಈ ಬಹಿರಂಗ ಹರಾಜು ಪ್ರಕ್ರಿಯೆ ಫೆಬ್ರವರಿ 19, 2026ರಂದು ಬೆಳಿಗ್ಗೆ 10.00 ಗಂಟೆಗೆ ಕಡಬ ಪೊಲೀಸ್ ಠಾಣೆ ಆವರಣದಲ್ಲಿ ನಡೆಯಲಿದೆ. ಹರಾಜಿನಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ಸಾರ್ವಜನಿಕರು ನಿಗದಿತ ದಿನಾಂಕ ಮತ್ತು ಸಮಯದಲ್ಲಿ ಸ್ಥಳಕ್ಕೆ ಹಾಜರಾಗಿ ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಬಹುದಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. — ಠಾಣಾಧಿಕಾರಿಗಳು ಕಡಬ ಪೊಲೀಸ್ ಠಾಣೆ

ಡಾ. ಮೌಲಿಕಾ – ಡಾ. ಆದರ್ಶ ವಿವಾಹ: ಭಾಗವಹಿಸಿದ ಬಂಧುಗಳಿಗೆ ಕೃತಜ್ಞತೆ ಸಲ್ಲಿಸಿದ ಸಂಧ್ಯಾ–ನಾರಾಯಣ ಭಟ್ ದಂಪತಿ.

Image
ರಾಮಕುಂಜ : ತಮ್ಮ ಮಗಳು ಡಾ. ಮೌಲಿಕಾ ಮತ್ತು ಅಳಿಯ ಡಾ. ಆದರ್ಶ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವದಿಸಿದ ಬಂಧುಗಳು, ಆಪ್ತರು ಹಾಗೂ ಸ್ನೇಹಿತರಿಗೆ ಶ್ರೀಮತಿ ಸಂಧ್ಯಾ ಮತ್ತು ಟಿ. ನಾರಾಯಣ ಭಟ್ ಅವರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ. ಮಕ್ಕಳ ವಿವಾಹವನ್ನು ಬಂಧು–ಬಳಗದ ಸಮ್ಮುಖದಲ್ಲಿ ಸಂತೋಷದಿಂದ ನೆರವೇರಿಸಬೇಕೆಂಬುದು ಪ್ರತಿಯೊಬ್ಬ ಪೋಷಕರ ಜೀವಮಾನ ಕನಸು. ದೇವರ ಅನುಗ್ರಹ ಹಾಗೂ ಮನಸ್ಸುಗಳ ಬಾಂಧವ್ಯದಿಂದಲೇ ಇಂತಹ ಸಮಾರಂಭಗಳು ಯಶಸ್ವಿಯಾಗುತ್ತವೆ ಎಂದು ಅವರು ತಿಳಿಸಿದ್ದಾರೆ. ಒಂದೇ ಶುಭ ಮುಹೂರ್ತದಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲೂ, ದೂರದೂರಿನಿಂದ ಪ್ರಯಾಣಿಸಿ ವಿವಾಹಕ್ಕೆ ಆಗಮಿಸಿ ಶುಭಾಶಯ ಕೋರಿರುವುದು ತಮ್ಮ ಕುಟುಂಬಕ್ಕೆ ಅಪಾರ ಸಂತೋಷ ತಂದಿದೆ ಎಂದು ತಿಳಿಸಿದ್ದಾರೆ. ನೂರಾರು ಮೈಲುಗಳ ಅಂತರವಿದ್ದರೂ, ವ್ಯಸ್ತತೆಯ ನಡುವೆಯೂ ಸಮಯ ಮೀಸಿ ಆಗಮಿಸಿದ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಪ್ರಮುಖರು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಮಾರಂಭದಲ್ಲಿ ಪಾಲ್ಗೊಂಡು ಹೃದಯಸ್ಪರ್ಶಿ ಮಾತುಗಳ ಮೂಲಕ ಆಶೀರ್ವಾದ ಹಾಗೂ ಬಲ ತುಂಬಿದ ಎಲ್ಲರಿಗೂ ಕುಟುಂಬದ ಪರವಾಗಿ ಶಿರೋನಮನ ಸಲ್ಲಿಸಿರುವುದಾಗಿ ಪ್ರಕಟಣೆಯಲ್ಲಿ ಹೇಳಿದ್ದಾರೆ. ಬಂಧುಗಳ ಪ್ರೀತಿ, ಸಹಕಾರ ಹಾಗೂ ಆಶೀರ್ವಾದವೇ ತಮ್ಮ ಕುಟುಂಬದ ಶಕ್ತಿ ಎಂದು ಉಲ್ಲೇಖಿಸಿರುವ ಸಂಧ್ಯಾ ಮತ್ತು ನಾರಾಯಣ ಭಟ್ ದಂಪತಿ, ಈ ಮಧುರ ಬಾಂಧವ್ಯ ಜೀವನಪರ್ಯಂತ ಮುಂದುವರಿಯಲಿ ಎಂದು ...

*ಕೌಕ್ರಾಡಿ ಗ್ರಾಮ ಪಂಚಾಯತ್ ಅರಿವು ಕೇಂದ್ರದ ನೂತನ ಕಟ್ಟಡ ಉದ್ಘಾಟನೆ.......

Image
ಕಡಬ ತಾಲೂಕು ಕೌಕ್ರಾಡಿ ಗ್ರಾಮ ಪಂಚಾಯತ್ ಅರಿವು ಕೇಂದ್ರದ ನೂತನ ಕಟ್ಟಡವನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ ಕುಮಾರ್ ಗೌಡ ಫೆಬ್ರವರಿ 10 ರಂದು ಉದ್ಘಾಟಿಸಿದರು.ಶ್ರೀಧರ ನೂಜಿನ್ನಾಯ ಸರಸ್ವತಿ ಪೂಜೆ ನಡೆಸಿದರು ನಂತರ ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಉದಯ ಕುಮಾರ್ ಗೌಡ ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು ನಂತರ ದೀಪ ಬೆಳಗಿ ಶುಭ ಹಾರೈಸಿದರು, ಗ್ರಾಮ ಪಂಚಾಯತ್ ಸದಸ್ಯರಾದ ಸುಧಾಕರ್, ಮಹೇಶ್ ಪಿ, ಲೋಕೇಶ್ ಬಾಣಜಾಲ್,ಶ್ರೀಮತಿ ಪುಷ್ಪ,ಭವಾನಿ, ದೇವಕಿ, ಜನಾರ್ಧನ ಎಂ,ಸಂಜೀವಿನಿ ಒಕ್ಕೂಟದ ಸ್ವರ್ಣಲತಾ, ಚಂದ್ರಿಕಾ, ಶ್ರೀಯುತ ರವಿಪ್ರಸಾದ್ ಶೆಟ್ಟಿ, ಸುಂದರ ಗೌಡ ಅತ್ರಿಜಾಲ್ ಸದಾನಂದ ಗೌಡ ಕುಂಡ ಡ್ಕ,ಜಾರ್ಜ್ ಕುಟ್ಟಿ ಉಪದೇಶಿ, ಸತೀಶ್ ಗೌಡ ಹೊಸಮನೆ, ರವಿಚಂದ್ರ ಹೊಸವಕ್ಲು ಮೊದಲಾದವರು ಉಪಸ್ಥಿತರಿದ್ದರು. ಸನ್ಮಾನ ಕಾರ್ಯಕ್ರಮ... ಕಟ್ಟಡ ಕಾಮಗಾರಿ ನಡೆಸಿದ ಕಂಟ್ರಾಕ್ಟರ್ ವಿನೋದ್ ಕುಮಾರ್, ಮತ್ತು ಗ್ರಂಥಾಲಯ ಮೇಲ್ವಿಚಾರಕಿ ವಿಮಲಾ ರವರನ್ನು ಸನ್ಮಾನಿಸಲಾಯಿತು.ಲೋಕೇಶ್ ಬಾಣಜಾಲ್ ಕಾರ್ಯಕ್ರಮ ನಿರೂಪಿಸಿದರು

ಶಿರಾಡಿಯಲ್ಲಿ ‘ವಿದ್ವಾನ್ ಮೆಡಿಕಲ್’ ಶುಭಾರಂಭ.

Image
ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಹೊಸ ಮೆಡಿಕಲ್ ಸ್ಟೋರ್ ಉದ್ಘಾಟನೆ ಶಿರಾಡಿ: ಮಂಗಳೂರು–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಶಿರಾಡಿಯಲ್ಲಿ ನಿನ್ನೆ ‘ವಿದ್ವಾನ್ ಮೆಡಿಕಲ್’ ನೂತನವಾಗಿ ಶುಭಾರಂಭಗೊಂಡಿತು. ಶುಭಾರಂಭದ ಅಂಗವಾಗಿ ಪೂಜಾ ವಿಧಿ ವಿಧಾನಗಳು ಭಕ್ತಿಭಾವದಿಂದ ನೆರವೇರಿದವು. ನಂತರ ಸಂಸ್ಥೆಯ ಹಿರಿಯರಾದ ಆನಂದ ಗೌಡ ನೀರಾಯ ಅವರು ರಿಬ್ಬನ್ ಕತ್ತರಿಸುವ ಮೂಲಕ ಮೆಡಿಕಲ್ ಅಂಗಡಿಯನ್ನು ಉದ್ಘಾಟಿಸಿದರು. ಸಂಸ್ಥೆಯ ಮಾಲಕಿ ವಿದ್ಯಾಶ್ರೀ ಪವನ್ ಅವರು ಆಗಮಿಸಿದ ಅತಿಥಿಗಳು ಹಾಗೂ ಸಾರ್ವಜನಿಕರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಕಿಶೋರ್ ಶಿರಾಡಿ, ದಾಮೋದರ ಗುಂಡ್ಯ, ಪದ್ಮನಾಭ ನೀರಾಯ ಹಾಗೂ ನಾರಾಯಣ ಪೆರಿಯಡ್ಕ ಅವರು ಸಂಸ್ಥೆಗೆ ಶುಭಾಶಯಗಳನ್ನು ತಿಳಿಸಿದರು. ಇನ್ನೂ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭಕೋರಿದರು. ‘ವಿದ್ವಾನ್ ಮೆಡಿಕಲ್’ ನಲ್ಲಿ ಉತ್ತಮ ಗುಣಮಟ್ಟದ ಔಷಧಿಗಳು, ವೈದ್ಯರ ಸೂಚನೆಯ ಔಷಧ ಪೂರೈಕೆ ಹಾಗೂ ಗ್ರಾಹಕ ಸ್ನೇಹಿ ಸೇವೆ ಲಭ್ಯವಿರಲಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬಹುದು ಎಂದು ಸಂಸ್ಥೆಯವರು ತಿಳಿಸಿದ್ದಾರೆ. ಕಾರ್ಯಕ್ರಮವು ಸರಳವಾಗಿ ನಡೆಯಿತು.

*ನೆಲ್ಯಾಡಿಯಲ್ಲಿ ಹಿಂದೂ ಸಂಗಮ, ಹರಿದು ಬಂತು ಜನಸಾಗರ, ವಿಜೃಂಬಿಸಿತು ಕೇಸರಿ....*

Image
ಹಿಂದೂ ಧರ್ಮ ಮತವಲ್ಲ ಜೀವನ ಪದ್ಧತಿ.. ರವಿ ಮಂಡ್ಯ   ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರರ ಸಂಭ್ರಮವನ್ನು ಆಚರಿಸಿ ಹಿಂದೂ ಸಮಾಜವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ, ಸಾಮಾಜಿಕ ಪಂಚ ಕಾರ್ಯಗಳನ್ನು ಜಾಗೃತಿ ಗೊಳಿಸುವ ಕಾರ್ಯಕ್ರಮ ವಾಗಿ ಫೆಬ್ರವರಿ 1ರಂದು ನೆಲ್ಯಾಡಿ ಗಾಂಧಿ ಮೈದಾನ ದಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ಕಡಬ ಇವರ ನೇತೃತ್ವದಲ್ಲಿ ಐದು ಗ್ರಾಮಗಳನೊಳಗೊಂಡ ನೆಲ್ಯಾಡಿ ಮಂಡಲದ ವತಿಯಿಂದ ನಡೆದ ಬ್ರಹತ್ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ದಿಕ್ಸುಚಿ ಭಾಷಣ ನೀಡಿದ ಸಂಘದ ಪ್ರಮುಖರು ರವಿ ಮಂಡ್ಯ ಮಾತನಾಡುತ್ತಾ " ಹಿಂದೂ ಧರ್ಮ ಕೇವಲ ಮತವಲ್ಲ ಇದೊಂದು ಜೀವನ ಪದ್ಧತಿ, ವ್ಯಕ್ತಿ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣದ ಕೆಲಸ ನಡೆಯಬೇಕಾಗಿದೆ, ಸಂಘ 100 ರ ಸಂಭ್ರಮದಲ್ಲಿ ಆಚರಣೆಗೆ ಸೀಮಿತ ಗೊಳಿಸದೆ ಹಿಂದೂ ಸಂಗಮ ಕಾರ್ಯಕ್ರಮದ ಮೂಲಕ ಪ್ರತಿಯೊಬ್ಬ ಹಿಂದೂವಿಗೂ ಸಾಮಾಜಿಕ ಚಿಂತನೆಯ ಹೊಣೆಗಾರಿಕೆಯನ್ನು ನೀಡಿದೆ ಎಂದರು.  ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ್ದ ಶ್ರೀಮತಿ ವಸಂತಿ ರುಕ್ಮಯ ಗೌಡ ಮಾತನಾಡಿ ಹಿಂದೂ ಸಮಾಜ ಜಾತಿ ಪದ್ಧತಿಯ ಅಂಧಕಾರದಿಂದ ಹೊರಬಂದು, ಮಕ್ಕಳಲ್ಲಿ ಚಿಕ್ಕ ವಯಸ್ಸಿನಲ್ಲೇ ಉತ್ತಮ ಸಂಸ್ಕಾರ ನೀಡುವ ದಿಸೆಯಲ್ಲಿ ಸಾಗಬೇಕು ಎಂದರು.    ಪಟ್ಲಡ್ಕ ಆದಿ ಮೋಗೇರರ್ಕಳ ಸ್ವಾಮಿ ಕೊರಗಜ್ಜ ದೈವಸ್ಥಾನದ ಉಪಾಧ್ಯಕ್ಷರು ಹರೀಶ್ ಪಟ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ದೊಂತಿಲ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ...