Posts

Showing posts from May, 2025

ದಕ್ಷಿಣ ಕನ್ನಡಕ್ಕೆ ಹೊಸ ಎಸ್‌ಪಿ: ಡಾ. ಅರುಣ್ ಕೆ. ಐಪಿಎಸ್ ಅಧಿಕಾರ ಸ್ವೀಕಾರ.

Image
ದಕ್ಷಿಣ ಕನ್ನಡ, ಮೇ 30, 2025: ಜಿಲ್ಲೆಯ ಹೊಸ ಪೊಲೀಸ್ ಅಧೀಕ್ಷಕರಾಗಿ ಡಾ. ಅರುಣ್ ಕೆ., ಐಪಿಎಸ್ ಅವರು ಮೇ 30 ರಂದು ಅಧಿಕಾರ ವಹಿಸಿಕೊಂಡಿದ್ದಾರೆ. ಸರ್ಕಾರ ಹಾಗೂ ಪ್ರಧಾನ ಕಚೇರಿಯ ಆದೇಶದ ಹಿನ್ನೆಲೆಯಲ್ಲಿ ಅವರು ಈ ಹುದ್ದೆಯ ಪ್ರಭಾರ ವಹಿಸಿಕೊಂಡಿದ್ದು, ತಮ್ಮ ಪ್ರಥಮ ದಿನದ ಪ್ರಕಟಣೆಯಲ್ಲಿ ಸಾರ್ವಜನಿಕ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ಕುರಿತು ತಮ್ಮ ದೃಢ ನಿಲುವು ವ್ಯಕ್ತಪಡಿಸಿದ್ದಾರೆ. “ಕಾನೂನು ಸುವ್ಯವಸ್ಥೆ ಹಾಗೂ ಅಪರಾಧ ನಿಯಂತ್ರಣಕ್ಕೆ ಅತ್ಯುತ್ತಮ ಆದ್ಯತೆ ನೀಡಲಾಗುವುದು,” ಎಂದು ಅವರು ತಿಳಿಸಿದರು. ಮುಖ್ಯ ನಿಲುವುಗಳು: ಮತೀಯ ಘಟನೆಗಳು ಮತ್ತು ನೈತಿಕ ಪೊಲೀಸ್‌ಗಿರಿ ಪ್ರಕರಣಗಳ ವಿರುದ್ಧ ಕಠಿಣ ಕ್ರಮ. ರೌಡಿ ಶೀಟರ್‌ಗಳ ಚಟುವಟಿಕೆಗಳ ಮೇಲೆ ನಿಗಾ. ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುವವರ ವಿರುದ್ಧ ಕ್ರಮ. ಮಾದಕ ದ್ರವ್ಯ ಸಾಗಣೆ, ಅಕ್ರಮ ಗೋ ಸಾಗಾಟ, ಗಣಿಗಾರಿಕೆ, ಜೂಜು ಹಾಗೂ ಬೆಟ್ಟಿಂಗ್ ವಿರುದ್ಧ ಕಾನೂನು ಕ್ರಮ. ಜಿಲ್ಲೆಯ ಸಾರ್ವಜನಿಕರು ಯಾವುದೇ ರೀತಿಯ ಅಪರಾಧ ಅಥವಾ ಶಂಕಾಸ್ಪದ ಚಟುವಟಿಕೆಗಳ ಮಾಹಿತಿ ಹೊಂದಿದ್ದಲ್ಲಿ, ನೇರವಾಗಿ ಎಸ್‌ಪಿಯವರನ್ನು ಸಂಪರ್ಕಿಸಬಹುದು: 📞 ಮೊಬೈಲ್: 94808 05301 📞 ಕಛೇರಿ: 0824-2220503 ಡಾ. ಅರುಣ್ ಕೆ. ಅವರು ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿನ ಸೇವಾ ಅನುಭವ ಹೊಂದಿರುವ ಹಿರಿಯ ಅಧಿಕಾರಿಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಶಾಂತಿ ಮತ್ತು ಸುವ್ಯವಸ್ಥೆ ಕ...

ವಿಶ್ವವಿದ್ಯಾನಿಲಯ ಕಾಲೇಜು ನೆಲ್ಯಾಡಿಯಲ್ಲಿ ವಾರ್ಷಿಕೋತ್ಸವದ ಸಂಭ್ರಮ.

Image
ನೆಲ್ಯಾಡಿ : ವಿಶ್ವವಿದ್ಯಾನಿಲಯ ಕಾಲೇಜು ನೆಲ್ಯಾಡಿಯಲ್ಲಿ 2025ರ ಮೇ 28, ಬುಧವಾರದಂದು ಕಾಲೇಜು ವಾರ್ಷಿಕೋತ್ಸವವು ವಿಜೃಂಭಣೆಯಿಂದ ಜರಗಿತು. ಬೆಳಿಗ್ಗೆ 10.30 ಗಂಟೆಗೆ ಆರಂಭವಾದ ಸಭಾ ಕಾರ್ಯಕ್ರಮವು ಬಹುಮಾನ ವಿತರಣೆಯೊಂದಿಗೆ ಸಂಭ್ರಮಪೂರ್ಣವಾಗಿತ್ತು. ಕಾರ್ಯಕ್ರಮದಲ್ಲಿ ಕಾಲೇಜು ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಉಷಾ ಅಂಚನ್, ಶಿಕ್ಷಕರ ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಉದಯ್, ಖಜಾಂಜಿಯಾದ ಶ್ರೀ ವಿಶ್ವನಾಥ್ ಶೆಟ್ಟಿ, ಸದಸ್ಯರಾದ ಶ್ರೀ ಸತೀಶ್ ಮತ್ತು ಶ್ರೀ ಪ್ರಶಾಂತ್ ಸಿ ಎಚ್ ಹಾಗೂ ಸಂಘದ ಸದಸ್ಯರಾದ ಶ್ರೀಮತಿ ಸೇಸಮ್ಮ ಅವರು ಅತಿಥಿಗಳಾಗಿ ಭಾಗವಹಿಸಿದರು. ಕಾಲೇಜಿನ ಸಂಯೋಜಕರಾದ ಡಾ. ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾಥ೯ಗಳು ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ತೋರಿದ ಪ್ರತಿಭೆಗಾಗಿ ಪಟಕ ಹಾಗೂ ಪ್ರಶಸ್ತಿ ಪತ್ರಗಳೊಂದಿಗೆ ಸನ್ಮಾನಿತರಾದರು. ಶ್ರೀಮತಿ ಚಂದ್ರಕಲಾ ಸ್ವಾಗತಿಸಿದರು, ಡಾ. ಸೀತಾರಾಮ್ ಅವರು ಕಾಲೇಜಿನ ವಾರ್ಷಿಕ ಚಟುವಟಿಗಳ ವರದಿಯನ್ನು ಮಂಡಿಸಿದರು. ಶ್ರೀಯುತ ಸಚಿನ್ ಎನ್ ಟಿ ವಂದಿಸಿದರು ಹಾಗೂ ಶ್ರೀಮತಿ ಶ್ರುತಿ ಮತ್ತು ಪಾವನ ರೈ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಶಿಕ್ಷಕ ರಕ್ಷಕ ಸಂಘದ ಹಾಗೂ ಅನುಷ್ಠಾನ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಪೋಷಕರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಭಾಗಿ ಸೇರಿದ್ದರು.

ಬಿಳಿನೆಲೆ ಕೈಕಂಬ ಯುವಕ ಮಂಡಲದ ಸುವರ್ಣ ಮಹೋತ್ಸವ ವಿಜೃಂಭಣೆಯಿಂದ"ಯುವಶಕ್ತಿ ಸಂಘಟಿತ ರಾಗಿ, ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಿ" - ಶಾರದಾ ದಿನೇಶ್

Image
ಸುಬ್ರಹ್ಮಣ್ಯ , ಮೇ 27 – ಕಡಬ ತಾಲೂಕು ಬಿಳಿನೆಲೆ ಕೈಕಂಬ ಯುವಕ ಮಂಡಲವು ತನ್ನ 50 ವರ್ಷದ ಸುವರ್ಣ ಮಹೋತ್ಸವವನ್ನು ಜರುಗಿಸಿಕೊಂಡಿತು. ಬಿಳಿನೆಲೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶಾರದಾ ದಿನೇಶ್ ಅವರು ಕಾರ್ಯಕ್ರಮ ಉದ್ಘಾಟಿಸಿ, ಯುವಕರು ಸಂಘಟಿತರಾಗಿ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು. ಬೆಳಗ್ಗೆ ಗಣಪತಿ ಹವನ, ಭಜನೆ ಬಳಿಕ ನೂತನ ಕಟ್ಟಡವನ್ನು ಶ್ರೀಮತಿ ಲೀಲಾವತಿ ದೇವರಾಜ್ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಶಿವಪ್ರಸಾದ್ ನಡುತೋಟ ವಹಿಸಿದ್ದರು. ಪ್ರಮುಖ ಅತಿಥಿಗಳಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ,ಸುಧೀರ್ ಕುಮಾರ್ ಶೆಟ್ಟಿ, ವೆಂಕಟ ಒಳಲಂಬೆ, ಶಿವಪ್ರಸಾದ್ ಮೈಲೇರಿ, ವಾಡ್ಯಪ್ಪ ಗೌಡ, ಮತ್ತು ಇತರ ಗಣ್ಯರು ಉಪಸ್ಥಿತರಿದ್ದರು. ದಾನ ಧಾರ್ಮಿಕರಲ್ಲಿ ₹20,000, ₹10,000 ಮತ್ತು ₹5,000 ಮೀರಿದ ದಾನಿಗಳನ್ನು ಗೌರವಿಸಲಾಯಿತು. ಪ್ರವೀಣ್ ಕುಮಾರ್ ಪಿಲಿಕಜೆ ಸ್ವಾಗತ, ವಿಜಯಕುಮಾರ್ ನಡುತೋಟ ಪ್ರಸ್ತಾವನಾ, ಹರೀಶ್ ಚೇರು ಧನ್ಯವಾದ ಸಲ್ಲಿಸಿದರು. ಕಾರ್ಯಕ್ರಮ ನಿರೂಪಣೆಯನ್ನು ಜಯಪ್ರಕಾಶ್ ಎರ್ಮೈಲ್ ಮಾಡಿದರು. ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಮಕ್ಕಳ ನೃತ್ಯ, ಯುವಕರ ಡ್ಯಾನ್ಸ್ ಬೀಟ್, ದಿನೇಶ್ ಕೊಡಪದವ್ ಅವರ ನೇತೃತ್ವದಲ್ಲಿ ಯಕ್ಷ. ತೆಲಿಕೆ ಪ್ರದರ್ಶನ ನಡೆಯಿತು.

ಪಂಜ ಪಶು ಆಸ್ಪತ್ರೆಯಲ್ಲಿ ಕಳ್ಳತನ – ರೂ.11,200 ಮೌಲ್ಯದ ಇನ್ವರ್ಟರ್ ಕಳವು: ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

Image
ಪಶು ಆಸ್ಪತ್ರೆಯಲ್ಲಿ ಕಳ್ಳತನ – ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಸುಳ್ಯ ತಾಲೂಕು ಐವತ್ತೊಕ್ಲು ಗ್ರಾಮದಲ್ಲಿರುವ ಪಂಜ ಪಶು ಆಸ್ಪತ್ರೆಯಲ್ಲಿ ಕಳ್ಳತನ ನಡೆದಿರುವ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣದ ಅನುಸಾರ Cruze+ 2kv Inverter ಒಂದನ್ನು ಅಪರಿಚಿತ ವ್ಯಕ್ತಿಗಳು ಕಳವು ಮಾಡಿದ್ದಾರೆ. ಪಶು ಆಸ್ಪತ್ರೆಯ ಮುಖ್ಯ ಪಶು ವೈಧ್ಯಾಧಿಕಾರಿಗಳಾದ ಡಾ. ಬಿ.ಕೆ. ಸೂರ್ಯನಾರಾಯಣ, ಅವರು ಈ ಬಗ್ಗೆ ದೂರು ದಾಖಲಿಸಿದ್ದಾರೆ. ಅವರು 2025ರ ಮೇ 23ರಂದು ಸಂಜೆ 4 ಗಂಟೆಗೆ ಆಸ್ಪತ್ರೆ ಬಾಗಿಲು ಹಾಕಿ, ಬೀಗ ಹಾಕಿ ತೆರಳಿದ್ದರು. ನಂತರ 24 ಮತ್ತು 25ರಂದು (ಶನಿವಾರ ಮತ್ತು ಭಾನುವಾರ) ಆಸ್ಪತ್ರೆ ಮುಚ್ಚಲಾಗಿತ್ತು. ಮೇ 26ರಂದು ಬೆಳಿಗ್ಗೆ 9 ಗಂಟೆಗೆ ಆಸ್ಪತ್ರೆಗೆ ಆಗಮಿಸಿದ ಡಿ ದರ್ಜೆಯ ನೌಕರ ನಾರಾಯಣ ನಾಯ್ಕ ಆಸ್ಪತ್ರೆ ಬಾಗಿಲಿಗೆ ಹಾಕಿದ್ದ ಬೀಗ ಮುರಿದ ಸ್ಥಿತಿಯಲ್ಲಿ ಪತ್ತೆಯಾಗಿರುವುದಾಗಿ ತಿಳಿಸಿದ್ದಾರೆ. ಮುರಿದ ಬಾಗಿಲು ಮೂಲಕ ಒಳಗೆ ಪ್ರವೇಶಿಸಿ, ಕಚೇರಿಯ ಒಳಭಾಗದಲ್ಲಿ ಇಡಲಾಗಿದ್ದ Cruze+ 2kv inverter ಅನ್ನು ಕಳ್ಳತನ ಮಾಡಲಾಗಿದೆ ಎಂದು ತಿಳಿಸಲಾಗಿದೆ. ಕಳವಾದ inverter ನ ಮೌಲ್ಯ ರೂ.11,200/- ಆಗಿದೆ. ಈ ಕುರಿತು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ಸಂಖ್ಯೆ 27/2025, ಭಾರತೀಯ ನ್ಯಾಯ ಸಂಹಿತೆ (BNS-2023) ಅಡಿಯಲ್ಲಿ ಕಲಂ 331(3), 331(4), 305 ಅನ್ವಯ ಪ್ರಕರಣ ದಾಖಲಿಸಲ...

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಭಕ್ತರಿಗೆ ದೇವರ ಪ್ರಸಾದ ರೂಪದಲ್ಲಿ ಬೆಳಗಿನ ಉಪಹಾರ: ಮೇ 30ರಿಂದ ಆರಂಭ.

Image
ಕುಕ್ಕೆ  ಸುಬ್ರಹ್ಮಣ್ಯ , ಮೇ 28 – ಪ್ರಸಿದ್ಧ ತೀರ್ಥಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರಿಗಾಗಿ ಹೊಸದೊಂದು ಸಹಾಯಧರ್ಮದ ಯೋಜನೆಗೆ ದೇವಸ್ಥಾನ ಆಡಳಿತ ಸಮಿತಿ ಚಾಲನೆ ನೀಡುತ್ತಿದೆ. ಮೇ 30ರಂದು ಬೆಳಿಗ್ಗೆ 8 ಗಂಟೆಗೆ 'ಉಚಿತ ಬೆಳಗಿನ ಉಪಹಾರ ಯೋಜನೆ'ಯನ್ನು ಅಧಿಕೃತವಾಗಿ ಆರಂಭಿಸಲಾಗುವುದು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ದೇವಸ್ಥಾನದ ಸಮಿತಿ ಅಧ್ಯಕ್ಷರು, "ಭಕ್ತರಿಗೆ ಹೆಚ್ಚು ಸೌಲಭ್ಯ ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸುತ್ತಿದ್ದೇವೆ. ಪ್ರತಿದಿನ ಬೆಳಿಗ್ಗೆ 8 ರಿಂದ 10ರವರೆಗೆ ಉಪಹಾರವನ್ನು ನೀಡಲಾಗುವುದು. ಇದು ದೇವರ ಪ್ರಸಾದದ ರೂಪದಲ್ಲಿ ಲಭ್ಯವಾಗುತ್ತದೆ," ಎಂದು ಹೇಳಿದರು. ಈ ಉಪಹಾರ ವ್ಯವಸ್ಥೆಯಲ್ಲಿ ಉಪ್ಪಿಟ್ಟು, ಅವಲಕ್ಕಿ, ಹೆಸರುಕಾಳು, ಪುಳಿಯೋಗರೆ, ಪೊಂಗಲ್ ಮುಂತಾದ ಆಹಾರಗಳೊಂದಿಗೆ ಕಷಾಯವನ್ನೂ ನೀಡಲಾಗುತ್ತದೆ. ಪ್ರತಿದಿನ ಒಂದೊಂದು ಬಗೆಯ ಉಪಹಾರ ಸಿಗಲಿದ್ದು, ಇದು ಷಣ್ಮುಖ ಭೋಜನ ಶಾಲೆಯಲ್ಲಿ ಲಭ್ಯವಿರುತ್ತದೆ. "ಈ ಯೋಜನೆ ಭಕ್ತರಲ್ಲಿ ಸಂತೋಷ ಮೂಡಿಸುತ್ತದೆ ಎಂಬ ವಿಶ್ವಾಸವಿದೆ. ಯಾವುದೇ ನ್ಯೂನತೆಗಳಿದ್ದರೆ ಭಕ್ತಾದಿಗಳು ಸಲಹೆ-ಸೂಚನೆ ನೀಡಬೇಕು. ಈ ಸೇವೆ ಶತಮಾನದ ಕಾಲ ಮುಂದುವರಿಯಲಿ ಎಂಬ ಆಶಯವಿದೆ," ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತ್ತಗುಂಡಿ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶ್...

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನವ್ಯವಸ್ಥಾಪನಾ ಸಮಿತಿ – ವಿಪತ್ತು ನಿರ್ವಹಣಾ ಕಾರ್ಯಪಡೆ ರಚನೆ.

Image
ಕುಕ್ಕೆ ಸುಬ್ರಹ್ಮಣ್ಯ : ಮೇ,28,ದಕ್ಷಿಣ ಕನ್ನಡ ಜಿಲ್ಲೆಯಾದ್ಯಾಂತ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಭಕ್ತಾದಿಗಳ ಸುರಕ್ಷತೆ ಹಾಗೂ ದೇವಾಲಯದ ವ್ಯಾಪ್ತಿಯಲ್ಲಿ ಪ್ರಾಕೃತಿಕ ವಿಪತ್ತುಗಳಿಂದ ರಕ್ಷಣೆ ಮತ್ತು ತುರ್ತು ನಿರ್ವಹಣೆಗೆ ಸಕಾಲಿಕ ಕ್ರಮ ಕೈಗೊಳ್ಳುವ ಉದ್ದೇಶದಿಂದ, ಶ್ರೀ ದೇವಾಲಯದ ವ್ಯಾಪ್ತಿಯೊಳಗೆ – ಇಂಜಾಡಿ, ರಥಬೀದಿ, ಕುಮಾರಧಾರಾ ನದಿತೀರ, ಆದಿ ಸುಬ್ರಹ್ಮಣ್ಯ ಮೊದಲಾದ ಭಾಗಗಳಲ್ಲಿ – ವಿಪತ್ತು ನಿರ್ವಹಣಾ ಕಾರ್ಯಪಡೆನ್ನು ರಚಿಸಲಾಗಿದ್ದು, ಈ ಕೆಳಗಿನಂತೆ ಸಜ್ಜುಗೊಳಿಸಲಾಗಿದೆ: --- 1. ವಿಪತ್ತು ನಿರ್ವಹಣಾ ಕಾರ್ಯಪಡೆ ಮೇಲುಸ್ತುವಾರಿ ಸಮಿತಿ ಅಧ್ಯಕ್ಷರು: ಶ್ರೀ ಹರೀಶ್ ಇಂಜಾಡಿ – ಅಧ್ಯಕ್ಷರು, ವ್ಯವಸ್ಥಾಪನಾ ಸಮಿತಿ – 📞 9448381600 ಸದಸ್ಯರು: ಶ್ರೀ ಅಶೋಕ್ ನೆಕ್ರಾಜೆ – ಸದಸ್ಯರು – 📞 9446163590 ಶ್ರೀಮತಿ ಸೌಮ್ಯಭರತ್ – ಸದಸ್ಯರು – 📞 9448918125 ಶ್ರೀ ಲೋಲಾಕ್ಷ ಕೈಕಂಬ – ಮಾಸ್ಟರ್ ಪ್ಲಾನ್ ಮೇಲುಸ್ತುವಾರಿ ಸಮಿತಿ ಸದಸ್ಯ – 📞 9481564099 ಶ್ರೀ ಸತೀಶ್ ಕೂಜುಗೋಡು – ಸದಸ್ಯ – 📞 9449103511 ಶ್ರೀ ಪವನ್ ಎಂ.ಡಿ – ಸದಸ್ಯ – 📞 83108002480 ಉಸ್ತುವಾರಿ ಅಧಿಕಾರಿ: ಎಸ್.ಜೆ.ಯೇಸುರಾಜ್ ಸಾ., ಕಾರ್ಯನಿರ್ವಹಣಾಧಿಕಾರಿ – 📞 9019424450 ಶ್ರೀ ಉದಯಕುಮಾರ್ ಕೆ., ಇಂಜಿನಿಯರ್ – 📞 9448548559 --- 2 . ವಿಪತ್ತು ನಿರ್ವಹಣಾ ಸಿಬ್ಬಂದಿ 1. ಶ್ರೀ ಯೋಗೀಶ ಎಂ. (ಆರೋಗ್ಯ ...

ಕುಮಾರಧಾರ ಸ್ನಾನಘಟ್ಟಕ್ಕೆ ತಹಶಿಲ್ದಾರ್ ಪ್ರಭಾಕರ ಖಜೂರೆ ಹಾಗೂ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಭೇಟಿ – ಭಕ್ತರಿಗೆ ತಾತ್ಕಾಲಿಕ ನಿಷೇಧ.

Image
ಸುಬ್ರಹ್ಮಣ್ಯ , ಮೇ 27: ವಿಪರೀತ ಮಳೆ ಪರಿಣಾಮ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಭಕ್ತರ ಸುರಕ್ಷತೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಕಡಬ ತಹಶಿಲ್ದಾರ್ ಶ್ರೀ ಪ್ರಭಾಕರ ಖಜೂರೆ ಅವರು ಮೇ 27ರಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅವರ ಜೊತೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರು ಸಹ ಉಪಸ್ಥಿತರಿದ್ದರು.  ತಹಶಿಲ್ದಾರ್ ಅವರು ಭಕ್ತರು ಸ್ನಾನಘಟ್ಟಕ್ಕೆ ಇಳಿಯದಂತೆ ತಾತ್ಕಾಲಿಕ ಆದೇಶ ಹೊರಡಿಸಿದ್ದು, ಎಚ್ಚರಿಕೆ ಕ್ರಮವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಇದೇ ವೇಳೆ, ನಿರ್ಮಾಣ ಹಂತದಲ್ಲಿರುವ ಹೊಸ ಸೇತುವೆ ಹಾಗೂ ಎತ್ತರದ ಸಂಪರ್ಕ ರಸ್ತೆ ಕಾಮಗಾರಿಗಳ ಸ್ಥಿತಿಗತಿಯನ್ನು ಪರಿಶೀಲಿಸಿ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸ್ನಾನಘಟ್ಟದಲ್ಲಿ ಶಾಶ್ವತ ತಡೆ ಬೇಲಿ ನಿರ್ಮಾಣ – ಅಧ್ಯಕ್ಷ ಹರೀಶ್ ಇಂಜಾಡಿ ಸ್ಪಷ್ಟನೆ ಕುಕ್ಕೆ ಸುಬ್ರಹ್ಮಣ್ಯ ಸುಮಾರು ಆರುವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಸುಬ್ರಹ್ಮಣ್ಯ–ಪುತ್ತೂರು ರಸ್ತೆಯನ್ನು ಎತ್ತರಗೊಳಿಸುವ ಕಾಮಗಾರಿಯ ಜೊತೆಗೆ ದರ್ಪಣ ತೀರ್ಥ ನದಿಗೆ ಹೊಸ ಸೇತುವೆ ನಿರ್ಮಾಣ ಕಾರ್ಯಗಳು ನಡೆಯುತ್ತಿದೆ, ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ ಮಾಧ್ಯಮದೊಂದಿಗೆ ಮಾತನಾಡುತ್ತಾ ಮಾಹಿತಿ ನೀಡಿದರು. ...

ಶಾಸಕಿ ನಯನ ಮೋಟಮ್ಮರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಭೇಟಿ – ಆತ್ಮೀಯ ಸ್ವಾಗತ, ಭಕ್ತಿಭಾವದ ಪೂಜೆ.

Image
ಕುಕ್ಕೆ ಸುಬ್ರಹ್ಮಣ್ಯ ; ಮೇ ,27,ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕ್ಷೇತ್ರದ ಶಾಸಕಿ ಶ್ರೀಮತಿ ನಯನ ಮೋಟಮ್ಮ ಇಂದು ಧಾರ್ಮಿಕ ಪ್ರವಾಸದ ನಿಮಿತ್ತವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಪವಿತ್ರ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ಶಾಸಕಿಯವರ ಆಗಮನದ ಸಂದರ್ಭದಲ್ಲಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ ಹಾಗೂ ಸದಸ್ಯರು ಶಾಲು ಹೊದಿಸಿ ಗೌರವಪೂರ್ವಕವಾಗಿ ಸನ್ಮಾನಿಸಿದರು. ಆತ್ಮೀಯ ಸ್ವಾಗತದ ಮೂಲಕ ಶಾಸಕಿಯವರ ಪ್ರವಾಸವನ್ನು ಸ್ಮರಣೀಯವನ್ನಾಗಿ ಮಾಡಿದ ವ್ಯವಸ್ಥಾಪನಾ ಸಮಿತಿಯು, ದೇವಾಲಯದ ಸೇವೆ ಹಾಗೂ ಸಂಸ್ಕೃತಿಯ ಬಗ್ಗೆ ಸದಾ ಶ್ರದ್ಧೆಯಿಂದ ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ್ ಅಯ್ಯಪ್ಪ ಸೂತಗುಂಡಿ, ಸಮಿತಿಯ ಸದಸ್ಯೆ ಸೌಮ್ಯ ಭರತ್, ಶಾಸಕಿ ಮೋಟಮ್ಮರ ಕುಟುಂಬದ ಸದಸ್ಯರು ಮತ್ತು ಸ್ಥಳೀಯ ಭಕ್ತರು ಉಪಸ್ಥಿತರಿದ್ದರು. ಶಾಸಕಿ ಮೋಟಮ್ಮ ಅವರು ಈ ಸಂದರ್ಭದಲ್ಲಿ ಮಾತನಾಡಿ, “ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ನಾಡಿನ ಧಾರ್ಮಿಕ, ಸಾಂಸ್ಕೃತಿಕ ಪರಂಪರೆಯ ಮಾದರಿಯಾಗಿದೆ. ಇಲ್ಲಿಗೆ ಬರುವುದು ಪ್ರತೀ ಬಾರಿ ಒಂದು ವಿಶಿಷ್ಟ ಅನುಭವ,” ಎಂದು ಹೇಳಿದರು.

ಇಚಲಂಪಾಡಿಯಲ್ಲಿ ಪಶು ಪಾಲನಾ ಹಾಗೂ ಪಶು ವೈದ್ಯಕೀಯ ಇಲಾಖೆಯ ನೂತನ ಕಟ್ಟಡದ ಶಂಕು ಸ್ಥಾಪನೆ.

Image
ಕಡಬ : ದ.ಕ ಜಿಲ್ಲೆ ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಇಚಲಂಪಾಡಿಯಲ್ಲಿ ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ನೂತನ ಕಟ್ಟಡದ ಶಂಕು ಸ್ಥಾಪನಾ ಕಾರ್ಯಕ್ರಮ ಮೇ 24ರಂದು ನಡೆಯಿತು. ಈ ಕಾರ್ಯಕ್ರಮವನ್ನು ಸುಳ್ಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕು. ಭಾಗೀರಥಿ ಮುರುಳ್ಯ ಅವರು ನೆರವೇರಿಸಿದರು. ಅವರು ಕಾರ್ಯಕ್ರಮದಲ್ಲಿ ಮಾತನಾಡುತ್ತಾ, "ಗ್ರಾಮೀಣ ಭಾಗದಲ್ಲಿ ಪಶುಸಂಗೋಪನೆ ಮುಖ್ಯ ಆದಾಯ ಸಾಧನವಾಗಿದ್ದು, ಪಶುಗಳಿಗೆ ಉತ್ತಮ ಚಿಕಿತ್ಸೆ ಮತ್ತು ಸೇವೆಗಳ ಲಭ್ಯತೆ ಗ್ರಾಮೀಣ ಆರ್ಥಿಕತೆಯು ಬೆಳೆಯಲು ಸಹಕಾರಿಯಾಗಲಿದೆ" ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕೃಷ್ಣ ಶೆಟ್ಟಿ ಕಡಬ, ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ್ ಕುಮಾರ್ ಗೌಡ, ಭಾಸ್ಕರ್ ಎಸ್. ಗೌಡ, ಸರ್ವೋತ್ತಮ ಗೌಡ, ಪಿ. ಪಿ. ವರ್ಗಿಸ್, ಉಷಾ ಅಂಚನ್, ವಲ್ಸಮ್ಮ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಈ ನೂತನ ಕಟ್ಟಡದ ಮೂಲಕ ಸ್ಥಳೀಯ ಪಶುಪಾಲಕರಿಗೆ ಸುಲಭವಾಗಿ ವೈದ್ಯಕೀಯ ಸೇವೆಗಳು ಲಭ್ಯವಾಗಲಿದ್ದು, ಪಶುಗಳ ಆರೈಕೆಯ ಮಟ್ಟ ಹೆಚ್ಚಾಗಲಿದೆ. ಗ್ರಾಮಸ್ಥರು ಈ ಹೆಜ್ಜೆಗೆ ಸಂತೋಷ ವ್ಯಕ್ತಪಡಿಸಿದ್ದಾರೆ.

ನೂತನ ಅಧ್ಯಕ್ಷ ಹರೀಶ್ ಇಂಜಾಡಿ ಅವರಿಗೆ ರವಿ ಕಕ್ಕೇ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಸನ್ಮಾನ – ಶುದ್ಧ ಹೃದಯದ ಸೇವೆಗೈಯುವ ನಾಯಕನಿಗೆ ಗೌರವ.

Image
ಕುಕ್ಕೆ ಸುಬ್ರಹ್ಮಣ್ಯ , ಮೇ 25: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಅಭಿಮಾನಿ, ಸೇವೆಗೈಯುವ ಶ್ರದ್ಧಾವಂತರಲ್ಲಿ ಒಬ್ಬರಾದ ಹರೀಶ್ ಇಂಜಾಡಿ ಅವರು ದೇವಾಲಯ ಸಮಿತಿಯ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದನ್ನು ಗೌರವಿಸುವ ಸಲುವಾಗಿ, ರವಿ ಕಕ್ಕೇ ಪದವು ಸಮಾಜ ಸೇವಾ ಟ್ರಸ್ಟ್ ವತಿಯಿಂದ ಭಾವಪೂರ್ಣ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಟ್ರಸ್ಟ್‌ನ ಸ್ಥಾಪಕ ಡಾ. ರವಿ ಕಕ್ಕೇಪದವು ಅವರು ಶಾಲು ಹೊದಿಸಿ, ಫಲಪುಷ್ಪಗಳೊಂದಿಗೆ ಅವರ ಅಧ್ಯಕ್ಷರಿಗೆ ಗೌರವ ಸಲ್ಲಿಸಿದರು. ಕಾರ್ಯಕ್ರಮದ ವೇಳೆ ಮಾತನಾಡಿದ ಡಾ. ರವಿ, “ಹರೀಶಣ್ಣ ನಮ್ಮಲ್ಲಿ ಮನೆಮಗನಂತೆ. ಸುಬ್ರಹ್ಮಣ್ಯದ ಸಣ್ಣ-ದೊಡ್ಡ ಸಮಸ್ಯೆಗಳ ಬಗ್ಗೆ ಎಚ್ಚರಿಕೆಯಿಂದ, ನಿರಂತರವಾಗಿ ಶ್ರಮಿಸುತ್ತಾ ಬಂದಿರುವ ವ್ಯಕ್ತಿ. ಅವರ ಸಾಮಾನ್ಯ ಬದುಕು, ಸರಳತೆಯ ಜೀವನ ಶೈಲಿ, ಯಾವುದೇ ಬಡವನು ಸಹಾಯ ಕೇಳಿದಾಗ ತಕ್ಷಣ ಸ್ಪಂದಿಸುವ ಅವರ ಮನಸ್ಸು ಎಲ್ಲರಿಗೂ ಪರಿಚಿತ,” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ವಿಕಾಸದ ಹಾದಿಯಲ್ಲಿ ನಿಂತ ನಾಯಕ: ಹರೀಶ್ ಇಂಜಾಡಿ ಅವರು ಗ್ರಾಮ ಪಂಚಾಯತ್ ಸದಸ್ಯರಾಗಿ ಬಹುಕಾಲದಿಂದ ಕೆಲಸ ಮಾಡುತ್ತಿರುವಲ್ಲಿ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಉತ್ತಮ ರಸ್ತೆ, ವಿದ್ಯುತ್, ನೀರಿನ ಪೂರೈಕೆ, ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಶ್ರದ್ಧೆಯಿಂದ ಸೇವೆ ಸಲ್ಲಿಸಿದ್ದಾರೆ. ದೇವಾಲಯಕ್ಕೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ,...

ಭಕ್ತಿಮಯ ಭಾವನೆಯಲ್ಲಿ ನೆಲ್ಯಾಡಿ: ಧರ್ಮಶ್ರೀ ಮಕ್ಕಳ ಭಜನಾ ಶಿಬಿರದ ಭವ್ಯ ಸಮಾರೋಪ

Image
ನೆಲ್ಯಾಡಿ: ಮಕ್ಕಳ ಕುಣಿತ ಭಜನಾ ತರಬೇತಿ ಸಮಾರೋಪ ಕಾರ್ಯಕ್ರಮ ವಿಜೃಂಭಣೆಯಿಂದ ನೆರವೇರಿತು. ನೆಲ್ಯಾಡಿ-ಕೌಕ್ರಾಡಿಯ ಶ್ರೀ ಅಯ್ಯಪ್ಪ ಸ್ವಾಮಿ ದೇವಾಸ್ಥಾನದ ಶಬರೀಶ ಕಲಾಮಂದಿರದಲ್ಲಿ ಮೇ 23ರಂದು ಧರ್ಮಶ್ರೀ ಮಹಿಳಾ ಕುಣಿತ ಭಜನಾ ಮಂಡಳಿಯ ವಾರ್ಷಿಕೋತ್ಸವದ ಅಂಗವಾಗಿ ಮಕ್ಕಳ ಕುಣಿತ ಭಜನಾ ತರಬೇತಿ ಶಿಬಿರದ ಸಮಾರೋಪ ಸಮಾರಂಭ ಹಾಗೂ ಆಹ್ವಾನಿತ ತಂಡಗಳಿಂದ ಭಜನಾ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಈ ಕಾರ್ಯಕ್ರಮವನ್ನು ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ (ಕಡಬ ತಾಲೂಕು), ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್(ರಿ), ಪ್ರಗತಿ ಬಂದು ಸ್ವಸಹಾಯ ಸಂಘ ಒಕ್ಕೂಟ ಕೌಕ್ರಾಡಿ ಹಾಗೂ ಅಶ್ವತ್ಥ ಗೆಳೆಯರ ಬಳಗ (ರಿ) ಹೊಸಮಜಲು ಅವರ ಸಹಯೋಗದಲ್ಲಿ ಆಯೋಜಿಸಲಾಗಿತ್ತು. ಉದ್ಘಾಟನೆ ಮತ್ತು ಅಧ್ಯಕ್ಷತೆ: ಕಾರ್ಯಕ್ರಮದ ಉದ್ಘಾಟನೆಯನ್ನು ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಶ್ರೀ ಉದಯಕುಮಾರ್ ಗೌಡ ನೆರವೇರಿಸಿದರು. ಸಭಾಧ್ಯಕ್ಷರಾಗಿ ಮಕ್ಕಳ ತರಬೇತಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಶ್ರೀ ರಮೇಶ್ ಬಾಣಜಾಲು ಅವರು ಕಾರ್ಯನಿರ್ವಹಿಸಿದರು. ಗಣ್ಯರ ಉಪಸ್ಥಿತಿ: ವಿಶಿಷ್ಟ ಅತಿಥಿಗಳಾಗಿ ಶ್ರೀ ಡಾ. ಸದಾನಂದ ಕುಂದರ್ (ಶ್ರೀ ಅಯ್ಯಪ್ಪ ಸ್ವಾಮಿ ದೇವಾಸ್ಥಾನ ಅಧ್ಯಕ್ಷ), ಶ್ರೀ ಬಾಬು ನಾಯ್ಕ್ (ನಿರ್ದೇಶಕರು, ಎಸ್ ಕೆ ಡಿ ಜಿ ವಿ ವೈ ಬಿಸಿ ಟ್ರಸ್ಟ್, ದ.ಕ. ಜಿಲ್ಲೆ), ಶ್ರೀ ಸುಂದರ ಗೌಡ ಒಗ್ಗು (ಅಧ್ಯಕ್ಷರು, ಶ್ರೀ ಮಂಜುನ...

ನೆಲ್ಯಾಡಿ ರಾಮನಗರದಲ್ಲಿ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ – ಶಿಕ್ಷಣ ಪ್ರೋತ್ಸಾಹಕ್ಕೆ ಶ್ಲಾಘನೀಯ ಹೆಜ್ಜೆ.

Image
ನೆಲ್ಯಾಡಿ : ನೆಲ್ಯಾಡಿ ಗ್ರಾಮದ ರಾಮನಗರದ ಅಮೆತ್ತಿ ಮಾರು ಗುತ್ತು ಮನೆಯಲ್ಲಿ ದಾನಿಗಳ ಸಹಕಾರದೊಂದಿಗೆ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮ ಭಾನುವಾರ ವಿಜೃಂಭಣೆಯಿಂದ ಜರಗಿತು.  ಸರಕಾರಿ ಶಾಲೆಗಳಲ್ಲಿ ಓದುತ್ತಿರುವ ಒಂದನೇ ತರಗತಿಯಿಂದ ಪದವಿವರೆಗೆ ನೂರುಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದಲ್ಲಿ ನೋಟ್‌ಬುಕ್‌ಗಳನ್ನು ಉಚಿತವಾಗಿ ವಿತರಣೆ ಮಾಡಲಾಯಿತು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಡಬದ ಸಮಾಜ ಸೇವಕ ಹಾಗೂ ದಾನಿ ಶ್ರೀ ಶ್ರೀಕರ ರೈ ಅಗರಿ ವಹಿಸಿ ಮಾತನಾಡಿದರು: "ಶಿಕ್ಷಣವೆಂದರೆ ಮಾನವನ ಬೆಳವಣಿಗೆಗೆ ಬುನಾದಿ. ಇಂದಿನ ಮಕ್ಕಳಿಗೆ ಉತ್ತಮ ಭವಿಷ್ಯ ನಿರ್ಮಿಸಲು, ಇಂತಹ ಕಾರ್ಯಕ್ರಮಗಳು ಶ್ರೇಷ್ಠ ಮಾದರಿಯಾಗುತ್ತವೆ. ಜಾತಿ-ಧರ್ಮವನ್ನು ಮೀರಿ, ಎಲ್ಲ ವಿದ್ಯಾರ್ಥಿಗಳಿಗೆ ಸಮಾನವಾಗಿ ಪ್ರೋತ್ಸಾಹ ನೀಡುವುದು ಶ್ಲಾಘನೀಯ." ಕಾರ್ಯಕ್ರಮದಲ್ಲಿ ಧಾರ್ಮಿಕ ಮುಖಂಡರಾದ ಶ್ರೀ ರಮೇಶ್ ಗೌಡ ನಾಲ್ಗೊತ್ತು ಅವರು ಭಾಗವಹಿಸಿ ಶುಭ ಹಾರೈಸಿದರು. ಈ ಕಾರ್ಯಕ್ರಮದ ಸಂಚಾಲನೆ ಮಾಡಿದ ನೆಲ್ಯಾಡಿ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು ಮತ್ತು ಕಾರ್ಯಕ್ರಮದ ಮುಖ್ಯ ಸಂಘಟಕರಾದ ಶ್ರೀ ಗಂಗಾಧರ ಶೆಟ್ಟಿ (ಅಮೆತ್ತಿ ಮಾರು ಗುತ್ತು) ಮಾತನಾಡುತ್ತಾ, “ಇದು ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದ 5ನೇ ವರ್ಷ. ಕಳೆದ ಐದು ವರ್ಷಗಳಿಂದ ನಮ್ಮ ಊರಿನ ಸರ್ಕಾರಿ ಶಾಲಾ ಮಕ್ಕಳಿಗೆ ಶೈಕ್ಷಣಿಕ ಪ್ರೋತ್ಸಾಹ ನೀಡು...

ಕಡಬ: ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರ ಬಿದ್ದು ನಾಲ್ವರಿಗೆ ಗಾಯ

Image
ಕಡಬ , ಮೇ 25 – ಸುಬ್ರಹ್ಮಣ್ಯ–ಉಡುಪಿ ರಾಜ್ಯ ಹೆದ್ದಾರಿಯ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದಲ್ಲಿ ರವಿವಾರ ಭಾರೀ ಅಪಘಾತ ಸಂಭವಿಸಿದ್ದು, ಚಲಿಸುತ್ತಿದ್ದ ಕಾರಿನ ಮೇಲೆ ಬೃಹತ್ ಮರ ಉರುಳಿ ಬಿದ್ದು ಚಾಲಕನೊಂದಿಗೆ ಇಬ್ಬರು ಮಹಿಳೆಯರು ಮತ್ತು ಮಗು ಸೇರಿ ನಾಲ್ವರು ಗಾಯಗೊಂಡಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯದಿಂದ ಇಚ್ಲಂಪಾಡಿ ಮೂಲಕ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಕಾರು (ಕೆಎ 14 ಎಂಬಿ 0226) ನೂಜಿಬಾಳ್ತಿಲ ಗ್ರಾಮದ ಕನ್ವಾರೆ ಎಂಬಲ್ಲಿ ಬಂದಾಗ ರಸ್ತೆ ಬದಿಯಲ್ಲಿದ್ದ ಮರ ಆಕಸ್ಮಿಕವಾಗಿ ಕಾರಿನ ಮೇಲೆ ಬಿದ್ದುದು. ಪರಿಣಾಮವಾಗಿ ಕಾರಿನಲ್ಲಿದ್ದವರು ಸಿಲುಕಿಕೊಂಡು ತೀವ್ರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರು ತಕ್ಷಣವೇ ರಕ್ಷಣಾ ಕಾರ್ಯಾಚರಣೆಗೆ ಧುಮುಕಿ, ಗಾಯಾಳುಗಳನ್ನು ಹೊರತೆಗೆದು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಕಳುಹಿಸಿದ್ದಾರೆ. ಕಾರ್ಯಾಚರಣೆಯಲ್ಲಿ ಭಾಗವಹಿಸಿದವರ ಪ್ರಕಾರ, ಗಾಯಾಳುಗಳಿಗೆ ಮುಖ ಮತ್ತು ಕೈ–ಕಾಲುಗಳಿಗೆ ತೀವ್ರ ರಕ್ತಗಾಯಗಳಾಗಿವೆ. ಈ ಘಟನೆ ಕೆಲಕಾಲ ರಸ್ತೆ ಸಂಚಾರಕ್ಕೆ ಅಡ್ಡಿಪಡಿಸಿತು. ಕಾರು ಸಂಪೂರ್ಣವಾಗಿ ಜಖಂಗೊಂಡಿದ್ದು, ಸ್ಥಳೀಯರು ಮರ ತೆರವಿಗೆ ಸಹಕಾರ ನೀಡಿದ್ದಾರೆ.

ಸುವರ್ಣೋತ್ಸವದ ಸ್ಫೂರ್ತಿ: ಬಿಳಿನೆಲೆ ಕೈಕಂಬ ಯುವಕ ಮಂಡಲದಿಂದ ಸಂಭ್ರಮದ ಯುವಸೌಧ ಉದ್ಘಾಟನೆ.

Image
ಸುಬ್ರಹ್ಮಣ್ಯ , ಮೇ 24: ಬಿಳಿನೆಲೆ ಕೈಕಂಬ ಯುವಕ ಮಂಡಲವು ತನ್ನ 50ನೇ ವರ್ಷವನ್ನು ಸಂಭ್ರಮದಿಂದ ಆಚರಿಸಲು ಸಜ್ಜಾಗಿದೆ. ಸುವರ್ಣ ಮಹೋತ್ಸವ ಹಾಗೂ ನೂತನ ಕಟ್ಟಡ ಯುವಸೌಧದ ಉದ್ಘಾಟನಾ ಸಮಾರಂಭವು ಮೇ 25, ಭಾನುವಾರ ನಡೆಯಲಿದೆ. ಬೆಳಿಗ್ಗೆ ನಡೆಯುವ ಉದ್ಘಾಟನಾ ಕಾರ್ಯಕ್ರಮದಲ್ಲಿ ನಿವೃತ್ತ ಬ್ಯಾಂಕ್ ಅಧಿಕಾರಿ ಲೀಲಾವತಿ ದೇವರಾಜ್ ಮುದ್ದಾಜೆ ವೆಂಕಟಪುರ ಅವರು ಯುವಸೌಧವನ್ನು ಉದ್ಘಾಟಿಸಲಿದ್ದಾರೆ. ಸಂಜೆ ಸುವರ್ಣ ಮಹೋತ್ಸವದ ವಿಶೇಷ ಸಭಾ ಕಾರ್ಯಕ್ರಮ ಜರುಗಲಿದ್ದು, ನಂತರ ಪುಟಾಣಿ ವಿದ್ಯಾರ್ಥಿಗಳ ನೃತ್ಯ, ಹಾಡು ಸೇರಿದಂತೆ ಗ್ರಾಮಸ್ಥರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 10 ಗಂಟೆಯಿಂದ ಕುಶಾಲ್ದ ಗುರಿಕಾರಿ ದಿನೇಶ್ ಗೌಡ ಅವರ ಸಾರಥ್ಯದಲ್ಲಿ, ಜಿಲ್ಲೆಯ ಪ್ರಸಿದ್ಧ ಹಾಸ್ಯ ಕಲಾವಿದರೊಂದಿಗೆ ಯಕ್ಷ ಹಾಸ್ಯ ವೈಭವ ನಡೆಯಲಿದ್ದು, ಗ್ರಾಮಸ್ಥರಿಗೆ ಉತ್ತಮ ಮನರಂಜನೆಯೂ ಸಿಕ್ಕಲಿದೆ. ಸರ್ವರಿಗೂ ಸಂಘಟಕರ ವತಿಯಿಂದ ಹಾರ್ದಿಕ ಸ್ವಾಗತ.

ಕೊಂಬಾರು ಗ್ರಾಮದಲ್ಲಿ ಬಹುಮೌಲ್ಯ ಅನುದಾನದ ಮೂಲಕ ನಿರ್ಮಿತ ಅಭಿವೃದ್ಧಿ ಕಾಮಗಾರಿಗಳ ಲೋಕಾರ್ಪಣೆ: ನ್ಯಾಯಮೂರ್ತಿ ರಾಜೇಶ್ ರೈ ಕಲ್ಲಂಗಳರಿಂದ ಉದ್ಘಾಟನೆ.

Image
ಕೊಂಬಾರು, ದಕ್ಷಿಣ ಕನ್ನಡ - ಮೇ 24, 2025: ಕೊಂಬಾರು ಗ್ರಾಮದ ಸಮಗ್ರ ಅಭಿವೃದ್ಧಿಗೆ ಒತ್ತಾಯವಾಗಿ ವಿವಿಧ ಸರ್ಕಾರಿ ಅನುದಾನಗಳ ಸಹಾಯದಿಂದ ನಿರ್ಮಾಣಗೊಂಡ ಬಹುಪ್ರತೀಕ್ಷಿತ ಕಾಮಗಾರಿಗಳನ್ನು ಇಂದು ಗಣ್ಯಾತಿಥಿಗಳ ಉಪಸ್ಥಿತಿಯಲ್ಲಿ ಲೋಕಾರ್ಪಣೆ ಮಾಡಲಾಯಿತು. ಈ ಲೋಕಾರ್ಪಣಾ ಸಮಾರಂಭದಲ್ಲಿ ಕರ್ನಾಟಕ ಹೈಕೋರ್ಟಿನ ಘನತೆವೆತ್ತ ನ್ಯಾಯಮೂರ್ತಿಗಳು ಶ್ರೀ ರಾಜೇಶ್ ರೈ ಕಲ್ಲಂಗಳ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ಕಾಮಗಾರಿಗಳಿಗೆ ಉದ್ಘಾಟನೆ ನೆರವೇರಿಸಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ವಕೀಲರಾದ ಶ್ರೀ ವೈ ಸದಾನಂದ ಪಕ್ಕಳ ಬೈಲೋಳಿ ವಹಿಸಿದ್ದರು. ಲೋಕಾರ್ಪಣೆಗೊಂಡ ಪ್ರಮುಖ ಕಾಮಗಾರಿಗಳು ಈ ಕೆಳಗಿನಂತಿವೆ: ಬಿರ್ಮೆರೆ ಗುಂಡಿ ಸೇತು: ₹50 ಲಕ್ಷ ಅನುದಾನದಲ್ಲಿ ನಿರ್ಮಿತ ಸೇತುವೆ. ಮೆಟ್ಟುತ್ತಾರು ಸೇತು: ₹1 ಕೋಟಿ ಅನುದಾನದಲ್ಲಿ ನಿರ್ಮಿತ ಸೇತುವೆ. ಸಿರಿಬಾಗಿಲು ಶಾಲೆಯಿಂದ ಪಟ್ಟಣ ರಸ್ತೆಗೆ ಭಾಗಶಃ ಕಾಂಕ್ರೀಟ್ ರಸ್ತೆ ಅಭಿವೃದ್ಧಿ: ₹81.5 ಲಕ್ಷ ಅನುದಾನದಲ್ಲಿ ನಿರ್ಮಾಣ. ಗೌರವಾತಿಥಿಗಳು : ಶ್ರೀ ಕೆ.ಎನ್. ಪ್ರವೀಣ್ ಕುಮಾರ್, ವಕೀಲರು, ಹೈಕೋರ್ಟ್ ಬೆಂಗಳೂರು ಶ್ರೀ ಪ್ರವೀಣ್ ಗೌಡ ಎಚ್.ವಿ., ವಕೀಲರು ಮತ್ತು ಪ್ರಧಾನ ಕಾರ್ಯದರ್ಶಿ, ಬೆಂಗಳೂರು ವಕೀಲರ ಸಂಘ ಶ್ರೀ ಎನ್. ಪದ್ಮರಾಜ್ ಗೌಡ, ನಿವೃತ್ತ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀ ಪ್ರಮೋದ್ ಕುಮಾರ್ ಕೆ.ಕೆ., ಸಹಾಯಕ ಇಂಜ...

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಶೀಘ್ರದಲ್ಲೇ ಬೆಳಗಿನ ಉಪಾಹಾರ ಯೋಜನೆ | ಭಕ್ತರಲ್ಲಿ ಸಂತೋಷ.

Image
ಅಧ್ಯಕ್ಷರು ನಡೆಸಿದ ಮೊದಲ ಸಭೆಯಲ್ಲೇ ಭಕ್ತರಿಗೆ ಬಂಪರ್ ಸಡಗರ | ಬೆಳಗಿನ ಉಪಾಹಾರ ಯೋಜನೆ ಘೋಷಣೆ ಕುಕ್ಕೆ ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ನೂತನ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರ ನೇತೃತ್ವದಲ್ಲಿ ನಡೆದ ಮೊದಲ ಸಭೆಯಲ್ಲೇ ಭಕ್ತರಿಗೆ ಸಂತೋಷದ ಸುದ್ದಿ ದೊರಕಿದೆ. ಸಭೆಯಲ್ಲಿ ಪ್ರಮುಖ ನಿರ್ಧಾರವಾಗಿ ಬೆಳಗಿನ ಉಪಾಹಾರ ಯೋಜನೆಯನ್ನು ಶೀಘ್ರ ಜಾರಿಗೆ ತರಲು ತೀರ್ಮಾನಿಸಲಾಗಿದೆ. ಈ ಮೊದಲು ಮಧ್ಯಾಹ್ನ ಹಾಗೂ ರಾತ್ರಿ ಭೋಜನ ಪ್ರಸಾದ ಮಾತ್ರ ಲಭ್ಯವಿದ್ದರೆ, ಈಗ ಬೆಳಗ್ಗೆ ಉಪಾಹಾರವೂ ಸಿಗುವ ಮೂಲಕ ಭಕ್ತರಿಗೆ ಇನ್ನಷ್ಟು ಅನುಕೂಲವಾಗಲಿದೆ. ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆಯೂ ಹೆಚ್ಚಾಗುತ್ತಿರುವುದರಿಂದ ಈ ಯೋಜನೆ ಬಹುಮಾನೀಯ ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ. ಮೆನು ಮತ್ತು ಸಮಯದ ಬಗ್ಗೆ ಅಂತಿಮ ನಿರ್ಧಾರ ಮುಂದಿನ ಸಭೆಗಳಲ್ಲಿ ತೆಗೆದುಕೊಳ್ಳಲಾಗುವುದು. ಈ ಯೋಜನೆಯ ಕಾರ್ಯರೂಪಕ್ಕೆ ಭಕ್ತರು ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ವಸತಿ ವ್ಯವಸ್ಥೆ ಮತ್ತು ಶೌಚಾಲಯಗಳ ಸಂಖ್ಯೆಯೂ ಹೆಚ್ಚಳವಾಗಬೇಕು ಎಂಬ ಬೇಡಿಕೆಯನ್ನು ಭಕ್ತರು ಮುಂದಿಟ್ಟಿದ್ದಾರೆ.

ಸುಬ್ರಮಣ್ಯ ದೇವಸ್ಥಾನ ಆಡಳಿತ ಮಂಡಳಿ ರಚನೆ ಕುರಿತು ಮೂಡಿದ ಗೊಂದಲ – ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಿಂದ ಸ್ಪಷ್ಟನೆ.

Image
ಕುಕ್ಕೆ ಸುಬ್ರಹ್ಮಣ್ಯ ; ಸುಬ್ರಮಣ್ಯ ಶ್ರೀ ಕ್ಷೇತ್ರದ ದೇವಸ್ಥಾನ ಆಡಳಿತ ಮಂಡಳಿ ರಚನೆ ಕುರಿತು ನಡೆದ ಪತ್ರಿಕಾಗೋಷ್ಠಿಯಲ್ಲಿ ಮೂಡಿದ ಗೊಂದಲಕ್ಕೆ ಕಡಬ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪಕ್ಷದ ಹೈಕಮಾಂಡ್ ಮತ್ತು ಜಿಲ್ಲಾಧ್ಯಕ್ಷರ ಭೂಮಿಕೆಯನ್ನು ತೀವ್ರವಾಗಿ ಟೀಕಿಸಿದಂತೆ ಭಾವಿತವಾಗಿದ್ದರೂ, ಅಂದಿನ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಅವರು ಹೇಳಿದರು: "ದೇವಸ್ಥಾನದ ಆಡಳಿತ ಮಂಡಳಿಗೆ ಸರಕಾರ ವೇ ಸದಸ್ಯರನ್ನು ನೇಮಿಸಿದೆ. ಇದರಲ್ಲಿ ಪಕ್ಷದ ಯಾವುದೇ ನೇರ ಪಾತ್ರವಿಲ್ಲ. ನಮ್ಮ ಸರ್ಕಾರ ಅಧಿಕಾರದಲ್ಲಿರುವುದರಿಂದ, ಸರ್ಕಾರದ ನೇಮಕವನ್ನು ಪಕ್ಷದ ನೇಮಕವೆಂದು ತಪ್ಪಾಗಿ ಬಿಂಬಿಸಲಾಗಿದೆ." ಜಿಲ್ಲಾಧ್ಯಕ್ಷರು ನಡೆಸಿದ ಸಭೆಯ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲದಿರುವುದಾಗಿ ಹಾಗೂ ತಮಗೆ ಆಮಂತ್ರಣವೂ ಇರಲಿಲ್ಲವೆಂದೂ ಅವರು ತಿಳಿಸಿದರು. ಪಕ್ಷದ ಚಟುವಟಿಕೆಗಳ ಬಗ್ಗೆ ತನ್ನೊಂದಿಗೆ ಸದಾ ಸಮನ್ವಯವಿರುತ್ತದೆಯೆಂದು ಅವರು ಹೇಳಿದರು. ಆದ್ದರಿಂದ ಸಭೆಯು ಪಕ್ಷದ ಚೌಕಟ್ಟಿನಲ್ಲಿಲ್ಲವೆಂಬುದೇ ಅವರ ಅಭಿಪ್ರಾಯ. ಪತ್ರಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆಗೆ ಆಧಾರವಾಗಿದ್ದು, ದೇವಸ್ಥಾನದ ಆಡಳಿತ ಮಂಡಳಿಯ ಕೆಲ ಸದಸ್ಯರಿಂದ ತಿಳಿಸಲಾದ ಮಾಹಿತಿ. ಆದರೆ ನಂತರ ಆ ಮಾಹಿತಿ ಸತ್ಯಕ್ಕೆ ದೂರವಿದ್ದದ್ದಾಗಿ ತಿಳಿದು ಬಂದಿದೆ. "ಪಕ್ಷದ ತೀರ್ಮಾನಗಳಿಗೆ ನಾನು ಬದ್...

“ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಕೋಟಿ ರೂಪಾಯಿಗಳ ಬೆಳ್ಳಿರಥದ ಮಹಾದಾನ!ಭಕ್ತಿಯಿಂದ ಹೊಳೆದ ಹೃದಯದಿಂದ, ಸುಳ್ಯದ ಡಾ. ಕೆ.ವಿ. ರೇಣುಕಾ ಪ್ರಸಾದ್ ಅವರಿಂದ ನಿಸ್ವಾರ್ಥ ಸೇವೆಯ ಸಂಕೇತ”

Image
"ಭಕ್ತಿಯ ದಾನ ಘೋಷಣೆಗೆ ದೇವರ ಕೃಪೆ – ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ" .                      ಮಾದರಿ ಚಿತ್ರ ಸುಬ್ರಹ್ಮಣ್ಯ , ಮೇ 22: ಭಕ್ತರ ನಂಬಿಕೆಯ ತಾಣವಾದ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಶ್ರದ್ಧೆಯಿಂದ ನಿರ್ಮಿಸಲಾಗುತ್ತಿರುವ ಬೆಳ್ಳಿರಥ ಇಂದು ಎಲ್ಲರ ಗಮನ ಸೆಳೆಯುತ್ತಿದೆ. ಒಂದು ಕೋಟಿ ರೂಪಾಯಿ ಮೌಲ್ಯದ ಈ ರಥವನ್ನು ಸುಳ್ಯದ ಪ್ರಸಿದ್ಧ ಶಿಕ್ಷಣ ತಜ್ಞರು, ಸಾಮಾಜಿಕ ಸೇವಕರಾದ ಡಾ. ಕೆ.ವಿ. ರೇಣುಕಾ ಪ್ರಸಾದ್ ಅವರು ತಮ್ಮ ಸೇವಾಭಾವದಿಂದ ನೀಡುತ್ತಿದ್ದಾರೆ. ರಾಜ್ಯ ಒಕ್ಕಲಿಗ ಸಂಘದ ಉಪಾಧ್ಯಕ್ಷರೂ ಆಗಿರುವ ಡಾ. ಪ್ರಸಾದ್, ಕೆ.ವಿ.ಜಿ. ಸಮೂಹ ಸಂಸ್ಥೆಗಳ ಪ್ರತಿಷ್ಠಿತ ಮುಖ್ಯಸ್ಥರು ಹಾಗೂ ದಿ,ಕುರುಂಜಿಯ ವೆಂಕಟರಮಣ ಗೌಡರ ಪುತ್ರರಾಗಿದ್ದಾರೆ. ಈ ನೂತನ ರಥ ನಿರ್ಮಾಣಕ್ಕೆ ದೇವಾಲಯದ ಆಡಳಿತ ಸಮಿತಿಯಿಂದ ಅಧಿಕೃತ ಅನುಮತಿ ಸಿಕ್ಕಿದ್ದು, ನಿನ್ನೆ ನಡೆದ ನೂತನ ವ್ಯವಸ್ಥಾಪನಾ ಸಮಿತಿಯ ಮೊದಲ ಸಭೆಯಲ್ಲೇ ಈ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದೊಂದು ಭಕ್ತಿಗೆ, ದೇವರ ಕ್ರಪೆಗೆ ಮತ್ತು ನಿಷ್ಠೆಯ ಸಾಕ್ಷಾತ್ಕಾರ ಎಂಬಂತೆ ಭಕ್ತರು ಅಭಿಪ್ರಾಯಪಡುತ್ತಿದ್ದಾರೆ. ರಥ ನಿರ್ಮಾಣ ಮುಂದಿನ ವಾರದಲ್ಲಿ ಆರಂಭಗೊಳ್ಳಲಿದೆ. ಶಾಸ್ತ್ರೋಕ್ತ ಸಂಕಲ್ಪದೊಂದಿಗೆ ಚಾಲನೆ ನೀಡಲಾಗುವುದು. ಈ ಪವಿತ್ರ ಕಾರ್ಯಕ್ಕೆ ರಾಷ್ಟ್ರ ಪ್ರಶಸ್ತಿ ವಿಜೇತ ರಥಶ...

ನೆಲ್ಯಾಡಿ-ಕೊಕ್ಕಡ ಮಾರ್ಗ ಬಂದ್: ಬದಲಿ ಮಾರ್ಗ ಮೂಲಕ ಸಂಚಾರಕ್ಕೆ ಸೂಚನೆ.

Image
ನೆಲ್ಯಾಡಿ-ಕೊಕ್ಕಡ ರಸ್ತೆಯ ಪುತ್ಯೆ ಪ್ರದೇಶದಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಾಣ ಕಾಮಗಾರಿ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಈ ಮಾರ್ಗವನ್ನು ಇಂದಿನಿಂದ ಬಂದ್ ಮಾಡಲಾಗಿದೆ ಎಂದು ಕೌಕ್ರಾಡಿ ಗ್ರಾಮ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಿದೆ. ರಸ್ತೆ ಬಂದ್ ಹಿನ್ನೆಲೆ, ಈ ಮಾರ್ಗದಲ್ಲಿ ಸಂಚರಿಸುವ ವಾಹನಗಳನ್ನು ಬದಲಿ ಮಾರ್ಗಗಳ ಮೂಲಕ ಸಾಗಿಸಲು ಸೂಚನೆ ನೀಡಲಾಗಿದೆ. ಮಾನ್ಯ ಜಿಲ್ಲಾಧಿಕಾರಿಗಳ ಆದೇಶದಂತೆ, ಪುತ್ಯೆ ಎಂಬಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಕೊಕ್ಕಡಕ್ಕೆ ಸಂಚರಿಸುವ ವಾಹನಗಳು ಈಗಿನಿಂದ ನೆಲ್ಯಾಡಿ, ಪಡ್ಡಡ್ಕ, ಹಾರ, ಮಾಯಿಲಕೋಟೆ ಮಾರ್ಗವಾಗಿ ಸಂಚರಿಸಬಹುದು. ಈ ಕುರಿತು ಮಾಹಿತಿ ನೀಡಿದ ಕೌಕ್ರಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಉದಯ್ ಕುಮಾರ್ ಗೌಡ ಮಾಧ್ಯಮಗಳಿಗೆ ಮಾತನಾಡಿ, ಸಾರ್ವಜನಿಕರು ಸಹಕಾರ ನೀಡುವುದರಿಂದ ಕಾಮಗಾರಿ ಗತಿ ಪಡೆಯಲಿದ್ದು, ಭವಿಷ್ಯದಲ್ಲಿ ಉತ್ತಮ ರಸ್ತೆ ಸಂಪರ್ಕ ಕಲ್ಪಿಸುವ ಉದ್ದೇಶವಿದೆ ಎಂದು ತಿಳಿಸಿದರು.

ಶಿರಾಡಿ: ಗ್ಯಾಸ್ ಟ್ಯಾಂಕರ್ ಪಲ್ಟಿ – ಚಾಲಕ ಗಾಯಗೊಂಡ ಘಟನೆ ನಡೆದಿದೆ.

Image
ನೆಲ್ಯಾಡಿ : ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟಿ ಬಳಿ ಇರುವ ಕೊಡ್ಯಕಲ್ ಎಂಬಲ್ಲಿ ಮೇ 21ರಂದು ಸಂಜೆ 4.30ರ ಸುಮಾರಿಗೆ ಗ್ಯಾಸ್ಟ್ಯಾಂಕರ್ ಪಲ್ಟಿಯಾಗಿ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಮಂಗಳೂರಿನಿಂದ ಬೆಂಗಳೂರಿಗೆ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್, ಕೊಡ್ಯಕಲ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಪಲ್ಟಿಯಾಗಿದೆ. ಈ ಅಪಘಾತದಲ್ಲಿ ಚಾಲಕನಿಗೆ ತೀವ್ರ ಗಾಯಗಳಾಗಿದ್ದು, ಕೂಡಲೇ ಆಸ್ಪತ್ರೆಗೆ ಸಾಗಿಸಲಾಗಿದೆ. ಭಾಗ್ಯವಶಾತ್, ಟ್ಯಾಂಕರ್‌ನಿಂದ ಅನಿಲ ಸೋರಿಕೆ ಸಂಭವಿಸಿಲ್ಲ. ಪರಿಣಾಮವಾಗಿ ಹೆದ್ದಾರಿಯ ಒಂದು ಬದಿಯಲ್ಲಿ ಮಾತ್ರ ವಾಹನ ಸಂಚಾರವನ್ನು ಅನುಮತಿಸಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಉಚಿತ ವೈದ್ಯಕೀಯ ತಪಾಸಣಾ ಶಿಬಿರಮೇ 21ರಿಂದ 30ರವರೆಗೆ ಸಾರ್ವಜನಿಕರಿಗೆ ಸುವರ್ಣಾವಕಾಶ.

Image
ಕುಕ್ಕೆ ಸುಬ್ರಹ್ಮಣ್ಯ : ಶ್ರೀ ಸುಬ್ರಹ್ಮಣ್ಯ ಮಠದ ಆವರಣದಲ್ಲಿ, ಸದಾನಂದ ವೈದ್ಯಕೀಯ ಮತ್ತು ದಂತ ಆರೋಗ್ಯ ಕೇಂದ್ರ ಹಾಗೂ ಶ್ರೀ ಸುಬ್ರಹ್ಮಣ್ಯ ಮಠದ ಜಂಟಿ ಆಶ್ರಯದಲ್ಲಿ ಮೇ 21ರಿಂದ ಮೇ 30ರ ತನಕ ಸಾರ್ವಜನಿಕರಿಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರ ನಡೆಯುತ್ತಿದೆ. ಈ ಶಿಬಿರದ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಡಾ. ವಿಕ್ರಂ ಶೆಟ್ಟಿ ಅವರು, “ಈ ಉಚಿತ ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ ಮತ್ತು ಇತರ ಆರೋಗ್ಯ ಸಮಸ್ಯೆಗಳ ತಪಾಸಣೆ ನೆರವೇರಿಸಲಾಗುತ್ತದೆ. ಡಾ. ಗಿರೀಶ್ ಹಾಗೂ ಡಾ. ಪುಲ್ಕಿತ್ ಅವರ ತಜ್ಞರ ತಂಡ ಈ ಸೇವೆ ನೀಡಲಿದೆ. ಸಾರ್ವಜನಿಕರು ಇದನ್ನು ಲಾಭಪಡಿಸಿಕೊಳ್ಳಬೇಕೆಂದು ನಾವು ಮನವಿ ಮಾಡುತ್ತೇವೆ,” ಎಂದು ತಿಳಿಸಿದ್ದಾರೆ. ಸ್ಥಳ: ಶ್ರೀ ಸುಬ್ರಹ್ಮಣ್ಯ ಮಠ ಆವರಣ, ಕುಕ್ಕೆ ಸುಬ್ರಹ್ಮಣ್ಯ ದಿನಾಂಕ: ಮೇ 21ರಿಂದ ಮೇ 30ರವರೆಗೆ ಸಮಯ: ಬೆಳಿಗ್ಗೆ 9 ರಿಂದ ಮಧ್ಯಾಹ್ನ 1ರ ತನಕ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಬಂದು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಆಯೋಜಕರು ಕೋರಿದ್ದಾರೆ.