Posts

Showing posts from May, 2026

ಕುಕ್ಕೆ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ 24×7 ಸೇವೆ ಜಾರಿಗೆ ಒತ್ತಾಯ: ವಾರದ ಗಡುವು, ಇಲ್ಲದಿದ್ದರೆ ಧರಣಿ ಎಚ್ಚರಿಕೆ.

Image
ಕುಕ್ಕೆ ಸುಬ್ರಹ್ಮಣ್ಯ , ಮೇ 30: ಸುಬ್ರಹ್ಮಣ್ಯದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು 24×7 ಆಸ್ಪತ್ರೆಯಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಅಗತ್ಯ ಕಟ್ಟಡ, ವೈದ್ಯಕೀಯ ಸಲಕರಣೆಗಳು ಹಾಗೂ ಮೂಲಸೌಕರ್ಯಗಳು ಈಗಾಗಲೇ ಲಭ್ಯವಿದ್ದರೂ, ಪೂರ್ಣ ಪ್ರಮಾಣದ 24 ಗಂಟೆಗಳ ಆರೋಗ್ಯ ಸೇವೆ ಆರಂಭಿಸುವ ಕುರಿತು ಅಧಿಕಾರಿಗಳು ಯಾವುದೇ ಸ್ಪಷ್ಟ ಕ್ರಮ ಕೈಗೊಂಡಿಲ್ಲ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಕುರಿತು ಸಂಬಂಧಿಸಿದ ಸಚಿವರು ಹಾಗೂ ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಹಲವು ಬಾರಿ ಪತ್ರದ ಮೂಲಕ ಮನವಿ ಸಲ್ಲಿಸಲಾಗಿದ್ದರೂ, ಇದುವರೆಗೆ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮೇ 30ರಿಂದ ಒಂದು ವಾರದ ಗಡುವು ನೀಡಲಾಗಿದ್ದು, ಈ ಅವಧಿಯೊಳಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ (ಡಿಎಚ್‌ಒ) ಅವರು ಸ್ವತಃ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ, 24×7 ಆಸ್ಪತ್ರೆ ಸೇವೆ ಜಾರಿಗೆ ಸಂಬಂಧಿಸಿದಂತೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಆಗ್ರಹಿಸಲಾಗಿದೆ. ರಾತ್ರಿ ಸಮಯದಲ್ಲಿ ತುರ್ತು ಆರೋಗ್ಯ ಸೇವೆಗಳ ಕೊರತೆಯಿಂದ ಗ್ರಾಮಸ್ಥರು ಹಾಗೂ ಭಕ್ತಾದಿಗಳು ತೊಂದರೆ ಅನುಭವಿಸುತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯದಂತಹ ಧಾರ್ಮಿಕ ಕ್ಷೇತ್ರದಲ್ಲಿ ದಿನದ 24 ಗಂಟೆಗಳ ಆರೋಗ್ಯ ಸೇವೆ ಅತ್ಯಗತ್ಯವಾಗಿದೆ ಎಂದು ಮನವಿ ಪ...

*ಶಿಕ್ಷಕನೊಳಗಿದ್ದ ಸೈನಿಕ* *ಶ್ರೀ ವಿಷ್ಣುಪ್ರಸಾದ್. ಸಿ* *ವಿಶ್ರಾಂತ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು*

Image
ಹೌದು, ಸರಕಾರಿ ಸೇವೆ ದೇವರ ಸೇವೆ. ಸುಮಾರು ಮೂವತ್ತೈದು ವರ್ಷಗಳ ನಿರಂತರ ಸೇವೆ. ಅದರಲ್ಲೂ ತಾಲೂಕು, ಜಿಲ್ಲಾ ವ್ಯಾಪ್ತಿಯ ಅಧಿಕಾರಿಯಾಗಿ ಕಪ್ಪು ಚುಕ್ಕೆ ಇಲ್ಲದೆ ನಿವೃತ್ತಿ ಹೊಂದುವುದು ಇಂದಿನ ದಿನಗಳಲ್ಲಿ ಸುಲಭದ ಮಾತಲ್ಲ. ಜನರು, ಜನರಿಗಾಗಿ, ಜನರಿಂದ ನಡೆಯುವ ಸರ್ಕಾರಿ ವ್ಯವಸ್ಥೆಯಲ್ಲಿ ದಡ ಸೇರುವುದು ದೊಡ್ಡ ಸಾಧನೆಯೇ ಸರಿ.   ಅರ್ಥ ಮಾಡಿಕೊಳ್ಳುವ ಮನಸ್ಸು, ಕ್ಷಮಿಸುವ ಗುಣ, ಕೈಜೋಡಿಸುವ ಸ್ನೇಹ, ಸಮಾಧಾನ ಮಾಡುವ ಹೃದಯ, ಹದವರಿತ ತಾಳ್ಮೆಯ ಮಾತು, ಪ್ರಾಮಾಣಿಕ ದುಡಿಮೆ – ಇವುಗಳೇ ಜೀವನದ ನಿಜವಾದ ಆಸ್ತಿ. ಅದನ್ನೇ ವೃತ್ತಿ ಕೌಶಲ್ಯ ಎನ್ನುತ್ತಾರೆ. ಪದವಿ ಪಡೆದ ಮಾತ್ರಕ್ಕೆ ಇವೆಲ್ಲ ಕೈಗೆಟುಕದು. ಅಂಕ ಗಳಿಸಿದ ಮಾತ್ರಕ್ಕೆ ಸಿದ್ಧಿ, ಸಾಧನೆಯಾಗದು.   *ಬಹುಮುಖ ಪಾತ್ರಧಾರಿ*   ಪುತ್ತೂರು ತಾಲೂಕು ಶಾಲಾ ಶಿಕ್ಷಣ ಇಲಾಖೆಯಲ್ಲಿ ಬಹುಮುಖ ಪಾತ್ರಧಾರಿಯಾಗಿ ಹಲವು ವರ್ಷಗಳಿಂದ ನಮ್ಮೊಂದಿಗೆ ನಮ್ಮವರಾಗಿದ್ದರು. 2026ರ ಮೇ ತಿಂಗಳ 30ನೇ ತಾರೀಕು ಹಸಿರು ಶಾಯಿಯ ಲೇಖನಿಗೆ ವಿಶ್ರಾಂತಿ ನೀಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಮೆಟ್ಟಿಲು ಇಳಿದು ಹೋದವರು ಶ್ರೀ ವಿಷ್ಣುಪ್ರಸಾದ್. ಸಿ. ಮನದಲ್ಲಿ ವಿಶಾಲತೆ, ಸೇವೆಯಲ್ಲಿ ನಮ್ರತೆ, ಸ್ನೇಹದಲ್ಲಿ ಪರಿಶುದ್ಧತೆ, ವ್ಯವಹಾರದಲ್ಲಿ ಸಭ್ಯತೆ, ಮುಖದಲ್ಲಿ ಪ್ರಸನ್ನತೆ, ಪರಿವಾರದಲ್ಲಿ ಏಕತೆ, ಮಾತಿನಲ್ಲಿ ಮಧುರತೆ, ಸಂಬಂಧದಲ್ಲಿ ನಿರ್ಲಿಪ್ತತೆ, ಸಂಸ್ಕಾರದಲ್ಲಿ ಶುದ್...

*ಪಟ್ಲಡ್ಕ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ವಾರ್ಷಿಕೋತ್ಸವ, ಆಹ್ವಾನಿತ ತಂಡಗಳಿಂದ ಭಜನಾ ಕಾರ್ಯಕ್ರಮ ಮತ್ತು ಉಚಿತ ಪುಸ್ತಕ ವಿತರಣೆ.*

Image
ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಪಟ್ಲಡ್ಕ ಗಡಿಯಾಡಿ ಆದಿ ಮೊಗೇರ್ಕಳ ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ದೈವಸ್ಥಾನದ ವಠಾರದಲ್ಲಿ ಮೇ 30ರಂದುಚಾಮುಂಡೇಶ್ವರಿ ಭಜನಾ ಮಂಡಳಿಯ ವಾರ್ಷಿಕೋತ್ಸವ,ಆಹ್ವಾನಿತ ತಂಡಗಳಿಂದ ಭಜನಾ ಕಾರ್ಯಕ್ರಮ, ಉಚಿತ ಪುಸ್ತಕ ವಿತರಣೆ ನಡೆಯಿತು.ಹಿರಿಯ ಭಜಕರಾದ ಪುರುಷೋತ್ತಮ ಉಪ್ಪಿನಂಗಡಿ ದೀಪ ಬೆಳಗಿ ಉದ್ಘಾಟಿಸಿದರು. ಚಾಮುಂಡೇಶ್ವರಿ ಭಜನಾ ಮಂಡಳಿಯ ಅಧ್ಯಕ್ಷರು ಗೀತಾ ನೆಲ್ಯಡ್ಕ ಸಭಾಧ್ಯಕ್ಷತೆ ವಹಿಸಿದ್ದರು, ಕಡಬ ಭಜನಾ ಪರಿಷತ್ ಅಧ್ಯಕ್ಷರು ಸುಂದರ ಗೌಡ ಒಗ್ಗು,ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಾಹಣಾಧಿಕಾರಿ ದಯಾಕರ ರೈ, ಭಜನಾ ತರಬೇತಿ ದಾರ ಹರೀಶ್ ನೆರಿಯ,  ಶ್ರೀ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷರು ತುಕ್ರಪ್ಪ ಶೆಟ್ಟಿ ನೂಜಿ ಮಾತನಾಡಿ ಶುಭ ಹಾರೈಸಿದರು. ಪುರುಷೋತ್ತಮ ಗೌಡ ಮಡ್ಯಾಲ ಗುಂಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಜಿಲ್ಲಾ ಸಮನ್ವಯ ಅಧಿಕಾರಿ ಸಂತೋಷ್ ಅಳಿಯೂರು,ಪಟ್ಲಡ್ಕ ಕ್ಷೇತ್ರದ ಉಪಾಧ್ಯಕ್ಷರು ಹರೀಶ್ ಪಿ,ಮೊದಲಾದವರು ಉಪಸ್ಥಿತರಿದ್ದರು. ಸಾಧಕರಾದ ಹರೀಶ್ ಪಿ, ಪ್ರಕಾಶ್ ರಾವ್, ನವೀನ್, ಸತೀಶ್ ಪಿ,ಬಾಬಣ್ಣ, ಸುಶೀಲ, ಲೀಲಾವತಿ, ಮತ್ತು ದಾನಿಗಳಾದ ಬೆಂಗಳೂರಿನ ತಗ್ಗಟ್ಟಿ ಚೆನ್ನಾಚಾರಿ ಚಂದ್ರಮ್ಮ ಇವರನ್ನು ಸನ್ಮಾನಿಸಲಾಯಿತು. ಶ್ರೀ ಕ್ಷೇತ್ರ ಮಾಣಿಲದ ಪರಮ ಪೂಜ್ಯ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿಗಳು ಆಶೀರ್ವಚನ ನೀಡಿ ಸಾತ್ವಿಕಗುಣಭ...

ಮಂಜುನಾಥ ಭಂಡಾರಿ ಸಚಿವರಾಗಲೆಂದು ಕುಕ್ಕೆ ಶ್ರೀ ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ.

Image
ಕುಕ್ಕೆ ಸುಬ್ರಹ್ಮಣ್ಯ , ಮೇ 30: ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ವಿಧಾನಸಭಾ ಸದಸ್ಯ ಮಂಜುನಾಥ ಭಂಡಾರಿ ಅವರಿಗೆ ಸಚಿವ ಸ್ಥಾನ ದೊರೆಯಲಿ ಎಂದು ಆಶಿಸಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಲಾಯಿತು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಶ್ರೀ ದೇವರ ಸನ್ನಿಧಿಯಲ್ಲಿ ವಿಶೇಷ ಸಂಕಲ್ಪ ನಡೆಸಿ, ಮಂಜುನಾಥ ಭಂಡಾರಿ ಅವರ ರಾಜಕೀಯ ಉನ್ನತಿ, ಉತ್ತಮ ಆರೋಗ್ಯ ಹಾಗೂ ಸಾರ್ವಜನಿಕ ಸೇವೆಯಲ್ಲಿ ಇನ್ನಷ್ಟು ಯಶಸ್ಸು ದೊರೆಯಲೆಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕರು ವಿಶೇಷ ಆಶೀರ್ವಚನ ನೀಡಿ, ಮಂಜುನಾಥ ಭಂಡಾರಿ ಅವರಿಗೆ ಸಚಿವ ಸ್ಥಾನ ದೊರೆಯಲಿ ಎಂದು ಶ್ರೀ ದೇವರಿಗೆ ಪ್ರಾರ್ಥನೆ ಸಲ್ಲಿಸಿದರು, ಈ ಹಿನ್ನೆಲೆಯಲ್ಲಿ ಚಂದ್ರಮಂಡಲ ಉತ್ಸವ ನೆರವೇರಿಸುವಂತೆ ಸಲಹೆ ನೀಡಿದರು ಎಂದು ತಿಳಿದುಬಂದಿದೆ. ಮಂಜುನಾಥ ಭಂಡಾರಿ ಅವರು ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಕಾಂಗ್ರೆಸ್ ನಾಯಕರಾಗಿದ್ದು, ಪಕ್ಷ ಸಂಘಟನೆ ಹಾಗೂ ಜನಸೇವಾ ಕಾರ್ಯಗಳ ಮೂಲಕ ಗಮನ ಸೆಳೆದಿದ್ದಾರೆ. ಜಿಲ್ಲೆಯ ಅಭಿವೃದ್ಧಿ ಹಾಗೂ ಜನಪರ ವಿಚಾರಗಳಲ್ಲಿ ನಿರಂತರವಾಗಿ ಧ್ವನಿಯಾಗಿರುವ ಅವರು ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲಿದ್ದಾರೆ ಎಂಬ ನಿರೀಕ್ಷೆ ಬೆಂಬಲಿಗರ ವಲಯದಲ್ಲಿ ವ್ಯಕ್ತವಾಗುತ್ತಿದೆ. ವಿಶೇಷ ಪ್ರಾರ್ಥನೆಯಲ್ಲಿ ಕುಕ...

ಸಂಸ್ಕೃತ ಸರಳ ಪರೀಕ್ಷಾ ಪ್ರಶಸ್ತಿ ಪತ್ರ ವಿತರಣೆ ಸಮಾರಂಭ ಯಶಸ್ವಿ.

Image
ಸಂಸ್ಕೃತ ಭಾರತಿ ವತಿಯಿಂದ ಮಾರ್ಚ್ ತಿಂಗಳಲ್ಲಿ ನಡೆಸಲಾಗಿದ್ದ “ಸಂಸ್ಕೃತ ಸರಳ ಪರೀಕ್ಷೆ”ಯ ಪ್ರಶಸ್ತಿ ಪತ್ರ ವಿತರಣೆ ಸಮಾರಂಭವು ಮೇ 19, 2026ರಂದು ಸಂಜೆ ಸುಬ್ರಹ್ಮಣ್ಯದಲ್ಲಿ ಸರ್ವೇಶ್ವರ ಕೆಕುಣ್ಣಾಯ ಅವರ ನಿವಾಸದಲ್ಲಿ ವಿಜೃಂಭಣೆಯಿಂದ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ಸಂಸ್ಕೃತ ಗುರುಗಳಾದ ಶ್ರೀಮತಿ ಸ್ವರ್ಣಲತಾ ಅವರು ಸಂಸ್ಕೃತ ಭಾರತಿಯ ಕಾರ್ಯಪರಿಚಯವನ್ನು ನೀಡಿದರು. ಸಂಸ್ಕೃತ ಭಾಷೆಯ ಮಹತ್ವ, ಭಾರತೀಯ ಸಂಸ್ಕೃತಿಯೊಂದಿಗೆ ಅದರ ಅವಿನಾಭಾವ ಸಂಬಂಧ ಹಾಗೂ ಇಂದಿನ ಪೀಳಿಗೆಗೆ ಸಂಸ್ಕೃತ ಕಲಿಕೆಯ ಅಗತ್ಯತೆಯನ್ನು ಅವರು ಸ್ಪಷ್ಟವಾಗಿ ವಿವರಿಸಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕುಮಾರಸ್ವಾಮಿ ವಿದ್ಯಾಲಯದ ಸಂಸ್ಕೃತ ಪ್ರಾಧ್ಯಾಪಕಿ ಶ್ರೀಮತಿ ಪ್ರಮೀಳಾ ಅವರು ಮಾತನಾಡಿ, ಸಂಸ್ಕೃತವು ಕೇವಲ ಒಂದು ಭಾಷೆಯಲ್ಲ, ಭಾರತೀಯ ಜ್ಞಾನ ಪರಂಪರೆಯ ಮೂಲಾಧಾರವಾಗಿದೆ ಎಂದು ಹೇಳಿದರು. ಹಿಂದಿನ ಕಾಲದಲ್ಲಿ ವಿದ್ಯೆ, ಶಾಸ್ತ್ರ, ಆಯುರ್ವೇದ, ಯೋಗ ಹಾಗೂ ಧಾರ್ಮಿಕ ಗ್ರಂಥಗಳೆಲ್ಲವೂ ಸಂಸ್ಕೃತದಲ್ಲಿ ರಚಿತವಾಗಿದ್ದು, ಸಂಸ್ಕೃತ ಕಲಿಕೆಯ ಮೂಲಕ ಭಾಷಾ ಶುದ್ಧತೆ, ಉತ್ತಮ ಸಂಸ್ಕಾರ, ಸೌಜನ್ಯ ಹಾಗೂ ಚಿಂತನಾ ಶಕ್ತಿ ವೃದ್ಧಿಯಾಗುತ್ತದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶ್ರೀಮತಿ ಲತಾ ಸರ್ವೇಶ್ವರ್, ಶ್ರೀಮತಿ ಶೋಭಾ ನಲ್ಲೂರಾಯ, ಶ್ರೀಮತಿ ಕೃಪಾ ಸುಬ್ರಹ್ಮಣ್ಯ, ಶ್ರೀಮತಿ ಸಂಧ್ಯಾ ಶ್ರೀನಿವಾಸ್, ಶ್ರೀಮತಿ ಆಶಾ ವಿ. ...

ಸುಬ್ರಹ್ಮಣ್ಯ ಮಠದಲ್ಲಿ ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆ“ವಸ್ತು ಸಂಗ್ರಹಾಲಯಗಳು ಕೇವಲ ಹಳೆಯ ವಸ್ತುಗಳ ಸಂಗ್ರಹವಲ್ಲ, ಅವು ಜ್ಞಾನ ಮತ್ತು ಸಂಸ್ಕೃತಿಯ ವಿದ್ಯಾಕೇಂದ್ರಗಳು” – ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ.

Image
ಸುಬ್ರಹ್ಮಣ್ಯ, ಮೇ 18: ಅಂತರಾಷ್ಟ್ರೀಯ ವಸ್ತು ಸಂಗ್ರಹಾಲಯ ದಿನಾಚರಣೆಯ ಅಂಗವಾಗಿ ಸುಬ್ರಹ್ಮಣ್ಯದ ಶ್ರೀನಿಕೇತನ ವಸ್ತು ಸಂಗ್ರಹಾಲಯ ಮತ್ತು ಸಂಶೋಧನಾ ಕೇಂದ್ರದಲ್ಲಿ ಸೋಮವಾರ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಕಾರ್ಯಕ್ರಮವನ್ನು ಶ್ರೀ ಸಂಪುಟ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳು ಉದ್ಘಾಟಿಸಿ, ವಸ್ತು ಸಂಗ್ರಹಾಲಯದ ನೂತನ ವೆಬ್‌ಸೈಟ್‌ನ್ನು ಲೋಕಾರ್ಪಣೆಗೊಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಪಾದರು, “ವಸ್ತು ಸಂಗ್ರಹಾಲಯಗಳು ಕೇವಲ ಹಳೆಯ ವಸ್ತುಗಳನ್ನು ಸಂಗ್ರಹಿಸುವ ಸ್ಥಳಗಳಲ್ಲ. ಅವು ನಮ್ಮ ಇತಿಹಾಸ, ಸಂಸ್ಕೃತಿ, ಪರಂಪರೆ, ಆಚರಣೆ ಮತ್ತು ಜೀವನಶೈಲಿಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಮಹತ್ವದ ವಿದ್ಯಾಕೇಂದ್ರಗಳಾಗಿವೆ” ಎಂದು ಹೇಳಿದರು. ಮರದ ಕೆತ್ತನೆಗಳು, ಪುರಾತನ ನಾಣ್ಯಗಳು, ಹಸ್ತಪ್ರತಿಗಳು, ಪೂರ್ವಿಕರು ಬಳಸುತ್ತಿದ್ದ ದಿನನಿತ್ಯದ ಉಪಯೋಗದ ವಸ್ತುಗಳು, ತೂಕ-ಅಳತೆಯ ಸಾಮಗ್ರಿಗಳು, ಜಾನಪದ ವಸ್ತುಗಳು ಹಾಗೂ ಹಳೆಯ ನೋಟುಗಳು ಮುಂತಾದ ಅನೇಕ ಪುರಾತನ ಸಂಗ್ರಹಗಳು ವಿವಿಧ ಕಾಲಘಟ್ಟಗಳ ಸಾಹಿತ್ಯ, ಸಂಸ್ಕೃತಿ ಹಾಗೂ ಸಾಮಾಜಿಕ ಬದುಕಿನ ಬಗ್ಗೆ ಅಮೂಲ್ಯ ಮಾಹಿತಿಯನ್ನು ನೀಡುತ್ತವೆ ಎಂದು ಅವರು ಅಭಿಪ್ರಾಯಪಟ್ಟರು. ಇಂತಹ ಪರಂಪರೆಯನ್ನು ಉಳಿಸಿ ಮುಂದಿನ ತಲೆಮಾರಿಗೆ ತಲುಪಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ...

*ಶಿವಾರು ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘ ಉದ್ಘಾಟನಾ ಕಾರ್ಯಕ್ರಮ*

Image
ಗೋಳಿತ್ತೊಟ್ಟು : ಆಲಂತಾಯ ಗ್ರಾಮದ ಶಿವಾರಿನಲ್ಲಿ ಶಿವಾರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿಯಮಿತದ ನೂತನ ಶಾಖೆಯನ್ನು ಉದ್ಘಾಟನೆಯನ್ನು ದಕ್ಷಿಣಕನ್ನಡ ಸಹಕಾರ ಹಾಲು ಒಕ್ಕೂಟ (ನಿ.) ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ರವಿರಾಜ ಹೆಗ್ಡೆ ಕೂಡವೂರು ಅವರು ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಮೂಲಕ ಮಹಿಳಾ ಸಹಕಾರಿಗಳು ಸಬಲೀಕರಣಗೊಳ್ಳುತ್ತಿದ್ದಾರೆ. ಹಾಲು ಉತ್ಪಾದನೆಯಲ್ಲಿ ಇನ್ನಷ್ಟು ಹೆಚ್ಚಿನ ಸಾಧನೆಯನ್ನು ಮಾಡುವ ಮೂಲಕ ಗ್ರಾಮೀಣ ಭಾಗದಲ್ಲಿ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಬೇಕು. ಗುಣಮಟ್ಟದ ಹಾಲನ್ನು ಸಂಘಕ್ಕೆ ಹಾಕುವುದರ ಮೂಲಕ ಎಲ್ಲ ಸದಸ್ಯರು ಸಹಕರಿಸುವಂತೆ ಶುಭ ಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು ಶಿವಾರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ (ನಿ.) ಇದರ ಅಧ್ಯಕ್ಷರಾದ ಶ್ರೀಮತಿ ಮಾಲತಿ ಜಿ‌. ಇವರು ವಹಿಸಿದ್ದರು. ದಕ್ಷಿಣ ಕನ್ನಡ ಸಹಕಾರ ಹಾಲು ಒಕ್ಕೂಟ ನಿಯಮಿತ ಮಂಗಳೂರು ಇದರ ನಿರ್ದೇಶಕರುಗಳಾದ ಶ್ರೀಮತಿ ಸವಿತಾ ಎನ್. ಶೆಟ್ಟಿ, ಶ್ರೀ ಕೆ. ಚಂದ್ರಶೇಖರ್ ರಾವ್, ಭರತ್ ನೆಕ್ರಾಜೆ, ವ್ಯವಸ್ಥಾಪಕ ನಿರ್ದೇಶಕರಾದ ವಿವೇಕ. ಡಿ. ವ್ಯವಸ್ಥಾಪಕರಾದ ಡಾ|| ರವಿರಾಜ್ ಉಡುಪ ಮುಂತಾದವರು ಶುಭಹಾರೈಸಿದರು. ದ.ಕ. ಜಿಲ್ಲಾ ಹಾಲು ಒಕ್ಕೂಟ ನಿಯಮಿತದ ಉಪವ್ಯವಸ್ಥಾಪಕರಾದ ಡಾ. ಬಿ.ಆರ್. ಸತೀಶ್ ರಾವ್, ಕಡಬ ತಾಲೂಕು ವಿಸ್ತರಣಾಧಿಕಾರಿಗಳಾದ ನಿರ...

ಶ್ರೀ ಸುಬ್ರಹ್ಮಣ್ಯೇಶ್ವರ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿ ಪ್ರಪ್ರಥಮ ಬಾರಿಗೆ ಸಂಭ್ರಮಿಸಿದ ಸ್ನೇಹ ಸಂಭ್ರಮ.

Image
1963 ರಲ್ಲಿ ಸ್ಥಾಪನೆ ಆದ ಶ್ರೀ ಸುಬ್ರಮಣ್ಯಶ್ವರ ಪ್ರೌಢಶಾಲೆಯಲ್ಲಿ ಪ್ರಥಮ ಬಾರಿಗೆ 2005ನೇ ಸಾಲಿನ ವಿದ್ಯಾರ್ಥಿಗಳು 20 ವರ್ಷಗಳ ನಂತರ ಒಂದುಗೂಡಿ ಆಯೋಜಿಸಿದ ಸ್ನೇಹ ಸಂಭ್ರಮ ಹಾಗೂ ಶ್ರೀ ಜ್ಞಾನದೀಪ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭವೂ ಪ್ರೌಢಶಾಲ ವಿಭಾಗದ ಮುಖ್ಯ ಗುರುಗಳಾದ ಶ್ರೀಮತಿ ನಂದಾ ಹರೀಶ್ ಇವರ ಅದ್ಯಕ್ಷತೆಯಲ್ಲಿ ದಿನಾಂಕ ಮೇ 11ರಂದು ಸುಬ್ರಹ್ಮಣ್ಯದ ಎಸ್ ಎಸ್ ಪಿ ಯು ಕಾಲೇಜಿನ ಬೆಳ್ಳಿ ಹಬ್ಬ ಸಭಾಂಗಣದಲ್ಲಿ ಕಾಲೇಜಿನ ಗೌರವಾನ್ವಿತ ಪ್ರಾಂಶುಪಾಲರಾದ ಶ್ರೀ ಸೋಮಶೇಖರ್ ನಾಯಕ್ ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಈ ಸಂಭ್ರಮದ ಕಾರ್ಯಕ್ರಮಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ವೇದಿಕೆಯಲ್ಲಿ ಗುರುಗಳಾದ ಕೃಷ್ಣ ಭಟ್, ಸ್ಮಿತಾ, ರಾಧಾಕೃಷ್ಣ ನಿವೃತ್ತ ಶಿಕ್ಷಕರಾದ ಯಶವಂತ ರೈ ,ಮೋಹನ್, ರಘು ಬಿಜೂರು, ನಾರಾಯಣ ಹಾಗೂ ಸುಪ್ರಿಯ ನಿವೃತ್ತ ಬೋಧಕಿ ತರ ಸಿಬ್ಬಂದಿಗಳಾದ ದುಗ್ಗಪ್ಪ ರವಿರಾಮ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ರಾಜೇಶ್ ಎನ್ ಎಸ್, ಕಾರ್ಯಕ್ರಮದ ಸಂಘಟಕರಾದ ಮುರಳಿ ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಈ ಸಂದರ್ಭದಲ್ಲಿ 2005 ನೇ ವರ್ಷದಲ್ಲಿ ಸೇವೆ ಸಲ್ಲಿಸುತ್ತಿದ್ದ ಗುರುಗಳಿಗೆ ಗುರುವಂದನೆ ಹಾಗೂ ಬೋಧಕೇತರ ಸಿಬ್ಬಂದಿಗಳನ್ನು ಗೌರವಿಸಲಾಯಿತು. 2025 26ನೇ ಸಾಲಿನ ಎಸ್ ಎಲ್ ಸಿ ಪರೀಕ್ಷೆಯಲ್ಲಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾದ 17 ವಿದ್ಯ...

ಕುಕ್ಕೆ ಸುಬ್ರಹ್ಮಣ್ಯ ಹೊಸಳ್ಳಿಗಮ್ಮ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಸಂಭ್ರಮ.

Image
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಸಮೀಪದ ಹೊಸಳ್ಳಿಗಮ್ಮ ದೈವಸ್ಥಾನದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವವು ಭಕ್ತಿಭಾವ ಮತ್ತು ಧಾರ್ಮಿಕ ಸಂಭ್ರಮದ ನಡುವೆ ನೆರವೇರಿತು. ವಾರ್ಷಿಕೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಪೂಜೆಗಳು ಹಾಗೂ ಧಾರ್ಮಿಕ ವಿಧಿವಿಧಾನಗಳು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿದವು. ಕಾರ್ಯಕ್ರಮದ ಪ್ರಯುಕ್ತ ದೇವಾಲಯದಲ್ಲಿ ಚಂಡಿಕಾ ಹೋಮ, ಹೊಸಳ್ಳಿಗಮ್ಮ ದೈವಕ್ಕೆ ವಿಶೇಷ ತಂಬುಲ ಸೇವೆ ಹಾಗೂ ಮಂಗಳಾರತಿ ಸೇವೆಗಳು ನೆರವೇರಿಸಲಾಯಿತು. ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದ ಭಕ್ತರು ತಾಯಿಯ ದರ್ಶನ ಪಡೆದು ಆಶೀರ್ವಾದ ಸ್ವೀಕರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹರೀಶ್ ಇಂಜಾಡಿ, ವ್ಯವಸ್ಥಾಪನ ಸಮಿತಿ ಸದಸ್ಯರಾದ ಸೀತಾರಾಮ ಎಡಪಡಿತ್ತಾಯ, ಅಶೋಕ್ ನೆಕ್ರಜೆ, ಡಾ. ರಘು, ಅಜಿತ್ ಪಾಲೇರಿ, ಪ್ರವೀಣಾ ರೈ, ಸೌಮ್ಯ ಭರತ್, ಲೀಲಾ ಮನಮೋಹನ್ ಹಾಗೂ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಏಸುರಾಜ್ ಭಾಗವಹಿಸಿದರು. ಅಲ್ಲದೆ ಅನೇಕ ಭಗವತ್ ಭಕ್ತರು ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ಹೊಸಳ್ಳಿಗಮ್ಮ ತಾಯಿಯ ಪ್ರಸಾದವನ್ನು ಸ್ವೀಕರಿಸಿ ಧನ್ಯತೆ ಪಡೆದರು. ದೇವಸ್ಥಾನ ವಾತಾವರಣವು ಭಕ್ತರ ಜಯಘೋಷ ಹಾಗೂ ಧಾರ್ಮಿಕ ಆಚರಣೆಗಳಿಂದ ಭಕ್ತಿಮಯವಾಗಿ ಕಂಗೊಳಿಸಿತು.

ಕುಕ್ಕೆ ಶ್ರೀ ದೇವರ ಸನ್ನಿಧಿಯಲ್ಲಿ ಡಿ.ಕೆ. ಶಿವಕುಮಾರ್ ಜನ್ಮದಿನ ಪ್ರಯುಕ್ತ ವಿಶೇಷ ಪೂಜೆ

Image
D. K. Shivakumar ಅವರ ಜನ್ಮದಿನದ ಪ್ರಯುಕ್ತ Kukke Shri Subrahmanya Temple ದಲ್ಲಿ ವಿಶೇಷ ಪೂಜೆ ಹಾಗೂ ಪ್ರಾರ್ಥನಾ ಕಾರ್ಯಕ್ರಮ ಶುಕ್ರವಾರ ಭಕ್ತಿಭಾವದಿಂದ ನೆರವೇರಿತು. ಡಿ.ಕೆ. ಶಿವಕುಮಾರ್ ಅವರ ಆರೋಗ್ಯ, ದೀರ್ಘಾಯುಷ್ಯ ಹಾಗೂ ರಾಜಕೀಯ ಉನ್ನತಿಗಾಗಿ ಶ್ರೀ ದೇವರ ಸನ್ನಿಧಿಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ರಾಜ್ಯದ ಅಭಿವೃದ್ಧಿ ಹಾಗೂ ಜನಸೇವೆಯಲ್ಲಿ ಇನ್ನಷ್ಟು ಯಶಸ್ಸು ಸಾಧಿಸಲಿ ಎಂದು ದೇವರಲ್ಲಿ ಪ್ರಾರ್ಥಿಸಲಾಯಿತು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿ ಮಾತನಾಡಿ, “ರಾಜ್ಯದ ಜನಪರ ಸೇವೆಯಲ್ಲಿ ತೊಡಗಿರುವ ನಾಯಕರು ಉತ್ತಮ ಆರೋಗ್ಯ ಹೊಂದಿ ಸಮಾಜದ ಅಭಿವೃದ್ಧಿಗೆ ಮತ್ತಷ್ಟು ಕೊಡುಗೆ ನೀಡಲಿ ಎಂಬ ಆಶಯದೊಂದಿಗೆ ಶ್ರೀ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಲಾಗಿದೆ. ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ಅನುಗ್ರಹದಿಂದ ಡಿ.ಕೆ. ಶಿವಕುಮಾರ್ ಅವರಿಗೆ ಇನ್ನಷ್ಟು ಯಶಸ್ಸು ಮತ್ತು ಜನಸೇವೆ ಮಾಡುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸಿದ್ದೇವೆ” ಎಂದು ತಿಳಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಸೀತಾರಾಮ ಎಡಪಡಿತ್ತಾಯ, ಅಶೋಕ್ ನೆಕ್ರಜೆ, ಡಾ. ರಘು, ಅಜಿತ್ ಪಾಲೇರಿ, ಶ್ರೀಮತಿ ಪ್ರವೀಣಾ ರೈ, ಶ್ರೀಮತಿ ಸೌಮ್ಯ ಭರತ್, ಶ್ರೀಮತಿ ಲೀಲಾ ಮನಮೋಹನ್ ಹಾಗೂ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಏಸುರಾಜ್ ಉಪಸ್ಥಿತರಿದ್ದು ವಿಶೇಷ ಪೂಜೆಯಲ್ಲಿ ಭಾಗವಹಿಸಿದರು.

*ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆ ಯ 5 ವಿದ್ಯಾರ್ಥಿಗಳು ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಗೆ ಆಯ್ಕೆ.....*

Image
ಮೇ 1 ರಿಂದ 3ರ ವರೆಗೆ ವೆಸ್ಟ್ ಅಂದೇರಿ ಮುಂಬೈಯಲ್ಲಿ ನಡೆದ 3ನೇ ರಾಷ್ಟ್ರೀಯ ಒಬ್ಲೀಕ್ ಕರಾಟೆ ಟೂರ್ನಮೆಂಟ್ ನಲ್ಲಿ ನೆಲ್ಯಾಡಿ ಜ್ಞಾನೋದಯ ಬೆಥನಿ ಪಿ ಯು ಕಾಲೇಜಿನ15 ವಿದ್ಯಾರ್ಥಿಗಳು ಭಾಗವಹಿಸಿದ್ದು 5 ವಿದ್ಯಾರ್ಥಿಗಳು ಅಂತರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ಗೆ ಆಯ್ಕೆಯಾದರು.ಅಕ್ಟೋಬರ್ ತಿಂಗಳ 5 ರಿಂದ 10 ರ ವರೆಗೆ ಪುಣೆ ಯ ಮಹಾರಾಷ್ಟ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದ (WGKF)ಕರಾಟೆ ಚಾಂಪಿಯನ್ ಶಿಪ್ ನಡೆಯಲಿದ್ದು  ಮೊಹಮ್ಮದ್ ಹಿಷಾಮ್ ಕುಮಿಟೆ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ, ಫಾತಿಮತ್ ಫಸಿಲಾ,ಅದ್ವೈತ್, ಮನ್ವಿತ್ ಕುಮಾರ್ ಯು,ಝಯಿರ ಮಲಿಕ್ ಕುಮಿಟೆ ತೃತೀಯ ಸ್ಥಾನದೊಂದಿಗೆ ಕಂಚಿನ ಪದಕ ಪಡೆದುಕೊಂಡರು. ವಿದ್ಯಾರ್ಥಿಗಳ ರಾಷ್ಟ್ರೀಯ ಮಟ್ಟದ ಈ ಸಾಧನೆಯನ್ನು ಶ್ಲಾಘಿಸಿ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ಡಾ. ವರ್ಗಿಸ್ ಕೈಪನಡ್ಕ, ಮತ್ತು ಅಧ್ಯಾಪಕ ವೃಂದ ಅಭಿನಂದಿಸಿ ಹರ್ಷ ವ್ಯಕ್ತಪಡಿಸಿದರು,