Posts

Showing posts from February, 2025

ಪುಣ್ಯ ಕುಮಾರಧಾರ ನದಿ ಒಡಲಿಗೆ -ಕಲುಷಿತ ರಾಸಾಯನಿಕ ಯುಕ್ತ ನೀರು..! ಹೇಳುವರಿಲ್ಲ ಕೇಳುವವರಿಲ್ಲ! ಸಮಸ್ಯೆಗೆ ಎಂದು ಮುಕ್ತಿ?

Image
ಕುಕ್ಕೆ ಸುಬ್ರಹ್ಮಣ್ಯ ಖಾಸಗಿವಸತಿ ಗೃಹ  ಗಳಿಂದ  ಒಳಚರಂಡಿಯಲ್ಲಿ ಹರಿದು ಬರುತ್ತಿದೆ ರಾಸಾಯನಿಕಯುಕ್ತ ಕಲುಹಿತ ನೀರು ಹೇಳುವವರಿಲ್ಲ ಕೇಳುವವರಿಲ್ಲ ಎಂಬಂತಾಗಿದೆ.. !! ಕುಕ್ಕೆ ಸುಬ್ರಹ್ಮಣ್ಯ ; ಮಾ,01,ಶ್ರೀ ಕ್ಷೇತ್ರದಲ್ಲಿ ದಿನ ಕಳೆದಂತೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಿದೆ, ಅದೇ ರೀತಿ ಈ ಭಕ್ತರಿಗೆ ಉಳಿದುಕೊಳ್ಳಲು ವ್ಯವಸ್ಥೆಗೆ ವಸತಿಗೃಹಗಳು ದಿನ ಕಳೆದಂತೆ ತಲೆಯೆತ್ತಿವೆ.ವ್ಯವಸ್ಥೆಗಳು ಆಗಬೇಕು ಭಕ್ತರಿಗೆ ಅನುಕೂಲವಾಗಬೇಕು ಆದರೆ ವಸತಿ ಗೃಹ  ಗಳಿಂದ ಪವಿತ್ರ ದರ್ಪಣ ತೀರ್ಥ ನದಿಗೆ ಕೊಳಚೆ ನೀರು, ತ್ಯಾಜ್ಯ ವಸ್ತುಗಳನ್ನು, ವಸತಿಗೃಹ ಗಳಲ್ಲಿ  ಉಪಯೋಗಿಸಿದ ರಾಸಾಯನಿಕ ಯುಕ್ತ ನೀರನ್ನು ಬಿಡುವುದು ಎಷ್ಟು ಸರಿ.? ಕುಕ್ಕೆ ಸುಬ್ರಹ್ಮಣ್ಯ ಕಾಶಿ ಕಟ್ಟೆ ಬಳಿ ಇರುವ ಖಾಸಗಿ ವಸತಿ ಗೃಹ ಗಳಿಂದ ಕೊಳಚೆ ನೀರು, ರಾಸಾಯನಿಕ ಮಿಶ್ರಿತ ನೀರು ನಮ್ಮೆಲ್ಲರು ಭಕ್ತಿಇಂದ ಪೂಜಿಸುವ ಪವಿತ್ರ ತೀರ್ಥ ದರ್ಪಣ ನದಿಗೆ ಸೇರುತಿದೆ. ಅದೇ ಕೊಳಚೆ ನೀರು ಸ್ವಲ್ಪ ಮುಂದೆ ಹೋಗಿ ಕುಮಾರಧಾರ ನದಿಯ ಒಡಲಿಗೆ ಸೇರುತ್ತದೆ. ದರ್ಪಣ ನದಿಯಲ್ಲಿ ಹರಿದ ಒಳಚರಂಡಿಯ ಈ ಕಲುಷಿತ ನೀರಿನಲ್ಲಿ ಅದೆಷ್ಟೋ ಜಲಚರಗಳು ಸತ್ತು ಹೋಗುತ್ತವೆ, ಕುಮಾರಧಾರ ನದಿಯ ನೀರನ್ನು ಅದೆಷ್ಟೋ ಜನರು ಕುಡಿಯುತ್ತಾರೆ, ಈ ಪವಿತ್ರ ತೀರ್ಥವನ್ನು ಕಲುಷಿತ ಮಾಡುವಂತಹ ಈ ವಸತಿ ಗೃಹ ಗಳ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ...

ಬಿಳಿನೆಲೆ- ಕೈಕಂಬ ಶಾಲಾ ವಿದ್ಯಾರ್ಥಿಗಳಿಗೆ ಗಾಂಧಾರಿ ವಿದ್ಯೆಯ ತರಬೇತಿ ಶಿಬಿರ.

Image
ಸುಬ್ರಹ್ಮಣ್ಯ ಫೆ.28: ಕಣ್ಣುಗಳ ಸಹಾಯವಿಲ್ಲದೆ ಬಣ್ಣ, ಚಿತ್ರ ,ವಸ್ತು, ಬರಹ ಇತ್ಯಾದಿಗಳನ್ನ ಗುರುತಿಸುವ ವಿಶೇಷ ಗಾಂಧಾರಿ ವಿದ್ಯಾ ತರಬೇತಿ ಶಿಬಿರವು ಬಿಳಿನೆಲೆ ಕೈಕಂಬ ಉನ್ನತೀಕರಿಸಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಯೋಗ ಧ್ಯಾನ ಸಂಸ್ಕಾರ ಮತ್ತು ಶ್ರದ್ಧಾ ಫಲಗಳಿಂದ ತಮ್ಮ ಮನು ಶಕ್ತಿಯನ್ನು ಉದ್ಧಿಪನಗೊಳಿಸುವ ಈ ಪ್ರಾ ಶಿಕ್ಷಣವನ್ನು ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಿ ತಮ್ಮ ವಿಶಿಷ್ಟ ಕಾಳಜಿಯನ್ನ ಮೆರೆದವರು ಮಂಗಳೂರಿನ ಶ್ರೀ ಗೋಕುಲ ಧಾಮ ಹಾಗೂ ಮೈಂಡ್ ಮಿರಕಲ್ಸ್ ಇದರ ಮುಖ್ಯಸ್ಥರಾದ ರೂಪಶ್ರೀ .ಜಿ .ಗುದಂಡ ಮತ್ತು ಅವರಿಗೆ ಸಾತ್ ನೀಡಿದವರು ಶ್ರೀ ಕೃಷ್ಣರಾಜ ಕೊಟ್ಟಾರ. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದ ನಿವೃತ್ತ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ಅತ್ಯಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿ ತರಬೇತಿಗೆ ಚಾಲನೆ ನೀಡಿದರು.ಶಾಲಾ ಮೇಲುಸ್ತುವಾರಿ ಹಾಗೂ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ನವೀನ ನಡು ತೋಟ ಸಭಾಧ್ಯಕ್ಷತೆ ವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕಿ ಪವಿತ್ರ ಎ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶಾಲಾ ಮೇಲುಸ್ತುವಾರಿ ಹಾಗೂ ಅಭಿವೃದ್ಧಿ ಸಮಿತಿ ಸದಸ್ಯರುಗಳು, ಪೋಷಕರು, ಶಿಕ್ಷಕ ವೃಂದದವರು, ಹಾಗೂ ಅಕ್ಷರ ದಾಸೋಹ ಸಿಬ್ಬಂದಿ ವರ್ಗದವರು ಹಾಜರಿದ್ದರು.

ರಾಷ್ಟ್ರೀಯ ಮಟ್ಟದ ಮ್ಯಾನೇಜ್ಮೆಂಟ್ ಅಂಡ್ ಕಲ್ಚರ್ ಫೆಸ್ಟಿವಲ್ ನಲ್ಲಿ ಕೆ.ಎಸ್.ಎಸ್ ಕಾಲೇಜಿಗೆ ಬಹುಮಾನ.

Image
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯವು ಶ್ರೀನಿವಾಸ್ ಯೂನಿವರ್ಸಿಟಿ ಪಾಂಡೇಶ್ವರ ಮಂಗಳೂರು ಅವರು ಆಯೋಜಿಸಿರುವ ರಾಷ್ಟ್ರೀಯ ಮಟ್ಟದ ಮ್ಯಾನೇಜ್ಮೆಂಟ್ ಹಾಗೂ ಕಲ್ಚರಲ್ ಫೆಸ್ಟ್ನಲ್ಲಿ ಕಾಲೇಜಿನ ತಂಡವು ಭಾಗವಹಿಸಿ ಸಮೂಹ ನೃತ್ಯ ಹಾಗೂ ಮುಖ ವರ್ಣಿಕೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಸಮೂಹ ನೃತ್ಯದಲ್ಲಿ ವಿಶ್ಮಿತಾ ಡಿ.ಬಿ. ಭಾರತಿ ಎಂ, ನಿಶಾ ಐ.ಕೆ, ಭವ್ಯ ಕೆ ಎನ್ ಶ್ರೇಯ,ವಿನಿತ, ಚೈತನ್ಯ ಅವರು ಪ್ರದರ್ಶನ ನೀಡಿದ್ದಾರೆ ಹಾಗೂ ಮುಖವರ್ಣಿಕೆ ಸ್ಪರ್ಧೆಯಲ್ಲಿ ಭೂಮಿಕಾ ಕೆ ಜಿ ಮತ್ತು ಲಿಖಿತಾಶ್ರೀ ಬಿ ಜೆ ಭಾಗವಹಿಸಿದ್ದಾರೆ

ದೊಂತಿಲ ಶ್ರೀ ಮಹಾವಿಷ್ಣು, ಸುಬ್ರಹ್ಮಣ್ಯಶ್ವರ ದೇವಸ್ಥಾನ ಷಡಾಧರ ಪ್ರತಿಷ್ಠೆ.... ದೇವಸ್ಥಾನ ಗಳ ಜೀರ್ಣೋದ್ದಾರದಲ್ಲಿ ಸಮರ್ಪಣ ಭಾವದಿಂದ ತೊಡಗಿಸಿಕೊಳ್ಳಿ,ಮಾಣಿಲ ಸ್ವಾಮಿ.

Image
 *ನೆಲ್ಯಾಡಿ ದೊಂತಿಲ ಶ್ರೀ ಮಹಾವಿಷ್ಣು, ಸುಬ್ರಹ್ಮಣ್ಯೇಶ್ವರ ದೇವಸ್ಥಾನದಲ್ಲಿ ಷಡಾಧರ ಪ್ರತಿಷ್ಠೆ -ಸಭಾಕಾರ್ಯಕ್ರಮ..*    ದೇವಸ್ಥಾನಗಳ ಜೀರ್ಣೋದ್ದಾರ ಕಾರ್ಯದಲ್ಲಿ ಸಮರ್ಪಣಾ ಭಾವದಿಂದ ತೊಡಗಿಸಿ ಕೊಳ್ಳಿ....   ಮಾಣಿಲ ಶ್ರೀ            ನೆಲ್ಯಾಡಿ ಕೌಕ್ರಾಡಿ ಗ್ರಾಮದ ದೊಂತಿಲ ಶ್ರೀ ಮಹಾ ವಿಷ್ಣು ಸುಬ್ರಮಣ್ಯ ದೇವಸ್ಥಾನದ ಜೀರ್ಣೋದ್ದಾರ ನಿಮಿತ್ತ ಷಡಾಧರ ಪ್ರತಿಷ್ಠೆ, ಇಷ್ಟಕಾನ್ಯಾಸ, ಗರ್ಭನ್ಯಾಸಾ ದಿಗಳನ್ನು ಕೆಂಮಿಂಜೆ ಕಾರ್ತಿಕ್ ತಂತ್ರಿಗಳು ನಡೆಸಿಕೊಟ್ಟರು.      ಕಶ್ಮಲ ಮನೋಭಾವವಿಲ್ಲದ ಪರಿಶುದ್ಧ ಮನಸ್ಸು,ಭಾವದಿಂದ ದೇವಸ್ಥಾನಗಳ ಜೀರ್ಣೋದ್ದಾರ ಕಾರ್ಯಗಳಲ್ಲಿ ಸಮರ್ಪಣಾ ಭಾವದಿಂದ ತೊಡಗಿಸಿಕೊಂಡರೆ ನಾವು ನಿಜವಾದ ಭಗವಂತನನ್ನು ಕಾಣಲು ಸಾಧ್ಯ, ಸರ್ವವ್ಯಾಪಿ ಯಾದ ಭಗವಂತ ಕೇವಲ ಗರ್ಭ ಗುಡಿಯಲ್ಲಿ ಮಾತ್ರವಲ್ಲ ನಮ್ಮೊಳಗಿನ ಎಲ್ಲಾ ಸತ್ವ ತತ್ವ ಗಳಲ್ಲಿ ಅಡಕವಾಗಿದ್ದಾನೆ.ಎನ್ನುವ ಸತ್ಯವನ್ನು ನಾವಿನ್ನು ಅರ್ಥ ಮಾಡಿಕೊಂಡಿಲ್ಲ.ಗುರು- ಹಿರಿಯರಲ್ಲಿ, ತಂದೆ-ತಾಯಿಯರಲ್ಲಿ,ಪ್ರಕೃತಿಯಲ್ಲಿ ಭಗವಂತನಿದ್ದಾನೆ ಎನ್ನುವುದು ನಮಗೆ ಅರ್ಥ ವಾಗಬೇಕು, ಕೌಟುಂ ಬಿಕಸೇವೆಯಲ್ಲಿ, ಸಾಮಾಜಿಕ ಸೇವೆಯಲ್ಲಿ ದೇವರನ್ನು ನಾವು ಕಾಣಬೇಕಾಗಿದೆ. ಸೇವೆಯಲ್ಲಿ ದೇವರಿದ್ದಾನೆ ಎನ್ನುವ ಮನೋಭಾವದಿಂದ ನಾವು ದುಡಿದರೆ ದೇವಸ್ಥಾನ ನಿರ್ಮಾಣ ಕಾರ್ಯ ಸುಲಭ ಸಾಧ್ಯವಾಗ...

ಸುಪ್ರಸಿದ್ಧ ಗಾಯಕಿ ಶ್ರೀಮತಿ ಎಸ್ ಜಾನಕಿ ಕುಕ್ಕೆ ಸುಬ್ರಮಣ್ಯ ಕ್ಷೇತ್ರಕ್ಕೆ ಭೇಟಿ.

Image
ಕುಕ್ಕೆ ಸುಬ್ರಮಣ್ಯ ; ಫೆ.20, ಭಾರತೀಯ ಚಿತ್ರರಂಗದ ಹೆಸರಾಂತ ಹಿನ್ನೆಲೆ ಗಾಯಕಿ ಶ್ರೀಮತಿ ಯಸ್.ಜಾನಕಿ ಯವರು ಈದಿನ ಕುಕ್ಕೆಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಸುಬ್ರಹ್ಮಣ್ಯ ಮಠಕ್ಕೆ ಭೇಟಿ ನೀಡಿದರು. ಇವರನ್ನು ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಯೇಸುರಾಜ್ ಹಾಗೂ ಸುಬ್ರಹ್ಮಣ್ಯದ ನಾಗರಿಕರ ಪರವಾಗಿ ಗ್ರಾಮ ಪಂಚಾಯಿತಿಯ ಸದಸ್ಯ ಹರೀಶ ಇಂಜಾಡಿಯವರು ಶಾಲು, ಪ್ರಸಾದ, ನೆನಪಿನ ಕಾಣಿಕೆ ನೀಡಿ ಗೌರವಿಸಿದರು.

ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಉದ್ಘಾಟನಾ ಕಾರ್ಯಕ್ರಮ.

Image
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ಮತ್ತು ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್ ಸದನ ರೀಜನಲ್ ಸೆಂಟರ್ ಹೈದರಾಬಾದ್ ಇವರ ಪ್ರಾಯೋಜಕತ್ವದಲ್ಲಿ ಆಂತರಿಕ ಗುಣಮಟ್ಟ ಭರವಸಾ ಕೋಶದ ಸಹಯೋಗದೊಂದಿಗೆ ಅರ್ಥಶಾಸ್ತ್ರ ವಿಭಾಗದಿಂದ ಎರಡು ದಿನದ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ್ ಪಿ ಟಿ ವಹಿಸಿದರು. ಉದ್ಘಾಟಕರಾದ ಉಜಿರೆಯ ರುಡ್ ಸೆಟ್ ಹಿರಿಯ ಶ್ರೇಣಿ ಉಪನ್ಯಾಸಕಿ ಅನಸೂಯ ಶೆಟ್ಟಿ ಅವರು ಮಹಿಳೆ ಹಲವಾರು ಜವಾಬ್ದಾರಿಗಳ ಹೊಣೆಗಾರಿಕೆ ಹೊತ್ತಿರುವುದರಿಂದ ಅವಳು ಒಂದು ಕೌಶಲ್ಯವಾಗಿದ್ದಾಳೆ. ಸಮಾಜದ ಬೆಳವಣಿಗೆಯಲ್ಲಿ ಮಹಿಳೆಯ ಪಾತ್ರ ಅತ್ಯಗತ್ಯವಾಗಿದೆ ಎಂದು ಮಾತನಾಡಿದರು. ಬೆಳ್ತಂಗಡಿ ತಾಲೂಕಿನ ಹಣಕಾಸು ಜ್ಞಾನ ಸಲಹೆಗಾರ ಉಷಾ ಕಾಮತ್ ಅವರು ಮಹಿಳೆಗೆ ಉದ್ಯಮ ನಡೆಸಲು ಇರುವ ಸರಕಾರದ ಯೋಜನೆಗಳ ಬಗ್ಗೆ ತಿಳಿಸಿದರು.ಎನ್‌ಐಟಿಕೆ ಸುರತ್ಕಲ್ ನ ಮಾನವಶಾಸ್ತ್ರ, ಸಾಮಾಜಿಕ ವಿಜ್ಞಾನ ಮತ್ತು ನಿರ್ವಹಣಾ ಶಾಲೆಯ ಸಹಾಯಕ ಪ್ರಾಧ್ಯಾಪಕ, ಡಾ. ರಾಜೇಶ್ ಆಚಾರ್ಯ ಪ್ರಾಸ್ತಾವಿಕ ನುಡಿದರು. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜ್ ಉಜಿರೆಯ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಗಣರಾಜ್ ಕೆ , ಆಂತರಿಕ ಗುಣಮಟ್ಟ ಭರವಶಾ ಕೋಶದ ಸಂಯೋಜಕಿ ಲತಾ ಬಿ ಟಿ ಉಪಸ್ಥಿತರಿದ್ದರು. ಉದ್ಯಮಶೀಲತೆಯಲ್ಲಿ ಮಹಿಳಾ ಕೌಶಲ...

ನೆಲ್ಯಾಡಿ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಬಾಲಕೃಷ್ಣ ಬಾಣಾಜಾಲ್ ಆಯ್ಕೆ.

Image
ನೆಲ್ಯಾಡಿ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸಕ್ರಿಯ ರಾಜಕಾರಣಿ, ಹಲವು ಸಂಘ ಸಂಸ್ಥೆಗಳ ಮೂಲಕ ಸಾಮಾಜಿಕವಾಗಿ ಗುರುತಿಸಿಕೊಂಡಿರುವ ನೆಲ್ಯಾಡಿ ಸಜ್ಜನ ಸಹಕಾರಿ ಬಾಲಕೃಷ್ಣ ಬಿ.ಬಾಣಜಾಲ್ ರವರು ಅಧ್ಯಕ್ಷರಾಗಿ ಅವಿರೋದವಾಗಿ ಆಯ್ಕೆಗೊಂಡರು. ಉಪಾಧ್ಯಕ್ಷರಾಗಿ ರವಿಚಂದ್ರ ಗೌಡ ಹೊಸವಕ್ಲು ಆಯ್ಕೆಗೊಂಡರು     12ನಿರ್ದೇಶಕ ಸ್ಥಾನಗಳಿಗೆ ಅವಿರೋದ ಆಯ್ಕೆ ನಡೆದು 9ಸ್ಥಾನ ಸಹಕಾರ ಭಾರತಿ 3ಸ್ಥಾನ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ನಾಗೇಂದ್ರರವರು ಭಾಗವಹಿಸಿದರು ಕಾರ್ಯನಿರ್ವಹಣಾಧಿಕಾರಿ ದಯಕರ ರೈ ಸಹಕರಿಸಿದರು,ಎಸ್ ಸಿ ಡಿ ಸಿ ಸಿ ಬ್ಯಾಂಕ್ ನಿರ್ದೇಶಕ ಶಶಿ ಕುಮಾರ್ ರೈ ಬಾಲ್ಯೊಟ್ಟು, ಬ್ಯಾಂಕಿನ ನಿಕಟ ಪೂರ್ವ ಅಧ್ಯಕ್ಷರು ಪಟ್ಟೆ ಉಮೇಶ್ ಶೆಟ್ಟಿ, ನಿರ್ದೇಶಕರು ಗಳು, ಬ್ಯಾಂಕಿನ ಸಿಬ್ಬಂದಿ ಮತ್ತು ಹಲವು ಗಣ್ಯರು ಉಪಸ್ಥಿತರಿದ್ದರು.

ಕುಕ್ಕೆ ಸುಬ್ರಹ್ಮಣ್ಯ ಪೂರ್ಣ ಸ್ಥಗಿತಗೊಂಡಿದ್ದ ಮಾಸ್ಟರ್ ಪ್ಲಾನ್ ಕಾಮಗಾರಿಗಳಿಗೆ ಇಂದು ಮರುಚಾಲನೆ ದೊರೆಯುವ ಸಾಧ್ಯತೆ.! ಇಂದು ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಅಧ್ಯಕ್ಷತೆಯಲ್ಲಿ ನಡೆಯಲಿದೆ ಸಭೆ.

Image
ಬೆಂಗಳೂರು ; ಕುಕ್ಕೆ ಸುಬ್ರಮಣ್ಯ 180 ಕೋಟಿ ಮಾಸ್ಟರ್ ಪ್ಲಾನ್ ಕಾಮಗಾರಿ ಯೋಜನೆ 2008ನೇ ಇಸವಿಯಲ್ಲಿ ಜಾರಿಗೆ ಬಂದಿತ್ತು ಮೂರು ಹಂತದಲ್ಲಿ ಸುಬ್ರಹ್ಮಣ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಸರಕಾರ ಕೈಗೆತ್ತಿಕೊಂಡಿತ್ತು.  ಮೊದಲನೇ ಹಂತದಲ್ಲಿ 60 ಲಕ್ಷ ರೂಪಾಯಿಗಳ ಕಾಮಗಾರಿ ನಡೆದಿದೆ, ಎರಡನೇ ಹಂತದ ಕಾಮಗಾರಿ ಇನ್ನಷ್ಟು ಬಾಕಿ ಇದೆ, ಮೂರನೇ ಹಂತದ ಕಾಮಗಾರಿ ಇನ್ನು ಪ್ರಾರಂಭವಾಗಬೇಕಿದೆ.  2019ನೇ ಇಸವಿಗೆ ಈ ಮೂರು ಹಂತದ ಕಾಮಗಾರಿಗಳು ಪೂರ್ಣಗೊಂಡು ಕುಕ್ಕೆ ಸುಬ್ರಹ್ಮಣ್ಯ ಶ್ರೀ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಅನುಕೂಲ ವಾಗಬೇಕಿದ್ದ ಸೌಲಭ್ಯಗಳು,  ನಾಲ್ಕು ವರ್ಷದಿಂದ ಯಾವುದೇ ಕಾಮಗಾರಿಗಳು ನಡೆಯದೆ ಸ್ಥಗಿತ ಗೊಂಡಿತ್ತು. ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬರುವ ಭಕ್ತರಿಗೆ ಸಮಸ್ಯೆಗಳಾಗುತ್ತಿದೆ ಎಂದು ಮನಗಂಡು ಇದೀಗ ನೇಮಕಗೊಂಡಿರುವ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಸತೀಶ್ ಕುಜುಗೋಡು, ಲೋಲಾಕ್ಷ ಕೈಕಂಬ, ಪವನ್ ಸುಬ್ರಮಣ್ಯ, ಸುಬ್ರಹ್ಮಣ್ಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಕಡಬ ಕಾಂಗ್ರೆಸ್ ಗ್ಯಾರಂಟಿ ಸಮಿತಿ ಅಧ್ಯಕ್ಷ ಸುಧೀರ್ ಶೆಟ್ಟಿ, ಕುಕ್ಕೆ ಸುಬ್ರಹ್ಮಣ್ಯ ಮಾಸ್ಟರ್ ಪ್ಲಾನ್ ಸಮಿತಿ ಮಾಜಿ ಸದಸ್ಯ ಶಿವರಾಂ ರೈ, ಕುಕ್ಕೆ ಸುಬ್ರಹ್ಮಣ್ಯ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ವೆಂಕಪ್ಪ ಗೌಡ,ಕಿಶೋರ್ ಆರಂಪಾಡಿ. ಸುಬ್ರಹ್ಮಣ್ಯದ ನಿಯೋಗ ಬೆಂಗಳೂರಿಗೆ ತೆರಳಿ ...

ಕುಕ್ಕೆ ಸುಬ್ರಹ್ಮಣ್ಯ ವನದುರ್ಗ ದೇವಿ ದೇವಸ್ಥಾನ ವಾರ್ಷಿಕ ಜಾತ್ರಾ ಮಹೋತ್ಸವ ಹಾಗೂ ಮಹಾರಥೋತ್ಸವ ಸಂಭ್ರಮ.

Image
ಕುಕ್ಕೆ ಸುಬ್ರಹ್ಮಣ್ಯ ; ಪೇ;12,ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ ದಿವ್ಯ ಉಪಸ್ಥಿತಿಯಲ್ಲಿ ಶ್ರೀ ಸುಬ್ರಹ್ಮಣ್ಯ ಮಠದ ಆಡಳಿತಾಧಿಕಾರಿ ಸುದರ್ಶನ ಜೋಯಿಸ್ ಅವರ ಮುಂದಾಳತ್ವದಲ್ಲಿ, ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಿತು. ಧಾರ್ಮಿಕ ವಿಧಿವಿಧಾನ ಗಳನ್ನು ಶ್ರೀ ದೇವಳದ ಪ್ರಧಾನ ಅರ್ಚಕರಾದ ಶ್ರೀಕರ ಆಚಾರ್ಯ ಹಾಗೂ ಶ್ರೀ ಮಠದ ಸಿಬ್ಬಂದಿಗಳು ನೆರವೇರಿಸಿದರು.ಮಹಾರಥೋತ್ಸವ ಕಾರ್ಯಕ್ರಮದಲ್ಲಿ ಊರಪರವೂರ ಭಗವದ್ಭಕ್ತರು ಪಾಲ್ಗೊಂಡು ಸೇವೆ ಸಲ್ಲಿಸಿ ಶ್ರೀ ದೇವಿಯ ಪ್ರಸಾದ ಸ್ವೀಕರಿಸಿದರು.

ಕುಕ್ಕೆ ಕ್ಷೇತ್ರಕ್ಕೆ ಉಜ್ಜಯಿನಿ ನಾಥ ಸಂಪ್ರದಾಯದ ಸ್ವಾಮೀಜಿ ಭೇಟಿ.

Image
ಸುಬ್ರಹ್ಮಣ್ಯ ಫೆ.11: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಖಿಲ ಭಾರತೀಯ ನಾಥ ಸಂಪ್ರದಾಯದ ಮಧ್ಯಪ್ರದೇಶದ ಉಜ್ಜಯಿನಿಯ ಶ್ರೀ ಶ್ರೀ ಶ್ರೀ 1008 ಮಹಾಂತ ಯೋಗಿ ಪೀರ್ ರಮನಾಥ್ ಜಿ ಮಹಾರಾಜ್ ಸ್ವಾಮೀಜಿಯವರು ದಕ್ಷಿಣ ಭಾರತದ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸುತ ಇಂದು ಮಂಗಳವಾರ ಕುಕ್ಕೆ ಕ್ಷೇತ್ರಕ್ಕೆ ತಮ್ಮ ಅನುಯಾಯಿಗಳೊಂದಿಗೆ ಭೇಟಿ ನೀಡಿದರು. ಕ್ಷೇತ್ರಕ್ಕೆ ಆಗಮಿಸಿದ ಸ್ವಾಮೀಜಿಯವರನ್ನು ಶ್ರೀ ದೇವಳದ ವತಿಯಿಂದ ಪೂರ್ಣ ಕೊಂಬ ದೊಂದಿಗೆ ಸ್ವಾಗತಿಸಲಾಯಿತು. ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗೊಂಡಿ ಅವರು ತುಳಸಿ ಹಾರ ಹಾಕಿ ಸ್ವಾಮೀಜಿಯವರನ್ನು ಗೌರವಿಸಿದರು. ಶ್ರೀ ದೇವಳಕ್ಕೆ ಭೇಟಿ ನೀಡಿದ ಸ್ವಾಮೀಜಿಯವರು ದೇವರ ದರ್ಶನವನ್ನು ಮಾಡಿದರು ತದನಂತರ ಮುಖ್ಯ ಅರ್ಚಕರಾದ ಸೀತಾರಾಮ ಎಡಪಡಿತಾಯ ಅವರು ದೇವರ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ದೇವಳದ ಶಿಷ್ಟಾಚಾರ ಅಧಿಕಾರಿ ಜಯರಾಮರಾವ್ ಸ್ಥಳೀಯರಾದ ಶ್ರೀ ಕುಮಾರ ಬಿಲದ್ವಾರ ಮತ್ತಿತರರು ಹಾಜರಿದ್ದರು.

ಶ್ರೀ ವಿದ್ಯಾಪ್ರಸನ್ನ ತೀರ್ಥರಿಂದ ಕೃಷ್ಣಪ್ರಸಾದ ನೂರಿತ್ತಾಯ ವಿರಚಿತ ನವಗ್ರಹಾರಾಧನಾ ವಿಧಿ : ಕೃತಿ ಬಿಡುಗಡೆ.

Image
 ಜನ್ಮಾಂತರದ ಕರ್ಮಾನುಸಾರವಾಗಿ ಮನುಷ್ಯ, ಜೀವನದಲ್ಲಿ ಕಷ್ಟ ಸುಖಗಳನ್ನು ಅನುಭವಿಸುತ್ತಾನೆ. ಯಾವತ್ತೂ ಸುಖ ಬೇಕೆಂಬುದು ಮನುಷ್ಯನ ಆಶಯ. ಆದರೆ ಅದು ಅಸಾಧ್ಯ. ಕನಿಷ್ಠ ದುಃಖದ ತೀವ್ರತೆ ಕಡಿಮೆ ಮಾಡಿಕೊಳ್ಳುವುದಕ್ಕಾಗಿ ಪ್ರಯತ್ನಿಸಬೇಕು. ಮುಂದೆ ಬರಬಹುದಾದ ಅನಿಷ್ಟಗಳನ್ನು ಮೊದಲೇ ತಿಳಿದುಕೊಳ್ಳಲು ಗ್ರಹಗಳ ಸ್ಥಿತಿ ಸಹಕಾರ ನೀಡುತ್ತದೆ. ನವಗ್ರಹಾಂತರ್ಗತ ನೃಸಿಂಹನ ಆರಾಧನೆಯಿಂದ ದುರಿತದ ತೀವ್ರತೆ ಕಡಿಮೆ ಆಗುತ್ತದೆ ಎಂದು ಸುಬ್ರಹ್ಮಣ್ಯದ  ಸಂಪುಟ ನರಸಿಂಹ ಸ್ವಾಮಿ ಮಠಾಧೀಶರಾದ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿಯವರು, ರಾಮಕುಂಜ  ಸಮೀಪದ ಹಳೆನೇರೆಂಕಿ ಕಟ್ಟಪುಣಿ ನಿವಾಸಿ ಧಾರ್ಮಿಕ ಮಾರ್ಗದರ್ಶಕ, ವಿದ್ವಾಂಸ ಕೆ ಕೃಷ್ಣಪ್ರಸಾದ ನೂರಿತ್ತಾಯರು  ರಚಿಸಿರುವ ನವಗ್ರಹಾರಾಧನಾ ವಿಧಿ: ಎಂಬ ಕೃತಿಯನ್ನು ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ಬಿಡುಗಡೆಗೊಳಿಸುತ್ತಾ ಆಶೀರ್ವಚನ ನೀಡಿದರು.  ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಹಾಗೂ ಲೇಖಕ ಟಿ ನಾರಾಯಣ ಭಟ್ ರಾಮಕುಂಜ ಇವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಹಬ್ಬ ಹರಿದಿನಗಳು, ಪೂಜೆ ಪುನಸ್ಕಾರಗಳು ಬದುಕಿಗೆ ಶಾಂತಿ ನೆಮ್ಮದಿ ನೀಡುತ್ತವೆ. ನಮ್ಮ ಹಿರಿಯರು ದಾರೆಯೆರೆದ ಸಂಸ್ಕೃತಿ ಸಂಸ್ಕಾರಗಳನ್ನು ಮುಂದಿನ ಪೀಳಿಗೆಗೆ ಅರಿತು ಆಚರಿಸಿ,ಕೃತಿಗಳ ಮೂಲಕ ದಾಟಿಸುವ ಜವಾಬ್ದಾರಿಯುತ ಕಾರ್ಯವನ್ನು ಲೇಖಕರು ಮಾಡಿರುತ್ತಾರೆ ಎಂದರು. ...

ಕುಕ್ಕೆ ಸುಬ್ರಹ್ಮಣ್ಯ ಪರಿಸರದಲ್ಲಿ ಪತ್ತೆಯಾದ ಬಿಕ್ಷುಕರನ್ನು ಸಾಮಾಜ ಕಲ್ಯಾಣ ಇಲಾಖೆ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಕಳುಹಿಸಿದ ಸುಬ್ರಹ್ಮಣ್ಯ ಗ್ರಾಮಪಂಚಾಯತ್.

Image
ಕುಕ್ಕೆ ಸುಬ್ರಹ್ಮಣ್ಯ ;ಸಾಮಾಜ ಕಲ್ಯಾಣ ಇಲಾಖೆ ನಿರಾಶ್ರಿತರ ಪರಿಹಾರ ಕೇಂದ್ರ ಅಧೀಕ್ಷಕರು(ಸುಪರಿಡೆಂಟ್)ಅಶೋಕ ಶೆಟ್ಟಿ.ಹಾಗೂ ಅವರ ತಂಡ ,ಸುಬ್ರಹ್ಮಣ್ಯ ಗ್ರಾಮಪಂಚಾಯತ್ ಅಬಿವೃದ್ಧಿ ಅಧಿಕಾರಿ ಮಹೇಶ್,ಕಾರ್ಯದರ್ಶಿ ಮೋನಪ್ಪ.ಹಾಗೂ ಸಿಬ್ಬಂದಿಗಳು,ದೇವಸ್ಥಾನದ ಭದ್ರತಾ ಸಿಬ್ಬಂದಿಗಳು ಫೆ.6 ರಂದು ಕಾರ್ಯಾಚರಣೆಗೆ ನಡೆಸಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಪರಿಸರದಲ್ಲಿ ಸುಮಾರು 10 ಮಂದಿ ಭಿಕ್ಷುಕನ್ನು ಪತ್ತೆ ಹಚ್ಚಿ.ಮಂಗಳೂರುನಲ್ಲಿರುವ ಕರ್ನಾಟಕ ಸರಕಾರದ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಮಾಧ್ಯಮದ ಮೂಲಕ ಸುಬ್ರಹ್ಮಣ್ಯ ಗ್ರಾ.ಪಂ.ಸದಸ್ಯ ಹರೀಶ್ ಇಂಜಾಡಿ ಅವರನ್ನು ವಾರದ ಹಿಂದೆ ವಿಚಾರಿಸಿದಾಗ ಮಾದ್ಯಮಕ್ಕೆ ಸಂದರ್ಶನ ನೀಡಿದ್ದರು. ಕುಕ್ಕೆ ಸುಬ್ರಮಣ್ಯ ಶ್ರೀ ಕ್ಷೇತ್ರದಲ್ಲಿ ದಿನ ಕಳೆದಂತೆ ಬಿಕ್ಷುಕರ ಸಂಖ್ಯೆ ಹೆಚ್ಚಾಗುತ್ತಿದೆ ರಥಬೀದಿಯಲ್ಲಿ ಸಾಲಾಗಿ ಕುಳಿತುಕೊಂಡು ಭಿಕ್ಷೆ ಬೇಡುವುದು, ಕುಕ್ಕೆಗೆ ಬರುವ ಭಕ್ತರಿಗೆ ಅನುಕಂಪ ಬರುವ ರೀತಿಯಲ್ಲಿ ಪುಟ್ಟ ಮಕ್ಕಳನ್ನು ಅಂಗವಿಕಲರನ್ನು ಬಳಸಿಕೊಂಡು ಬಿಕ್ಷೆ ಬೇಡುವುದು ಕಂಡುಬರುತ್ತದೆ, ಮಾನಸಿಕ ಖಿನ್ನತೆಗೆ ಒಳಗಾಗಿರುವ ಒಬ್ಬ ವ್ಯಕ್ತಿ ವಿಚಿತ್ರ ಬಟ್ಟೆಗಳನ್ನ ಧರಿಸುವುದು, ಕುಕ್ಕೆಗೆ ಬರುವ ಭಕ್ತರ ಜೊತೆ ಅಸಭ್ಯ ರೀತಿಯಲ್ಲಿ ವರ್ತನೆ ಮಾಡುವುದು, ಬೈಯೊದು,ದೇವಸ್ಥಾನದ ಒಳಾಂಗಣ,ರಥಬೀದಿ ಇದ್ದಬದ್ದಲ್ಲಿ ತಿರುಗಾಡುವುದು ಕಂಡುಬರುತ್ತಿದೆ. ಬಿಕ್ಷೆ ...

ಶ್ರೀ ಹರಿಹರೇಶ್ವರ ಯಕ್ಷಗಾನ ಕಲಾಸಂಘದ ಸ್ಥಾಪಕಾಧ್ಯಕ್ಷ, ಹಿರಿಯ ಬಿಜೆಪಿ ಕಾರ್ಯಕರ್ತ ನಾರಾಯಣ ಭೀಮಗುಳಿ ನಿಧನ.

Image
ಹರಿಹರ ಪಲ್ಲತ್ತಡ್ಕ ನಿವಾಸಿ ನಾರಾಯಣ ಭೀಮಗುಳಿ(52) ಅನಾರೋಗ್ಯದಿಂದ ಪೆ.6 ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.  ಇವರು ಶ್ರೀ ಹರಿಹರೇಶ್ವರ ಯಕ್ಷಗಾನ ಕಲಾ ಸಂಘದ ಸ್ಥಾಪಕಾಧ್ಯಕ್ಷ. ನಾಟಕ ಕಲಾವಿದರಾಗಿ, ಸಂಘಟಕರಾಗಿದ್ದರು. ಭಾರತೀಯ ಜನತಾ ಪಾರ್ಟಿ ಹಿರಿಯ ಕಾರ್ಯಕರ್ತರಾಗಿದ್ದು, ವಿವಿಧ ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದರು. ಬಲಶಾಲಿ ವಾರಪತ್ರಿಕೆ. ಕಡಲಕೇಸರಿ ಪತ್ರಿಕೆಗಳಲ್ಲಿ ವರದಿಗಾರರಾಗಿ ಸೇವೆ ಸಲ್ಲಿಸಿದ್ದರು. ಮೃತರು ತಂದೆ ಪುಟ್ಟಣ್ಣ ಗೌಡ ಸಹೋದರರಾದ ನಿತ್ಯಾನಂದ ಬೀಮಗುಳಿ, ಪತ್ರಕರ್ತ ಬಾಲಕೃಷ್ಣ ಭೀಮಗುಳಿ, ಪತ್ನಿ ಭವಾನಿ, ಪುತ್ರಿ ಹರ್ಷಿತ,ಪುತ್ರ ವಿನಿತ್ ಹಾಗು,ಕುಟುಂಬಸ್ಥರು ಬಂದುಗಳನ್ನು ಅಗಲಿದ್ದಾರೆ.

ಕನ್ನಡ ಚಿತ್ರನಟ ದೇವರಾಜ್ ಕುಟುಂಬ ಸಮೇತ ಕುಕ್ಕೆ ಸುಬ್ರಹ್ಮಣ್ಯ ಭೇಟಿ.

Image
ಸುಬ್ರಹ್ಮಣ್ಯ ಫೆ.6: ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟ ದೇವರಾಜ್ ,ಅವರ ಸುಪುತ್ರ ಪ್ರಜ್ವಲ್ ದೇವರಾಜ್ , ಹಾಗೂ ಕುಟುಂಬಸ್ಥರು ಇಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಮಾಡಿ ಪ್ರಸಾದ ಸ್ವೀಕರಿಸಿದರು. ಅವರನ್ನು ಶ್ರೀ ದೇವಳದ ಸಿಷ್ಟಾಚಾರ ಅಧಿಕಾರಿ ಜಯರಾಮ್ ರಾವ್ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಕಡಬ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುದೀರ್ ಕುಮಾರ್ ಶೆಟ್ಟಿ, ಸುಬ್ರಹ್ಮಣ್ಯದ ರಾಜಕೀಯ ಮುಖಂಡರಾದ ಗೋಪಾಲ ಎಣ್ಣೆಮಜಲ್, ಕಿಶೋರ್ ಕುಮಾರ್ ಅರಂಪಾಡಿ, ಶಿವರಾಮ ರೈ ,ಮಾಸ್ಟರ್ ಪ್ಲಾನ್ ಸಮಿತಿಯ ಲೋಲಾಕ್ಷ ಮತ್ತಿತರರು ಉಪಸ್ಥಿತರಿದ್ದರು.

ಪುತ್ತಿಗೆ ಮಠಾಧೀಶರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಶ್ರೀ ಗಳಿಂದ ನರಹರಿ ಉಪಾಧ್ಯಾಯ ದಂಪತಿಗಳಿಗೆ ಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಆಶೀರ್ವಾದ.

Image
ಮಾಧ್ವಮತ ತತ್ವ ಪ್ರತಿಪಾದನಾಚಾರ್ಯ ಶ್ರೀಮನ್ಮಧ್ವಾಚಾರ್ಯರ ಪುಣ್ಯಪಾದ ಸ್ಪರ್ಶಿಸಿದ ಪುಣ್ಯಕ್ಷೇತ್ರ ರಾಮಕುಂಜದ ಈರಕೀ ಮಠ. ಸುಮಾರು 8 ಶತಮಾನಗಳಿಂದ ಮಠದ ಸಂಪ್ರದಾಯಗಳನ್ನು ಎತ್ತಿ ಹಿಡಿದು, ಭಕ್ತ ಜನರಿಗೆ ಒಳಿತು ಬಯಸಿ ಸೇವೆ ಸಲ್ಲಿಸುತ್ತಿರುವವರು ನೂರಿತ್ತಾಯ ಕುಟುಂಬಸ್ಥರು. ಈರಕೀಮಠ ದಿ| ಕೇಶವ ಉಪಾಧ್ಯಾಯರು, ಶತಾಯುಷಿ ದಿ| ವೆಂಕಟ್ರಮಣ ಉಪಾಧ್ಯಾಯರು, ತನ್ನ ಸಹೋದರರ ಒಡಗೂಡಿ ಮುನ್ನಡೆಸುತ್ತಿರುವ ನರಹರಿ ಉಪಾಧ್ಯಾಯರು ಇವರ ಜೊತೆಗೆ ಹೆಗಲಿಗೆ ಹೆಗಲು ಕೊಟ್ಟು ದುಡಿಯುತ್ತಿರುವ ಮುಂದಿನ ತಲೆಮಾರಿನ ನಂಬಿಕಸ್ಥ ಯುವಕ ಅನಿರುದ್ಧ ಉಪಾಧ್ಯಾಯರು, ತಮ್ಮ ಬದುಕನ್ನೇ ಮಠಕ್ಕಾಗಿ ಅರ್ಪಿಸಿದ ಮನೆಯ ಗೃಹಿಣಿಯರು, ಮಕ್ಕಳು, ಕುಟುಂಬಸ್ಥರು ಮಠದ ಸೇವೆಗಾಗಿ ಸಲ್ಲಿಸಿದ ಅವಿರತ ಶ್ರಮವನ್ನು ಕಂಡವರು ನಾವು. ಉಡುಪಿಯ ಅಷ್ಟಮಠಗಳಿಗೂ ಈರಕೀ ಮಠಕ್ಕೂ ಅವಿನಾಭಾವ ನಂಟು ಬಹು ಕಾಲದ್ದು. ಈರಕೀಮಠ ಸಮಾಜಕ್ಕಾಗಿ ಸಲ್ಲಿಸುತ್ತಿರುವ ನಿರಂತರ ಸೇವೆಯನ್ನು ಗುರುತಿಸಿ ಉಡುಪಿಯ ರಾಜಾಂಗಣದಲ್ಲಿ ನರಹರಿ ಉಪಾಧ್ಯಾಯ ದಂಪತಿಗಳನ್ನು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಶ್ರೀ ಸುಗುಣೇಂದ್ರ ತೀರ್ಥರು ಗೌರವದ ಕೃಷ್ಣಾನುಗ್ರಹ ಪ್ರಶಸ್ತಿಯನ್ನಿತ್ತು ಸನ್ಮಾನಿಸಿರುವುದು ಮಠದ ಭಕ್ತರಾದ ನಮಗೆಲ್ಲ ತುಂಬು ಸಂತಸ ನೀಡಿದೆ. ಮಠದ ಆರಾಧ್ಯ ದೇವರುಗಳು ಕುಟುಂಬಕ್ಕೆ ಇನ್ನಷ್ಟು ಶಕ್ತಿ ನೀಡಿ ಸಮಾಜಕ್ಕೆ ಮಾರ್ಗದರ್ಶನ ನೀಡುವಂತೆ ಅನುಗ್ರಹಿಸಲಿ. ಮಠದ ಸತ್ಪರಂಪರೆ ಸದಾ ಬೆಳಗಲಿ.  ...

ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಸರಕಾರಿ ಶಾಲೆಗೆ ದತ್ತಿನಿ ಕೊಡುಗೆ.

Image
ಸುಬ್ರಹ್ಮಣ್ಯ ಫೆ5: ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ವಿದ್ಯಾರ್ಥಿಗಳ ವಿದ್ಯಾರ್ಜನೆಯಲ್ಲಿ ಅತ್ಯುನ್ನತ ಅಂಕ ಪಡೆದವರಿಗೆ ರೂ. 10000 /=ಗಳ ದತ್ತಿ ನಿಧಿಯನ್ನು ನೀಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ಚಂದ್ರಶೇಖರ್ ನಾಯರ್ ದತ್ತಿ ನಿಧಿಯನ್ನು ಶಾಲಾ ಮುಖ್ಯೋಪಾಧ್ಯಾಯ ಮಾಧವ ಮೂಕಮಲೆ ಅವರಿಗೆ ಹಸ್ತಾಂತರಿಸಿದರು. ಮುಖ್ಯ ಅತಿಥಿಗಳಾಗಿ ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡು ತೋಟ ,ಪೂರ್ವ ಅಧ್ಯಕ್ಷರುಗಳಾದ ಗೋಪಾಲ ಎಣ್ಣೆ ಮಜಲ್, ಮಾಯಿಲಪ್ಪ ಸಂಕೇಶ ,ಜೊತೆ ಕಾರ್ಯದರ್ಶಿ ಭವಾನಿ ಶಂಕರ ಪೈಲಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶಾಲಾ ಶಿಕ್ಷಕ ವೃಂದ ದವರು ವಿದ್ಯಾರ್ಥಿಗಳು ಹಾಜರಿದ್ದರು. ಗೋಪಾಲ್ ಎಣ್ಣೆ ಮಜಲ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಚಂದ್ರಶೇಖರ್ ನಾಯರ್ ಸ್ವಾಗತಿಸಿ ಭವಾನಿ ಶಂಕರ ಪೈಲಾಜೆ ಧನ್ಯವಾದ ಸಮರ್ಪಿಸಿದರು.

ಬಾಯಿ ಕ್ಯಾನ್ಸರ್ ಗೆ ಹೆದರಬೇಕಾಗಿಲ್ಲ: ಡಾ|| ಚೂಂತಾರು.

Image
ಹೆಚ್ಚಿನ ಎಲ್ಲಾ ಬಾಯಿ ಕ್ಯಾನ್ಸರ್ ಗಳು ತಡೆಗಟ್ಟಬಹುದಾದ ರೋಗವಾಗಿದ್ದು, ತಂಬಾಕು ಉತ್ಪನ್ನಗಳನ್ನು ಬಳಸದೇ ಇದ್ದಲ್ಲಿ ಖಂಡಿತವಾಗಿಯೂ ಬಾಯಿ ಕ್ಯಾನ್ಸರ್ ಬರುವ ಸಾಧ್ಯತೆ ಶೇಕಡಾ 90 ರಷ್ಟು ಕ್ಷೀಣಿಸುತ್ತದೆ. ಹೆಚ್ಚಿನ ಎಲ್ಲಾ ಬಾಯಿ ಕ್ಯಾನ್ಸರ್ ಗಳು ತಂಬಾಕು ಉತ್ಪನ್ನಗಳಾದ ಗುಟ್ಕಾ, ಪಾನ್ ಪರಾನ್, ಬೀಡಿ, ಸಿಗರೇಟುಗಳ ದುರ್ಬಳಕೆಯಿಂದ ಬರುತ್ತದೆ. ಇದನ್ನು ವರ್ಜಿಸಿದ್ದಲ್ಲಿ ಮುಂದೊದಗುವ ಅನಾಹುತವನ್ನು ತಡೆಗಟ್ಟಬಹುದು. ಅದೇ ರೀತಿ ಒಂದು ವೇಳೆ ಬಾಯಿ ಕ್ಯಾನ್ಸರ್ ಬಂದರೂ ಆರಂಭಿಕ ಹಂತದಲ್ಲಿಯೇ ಅಂದರೆ ಸ್ಟೇಜ್ ಒಂದು ಮತ್ತು ಸ್ಟೇಜ್ ಎರಡರಲ್ಲಿ ಗುರುತಿಸಿ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಪಡೆದಲ್ಲಿ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯವಿದೆ.  ಬಾಯಿ ಕ್ಯಾನ್ಸರ್ ತಡೆಗಟ್ಟಬಹುದಾದ ಮತ್ತು ಚಿಕಿತ್ಸೆಗೆ ಸ್ಪಂದಿಸುವ ರೋಗವಾಗಿದೆ. ಆದರೆ ಮುಂದುವರಿದ ಹಂತದಲ್ಲಿ ಚಿಕಿತ್ಸೆಗೆ ಸರಿಯಾಗಿ ಸ್ವಂದಿಸದೇ ಇರುವ ಸಾಧ್ಯತೆ ಹೆಚ್ಚು. ಹಳ್ಳಿ ಮದ್ದು, ಮಂತ್ರವಾದ, ಮತ್ತಿತರ ಅವೈಜ್ಞಾನಿಕ ಚಿಕಿತ್ಸೆಯಿಂದ ರೋಗ ಉಲ್ಬಣವಾಗ ಬಹುದೇ ಹೊರತು ಯಾವುದೇ ಪ್ರಯೋಜನ ಸಿಗದು ಎಂದು ಚೂಂತಾರು ಸರೋಜಿನಿ ಪ್ರತಿಷ್ಠಾನದ ಕಾರ್ಯದರ್ಶಿ ಖ್ಯಾತ ಬಾಯಿ ಮುಖ ದವಡೆ ಶಸ್ತ್ರ ಚಿಕಿತ್ಸಕರಾದ ಡಾ|| ಮುರಲೀ ಮೋಹನ್ ಚೂಂತಾರು ಅಭಿಪ್ರಾಯ ಪಟ್ಟರು. ದಿನಾಂಕ 04-02-2025ನೇ ಮಂಗಳವಾರ ಹೊಸಂಗಡಿಯ ಸುರಕ್ಷಾ ದಂತ ಚಿಕಿತ್ಸಾಲಯದಲ್ಲಿ ಬೆಳಿಗ್ಗೆ  ೯ರ...

ಉದಕ ಪತ್ರಿಕೆಯನ್ನು ಜೇಸಿಐ ಭಾರತದ ಪೂರ್ವ ರಾಷ್ಟ್ರೀಯ ಅಧ್ಯಕ್ಷ ಜೇಸಿ ಟಿವಿಎನ್ ಮೂರ್ತಿ ಬಿಡುಗಡೆ.

Image
ಉಪ್ಪಿನಂಗಡಿ : ಜೇಸಿಐ ಭಾರತದ ವಲಯ 15ರ ಉದಕ ಪತ್ರಿಕೆಯನ್ನು ಜೇಸಿಐ ಕಾರ್ಕಳ ರೂರಲ್ ಘಟಕದ ಆತಿಥ್ಯದಲ್ಲಿ ನಡೆದ ವಲಯದ ವಿವಿಧ ಘಟಕಗಳ ಘಟಕಾಧಿಕಾರಿಗಳ ತರಬೇತಿ ಕಮ್ಮಟದಲ್ಲಿ ಪೂರ್ವ ರಾಷ್ಟ್ರೀಯ ಅಧ್ಯಕ್ಷ ಜೇಸಿ ಟಿವಿಎನ್ ಮೂರ್ತಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಜೇಸಿಐ ಭಾರತದ ರಾಷ್ಟ್ರೀಯ ಉಪಾಧ್ಯಕ್ಷ ಜೇಸಿ ಜಿಎಸ್ಎನ್ ವರ್ಮಾ,ವಲಯಾಧ್ಯಕ್ಷ ಜೇಸಿ ಸೆನೆಟರ್ ಅಭಿಲಾಷ್, ನಿಕಟಪೂರ್ವ ವಲಯಾಧ್ಯಕ್ಷ ಜೇಸಿ ಅಡ್ವೊಕೇಟ್ ಗಿರೀಶ್, ಪೂರ್ವ ರಾಷ್ಟ್ರೀಯ ಉಪಾಧ್ಯಕ್ಷ ಸೆನೆಟರ್ ಜೇಸಿ ಸದಾನಂದ ನಾವಡ , ಪೂರ್ವ ವಲಯಾಧ್ಯಕ್ಷ ಜೇಸಿ ಸೆನೆಟರ್ ಕೃಷ್ಣ ಮೋಹನ್ , ಜೆಎಸಿ  ಚೇರ್ ಪರ್ಸನ್ ಜೇಸಿ ಆಶಾ ಅಲೆನ್ ವಾಜ್, ಉದ್ಯಮಿ ವಿಜಯ್ ಶೆಟ್ಟಿ, ಘಟಕ ಅಧ್ಯಕ್ಷ ಜೇಸಿ ಅರುಣ್, ಜೇಸಿ ಸಂತೋಷ್, ವಲಯಾಡಳಿತ ಮಂಡಳಿಯ ನಿರ್ದೇಶಕ ಜೇಸಿ ಅಜಿತ್ ರೈ ಮತ್ತು ಉದಕ ಸಂಪಾದಕ ಜೇಸಿ ಮೋಹನ್ ಚಂದ್ರ ತೋಟದ ಮನೆ ಉಪಸ್ಥಿತರಿದ್ದರು.

ಕಡಬ: ಚಲಿಸುತ್ತಿದ್ದ ಬೈಕ್ ಮೇಲೆ ದೂಪದ (ಹಾಲು ಮಡ್ಡಿ) ಮರ ಬಿದ್ದು ಬೈಕ್ ಸವಾರ ಗಾಯಗೊಂಡ ಘಟನೆ.

Image
ಕಡಬ – ಪಂಜ ರಸ್ತೆಯ ಪುಳಿಕುಕ್ಕು ಸಮೀಪ  ಮಂಗಳವಾರ ಸಂಜೆ( ಫೆ.4) ನಡೆದಿದೆ. ಈ ಘಟನೆಯಲ್ಲಿ ಕೋಡಿಂಬಾಳ ಗ್ರಾಮದ ಪಟ್ನ ನಿವಾಸಿ ಯಶವಂತ ಎಂಬವರು ಗಂಭೀರ ಗಾಯಗೊಂಡಿರುವುದಾಗಿ  ತಿಳಿದು ಬಂದಿದೆ . ಗಾಯಾಳುವನ್ನು ಆಸ್ಪತ್ರೆಗೆ ಸೇರಿಸಲಾಗಿದೆ.  ಪಿಗ್ಮಿ ಕಲೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಅವರು ಈ ರಸ್ತೆಯಲ್ಲಿ ಬರುತ್ತಿದ್ದಾಗ ಈ ಘಟನೆ ನಡೆದಿದೆ ಕಳೆದ ಕೆಲವು ತಿಂಗಳ ಹಿಂದಷ್ಟೇ ಇದೇ ಪರಿಸರದಲ್ಲಿ ದೂಪದ ಮರವೊಂದು ಚಲಿಸುತ್ತಿದ್ದ ದ್ವಿಚಕ್ರ ವಾಹನದ ಮೇಲೆ ಬಿದ್ದು ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಮಾಸುವ ಮುನ್ನವೇ ಮತ್ತೊಂದು ದುರ್ಘಟನೆ ಸಂಭವಿಸಿದೆ.   ಈ ವೇಳೆ ರಸ್ತೆಯ ಅಂಚಿನಲ್ಲಿರುವ ಮರಗಳನ್ನು ತೆಗೆಯುವಂತೆ ಸ್ಥಳೀಯರು ಆಗ್ರಹಿಸಿದ್ದು, ಆದರೇ ಆ ವೇಳೆ ಕೇವಲ ಎರಡು ಮರಗಳನ್ನು ತೆರವುಗೊಳಿಸಿ ಜನರ ಕಣ್ಣಿಗೆ ಮಣ್ಣೇರಚ್ಚುವ ಕಾರ್ಯ ಅರಣ್ಯ ಇಲಾಖೆ ಮಾಡಿತ್ತು ಎಂಬ ಆರೋಪ ಆಗ ಕೇಳಿ ಬಂದಿತ್ತು. ಈ ಆರೋಪಕ್ಕೆ ಪುಷ್ಟಿ ನೀಡುವಂತೆ ಇಂದಿನ ಘಟನೆ ನಡೆದಿದೆ. ಇಂದಿನ ಘಟನೆಯಲ್ಲಿ ಕಡಬ ತಾಲೂಕಿನ  ಕೋಡಿಂಬಾಳ ಗ್ರಾಮದ ಪಟ್ನ ನಿವಾಸಿ,ಪಿಗ್ಮಿ ಕಲೆಕ್ಟರ್‌ ಆಗಿ ಕೆಲಸ ನಿರ್ವಹಿಸುವ ಯಶವಂತ ಎಂಬವರು ಗಾಯಗೊಂಡಿದ್ದಾರೆ. ಎಂದಿನಂತೆ ಪಿಗ್ಮಿ ಕಲೆಕ್ಷನ್‌ ಗೆಂದು ಅವರು ತಮ್ಮ ದ್ವಿ ಚಕ್ರ ವಾಹನದಲ್ಲಿ ಸಂಜೆ ವೇಳೆ  ಸಂಚರಿಸುತ್ತಿದ್ದಾಗ ಅಪಘಾತ ನಡೆದಿದೆ.  ಅವರು  ಕಡಬ – ಪಂಜ ರಸ್ತೆಯ ಪುಳಿಕುಕ್ಕು...

ಜೇಸಿಐ ವಲಯ 15ರ ಉದಕ ಸಂಪಾದಕರಾಗಿ ಉಪನ್ಯಾಸಕ ಜೇಸಿ ಮೋಹನ್ ಚಂದ್ರ ಆಯ್ಕೆ.

Image
ಉಪ್ಪಿನಂಗಡಿ: 2025ನೇ ಸಾಲಿನ ಜೇಸಿಐ ಭಾರತದ ವಲಯ 15ರ ಉದಕ ಪತ್ರಿಕೆಯ ಸಂಪಾದಕರಾಗಿ ಎರಡನೇ ಬಾರಿಗೆ ಉಪನ್ಯಾಸಕ ಜೇಸಿ ಮೋಹನ್ ಚಂದ್ರ ತೋಟದ ಮನೆ ಆಯ್ಕೆ ಯಾಗಿದ್ದಾರೆ. ಜೇಸಿಐ ಉಪ್ಪಿನಂಗಡಿ ಘಟಕದ ಪೂರ್ವ ಅಧ್ಯಕ್ಷರಾಗಿದ್ದಾರೆ. ಇವರ ಜೇಸಿಐ ಚಟುವಟಿಕೆಗಳ ಗುರುತಿಸಿ,ಅತ್ಯುತ್ತಮ ಘಟಕಾಧ್ಯಕ್ಷ ಪ್ರಶಸ್ತಿ, ವಲಯಾಧಿಕಾರಿಯಾಗಿ ನೀಡಿದ ಸೇವೆಯನ್ನು ಪರಿಗಣಿಸಿ ಅತ್ಯುತ್ತಮ ವಲಯ ಸಂಯೋಜಕ ಪ್ರಶಸ್ತಿ ಮತ್ತು ಜೇಸಿಐ ವಲಯ 15 ಕೊಡಮಾಡುವ ಸಾಧನಾ ಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇವರು ಉಪನ್ಯಾಸಕ ವೃತ್ತಿಯ ಜೊತೆಗೆ ಕಾರ್ಯಕ್ರಮ ನಿರೂಪಕರಾಗಿ, ಪತ್ರಿಕೆಗಳ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸೇವಾ ಮನೋಭಾವನೆಯಿಂದ ಯುವ ಜನಾಂಗದ ಬದುಕಿನಲ್ಲಿ ಶಿಸ್ತಿನ ಔನತ್ಯರೋವರ್ ಮತ್ತು ರೇಂಜರ್ ಬೀಳ್ಕೊಡುಗೆ ಸಮಾರಂಭದಲ್ಲಿ ಪ್ರಾಚಾರ್ಯ ಸೋಮಶೇಖರ್ ನಾಯಕ್ ಅಭಿಮತ.

Image
ಸುಬ್ರಹ್ಮಣ್ಯ : ಸಮಾಜಮುಖಿಯಾದ ಸೇವಾ ಮನೋಭಾವನೆಯಿಂದ ಯುವ ಜನಾಂಗದ ಬದುಕಿನಲ್ಲಿ ಶಿಸ್ತಿನ ಔನತ್ಯ ಉಂಟಾಗುತ್ತದೆ.ಯುವ ಮನಸುಗಳು ಸದಾ ಸಾರ್ವಜನಿಕರಿಗೆ ಒಂದಲ್ಲ ಒಂದು ರೀತಿಯಾಗಿ ಸಹಕಾರ ಮಾಡುವ ಅಧಮ್ಯ ಮನಸ್ಥಿತಿಯನ್ನು ಹೊಂದಬೇಕಾದುದು ಅತ್ಯಗತ್ಯ.ವ್ಯಾಸಂಗದ ಅವಧಿಯಲ್ಲಿ ಬದುಕಿನ ಪಾಠವನ್ನು ಕಲಿಯಲು ರೋವರ್ ರೇಂಜರ್‌ನಂತಹ ಸಂಸ್ಥೆಗಳು ಪೂರಕ ವಾತಾವರಣ ಕಲಿಸುತ್ತದೆ.ವಿದ್ಯಾಸಂಸ್ಥೆಯಲ್ಲಿ ರೋವರ್ ರೇಂಜರ್ ಘಟಕದ ವಿದ್ಯಾರ್ಥಿಗಳು ನೆರವೇರಿಸಿದ ಅಪ್ರತಿಮ ಸೇವೆಯು ಸದಾ ನಮ್ಮ ಮನಸಲ್ಲಿ ಹಸಿರಾಗಿರುತ್ತದೆ.ಮುಂದೆ ಜೀವನದಲ್ಲಿ ಉನ್ನತಿ ಸಾಧಿಸಲು ತಮ್ಮ ಈ ಸೇವೆಯೂ ಅಡಿಗಲ್ಲಾಗಲಿದೆ ಎಂದು ಎಸ್‌ಎಸ್‌ಪಿಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಹೇಳಿದರು.  ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ರೋವರ್ ರೇಂಜರ್ ಘಟಕದ ಸೀನಿಯರ್ ರೋವರ್ ರೇಂಜರ್ ವಿದ್ಯಾರ್ಥಿಗಳಿಗೆ ಶನಿವಾರ ನಡೆದ ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ರೋವರ್ ರೇಂಜರ್ ಘಟಕದ ವಿದ್ಯಾರ್ಥಿಗಳು ಸದಾ ಶಿಸ್ತು ಮತ್ತು ಸಂಯಮದಿAದ ಸೇವಾ ಕಾರ್ಯವನ್ನು ಕಳೆದ ಎರಡು ವರ್ಷಗಳಿಂದ ನೆರವೇರಿಸಿಕೊಂಡು ಬಂದಿರುವುದು ಶ್ಲಾಘನೀಯ.ನಿಮ್ಮ ಮುಂದಿನ ಜೀವನಕ್ಕೆ ಸಂಸ್ಥೆಯಲ್ಲಿ ಕಲಿತ ಜ್ಞಾನಗಳು ಮತ್ತು ಸೇವಾ ಮನೋಭಾವನೆಯು ದಾರಿದೀಪವಾಗಲಿ ಎಂದು ಹಾರೈಸಿದರು.  ಹಿರಿಯ ಉಪನ್ಯಾಸಕಿ ರೇಖಾರಾಣಿ...