ಕುಕ್ಕೆ ಕ್ಷೇತ್ರಕ್ಕೆ ಉಜ್ಜಯಿನಿ ನಾಥ ಸಂಪ್ರದಾಯದ ಸ್ವಾಮೀಜಿ ಭೇಟಿ.

ಸುಬ್ರಹ್ಮಣ್ಯ ಫೆ.11: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಅಖಿಲ ಭಾರತೀಯ ನಾಥ ಸಂಪ್ರದಾಯದ ಮಧ್ಯಪ್ರದೇಶದ ಉಜ್ಜಯಿನಿಯ ಶ್ರೀ ಶ್ರೀ ಶ್ರೀ 1008 ಮಹಾಂತ ಯೋಗಿ ಪೀರ್ ರಮನಾಥ್ ಜಿ ಮಹಾರಾಜ್ ಸ್ವಾಮೀಜಿಯವರು ದಕ್ಷಿಣ ಭಾರತದ ಪುಣ್ಯಕ್ಷೇತ್ರಗಳನ್ನು ಸಂದರ್ಶಿಸುತ ಇಂದು ಮಂಗಳವಾರ ಕುಕ್ಕೆ ಕ್ಷೇತ್ರಕ್ಕೆ ತಮ್ಮ ಅನುಯಾಯಿಗಳೊಂದಿಗೆ ಭೇಟಿ ನೀಡಿದರು. ಕ್ಷೇತ್ರಕ್ಕೆ ಆಗಮಿಸಿದ ಸ್ವಾಮೀಜಿಯವರನ್ನು ಶ್ರೀ ದೇವಳದ ವತಿಯಿಂದ ಪೂರ್ಣ ಕೊಂಬ ದೊಂದಿಗೆ ಸ್ವಾಗತಿಸಲಾಯಿತು. ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗೊಂಡಿ ಅವರು ತುಳಸಿ ಹಾರ ಹಾಕಿ ಸ್ವಾಮೀಜಿಯವರನ್ನು ಗೌರವಿಸಿದರು. ಶ್ರೀ ದೇವಳಕ್ಕೆ ಭೇಟಿ ನೀಡಿದ ಸ್ವಾಮೀಜಿಯವರು ದೇವರ ದರ್ಶನವನ್ನು ಮಾಡಿದರು ತದನಂತರ ಮುಖ್ಯ ಅರ್ಚಕರಾದ ಸೀತಾರಾಮ ಎಡಪಡಿತಾಯ ಅವರು ದೇವರ ಪ್ರಸಾದ ನೀಡಿದರು. ಈ ಸಂದರ್ಭದಲ್ಲಿ ದೇವಳದ ಶಿಷ್ಟಾಚಾರ ಅಧಿಕಾರಿ ಜಯರಾಮರಾವ್ ಸ್ಥಳೀಯರಾದ ಶ್ರೀ ಕುಮಾರ ಬಿಲದ್ವಾರ ಮತ್ತಿತರರು ಹಾಜರಿದ್ದರು.

Comments

Popular posts from this blog

ಕುಕ್ಕೆ ಸುಬ್ರಹ್ಮಣ್ಯ ರಥಬೀದಿಯಲ್ಲಿ ಭಕ್ತನ ಮೇಲೆ ಸೌಟಿನಿಂದ ಹಲ್ಲೆ – ವೈರಲ್ ವಿಡಿಯೋ, ದೇವಸ್ಥಾನ ಮೆನೇಜರ್ ಮೌನಕ್ಕೆ ಸಾರ್ವಜನಿಕ ಆಕ್ರೋಶ!

ಕುಕ್ಕೆ ಸುಬ್ರಹ್ಮಣ್ಯ: ಸಾರಿಗೆ ವ್ಯವಸ್ಥೆಯಲ್ಲಿ ಖಾಸಗಿ ಬಸ್ ಸಂಸ್ಥೆಯ ನೂತನ ಹೆಜ್ಜೆ – ಗ್ರಾಮೀಣ ಭಾಗದ ಅಭಿವೃದ್ಧಿಗೆ ಬಲ.

ರಾಮಕುಂಜದಲ್ಲಿ ಹೀಗೊಂದು ಬೇನರ್ - ಬೇನರ್ ಅಳವಡಿಸಿ ತಾಕತ್ತು ತೋರಿದ ಜನರು!