Posts

Showing posts from June, 2025

ಕಡಬ ಬಸ್ ನಿಲ್ದಾಣ ಸಮಸ್ಯೆ: ತಕ್ಷಣ ಕ್ರಮಕ್ಕೆ ಸೂಚನೆ ನೀಡಿದ ಸಚಿವ ರಾಮಲಿಂಗಾ ರೆಡ್ಡಿ

Image
ಕಡಬ , ಜುಲೈ 1: ರಾಜ್ಯ ಸಾರಿಗೆ ಮತ್ತು ಮುಜರಾಯಿ ಸಚಿವರಾದ ರಾಮಲಿಂಗಾ ರೆಡ್ಡಿ ಅವರು ಕಡಬ ಬಸ್ ನಿಲ್ದಾಣದ ಸಮಸ್ಯೆಯ ಬಗ್ಗೆ ಗಂಭೀರವಾಗಿ ಗಮನಹರಿಸಿ, ತಕ್ಷಣ ಕ್ರಮಕೈಗೊಳ್ಳಬೇಕೆಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಸೂಚನೆ ನೀಡಿದರು. ಕಡಬ ತಾಲೂಕು ಬಸ್ ನಿಲ್ದಾಣವು ಸುಬ್ರಹ್ಮಣ್ಯ - ಉಪ್ಪಿನಂಗಡಿ ರಾಜ್ಯ ಹೆದ್ದಾರಿ ಮದ್ಯದಲ್ಲಿ, ತಿರುವಿನಲ್ಲಿ ನೆಲೆಗೊಂಡಿದೆ.  ಇದರಿಂದಾಗಿ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಅಪಾರ ತೊಂದರೆ ಉಂಟಾಗುತ್ತಿದ್ದು, ಅಪಾಯದ ಪರಿಸ್ಥಿತಿಗೂ ಕಾರಣವಾಗುತ್ತಿದೆ. ಈ ಸ್ಥಳವು ಪಂಜ ಕಡೆಗೆ ಹೋಗುವ ರಸ್ತೆಯೂ ತಾಗಿಕೊಂಡಿರುವುದರಿಂದ,  ಮೂರು ಪ್ರಮುಖ ದಿಕ್ಕುಗಳಿಂದ ವಾಹನಗಳು ಸೇರಿದ ಹೆದ್ದಾರಿ ಸಂಪರ್ಕದ ಮಧ್ಯದಲ್ಲಿ ಬಸ್ ನಿಲ್ದಾಣ ಇರುವುದೇ ಪ್ರಮುಖ ಸಮಸ್ಯೆ ಎಂದು ಸ್ಥಳೀಯರು ವಿವರಿಸಿದರು. ಈ ವಿಷಯವನ್ನು ಮಾಧ್ಯಮದವರು ಪ್ರಸ್ತಾಪಿಸಿದಾಗ, ಸಚಿವರು ತಕ್ಷಣವೇ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಮಾತನಾಡಿ, "ಹೊಸ ಬಸ್ ನಿಲ್ದಾಣಕ್ಕೆ ಭೂಮಿ ಈಗಾಗಲೇ ನಿಗದಿಯಾಗಿದ್ದು, ಆದರೆ ಅದಕ್ಕೆ ಸಂಪರ್ಕ ಹೊಂದುವ ರಸ್ತೆಯಲ್ಲಿ ಖಾಸಗಿ ಕಟ್ಟಡವೊಂದು ಅಡ್ಡಿಯಾಗಿದ್ದು, ಯೋಜನೆ ಮುಂದುವರಿಯಲು ವಿಳಂಬವಾಗಿದೆ" ಎಂದು ಹೇಳಿದರು. ಅವರಿಗೆ ಪ್ರತಿಕ್ರಿಯಿಸಿದ ಸಚಿವ ರಾಮಲಿಂಗಾ ರೆಡ್ಡಿಯವರು, ...

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಿರಂತರವಾಗಿ ಸಾಗುತ್ತಿರುವ ಸ್ವಚ್ಛತಾ ಅಭಿಯಾನ.

Image
  ಸುಬ್ರಹ್ಮಣ್ಯ ಜೂನ್ 29 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಹಾಗೂ ಡಾ. ರವಿ ಕಕ್ಕೆ ಪದವ ಸಮಾಜ ಸೇವ ಟ್ರಸ್ಟ್ ಪ್ರತಿ ರವಿವಾರ ನಿರಂತರವಾಗಿ ಸ್ವಚ್ಛತಾ ಅಭಿಯಾನ ನಡೆಯುತ್ತಿದೆ. ಈ ದಿನ ನಡೆದ ಸ್ವಚ್ಛತಾ ಅಭಿಯಾನದಲ್ಲಿ ರವಿ ಕಕ್ಕೆ ಪದವ ಸಮಾಜ ಸೇವ ಟ್ರಸ್ಟ್ ಹಾಗೂ ಸೀನಿಯರ್ ಚೇಂಬರ್ನ ಸುಮಾರು ಮೂವತ್ತಕ್ಕೂ ಮಿಕ್ಕಿ ಸ್ವಯಂಸೇವಕರು ಕುಮಾರಧಾರ ಸೇತುವೆಯ ಮೇಲೆ ಇದ್ದಂತಹ ಕಸ ಕಡ್ಡಿಗಳು,ಮಣ್ಣು, ತರೆಗೆರೆಗಳು, ಹಾಗೂ ಕೊಚ್ಚೆ ವಸ್ತುಗಳನ್ನ ಸಂಪೂರ್ಣವಾಗಿ ಸ್ವಚ್ಛಗೊಳಿಸಿದರು. ಅದರೊಂದಿಗೆ ಕುಮಾರಧಾರ ಸ್ಥಾನಗಟ್ಟ ಪರಿಸರದಲ್ಲಿಯೂ ಕೂಡ ಇದ್ದ ಕಸ ಕಡ್ಡಿಗಳು ಪ್ಲಾಸ್ಟಿಕ್ ಚೀಲಗಳು ಪ್ಲಾಸ್ಟಿಕ್ ಬಾಟಲುಗಳು ಹಾಗೂ ಕೊಚ್ಚ ವಸ್ತುಗಳನ್ನ ತೆರವುಗೊಳಿಸಿರುವರು. ಈ ಸಂದರ್ಭದಲ್ಲಿ ಮಾತನಾಡಿದ ಸುಬ್ರಹ್ಮಣ್ಯ ಕುಕ್ಕೆಶ್ರೀ ಸೀನಿಯರ್ ಚೇಂಬರ್ ನ ಅಧ್ಯಕ್ಷ ವೆಂಕಟೇಶ ಎಚ್ ಎಲ್ ಮಾತನಾಡುತ್ತಾ" ಕುಕ್ಕೆ ಸುಬ್ರಹ್ಮಣ್ಯ ಪವಿತ್ರ ಕ್ಷೇತ್ರಕ್ಕೆ ದೇಶಾದ್ಯಂತ ಸಾವಿರಾರು ಭಕ್ತಾದಿಗಳು ದಿನಂಪ್ರತಿ ಆಗಮಿಸುವ ಇಂತಹ ಸಂದರ್ಭದಲ್ಲಿ ನಾವೆಲ್ಲರೂ ಸ್ವಚ್ಛತೆಗೆ ವಿಶೇಷವಾದ ಗಮನವನ್ನು ಹರಿಸಲೇಬೇಕು. ಕ್ಷೇತ್ರದ ಎಲ್ಲಾ ಕಡೆ ಸ್ವಚ್ಛ ಇದ್ದಲ್ಲಿ ಭಕ್ತಾದಿಗಳಿಗೆ ಸ್ವಚ್ಛ ಮನಸ್ಸಿನೊಂದಿಗೆ ದೇವರ ಸಾನಿಧ್ಯದಲ್ಲಿ ದೇವರ ದರ್ಶನವನ್ನು ಮಾಡಿ ಸಂಪ್ರೀತಿಗೊಳ್ಳುತ್ತಾರೆ" ಎಂದವರು ತಿಳಿಸಿದರು. ರವಿಕಕ್ಕೆ ಪದವು ಸಮಾಜ ಸೇವ...

ನೆಲ್ಯಾಡಿ ಧರ್ಮಪಥ ಯುವಕ ಮಂಡಲದಿಂದ ಸ್ವಚ್ಛತಾ ಶ್ರಮದಾನ ಮತ್ತು ವನಮಹೋತ್ಸವ: ಪರಿಸರ ಸಂರಕ್ಷಣೆಗೆ ನಿದರ್ಶನವಾದ ಜಾಗೃತಿ ಕಾರ್ಯಕ್ರಮ.

Image
ನೆಲ್ಯಾಡಿ : ಧರ್ಮಪಥ ಯುವಕ ಮಂಡಲದ ಸದಸ್ಯರು ಸಾಮಾಜಿಕ ಜವಾಬ್ದಾರಿಯ ಕುರಿತು ಚಿಂತಿಸಿ ಶ್ರದ್ಧೆಯಿಂದ ಶ್ರಮದಾನ ಹಾಗೂ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡರು. ಸ್ಥಳೀಯ ಶ್ರೀ ಅಯ್ಯಪ್ಪ ದೇವಸ್ಥಾನದಲ್ಲಿ ನಡೆದ ಸ್ವಚ್ಛತಾ ಕಾರ್ಯಕ್ರಮದೊಂದಿಗೆ, ನೆಲ್ಯಾಡಿಯ ರಾಷ್ಟ್ರೀಯ ಹೆದ್ದಾರಿ -75ರ ಪಕ್ಕದಲ್ಲಿ ಪ್ರಕೃತಿ ಅಬಿವೃದ್ಧಿ  ಪಡಿಸುವ ಉದ್ದೇಶದಿಂದ ನೂರಾರು ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆಯ ಪ್ರತಿಜ್ಞೆ ಬಲಪಡಿಸಲಾಯಿತು. ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಪಾಲ್ಗೊಂಡ ಯುವಕರು: ನರೇಂದ್ರ, ತಿಲಕ್ ರಾಜ್, ಸಂಕೇತ್, ಪ್ರೀತಮ್, ಆಧೀಷ್, ಯಶ್ವಿತ್, ಅಧೀಷ್, ಶ್ಯಾಮ್ ಶೌರಿ, ಚೇತನ್ ಅವರು ಶ್ರಮದಾನದ ಮೂಲಕ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಪ್ರದರ್ಶಿಸಿದರು. ಅವರೊಂದಿಗೆ ಪುರುಷೋತ್ತಮ ಶೆಟ್ಟಿ ಕೊಲ್ಯೊಟ್ಟು, ಸುಧೀರ್ ಕುಮಾರ್, ಉದಯ್ ಕುಮಾರ್, ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸಹಕರಿಸಿದರು. ಈ ಕಾರ್ಯದ ಮೂಲಕ ಮಕ್ಕಳು ಪರಿಸರ ಸ್ನೇಹಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಮುಂದಿನ ಪೀಳಿಗೆಗೆ ಸ್ಪೂರ್ತಿ ನೀಡುವ ಕಾರ್ಯ ಮಾಡಿದ್ದಾರೆ. ಇದೊಂದು ಮಾದರಿ ಕಾರ್ಯವಾಗಿ ಗುರುತಿಸಲ್ಪಡುತ್ತಿದ್ದು, ಇಂತಹ ಚಟುವಟಿಕೆಗಳು ಹೆಚ್ಚು ನಡೆಯಲಿ ಎಂಬ ಆಶಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ .

📰 ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಪೋಸ್ಟ್ ಪ್ರಸಾರ – ವ್ಯಕ್ತಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ.

Image
ಪುತ್ತೂರು , ಜೂನ್ 29, 2025: ವೈಯುಕ್ತಿಕ ವಿಷಯಕ್ಕೆ ಸಂಬಂಧಿಸಿದಂತೆ ಎಕ್ಸ್ (ಹಿಂದಿನ ಟ್ವಿಟರ್) ಪ್ಲಾಟ್‌ಫಾರ್ಮ್‌ನಲ್ಲಿ ಒಬ್ಬ ವ್ಯಕ್ತಿ ಅಶ್ಲೀಲ ಹಾಗೂ ಅಸಂಬಂಧಿತ ವಿಷಯದ ಪೋಸ್ಟ್‌ ಅನ್ನು ಶೇರ್ ಮಾಡಿದ ಪ್ರಕರಣದ ಕುರಿತಾಗಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸಂಘಟನೆಗಳು, ಧರ್ಮಗಳು ಹಾಗೂ ರಾಜಕೀಯ ಪಕ್ಷಗಳ ನಡುವೆ ವೈಮನಸ್ಸು ಉಂಟುಮಾಡುವ, ಸಾರ್ವಜನಿಕ ಶಾಂತಿ ಹಾಗೂ ನೆಮ್ಮದಿಗೆ ಭಂಗ ಉಂಟುಮಾಡುವ ರೀತಿಯ ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವುದು ತನಿಖೆ ಸಂದರ್ಭದಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧಿಸಿದಂತೆ ದಿನಾಂಕ 29-06-2025 ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅಕ್ರ: 51/2025ರಂತೆ, ಭಾರತೀಯ ನ್ಯಾಯ ಸಂಹಿತೆ (BNS) 2023ರ ಕಲಂಗಳು 296, 196(1)(a), ಮತ್ತು 353(2) ಅಡಿಯಲ್ಲಿ ಪ್ರಕರಣ ದಾಖಲಿಸಿ, ತನಿಖೆ ಪ್ರಾರಂಭಿಸಲಾಗಿದೆ. ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ ಸಂಗ್ರಹಿಸಿ, ಆರೋಪಿಯ ಗುರುತು ಮತ್ತು ತಂತ್ರಜ್ಞಾನ ಆಧಾರದ ಮೇಲೆ ಡಿಜಿಟಲ್ ಪುರಾವೆಗಳನ್ನು ಸಂಗ್ರಹಿಸುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಭೇಟಿ

Image
🗓 ದಿನಾಂಕ: ಜೂನ್ 30, 2025 ✍🏻 ನ್ಯೂಸ್‌ಪ್ಯಾಡ್ ವಾರ್ತೆ ಕುಕ್ಕೆ ಸುಬ್ರಹ್ಮಣ್ಯ : ರಾಜ್ಯದ ಮುಜರಾಯಿ ಮತ್ತು ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿಯವರು ಇಂದು ಪವಿತ್ರ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿದರು. ಭಕ್ತಿದೀಪದಿಂದ ಆರಂಭವಾದ ಭೇಟಿಯಲ್ಲಿ ದೇವರ ದರ್ಶನ ಪಡೆದ ಬಳಿಕ, ಮಾಸ್ಟರ್ ಪ್ಲಾನ್ ಸಮಿತಿ ಸಭೆಯಲ್ಲಿ ಭಾಗವಹಿಸಿದರು. ನಾಮಫಲಕ ಅನಾವರಣ, ಶಂಕುಸ್ಥಾಪನೆ ರದ್ದು ; ಆಶ್ಲೇಷ ಮಂದಿರ ನಿರ್ಮಾಣದ ಹಿನ್ನೆಲೆಯಲ್ಲಿ ನಾಮಫಲಕ ಅನಾವರಣ ಕಚೇರಿ ಮುಂಭಾಗದಲ್ಲಿ ನಡೆಯಿತು.  ಪೂರ್ವದ ಸಿದ್ಧತಿಗಳ ಪ್ರಕಾರ ತುಳಸಿ ತೋಟದಲ್ಲಿ ಭೂಮಿ ಪೂಜೆ ನೆರವೇರಿಸಲಾಗಿತ್ತು. ಆದರೆ ಹಿಂದಿನ ದಿನಗಳಲ್ಲಿ ಈ ಮಂದಿರದ ಶಂಕುಸ್ಥಾಪನೆ ನಡೆಯಿರುವ ಹಿನ್ನೆಲೆ, ಇಂದು ಪುನಃ ಶಂಕುಸ್ಥಾಪನೆ ಮಾಡಲು ಪ್ರಾಯಶ್ಚಿತ್ತ ಅಗತ್ಯವಿರುವ ಬಗ್ಗೆ ಅರ್ಚಕರ ಸಲಹೆ ಪಡೆದ ಪರಿಣಾಮ, ಈ ಕ್ರಮವನ್ನು ತಾತ್ಕಾಲಿಕವಾಗಿ ಬದಲಾಯಿಸಿ ಕೇವಲ ನಾಮಫಲಕ ಅನಾವರಣ ಮಾತ್ರ ನಡೆಯಿತು. ಅಷ್ಟೆಲ್ಲ ಅಲ್ಲದೆ, ಕಾರ್ಯಕ್ರಮದ ಕೊನೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಕಮೀಷನರ್ ಕಲ್ಲಿಗೆ ತೆಂಗಿನಕಾಯಿ ಒಡೆದು ಪವಿತ್ರತೆ ಸಲ್ಲಿಸಿದರು. ನಂತರ ಸಚಿವರೂ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಶ್ಲೇಷ ಮಂದಿರದ ದಾನಿಗಳಾದ ಮಾಜಿ ಸಚಿವ ಮಾಲೂರು ಕೃಷ್ಣಯ್ಯ ಶೆಟ್ಟಿ ಪರವಾಗಿ ಅವರ ಅಳಿಯ ಜೈ ಪುನೀತ್ ಅವರಿಗೆ ಆದೇಶ ಪತ್ರ ನೀಡ...

ಪಂಜ: ಕಾಚುಕುಜುಂಬ ದೈವದ ನೂತನ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಆರಂಭ.

Image
ಪಂಜ :ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಬಲಕೈ ಬಂಟ ಕಾಚುಕುಜುಂಬ ದೈವದ ಮೂಲಸ್ಥಾನ – ಗರಡಿ ಬೈಲು –ದಲ್ಲಿ ನಿರ್ಮಾಣವಾಗುತ್ತಿರುವ ನೂತನ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದೆ. ಜೂನ್ 29 ರಂದು ದೈವಸ್ಥಾನದ ಅಡಿಪಾಯಕ್ಕೆ ಕಾಂಕ್ರಿಟೀಕರಣ ಶ್ರಮದಾನ ಮೂಲಕ ಕಾರ್ಯಾರಂಭವಾಯಿತು. ಈ ಶ್ರಮದಾನ ಕಾರ್ಯಕ್ರಮದಲ್ಲಿ ಹಲವಾರು ಗಣ್ಯರು ಹಾಗೂ ಭಕ್ತರು ಪಾಲ್ಗೊಂಡಿದ್ದರು. ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪರಮೇಶ್ವರ ಬಿಳಿಮಲೆ, ಉಪಾಧ್ಯಕ್ಷ ಉಮೇಶ್ ಬುಡೆಂಗಿ, ಪೈಂದೋಡಿ ಶ್ರೀ ಸುಬ್ರಾಯ ಸ್ವಾಮಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಗೌಡ ಕುದ್ವ, ಪಂಬೆತ್ತಾಡಿ ಚಿಗುರು ಗೆಳೆಯರ ಬಳಗದ ಅಧ್ಯಕ್ಷ ಅಶ್ವಥ್ ಬಾಬ್ಲುಬೆಟ್ಟು, ವ್ಯವಸ್ಥಾಪನಾ ಸಮಿತಿ ಸದಸ್ಯರು ಸಂತೋಷ್ ರೈ ಪಲ್ಲತ್ತಡ್ಕ, ಧರ್ಮಣ್ಣ ನಾಯ್ಕ ಗರಡಿ, ಪವಿತ್ರ ಮಲ್ಲೆಟ್ಟಿ, ಮಾಲಿನಿ ಕುದ್ವ, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯರು ರಜಿತ್ ಭಟ್ ಪಂಜಬೀಡು, ದಿನೇಶ್ ಗರಡಿ, ಪಂಜ ಶ್ರೀ ಶಾರದಾಂಬಾ ಭಜನಾ ಮಂಡಳಿ ಅಧ್ಯಕ್ಷ ನಾಗಪ್ಪ ಗೌಡ ಪಂಜದಬೈಲು, ಹಾಗೂ ರಾಜೇಶ್ ಕುದ್ವ ಸೇರಿದಂತೆ ಹಲವು ಭಕ್ತರು ಮತ್ತು ಗ್ರಾಮಸ್ಥರು ಶ್ರಮದಾನದಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಈ ದೈವಸ್ಥಾನದ ಜೀರ್ಣೋದ್ಧಾರ ಕಾ...

📰 ಜೈನ ಧರ್ಮದ ಸ್ವಾಮೀಜಿಗೆ ಅವಮಾನಕಾರಕ ಕಾಮೆಂಟ್: ಪುತ್ತೂರು ಪೊಲೀಸರಿಂದ ಪ್ರಕರಣ ದಾಖಲು.

Image
ಪುತ್ತೂರು , ಜೂನ್ 29: ಪಡ್ನೂರು ಗ್ರಾಮದ ನಿವಾಸಿ ಜೀವಂದರ್ ಜೈನ್ (60) ಎಂಬವರು ನೀಡಿದ ದೂರಿನಂತೆ, ಸಾಮಾಜಿಕ ಜಾಲತಾಣ ಪೇಸ್‌ಬುಕ್‌ನಲ್ಲಿ ಜೈನ ಧರ್ಮದ ಸ್ವಾಮೀಜಿಗೆ ಮತ್ತು ದೇಶದ ಗೌರವಾನ್ವಿತ ಪ್ರಧಾನಮಂತ್ರಿಯವರಿಗೆ ಅವಮಾನ ಮಾಡುವ ರೀತಿಯ ಕಾಮೆಂಟ್‌ ಅನ್ನು ಬರೆದು ಸಾರ್ವಜನಿಕ ಶಾಂತಿಗೆ ಧಕ್ಕೆಯನ್ನುಂಟುಮಾಡುವ ಘಟನೆ ನಡೆದಿದೆ. "ಕರುನಾಡಿನ ಮಿನುಗುವ ನಕ್ಷತ್ರ" ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಫೇಸ್‌ಬುಕ್ ಪುಟದ ಒಬ್ಬ ಬಳಕೆದಾರನು ಈ ಅಪರಾಧ ಮಾಡಿದರೆಂದು ಆರೋಪಿಸಲಾಗಿದೆ. ಈ ವ್ಯಕ್ತಿ ಒಂದು ಪೋಸ್ಟ್‌ಗೆ ಪ್ರತಿಕ್ರಿಯೆ ನೀಡುವ ಸಂದರ್ಭ, ಧಾರ್ಮಿಕ ಗೌರವಕ್ಕೆ ಮತ್ತು ರಾಷ್ಟ್ರೀಯ ನಾಯಕರ ಮೌಲ್ಯಕ್ಕೆ ಧಕ್ಕೆಯಾಗುವಂತಹ ಅಸಭ್ಯ ಭಾಷೆ ಬಳಸಿ ಕಮೆಂಟ್ ಮಾಡಿದ್ದಾನೆ. ಈ ಕುರಿತು ಜೀವಂದರ್ ಜೈನ್ ಅವರು ಪುತ್ತೂರು ನಗರ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ, ಪ್ರಕರಣ ಸಂಖ್ಯೆ 50/2025 ಅಡಿಯಲ್ಲಿ ಭಾರತೀಯ ದಂಡ ಸಂಹಿತೆ BNS 2023ರ ಕಲಂ 196(1)(a), 353(2) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದು, ಮುಂದಿನ ಕಾನೂನು ಕ್ರಮಗಳನ್ನು ಕೈಗೊಂಡಿದ್ದಾರೆ. ಪುತ್ತೂರು ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿಯ ಅಸಭ್ಯ ಕೃತ್ಯಗಳನ್ನು ಶಿಸ್ತುಮೂಲಕ ನಿಯಂತ್ರಣಕ್ಕೆ ತರಲು ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

OLX APP ಮೂಲಕ ಕಾರು ಮಾರಾಟದ ಹೆಸರಿನಲ್ಲಿ ವಂಚನೆ: ಆರೋಪಿ ಬಂಧನ.

Image
ಮಂಗಳೂರು , ಜೂನ್ 29, 2025: OLX APP ಮೂಲಕ ಕಾರು ಮಾರಾಟದ ಹೆಸರಿನಲ್ಲಿ ಲಕ್ಷಾಂತರ ರೂ. ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಂಗಳೂರು ನಗರ ಸೆನ್ ಕ್ರೈಂ ಪೊಲೀಸ್ ಠಾಣೆ ಮೌಲ್ಯಯುತ ಕಾರ್ಯಾಚರಣೆ ನಡೆಸಿದ್ದು, ಆರೋಪಿತನನ್ನು ಬಂಧಿಸಲು ಯಶಸ್ವಿಯಾಗಿದೆ. ಬಂಧಿತ ಆರೋಪಿ: ರವಿಚಂದ್ರ ಮಂಜುನಾಥ ರೇವಣಕರ (ವಯಸ್ಸು 29), ತಂದೆ: ಮಂಜುನಾಥ ದೇವಣಕರ, ನಿವಾಸ: ಮನೆ ನಂ. 683, ಸೊರಬಾ ರಸ್ತೆ, ಸರ್ಕಾರಿ ಆಸ್ಪತ್ರೆ ಹತ್ತಿರ, ಬನವಾಸಿ, ಉತ್ತರ ಕನ್ನಡ ಜಿಲ್ಲೆ. ಪ್ರಕರಣದ ವಿವರ: ತಕ್ಷಣಿಕ ತನಿಖೆಯ ಪ್ರಕಾರ, ಆರೋಪಿ ರವಿಚಂದ್ರನು OLX APP ನಲ್ಲಿ ನಕಲಿ ಕಾರು ಮಾರಾಟದ ಜಾಹೀರಾತು ಹಾಕಿ, ದೂರುದಾರರಿಂದ ರೂ.2,50,000/- ಹಣ ಪಡೆದು ಮೋಸ ಮಾಡಿದ್ದಾನೆ. ಈ ಬಗ್ಗೆ ಮಂಗಳೂರು ಸೆನ್ ಕ್ರೈಂ ಪೊಲೀಸ್ ಠಾಣೆಯಲ್ಲಿ FIR ಸಂಖ್ಯೆ 28/2025 ದಾಖಲಾಗಿದೆ. ತನಿಖೆಯ ಪ್ರಗತಿ: ಪೋಲೀಸರ ತನಿಖೆಯಲ್ಲಿ, ಆರೋಪಿ ಹೊಸಪೇಟೆಯಲ್ಲಿರುವ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ, ಸೆನ್ ಕ್ರೈಂ ಪೊಲೀಸರು ತನಿಖಾ ತಂಡವನ್ನು ಸ್ಥಳಕ್ಕೆ ಕಳಿಸಿ ಆರೋಪಿತನನ್ನು ವಶಕ್ಕೆ ಪಡೆದಿದ್ದಾರೆ. ವಿಚಾರಣೆಯಲ್ಲಿ, ಆರೋಪಿತನು ವಿವಿಧ ಡಿಜಿಟಲ್ ವಿಧಾನಗಳಿಂದ ಜನರನ್ನು ವಂಚಿಸುತ್ತಿದ್ದನು ಎಂಬುದು ಬಹಿರಂಗವಾಗಿದೆ. ಆದಾಯಮೂಲಗಳು ಮತ್ತು ಉಪಕರಣಗಳು: ಆರೋಪಿತನಿಂದ 21 ಮೊಬೈಲ್ ಫೋನ್‌ಗಳು ಮತ್ತು 8 ಸಿಮ್ ಕಾರ್ಡ್‌ಗಳು ವಶಪಡಿಸಿಕೊಳ್ಳಲಾಗಿದೆ. ಈ ಸಿಮ್‌ಗಳು ಬಳಸಿರುವ 80 ಕ್ಕೂ ಅಧಿಕ ಸೈಬರ...

📰 ತಮಿಳುನಾಡು ಬಿಜೆಪಿ ನಾಯಕ ಅಣ್ಣಾಮಲೈ ಕುಟುಂಬ ಸಮೇತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಶ್ರೀ ಕ್ಷೇತ್ರಕ್ಕೆ ಆಗಮಿಸಿ ದರ್ಶನ ಪಡೆದರು.

Image
ಕುಕ್ಕೆ ಸುಬ್ರಹ್ಮಣ್ಯ : ಭಾರತೀಯ ಜನತಾ ಪಕ್ಷದ (BJP) ತಮಿಳುನಾಡು ರಾಜ್ಯದ ಮಾಜಿ ಅಧ್ಯಕ್ಷರು ಹಾಗೂ ಖ್ಯಾತ ಮಾಜಿ ಐಪಿಎಸ್‌ ಅಧಿಕಾರಿ ಕೆ. ಅಣ್ಣಾಮಲೈ ಅವರು ದಿನಾಂಕ _29/06/2025_ರಂದು ಕುಟುಂಬ ಸಮೇತ ಪವಿತ್ರ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದರ್ಶನಕ್ಕೆ ಆಗಮಿಸಿದರು. ಅವರು ಶ್ರೀ ಸಂಪುಟ ನರಸಿಂಹಸ್ವಾಮಿ ಸುಬ್ರಹ್ಮಣ್ಯ ಮಠದಲ್ಲಿ ಆಶ್ಲೇಷ ಬಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಅವರ ಪತ್ನಿ, ಮಕ್ಕಳು ಹಾಗೂ ಕುಟುಂಬಸ್ಥರು ಉಪಸ್ಥಿತರಿದ್ದರು. ಪೂಜೆ ಮುಗಿಸಿದ ನಂತರ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಪಾದರನ್ನು ಭೇಟಿಯಾಗಿ ಆಶೀರ್ವಾದ ಪಡೆದರು. ಮಾಧ್ಯಮದೊಂದಿಗೆ ಮಾತನಾಡಿದ ಅಣ್ಣಾಮಲೈ ಅವರು: "ನಾನು ಕಳೆದ ಹತ್ತು ಹದಿನೈದು ವರ್ಷಗಳಿಂದ ಸ್ವಾಮೀಜಿಗಳ ಹತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಬರುತ್ತಾ ಇದ್ದೇನೆ. ಆಶ್ಲೇಷ ನಕ್ಷತ್ರದ ಈ ಪುಣ್ಯದಿನದಂದು ದೇವರಲ್ಲಿ ಪ್ರಾರ್ಥನೆ ಮಾಡಿದ್ದು ತಮಿಳುನಾಡಿನ ಜನ, ಕರ್ನಾಟಕದ ಜನ ಹಾಗೂ ಇಡೀ ಭಾರತದ ಜನರು ಸುಖ ಶಾಂತಿ ನೆಮ್ಮದಿಯಾಗಿ ಇರಬೇಕು ಹಾಗೂ ಎಲ್ಲಾ ಜನರಿಗೂ ಒಳ್ಳೆದಾಗಬೇಕು ಎಂದು ಪ್ರಾರ್ಥನೆ ಮಾಡಿದ್ದೇನೆ ಎಂದರು." "ಈ ಕ್ಷೇತ್ರವು ಪರಶುರಾಮ ಸೃಷ್ಟಿಯ ಕ್ಷೇತ್ರವಾಗಿದ್ದು, ಸುಮಾರು 5000 ವರ್ಷಗಳ ಇತಿಹಾಸವಿದೆ. ಸಾವಿರಾರು ಭಕ್ತರು ನಂಬಿಕೆಯಿಂದ ಇಲ್ಲಿ ಬಂದು ದೇವರಲ್ಲಿ ಶ...

ಬಾಕಿ ಹಣಕ್ಕೆ ತಕರಾರು: ವ್ಯಕ್ತಿಯ ಮೇಲೆ ಹಲ್ಲೆ ಪ್ರಕರಣ ದಾಖಲು.

Image
ಬೆಳ್ತಂಗಡಿ : ಟಿಪ್ಪರ್ ಲಾರಿ ಬಾಡಿಗೆ ಹಣಕ್ಕೆ ಸಂಬಂಧಿಸಿದ ವಿವಾದವು ಭಾರೀ ಗಲಾಟೆಯಾಗಿ, ಮಾರಣಾಂತಿಕ ಹಲ್ಲೆಗೆ ಕಾರಣವಾಗಿರುವ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಚಾರ್ಮಾಡಿ ಗ್ರಾಮ ಬೀಟಿಗೆಯಲ್ಲಿ ನಡೆದಿರುವ ಘಟನೆ ಇದೀಗ ಬೆಳಕಿಗೆ ಬಂದಿದೆ. ಚಿಬಿದ್ರೆ ಗ್ರಾಮವಾಸಿ ಮಹಮ್ಮದ್ ತೌಸಿದ್ ಎಂಬವರು ತಮ್ಮ ಲಾರಿ ಅನ್ನು ಬಾಡಿಗೆಗೆ ನೀಡಿ, ಬಹುಕಾಲದಿಂದ ಬಾಕಿ ಉಳಿದ ಹಣಕ್ಕಾಗಿ ಧೀರವಾಗಿಯೇ ಕೇಳುತ್ತಿದ್ದರು ಎಂದು ತಿಳಿದುಬಂದಿದೆ. ಈ ಹಣದ ವಿಚಾರವಾಗಿ ಜೂನ್ 27 ರಂದು ಬೆಳಗ್ಗೆ ಚಾರ್ಮಾಡಿಯಲ್ಲಿ ನಡೆದ ಮಾತುಕತೆಯ ಸಂದರ್ಭದಲ್ಲಿ ಪರಸ್ಪರ ವಾಗ್ವಾದವು ಉಂಟಾಗಿ, ಬಳಿಕ ರೋಷ್ಟಕ್ಕೆದ್ದ ವ್ಯಕ್ತಿಗಳು ಹಲ್ಲೆಗೆ ಮುಂದಾದರು ಎಂದು ಮೂಲಗಳು ಹೇಳುತ್ತಿವೆ. ಪೀಡಿತನ ಹೇಳಿಕೆಯಂತೆ, ಅವರ ಎಡ ಕಣ್ಣಿಗೆ ಗಂಭೀರ ಗಾಯವಾಗಿದ್ದು, ದೃಷ್ಟಿ ನಷ್ಟವಾಗಿದೆ ಎಂದು ವೈದ್ಯಕೀಯ ವರದಿಯಲ್ಲಿ ತಿಳಿದುಬಂದಿದೆ. ಘಟನೆಯ ನಂತರ ಆರೋಪಿತರು ಸ್ಥಳದಿಂದ ಪರಾರಿಯಾಗಿದ್ದಾರೆ ಎನ್ನಲಾಗಿದೆ.  ಧರ್ಮಸ್ಥಳ ಪೊಲೀಸ್ ಠಾಣೆ ಅಕ್ರ 35/2025ಕಲಂ: 352, 115(2), 118(2), 109, 351(2) r/w 3(5) BNS-2023ಯಂತೆ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಫರಂಗಿಪೇಟೆಯಲ್ಲಿ ವ್ಯಕ್ತಿಗೆ ಹಲ್ಲೆ: ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು

Image
ಬಂಟ್ವಾಳ : ಫರಂಗಿಪೇಟೆ ಪುದು ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಲಾಗಿದ ಘಟನೆ ದಿನಾಂಕ 26-06-2025ರಂದು ರಾತ್ರಿ ನಡೆದಿದೆ. ಫರಂಗಿಪೇಟೆಯ ನಿವಾಸಿ ಅಜರುದ್ದೀನ್ ಎಂಬವರು ಈ ಸಂಬಂಧ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಅಜರುದ್ದೀನ್ ಅವರ ದೂರು ಪ್ರಕಾರ, ಒಂದು ತಿಂಗಳ ಹಿಂದೆ ಅವರ ಭಾವ ನಾಸೀರ ಹುಸೈನ್  ಆಟೋ ರಿಕ್ಷಾವೊಂದನ್ನು ಅಶ್ರಫ್ ಆಲಿ ಎಂಬವರಿಗೆ ಮಾರಾಟ ಮಾಡಿದ್ದು, ಅದರ ಹಣ ಬಾಕಿಯಿತ್ತು. ಈ ಹಿನ್ನೆಲೆ ಕೆಲವು ದಿನಗಳ ಹಿಂದೆ ಹಣ ನೀಡುವಂತೆ ಸೂಚನೆ ನೀಡಿದ ಹಿನ್ನೆಲೆಯಲ್ಲಿ, ಆರೋಪಿಗಳು ದಿನಾಂಕ 26ರಂದು ರಾತ್ರಿ ಆಟೋ ಹಾಗೂ ಕಾರಿನಲ್ಲಿ ಆಜರುದ್ದೀನ್ ಅವರ ಮನೆಗೆ ಬಂದು, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದಾಗ ಎದೆಗೆ ಹಾಗೂ ಮುಖಕ್ಕೆ ಹೊಡೆದಿದ್ದಾರೆ. ಇನ್ನೊಬ್ಬ ಆರೋಪಿಯಾಗಿರುವ ಕಲೀಲ್ ಎಂಬವರು ಕಲ್ಲಿನಿಂದ ತಲೆಗೆ ಹೊಡೆದಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಸ್ಥಳೀಯರ ಬೊಬ್ಬೆ ಕೇಳಿ ಆಗಮಿಸುವ ಸಮಯದಲ್ಲಿ ಆರೋಪಿಗಳು ಸ್ಥಳದಿಂದ ಓಡಿಹೋಗಿದ್ದಾರೆ ಎಂದು ಹೇಳಲಾಗಿದೆ. ಗಾಯಗೊಂಡ ಅಜರುದ್ದೀನ್ ಅವರನ್ನು ತಕ್ಷಣ ತುಂಬೆ ಫಾಧರ್ ಮುಲ್ಲರ್ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರು ಅಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ಕುರಿತು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 90/2025, ಕಲಂ: 352, 115(2), 118(1) ಹಾಗ...

📰 ಗುಂಡೂರಿಯಲ್ಲಿ ಮನಭೇದದಿಂದ ಹಲ್ಲೆ: ಮೂವರ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ದಾಖಲು.

Image
ಬೆಳ್ತಂಗಡಿ : ಬೆಳ್ತಂಗಡಿ ತಾಲೂಕು ಗುಂಡೂರಿ ಗ್ರಾಮದ ಶಾಂತಿಗುಡ್ಡೆ ಪ್ರದೇಶದಲ್ಲಿ ಜೂನ್ 27ರಂದು ಮನಭೇದದಿಂದ ಉದ್ಭವಿಸಿದ ಘಟನೆಯೊಂದರಲ್ಲಿ ಹಿರಿಯ ನಾಗರಿಕರಿಗೆ ಹಲ್ಲೆ ನಡೆದಿದ್ದು, ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿರ್ಯಾದಿದಾರರಾಗಿರುವ ಗುಂಡೂರಿ ಗ್ರಾಮದ ನಿವಾಸಿ ಸುಭಾಷ್ ಪೂಜಾರಿ (63) ಅವರು ನೀಡಿದ ದೂರಿನಂತೆ, ಮನೆಯ ಬಳಿಯಿರುವ ಗುಡ್ಡ ಪ್ರದೇಶದಲ್ಲಿ ಸೊಪ್ಪು ಕಟಾಯಿಸುತ್ತಿದ್ದ ನೆರೆಹೊರೆಯವರೊಡನೆ ವಿವಾದ ಉಂಟಾಗಿದೆ. ಇದನ್ನು ಆಕ್ಷೇಪಿಸಿದ ವೇಳೆ ಮಾತಿನ ಚಕಮಕಿ ಗಲಾಟೆಗೆ ತಿರುಗಿದ್ದು, ನಂತರ ಹಲ್ಲೆಯ ಘಟನೆ ನಡೆದಿದೆ. ಪಿರ್ಯಾದಿದಾರರ ದೂರು ಪ್ರಕಾರ, ಮೂರು ಮಂದಿ – ಒಬ್ಬ ಗಂಡಸು, ಅವರ ಪತ್ನಿ ಹಾಗೂ ಮಗ ಸೇರಿ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಗಾಯಗೊಂಡಿರುವ ಪಿರ್ಯಾದಿದಾರರಿಗೆ ದೈಹಿಕ ಗಾಯಗಳಾಗಿ, ಅವರನ್ನು ತಕ್ಷಣವೇ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ಸಂಬಂಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಅಧಿಕಾರಿಗಳು ತನಿಖೆ ಮುಂದುವರೆಸಿದ್ದಾರೆ. ಈ ಬಗ್ಗೆ ವೇಣೂರು ಪೊಲೀಸ್ ಠಾಣೆಯಲ್ಲಿ ಅ.ಕ್ರ 56/2025ರಂತೆ ಸಂಬಂಧಪಟ್ಟ ವಿಧಿಗಳಡಿ ಪ್ರಕರಣ ದಾಖಲಾಗಿದೆ. 🔍 ಸೂಚನೆ : ಈ ಸುದ್ದಿ ವರದಿ ಶುದ್ಧವಾಗಿ ಸಾರ್ವಜನಿಕ ಜಾಗೃತಿಗಾಗಿ ಪ್ರಕಟಿಸಲಾಗಿದ್ದು, ನ್ಯಾಯಾಲಯದ ತೀರ್ಪು ಅಥವಾ ತನಿಖಾ ವರದಿಗೆ ವಿರೋಧವಾಗಿ ಯಾವುದನ್ನು ದ...

ಡಾ. ಮನೋಜ್ ಕುಮಾರ್ ಬಿ.ಎಸ್ ಅವರಿಗೆ ಡಾಕ್ಟರೇಟ್ ಪದವಿ ಪ್ರದಾನ: ಎಕಾನಾಮಿಕ್ಸ್ ಕ್ಷೇತ್ರದಲ್ಲಿ ಗಣನೀಯ ಸಾಧನೆ.

Image
ಸುಬ್ರಹ್ಮಣ್ಯ , ಜೂನ್ 28: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್‌ಎಸ್‌ಪಿಯು ಕಾಲೇಜಿನ ಉಪನ್ಯಾಸಕ ಮನೋಜ್ ಕುಮಾರ್ ಬಿ.ಎಸ್ ಅವರು ಎಕಾನಾಮಿಕ್ಸ್ ಕ್ಷೇತ್ರದಲ್ಲಿ ಪ್ರೌಢಶ್ರದ್ಧೆಯಿಂದ ಮಹಾಪ್ರಬಂಧ ಮಂಡಿಸಿ ಡಾಕ್ಟರೇಟ್ ಪದವಿ (Ph.D) ಪಡೆದು ಗಮನ ಸೆಳೆದಿದ್ದಾರೆ. ಮಂಗಳೂರು ವಿಶ್ವವಿದ್ಯಾನಿಲಯವು ನೀಡಿದ ಈ ಗೌರವಪೂರ್ಣ ಪಿಎಚ್‌ಡಿ ಪದವಿ ಇವರ “Economics of Arecanut Cultivation with Special Reference to Small Farmers of Dakshina Kannada District” ಎಂಬ ಮಹಾಪ್ರಬಂಧಕ್ಕೆ ನೀಡಲಾಗಿದೆ. ಅವರು ಈ ಮಹಾಪ್ರಬಂಧವನ್ನು ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಸ್ಮಾರಕ ಮಹಾವಿದ್ಯಾಲಯದ ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕ ಡಾ. ತಿಮ್ಮಯ್ಯ ಟಿ.ಡಿ ಅವರ ಮಾರ್ಗದರ್ಶನದಲ್ಲಿ ಯಶಸ್ವಿಯಾಗಿ ಮಂಡಿಸಿದ್ದಾರೆ. ಅವರು ದಕ್ಷಿಣ ಕನ್ನಡದ ಅಜ್ಜಾವರ ಗ್ರಾಮದ ಅತ್ಯಡ್ಕ ನಿವಾಸಿ, ದಿ. ಶ್ರೀಧರ್ ಮತ್ತು ಕಮಲಾಕ್ಷಿ ದಂಪತಿಗಳ ಪುತ್ರರಾಗಿದ್ದಾರೆ. ಮನೋಜ್ ಕುಮಾರ್ ಬಿ.ಎಸ್ ಅವರ ಈ ವಿದ್ಯಾಪ್ರಯಾಣ ಹಾಗೂ ಅಧ್ಯಯನ ಶ್ರದ್ಧೆ ಯುವ ಪೀಳಿಗೆಗೆ ಪ್ರೇರಣಾದಾಯಕವಾಗಿದ್ದು, ಕ್ಷೇತ್ರೀಯ ಕೃಷಿಯ ಆರ್ಥಿಕ ಅಧ್ಯಯನಕ್ಕೆ ನುಡಿತ ಹೊತ್ತಿದೆ. Newspad ಸಂಸ್ಥೆ ಪರವಾಗಿ ಡಾ. ಮನೋಜ್ ಕುಮಾರ್ ಬಿ.ಎಸ್ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

ಎಸ್‌ಎಸ್‌ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಉದ್ಘಾಟನೆ – ‘ರೀಲ್ಸ್‌ ಬಿಟ್ಟು ರೀಯಲ್ ಲೈಫ್‌ಗೆ ಇಳಿಯಿರಿ’ ಎಂಬ ಸಂದೇಶ.

Image
ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಳದ ಆಡಳಿತದ ಎಸ್‌ಎಸ್‌ಪಿಯು ಕಾಲೇಜಿನಲ್ಲಿ 2025–26ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಕಾರ್ಯಕ್ರಮ ಜೂನ್ 28ರಂದು ವಿಜೃಂಭಣೆಯಿಂದ ನಡೆಯಿತು. ಸಮಾರಂಭವನ್ನು ಪತ್ರಕರ್ತ ದುರ್ಗಾಕುಮಾರ್ ನಾಯರ್‌ಕೆರೆ ದೀಪ ಬೆಳಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, "ನಾಯಕತ್ವಕ್ಕೆ ಸಮಯಪಾಲನೆ, ಗುರಿ ಸ್ಪಷ್ಟತೆ ಮತ್ತು ಮೌಲ್ಯಾಧಾರಿತ ಬದುಕು ಅತ್ಯಗತ್ಯ. ರೀಲ್ಸ್‌ನ ಕಲ್ಪನೆಗಿಂತ ರೀಯಲ್ ಜೀವನವೇ ಹೆಚ್ಚು ಪ್ರಭಾವಶಾಲಿ" ಎಂದರು. ಶಿಕ್ಷಣ ಮತ್ತು ಸಂಸ್ಕೃತಿಯ ಸಮನ್ಯಯವೇ ಯುವ ಜನಾಂಗದ ಪ್ರಗತಿಗೆ ದಾರಿ ತೋರುತ್ತದೆ ಎಂದೂ ಹೇಳಿದರು. ಸಭಾಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜು ಆಡಳಿತ ಮಂಡಳಿ ಸದಸ್ಯ ಹಾಗೂ ದೇವಳದ ವ್ಯವಸ್ಥಾಪನಾ ಸಮಿತಿಯ ಅಶೋಕ್ ನೆಕ್ರಾಜೆ ಅವರು, ವಿದ್ಯಾರ್ಥಿ ಸಂಘಗಳು ನಾಯಕತ್ವದ ಜ್ಞಾನ ಕಲಿಸುವ ಪಾಠ ಪುಸ್ತಕಗಳಂತೆ, ಎಂದು ಅಭಿಪ್ರಾಯಪಟ್ಟರು. ಶಿಕ್ಷಣ ತಂತ್ರಾಂಶ ಮತ್ತು ಮೂಲಸೌಕರ್ಯ ಸುಧಾರಣೆಗೆ ನೂತನ ಸಮಿತಿ ರಚನೆಯ ಭರವಸೆ ನೀಡಿದರು. ಪ್ರಮುಖ ಅತಿಥಿಗಳಾಗಿ: ಮಾಜಿ ಧಾರ್ಮಿಕ ಪರಿಷತ್ ಸದಸ್ಯೆ ವಿಮಲಾ ರಂಗಯ್ಯ, ಗ್ರಾ.ಪಂ.ಸದಸ್ಯೆ ಭಾರತಿ ದಿನೇಶ್, ಕನ್ನಡ ಪ್ರಾಧ್ಯಾಪಕ ಉದಯಕುಮಾರ್, ಪ್ರಾಚಾರ್ಯ ಸೋಮಶೇಖರ ನಾಯಕ್, ಸಾಂಸ್ಕೃತಿಕ ಸಂಘ ಸಂಚಾಲಕಿ ರೇಖಾರಾಣಿ ಸೋಮಶೇಖರ್, ವಿದ್ಯಾರ್ಥಿ ಸಂಘ ಸಂಚಾಲಕ ಜಯಪ್ರಕಾಶ್ ಆರ್, ಮತ್ತು ವಿದ್ಯಾರ್ಥಿ ನಾಯಕರು ವೇದಿಕೆಯನ್...

🛑 ಎಚ್ಚರಿಕೆ! ಸೈಬರ್ ಅಪರಾಧಿಗಳಿಂದ ಹೂಡಿಕೆ ಮೋಸ – ನಿಮ್ಮ ಹಣದ ಚೀಲವನ್ನು ರಕ್ಷಿಸಿಕೊಳ್ಳಿ 🛑

Image
ಮಂಗಳೂರು , ಜೂನ್ 28: ಸೈಬರ್ ಅಪರಾಧಿಗಳಿಂದ ಹೂಡಿಕೆದಾರರನ್ನು ಗುರಿಯಾಗಿಸಿ ಬಹುಮಾನೀಯ ಲಾಭದ ಆಮಿಷವನ್ನೊಳಗೊಂಡ ನಕಲಿ ಹೂಡಿಕೆ ಪ್ರಸ್ತಾವನೆಗಳ ಮೂಲಕ ಲಕ್ಷಾಂತರ ರೂ. ಗಳ ಮೋಸ ನಡೆಯುತ್ತಿದೆ. ಈ ಬಗ್ಗೆ ಮಂಗಳೂರು ಪೊಲೀಸ್ ಆಯುಕ್ತರಾದ ಸುದೀರ್ ಕುಮಾರ್ ರೆಡ್ಡಿ ಮಾಧ್ಯಮದೊಂದಿಗೆ ಮಾತನಾಡಿ, ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕೆಂದು ಮನವಿ ಮಾಡಿದ್ದಾರೆ. ಹೂಡಿಕೆ ಮೋಸ ಎಂದರೇನು? ಸೈಬರ್ ಅಪರಾಧಿಗಳು ನಕಲಿ ವೆಬ್‌ಸೈಟುಗಳು, ಫೇಸ್ಬುಕ್/ಇನ್ಸ್ಟಾಗ್ರಾಂ ಜಾಹೀರಾತುಗಳು, ವಾಟ್ಸಾಪ್/ಟೆಲಿಗ್ರಾಂ ಗುಂಪುಗಳು, ನಕಲಿ ಸೆಲೆಬ್ರಿಟಿ ಚಿತ್ರಗಳು ಮತ್ತು ನಂಬಿಕೆ ಮೂಡಿಸುವ ಸ್ಟ್ರೀನ್‌ಶಾಟ್‌ಗಳ ಮೂಲಕ ನಕಲಿ ಹೂಡಿಕೆ ಯೋಜನೆಗಳನ್ನು ಪ್ರಚಾರ ಮಾಡಿ, ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭದ ಭರವಸೆ ನೀಡುತ್ತಾರೆ. ಆದರೆ, ಹಣ ಹೂಡಿದ ಮೇಲೆ ಯಾವುದೇ ಲಾಭ ದೊರೆಯದೆ ಹಣವೇ ಕಣ್ಮರೆಯಾಗುತ್ತದೆ. --- ಸಾಮಾನ್ಯ ಎಚ್ಚರಿಕೆ ಸಂಕೇತಗಳು: "ಖಚಿತ ಲಾಭ" ಅಥವಾ "ಹಣದ ದ್ವಿಗುಣ/ತ್ರಿಗುಣ" ಭರವಸೆ ತಕ್ಷಣ ಹಣ ಹಾಕಬೇಕೆಂದು ಒತ್ತಡ ನೋಂದಾಯಿಸದ ಕಂಪನಿಗಳು/ಏಜೆಂಟ್‌ಗಳು ಯುಪಿಐ/ಕ್ರಿಪ್ಟೋ ಪಾವತಿಗೆ ಒತ್ತಾಯ ನಕಲಿ ಲಾಭದ ಸ್ಟ್ರೀನ್‌ಶಾಟ್‌ಗಳು --- ನಿಜವಾದ ಪ್ರಕರಣಗಳು: 📍 ಸುರತ್ಕಲ್, ಮಂಗಳೂರು: ವಾಟ್ಸಾಪ್ ಗುಂಪು ಮೂಲಕ Crypto Trading ನಲ್ಲಿ ₹1.57 ಕೋಟಿ ಹೂಡಿಕೆ ಮಾಡಿ ಮೋಸ 📍 ಕೆಪಿಟಿ, ಮಂಗಳೂರು: ಶೇರು ತರಬೇತಿಯ ವಾಟ್ಸಾಪ...

🛕 ಜೂ.30: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಮುಜರಾಯಿ ಸಚಿವ ರಾಮಲಿಂಗ ರೆಡ್ಡಿ ಭೇಟಿ.

Image
📌 ಮಾಸ್ಟರ್ ಪ್ಲಾನ್ ಸಭೆ – ಭವ್ಯ ಕಾಮಗಾರಿಗಳಿಗೆ ಶಿಲಾನ್ಯಾಸ ಹಾಗೂ ಯೋಜನೆಗಳ ಸಿದ್ಧತೆ ✍🏻 ವ್ಯವಸ್ಥಾಪನಾ ಸಮಿತಿಯಿಂದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದಲ್ಲಿ ಭವಿಷ್ಯದ ಅಭಿವೃದ್ಧಿ ದೃಷ್ಟಿಯಿಂದ ಮಹತ್ವದ ದಿನವೊಂದು ಜೂನ್ 30ರಂದು ಕಾದಿದೆ. ದೇವಾಲಯದ ಆಡಳಿತ ಕಚೇರಿಯಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರು ಮಾತನಾಡಿದರು: > "ಜೂ.30ರಂದು ರಾಜ್ಯ ಮುಜರಾಯಿ ಹಾಗೂ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಅವರು ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಅವರ ಆಗಮನದ ವೇಳೆ ಮಹತ್ವದ ಕಾಮಗಾರಿಗಳ ಶಿಲಾನ್ಯಾಸ ಹಾಗೂ ಮಾಸ್ಟರ್ ಪ್ಲಾನ್ ಸಭೆ ನಡೆಯಲಿದೆ. ಈ ಸಭೆಯಲ್ಲಿ ಸಾವಿರಾರು ಭಕ್ತರಿಗೆ ಅನುಕೂಲವಾಗುವ ಯೋಜನೆಗಳಿಗೆ ಹಸಿರು ನಿಶಾನೆ ದೊರೆಯಲಿದೆ" ಎಂದು ಅವರು ತಿಳಿಸಿದರು. ಅಧ್ಯಕ್ಷ ಇಂಜಾಡಿಯವರು ತಿಳಿಸಿದ ಪ್ರಮುಖ ಮಾಹಿತಿಗಳು: 🔹 ಆಶ್ಲೇಷ ಪೂಜಾ ಮಂದಿರ – “ಸಾವಿರ ಜನರು ಒಟ್ಟಿಗೆ ಪೂಜೆಯಲ್ಲಿ ಭಾಗವಹಿಸಬಹುದಾದ ಭವ್ಯ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಜರುಗಲಿದೆ.” 🔹 ಮಾಸ್ಟರ್ ಪ್ಲಾನ್ 30ನೇ ಸಭೆ – “ದೇವಾಲಯದ ದೀರ್ಘಕಾಲಿಕ ವಿಕಾಸ ದೃಷ್ಟಿಯಿಂದ ರೂಪಿಸಲಾಗಿರುವ ಮಾಸ್ಟರ್ ಪ್ಲಾನ್ ಸಭೆಯಲ್ಲಿ ಅನೇಕ ಭವ್ಯ ಯೋಜನೆಗಳು ಚರ್ಚೆಯಾಗಲಿದ್ದು, ಹೂಡಿಕೆ ಪ್ರಮಾಣವು ಕೂಡ ಬಹು ದೊಡ್ಡದು ಆಗಿರುತ್ತದೆ.” 🔹 ಮುಖ್ಯ ಕಾಮ...

ಕೆಂಜಾಳ ಹಾಲು ಉತ್ಪಾದಕರ ಸಹಕಾರ ಸಂಘದಿಂದ ಮೃತ ಸದಸ್ಯರ ಕುಟುಂಬಕ್ಕೆ ಆರ್ಥಿಕ ಸಹಾಯ.

Image
ಕೊಂಬಾರು : ಕೆಂಜಾಳ ಹಾಲು ಉತ್ಪಾದಕರ ಸಹಕಾರ ಸಂಘ ನಿಯಮಿತ, ಕೊಂಬಾರು ಇದರ ವತಿಯಿಂದ ಇತ್ತೀಚೆಗೆ ಮೃತರಾದ ಕೂತೂರು ಮೀನಾಕ್ಷಿ ಇವರ ಮನೆಗೆ ಭೇಟಿ ನೀಡಿ ಸಂಘದ ವತಿಯಿಂದ ಆರ್ಥಿಕ ನೆರವಿನ ಚೆಕ್ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶ್ರೀ ರಾಮಕೃಷ್ಣ ಹೊಳ್ಳಾರು, ಕಾರ್ಯದರ್ಶಿ ಶ್ರೀ ಈಶ್ವರ ಕಾಪಾರು, ಉಪಾಧ್ಯಕ್ಷ ಶ್ರೀ ನೀಲಪ್ಪ ಗೌಡ ಮುಗೇರು ಹಾಗೂ ನಿರ್ದೇಶಕರಾದ ಶ್ರೀಧರ ಕಾಪಾರು ಮತ್ತು ದೇವರಾಜ ಕೋಲ್ಕಜೆ ಉಪಸ್ಥಿತರಿದ್ದರು. ಸಂಘದ ಈ ಸಹಾಯ ಹಸುಕರ ಸಾಕಾಣಿಕೆ ಮಾಡುತ್ತಿರುವ ರೈತ ಕುಟುಂಬಗಳಿಗೆ ಪ್ರೋತ್ಸಾಹ ನೀಡುತ್ತಿರುವ ಉದಾಹರಣೆಯಾಗಿದೆ. ಮೃತರಾದ ಮೀನಾಕ್ಷಿ ಅವರು ಸಂಘದ ಸದಸ್ಯೆಯಾಗಿದ್ದು, ಅವರ ಕುಟುಂಬದ ಸಂಕಷ್ಟದ ಸಂದರ್ಭದಲ್ಲಿ ಸಂಘದ ಈ ನೆರವು ಅತ್ಯಂತ ಶ್ಲಾಘನೀಯವಾಗಿದೆ.

ಕೌಕ್ರಾಡಿ: ಪೆರಿಯಶಾಂತಿಯಲ್ಲಿ ಅಂಗಡಿ ತೆರವುಗೆ ಜುಲೈ 15 ಕ್ಕೆ ಅಂತಿಮ ಗಡುವು.

Image
ಕೌಕ್ರಾಡಿ , ಜೂನ್ 27: ಕೌಕ್ರಾಡಿ ಗ್ರಾಮದ ಪೆರಿಯಶಾಂತಿ ಪ್ರದೇಶದಲ್ಲಿ ಅರಣ್ಯ ಇಲಾಖೆಯ ನಿರ್ದೇಶನದಂತೆ ಇಂದಿನ ದಿನಾಂಕದಲ್ಲಿ ಅಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿ, ರಸ್ತೆಯ ಉದ್ದಕ್ಕೂ ನಿರ್ಮಿಸಲಾದ ಅನಧಿಕೃತ ಅಂಗಡಿಗಳ ಮೇಲೆ ತೆರವು ಕಾರ್ಯಾಚರಣೆಗೆ ಮುನ್ನ ಸೂಚನೆ ನೀಡಿದರು. ಅರಣ್ಯ ವ್ಯಾಪ್ತಿಯಲ್ಲಿ ಬರುವ ಈ ಭೂಮಿಯಲ್ಲಿ ಹಲವಾರು ವರ್ಷಗಳಿಂದ ಅನಧಿಕೃತವಾಗಿ ಅಂಗಡಿಗಳು ಸ್ಥಾಪಿತವಾಗಿದ್ದು, ಸಾರ್ವಜನಿಕರ ಸುರಕ್ಷತೆ ಹಾಗೂ ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ. ಅಧಿಕಾರಿಗಳು ಜುಲೈ 15ರೊಳಗಾಗಿ ಅಂಗಡಿಗಳನ್ನು ತೆರವುಗೊಳಿಸಲು ಅಂತಿಮ ಗಡುವು ನಿಗದಿಪಡಿಸಿದ್ದು, ಮಾಲೀಕರಿಗೆ ಅಧಿಕೃತವಾಗಿ ತಿಳಿಸಲಾಗಿದೆ. ಸ್ಥಳೀಯರ ಅಭಿಪ್ರಾಯ: ಹೆಚ್ಚು ವರ್ಷಗಳಿಂದ ಅಂಗಡಿಗಳನ್ನು ನಿರ್ವಹಿಸುತ್ತಿರುವ ಕೆಲವರು ಇದರಿಂದ ತಮ್ಮ ಜೀವನೋಪಾಯದ ಮೇಲೆ ಪರಿಣಾಮ ಬೀರುತ್ತದೆ ಎಂಬ ಆತಂಕ ವ್ಯಕ್ತಪಡಿಸಿದ್ದು, ಸರಕಾರದ ಪರಿಕಲ್ಪನೆಯ ಬಗ್ಗೆ ಸ್ಪಷ್ಟತೆ ಬೇಕು ಎಂದು ಹೇಳಿದ್ದಾರೆ. ಇನ್ನೊಂದೆಡೆ, ಸಾರ್ವಜನಿಕ ರಸ್ತೆಯ ಪಕ್ಕದಲ್ಲಿರುವ ಅಕ್ರಮ ಕಟ್ಟಡಗಳು ಸಾಗಣೆಗೆ ಅಡಚಣೆ ಉಂಟುಮಾಡುತ್ತಿರುವುದು ನ್ಯಾಯೋಚಿತವಾಗಿ ತೆರವುಗೊಳಿಸಲಾಗುತ್ತಿದೆ ಎಂಬ ಅಭಿಪ್ರಾಯವೂ ಕೇಳಿ ಬಂದಿದೆ. ಆಧಿಕಾರಿಗಳ ಸ್ಪಷ್ಟನೆ: "ಇದು ಪರಿಸರ ಸಂರಕ್ಷಣೆ ಹಾಗೂ ಕಾನೂನು ಪಾಲನೆಯ ದೃಷ್ಟಿಯಿಂದ ತೆಗೆದುಕೊಳ್ಳಲಾದ ಕ್ರಮವಾಗಿದೆ. ವ್ಯಾಪಾರಸ್ಥರಿಗೆ ಸೂಕ್ತ ...

ಸುಬ್ರಹ್ಮಣ್ಯ ರೋಟರಿ ಇಂದ ಪರಿಸರ ಸಂರಕ್ಷಣಾ ಅಭಿಯಾನ.

Image
  ಸುಬ್ರಹ್ಮಣ್ಯ ಜೂನ್ 27 : ಸುಬ್ರಹ್ಮಣ್ಯ ರೋಟರಿ ಕ್ಲಬ್ ವತಿಯಿಂದ ಪರಿಸರ ಸ್ವಚ್ಛತೆ, ಗಿಡ ನೆಡುವುದು, ಬೆಳೆಸುವುದು, ಸಂರಕ್ಷಿಸುವುದು, ಹಾಗೂ ಪಕ್ಕದ ಅರಣ್ಯ ಪ್ರದೇಶಗಳಿಗೆ ತೆರಳಿ ರಸ್ತೆ ಬದಿ ಅಥವಾ ಬರಡು ಪ್ರದೇಶಗಳಲ್ಲಿ ಗಿಡ ನೆಡುವುದು, ಬೀಜ ಬಿತ್ತುವುದು, ಇತ್ಯಾದಿಗಳ ಬಗ್ಗೆ ವಿಶೇಷವಾದ ಮಾಹಿತಿಗಳನ್ನು ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಕ್ರಿಯಾಶೀಲ ಸದಸ್ಯ ಡಾ. ರವಿ ಕಕ್ಕೆಪದವು ಹಾಗೂ ಗೋಪಾಲ ಎಣ್ಣೆ ಮಜಲ್ ಅವರ ಮುಂದಾಳತ್ವದಲ್ಲಿ ಕುಮಾರಧಾರ ದೋಣಿ ಮಕ್ಕಿ ಪರಿಸರದಲ್ಲಿ ನಡೆಯಿತು. ತದನಂತರ ನಡೆದ ಸರಳ ಸಮಾರಂಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ಅಧ್ಯಕ್ಷ ಚಂದ್ರಶೇಖರ ನಾಯರ್, ನಿಯೋಜಿತ ಅಧ್ಯಕ್ಷ ಜಯಪ್ರಕಾಶ್ ಆರ್, ಜೋನಲ್ ಲೆಫ್ಟಿನೆಂಟ್ ವಿಶ್ವನಾಥ ನಡುತೋಟ ನಿಯೋಜಿತ ಅಸಿಸ್ಟೆಂಟ್ ಗವರ್ನರ್ ಬಾಲಕೃಷ್ಣ ಪೈ ನಿಯೋಜಿತ ಜೋನಲ್ ಲೆಫ್ಟಿನೆಂಟ್ ವಿಜಯ್ ಕುಮಾರ್ ಕಾರ್ಯದರ್ಶಿ ಚಿದಾನಂದ ಕುಳ,ನಿಯೋಜಿತ ಕಾರ್ಯದರ್ಶಿ ಭವಾನಿ ಶಂಕರ ಪೈಲಾಜೆ, ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸುಬ್ರಮಣ್ಯ ರೋಟರಿ ಕ್ಲಬ್ಬಿನ ಪೂರ್ವ ಅಸಿಸ್ಟೆಂಟ್ ಗವರ್ನರ್ಗಳು, ಪೂರ್ವ ಜೊನಲ್ ಲೆಫ್ಟಿನೆಂಟುಗಳು, ಪೂರ್ವ ಅಧ್ಯಕ್ಷರುಗಳು, ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕ್ಲಬ್ಬಿಗೆ ಹೊಸದಾಗಿ ಸೇರ್ಪಡೆಗೊಳ್ಳಲಿರುವ ಸುಬ್ರಹ್ಮಣ್ಯದ ಬ್ಯಾಂಕ್ ಆಫ್ ಬರೋಡ ಮ್ಯಾನೇಜರ್ ಕೃಷ್ಣಪ್ರಸಾದ್ ಅವರನ್ನ ಬರಮಾಡಿಕೊಳ್ಳಲಾಯ...

📰 ಎಸ್‌ಎಸ್‌ಪಿಯು ಕಾಲೇಜಿನಲ್ಲಿ ಪ್ರತಿಭಾ ದಿನಾಚರಣೆ ಉದ್ಘಾಟನೆ: ವಿದ್ಯಾರ್ಥಿಗಳ ಮನಸ್ಸಿಗೆ ಕಲೆಯ ಸ್ಪೂರ್ತಿ - ವಿಮಲಾ ರಂಗಯ್ಯ ಅಭಿಮತ.

Image
ಸುಬ್ರಹ್ಮಣ್ಯ , ಜೂನ್ 27: ಎಸ್‌ಎಸ್‌ಪಿಯು ಕಾಲೇಜಿನ ಸಾಂಸ್ಕೃತಿಕ ಸಂಘ ಹಾಗೂ ಪ್ರತಿಭಾ ದಿನಾಚರಣೆಯು ಶುಕ್ರವಾರ ಬೆಳ್ಳಿಹಬ್ಬ ಸಭಾಂಗಣದಲ್ಲಿ ಭವ್ಯವಾಗಿ ಉದ್ಘಾಟನೆಯಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಧಾರ್ಮಿಕ ಪರಿಷತ್ ಮಾಜಿ ಸದಸ್ಯೆ ವಿಮಲಾ ರಂಗಯ್ಯ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅವರು ಮಾತನಾಡುತ್ತಾ, “ಬಾಲ್ಯದೊಳಗಿನ ಸುಪ್ತ ಪ್ರತಿಭೆಗಳನ್ನು ಹೊರತರುವಲ್ಲಿ ಈ ರೀತಿಯ ಪ್ರತಿಭಾ ಪ್ರದರ್ಶನಗಳು ಮಹತ್ವದ ಪಾತ್ರ ವಹಿಸುತ್ತವೆ. ಕಲೆಯು ವಿದ್ಯಾರ್ಥಿಗಳ ಮನಸ್ಸನ್ನು ಪ್ರಫುಲ್ಲಗೊಳಿಸಿ ಪಾಠ್ಯಚಟುವಟಿಕೆಗಳಲ್ಲಿಯೂ ಉತ್ಸಾಹ ತರುತ್ತದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜು ಪ್ರಾಚಾರ್ಯ ಸೋಮಶೇಖರ ನಾಯಕ್ ವಹಿಸಿದ್ದರು. ಅವರು ವಿದ್ಯಾರ್ಥಿಗಳ ಪ್ರತಿಭೆಯನ್ನು ಹೊರತೆಗೆದು ಸಾರ್ವಜನಿಕ ವೇದಿಕೆಯಲ್ಲಿ ಪ್ರದರ್ಶಿಸಲು ಸಾಂಸ್ಕೃತಿಕ ತಂಡವನ್ನು ರಚಿಸಲಾಗಿದೆ ಎಂದು ಹೇಳಿದರು. "ಕುಕ್ಕೆ ಸೇರಿದಂತೆ ವಿವಿಧ ಕಡೆಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಕಾಲೇಜಿನ ತಂಡ ಸಜ್ಜಾಗಿದೆ" ಎಂದೂ ಹೇಳಿದರು. ಮುಖ್ಯಅತಿಥಿಗಳಾಗಿ ಗ್ರಾ.ಪಂ ಸದಸ್ಯೆ ಭಾರತಿ ದಿನೇಶ್, ಕೆ.ಎಸ್.ಎಸ್ ಕಾಲೇಜಿನ ಉಪನ್ಯಾಸಕ ಉದಯ್ ಕುಮಾರ್ ಹಾಜರಿದ್ದರು. ಸಾಂಸ್ಕೃತಿಕ ತಂಡದ ಸಂಚಾಲಕಿ ರೆಖಾರಾಣಿ ಸೋಮಶೇಖರ್, ವಿದ್ಯಾರ್ಥಿ ಸರಕಾರದ ಸಂಚಾಲಕ ಜಯಪ್ರಕಾಶ್ ಆರ್, ಉಪನ್ಯಾಸಕಿ ಸೌಮ್ಯಾ ದಿನೇಶ್, ಸಾಂಸ್ಕೃತಿಕ ಸಂಘದ ಕ...

ಬಜತ್ತೂರು ಗ್ರಾಮದಲ್ಲಿ ಭೂಕುಸಿತ: ಸಂಜೀವ ನಳಿಕೆ ಅವರ ಮನೆಯ ಹಿಂಭಾಗದಲ್ಲಿ ಹಾನಿ.!

Image
ಪುತ್ತೂರು : ಬಜತ್ತೂರು ಗ್ರಾಮದಲ್ಲಿನ ಕುರ್ತಡ್ಕ ನಿವಾಸಿ ಸಂಜೀವ ನಳಿಕೆ (ಕಾಂಚನ) ಅವರ ಮನೆಯ ಬಳಿ ಭೂಕುಸಿತ ಸಂಭವಿಸಿ ಅಪಾಯದ ಪರಿಸ್ಥಿತಿ ನಿರ್ಮಾಣವಾಗಿದೆ. ಪೆರಿಯಡ್ಕದಿಂದ ಅಯೋಧ್ಯಾನಗರಕ್ಕೆ ಹೋಗುವ ಮಾರ್ಗದಲ್ಲಿ ಈ ಘಟನೆ ಸಂಭವಿಸಿದ್ದು, ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮನೆಯ ಹಿಂಭಾಗ ಸಂಪೂರ್ಣವಾಗಿ ಹಾನಿಗೊಂಡಿದೆ. ಮರಗಳು ಬಿದ್ದು ಮಣ್ಣು ಜರಿದುಬಿದ್ದ ಪರಿಣಾಮ ಮನೆಯ ಗೋಡೆಗಳಿಗೆ ಹಾನಿಯಾಗಿರುವ ಸಾಧ್ಯತೆಗಳಿವೆ. ಈ ಘಟನೆಯಿಂದಾಗಿ ಮನೆ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದು, ಭವಿಷ್ಯದಲ್ಲಿ ಇನ್ನಷ್ಟು ಭೂಕುಸಿತ ಸಂಭವಿಸಬಹುದೆಂಬ ಶಂಕೆ ವ್ಯಕ್ತವಾಗಿದೆ. ಮನೆಯ ಸದಸ್ಯರು ಈಗ ನೆಲೆಯ ಪಕ್ಕವೇ ಇರುವ ಈ ಅಪಾಯದ ಭಯದ ನೆರಳಲ್ಲಿದ್ದಾರೆ. ಸ್ಥಳೀಯ ನಾಗರಿಕರು ಹಾಗೂ ಸಾರ್ವಜನಿಕರು ಈ ಪ್ರದೇಶದಲ್ಲಿ ತಕ್ಷಣ ತನಿಖೆ ನಡೆಸಿ ಭದ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ. ವರದಿ: ಬಿ.ಎಸ್. ಪ್ರಸಾದ್.ಜಿ. ನ್ಯೂಸ್‌ಪ್ಯಾಡ್ ವೆಬ್ ನ್ಯೂಸ್

ಸೀನಿಯರ್ ಚೇಂಬರ್ ಅಂತರಾಷ್ಟ್ರೀಯ ಅಧ್ಯಕ್ಷ ಜಯೇಶ್ ಎಂ ಆರ್ ಕುಕ್ಕೆ ಸುಬ್ರಹ್ಮಣ್ಯ ಭೇಟಿ.

Image
  ಸುಬ್ರಹ್ಮಣ್ಯ ಜೂನ್ 26 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಅಧ್ಯಕ್ಷ ಜಯೇಶ್ ಎಂ.. ಆರ್. ಹಾಗೂ ರಾಷ್ಟ್ರೀಯ ಉಪಾಧ್ಯಕ್ಷ ಸಿದ್ದಗಂಗಯ್ಯ ಶುಕ್ರವಾರ ಭೇಟಿ ನೀಡಿದರು. ಶ್ರೀ ದೇವಳದಲ್ಲಿ ದೇವರ ದರ್ಶನ,ಪ್ರಸಾದ ಸ್ವೀಕರಿಸಿದ ನಂತರ ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ಲಿಜನ್ ಗೆ ಆಗಮಿಸಿದ ಅವರನ್ನು ಸುಬ್ರಹ್ಮಣ್ಯ ಕುಕ್ಕೆ ಶ್ರೀ ಲೀಜನ್ ನ ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ, ಅಧ್ಯಕ್ಷ ವೆಂಕಟೇಶ್ ಎಚ್ ಎಲ್, ಉಪಾಧ್ಯಕ್ಷ ಚಂದ್ರಶೇಖರ ನಾಯರ್, ನಿಕಟ ಪೂರ್ವ ಅಧ್ಯಕ್ಷ ಡಾl ರವಿ ಕಕ್ಕೆ ಪದವು, ಕಾರ್ಯದರ್ಶಿ ಗೋಪಾಲ್ ಎಣ್ಣೆ ಮಜಲ್, ಕೋಶಾಧಿಕಾರಿ ಮೋನಪ್ಪ ಡಿ. ಉಪಾಧ್ಯಕ್ಷ ಪ್ರಕಾಶ್ ಕಟ್ಟೆಮನೆ ಮತ್ತಿತರರು ಬರಮಾಡಿಕೊಂಡರು.

🛕 ಪಂಜ ಸೀಮೆಯ ಶ್ರೀ ಕಾಚು ಕುಜು೦ಬ ದೈವಸ್ಥಾನದ ಜೀರ್ಣೋಧಾರ ಸಮಿತಿ ನೇಮಕ – ನೂತನ ದೇವಾಲಯ ನಿರ್ಮಾಣ ಕಾರ್ಯ ಪ್ರಾರಂಭ.

Image
ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಬಲಕ್ಯೆ ಬಂಟ ಶ್ರೀ ಕಾಚು ಕುಜು೦ಬ ದೈವದ ಮೂಲ ಸ್ಥಾನ ಗರಡಿ ಬೈಲ್ ಎಂಬಲ್ಲಿ ನೂತನವಾಗಿ ಶ್ರೀ ಕಾಚು ಕುಜು೦ಬ ದೈವಸ್ಥಾನ ನಿರ್ಮಾಣ ಕಾರ್ಯ ಜೋರಾಗಿ ನಡೆಯುತ್ತಿದೆ. ಈ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ  ಅಧ್ಯಕ್ಷರಾಗಿ ಶ್ರೀ ಪರಮೇಶ್ವರ ಗೌಡ ಬಿಳಿಮಲೆ,  ಉಪಾಧ್ಯಕ್ಷರಾಗಿ ಶ್ರೀ ಉಮೇಶ್ ಬುಡೆಂಗಿ ಬಲ್ಪ,  ಕಾರ್ಯದರ್ಶಿಯಾಗಿ ಶ್ರೀ ಅನಂದ ಗೌಡ ಜಳಕದ ಹೊಳೆ ಅವರು ಏಕಮತದಿಂದ ಆಯ್ಕೆಯಾಗಿದ್ದಾರೆ. ಸಭೆಗೆ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಡಾ. ದೇವಿಪ್ರಸಾದ್ ಕಾನತೂರ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಸಮಿತಿಯ ಗೌರವ ಸಲಹೆಗಾರರಾದ ಶ್ರೀ ಮಹೇಶ್ ಕುಮಾರ್ ಕರಿಕ್ಕಳ, ಆನಂದ ಗೌಡ ಕಂಬಳ, ಸದಸ್ಯರಾದ ರಾಮಚಂದ್ರ ಭಟ್, ಮಾಲಪ್ಪ ಗೌಡ ಯೆಣ್ಮೂರು, ಧರ್ಮಣ್ಣ ನಾಯ್ಕ ಗರಡಿ, ಧರ್ಮಪಾಲ ಗೌಡ ಮರಕಡ, ಸಂತೋಷ್ ಕುಮಾರ್ ರೈ ಫಲತಡ್ಕ, ಸತ್ಯನಾರಾಯಣ ಭಟ್ ಕಾಯಂಬಾಡಿ, ಮಾಲಿನಿ ಕುದ್ವ, ಮತ್ತು ಪವಿತ್ರ ಮಲ್ಲೆಟ್ಟಿ ಉಪಸ್ಥಿತರಿದ್ದರು. ದೈವಸ್ಥಾನದ ನಿರ್ಮಾಣ ಕಾರ್ಯ ಈಗಾಗಲೇ ಪ್ರಾರಂಭವಾಗಿದ್ದು, ಪ್ರತಿಷ್ಠಾ ಮಹೋತ್ಸವವು ಡಿಸೆಂಬರ್ 3 ರಿಂದ 5, 2025 ರವರೆಗೆ ನಡೆಯಲಿದೆ ಎಂದು ಡಾ. ದೇವಿಪ್ರಸಾದ್ ಕಾನತೂರ್ ತಿಳಿಸಿದ್ದಾರೆ.

*ನೆಲ್ಯಾಡಿ 43ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿಗೆ ಆಯ್ಕೆ.....*

Image
ನೆಲ್ಯಾಡಿ 43 ನೇ ವರ್ಷದ ಸಾರ್ವಜನಿಕ ಗಣೇಶೋತ್ಸವ ಸಮಿತಿ ಗೆ ಆಯ್ಕೆ ಕಾರ್ಯಕ್ರಮ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಶ್ರೀ ಶಭರೀಶ ಕಲಾ ವೇದಿಕೆಯಲ್ಲಿ ನೆಲ್ಯಾಡಿ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ರವಿಚಂದ್ರ ಆತ್ರಿಜಾಲ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.  ವೇದಿಕೆ ಯಲ್ಲಿ ಅಯ್ಯಪ್ಪ ಸ್ವಾಮಿ ದೇವಸ್ಥಾನ ದ ಅಧ್ಯಕ್ಷರಾದ ಡಾ. ಸದಾನಂದ ಕುಂದರ್, ಕಾರ್ಯದರ್ಶಿ ಸುಧೀರ್ ಕುಮಾರ್,ರವಿಚಂದ್ರ ಹೊಸವಕ್ಲು,ರಕ್ಷಿತ್, ರಮೇಶ್ ಶೆಟ್ಟಿ ಬೀದಿ, ರಮೇಶ್ ಬಾಣಜಾಲ್ ಉಪಸ್ಥಿತರಿದ್ದರು, 43 ನೇ ವರ್ಷದ ಗಣೇಶೋತ್ಸವ ಆಚರಣೆಯ ಪ್ರಯುಕ್ತ ನೂತನ ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ಮೋಹನ್ ಗೌಡ ಕಟ್ಟೆಮಜಲು,  ಚಂದ್ರಶೇಖರ ಶೆಟ್ಟಿ ಪೆರಣ  ಉಪಾಧ್ಯಕ್ಷರು, ಕೇಶವ ನೆಲ್ಯಾಡಿ ಕಾರ್ಯದರ್ಶಿ, ಸಂದೇಶ್ ಶೆಟ್ಟಿ ಆಮುಂಜ ಜೊತೆ ಕಾರ್ಯದರ್ಶಿ ರಾಕೇಶ್ ಎಸ್ ಕೋಶಾಧಿಕಾರಿ ಆಯ್ಕೆಯಾದರು ಸದಸ್ಯರುಗಳಾಗಿ ಸದಾನಂದ ಕುಂದರ್,ರವಿಚಂದ್ರಆತ್ರಿಜಾಲ್, ರವಿಚಂದ್ರ ಹೊಸವಕ್ಲು, ಚಂದ್ರಶೇಖರ ಬಾಣಜಾಲ್, ಪ್ರಹ್ಲಾದ್ ಶೆಟ್ಟಿ, ಸುರೇಶ್ ಪಡಿಪಂಡ,ರಮೇಶ್ ಬಾಣಜಾಲ್, ರಮೇಶ್ ಶೆಟ್ಟಿ, ಉಮೇಶ್ ಪೂಜಾರಿ, ರಕ್ಷಿತ್, ಉದಯ್ ಕುಮಾರ್ ಗೌಡ, ರವಿಪ್ರಸಾದ್ ಶೆಟ್ಟಿ, ರವಿಪ್ರಸಾದ್ ಗುತ್ತಿನ ಮನೆ, ಸಂತೋಷ ಆಟೋ, gರಘುನಾಥ ಕೆ, ದಯಾನಂದ ಆದರ್ಶ್, ಅಣ್ಣಿ ಎಲ್ತೀಮಾರ್,ಪ್ರಶಾಂತ್ ಪರಿಮಳ,ವಿನ...