Posts

Showing posts from October, 2025

🚨 ಅಂಬ್ಯುಲೆನ್ಸ್ ಸಂಚಾರಕ್ಕೆ ಅಡಚಣೆ ಮಾಡಿದ ಸ್ಕೂಟರ್ ಸವಾರನಿಗೆ ನ್ಯಾಯಾಂಗ ಬಂಧನ.

Image
ಬಂಟ್ವಾಳ , ಅ. 30: ಕುಕ್ಕೆ ಸುಬ್ರಹ್ಮಣ್ಯ ಸಮೀಪ ಬಿಸಿಲೆ ಘಾಟ್ ರಸ್ತೆಯಲ್ಲಿ ಅಪಘಾತಕ್ಕೊಳಗಾದ ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಅಂಬ್ಯುಲೆನ್ಸ್‌ಗೆ ದಾರಿ ಬಿಡದೆ ಸಂಚಾರಕ್ಕೆ ಅಡಚಣೆ ಉಂಟುಮಾಡಿದ ಪ್ರಕರಣದಲ್ಲಿ ಆರೋಪಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ದಿನಾಂಕ 30.10.2025 ರಂದು ಮಧ್ಯಾಹ್ನ 1.30 ಗಂಟೆಗೆ, KA.22.C.1382 ಸಂಖ್ಯೆಯ ಅಂಬ್ಯುಲೆನ್ಸ್ ಪುತ್ತೂರು ಸರಕಾರಿ ಆಸ್ಪತ್ರೆಯಿಂದ ಗಂಭೀರ ಗಾಯಾಳುವನ್ನು ಮಂಗಳೂರಿಗೆ ಕರೆದೊಯ್ಯುತ್ತಿದ್ದ ವೇಳೆ, ಬಂಟ್ವಾಳ ತಾಲೂಕು ಬಿ.ಸಿ.ರೋಡ್ ಎನ್‌ಜಿ ಸರ್ಕಲ್ ಬಳಿ KA.19.EK.0696 ಸಂಖ್ಯೆಯ ದ್ವಿಚಕ್ರ ವಾಹನ ಸವಾರನು ಅಂಬ್ಯುಲೆನ್ಸ್‌ನ ಸೈರನ್ ಶಬ್ದ ಕೇಳಿದರೂ ದಾರಿ ಬಿಡದೆ ತುರ್ತು ಸಂಚಾರಕ್ಕೆ ಅಡಚಣೆ ಮಾಡಿದ ಘಟನೆ ನಡೆದಿದೆ. ಈ ಕುರಿತು ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ.128/2025, ಕಲಂ 110 ಮತ್ತು 125 ಬಿ.ಎನ್.ಎಸ್ ಅಡಿ ಪ್ರಕರಣ ದಾಖಲಾಗಿದ್ದು, ಆರೋಪಿಯಾಗಿ ಗುರುತಿಸಲ್ಪಟ್ಟ ಮಹಮ್ಮದ್ ಮನ್ಸೂರು (38), ಬೆಟ್ಟಂಪಾಡಿ ಗ್ರಾಮ, ಪುತ್ತೂರು ತಾಲೂಕು ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಪ್ರಕರಣ ವಿಚಾರಣೆ ಹಂತದಲ್ಲಿ, ಮಾನ್ಯ ನ್ಯಾಯಾಲಯವು ದಿನಾಂಕ 14-11-2025 ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ಬಂಟ್ವಾಳ ನಗರ ಪೊಲೀಸ್ ಠಾಣೆಯಿಂದ ತಿಳಿಸಲಾಗಿದೆ. ಪೊಲೀಸರು ಸಾರ್ವಜನಿಕರಿಗೆ ತುರ್ತು ಸೇವೆ ವಾಹ...

ಚಿಕ್ಕಮಗಳೂರಲ್ಲಿ ಕಾಡಾನೆ ದಾಳಿ – ಇಬ್ಬರ ದುರ್ಮರಣ!

Image
ಶೃಂಗೇರಿ ತಾಲೂಕಿನ ಕೆರೆಗದ್ದೆ ಗ್ರಾಮದಲ್ಲಿ ನಡೆದ ದುರ್ಘಟನೆ; ಸ್ಥಳೀಯರಲ್ಲಿ ಆತಂಕದ ವಾತಾವರಣ ಚಿಕ್ಕಮಗಳೂರು, ಅಕ್ಟೋಬರ್ 31: ಹಸುವಿಗೆ ಸೊಪ್ಪು ತರಲು ತೆರಳಿದ್ದ ಇಬ್ಬರು ಗ್ರಾಮಸ್ಥರು ಕಾಡಾನೆಯ ದಾಳಿಗೆ ಬಲಿಯಾಗಿ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಇಂದು ಮುಂಜಾನೆ ಶೃಂಗೇರಿ ತಾಲೂಕಿನ ಕೆರೆಗದ್ದೆ ಗ್ರಾಮದಲ್ಲಿ ಸಂಭವಿಸಿದೆ. ಮೃತರನ್ನು ಹರೀಶ್ ಮತ್ತು ಉಮೇಶ್ ಎಂಬ ಗ್ರಾಮಸ್ಥರಾಗಿ ಗುರುತಿಸಲಾಗಿದೆ. ಬೆಳಿಗ್ಗೆ ಸುಮಾರು 6.30 ಗಂಟೆಯ ಸುಮಾರಿಗೆ, ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಮುಡುಬಾ ಎಲ್ಸಾರ್‌ ಬಳಿ ಈ ಘಟನೆ ನಡೆದಿದೆ. ಕಾಡಿನೊಳಗೆ ಹಸುವಿಗೆ ಸೊಪ್ಪು ತರಲು ಹೋದ ವೇಳೆ ಏಕಾಏಕಿ ಕಾಡಾನೆಯೊಂದು ಇವರಿಬ್ಬರ ಮೇಲೆ ದಾಳಿ ನಡೆಸಿ ತುಳಿದು ಸಾಯಿಸಿದೆ ಎಂದು ಮೂಲಗಳು ತಿಳಿಸಿವೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯರು ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಪ್ರತಿಭಟನೆ ನಡೆಸಿದ್ದಾರೆ. ಜನರು ಅರಣ್ಯ ಇಲಾಖೆಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ, ಕಾಡು ಪ್ರಾಣಿಗಳ ದಾಳಿಯಿಂದ ಜೀವ ಹಾನಿ ತಡೆಯಲು ತಕ್ಷಣ ಕ್ರಮಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಶೃಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತರ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಸರ್ಕಾರದ ಕ್ರಮ ನಿರೀಕ್ಷೆಯಲ್ಲಿದೆ. ಇತ್ತೀಚೆಗಷ್ಟೇ ಮೈಸೂರಿನ ಸರಗೂರಿನಲ್ಲಿ ಹುಲಿಯೊಂದು ವ್ಯಕ...

ಕರಾವಳಿಯ ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ: ಕರಾವಳಿಯ ಹೆಮ್ಮೆ ಹೆಚ್ಚಿಸಿದ ಗಣ್ಯರು.

Image
ಮಂಗಳೂರು , ಅ.31 (ನ್ಯೂಸ್ ಪ್ಯಾಡ್): ಕರ್ನಾಟಕ ಸರ್ಕಾರ ಘೋಷಿಸಿರುವ 2025ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಕರಾವಳಿಯ ಹಲವಾರು ಗಣ್ಯರು ಸ್ಥಾನ ಪಡೆದಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪ್ರತಿಭಾವಂತರ ಸಾಧನೆಗಳು ಮತ್ತೊಮ್ಮೆ ರಾಜ್ಯ ಮಟ್ಟದಲ್ಲಿ ಗುರುತಿಸಲ್ಪಟ್ಟಿವೆ. ದಕ್ಷಿಣ ಕನ್ನಡದ ಸಿಂಧು ಗುಜರನ್ ಅವರಿಗೆ ಜಾನಪದ ಕ್ಷೇತ್ರದಲ್ಲಿ ಗೌರವ ದೊರೆತಿದ್ದು, ಪ್ರಸಿದ್ಧ ನಟ ಪ್ರಕಾಶ್ ರಾಜ್ ಅವರನ್ನು ಸಿನಿಮಾ ಕ್ಷೇತ್ರಕ್ಕೆ ನೀಡಿದ ಅಪಾರ ಕೊಡುಗೆಗಾಗಿ ರಾಜ್ಯ ಸರ್ಕಾರ ಆಯ್ಕೆ ಮಾಡಿದೆ. ಸಮಾಜ ಸೇವೆ ಕ್ಷೇತ್ರದಲ್ಲಿ ದಕ್ಷಿಣ ಕನ್ನಡದ ಕೊರಿನ್ ರಸ್ಕಿನ್ಹಾ ಮತ್ತು ಉಡುಪಿ ಜಿಲ್ಲೆಯ ಡಾ. ಎನ್. ಸೀತಾರಾಮ್ ಶೆಟ್ಟಿ ಅವರನ್ನು ಪುರಸ್ಕರಿಸಲಾಗಿದೆ. ದೈವಾರಾಧನಾ ಕ್ಷೇತ್ರದಲ್ಲಿ ಉಮೇಶ್ ಪಂಬಡ, ಮಾಧ್ಯಮ ಕ್ಷೇತ್ರದಲ್ಲಿ ಬಿ.ಎಂ. ಹನೀಫ್, ಯಕ್ಷಗಾನ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆಯ ಕೋಟ ಸುರೇಶ್ ಬಂಗೇರ ಹಾಗೂ ಏರ್‌ಬೈಲು ಆನಂದ್ ಶೆಟ್ಟಿ, ರಂಗಭೂಮಿ ಕ್ಷೇತ್ರದಲ್ಲಿ ದಕ್ಷಿಣ ಕನ್ನಡದ ಪ್ರಸಿದ್ಧ ಕಲಾವಿದ ಮೈಮ್ ರಮೇಶ್ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿ ಪುರಸ್ಕೃತರು ಕರಾವಳಿ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ, ಕಲಾತ್ಮಕ ಹಾಗೂ ಸಾಮಾಜಿಕ ಪರಂಪರೆಯ ಪ್ರತಿನಿಧಿಗಳು ಎಂದು ಹೇಳಬಹುದು. ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿರುವ ಈ ಸಾಧಕರು ರಾಜ್ಯದ ಹೆಮ್ಮೆಯಂತಾಗಿದ್ದ...

ಪಹಣಿ ಪತ್ರ ದೊರಕುವಂತೆ ಕ್ರಮಕೈಗೊಳ್ಳಿ: ಶಾಸಕಿ ಭಾಗೀರಥಿ ಮುರುಳ್ಯಕಡಬದಲ್ಲಿ ಫಲಾನುಭವಿಗಳ ಬೇಡಿಕೆ; ಅಧಿಕಾರಿಗಳಿಗೆ ಕಠಿಣ ಎಚ್ಚರಿಕೆ.

Image
ಕಡಬ:ಕಡಬ ತಾಲ್ಲೂಕಿನ ಕೌಕ್ರಾಡಿ ಗ್ರಾಮದ ಸರ್ವೇ ನಂ. 123/1ರ 3634.70 ಎಕರೆ ಕೃಷಿ ಭೂಮಿಗೆ ಸಂಬಂಧಿಸಿದ ಪ್ಲಾಟಿಂಗ್ ಪ್ರಕ್ರಿಯೆ ವರ್ಷಗಳಿಂದ ಸ್ಥಗಿತಗೊಂಡಿದ್ದು, ಫಲಾನುಭವಿಗಳಿಗೆ ಪಹಣಿ ಪತ್ರ ದೊರೆಯದ ತೊಂದರೆ ಮುಂದುವರಿದಿದೆ. ಈ ಕುರಿತು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಕಂದಾಯ ಇಲಾಖೆ ಅಧಿಕಾರಿಗಳಿಗೆ ತಕ್ಷಣ ಕ್ರಮಕೈಗೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮಂಗಳವಾರ ಸುಮಾರು 50ಕ್ಕೂ ಹೆಚ್ಚು ಫಲಾನುಭವಿಗಳು ಶಾಸಕಿ ಭಾಗೀರಥಿ ಮುರುಳ್ಯರನ್ನು ಭೇಟಿ ಮಾಡಿ ತಮ್ಮ ಸಮಸ್ಯೆಯನ್ನು ಮಂಡಿಸಿದರು. ಈ ಭೂಮಿಯನ್ನು 245 ಮಂದಿಗೆ ಅಧಿಕೃತವಾಗಿ ಹಂಚಿಕೆ ಮಾಡಲಾಗಿದ್ದು, ಎಲ್ಲರೂ ಕೃಷಿ ನಡೆಸುತ್ತಿದ್ದಾರೆ. ಆದರೆ ಸರ್ಕಾರದ ನಿರ್ದೇಶನದಂತೆ ಅರಣ್ಯ ಭಾಗವನ್ನು ಪ್ರತ್ಯೇಕಿಸಿ ಉಳಿದ ಭಾಗಕ್ಕೆ ಪಹಣಿ ಪತ್ರ ಸಿದ್ಧಪಡಿಸುವ ಪ್ರಕ್ರಿಯೆ ಹಲವು ವರ್ಷಗಳಿಂದ ಪೂರ್ಣಗೊಂಡಿಲ್ಲ. ಫಲಾನುಭವಿಗಳು, “ದಾಖಲೆಗಳಿಲ್ಲದೆ ಸಾಲ, ಯೋಜನೆ, ಹೂಡಿಕೆ ಎಲ್ಲವೂ ಅಸಾಧ್ಯವಾಗಿದೆ,” ಎಂದು ಶಾಸಕಿ ಅವರಿಗೆ ಮನವಿ ಮಾಡಿದರು. “ಜನರ ಹಿತದ ಕೆಲಸಕ್ಕೆ ವಿಳಂಬ ಕ್ಷಮ್ಯವಲ್ಲ” — ಶಾಸಕಿ ಶಾಸಕಿ ಭಾಗೀರಥಿ ಮುರುಳ್ಯ ಅಧಿಕಾರಿಗಳತ್ತ ತೀವ್ರ ಅಸಮಾಧಾನ ವ್ಯಕ್ತಪಡಿಸಿ ಹೇಳಿದರು: > “ಸಾರ್ವಜನಿಕರ ಹಿತದ ಕೆಲಸವನ್ನು ವಿಳಂಬ ಮಾಡುವ ಅಧಿಕಾರಿಗಳನ್ನು ಅವರ ಸ್ಥಾನದಿಂದಲೇ ತೆಗೆದು ಹಾಕಲಾಗುವುದು. ಜನರಿಗೆ ನ್ಯಾಯ ದೊರೆಯುವವರೆಗೆ ನಾನು ಬಿಟ್ಟು ಕೊಡುವುದಿಲ್ಲ,” ಎಂದ...

ರಾಜ್ಯ ಮಟ್ಟದ ನೆಟ್‌ಬಾಲ್ ಕ್ರೀಡಾಕೂಟ ಸುಬ್ರಹ್ಮಣ್ಯದಲ್ಲಿ ನವೆಂಬರ್ 3ರಂದು.

Image
ಕುಕ್ಕೆ ಸುಬ್ರಹ್ಮಣ್ಯ :ಅ.31:ಕರ್ನಾಟಕ ಸರ್ಕಾರದ ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಶ್ರೀ ಸುಬ್ರಹ್ಮಣೇಶ್ವರ ಪದವಿ ಪೂರ್ವ ಕಾಲೇಜು, ಸುಬ್ರಹ್ಮಣ್ಯ ಇವರ ಸಂಯುಕ್ತ ಆಶ್ರಯದಲ್ಲಿ ರಾಜ್ಯ ಮಟ್ಟದ ನೆಟ್‌ಬಾಲ್ ಕ್ರೀಡಾಕೂಟ 2025-26 ನವೆಂಬರ್ 3, ಸೋಮವಾರದಂದು ಭವ್ಯವಾಗಿ ಆರಂಭಗೊಳ್ಳಲಿದೆ. ಕಾರ್ಯಕ್ರಮದ ಉದ್ಘಾಟನೆ ಮಧ್ಯಾಹ್ನ 1 ಗಂಟೆಗೆ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ರಾಜ್ಯದ ಗಣ್ಯರು ಆಗಮಿಸಲಿದ್ದಾರೆ. ಧ್ವಜಾರೋಹಣವನ್ನು ಸನ್ಮಾನ್ಯ ಶ್ರೀ ದಿನೇಶ್ ಗುಂಡೂರಾವ್, ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ನೆರವೇರಿಸಲಿದ್ದಾರೆ. ಉದ್ಘಾಟನೆಯನ್ನು ಸನ್ಮಾನ್ಯ ಶ್ರೀ ರಾಮಲಿಂಗಾರೆಡ್ಡಿ, ಮುಜರಾಯಿ ಹಾಗೂ ಸಾರಿಗೆ ಸಚಿವರು, ಕರ್ನಾಟಕ ಸರ್ಕಾರ ಅವರು ನೆರವೇರಿಸಲಿದ್ದಾರೆ. ಅಧ್ಯಕ್ಷತೆ ವಹಿಸಲಿರುವವರು ಕುಮಾರಿ ಭಾಗೀರಥಿ ಮುರುಳ್ಯ, ಶಾಸಕಿ, ಸುಳ್ಯ ವಿಧಾನಸಭಾ ಕ್ಷೇತ್ರ. ಕಾರ್ಯಕ್ರಮದ ಘನ ಉಪಸ್ಥಿತಿಯಲ್ಲಿ ಸನ್ಮಾನ್ಯ ಯು.ಟಿ. ಬಾದರ್ ಫರೀದ್, ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷರು ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮಕ್ಕೆ ಸನ್ಮಾನ್ಯ ಅತಿಥಿಗಳಾಗಿ ಕೆಳಗಿನ ಗಣ್ಯರು ಹಾಜರಾಗಲಿದ್ದಾರೆ: ಶ್ರೀ ಕ್ಯಾಪ್ಟನ್ ಬ್ರಿಜೇಶ್ ಚೌಟ, ಸಂಸದರು (ಲೋಕಸಭೆ, ದ.ಕ.) ಡಾ. ಭರತ್ ಶೆಟ್ಟಿ ವೈ., ಶಾಸಕರು (ಮಂಗಳೂರು ಉತ್ತರ) ಶ್ರೀ ರಾಜೇಶ್ ನಾಯ್ಕ ಯು., ಶಾಸಕರು (ಬಂ...

🚨 ಬಿ.ಸಿ.ರೋಡ್‌ನಲ್ಲಿ ಅಂಬ್ಯುಲೆನ್ಸ್ ಸಂಚಾರಕ್ಕೆ ಅಡಚಣೆ — ಬೈಕ್ ಸವಾರನ ವಿರುದ್ಧ ಪ್ರಕರಣ ದಾಖಲು.

Image
ಬಂಟ್ವಾಳ , ಅ. 30 (ಗುರುವಾರ): ಪುತ್ತೂರಿನಲ್ಲಿ ಅಪಘಾತಕ್ಕೊಳಗಾದ ಗಾಯಾಳುವನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ಅಂಬ್ಯುಲೆನ್ಸ್‌ಗೆ ದಾರಿ ಬಿಡದೆ ಸಂಚಾರಕ್ಕೆ ಅಡಚಣೆ ಉಂಟುಮಾಡಿದ ಘಟನೆ ಬಿ.ಸಿ.ರೋಡ್ ಎನ್‌ಜಿ ಸರ್ಕಲ್ ಬಳಿ ನಡೆದಿದೆ. ಮಾಹಿತಿಯ ಪ್ರಕಾರ, ದಿನಾಂಕ 30.10.2025 ರಂದು ಮಧ್ಯಾಹ್ನ 1.30 ಗಂಟೆಯ ಸಮಯದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಯಿಂದ ಮಂಗಳೂರಿಗೆ KA.22.C.1382 ಸಂಖ್ಯೆಯ ಅಂಬ್ಯುಲೆನ್ಸ್ ಮೂಲಕ ಗಂಭೀರ ಗಾಯಾಳುವನ್ನು ಸಾಗಿಸುತ್ತಿದ್ದ ವೇಳೆ, KA.19.EK.0696 ಸಂಖ್ಯೆಯ ದ್ವಿಚಕ್ರ ವಾಹನ ಸವಾರನು ಅಂಬ್ಯುಲೆನ್ಸ್‌ನ ಸೈರನ್ ಶಬ್ದ ಕೇಳಿದರೂ ದಾರಿ ಬಿಡದೆ ಸಂಚಾರಕ್ಕೆ ಅಡಚಣೆ ಮಾಡಿದ ಎಂದು ತಿಳಿದುಬಂದಿದೆ. ಅಂಬ್ಯುಲೆನ್ಸ್‌ಗೆ ದಾರಿ ಬಿಡದೆ ತುರ್ತು ಸೇವೆ ಕಾರ್ಯದಲ್ಲಿ ಅಡಚಣೆ ಉಂಟುಮಾಡಿದ ಆರೋಪದ ಮೇಲೆ ಮಹಮ್ಮದ್ ಮನ್ಸೂರು (38), ಬೆಟ್ಟಂಪಾಡಿ ಗ್ರಾಮ, ಪುತ್ತೂರು ತಾಲೂಕು ನಿವಾಸಿ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆ ಅ.ಕ್ರ.128/2025, ಕಲಂ 110 ಮತ್ತು 125 ಬಿ.ಎನ್.ಎಸ್ ಅಡಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದುಕೊಂಡಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

ಬಿಸ್ಲೆಘಾಟ್‌ನಲ್ಲಿ ಭೀಕರ ಅಪಘಾತ — ಮದುವೆಗೆ ಆಗಮಿಸುತ್ತಿದ್ದ ಟೆಂಪೋ ಉರುಳಿ 22 ಮಂದಿ ಗಾಯ.

Image
ಕುಕ್ಕೆ ಸುಬ್ರಮಣ್ಯ :ಮದುವೆ ಸಂಭ್ರಮಕ್ಕೆ ಆಗಮಿಸುತ್ತಿದ್ದವರ ಸಂಚಾರ ದುಃಖದಲ್ಲಿ ಅಂತ್ಯಗೊಂಡ ಘಟನೆ ಇಂದು ಮುಂಜಾನೆ ಬಿಸ್ಲೆಘಾಟ್‌ನಲ್ಲಿ ನಡೆದಿದೆ. ಮದುವೆಗೆಂದು ಕುಕ್ಕೆ ಸುಬ್ರಮಣ್ಯದತ್ತ ತೆರಳುತ್ತಿದ್ದ ಟೆಂಪೋ ವಾಹನವು ಬಿಸ್ಲೆಘಾಟ್ ತಿರುವಿನಲ್ಲಿ ಸುಮಾರು 25 ಅಡಿ ಆಳಕ್ಕೆ ಉರುಳಿ ಬಿದ್ದ ಪರಿಣಾಮ, 22 ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಪಘಾತದ ನಂತರ ಸ್ಥಳೀಯರು ಮತ್ತು ಪೊಲೀಸ್ ಸಿಬ್ಬಂದಿ ಶೀಘ್ರವಾಗಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಗಾಯಾಳುಗಳನ್ನು ಪ್ರಥಮ ಚಿಕಿತ್ಸೆಗಾಗಿ ಕುಕ್ಕೆ ಸುಬ್ರಮಣ್ಯ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಬಳಿಕ, ಅಲ್ಲಿ ಚಿಕಿತ್ಸೆ ಪಡೆದವರಲ್ಲಿ ಸ್ಥಿತಿ ಗಂಭೀರವಾಗಿದ್ದವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆ ಹಾಗೂ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಅಪಘಾತದ ನಿಖರ ಕಾರಣ ತಿಳಿದುಬಂದಿಲ್ಲದಿದ್ದರೂ, ಬಿಸ್ಲೆಘಾಟ್ ತಿರುವಿನ ತೀವ್ರ ಇಳಿಜಾರಿನಿಂದ ವಾಹನದ ನಿಯಂತ್ರಣ ತಪ್ಪಿರುವ ಸಾಧ್ಯತೆ ವ್ಯಕ್ತವಾಗಿದೆ. New update; ಸಕಲೇಶಪುರ ತಾಲ್ಲೂಕಿನ ವನಗೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಪ್ರಯಾಣಿಕರ ವ್ಯಾನ್ ಬಿಸ್ಲೆ ಘಾಟ್ ಸಮೀಪದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸುಮಾರು 20 ಅಡಿ ಆಳಕ್ಕೆ ಪಲ್ಟಿಯಾಗಿದ ಪರಿಣಾಮ ದುರ್ಘಟನೆ ಸಂಭವಿಸಿದೆ. ಈ ಘಟನೆ ...

ಸುಬ್ರಹ್ಮಣ್ಯ ಸೀನಿಯರ್ ಚೇಂಬರಿಗೆ ಅತ್ಯುತ್ತಮ ಲಿಜನ್ ಪ್ರಾಂತೀಯ ಪ್ರಶಸ್ತಿ.

Image
ಸುಬ್ರಹ್ಮಣ್ಯ ಅಕ್ಟೋಬರ್ 27 : ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ಏರಿಯ ಎಫ್ ನ ಪ್ರಾಂತೀಯ ಸಮ್ಮೇಳನ ಬೆಂಗಳೂರಿನ ದೇವನಹಳ್ಳಿಯಲ್ಲಿ ರವಿವಾರ ನಡೆದು ಪ್ರಾಂತೀಯ ಎಲ್ಲಾ ಲಿಜನ್ ಗಳಲ್ಲಿ ಸುಬ್ರಹ್ಮಣ್ಯ ಕುಕ್ಕೆ ಶ್ರೀಸೀನಿಯರ್ ಚೇಂಬರ್ ಅತ್ಯುತ್ತಮ ಲೀಜನ್ ಆಗಿ ಟಾಪ್ ಟೆನ್ ಅಲ್ಲಿ ಆಯ್ಕೆ ಆಗಿಪ್ರಶಸ್ತಿಯನ್ನು ಪಡೆದಿರುತ್ತದೆ. 2025 26ನೇ ಸಾಲಿನಲ್ಲಿ ಸುಬ್ರಹ್ಮಣ್ಯ ಕುಕ್ಕೆ ಶ್ರೀಸೀನಿಯರ್ ಚೇಂಬರ್ ಸಾರ್ವಜನಿಕ ಸಂಪರ್ಕ ಸೇವೆಗಳು, ವ್ಯಕ್ತಿತ್ವ ವಿಕಸನ ತರಬೇತಿಗಳು, ಸಮುದಾಯ ಅಭಿವೃದ್ಧಿ ಕಾರ್ಯಗಳು ಅಂತೆ ಎಲ್ಲಾ ವಿಭಾಗಗಳಲ್ಲಿ ಅತ್ಯುತ್ತಮ ಜನಪಯೋಗಿ ಕಾರ್ಯಕ್ರಮಗಳನ್ನ ಮಾಡಿ ಟಾಪ್ ಟೆನ್ ಅಲ್ಲಿ ಆಯ್ಕೆಯಾಗಿ ಪ್ರಶಸ್ತಿ ಬಂದಿರುತ್ತದೆ.  ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ರಾಷ್ಟ್ರ ಅಧ್ಯಕ್ಷ ಎಂ.ಆರ್. ಜಯೇಶ್, ರಾಷ್ಟ್ರೀಯ ಉಪಾಧ್ಯಕ್ಷ ಸಿದ್ದ ಗಂಗಯ್ಯ ಹಾಗೂ ರಾಷ್ಟ್ರಮಟ್ಟದ ಅಧಿಕಾರಿಗಳು ಈ ಪ್ರಶಸ್ತಿಯನ್ನು ನೀಡಿರುವರು.  ಡಾ. ರವಿ ಕಕ್ಕೆ ಪದವು ಅವರಿಗೆ ಸ್ವಚ್ಛತಾ ಅಭಿಯಾನ ರಾಯಭಾರಿ ಪ್ರಶಸ್ತಿ.  ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ನಿಕಟ ಪೂರ್ವ ಅಧ್ಯಕ್ಷ ಡಾ. ರವಿ ಕಕ್ಕೆ ಪದವು ಅವರು ಕುಕ್ಕೆ ಕ್ಷೇತ್ರದಲ್ಲಿ ನಿರಂತರವಾಗಿ ಪ್ರತಿ ರವಿವಾರ 50 ರಿಂದ 60 ಕಕ್ಕೆ ಪದವು ಸಮಾಜ ಟ್ರಸ್ಟ್ ನ ಸದಸ್ಯರು ಹಾಗೂ ಸೀನಿಯರ್ ಚೇಂಬರ್ ನ ಸದಸ್ಯರುಗಳನ್ನ ಒಳಗೊಂಡು ಕುಮಾರಧಾರ ಸ್ಥಾನಗಟ್ಟದಿಂದ ಕ...

ನೆಲ್ಯಾಡಿಯಲ್ಲಿ ಉಚಿತ ಕಣ್ಣಿನ ಪೊರೆ ಚಿಕಿತ್ಸಾ ಶಿಬಿರ : ಜನರಿಂದ ಉತ್ತಮ ಪ್ರತಿಕ್ರಿಯೆ.

Image
ನೆಲ್ಯಾಡಿ : ಗ್ರಾಮೀಣ ಪ್ರದೇಶದ ಜನರಿಗೆ ಉಚಿತ ಕಣ್ಣಿನ ಚಿಕಿತ್ಸಾ ಸೌಲಭ್ಯಗಳನ್ನು ತಲುಪಿಸಲು ಉದ್ದೇಶಿಸಿ ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಉಚಿತ ನೇತ್ರ ಚಿಕಿತ್ಸಾ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರವನ್ನು ಭವ್ಯವಾಗಿ ಆಯೋಜಿಸಲಾಯಿತು. ಈ ಶಿಬಿರವನ್ನು ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಶಿಶಿರ ಉದ್ಘಾಟಿಸಿ ಮಾತನಾಡಿದರು. ಅವರು ಹೇಳಿದರು: “ಗ್ರಾಮೀಣ ಭಾಗದಲ್ಲಿ ಕಣ್ಣಿನ ಪೊರೆ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಉಪಯೋಗವಾಗಲಿ ಎಂಬ ಉದ್ದೇಶದಿಂದ ಈ ಶಿಬಿರವನ್ನು ಹಮ್ಮಿಕೊಂಡಿದ್ದೇವೆ. ಸರಕಾರದಿಂದ ದೊರೆಯುವ ಉಚಿತ ಕಣ್ಣಿನ ಪೊರೆ ಚಿಕಿತ್ಸಾ ಕಾರ್ಯಕ್ರಮ, ಲೆನ್ಸ್ ಅಳವಡಿಕೆ, ಉಚಿತ ಕನ್ನಡಕ ವಿತರಣೆ ಮುಂತಾದ ಸೌಲಭ್ಯಗಳನ್ನು ಜನರ ಮನೆಬಾಗಿಲಿಗೆ ತಲುಪಿಸಲು ನೆಲ್ಯಾಡಿ ಪಿಎಚ್‌ಸಿ ಸದಾ ಸಿದ್ಧವಾಗಿದೆ” ಎಂದರು. ಶಿಬಿರವನ್ನು ಲಯನ್ಸ್ ಕ್ಲಬ್ ಆಲಂಕಾರು ದುರ್ಗಾಂಬಾ, ಸೀನಿಯರ್ ಚೇಂಬರ್ ಇಂಟರ್ ನ್ಯಾಷನಲ್ ನೆಲ್ಯಾಡಿ ಲೀಜಿಯನ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ನೆಲ್ಯಾಡಿ ಇವರ ಆಶ್ರಯದಲ್ಲಿ, ಜಿಲ್ಲಾ ಅಂಧತ್ವ ನಿವಾರಣಾ ಸಂಸ್ಥೆ ಮಂಗಳೂರು, ಜಿಲ್ಲಾ ವೆನ್‌ಲಾಕ್ ಆಸ್ಪತ್ರೆ, ಹಾಗೂ ಸಂಚಾರಿ ನೇತ್ರ ಚಿಕಿತ್ಸಾ ಘಟಕ ಮಂಗಳೂರು ಇವರ ಸಹಯೋಗದೊಂದಿಗೆ ಆಯೋಜಿಸಲಾಯಿತು. ಸಂಚಾರಿ ನೇತ್ರ ಚಿಕಿತ್ಸಾ ಘಟಕದ ಮುಖ್ಯಸ್ಥೆ ಶ್ರೀಮತಿ ಸುಮನ ಶಿಬಿರದ ಉದ್ದೇಶವನ್ನು ವ...

ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳ ಡಬಲ್ ಸಾಧನೆ

Image
ಸುಬ್ರಹ್ಮಣ್ಯ : ಸುಬ್ರಹ್ಮಣ್ಯದ ಕುಮಾರಸ್ವಾಮಿ ಪದವಿಪೂರ್ವ ಕಾಲೇಜಿನಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ “ಇಗ್ನೀಶಿಯ-2025” ಕಾರ್ಯಕ್ರಮದಲ್ಲಿ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆಯ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಸಂದರ್ಭದಲ್ಲಿ ನಡೆದ “ಪ್ರಾಡಕ್ಟ್ ಲಾಂಚ್” ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಾದ ರಿತೇಶ್ ಹಾಗೂ ನಿಕಿಲ್ ಕೆ. ಪ್ರಥಮ ಸ್ಥಾನ ಪಡೆದು ಶಾಲೆಗೆ ಗೌರವ ತಂದಿದ್ದಾರೆ. ಹಾಗೆಯೇ “ಕಸದಿಂದ ರಸ” ಸ್ಪರ್ಧೆಯಲ್ಲಿ ಮೋಕ್ಷ ಹಾಗೂ ಪ್ರೀತಿ ಬಿ. ಪ್ರಥಮ ಸ್ಥಾನ ಪಡೆದಿದ್ದಾರೆ. ಇವರಿಗೆ ವಿಜ್ಞಾನ ಶಿಕ್ಷಕರಾದ ಪ್ರವೀಣ್ ಕುಮಾರ್ ಮಾರ್ಗದರ್ಶನ ನೀಡಿದ್ದಾರೆ. ಅದೇ ರೀತಿಯಲ್ಲಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ, ಪುತ್ತೂರು ಇವರ ಆಶ್ರಯದಲ್ಲಿ ಬೆಥನಿ ಸಂಯುಕ್ತ ಪದವಿ ಪೂರ್ವ ಕಾಲೇಜು, ನೂಜಿಬಾಳ್ತಿಲದಲ್ಲಿ ನಡೆದ ಕಡಬ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಶ್ರೀ ಗೋಪಾಲಕೃಷ್ಣ ಪ್ರೌಢಶಾಲೆ 17ರ ವಯೋಮಾನದ ಬಾಲಕಿಯರ ವಿಭಾಗ ಹಾಗೂ ಬಾಲಕರ ವಿಭಾಗದಲ್ಲಿ ಮೂರನೇ ಸಮಗ್ರ ಬಹುಮಾನ ಗಳಿಸಿ ಕ್ರೀಡಾಂಗಣದಲ್ಲಿಯೂ ಮಿಂಚಿದೆ. 🏅 17ರ ವಯೋಮಾನದ ಬಾಲಕರ ವಿಭಾಗದಲ್ಲಿ: ನಮನ್ ಸಿ.ಎಲ್ – ಚಕ್ರ ಎಸೆತ ಪ್ರಥಮ, ಈಟಿ ಎಸೆತ ದ್ವಿತೀಯ ಸಿಬಿನ್ ಚಾಕೊ – 3000 ಮೀ. ಓಟ ತೃತೀಯ 🏅 17ರ ವಯೋಮಾನದ ಬಾಲಕಿಯರ ವಿಭಾಗದಲ್ಲಿ: ಚೈತನ...

ಕುಕ್ಕೆ ಸುಬ್ರಹ್ಮಣ್ಯಕ್ಕೆ ಭಾರತ ಸರ್ಕಾರದ ಹಿರಿಯ ಕಾನೂನು ಅಧಿಕಾರಿಗಳ ಭೇಟಿ.

Image
ಸುಬ್ರಹ್ಮಣ್ಯ : ಭಾರತ ಸರ್ಕಾರದ ಸೊಲಿಸಿಟರ್ ಜನರಲ್ ತುಷಾರ್ ಮೇಹ್ತಾ ಹಾಗೂ ಅಡಿಷನಲ್ ಸೊಲಿಸಿಟರ್ ಜನರಲ್ ಕೆ.ಎಂ. ನಟರಾಜ್ ಅವರು ಇಂದು ಕುಕ್ಕೆ ಸುಬ್ರಹ್ಮಣ್ಯ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವರ ದರ್ಶನ ಪಡೆದರು. ದೇವರ ದರ್ಶನದ ಬಳಿಕ ಸಂಪುಟ ನರಸಿಂಹಸ್ವಾಮಿ ದೇವರ ದರ್ಶನ ಮಾಡಿದರು. ಈ ವೇಳೆ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿ, ದೇವಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು. ಇಬ್ಬರೂ ಗಣ್ಯರಿಗೆ ದೇವಸ್ಥಾನ ಆಡಳಿತ ಮಂಡಳಿಯವರು ಸಾಂಪ್ರದಾಯಿಕ ರೀತಿಯಲ್ಲಿ ಸ್ವಾಗತ ಕೋರಿದರು. ತುಷಾರ್ ಮೇಹ್ತಾ ಅವರು ಪ್ರಸ್ತುತ ಭಾರತ ಸರ್ಕಾರದ Solicitor General of India, ಅಂದರೆ ಅಟಾರ್ನಿ ಜನರಲ್ ನಂತರದ ರಾಷ್ಟ್ರದ ದ್ವಿತೀಯ ಉನ್ನತ ಕಾನೂನು ಅಧಿಕಾರಿ. ಅವರು 2018ರಿಂದ ಈ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದೇ ರೀತಿ ಕೆ.ಎಂ. ನಟರಾಜ್ ಅವರು Additional Solicitor General of India ಹುದ್ದೆ ನಿರ್ವಹಿಸುತ್ತಿದ್ದು, ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ಪರವಾಗಿ ಹಲವು ಪ್ರಮುಖ ಪ್ರಕರಣಗಳನ್ನು ವಾದಿಸುತ್ತಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಬಳಿಕ ಇಬ್ಬರೂ ದೇವಾಲಯದ ಸೌಂದರ್ಯ ಮತ್ತು ವ್ಯವಸ್ಥೆಯನ್ನು ಮೆಚ್ಚಿದರು.

ಪುತ್ತೂರು ಗ್ರಾಮಾಂತರ ಘಟನೆಯ ಕುರಿತು ಪೊಲೀಸರು ಸ್ಪಷ್ಟನೆ ನೀಡಿದರು

Image
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಕ್ಟೋಬರ್ 22, 2025 ರಂದು ದಾಖಲಾಗಿದ್ದ ಪ್ರಕರಣದ ಕುರಿತು ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಿದೆ. ಪೊಲೀಸರ ಪ್ರಕಾರ, ವಾಹನವನ್ನು ಹಿಂಬಾಲಿಸಿ ನಿಲ್ಲಿಸಿದ ನಂತರ ಪ್ರಕರಣ ದಾಖಲಾಗಿದ್ದು, ಈ ಕಾರ್ಯದಲ್ಲಿ ಯಾವುದೇ ಧಾರ್ಮಿಕ ಅಥವಾ ಸಾಮಾಜಿಕ ಸಂಸ್ಥೆಯ ಭಾಗವಹಿಸುವಿಕೆ ಇಲ್ಲ. ನ್ಯಾಯಸಮ್ಮತ ತನಿಖೆಗಾಗಿ ಪ್ರಕರಣವನ್ನು ಮರುದಿನವೇ ಪುತ್ತೂರು ಉಪವಿಭಾಗದ ವ್ಯಾಪ್ತಿಯಿಂದ ವರ್ಗಾಯಿಸಲಾಗಿದೆ. ಘಟನೆಯ ಸಮಯದಲ್ಲಿ ಪಿಎಸ್ಐ ಬೆಳ್ಳಾರೆ ಹಾಗೂ ಸಿಬ್ಬಂದಿಗಳು ಸ್ಥಳದಲ್ಲಿದ್ದು, ಉಳಿದ ಅಧಿಕಾರಿಗಳು ತನಿಖಾ ಕಾರ್ಯ ಹಾಗೂ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ತೊಡಗಿಕೊಂಡಿದ್ದರು. ಘಟನಾ ಸ್ಥಳಕ್ಕೆ ಬಂದ ಅರುಣ್ ಕುಮಾರ್ ಪುತ್ತಿಲ ಅವರು, ಒಂದು ಜಾನುವಾರು ಸತ್ತಿರುವುದನ್ನು ಗಮನಿಸಿ ಉಳಿದ ಜಾನುವಾರುಗಳಿಗೆ ತೊಂದರೆಯಾಗದಂತೆ ಅವುಗಳನ್ನು ಇಳಿಸಲು ವಿನಂತಿಸಿದ್ದರು. ಇನ್ಸ್‌ಪೆಕ್ಟರ್ ರವರು ದೂರವಾಣಿಯಲ್ಲಿ ಅನುಮತಿ ನೀಡಿದ ನಂತರ, ಸ್ಥಳೀಯರು ಹಾಗೂ ಪೊಲೀಸರು ಸೇರಿ ಜಾನುವಾರುಗಳನ್ನು ಇಳಿಸುವ ಕೆಲಸ ಮಾಡಿದ್ದಾರೆಂದು ತಿಳಿಸಲಾಗಿದೆ. ಆದರೆ ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ತಪ್ಪು ರೀತಿಯಲ್ಲಿ ಪ್ರಚಾರಗೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಜಾನುವಾರುಗಳ ಜೀವ ಉಳಿಸಲು ಪೊಲೀಸ್ ಅಧಿಕಾರಿಗಳು ತುರ್ತು ನಿರ್ಧಾರ ತೆಗೆದುಕೊಂಡಿದ್ದು, ಯಾವುದೇ ಸಂಘ...

ಸುರತ್ಕಲ್‌ನಲ್ಲಿ ಯುವಕರಿಗೆ ಚೂರಿ ಇರಿದು ಕೊಲೆಗೆ ಯತ್ನ – ಪೊಲೀಸರು ನಾಲ್ವರನ್ನು ಬಂಧಿಸಿ ಪ್ರಕರಣ ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

Image
ಮಂಗಳೂರು : ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕಾನಾದ ಬಳಿಯಲ್ಲಿ ಇಬ್ಬರು ಯುವಕರ ಮೇಲೆ ಚೂರಿ ಇರಿದು ಕೊಲೆಗೆ ಯತ್ನಿಸಿದ ಪ್ರಕರಣವನ್ನು ಪೊಲೀಸರು ಕೇವಲ ಕೆಲವೇ ದಿನಗಳಲ್ಲಿ ಬೇಧಿಸಿದ್ದಾರೆ. ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದು, ಪ್ರಮುಖ ಆರೋಪಿ ಗುರುರಾಜ್ ಆಚಾರಿ ಇನ್ನೂ ಪರಾರಿಯಾಗಿದ್ದಾನೆ. ಪೊಲೀಸ್ ವರದಿ ಪ್ರಕಾರ, ಅಕ್ಟೋಬರ್ 23, 2025 ರಂದು ರಾತ್ರಿ ಸುಮಾರು 10.30ಕ್ಕೆ ಕಾನಾದ ದೀಪಕ್ ಭಾರ್ ಬಳಿಯಲ್ಲಿ ಕ್ಷುಲಕ ಕಾರಣಕ್ಕಾಗಿ ಹಸನ್ ಮುಕ್ಷಿತ್ ಹಾಗೂ ನಿಝಾಂ ಎಂಬ ಯುವಕರಿಬ್ಬರಿಗೆ ಗುರುರಾಜ್ ಆಚಾರಿ, ಅಲೆಕ್ಸ್ ಸಂತೋಷ್, ನಿತಿನ್ ಹಾಗೂ ಸುಶಾಂತ್ ಸೇರಿಕೊಂಡು ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ್ದರು. ಈ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳಾದ 1️⃣ ಸುಶಾಂತ್ @ ಕಡವಿ (29), ವಾಸ: ಕಟ್ಲ ಮನೆ, ಕಾನಾ, ಸುರತ್ಕಲ್ 2️⃣ ಕೆ.ವಿ. ಅಲೆಕ್ಸ್ (27), ವಾಸ: ಬೈಕಲ ಮನೆ, ಕಾನಾ ಕಟ್ಲ, ಇಡ್ಯಾ ಗ್ರಾಮ 3️⃣ ನಿತಿನ್ (26), ವಾಸ: ಇಂದಿರಾ ಕಟ್ಟೆ, ಸುರತ್ಕಲ್ ಮತ್ತು ಆರೋಪಿಗಳಿಗೆ ಆಶ್ರಯ ನೀಡಿದ 4️⃣ ಆರುಣ್ ಶೆಟ್ಟಿ (56), ವಾಸ: ಹೊನ್ನಕಟ್ಟೆ, ಸುರತ್ಕಲ್ — ಇವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಮುಖ ಆರೋಪಿ ಗುರುರಾಜ್ ಆಚಾರಿ ಹಾಗೂ ಆಶ್ರಯ ನೀಡಿದ ಅಶೋಕ್ ಎಂಬಾತರು ಪ್ರಸ್ತುತ ತಲೆಮರೆಸಿಕೊಂಡಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದ ಪತ್ತೆ ಹ...

🚨 ಜಾನುವಾರು ಸಾಗಣೆ ಗಾಡಿ ತಡೆದ ಪೊಲೀಸರ ಜೀಪಿಗೆ ಡಿಕ್ಕಿ — ಕೊಲೆಯತ್ನ ಮಾಡಿದ ಆರೋಪಿಯ ಕಾಲಿಗೆ ಗುಂಡು!

Image
ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಈಶ್ವರಮಂಗಳ ಬಳಿ ಇಂದು ಮುಂಜಾನೆ ನಡೆದ ಘಟನೆದಲ್ಲಿ, ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಗಾಡಿಯನ್ನು ತಡೆದ ಪೊಲೀಸರ ಮೇಲೆ ಕೊಲೆಯತ್ನ ನಡೆದಿದೆ. ಮಾಹಿತಿ ಪ್ರಕಾರ, ಆರೋಪಿ ಅಬ್ದುಲ್ಲಾ (40), ಮೂಲತಃ ಕೇರಳದ ಕಾಸರಗೋಡು ಜಿಲ್ಲೆಯವನು, ಐಚರ್ ವಾಹನದಲ್ಲಿ 10 ಜಾನುವಾರುಗಳನ್ನು ಸಾಗಿಸುತ್ತಿದ್ದನು. ವಾಹನವನ್ನು ನಿಲ್ಲಿಸಲು ಪೊಲೀಸರ ಸೂಚನೆ ನೀಡಿದರೂ, ಆತನು ನಿಲ್ಲಿಸದೆ ವೇಗವಾಗಿ ಓಡಿಸಿಕೊಂಡು ಹೋದನು. ಸುಮಾರು 10 ಕಿಲೋಮೀಟರ್ ದೂರ ಪೊಲೀಸರು ಹಿಂಬಾಲಿಸಿದ ಬಳಿಕ, ಆರೋಪಿ ವಾಹನವನ್ನು ಹಿಂತಿರುಗಿ ಪೊಲೀಸರ ಜೀಪಿಗೆ ಡಿಕ್ಕಿ ಹೊಡೆದು ಪರಾರಿ ಯತ್ನ ನಡೆದಿದೆ. ಈ ವೇಳೆ ಪರಿಸ್ಥಿತಿ ನಿಯಂತ್ರಣ ತಪ್ಪಿದ ಹಿನ್ನೆಲೆಯಲ್ಲಿ, ಪಿಎಸ್ಐ ರವರು ಎಚ್ಚರಿಕೆ ಗುಂಡು ಹಾರಿಸಿದ್ದು. ಒಂದು ಗುಂಡು ವಾಹನದ ಮೇಲೆ ತಾಗಿದ್ದು, ಮತ್ತೊಂದು ಗುಂಡು ಆರೋಪಿಯ ಕಾಲಿಗೆ ಬಿದ್ದಿದೆ. ಘಟನೆಯ ವೇಳೆಯಲ್ಲಿ ಇನ್ನೊಬ್ಬ ಆರೋಪಿಯು ಸ್ಥಳದಿಂದ ಪರಾರಿಯಾಗಿದ್ದಾನೆ. ಗಾಯಗೊಂಡ ಆರೋಪಿಯನ್ನು ತಕ್ಷಣ ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಈತನ ವಿರುದ್ಧ ಈಗಾಗಲೇ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ 33/2025 ರ ಗೋಹತ್ಯೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು ಎಂದು ತಿಳಿದುಬಂದಿದೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹೊ...

ಅ. 22: ಕುಕ್ಕೆ ಸುಬ್ರಹ್ಮಣ್ಯದಲ್ಲಿ ಉತ್ಸವದಿಗಳು ಆರಂಭ.

Image
ಕುಕ್ಕೆ ಸುಬ್ರಹ್ಮಣ್ಯ ; ದಕ್ಷಿಣ ಭಾರತದ ಪ್ರಸಿದ್ಧ ನಾಗಾರಾಧನಾ ಕ್ಷೇತ್ರಗಳಲ್ಲಿ ಅಗ್ರಗಣ್ಯ ಸ್ಥಾನದಲ್ಲಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಈ ವರ್ಷದ ಉತ್ಸವದಿಗಳು ಅಕ್ಟೋಬರ್ 22ರಂದು, ದೀಪಾವಳಿ–ಬಲಿಪಾಡ್ಯಮಿ ದಿನದಿಂದ ಆರಂಭಗೊಳ್ಳಲಿವೆ. ಈ ಸಂದರ್ಭದಲ್ಲಿ ಶ್ರೀ ಸುಬ್ರಹ್ಮಣ್ಯ ದೇವರು ಹೊರಾಂಗಣ ಪ್ರವೇಶಿಸಲಿದ್ದು, ಅದರಿಂದ ಉತ್ಸವದಿಗಳಿಗೆ ಅಧಿಕೃತ ಚಾಲನೆ ಸಿಗಲಿದೆ. ಬುಧವಾರ ಮಧ್ಯಾಹ್ನ ಮಹಾಪೂಜೆಯ ನಂತರ ದೇವಾಲಯ ಆವರಣದಲ್ಲಿ ಗಜಪೂಜೆ ವೈದಿಕ ವೈಭವದೊಂದಿಗೆ ನೆರವೇರಲಿದೆ. ಸಂಜೆ ಗೋದೋಳಿ ಲಗ್ನದಲ್ಲಿ ಗೋಪೂಜೆ ನಡೆಯಲಿದೆ. ರಾತ್ರಿ ಮಹಾಪೂಜೆ ಬಳಿಕ ಹೊರಾಂಗಣದಲ್ಲಿ ಭಕ್ತರ ಮನ ಸೆಳೆಯುವ ಬಂಡಿ ಉತ್ಸವ ಹಾಗೂ ದೀಪಾರಾಧನೆಯು ನಡೆಯಲಿದ್ದು, ಅದಕ್ಕೂ ಬಳಿಕ ಶ್ರೀದೇವರ ಪಾಲಕ್ಕಿ ಉತ್ಸವ ಸಾಂಪ್ರದಾಯಿಕ ಶೈಲಿಯಲ್ಲಿ ಜರಗಲಿದೆ. ದೀಪಾವಳಿಯ ಈ ಪಾವನ ಸಂದರ್ಭದಲ್ಲಿ ಪ್ರಾರಂಭಗೊಳ್ಳುವ ಕುಕ್ಕೆ ಸುಬ್ರಹ್ಮಣ್ಯ ದೇವರ ಉತ್ಸವದಿಗಳು ಮುಂದಿನ ಕೆಲವು ದಿನಗಳು ವೈಭವದಿಂದ ನಡೆಯಲಿದ್ದು, ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ.

ಮಂಗಳೂರು: 20 ಲಕ್ಷದ ಕಳವು ಪ್ರಕರಣ – 20 ಗಂಟೆಯೊಳಗೆ ಇಬ್ಬರು ಅಂತರಾಜ್ಯ ಕಳ್ಳರ ಬಂಧನ, ಚಿನ್ನಾಭರಣ-ನಗದು ವಶ.

Image
ಮಂಗಳೂರು ನಗರ : ಲಾಲ್ ಬಾಗ್ ಹ್ಯಾಟ್ ಹಿಲ್ ಪ್ರದೇಶದ ಅಪಾರ್ಟ್‌ಮೆಂಟ್‌ನಲ್ಲಿ ನಡೆದ ಭಾರೀ ಕಳ್ಳತನ ಪ್ರಕರಣವನ್ನು ಉರ್ವಾ ಪೊಲೀಸ್ ಠಾಣೆಯವರು ಕೇವಲ 20 ಗಂಟೆಗಳೊಳಗೆ ಪತ್ತೆಹಚ್ಚಿದ್ದಾರೆ. ಸುಮಾರು 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ನಗದು, ವಿದೇಶಿ ಕರೆನ್ಸಿ ಮತ್ತು ಮೊಬೈಲ್ ಫೋನ್‌ಗಳನ್ನು ಕದ್ದ ಇಬ್ಬರು ಅಂತರರಾಜ್ಯ ಕಳ್ಳರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪ್ರಕರಣದ ವಿವರ: ದಿನಾಂಕ 19/20 ಅಕ್ಟೋಬರ್‌ 2025ರ ಮಧ್ಯರಾತ್ರಿಯಲ್ಲಿ ಉರ್ವಾ ಠಾಣಾ ವ್ಯಾಪ್ತಿಯ ದೇರೆಬೈಲ್ ಗ್ರಾಮ, ಲಾಲ್ ಬಾಗ್ ಹ್ಯಾಟ್ ಹಿಲ್‌ನ ಅಪಾರ್ಟ್‌ಮೆಂಟ್‌ನ ಮೂರು ಫ್ಲಾಟ್‌ಗಳಲ್ಲಿ ಕಳ್ಳರು ನುಗ್ಗಿ, ಸುಮಾರು 20 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ರೂ. 5000 ನಗದು, 3000 ದಿರ್ಹಮ್ ಮತ್ತು ಮೊಬೈಲ್ ಫೋನ್‌ಗಳನ್ನು ಕದ್ದಿದ್ದರು. ಈ ಕುರಿತು ಶ್ರೀ ರಿಯಾಜ್ ರಶೀದ್ ಅವರಿಂದ ನೀಡಿದ ದೂರಿನ ಮೇರೆಗೆ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು (ಕೇಸ್ ನಂ. 104/2025, ಕಲಂ 331(4), 305(ಎ), ಬಿ.ಎನ್.ಎಸ್ - 2023). ತ್ವರಿತ ತನಿಖೆ ಮತ್ತು ಬಂಧನ: ದೂರು ದಾಖಲಾಗುತ್ತಿದ್ದಂತೆಯೇ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಉರ್ವಾ ಠಾಣೆಯ ಪೊಲೀಸರು, ಶ್ವಾನ ದಳ ಮತ್ತು ಫಿಂಗರ್‌ಪ್ರಿಂಟ್ ತಜ್ಞರ ಸಹಾಯದಿಂದ ತನಿಖೆ ಕೈಗೊಂಡು, ಕೇವಲ 20 ಗಂಟೆಗಳೊಳಗೆ ಇಬ್ಬರು ಅಂತರರಾಜ್ಯ ಕಳ್ಳರನ್ನು ಬೆಂಗಳೂರಿನಲ್ಲಿ ಬಂಧಿಸಿದರು. ಬಂಧಿತರಿಂದ ಎಲ್ಲಾ...

ಸುಬ್ರಹ್ಮಣ್ಯದಲ್ಲಿ ಯಕ್ಷಗಾನ ಸನ್ಮಾನ ಕಾರ್ಯಕ್ರಮ: ಕಲಾವಿದರು ಅನೇಕರ ಬದುಕಿಗೆ ಪ್ರೇರಣೆ — ರಾಮಕೃಷ್ಣ ಮಯ್ಯ.

Image
ಕುಕ್ಕೆ ಸುಬ್ರಹ್ಮಣ್ಯ : ಯಕ್ಷಗಾನ ಕಲೆ ಅಥವಾ ಇನ್ಯಾವುದೇ ಕಲೆಯು ಕೇವಲ ಮನರಂಜನೆಯಷ್ಟೇ ಅಲ್ಲ, ಅದು ಅನೇಕರ ಬದುಕಿಗೆ ಪ್ರೇರಣೆಯಾಗಬಲ್ಲ ಶಕ್ತಿಯಾಗಿದೆ. ಅಂತಹ ಕಲಾವಿದರ ಸಾಲಿನಲ್ಲಿ ಪ್ರಸಿದ್ಧ ಹಿಮ್ಮೇಳ ವಾದಕ ದೇಲಂತಮಜಲು ಸುಬ್ರಹ್ಮಣ್ಯ ಭಟ್‌ ಅವರೂ ಸೇರಿದ್ದಾರೆ ಎಂದು ಸಿರಿಬಾಗಿಲು ವೆಂಕಪ್ಪಯ್ಯ ಪ್ರತಿಷ್ಠಾನದ ಸಂಚಾಲಕ ರಾಮಕೃಷ್ಣ ಮಯ್ಯ ಹೇಳಿದರು. ಅವರು ಕುಕ್ಕೆ ಸುಬ್ರಹ್ಮಣ್ಯದ ರಥಬೀದಿಯ ನೂತನ ಸಭಾಗೃಹದಲ್ಲಿ, ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸಹಯೋಗದಲ್ಲಿ ಯಕ್ಷಮಿತ್ರರು ಬಳಗ ಕುಕ್ಕೆ ಸುಬ್ರಹ್ಮಣ್ಯ ಆಯೋಜಿಸಿದ್ದ ಸನ್ಮಾನ ಹಾಗೂ ಶ್ರೀದೇವೀಮಹಾತ್ಮ್ಯೆ ಯಕ್ಷಗಾನ ಬಯಲಾಟ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಮಕೃಷ್ಣ ಮಯ್ಯ ಮುಂದುವರಿದು—“ಯಕ್ಷಗಾನ ಪ್ರದರ್ಶನ ಮಾತ್ರವಲ್ಲ, ಕಲೆ ಮತ್ತು ಕಲಾವಿದರಿಗೆ ಪ್ರೋತ್ಸಾಹ, ಅಭಿನಂದನೆ ಹಾಗೂ ಗುರುತಿಸುವ ಕೆಲಸ ಅಕಾಡೆಮಿಯ ಮೂಲಕ ನಡೆಯುತ್ತಿರುವುದು ಸಂತೋಷಕರ ಬೆಳವಣಿಗೆಯಾಗಿದೆ. ಹಿರಿಯ ಹಿಮ್ಮೇಳ ವಾದಕ ದೇಲಂತಮಜಲು ಸುಬ್ರಹ್ಮಣ್ಯ ಭಟ್‌ ಅವರು 40 ವರ್ಷಗಳಿಂದ ಯಕ್ಷಗಾನ ಸೇವೆಯಲ್ಲಿ ತೊಡಗಿಕೊಂಡು ಅನೇಕ ಕಲಾವಿದರಿಗೆ ಪ್ರೇರಣೆಯಾಗಿದ್ದಾರೆ. ಇಂತಹ ಶ್ರೇಷ್ಟ ಕಲಾವಿದರಿಗೆ ಗೌರವ ಸಲ್ಲಿಸುವುದು ಅಗತ್ಯ” ಎಂದರು. ಕಲಾವಿದರಿಗೆ ಪ್ರೋತ್ಸಾಹ ಅಗತ್ಯ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಲಾಸಂಘಟಕ ಯಜ್ಞೇಶ್‌ ಆಚಾರ್‌ ಅವರು ಮಾತನಾಡಿ—“ಕಲಾವಿದರನ್ನು ಗೌರವಿಸುವ ಮೂಲಕ ...

ಜೇಸಿಐ ಉದಕ ಪತ್ರಿಕೆ ಸಂಪಾದಕ ಜೇಸಿ ಮೋಹನ್ ಚಂದ್ರ ಅವರಿಗೆ ಅತ್ಯುತ್ತಮ ವಲಯ ಸಂಯೋಜಕ ವಿನ್ನರ್ ಪ್ರಶಸ್ತಿ.

Image
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರಕನ್ನಡ ಜಿಲ್ಲೆಯನ್ನು ಒಳಗೊಂಡ ಜೇಸಿಐ ಭಾರತದ ವಲಯ 15ರ ವಾರ್ಷಿಕ ವಲಯ ಸಮ್ಮೇಳನ "ಕಹಳೆ" ಜೇಸಿಐ ಮಂಗಳೂರು ಸಾಮ್ರಾಟ್ ಘಟಕದ ಆತಿಥ್ಯದಲ್ಲಿ ಅಕ್ಟೋಬರ್ 18 ಮತ್ತು 19 ರಂದು ಸ್ವಸ್ತಿಕ ವಾಟರ್ ಫ್ರಂಟ್ , ಸುಲ್ತಾನ್ ಬತ್ತೇರಿ , ಮಂಗಳೂರಿನಲ್ಲಿ ನಡೆಯಿತು. ಸಮ್ಮೇಳನದಲ್ಲಿ ವಲಯಾಧ್ಯಕ್ಷ ಜೇಸಿಐ ಸೆನೆಟರ್ ಅಭಿಲಾಷ್ .ಬಿ.ಎ ಮತ್ತು ವಲಯದ ಪ್ರಥಮ ಲೇಡಿ ಜೇಸಿ ಶೀಲಾ ಅಭಿಲಾಷ್ ವಲಯದ ಪ್ರತಿಷ್ಠಿತ ಉದಕ ಪತ್ರಿಕೆಯ ಸಂಪಾದಕರಾಗಿ ಒಂಭತ್ತು ಸಂಚಿಕೆಗಳನ್ನು ಬಿಡುಗಡೆ ಮಾಡಿರುವ ಗುರುತರ ಕಾರ್ಯವನ್ನು ಗುರುತಿಸಿ, ಜೇಸಿ ಮೋಹನ್ ಚಂದ್ರ ತೋಟದ ಮನೆ ಅವರಿಗೆ "ಅತ್ಯುತ್ತಮ ವಲಯ ಸಂಯೋಜಕ ವಿನ್ನರ್"  (Outstanding Zone Coordinator Winner) ಪ್ರಶಸ್ತಿಯನ್ನು ನೀಡಿ ಗೌರವಿಸಿದರು.ಇವರು ವಲಯ 15ರ ಪ್ರತಿಷ್ಠಿತ ಉದಕ ಪತ್ರಿಕೆಯ ಸಂಪಾದಕರಾಗಿ ಎರಡನೇ ಬಾರಿಗೆ ಆಯ್ಕೆಯಾಗಿದ್ದರು. ಜೇಸಿಐ ಉಪ್ಪಿನಂಗಡಿ ಘಟಕದ ಪೂರ್ವಾಧ್ಯಕ್ಷರಾಗಿದ್ದಾರೆ. ಇವರು ವೃತ್ತಿಯಲ್ಲಿ ಉಪನ್ಯಾಸಕರಾಗಿ ಎನ್ಎಂಪಿಯು ಕಾಲೇಜು ಅರಂತೋಡು,ಸುಳ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

“ಸಂತ ಬದುಕಿನ ಶಬ್ದಶಿಲ್ಪ: ಪೂಜ್ಯ ವಿಶ್ವ ಪ್ರಸನ್ನತೀರ್ಥರ ತಪೋಮಯ ಜೀವನದ ಅಮೂಲ್ಯ ದಾಖಲೆ”

Image
*ಶ್ರೀ ವಿಶ್ವ ಪ್ರಸನ್ನತೀರ್ಥರು*   *ಸಂತ ಬದುಕಿನ ಶಬ್ದ ಶಿಲ್ಪ*  ********************** *( ಬದುಕು -ಸಾಧನೆಗಳ ಚಿತ್ರಣ )*  ಪೂಜ್ಯ ವಿಶ್ವ ಪ್ರಸನ್ನತೀರ್ಥರ ವಯಸ್ಸು 61 ವರುಷಗಳು. ಸನ್ಯಾಸದ ಬದುಕಿಗೆ 37 ವರುಷಗಳು. ಸಂವತ್ಸರಗಳ ಒಂದು ಮಂಡಲ ಪೂರ್ತಿಗೊಂಡರೆ ವ್ಯಕ್ತಿಯೊಬ್ಬನ ಗರಿಷ್ಠ ಸಾಮರ್ಥ್ಯ ಅನಾವರಣಗೊಂಡು ಗಟ್ಟಿ ವ್ಯಕ್ತಿತ್ವ ರೂಪು ಗೊಳ್ಳುವುದೆಂದು ಭಾವಿಸಿರುವವರು ನಾವು. ಮುಂದೆ ಅದು ಪರಿಪಕ್ವಗೊಂಡು ಮತ್ತಷ್ಟು ಹೊಳಪು ಗೊಳ್ಳುವುದು ಹಾಗೂ ಪ್ರಭಾವಿಸುವುದು. ಇದು ಅನೇಕರ ಅರಿವಿಗೆ ಬಂದ ಸತ್ಯ.ನಮ್ಮೆಲ್ಲರ ಮನವ ಆವರಿಸಿ ಕಣ್ಮನಗಳಲ್ಲಿ ತುಂಬಿರುವ ಗುರು ಪೂಜ್ಯ ವಿಶ್ವೇಶತೀರ್ಥರಲ್ಲೂ ನಾವು ಅದನ್ನೇ ಕಂಡಿರುವೆವು.   ಸಂಸಾರಿಗಳಾಗಿ ಐಹಿಕ ಸುಖ ಕಾಣುತ್ತಿರುವ ಜಗದ ಜನರ ನಡುವೆ, ಮಾನವ ಸಹಜ ಬಯಕೆಗಳನ್ನು ಬದಿಗೊತ್ತಿ, ಅರಿಷಡ್ವೆರಿಗಳ ಗೆದ್ದು,ಮತ ಧರ್ಮಗಳ ಸಾರ ಸರ್ವಸ್ವ ಕಾಪಿಡಲು ಮನವ ಹರಿಸಿದ ಯೋಗಿಗಳ ತ್ಯಾಗ ಸಮಾಜದ ಉನ್ನತಿಗಾಗಿರುತ್ತದೆ. ಸನ್ಯಾಸ ಅದೊಂದು ವೃತ್ತಿಯಲ್ಲ. ತಪಸ್ಸು. ಬದುಕು ಪಣವಾಗಿಟ್ಟು ಆದರ್ಶಗಳ ಕಟ್ಟಿ ಬೆಳೆಸಿ ಸಮಾಜಕ್ಕೆ ತೋರುವ ತ್ಯಾಗದ ಬದುಕು. ಹೀಗೆ ಸಂತರೊಬ್ಬರು ನಡೆಸಿದ ಸೇವೆಗಳ ಸ್ಮರಿಸುವುದು - ಬೆಂಬಲಿಸುವುದು - ಸಮಾಜಕ್ಕೆ ಕಟ್ಟಿಕೊಡುವುದು ಶಿಷ್ಯರ ಕರ್ತವ್ಯ. ಇಂದಿನ ನೆನಪುಗಳು ನಾಳೆಗಿಲ್ಲದೆ, ಮರೆವು ಆವರಿಸುವ ಮನುಜರಿಗೆ ಮತ್ತೆ ಮತ್ತೆ ಮೆಲುಕು ಹಾಕಲು ಇರು...

ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನಿಂದ ಬಸ್ಸು ತಗುದಾಣಗಳ ನವೀಕರಣ.

Image
  ಸುಬ್ರಹ್ಮಣ್ಯ ಅಕ್ಟೋಬರ್ 18 : ಲಯನ್ಸ್  ಕ್ಲಬ್ ಸುಬ್ರಹ್ಮಣ್ಯ ಇದರ ವತಿಯಿಂದ ಈ ವರ್ಷದ ವಿನೂತನ ಕಾರ್ಯಕ್ರಮವಾಗಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಗೆ ಒಳಪಟ್ಟ 12 ಬಸ್ಸು ತಂಗುದಾಣಗಳನ್ನು ಸ್ವಚ್ಛಗೊಳಿಸಿ, ಅಂದಗೊಳಿಸಿ, ಸಾರ್ವಜನಿಕರ ಉಪಯೋಗಕ್ಕೆ ಅರ್ಪಣೆ ಮಾಡುವುದಾಗಿದೆ. ಅದರಂತೆ ಈಗಾಗಲೇ 4 ಬಸ್ಸು ತಗುದಾಣ ಗಳಾದ ಅರಂಪಾಡಿ, ಹೊಸಳ್ಳಿಕೆ, ಪರ್ವತಮುಖಿ,ಹಾಗೂ ಕುಲಕುಂದ ಬಸ್ಸು ತಗ್ಗುದಾಣಗಳನ್ನು  ಪೇಂಟಿಂಗ್ ಮಾಡಿ ಸಾರ್ವಜನಿಕರ ಉಪಯೋಗಕ್ಕೆ ಅರ್ಪಿಸಲಾಗಿದೆ. ಈ 4 ತಂಗು ದಾಣಗಳ ಪ್ರಾಯೋಜಕರುಗಳಾಗಿ ಲಯನ್ಸ್ ಜಿಲ್ಲೆ 318 ಪ್ರಾಂತೀಯ ಅಧ್ಯಕ್ಷ ರಂಗಯ್ಯ ಶೆಟ್ಟಿಗಾರ್, ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಅಧ್ಯಕ್ಷೇ ವಿಮಲಾ ರಂಗಯ್ಯ, ಡಾl ಶಿವಕುಮಾರ್ ಹೊಸಳ್ಳಿಕೆ, ಪ್ರಕಾಶ್ ಶೆಟ್ಟಿ ಕುಂದಾಪುರ, ದಿನೇಶ್ಎಂಪಿ, ಪವನ್ ಎಂಡಿ, ಸತೀಶ ಕೂಜುಗೋಡು, ಜಗದೀಶ ಪಡುಪು ಸಹಕರಿಸಿರುತ್ತಾರೆ. ಬಸು ತಗುದಾಣಗಳ ಲೋಕಾರ್ಪಣೆ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯದ ಪೂರ್ವ ಅಧ್ಯಕ್ಷ ರಾಮಚಂದ್ರ ಪಳಂಗಾಯ, ಕಾರ್ಯದರ್ಶಿ ಗಾಯತ್ರಿ ಕೃಷ್ಣ ಕುಮಾರ್, ನಿಕಟ ಪೂರ್ವ ಕಾರ್ಯದರ್ಶಿ ಕೃಷ್ಣಕುಮಾರ್ ಬಾಳುಗೋಡು, ಖಜಾಂಜಿ ಭಾರತಿ ದಿನೇಶ್, ಸದಸ್ಯ ಮೋಹನ್ದಾಸ್ ರೈ, ಸುಬ್ರಮಣ್ಯ ಇನ್ನರ್ ವೀಲ್ ಕ್ಲಬ್ ಸದಸ್ಯರುಗಳಾದ ಶೋಭಾ ಗಿರಿಧರ್ ಹಾಗೂ ಜಾನಕಿ ವೆಂಕಟೇಶ್ ಹಾಜರಿದ್ದರು.

ಸುಳ್ಯ ಶಾಸಕಿಯಾದ ಭಾಗೀರಥಿ ಮುರುಳ್ಯರಿಂದ ಚಾರ್ವಾಕ ಹಾಗೂ ಕಾಣಿಯೂರು ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ.

Image
ಸುಳ್ಯ : ತಾಲೂಕಿನ ಎರಡು ಪ್ರಮುಖ ಸ್ಥಳಗಳಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಇಂದು ಸುಳ್ಯ ಕ್ಷೇತ್ರದ ಶಾಸಕಿ ಯಾದ  ಭಾಗೀರಥಿ ಮುರುಳ್ಯ ಅವರು ಗುದ್ದಲಿ ಪೂಜೆ ನೆರವೇರಿಸಿದರು. ಚಾರ್ವಾಕ ಗ್ರಾಮದ ಕಪಿಲೇಶ್ವರ ದೇವಾಲಯದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶಗಳ ಸಂಪರ್ಕ ಮಾರ್ಗ ಸುಧಾರಣೆ ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ದೇವಾಲಯ ಪ್ರದೇಶದ ರಸ್ತೆ ಸುಧಾರಣೆಯಿಂದ ಭಕ್ತರಿಗೆ ಸುಗಮ ಸಂಚಾರ ಸೌಲಭ್ಯ ದೊರೆಯಲಿದೆ ಎಂದು ಹೇಳಿದರು. ಅದೇ ರೀತಿ, ಕಾಣಿಯೂರು ಪದವಿಪೂರ್ವ ಕಾಲೇಜಿನ ರಸ್ತೆ ಅಭಿವೃದ್ಧಿ ಕಾಮಗಾರಿಗೂ ಶಾಸಕೆಯವರು ಗುದ್ದಲಿ ಪೂಜೆ ನೆರವೇರಿಸಿದರು. ಕಾಲೇಜು ವಿದ್ಯಾರ್ಥಿಗಳು ಮತ್ತು ಸ್ಥಳೀಯರ ದೀರ್ಘಕಾಲದ ಬೇಡಿಕೆಗೆ ಸ್ಪಂದಿಸಿ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು. ಈ ವೇಳೆ ಪಂಚಾಯತ್ ಸದಸ್ಯರು, ಸ್ಥಳೀಯ ನಾಯಕರು, ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಪುತ್ತೂರಿನಲ್ಲಿ ಟ್ರಾಫಿಕ್ ಪೊಲೀಸರ ಅಮಾನತು — ಆಟೋ ಚಾಲಕನಿಗೆ ಹಲ್ಲೆ, ವೀಡಿಯೊ ವೈರಲ್!

Image
ಪುತ್ತೂರು : ಸಂಚಾರ ನಿಯಮ ಉಲ್ಲಂಘನೆ ಮಾಡಿದ ಆಟೋ ಚಾಲಕನನ್ನು ನಿಲ್ಲಿಸುವ ವೇಳೆ ಪೊಲೀಸರ ಹಲ್ಲೆಯ ಘಟನೆ ಬೆಳಕಿಗೆ ಬಂದಿದ್ದು, ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆದ ಹಿನ್ನೆಲೆಯಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ. ದಿನಾಂಕ 17-10-2025 ರಂದು ಸಂಜೆ ವೇಳೆ ಪುತ್ತೂರು ಸಂಚಾರ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಗೆ ಸಂಬಂಧಿಸಿದಂತೆ, ಕುರಿಯ ಗ್ರಾಮದ ನಿವಾಸಿ ಬಶೀರ್ ಎಂಬ ಆಟೋ ಚಾಲಕ ಸಮವಸ್ತ್ರ ಧರಿಸಿ ವಾಹನ ಚಲಾಯಿಸುತ್ತಿದ್ದನು. ಕರ್ತವ್ಯದಲ್ಲಿದ್ದ ಪುತ್ತೂರು ಸಂಚಾರ ಪೊಲೀಸ್ ಠಾಣೆಯ ಎ.ಎಸ್.ಐ ಚಿದಾನಂದ ರೈ ಹಾಗೂ ಸಿಪಿಸಿ 2283 ಶೈಲ ಎಂ.ಕೆ ಅವರು ಕೈ ಸನ್ನೆ ಮೂಲಕ ನಿಲ್ಲಿಸಲು ಸೂಚಿಸಿದರೂ ಚಾಲಕ ಬಶೀರ್ ವಾಹನ ನಿಲ್ಲಿಸದೆ ಮುಂದುವರಿದಿದ್ದನು. ಘಟನೆಯ ನಂತರ ಪೊಲೀಸರು ಆತನನ್ನು ಹಿಂಬಾಲಿಸಿ ತಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೈಯಿಂದ ಹಲ್ಲೆ ನಡೆಸಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವೀಡಿಯೊ ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಿ, ಸಂಚಾರ ಎ.ಎಸ್.ಐ ಚಿದಾನಂದ ರೈ ಹಾಗೂ ಸಿಪಿಸಿ ಶೈಲ ಎಂ.ಕೆ ಅವರನ್ನು ತಾತ್ಕಾಲಿಕವಾಗಿ ಕರ್ತವ್ಯದಿಂದ ಅಮಾನತು ಮಾಡಿದ್ದಾರೆ. ಘಟನೆಯ ಕುರಿತು ಮುಂದಿನ ತನಿಖೆ ನಡೆಯುತ್ತಿದೆ.

ಬೆಳ್ಳಾರೆ : “ಗೊಂಬೆ ರಾವಣ” ನಾಟಕದ ಭವ್ಯ ಉದ್ಘಾಟನೆ – ಮಕ್ಕಳ ಪ್ರತಿಭೆಗಳಿಗೆ ವೇದಿಕೆ ಸಜ್ಜು.

Image
ಬೆಳ್ಳಾರೆ , ಅಕ್ಟೋಬರ್ 18 : ಕಲಾ, ಸಂಸ್ಕೃತಿ ಮತ್ತು ನೃತ್ಯದಲ್ಲಿ ತನ್ನದೇ ಗುರುತನ್ನು ನಿರ್ಮಿಸಿಕೊಂಡಿರುವ ಡ್ಯಾನ್ಸ್ ಅಂಡ್ ಬೀಟ್ಸ್ (D.N.B) ಬೆಳ್ಳಾರೆ ಸಂಸ್ಥೆಯ ನೇತೃತ್ವದಲ್ಲಿ ಮುದ್ರಾರಂಗ ಮಕ್ಕಳ ರಂಗನಾಟಕ ತಂಡದ ಹೊಸ ನಾಟಕ “ಗೊಂಬೆ ರಾವಣ” ಪ್ರದರ್ಶನದ ಕಾರ್ಯಕ್ರಮ ಇಂದು ಸಂಜೆ ಪೆರುವಾಜೆ ಜಿ.ಡಿ. ಆಡಿಟೋರಿಯಂನಲ್ಲಿ ಭವ್ಯವಾಗಿ ಉದ್ಘಾಟನೆಗೊಂಡಿತು. 🎭 ಉದ್ಘಾಟನಾ ಸಮಾರಂಭ: ಕಾರ್ಯಕ್ರಮದ ದೀಪ ಪ್ರಜ್ವಲನೆ ಶ್ರೀ ಮಹಾಬಲ ಕಲ್ಮಡ್ಕ (ರಂಗ ಸುರಭಿ ಕಲ್ಮಡ್ಕ) ಅವರಿಂದ ನೆರವೇರಿತು. ಸಭಾಧ್ಯಕ್ಷತೆ ವಹಿಸಿದವರು ಶ್ರೀ ಜಗನ್ನಾಥ ಪೂಜಾರಿ ಮುಕ್ಕೂರು, ಅಧ್ಯಕ್ಷರು ಗ್ರಾಮ ಪಂಚಾಯತ್ ಪೆರುವಾಜೆ. ಮುಖ್ಯ ಅತಿಥಿಗಳಾಗಿ: ಶ್ರೀ ಸುರೇಶ್ ಕುಮಾರ್ ಶೆಟ್ಟಿ ಪನ್ನೇ ಗುತ್ತು (ಅಧ್ಯಕ್ಷರು, ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಾಲಯದ ವ್ಯವಸ್ಥಾಪನಾ ಸಮಿತಿ, ಬಳ್ಳಾರೆ) ಶ್ರೀ ಆರ್.ಕೆ. ಭಾಸ್ಕರ ಬಾಳಿಲ (ನಿವೃತ್ತ ಮುಖ್ಯ ಶಿಕ್ಷಕರು ಮತ್ತು ಹಿರಿಯ ರಂಗನಾಟಕ ನಿರ್ದೇಶಕರು) ಶ್ರೀ ದಯಾಕರ ಆಳ್ವ ಕುಂಬ್ರ (ಅಧ್ಯಕ್ಷರು, ಹಾಲು ಉತ್ಪಾದಕರ ಸಹಕಾರಿ ಸಂಘ, ಮುಕ್ಕೂರು) ಶ್ರೀ ಪದ್ಮನಾಭ ಶೆಟ್ಟಿ ಪೆರುವಾಜೆ (ಮಾಲಕರು, ಜೆ.ಡಿ. ಆಡಿಟೋರಿಯಂ, ಪೆರುವಾಜೆ) ಕಾರ್ಯಕ್ರಮದ ನಿರೂಪಣೆ ಶ್ರೀ ಪ್ರದೀಪ್ ಕುಮಾರ್ ರೈ ಪನ್ನೇ, ಬೆಳ್ಳಾರೆ ಅವರು ಶಿಸ್ತಿನೊಂದಿಗೆ ನೆರವೇರಿಸಿದರು. 🌼 ಅತಿಥಿಗಳ ಮಾತು: ಅತಿಥಿಗಳು ಮಾತನಾಡಿ, ಮಕ್ಕಳಲ್ಲಿ ರಂಗಪ್...