Posts

Showing posts from December, 2025

ಕುಕ್ಕೆ ಸುಬ್ರಹ್ಮಣ್ಯ: 2026 ಹೊಸವರ್ಷಕ್ಕೆ ದೇವಸ್ಥಾನ ವಿಶೇಷವಾಗಿ ಕಂಗೊಳಿಸಲಿದೆ.

Image
ಕುಕ್ಕೆ ಸುಬ್ರಹ್ಮಣ್ಯ , ಡಿ.31: ಇತಿಹಾಸ ಪ್ರಸಿದ್ದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು 2026ರ ಹೊಸ ವರುಷ ಸ್ವಾಗತಕ್ಕೆ ಅದ್ದೂರಿಯಾಗಿ ಸಿಂಗಾರಗೊಂಡಿದೆ. ಮದುವಣಗಿತ್ತಿಯಂತೆ ಮೆರಗು ಮೂಡಿಸಿರುವ ದೇವಸ್ಥಾನ ಆವರಣ ಎಲ್ಲೆಡೆ ಹೊಸ ವರ್ಷದ ಸಂಭ್ರಮದ ಕಳೆ ತುಂಬಿಕೊಂಡಿದೆ. ದೇವಸ್ಥಾನದ ಮಹಾಗೋಪುರ ಮುಂಭಾಗದಲ್ಲಿ ವಿಶೇಷ ಕಲಾಕೃತಿಗಳಿಂದ ಅಲಂಕರಿಸಿದ ಚಪ್ಪರ–ತೋರಣಗಳು, ಬಣ್ಣಬಣ್ಣದ ಹೂವಿನ ಅಲಂಕಾರಗಳು, ವಿದ್ಯುತ್ಕಂಗಳ ಬೆಳಕಿನ ಝಳಪೊಂದಿಗೆ ಕ್ಷೇತ್ರದ ವಾತಾವರಣ ದೈವಿಕ ಛಾಯೆ ತುಂಬಿಕೊಂಡಿದೆ. ಭಕ್ತರು ಹೊಸ ವರ್ಷದ ಪ್ರಯುಕ್ತ ದೇವರ ದರ್ಶನಕ್ಕಾಗಿ ಈಗಾಗಲೇ ದೊಡ್ಡ ಸಂಖ್ಯೆಯಲ್ಲಿ ಕ್ಷೇತ್ರ ತಲುಪತೊಡಗಿದ್ದಾರೆ. ಈ ಶುಭ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿ ಅವರು ನಾಡಿನ ಸಮಸ್ತ ಜನತೆಗೆ 2026 ಹೊಸ ವರ್ಷದ ಹಾರೈಕೆ ಸಲ್ಲಿಸಿ ಮಾತನಾಡಿದರು. “ನಾಡಿನ ಎಲ್ಲರಿಗೂ 2026ರಲ್ಲಿ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವರ ಕೃಪೆ ಸದಾ ಇರಲಿ. ಪ್ರತಿಯೊಬ್ಬರಿಗೂ ಆರೋಗ್ಯ, ದೀರ್ಘಾಯುಷ್ಯ, ಮನೆಯಲ್ಲಿ ಸುಖ–ಶಾಂತಿ ನೆಮ್ಮದಿ, ಉದ್ಯೋಗದಲ್ಲಿ ಪ್ರಗತಿ ಹಾಗೂ ಆರ್ಥಿಕ ಸಮೃದ್ಧಿ ಸಿಗಲಿ. ಎಲ್ಲರ ಜೀವನದಲ್ಲಿ ಶುಭವಾಗಲಿ” ಎಂದು ಅವರು ಶುಭಾಶಯ ಕೋರಿದರು.

*ಬೆಥನಿ ವಿದ್ಯಾಸಂಸ್ಥೆಯ ಸಂಚಾಲಕ, ಪ್ರಾಂಶುಪಾಲರು ಡಾ. ವರ್ಗಿಸ್ ಕೈಪನಡ್ಕರವರ ಗುರುದೀಕ್ಷೆಯ ಬೆಳ್ಳಿಹಬ್ಬ....*

Image
ನೆಲ್ಯಾಡಿ ಬೆಥನಿ ವಿದ್ಯಾಸಂಸ್ಥೆಯ ಸಂಚಾಲಕರಾಗಿ, ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿರುವ ವಂದನೀಯ ಗುರುಗಳು ಡಾ. ವರ್ಗಿಸ್ ಕೈಪನಡ್ಕರವರ ಗುರುದೀಕ್ಷೆಯ ಬೆಳ್ಳಿ ಹಬ್ಬ ಡಿಸೆಂಬರ್ 30ರಂದು ಇಚಲಂಪಾಡಿಯ ಸಂತ ತೋಮಸ್ ಮಲಂಕರ ಸೀರಿಯನ್ ಕ್ಯಾಥೋಲಿಕ್ ಚರ್ಚ್ನಲ್ಲಿ ಪುತ್ತೂರು ಧರ್ಮ ಪ್ರಾಂತ್ಯದ ಧರ್ಮಗುರುಗಳು ಗೀ ವರ್ಗಿಸ್ ಮಾರ್ ಮಕಾರಿಯೋಸ್ ರವರ ಅಧ್ಯಕ್ಷತೆಯಲ್ಲಿ ವಿವಿಧ ಪ್ರಾರ್ಥನೆಗಳೊಂದಿಗೆ ನಡೆಯಿತು, ಬೆಥನಿ ಆಶ್ರಮದ ಸೂಪರ್ ವೈಸರ್ ಡಾ. ಜಿ. ವರ್ಗಿಸ್ ಕುಟ್ಟಿಲ್, ಬೆಥನಿ ನವಜ್ಯೋತಿ ಪ್ರಾವಿಯೆಂನ್ಸ್ ಸೂಪರ್ ವೈಸರ್ ಜಾರ್ಜ್ ಐಯನೆತ್, ,ಡಾ. ಕ್ರಿಷ್ಟೋಫರ್, ಅಂಟನಿ ಪದಪುರಂಕಲ್, ಫಾ. ಸತ್ಯಂ ತೋಮಸ್, ಫಾ. ಹನಿ, ಫಾ. ಜಾನ್ ಕುನ್ನತೆತು,ಬಾಲ ಕೃಷ್ಣ ಬಾಣಜಾಲ್, ಪಿ. ಪಿ. ವರ್ಗಿಸ್ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಅಂಟನಿ ಪದಿಪುರಕ್ಕಲ್ ಸ್ವಾಗತಿಸಿ, ಸರಿತಾ ಕೈಪನಡ್ಕ ಧನ್ಯವಾದ ಸಮರ್ಪಿಸಿದರು. ಬೆಥನಿ ವಿದ್ಯಾಸಂಸ್ಥೆ ನೆಲ್ಯಾಡಿ, ಬೆಥನಿ ವಿದ್ಯಾ ಸಂಸ್ಥೆ ನೂಜಿ ಬಾಲ್ತಿಲ,ಬೆಥನಿ ಐ.ಟಿ.ಐ ನೆಲ್ಯಾಡಿ, ಸಮಾನ ಮನಸ್ಕರ ವೇದಿಕೆ ನೆಲ್ಯಾಡಿ, ಕೌಕ್ರಾಡಿ ಗ್ರಾಮ ಪಂಚಾಯತ್,ಪಿ.ಟಿ.ಎ ಸದಸ್ಯರು ಬೆಥನಿ ವಿದ್ಯಾ ಸಂಸ್ಥೆ ನೆಲ್ಯಾಡಿ,ಸಂತ ತೋಮಸ್ ಮಲಂಕರ ಚರ್ಚ್ ಇಚಲಂಪಾಡಿ,ಸಂತ ಮೇರಿ ಮಲಂಕರ ಚರ್ಚ್ ಅಡ್ಡೋಲೆ,ಸಂತ ಜೋನ್ ಮಲಂಕರ ಚರ್ಚ್ ಶಿರಾಡಿ, ಅಲ್ಫೋನ್ಸೋ ಚರ್ಚ್ ನೆಲ್ಯಾಡಿ ಅಲ್ಲದೆ ಇನ್ನಿತರ ಚರ್ಚ್ ಗಳು ಮತ್ತು ಸಂಘ ಸಂಸ್ಥೆ ಗಳ...

*ನೆಲ್ಯಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಪ್ರತಿಷ್ಠಾ ಮಹೋತ್ಸವ...*

Image
ಡಿಸೆಂಬರ್ 30 ರಂದು ನೆಲ್ಯಾಡಿ -ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವ ಕುಂಟು ಕುಡೆಲುರಘು ರಾಮತಂತ್ರಿಗಳ ಪೌರೋಹಿತ್ಯದಲ್ಲಿ ನಡೆಯಿತು. ಬೆಳಿಗ್ಗೆ ನಿತ್ಯಪೂಜೆ ಕಲಶಾಭಿಷೇಕಗಳು ನಡೆದು, ಮದ್ಯಾಹ್ನ ಮಹಾಪೂಜೆ, ಸಂಜೆ ದುರ್ಗಾಪೂಜೆ, ಮಹಾರಂಗ ಪೂಜಾದಿಗಳು ನಡೆದವು. ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ರವಿಚಂದ್ರ ಹೊಸವಕ್ಲು, ಕಾರ್ಯದರ್ಶಿ ರಾಕೇಶ್, ಕೋಶಾಧಿ ಕಾರಿ ಸುಧೀರ್ ಕುಮಾರ್ ಕೆ. ಎಸ್, ಉಪಾಧ್ಯಕ್ಷ ರಘುನಾಥ, ಜೊತೆ ಕಾರ್ಯದರ್ಶಿ ರಮೇಶ್ ಬಾಣಜಾಲ್,ಸದಸ್ಯರಾದ ಚಂದ್ರ ಶೇಖರ್ ಬಾಣಜಾಲ್, ಮೋಹನ್ ಕುಮಾರ್, ರವಿಪ್ರಸಾದ್ ಶೆಟ್ಟಿ, ಉಮೇಶ್ ಪೂಜಾರಿ, ಪ್ರಹ್ಲಾದ್ ಶೆಟ್ಟಿ, ನಾರಾಯಣ ಶೆಟ್ಟಿ, ಶೇಖರ್ ಭಂಡಾರಿ,ವಿನೋದ್ ಕುಮಾರ್, ರಕ್ಷಿತ್, ದಯಾನಂದ ಆದರ್ಶ, ಅಣ್ಣಿ ಎಲ್ತೀಮಾರ್, ಕೃಷ್ಣಪ್ಪ ಕೆ ನಿಡ್ಡೋಡಿ ಗೌರವ ಸಲಹೆಗಾರರಾದ ಟಿ. ಕೆ. ಶಿವದಾಸನ್, ಡಾ. ಸದಾನಂದ ಕುಂದರ್, ಅರ್ಚಕರಾದ ಅಶ್ವಥ್ ನಾರಾಯಣ ಭಟ್ ಮೊದಲಾದವರು ಉಪಸ್ಥಿತರಿದ್ದರು.

ಪುತ್ತೂರಿನಲ್ಲಿ ಮಧ್ಯರಾತ್ರಿ ಮನೆಗೆ ನುಗ್ಗಿ ಹಿರಿಯ ದಂಪತಿಗೆ ಬೆದರಿಕೆ: ಇಬ್ಬರು ಆರೋಪಿಗಳು ಅರೆಸ್ಟ್

Image
ಪುತ್ತೂರು: ನಿವೃತ್ತ ಪ್ರಾಂಶುಪಾಲರ ಮನೆಯಲ್ಲಿ ಮಧ್ಯರಾತ್ರಿ ನುಗ್ಗಿ ದಂಪತಿಯನ್ನು ಬೆದರಿಸಿದ ಪ್ರಕರಣದಲ್ಲಿ ಪುತ್ತೂರು ನಗರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಕೃತ್ಯಕ್ಕೆ ಬಳಸಿದ ಮೋಟಾರ್ ಸೈಕಲ್ ವಶಪಡಿಸಿಕೊಂಡಿದ್ದಾರೆ. ಪುತ್ತೂರು ಕಸಬಾ ನಿವಾಸಿ ಎ.ವಿ.ನಾರಾಯಣ (84) ಅವರ ದೂರಿನಂತೆ, ಡಿಸೆಂಬರ್ 17ರ ಮಧ್ಯರಾತ್ರಿ ಇಬ್ಬರು ಹೆಲ್ಮೆಟ್ ಧರಿಸಿದ ಅಪರಿಚಿತರು ಮನೆಯ ಹಿಂಬಾಗಿಲಿನಿಂದ ಒಳನುಗ್ಗಿ ಬೆಲೆಬಾಳುವ ಸೊತ್ತುಗಳನ್ನು ದೋಚಲು ಯತ್ನಿಸಿದ್ದರು. ಈ ವೇಳೆ ಆರೋಪಿಗಳು ದಂಪತಿಗೆ ಬೆದರಿಕೆ ಒಡ್ಡಿದ್ದು, ನಡೆದ ತಳ್ಳಾಟದಲ್ಲಿ ನಾರಾಯಣರ ಪತ್ನಿಗೆ ಗಾಯವಾಗಿದೆ. ಪಿರ್ಯಾದಿದಾರರು ಜೋರಾಗಿ ಕಿರುಚಿದ ಪರಿಣಾಮ ಆರೋಪಿಗಳು ಹೆದರಿ ಓಡಿ ಪರಾರಿಯಾಗಿದ್ದರು. ಆದರೆ ಯಾವುದೇ ಸೊತ್ತು ಕಳ್ಳತನವಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ.127/2025, ಕಲಂ 307 ಜೊತೆಗೆ 3(5) ಬಿ ಎನ್ ಎಸ್ 2023ರ ಅನ್ವಯ ಪ್ರಕರಣ ದಾಖಲಾಗಿತ್ತು. ತನಿಖೆ ಹಮ್ಮಿಕೊಂಡಿದ್ದ ಪುತ್ತೂರು ನಗರ ಪೊಲೀಸರು ಪುತ್ತೂರು ಮುಡೂರು ಮೂಲದ, ಪ್ರಸ್ತುತ ಪಂಜದಲ್ಲಿ ಬಾಡಿಗೆ ವಾಸವಾಗಿದ್ದ ಕಾರ್ತಿಕ್ ರಾವ್ (31) ಹಾಗೂ ಅವನ ಪತ್ನಿ ಕೆ.ಎಸ್. ಸ್ವಾತಿ ರಾವ್ (25) ಇವರನ್ನು ಬಂಧಿಸಿದ್ದಾರೆ. ಬಂಧಿತ ಕಾರ್ತಿಕ್ ರಾವ್ ಸಹಾಯಕ ಅರ್ಚಕರಾಗಿ ಕೆಲಸ ಮಾಡುತ್ತಿದ್ದನೆಂದು ತಿಳಿದು ಬಂದಿದೆ. ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್...

ಸಮಾಜ ಸೇವೆಯೇ ಜೀವನದ ಅತ್ಯುತ್ತಮ ಕಾರ್ಯ. ಲಯನ್ಸ್ ಜಿಲ್ಲಾ ಗವರ್ನರ್ ಲl ಉಡುಪಿ ಅರವಿಂದ ಶೆಣೈ. ಬಳ್ಪದಲ್ಲಿ ನೂತನ ಆಟೋರಿಕ್ಷ ನಿಲ್ದಾಣ ಉದ್ಘಾಟನೆ.

Image
ಸುಬ್ರಹ್ಮಣ್ಯ ಡಿಸೆಂಬರ್ 30: ಸಮಾಜದಲ್ಲಿರುವ ಅಶಕ್ತರಿಗೆ, ಬಡಬಗ್ಗರಿಗೆ,ಸೂರಿಲ್ಲದವರಿಗೆ ಸೂರು, ಒಂದು ಹೊತ್ತಿನ ಊಟ ಇಲ್ಲದವರಿಗೆ ಅನ್ನ ನೀಡುವುದು,ಬಟ್ಟೆ ಇಲ್ಲದವರಿಗೆ ಬಟ್ಟೆ ನೀಡುವುದು, ಹಾಗೆಯೇ ಸಾರ್ವಜನಿಕರ ಉಪಯೋಗಕ್ಕಾಗಿ ಮಾಡುವಂತಹ ಬಸ್ಸು ತಂಗುದಾನ, ರಿಕ್ಷಾ ತಂಗುದಾನ, ಶೌಚಾಲಯ ಅಥವಾ ಯಾವುದೇ ಜನೋಪಯೋಗಿ ಕೆಲಸಗಳು ಅದು ನಿಜವಾದ ಸಮಾಜ ಸೇವೆ ಹಾಗೂ ದೇವರ ಸೇವೆಯಾಗಿರುತ್ತದೆ. ಎಂದು ಲಯನ್ಸ್ ಜಿಲ್ಲೆ 315 Dಇದರ ಜಿಲ್ಲಾ ಗವರ್ನರ್ ಉಡುಪಿ.ಅರವಿಂದ ಶೆಣೈ  ನುಡಿದರು.  ಅವರು ಶನಿವಾರ ಪಂಜ ಲಯನ್ಸ್ ಕ್ಲಬ್ ವತಿಯಿಂದ ಬಳ್ಪದಲ್ಲಿ ನೂತನವಾಗಿ ನಿರ್ಮಿಸಲಾದ ದಿ. ಚಿನ್ನಮ್ಮ ಹಾಗೂ ದಿ. ತೆಂಕಪಾಡಿ ಶೇಷಪ್ಪ ಗೌಡ ಇವರ ಸ್ಮರಣಾರ್ಥ ಅವರ ಸುಪುತ್ರ ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷ ನಾಗೇಶ ತೆಂಕಪಾಡಿ , ಕೊಡುಗೆಯಾಗಿ ನೀಡಿದ ಆಟೋರಿಕ್ಷಾ ನಿಲ್ದಾಣವನ್ನ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಹಿರಿಯ ಸಹಕಾರಿ ಧುರೀಣ ಪಂಜಾ ಲಯನ್ಸ್ ನ ಸ್ಥಾಪಕರಾದ ಜಾಕೆ ಮಾಧವ ಗೌಡ, ಪ್ರಾಂತೀಯ ಅಧ್ಯಕ್ಷ ಲಯನ್l ಪ್ರೊಫೆಸರ್.ರಂಗಯ್ಯ ಶೆಟ್ಟಿಗಾರ್,ವಲಯಅಧ್ಯಕ್ಷ ದಿಲೀಪ್ ಬಾಬುಲ್ಬೆಟ್ಟು, ಕಾರ್ಯದರ್ಶಿ ಕರುಣಾಕರ ಎಣ್ಣೆ ಮಜಲ್ ಕೋಶಾಧಿಕಾರಿ ವಾಸುದೇವ ಮೇಲ್ಪಾಡಿ, ನಿಕಟ ಪೂರ್ವ ಅಧ್ಯಕ್ಷ ಶಶಿಧರ ಪಳಂಗಾಯ, ಪೂರ್ವ ಅಧ್ಯಕ್ಷರುಗಳಾದ ತುಕಾರಾಮ ಏನೇ ಕಲ್,ಕುಮಾರಸ್ವಾಮಿ ಕಿನಿಕುಮೇರಿ, ನೇಮಿರಾಜ ಪಲ್ಲೋಡಿ, ಸೀತಾರಾಮ ಎಣ್ಣೆ ಮಜಲ್, ...

ಕುಕ್ಕೆ ತಪಸ್ಯಾ.ಎಸ್. ನಾಯಕ್‌ಗೆ ರಾಷ್ಟ್ರ ಮಟ್ಟದ ಚಿನ್ನ — ಕರ್ನಾಟಕ ತಂಡಕ್ಕೆ ಅಗ್ರಸ್ಥಾನ

Image
ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದಡಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಸುಬ್ರಹ್ಮಣ್ಯೇಶ್ವರ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ತಪಸ್ಯಾ.ಎಸ್.ನಾಯಕ್ ರಾಷ್ಟ್ರ ಮಟ್ಟದ 69ನೇ ನೆಟ್‌ಬಾಲ್ ಪಂದ್ಯಾಟದಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ ದೇಶದ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಚಿನ್ನದ ಪದಕ ಗೆದ್ದಿದ್ದಾರೆ. ಈ ಸಾಧನೆಯಿಂದ ಗ್ರಾಮೀಣ ಪ್ರದೇಶವಾದ ಕುಕ್ಕೆಗೆ ಹೆಮ್ಮೆಯ ಕಿರೀಟ ತಲೆಯೇರುವಂತಾಗಿದೆ. ಕರ್ನಾಟಕ ತಂಡವು ಫೈನಲ್ ಪಂದ್ಯದಲ್ಲಿ ಕೇರಳವನ್ನು 4 ಅಂಕಗಳಿಂದ ಸೋಲಿಸಿ ಚಾಂಪಿಯನ್ ಪಟ್ಟ ಕಾದಿರಿಸಿಕೊಂಡಿತು. ಈ ಗೆಲುವಿನ ತಂಡದಲ್ಲಿ ಕುಕ್ಕೆ ಪ್ರದೇಶದ ವಿದ್ಯಾರ್ಥಿನಿಯಾದ ತಪಸ್ಯಾ ಕೂಡ ಭಾಗಿಯಾಗಿದ್ದು, ಕಾಲೇಜಿನ ಇತಿಹಾಸದಲ್ಲೇ ಮೊದಲ ಬಾರಿಗೆ ರಾಷ್ಟ್ರ ಮಟ್ಟದಿಂದ ಚಿನ್ನದ ಪದಕ ತಂದುಕೊಟ್ಟ ಸಾಧನೆ ಮಾಡಿದ್ದಾರೆ. ತಪಸ್ಯಾ ಅವರು ಸುಬ್ರಹ್ಮಣ್ಯದ ಎಸ್‌ಎಸ್‌ಪಿಯು ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಹಾಗೂ ಆಯ್ಕೆ ಶ್ರೇಣಿ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ ಅವರ ಪುತ್ರಿ. ಇವರಿಗೆ ಕಾಲೇಜಿನ ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್ ತರಬೇತಿ ನೀಡಿದ್ದಾರೆ. ವಿದ್ಯಾರ್ಥಿನಿಯ ಸಾಧನೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್. ಇಂಜಾಡಿ ಹಾಗೂ ಕಾರ್ಯನಿರ್ವಹಣಾಧಿಕಾರಿ ಅರವಿಂದ ಎ. ಸುತಗುಂಡಿ ಅಭಿನಂದಿಸಿದ್ದಾರೆ. ಭವ್ಯ ಮೆರವಣಿಗೆಗೆ ...

ಬಿಳಿನೆಲೆ: ಅಯ್ಯಪ್ಪ ಭಜನೆ ಹಾಗೂ ಕುಣಿತ ಭಜನೋತ್ಸವ ವೈಭವ.

Image
ಸುಬ್ರಹ್ಮಣ್ಯ :ಬಿಳಿನೆಲೆ ಶ್ರೀ ಗೋಪಾಲಕೃಷ್ಣ ದೇವಾಲಯ ವಠಾರದಲ್ಲಿ ಶ್ರೀ ಅಯ್ಯಪ್ಪ ಭಕ್ತ ಸಮಿತಿ ಬಿಳಿನೆಲೆ, ಶ್ರೀ ಗೋಪಾಲಕೃಷ್ಣ ದೇವಾಲಯ, ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಹಾಗೂ ಶ್ರೀಕೃಷ್ಣ ಭಜನಾ ಮಂಡಳಿ ಸಂಯುಕ್ತ ಆಶ್ರಯದಲ್ಲಿ ನಡೆದ ಶ್ರೀ ಅಯ್ಯಪ್ಪ ಭಜನೆ, ಧಾರ್ಮಿಕ ಸಭೆ ಹಾಗೂ ಕುಣಿತ ಭಜನೋತ್ಸವ ಭಕ್ತಿಯ ವಾತಾವರಣದಲ್ಲಿ ವೈಭವದಿಂದ ಜರುಗಿತು. ಕಾರ್ಯಕ್ರಮವನ್ನು ಖ್ಯಾತ ಸಂಗೀತ ಕಲಾವಿದ ಕೆ. ಯಜ್ಞೇಶ್ ಆಚಾರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಅಯ್ಯಪ್ಪ ಸೇವಾ ಸಮಿತಿಯ ಅಧ್ಯಕ್ಷ ಜನಾರ್ಧನ ಸೂಡ್ಲು ಅಧ್ಯಕ್ಷತೆ ವಹಿಸಿದರು. ರಾಜ್ಯ ಭಜನಾ ಪರಿಷತ್ ಕಾರ್ಯದರ್ಶಿ ಸುಬ್ರಹ್ಮಣ್ಯ ಪ್ರಸಾದ್, ವಾಸ್ತುಶಿಲ್ಪಿ ಶ್ರೀಕೃಷ್ಣ ಮಹಾಲಿಂಗ ಪ್ರಸಾದ್, ಬಿಳಿನೆಲೆ ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರಿಶ್ಚಂದ್ರ ಕಳಿಗೆ, ಮಾಜಿ ಅಧ್ಯಕ್ಷ ಗೋಪಾಲಕೃಷ್ಣ ಬಿ., ಕಡಬ ತಾಲೂಕು ಭಜನಾ ಪರಿಷತ್ ಅಧ್ಯಕ್ಷ ಸುಂದರ ಸೂಡ್ಲು ವೇದಿಕೆಯಲ್ಲಿದ್ದರು. ಗೌರವಾರ್ಪಣೆ ಕಾರ್ಯಕ್ರಮದ ಅಂಗವಾಗಿ ಕಲಾವಿದ ಕೆ. ಯಜ್ಞೇಶ್ ಆಚಾರ್ ಹಾಗೂ ಅನೇಕ ವರ್ಷಗಳಿಂದ ಗುರುಸ್ವಾಮಿಗಳಾಗಿ ಸೇವೆ ಸಲ್ಲಿಸುತ್ತಿರುವ ಗುರು ಸ್ವಾಮಿಗಳಿಗೆ ಸನ್ಮಾನ ನೆರವೇರಿಸಲಾಯಿತು. ಅಯ್ಯಪ್ಪ ಸೇವಾ ಸಮಿತಿಯ ಗೌರವಾಧ್ಯಕ್ಷ ಗೋಪಾಲಕೃಷ್ಣ ಬಿ. ಸ್ವಾಗತಿಸಿ, ಶೀನಪ್ಪ ಒಗ್ಗು ವರದಿ ವಾಚಿಸಿದರು. ದೀಕ್ಷಿತ್ ಬೈಲು ಹಾಗೂ ರಾಜೇಶ್ ಬಿಳಿನೆಲೆ ನಿರೂಪಣೆ ನೆರವೇರಿಸಿದರು. ರಾಜೇಶ್ ವಂದಿಸಿದರು. 37 ತಂಡಗಳಿಂದ ಕ...

ಕಡಬದಲ್ಲಿ ಉಚಿತ ಶ್ರವಣ ತಪಾಸಣಾ ಶಿಬಿರ — “ಕಾಲಕಾಲಕ್ಕೆ ಕಿವಿ ಪರೀಕ್ಷೆ ಮಾಡಿಸಿಕೊಳ್ಳಿ” ಎಚ್ಚರಿಕೆ ಡಾ. ಸಿ.ಕೆ. ಶಾಸ್ತ್ರಿಯಿಂದ.

Image
ಕಡಬ , ಡಿ.28:ಶ್ರವಣ ಸಾಮರ್ಥ್ಯವನ್ನು ಕಾಪಾಡಿಕೊಳ್ಳಲು ಸಾರ್ವಜನಿಕರು ಕಾಲಕಾಲಕ್ಕೆ ಕಿವಿ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಕಡಬದ ಹಿರಿಯ ವೈದ್ಯರಾದ ಡಾ. ಸಿ.ಕೆ. ಶಾಸ್ತ್ರಿ ಅವರು ಕರೆ ನೀಡಿದರು. ಕಡಬ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಟೀಮ್ ಈಶ್ವರ್ ಮಲ್ಪೆ ಅವರ ಸಹಯೋಗದೊಂದಿಗೆ ಭಾನುವಾರ ಕಡಬ ಪ್ರೆಸ್ ಕ್ಲಬ್‌ನಲ್ಲಿ ನಡೆದ ಉಚಿತ ಶ್ರವಣ ತಪಾಸಣೆ ಶಿಬಿರ ಮತ್ತು ಶ್ರವಣ ಯಂತ್ರ ಸಹಾಯ ಧನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ದಿನಗಳಲ್ಲಿ ಕಿರಿಯ ವಯಸ್ಸಿನಲ್ಲಿಯೇ ಶ್ರವಣ ದೋಷಗಳು ಕಾಣಿಸಿಕೊಳ್ಳುತ್ತಿದ್ದು, ಇವುಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚುವುದು ಬಹಳ ಮುಖ್ಯ. ಆಧುನಿಕ ವೈದ್ಯಕೀಯ ಪದ್ಧತಿಯಲ್ಲಿ ಶ್ರವಣ ಸಮಸ್ಯೆಗಳಿಗೆ ಪರಿಣಾಮಕಾರಿ ಚಿಕಿತ್ಸೆಗಳು ಲಭ್ಯವಿರುವುದರಿಂದ ಜನರು ಅವುಗಳ ಸದುಪಯೋಗ ಪಡೆಯಬೇಕು ಎಂದು ಅವರು ಒತ್ತಿಹೇಳಿದರು. ಕಾರ್ಯಕ್ರಮದಲ್ಲಿ ಮಾತನಾಡಿದ ಟೀಮ್ ಈಶ್ವರ್ ಮಲ್ಪೆ ಸಂಸ್ಥೆಯ ಸಂಚಾಲಕ ಲವ ಬಂಗೇರ ಅವರು, ಸಂಸ್ಥೆಯ ವತಿಯಿಂದ ನಡೆಯುತ್ತಿರುವ ಇದು 68ನೇ ಶಿಬಿರವಾಗಿದ್ದು, ಇಂತಹ ಶಿಬಿರಗಳಿಂದ ಸಾವಿರಾರು ಜನರಿಗೆ ಪ್ರಯೋಜನವಾಗುತ್ತಿದೆ ಎಂದು ಹೇಳಿದರು. ಶ್ರವಣ ಸಮಸ್ಯೆಗೆ ಸಂಬಂಧಿಸಿದ ಶಿಬಿರಗಳು ವಿರಳವಾಗಿದ್ದು, ಪತ್ರಕರ್ತರ ಸಂಘದ ಸಹಕಾರದಿಂದ ದ.ಕ ಜಿಲ್ಲೆಯಾದ್ಯಂತ ಈ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿ...

*ಜೆಸಿಐ ಉಪ್ಪಿನಂಗಡಿ ಘಟಕದ 48ನೇ ವರ್ಷದ ಘಟಕಾಡಳಿತ ಮಂಡಳಿಯ ಪದಪ್ರದಾನ ಸಮಾರಂಭ*

Image
ಉಪ್ಪಿನಂಗಡಿ : ಜೇಸಿಐ ಉಪ್ಪಿನಂಗಡಿ ಘಟಕದ 48 ನೇ ವರ್ಷದ ಘಟಕಾಡಳಿತ ಮಂಡಳಿಯ ಪದಪ್ರದಾನ ಸಮಾರಂಭ ರೋಟರಿ ಸಮುದಾಯ ಭವನ ಉಪ್ಪಿನಂಗಡಿಯಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಪದ್ಮುಂಜ ಸರಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಶ್ರೀ ಮಹಾಲಿಂಗೇಶ್ವರ ಭಟ್ ಮಧುವನ ಮಾತನಾಡಿ, ಜೆಸಿಐ ಸಂಘಟನೆಯು ಉತ್ತಮ ಯುವಕರ ಸಂಘಟನೆಯಾಗಿದ್ದು, ವ್ಯಕ್ತಿತ್ವ ವಿಕಸನ ಮತ್ತು ಸಮಾಜ ಸೇವೆಗಾಗಿ ಉತ್ತಮ ಹೆಸರನ್ನು ಪಡೆದುಕೊಂಡಿದೆ ಎಂದರು. ವಲಯ 15ರ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ನೂತನ ಘಟಕ ಅಧ್ಯಕ್ಷರಾದ ಅವನೀಶ್ ಪಿ ಮತ್ತು ತಂಡಕ್ಕೆ ಪ್ರಮಾಣ ವಚನ ಬೋಧಿಸಿ, ವರ್ಷದುದ್ದಕ್ಕೂ ಒಳ್ಳೆಯ ಜನೋಪಯೋಗಿ ಕಾರ್ಯಕ್ರಮವನ್ನು ಆಯೋಜಿಸುವಂತೆ ನುಡಿದರು. ವಲಯ 15ರ ಉಪಾಧ್ಯಕ್ಷ ಜಿತೇಶ್ ಪಿರೇರಾ ನೂತನ ತಂಡಕ್ಕೆ ಶುಭಹಾರೈಸಿದರು. ಅಧ್ಯಕ್ಷತೆಯನ್ನು ವಹಿಸಿದ 2025ರ ಘಟಕಾಧ್ಯಕ್ಷ ನಟೇಶ್ ಪೂಜಾರಿ 2025ರ ವಾರ್ಷಿಕ ವರದಿಯನ್ನು ಓದಿದರು. ಜೇಸಿಐ ಉಪ್ಪಿನಂಗಡಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಪ್ರಶಾಂತ್ ಕುಮಾರ್ ರೈ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ನೂತನ ಕಾರ್ಯದರ್ಶಿ ಶ್ರೀ ಗಣೇಶ್ ಪಿ. ಧನ್ಯವಾದ ಸಮರ್ಪಿಸಿದರು. ಸಭೆಯಲ್ಲಿ ಉಪ್ಪಿನಂಗಡಿ ಜೆಸಿಐ ಪೂರ್ವಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.

ಕೆ.ಎಸ್.ಎಸ್. ಕಾಲೇಜಿನಲ್ಲಿ ಹಿರಿಯ ವಿದ್ಯಾರ್ಥಿಗಳ ಸ್ನೇಹ ಸಂಗಮ.

Image
ವಿದ್ಯಾಸಂಸ್ಥೆಯ ಪ್ರಗತಿಯಲ್ಲಿ ಹಿರಿಯ ವಿದ್ಯಾರ್ಥಿಗಳ ಪಾತ್ರ ಅನನ್ಯ: ಪ್ರೊ. ದಿನೇಶ್ ಕಾಮತ್ ಸುಬ್ರಹ್ಮಣ್ಯ: ವಿದ್ಯಾಸಂಸ್ಥೆಯ ಪ್ರಗತಿಯಲ್ಲಿ ಹಳೆ ವಿದ್ಯಾರ್ಥಿಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಭವಿಷ್ಯ ರೂಪಿಸಿಕೊಂಡ ವಿದ್ಯಾರ್ಥಿಗಳು ಸಂಸ್ಥೆಯ ಆಸ್ಥಿಯಾಗುತ್ತಾರೆ. 1983ರಿಂದ 2024ರವರೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದಲ್ಲಿ ನಡೆಯುತ್ತಿರುವ ವಿದ್ಯಾಸಂಸ್ಥೆ ಅನೇಕ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದೆ. ವಿಶೇಷವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಈ ಕಾಲೇಜು ಆಧಾರಸ್ತಂಭವಾಗಿದೆ ಎಂದು ಕೆ.ಎಸ್.ಎಸ್. ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ. ದಿನೇಶ್ ಕಾಮತ್ ಹೇಳಿದರು. ಭಾನುವಾರ ಕೆ.ಎಸ್.ಎಸ್. ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ ಸಂಘದ ಆಶ್ರಯದಲ್ಲಿ ನಡೆದ ‘ಕುಸುಮ ಸ್ನೇಹ ಸಂಗಮ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. “ತಾವು ಕಲಿತ ವಿದ್ಯಾಸಂಸ್ಥೆ ನಮಗೆ ಮಾತೃಸಮಾನ. ಆದ್ದರಿಂದ ಪ್ರತಿಯೊಬ್ಬ ಹಳೆ ವಿದ್ಯಾರ್ಥಿಯು ಸಂಸ್ಥೆಯ ಬಗ್ಗೆ ಅಪಾರ ಪ್ರೀತಿ ಮತ್ತು ನಿಷ್ಠೆ ಹೊಂದಿರಬೇಕು” ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಎ. ಸುತಗಂಡಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ ಮುಖ್ಯ ಅತಿಥಿಗಳಾಗಿದ್ದರು. ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ್...

*ನೆಲ್ಯಾಡಿ ಗ್ರಾಮದಲ್ಲಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡಕ್ಕೆ ಶಿಲಾನ್ಯಾಸ...*

Image
ಕಡಬ ತಾಲೂಕು ನೆಲ್ಯಾಡಿ ಗ್ರಾಮದ ಕುರುಬರ ಕೇರಿ ಅಂಗನವಾಡಿ ಕೇಂದ್ರದ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮವನ್ನು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕು. ಭಾಗೀರಥಿ ಮುರುಳ್ಯ ನೆರವೇರಿಸಿದರು ಈ ಸಂದರ್ಭದಲ್ಲಿ ಬಾಲಕೃಷ್ಣ ಬಾಣಜಾಲು,ಪಂಚಾಯತ್ ಅಧ್ಯಕ್ಷ ಸಲಾಂ ಬಿಲಾಲ್, ಗ್ರಾಮ ಪಂಚಾಯತ್ ಸದಸ್ಯರಾದ ರವಿಪ್ರಸಾದ್ ಶೆಟ್ಟಿ,ಪ್ರಕಾಶ್ ಪೂಜಾರಿ, ಆನಂದ ಪಿಲವೂರು,ಗಿರೀಶ್ ಶೆಟ್ಟಿ ಬೀದಿ ಮನೆ, ಅಣ್ಣಿ ಎಲ್ತೀಮಾರ್,ಅರ್ಚಕರು ಶ್ರೀಧರ ನೂಜಿನ್ನಾ ಯ, ಬಾಲಕೃಷ್ಣಗೌಡ ಹಾರ್ಪಲ, ಕಾಂಟ್ರಾಕ್ಟರ್ ವಿನೋದ್ ಅಂಗನವಾಡಿ ಕಾರ್ಯಕರ್ತೆ ಪುಷ್ಪಾವತಿ ಸೂಪರ್ ವೈಸರ್  ಸಾಹಾಯಕಿ ಯಮುನಾ    ರಾಧಾ ಕೃಷ್ಣ ಗೌಡ ಹುನ್ಸೆಬೆಟ್ಟು ಸುರೇಶ್ ಪಡಿಪಂಡ .ಶೀನಪ್ಪ ಗೌಡ ಬರಮೇಲು ಸೀತಾರಾಮ ಗೌಡ ಕಾನಮನೆ  ರಮೇಶ್ ಗೌಡ ನಾಲ್ಗುತ್ತು ಮತ್ತಿತರರು ಉಪಸ್ಥಿತರಿದ್ದರು.

ಕುಕ್ಕೆ: ಕಿರುಷಷ್ಟಿ ಮಹೋತ್ಸವದಲ್ಲಿ ಜನಮನ ಗೆದ್ದ ವಾಲ್ಮೀಕಿ ವಸತಿ ಶಾಲಾ ವಿದ್ಯಾರ್ಥಿಗಳು.

Image
ಸುಬ್ರಹ್ಮಣ್ಯ ಡಿಸೆಂಬರ್ 24 : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಿರುಷಷ್ಟಿ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ರಾಜ್ಯ ಪರಿಶಿಷ್ಟ ಕಲ್ಯಾಣ ಇಲಾಖೆ ಮಂಗಳೂರು ಇದರ ವ್ಯಾಪ್ತಿಗೆ ಒಳಪಡುವ ಸುಬ್ರಹ್ಮಣ್ಯದ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯ ವಿದ್ಯಾರ್ಥಿಗಳು ಅತ್ಯುತ್ತಮವಾದ ಕಾರ್ಯಕ್ರಮಗಳನ್ನ ನೀಡುವುದರೊಂದಿಗೆ ಜನರ ಮೆಚ್ಚುಗೆ ಗಳಿಸಿರುವರು .  ಕುಕ್ಕೆ ಸುಬ್ರಹ್ಮಣ್ಯದ ರಥ ಬೀದಿ ಪಕ್ಕದ ಸಭಾಂಗಣದಲ್ಲಿ ಮಂಗಳವಾರ ಮಧ್ಯಾಹ್ನ 2 ಗಂಟೆಯಿಂದ ಸಂಜೆ 4:00 ವರೆಗೆ ನಿರಂತರವಾಗಿ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿರುವರು. ಈ ಸಂದರ್ಭದಲ್ಲಿ ಸುಳ್ಯ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ಕೃಷ್ಣ ಬಿ, ನಿಲಯ ಮೇಲ್ವಿಚಾರಕ ಬಸವರಾಜ್, ವಸತಿ ಶಾಲೆಯ ಮುಖ್ಯ ಶಿಕ್ಷಕಿ ಮಲ್ಲಿಕಾ ಕೆ ,ಶಿಕ್ಷಕರುಗಳಾದ ಜೀವಿತ ಕೆ,ಕವಿತಾ ಎನ್ಎ, ಭವ್ಯ ಎಸ್, ಗೀತ ಸುಧಾ ಎಚ್, ಹರ್ಷಿತಾ ಬಿ ಮತ್ತು ವಸತಿ ನಿಲಯದ ಸಿಬ್ಬಂದಿ ವರ್ಗದವರಾದ ಯಶೋಧರ ಎಂ, ಕುಸುಮಾವತಿ,ರತ್ನಾವತಿ, ಲಲಿತ, ಮೋಹನಚಂದ್ರ,ಹರಿಣಾಕ್ಷಿ, ವಿದ್ಯಾರ್ಥಿಗಳ ಪೋಷಕರು ಹಾಗೂ ಸಾರ್ವಜನಿಕರು ಹಾಜರಿದ್ದರು.

ಕಾಡುಹಂದಿ ದಾಳಿ – ಮಹಿಳೆಗೆ ತೀವ್ರ ಗಾಯ!

Image
ದಕ್ಷಿಣ ಕನ್ನಡ, ಕಡಬ ತಾಲೂಕು: ಕೌಕ್ರಾಡಿ ಗ್ರಾಮದಲ್ಲಿ ಇಂದು (21-12-2025) ಬೆಳಗ್ಗೆ ಸಂಭವಿಸಿದ ದುರ್ಘಟನೆಯಲ್ಲಿ ಕೌಕ್ರಾಡಿ ಗ್ರಾಮದ ಪೊಟ್ಟುಕೆರೆ ನಿವಾಸಿ ಉಮೇಶ್ ಗೌಡರ ಪತ್ನಿ ಲೀಲಾವತಿ ಅವರು ಕಾಡುಹಂದಿ ದಾಳಿಗೆ ಗುರಿಯಾಗಿ ಗಾಯಗೊಂಡಿದ್ದಾರೆ. ಬೆಳಿಗ್ಗೆ ಸುಮಾರು 10 ಗಂಟೆಯ ವೇಳೆಗೆ ತಮ್ಮ ತೋಟದಲ್ಲಿ ಹುಲ್ಲು ಕತ್ತರಿಸುತ್ತಿದ್ದಾಗ ಅರಣ್ಯದಿಂದ ಬಂದ ಕಾಡುಹಂದಿ ದಾಳಿ ನಡೆಸಿದ್ದು, ಎರಡು ಕೈಗಳಿಗೆ ತೀವ್ರ ಗಾಯಗಳಾಗಿವೆ ಎನ್ನಲಾಗಿದೆ. ಗಾಯಗೊಂಡ ಲೀಲಾವತಿಯನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದ್ದು, ಚಿಕಿತ್ಸೆ ನಡೆಯುತ್ತಿದೆ. ಈ ಕುರಿತು ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದು, ಗ್ರಾಮದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಮುಂದಿನ ಕ್ರಮ ಕುರಿತು ಅರಣ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತದಿಂದ ಮಾಹಿತಿ ನಿರೀಕ್ಷಿಸಲಾಗಿದೆ.

ಕುಕ್ಕೆ ಕಿರುಷಷ್ಟಿ ಆಮಂತ್ರಣದಲ್ಲಿ ಅನ್ಯಧರ್ಮಿಯರ ಹೆಸರು: ಕ್ಷೇತ್ರ ಸಂರಕ್ಷಣಾ ವೇದಿಕೆಯಿಂದ ಆಕ್ಷೇಪ – ಹೆಸರು ತೆಗೆಯದಿದ್ದರೆ ಪ್ರತಿಭಟನೆ ಎಚ್ಚರಿಕೆ.

Image
ಕುಕ್ಕೆ ಸುಬ್ರಹ್ಮಣ್ಯ :ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಿರುಷಷ್ಟಿ ಮಹೋತ್ಸವದ ಆಮಂತ್ರಣ ಪತ್ರಿಕೆಯಲ್ಲಿ ಅನ್ಯಧರ್ಮೀಯರ ಹೆಸರು ಸೇರಿಸಿರುವುದು ಆಕ್ಷೇಪಾರ್ಹ ಎಂದು ಆರೋಪಿಸಿ ಕ್ಷೇತ್ರ ಸಂರಕ್ಷಣಾ ವೇದಿಕೆ ಮನವಿ ಸಲ್ಲಿಸಿದೆ. ಹೆಸರು ತೆಗೆಯದಿದ್ದಲ್ಲಿ ಡಿಸೆಂಬರ್ 22 ರಂದು ದೇವಸ್ಥಾನ ಆಡಳಿತ ಕಚೇರಿಯ ಎದುರು ಪ್ರತಿಭಟನೆ ನಡೆಸುವುದಾಗಿ ಸಂಘಟನೆ ಮುನ್ನೆಚ್ಚರಿಕೆ ನೀಡಿದೆ. ಈ ಬಗ್ಗೆ ಇಂದು ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಚಿದಾನಂದ ಕಂದಡ್ಕ, ರಾಜೇಶ್ ಎನ್.ಎಸ್, ದಿನೇಶ್ ಸಂಪ್ಯಾಡಿ, ಅಚ್ಚುತ ಕುಕ್ಕಪ್ಪನ ಮನೆ, ಶ್ರೀಕುಮಾರ್ ಬಿಲದ್ವಾರ, ರಾಮಚಂದ್ರ ದೇವರಗದ್ದೆ, ದೀಲಿಪ್ ಉಪ್ಪಳಿಕೆ ಸೇರಿದಂತೆ ವೇದಿಕೆಯ ಸದಸ್ಯರು ಉಪಸ್ಥಿತರಿದ್ದರು. ವೇದಿಕೆ ವತಿಯಿಂದ “ಧಾರ್ಮಿಕ ಆಚರಣೆಗಳಲ್ಲಿ ಅನ್ಯಧರ್ಮೀಯರ ಹೆಸರಿನ ಬಳಕೆ ಅಸಂಗತ” ಎಂಬ ಕಾರಣವನ್ನು ಉಲ್ಲೇಖಿಸಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಬೇಡಿಕೆ ಇಡಲಾಗಿದೆ. ದೇವಸ್ಥಾನ ಆಡಳಿತದಿಂದ ಸಂಬಂಧಿಸಿದ ಪ್ರತಿಕ್ರಿಯೆ ಹೊರಬರಬೇಕಿದೆ.

ಐನೆಕಿದು ಗ್ರಾಮದಲ್ಲಿ ಆನೆ ದಾಳಿ – ಅಪಾರ ಕೃಷಿ ಹಾನಿ, ರೈತರು ಆತಂಕದಲ್ಲಿ!

Image
ಸುಬ್ರಹ್ಮಣ್ಯ : ಐನೆಕಿದು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಕೃಷಿಗೆ ಭಾರೀ ಹಾನಿಯಾದ ಘಟನೆ ಬೆಳಕಿಗೆ ಬಂದಿದೆ. ಡಿಸೆಂಬರ್ 19ರಂದು ಸುರೇಶ್ ಕೂಜುಗೋಡು ಅವರ ತೋಟಕ್ಕೆ ಕಾಡಾನೆ ನುಗ್ಗಿ ಅಡಿಕೆ ಮತ್ತು ತೆಂಗಿನ ಗಿಡಗಳನ್ನು ಧ್ವಂಸ ಮಾಡಿರುವುದು ತಿಳಿದು ಬಂದಿದೆ. ಇದೇ ರೀತಿಯಾಗಿ ಡಿಸೆಂಬರ್ 18ರಂದು ಜಯಪ್ರಕಾಶ್ ಕೂಜುಗೋಡು ಅವರ ತೋಟದಲ್ಲಿಯೂ ಆನೆ ದಾಳಿ ನಡೆದಿದ್ದು, ಅಡಿಕೆ ಮತ್ತು ತೆಂಗಿನ ಗಿಡಗಳು ಹಾನಿಗೊಳಗಾಗಿ ಸಾವಿರಾರು ರೂಪಾಯಿ ನಷ್ಟ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಹಿಂದೆ ಹಳದಿ ರೋಗ, ಬೆಂಕಿ ರೋಗ, ಕೊಳೆ ರೋಗದಂತಹ ಕೀಟ–ರೋಗಗಳಿಂದಲೇ ಬೆಳೆ ಹಾನಿಗೊಳಗಾಗಿದ್ದ ರೈತರು, ಇದೀಗ ಕಾಡುಪ್ರಾಣಿ ದಾಳಿಯಿಂದಲೂ ತತ್ತರಿಸಿ ಹೋಗಿದ್ದಾರೆ. ನಿರಂತರ ನಷ್ಟದಿಂದ ಜೀವನ ನಿರ್ವಹಣೆಯ ಬಗ್ಗೆ ಆತಂಕ ವ್ಯಕ್ತವಾಗಿದೆ. ಗ್ರಾಮಸ್ಥರು ಮತ್ತು ರೈತರು ಸಂಬಂಧಿತ ಅರಣ್ಯ ಇಲಾಖೆ ತಕ್ಷಣ ಕ್ರಮ ಕೈಗೊಂಡು ಆನೆ ಚಲಾವಣೆ ಮತ್ತು ರೈತರಿಗೆ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ತಾಲೂಕು ಮಟ್ಟದಲ್ಲಿ ದೂರು ಸಲ್ಲಿಸುವ ಮತ್ತು ಪರಿಹಾರ ಪ್ರಕ್ರಿಯೆ ಆರಂಭಿಸುವ ಭರವಸೆ ದೊರೆತಿದೆ ಎನ್ನಲಾಗಿದೆ.

ಸುಬ್ರಹ್ಮಣ್ಯ: ಹೋಟೆಲ್ ಮಾಜಿ ನೌಕರ ಲ್ಯಾಪ್‌ಟಾಪ್ ಕಳವು ಪ್ರಕರಣ — ಪೋಲೀಸ್ ಠಾಣೆಯಲ್ಲಿ FIR ದಾಖಲು.

Image
ಸುಬ್ರಹ್ಮಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಮಾಜಿ ನೌಕರನೊಬ್ಬ HP ಕಂಪನಿಯ ಲ್ಯಾಪ್‌ಟಾಪ್ ಕಳವು ಮಾಡಿರುವ ಪ್ರಕರಣ ದಾಖಲಾಗಿದೆ. ಪಿರ್ಯಾಧಿದಾರರಾದ ಮಹಾವೀರ್ ಸಿಂಗ್ (28), ಔರಮ್ ಹೋಟೆಲ್ ಮ್ಯಾನೇಜರ್ ಇವರ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ. ದಿನಾಂಕ 23.10.2025 ರಂದು ಗುಜರಾತ್ ಮೂಲದ ಅವಿನಾಶ್ ಪಾಂಡೆ ಎನ್ನುವವನು ಔರಮ್ ಹೋಟೆಲ್‌ನಲ್ಲಿ ಕೆಲಸಕ್ಕೆ ಸೇರಿದ್ದಾನೆ. ನಂತರ 07.11.2025 ರಂದು ಯಾರಿಗೂ ಮಾಹಿತಿ ನೀಡದೇ ಹೋಟೆಲ್ ಬಿಟ್ಟು ತೆರಳಿದ್ದಾನೆ. ಅದಾದ ನಂತರ ಹೋಟೆಲ್‌ನಲ್ಲಿ ಇದ್ದ HP ಲ್ಯಾಪ್‌ಟಾಪ್ (Model: HP 245G9) ಹಾಗೂ Redmi ಮೊಬೈಲ್ ಫೋನ್ ಕಾಣೆಯಾಗಿದ್ದು, ಹುಡುಕಾಟಕ್ಕೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸಂಶಯದ ಮೇಲೆ ಆರೋಪಿಯನ್ನು ಸಂಪರ್ಕಿಸಿದಾಗ ಆತನು ಲ್ಯಾಪ್‌ಟಾಪ್ ಮತ್ತು ಮೊಬೈಲ್ ತೆಗೆದುಕೊಂಡು ಹೋಗಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ 16.11.2025 ರಂದು ಕೂರಿಯರ್ ಮುಖಾಂತರ ಮೊಬೈಲ್ ಫೋನ್ ಕಳುಹಿಸಿದರೂ, ಲ್ಯಾಪ್‌ಟಾಪ್ ಹಿಂತಿರುಗಿಸಲಾಗಿಲ್ಲ. ಬಳಿಕ ಕರೆ ಮಾಡಿದರೂ ಫೋನ್ ಸ್ವೀಕರಿಸದಿದ್ದಾನೆ ಎಂದು ಪಿರ್ಯಾಧಿದಾರರು ದೂರಿನಲ್ಲಿ ತಿಳಿಸಿದ್ದಾರೆ. ಕರ್ನಾಟಕ ಪೊಲೀಸ್ ಇಲಾಖೆಯಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆ ಅ.ಕ್ರ: 64/2025 ರಂತೆ BNS-2023 ಕಲಂ 305 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಪೋಲೀಸ್ ತನಿಖೆ ಮುಂದುವರೆಸಿದೆ. ಲ್ಯಾಪ್‌ಟಾಪ್ ಮೌಲ್ಯ ಸುಮಾರು ₹30,...

*ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ.)ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಇದರ ಸುಳ್ಯವಲಯದ ವತಿಯಿಂದ ಸಾಮಾನ್ಯ ಸಭೆ.*

Image
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಶನ್ (ರಿ.)ದಕ್ಷಿಣ ಹಾಗೂ ಉಡುಪಿ ಜಿಲ್ಲೆ ಇದರ ಸುಳ್ಯ ವಲಯದ ವತಿಯಿಂದ ಡಿ 19 ರಂದು ಕುಕ್ಕೆ ಸುಬ್ರಹ್ಮಣ್ಯದ ಪಂಚಾಯತ್ ಸಭಾಭವನದಲ್ಲಿ ಸಾಮಾನ್ಯ ಸಭೆ ನಡೆಯಿತು.ಈ ಸಂಧರ್ಭದಲ್ಲಿ ಸುಳ್ಯವಲಯದ ಅಧ್ಯಕ್ಷರಾಗಿರುವ ಶಶಿ ಗೌಡ ಸುಳ್ಯ ಫೋಟೋಗ್ರಾಫಿ ಎಂಬುದು ಕೇವಲ ಉದ್ಯಮ ಮಾತ್ರವಲ್ಲ ಪ್ರತಿಯೊಂದು ಕ್ಷಣಗಳನ್ನು ಸೆರೆ ಹಿಡಿಯುವುದಲ್ಲದೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತಿರುವುದು ಬಹಳ ಹೆಮ್ಮೆಯ ವಿಷಯವೆಂಬುದನ್ನು ಸಭೆಯಲ್ಲಿ ತಿಳಿಸಿದರು ಹಾಗೂ ಯಾವುದೇ ಸಂಘವನ್ನು ಎಲ್ಲ ಸದಸ್ಯರು ಒಗ್ಗಟಿನಲ್ಲಿ ಕೆಲಸ ಮಾಡುವುದರಿಂದ ಮುನ್ನಲೆಗೆ ತರುವಲ್ಲಿ ಯಶಸನ್ನು ಕಾಣಬಹುದು ಎಂದರು.ಈ ಸಂಧರ್ಭದಲ್ಲಿ ವೇದಿಕೆಯಲ್ಲಿ ಸಂಚಾಲಕರಾದ ಗೋಪಾಲ್ ಸ್ಸುಳ್ಯ ಅಧ್ಯಕ್ಷ ಶಶಿ ಗೌಡ ಸುಳ್ಯ ಉಪಾಧ್ಯಕ್ಷ ಪ್ರಶಾಂತ್ ಶೇಣಿ ಕಾರ್ಯದರ್ಶಿ ಸತೀಶ್ ಗೋಪಾಲ್ ಸುಳ್ಯ ಕೋಶಾಧಿಕಾರಿ ವಸಂತಿ  ಜಿಲ್ಲಾ ಮಾಧ್ಯಮ ಪ್ರತಿನಿಧಿ ಲೋಕೇಶ್ ಸುಬ್ರಹ್ಮಣ್ಯ ಹಾಗೂ ಕರುಣಾಕರ ಎಣ್ಣೆಮಜಲು,ದಿನೇಶ್ ಯೆನೇಕಲ್,ಹರೀಶ್ ರಾವ್ ಸುಳ್ಯ, ವೆಂಕಟೇಶ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸುಳ್ಯ ವಲಯದ ಫೋಟೋಗ್ರಾಫರ್ಸ್ ಸಾಮಾನ್ಯ ಸಭೆ ನಡೆಯಿತು.

*ವಿಶ್ವ ಪ್ರಸನ್ನ ತೀರ್ಥರ ಸಂತ ಬದುಕಿನ ಶಬ್ದಶಿಲ್ಪ*. *ನಾರಾಯಣ ಭಟ್ ಟಿ ರಾಮಕುಂಜ ವಿರಚಿತ ಕೃತಿ ಬಿಡುಗಡೆ*

Image
ಉಡುಪಿ ಪೇಜಾವರ ಮಠಾಧೀಶ, ಶ್ರೀ ರಾಮಕುಂಜೇಶ್ವರ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಶ್ರೀ ವಿಶ್ವಪ್ರಸನ್ನ ತೀರ್ಥರಿಗೆ 60 ವರ್ಷಗಳು ತುಂಬಿರುವ ನೆನಪಿಗಾಗಿ, ಬದುಕಿನ ಸಮಗ್ರ ಚಿತ್ರಣ ಹೊಂದಿರುವ ಮೊಟ್ಟಮೊದಲ ಬೃಹತ್ ಕೃತಿ ಸಂತ ಬದುಕಿನ ಶಬ್ದ ಶಿಲ್ಪ ಬೆಂಗಳೂರು ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ವೃಂದಾವನಸ್ಥ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀಪಾದರ ಆರನೆಯ ಆರಾಧನೆಯ ಸಂದರ್ಭದಲ್ಲಿ ತಾರೀಕು 22ನೆಯ ಸೋಮವಾರ ಬಿಡುಗಡೆಗೊಳ್ಳಲಿದೆ.  ಪೂಜ್ಯರ ಸರ್ವತೋಮುಖ ಸಾಧನೆಗಳ ಲೇಖನಗಳು ಹಾಗೂ ಬಣ್ಣದ ಸುಂದರ ಭಾವಚಿತ್ರಗಳನ್ನು ಹೊಂದಿರುವ ಈ ಕೃತಿಯನ್ನು ಪ್ರಸಿದ್ಧ ಲೇಖಕರಾದ ಟಿ ನಾರಾಯಣ ಭಟ್ ರಾಮಕುಂಜ ಬರೆದಿರುವರು. ಹಲವಾರು ಮಕ್ಕಳ ಕೃತಿಗಳು, ದಕ್ಷಿಣ ಭಾರತದ ನೂರಾರು ಸಾಧಕರ ಕಿರು ವ್ಯಕ್ತಿ ಚಿತ್ರಣ, ವಿಶ್ವೇಶ ತೀರ್ಥರ ಕುರಿತ ಏಳು ಕೃತಿಗಳು, ಪ್ರಧಾನಿ ನರೇಂದ್ರ ಮೋದಿಯವರ ಸಾಧನೆಗಳ ಮೋದಿಗೆ ಮೋದಿಯೇ ಸಾಟಿ ಮುಂತಾದ ಸುಮಾರು 50ರಷ್ಟು ಜನಪ್ರಿಯ ಕೃತಿಗಳನ್ನು ಬರೆದು ಸಾಹಿತ್ಯ ಲೋಕದಲ್ಲಿ ಹಿರಿಯ ಕಿರಿಯ ರಾದಿಯಾಗಿ ಎಲ್ಲರ ಮೆಚ್ಚುಗೆ ಪಡೆದ ಶ್ರೀಯುತರ ಸಾಹಿತ್ಯ ಸರಸ್ವತಿಯ ಉಪಾಸನೆ ಇಲ್ಲಿ ಅನಾವರಣಗೊಂಡಿದೆ.   ವಿದ್ಯಾಪೀಠದ ನೂರಾರು ವಿದ್ವಾಂಸರ ಸಮ್ಮುಖದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಪೂಜ್ಯ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹಾಗೂ ಶ್ರೀ ಮಾಧವ ತೀರ್ಥ ಸಂಸ್ಥಾನ ಶ್ರೀ ತಂಬಿಹಳ್ಳಿ ಮಠಾಧೀಶರಾದ ಶ್ರೀ ವಿದ್ಯಾವಲ್ಲಭ ...

ಕುಲ್ಕುಂದ: ಅಶಕ್ತ ಮಹಿಳೆಗೆ ವೀಲ್ ಚೇರ್ ಹಸ್ತಾಂತರ.

Image
ಸುಬ್ರಹ್ಮಣ್ಯ ಡಿಸೆಂಬರ್ 19 : ಸುಬ್ರಮಣ್ಯ ಸಮೀಪದ ಕುಲ್ಕುಂದ ಶ್ರೀ ಬಸವೇಶ್ವರ ದೇವಾಲಯದ ಚಾರಿಟೇಬಲ್ ಟ್ರಸ್ಟ್ ವತಿಯಿಂದ ತನ್ನ ಎರಡು ಕಾಲುಗಳ ಬಲವನ್ನ ಕಳೆದುಕೊಂಡು ನಡೆದಾಡಲು ಕಷ್ಟ ಪಡುತ್ತಿದ್ದ ಕುಲಕುಂದ ಕಾಲೋನಿಯ ಗಿರಿಜಾ ಎಂಬ ಮಹಿಳೆಗೆ ಕುಲುಕುಂದ ಕಾಲೋನಿ ಸಮೀಪ ಅವರ ನಿವಾಸಕ್ಕೆ ಹೋಗಿ ವೀಲ್ ಚಯರ್ ಅನ್ನು ಗುರುವಾರ ಸುಬ್ರಮಣ್ಯ ರೋಟರಿ ಕ್ಲಬ್ ಮೂಲಕ ಹಸ್ತಾಂತರಿಸಲಾಯಿತು.  ಈ ಸಂದರ್ಭದಲ್ಲಿ ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಗಿರಿಧರ ಸ್ಕಂದ, ಕಾರ್ಯದರ್ಶಿ ವಿಜಯಕುಮಾರ ನಡುತೋಟ, ಕೋಶಾಧಿಕಾರಿ ರವೀಂದ್ರ ಕುಮಾರ ರುದ್ರಪಾದ,ನಿರ್ದೇಶಕ ಶಿವರಾಮ್ ಗೌಡ ಪಳ್ಳಿ, ಸುಬ್ರಹ್ಮಣ್ಯ ರೋಟರಿ ಕ್ಲಬ್ ಅಧ್ಯಕ್ಷ ಜಯಪ್ರಕಾಶ್, ನಿಕಟ ಪೂರ್ವ ಅಧ್ಯಕ್ಷ ಚಂದ್ರಶೇಖರ ನಾಯರ್, ಪೂರ್ವ ಅಧ್ಯಕ್ಷ ರುಗಳಾದ ಗೋಪಾಲ ಎಣ್ಣೆಮಜಲ್, ಸೀತಾರಾಮ ಎಣ್ಣೆ ಮಜಲ್ ವಿಜಯಕುಮಾರ ಅಮೈ ಮುಂತಾದವರು ಉಪಸ್ಥಿತರಿದ್ದರು.

ಕೊಲ್ಲಮೊಗ್ರು: ಮಕ್ಕಳ ಅಪಹರಣ ವದಂತಿ – ತನಿಖೆಯಿಂದ ಸತ್ಯಾಂಶ ಬಹಿರಂಗ, ಸಾರ್ವಜನಿಕರಲ್ಲಿ ನೆಮ್ಮದಿ.

Image
ಕೊಲ್ಲಮೊಗ್ರು ಗ್ರಾಮದಲ್ಲಿ ಕಳೆದ ಕೆಲವು ದಿನಗಳಿಂದ ಮಕ್ಕಳ ಕಳ್ಳತನ ಹಾಗೂ ಅಪಹರಣಕ್ಕೆ ಸಂಬಂಧಿಸಿದಂತೆ ಅಪರಿಚಿತರು ಸಂಚು ರೂಪಿಸಿದ್ದಾರೆ ಎಂಬ ಸುದ್ದಿ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಹರಡಿದ್ದು, ಇದರಿಂದ ಪೋಷಕರು ಹಾಗೂ ಶಾಲಾ ಮಕ್ಕಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಮಾನ್ಯ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ದಕ್ಷ ಠಾಣಾಧಿಕಾರಿ ಕಾರ್ತಿಕ್ ಎಸ್ ಅವರ ನೇತೃತ್ವದ ತಂಡ ತಕ್ಷಣವೇ ತನಿಖೆ ಕೈಗೊಂಡು, ಸಂಶಯಾಸ್ಪದವಾಗಿ ಕಾಣಿಸಿಕೊಂಡ ಸ್ಕೂಟರ್‌ನಲ್ಲಿದ್ದ ಇಬ್ಬರು ಯುವಕರನ್ನು ಪತ್ತೆಹಚ್ಚಿ ವಿಚಾರಣೆ ನಡೆಸಿದೆ. ತನಿಖೆಯ ವೇಳೆ ಅವರುಗಳು ಪುತ್ತೂರು ಮೂಲದ ಪಾನಸೋನಿಕ್ ಕಂಪನಿಯ ಏಜೆಂಟ್‌ಗಳಾಗಿದ್ದು, ವಿವಿಧ ಗ್ರಾಮಗಳಲ್ಲಿ ಹೊಸ ಟಿವಿ ಅಳವಡಿಕೆ ಮತ್ತು ರಿಪೇರಿ ಕಾರ್ಯಕ್ಕಾಗಿ ಸಂಚರಿಸುತ್ತಿದ್ದುದಾಗಿ ತಿಳಿದುಬಂದಿದೆ. ಪುತ್ತೂರು ಸಮೀಪದ ಕಲ್ಮಕಾರು ಗ್ರಾಮದ ಮನೆಯೊಂದರಲ್ಲಿ ಟಿವಿ ರಿಪೇರಿ ಕಾರ್ಯ ಮುಗಿಸಿ ಹಿಂತಿರುಗುವ ವೇಳೆ, ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಹಾಗೂ ದಾರಿ ತಿಳಿಯದ ಕಾರಣ ಕೊಲ್ಲಮೊಗ್ರು ಗ್ರಾಮದಲ್ಲಿ ಶಾಲಾ ಮಕ್ಕಳನ್ನು ರಸ್ತೆ ಬಗ್ಗೆ ವಿಚಾರಿಸಿರುವುದು ಸ್ಪಷ್ಟವಾಗಿದೆ. ಮಕ್ಕಳಲ್ಲಿ ವಿಳಾಸ ಕೇಳಿದ ಸಂದರ್ಭ, ಅಪರಿಚಿತರನ್ನು ಕಂಡು ಭಯಭೀತರಾದ ಮಕ್ಕಳು ಈ ವಿಷಯ ಗ್ರಾಮದಲ್ಲಿ ಹರಡಿದ ಪರಿಣಾಮ ಅಪಹರಣದ ವದಂತಿಗೆ ಕಾರಣವಾಗಿತ್ತು. ತನಿಖೆಯಲ್ಲಿ ಯಾವುದೇ ರೀತಿಯ ಅಸ...

ನೆಲ್ಯಾಡಿ: ಖಾಸಗಿ ಅಂಗಡಿಗೆ ನುಗ್ಗಿದ ಈಚರ್ ಲಾರಿ – ಅಪಘಾತ, ಸಂಚಾರ ಅಸ್ತವ್ಯಸ್ತ!

Image
ನೆಲ್ಯಾಡಿ ಮಧ್ಯಪೇಟೆಯಲ್ಲಿ ಡಿಸೆಂಬರ್ 17ರ ಸಂಜೆ ಸುಮಾರು 5 ಗಂಟೆ ವೇಳೆಗೆ ರಸ್ತೆ ಅಪಘಾತ ಸಂಭವಿಸಿದೆ. ಖಾಸಗಿ ಅಂಗಡಿಗೆ ಈಚರ್ ಲಾರಿ ನುಗ್ಗಿದ ಪರಿಣಾಮ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈಚರ್ ಲಾರಿಯಿಂದ ದನದ ಮೇವುಗಳನ್ನು ಅನ್‌ಲೋಡ್ ಮಾಡುತ್ತಿರುವ ಸಂದರ್ಭದಲ್ಲೇ ಹಿಂಬದಿಯಿಂದ ಬಂದ ಇನ್ನೊಂದು ದೊಡ್ಡ ಲಾರಿ ಈಚರ್ ಲಾರಿಗೆ ಗುದ್ದಿದೆ. ರಭಸದಿಂದ ಎಳೆದುಕೊಂಡು ಮುಂದೆ ಹೋದ ಪರಿಣಾಮ ಈಚರ್ ಲಾರಿ ನಿಯಂತ್ರಣ ತಪ್ಪಿ ಖಾಸಗಿ ಅಂಗಡಿಗೆ ನುಗ್ಗಿ ಅಪಘಾತ ಸಂಭವಿಸಿದೆ. ಸದ್ಯದ ಮಾಹಿತಿಯ ಪ್ರಕಾರ ಈ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಆದರೆ ಲಾರಿ ಹಾಗೂ ಅಂಗಡಿಗೆ ಸಾಕಷ್ಟು ಹಾನಿಯಾಗಿದೆ. ಘಟನೆ ನಡೆದ ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದು, ಎಲ್ಲ ವಾಹನಗಳು ಸರ್ವಿಸ್ ರಸ್ತೆಯನ್ನೇ ಅವಲಂಬಿಸಿದ್ದವು. ಇದರಿಂದಾಗಿ ಅಪಘಾತದ ಹಿನ್ನೆಲೆಯಲ್ಲಿ ನೆಲ್ಯಾಡಿ ಬೇಟೆ ಸರ್ವಿಸ್ ರಸ್ತೆ ಸುಮಾರು ಒಂದು ಗಂಟೆಗಳ ಕಾಲ ಸಂಪೂರ್ಣವಾಗಿ ಬ್ಲಾಕ್ ಆಗಿ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು. ಘಟನೆಯ ಮಾಹಿತಿ ಪಡೆದ ನೆಲ್ಯಾಡಿ ಹೊರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಲು ಶ್ರಮವಹಿಸಿದರು.

ಪಡುಬೆಟ್ಟು ಶಾಲಾ ವಿದ್ಯಾರ್ಥಿನಿ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆ.

Image
ಸರಕಾರಿ ಉನ್ನತ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾರಾಡಿಯಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿಯ ಹಿರಿಯ ವಿಭಾಗದ ಕವನ ವಾಚನ ಸ್ಪರ್ಧೆಯಲ್ಲಿ ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಪಡುಬೆಟ್ಟು ಇಲ್ಲಿನ 7ನೇ ತರಗತಿಯ ವಿದ್ಯಾರ್ಥಿನಿ ಕುಮಾರಿ ಮೆಲಿಷ ನಿಶಾಲ್ ಮಸ್ಕರೇನ್ಹಸ್ ಪ್ರಥಮ ಸ್ಥಾನ ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ.          ನೆಲ್ಯಾಡಿ ಗ್ರಾಮ ಪಡುಬೆಟ್ಟು ನಿವಾಸಿ ಶ್ರೀ ಮನೀಶ್ ಮಸ್ಕರೇನ್ಹಸ್ ಹಾಗೂ ಪಡುಬೆಟ್ಟು ಶಾಲೆಯ ಅತಿಥಿ ಶಿಕ್ಷಕಿ ಶ್ರೀಮತಿ ನ್ಯಾನ್ಸಿ ಲಿಝಿ ದಂಪತಿಗಳ ಸುಪುತ್ರಿ. ವಿದ್ಯಾರ್ಥಿನಿಗೆ ಶಾಲಾ ಮುಖ್ಯಗುರುಗಳಾದ ಶ್ರೀಮತಿ ಜೆಸ್ಸಿ ಕೆ.ಎ. ಹಾಗೂ ಸಹಶಿಕ್ಷಕರು, ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರು ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿರುತ್ತಾರೆ.

ನೆಲ್ಯಾಡಿ: ಖಾಸಗಿ ಅಂಗಡಿಗೆ ನುಗ್ಗಿದ ಈಚರ್ ಲಾರಿ – ಅಪಘಾತ, ಸಂಚಾರ ಅಸ್ತವ್ಯಸ್ತ!

Image
ನೆಲ್ಯಾಡಿ ಮಧ್ಯಪೇಟೆಯಲ್ಲಿ ಡಿಸೆಂಬರ್ 17ರ ಸಂಜೆ ಸುಮಾರು 5 ಗಂಟೆ ವೇಳೆಗೆ ರಸ್ತೆ ಅಪಘಾತ ಸಂಭವಿಸಿದೆ. ಖಾಸಗಿ ಅಂಗಡಿಗೆ ಈಚರ್ ಲಾರಿ ನುಗ್ಗಿದ ಪರಿಣಾಮ ಆತಂಕದ ವಾತಾವರಣ ನಿರ್ಮಾಣವಾಗಿದೆ. ಈಚರ್ ಲಾರಿಯಿಂದ ದನದ ಮೇವುಗಳನ್ನು ಅನ್‌ಲೋಡ್ ಮಾಡುತ್ತಿರುವ ಸಂದರ್ಭದಲ್ಲೇ ಹಿಂಬದಿಯಿಂದ ಬಂದ ಇನ್ನೊಂದು ದೊಡ್ಡ ಲಾರಿ ಈಚರ್  ಲಾರಿಗೆ ಗುದ್ದಿದೆ. ರಭಸದಿಂದ ಎಳೆದುಕೊಂಡು ಮುಂದೆ ಹೋದ ಪರಿಣಾಮ ಈಚರ್ ಲಾರಿ ನಿಯಂತ್ರಣ ತಪ್ಪಿ ಖಾಸಗಿ ಅಂಗಡಿಗೆ ನುಗ್ಗಿ ಅಪಘಾತ ಸಂಭವಿಸಿದೆ. ಸದ್ಯದ ಮಾಹಿತಿಯ ಪ್ರಕಾರ ಈ ಅಪಘಾತದಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ. ಆದರೆ ಲಾರಿ ಹಾಗೂ ಅಂಗಡಿಗೆ ಸಾಕಷ್ಟು ಹಾನಿಯಾಗಿದೆ. ಘಟನೆ ನಡೆದ ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿದ್ದು, ಎಲ್ಲ ವಾಹನಗಳು ಸರ್ವಿಸ್ ರಸ್ತೆಯನ್ನೇ ಅವಲಂಬಿಸಿದ್ದವು. ಇದರಿಂದಾಗಿ ಅಪಘಾತದ ಹಿನ್ನೆಲೆಯಲ್ಲಿ ನೆಲ್ಯಾಡಿ ಬೇಟೆ ಸರ್ವಿಸ್ ರಸ್ತೆ ಸುಮಾರು ಒಂದು ಗಂಟೆಗಳ ಕಾಲ ಸಂಪೂರ್ಣವಾಗಿ ಬ್ಲಾಕ್ ಆಗಿ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದರು. ಘಟನೆಯ ಮಾಹಿತಿ ಪಡೆದ ನೆಲ್ಯಾಡಿ ಹೊರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ವಾಹನಗಳನ್ನು ತೆರವುಗೊಳಿಸಿ ಸಂಚಾರವನ್ನು ಸುಗಮಗೊಳಿಸಲು ಶ್ರಮವಹಿಸಿದರು.

ಕುಕ್ಕೆ ಸುಬ್ರಹ್ಮಣ್ಯ – ಬೈಕ್ ಅಪಘಾತದಲ್ಲಿ ಪಂಜ ನಿವಾಸಿ ಗಂಭೀರ ಗಾಯ

Image
ಕುಕ್ಕೆ ಸುಬ್ರಹ್ಮಣ್ಯ ಪಂಜ ಗ್ರಾಮದ ವಾಸು ಭಟ್ ಎಂಬವರು ಬೈಕ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಡಿಸೆಂಬರ್ 12ರಂದು ಮುಂಜಾನೆ ನಡೆದಿದೆ. ಬಳ್ಪ ಸಮೀಪದ ಎಡೋಣಿ ಹೋಲೋ ಬ್ಲಾಕ್ ಎದುರು ರಾಜ್ಯ ಹೆದ್ದಾರಿಯಲ್ಲಿ ಬೆಳಗಿನ ಸುಮಾರು ನಾಲ್ಕುರಿಂದ ಐದು ಗಂಟೆಯ ವೇಳೆಗೆ ವಾಸು ಭಟ್ ಅವರು ತಮ್ಮ ಪಂಜದ ಮನೆಯಿಂದ ಕುಕ್ಕೆ ಸುಬ್ರಹ್ಮಣ್ಯ ಮಠದಲ್ಲಿ ಸರ್ಪಸಂಸ್ಕಾರ ಪೂಜೆ ಮಾಡಲು ಬರುತ್ತಿರುವ ವೇಳೆ ಕಾಡುಪ್ರಾಣಿಯಾದ ಕಡವೆ ಬೈಕ್‌ಗೇ ಅಡ್ಡ ಬಂದ ಪರಿಣಾಮ ಅಪಘಾತ ಸಂಭವಿಸಿದೆ. ಎಂದು ಸ್ಥಳೀಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ವಾಸು ಭಟ್ ಅವರನ್ನು ಸ್ಥಳೀಯರು ತಕ್ಷಣವೇ ಆಂಬುಲೆನ್ಸ್ ಮೂಲಕ ಪುತ್ತೂರು ಪ್ರಗತಿ ಆಸ್ಪತ್ರೆಗೆ ಪ್ರಾಥಮಿಕ ಚಿಕಿತ್ಸೆಗಾಗಿ ಸೇರಿಸಿದರು. ನಂತರ ಹೆಚ್ಚಿನ ತುರ್ತು ಚಿಕಿತ್ಸೆಗೆ ಅವರನ್ನು ಮಂಗಳೂರು ಕೆ.ಎಸ್. ಹೆಗ್ಡೆ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಕುಟುಂಬದವರು ಮಾಧ್ಯಮಕ್ಕೆ ತಿಳಿಸಿದ್ದಾರೆ. ಗಂಭೀರ ಗಾಯಗೊಂಡಿರುವ ವಾಸು ಭಟ್ ಅವರ ಆರೋಗ್ಯ ಸ್ಥಿತಿ ಬಗ್ಗೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ – ವಿಶೇಷ ಕುಮಾರ ಪರ್ವತ ಪೂಜೆ ಭಕ್ತಿಭಾವದಿಂದ ನೆರವೇರಿತು.

Image
ಕುಕ್ಕೆ ಸುಬ್ರಹ್ಮಣ್ಯ ದೇವಳದಲ್ಲಿ, ಪೂರ್ವ ಸಂಪ್ರದಾಯದ ಪ್ರಕಾರ ಚಂಪಾಷಷ್ಟಿ ಜಾತ್ರೆಯ ಮುಕ್ತಾಯದ ಬಳಿಕ ಪ್ರತಿವರ್ಷ ಆಚರಿಸಲಾಗುವ ವಿಶೇಷ ಕುಮಾರ ಪರ್ವತ ದಲ್ಲಿ ಪೂಜೆ ಈ ವರ್ಷವೂ ವಿಶೇಷವಾಗಿ ನೆರವೇರಿತು. ದಿನಾಂಕ : 10-12-2025 ಬೆಳಗಿನ ನಸುಕಿನ ಹೊತ್ತಿನಲ್ಲಿ ದೇವಸ್ಥಾನದ ಅಧ್ಯಕ್ಷರು ಹಾಗೂ ಮುಖ್ಯ ಅರ್ಚಕರ ಮಾರ್ಗದರ್ಶನದಲ್ಲಿ ಕುಮಾರ ಪರ್ವತದ ಶಿಖರದಲ್ಲಿರುವ ಶ್ರೀ ಕುಮಾರಸ್ವಾಮಿಯ ಪವಿತ್ರ ಪಾದಗಳಿಗೆ ವಿಶೇಷ ವಿಧಿವಿಧಾನಗಳೊಂದಿಗೆ ಪೂಜೆ, ನೈವೇದ್ಯ, ಮಂಗಳಾರತಿ ನೆರವೇರಿಸಲಾಯಿತು. ದೇವಸ್ಥಾನದ ಶತಮಾನಗಳಿಂದ ನಡೆದುಬರುವ ಸಂಪ್ರದಾಯದಂತೆ ಎಲ್ಲಾ ವಿಧಿವಿಧಾನಗಳು ಆಚಾರಾನುಸಾರ ಮುಕ್ತಾಯಗೊಂಡುವವು. ಯಾತ್ರೆಯ ವಿಶೇಷತೆ ಬೆಳಿಗ್ಗೆ 5:00 ಕ್ಕೆ ಕುಕ್ಕೆ ಸುಬ್ರಹ್ಮಣ್ಯದಿಂದ ಸುಮಾರು 300ಕ್ಕೂ ಹೆಚ್ಚು ಭಕ್ತರು ಸಭೆಯಾಗಿ, ಬಸ್ಸು ಹಾಗೂ ಸ್ವಂತ ವಾಹನಗಳ ಮೂಲಕ ಕುಮಾರ ಪರ್ವತದತ್ತ ಪ್ರಯಾಣಾರಂಭಿಸಿದರು. ಈ ಯಾತ್ರೆಯ ಸಂಪೂರ್ಣ ಜವಾಬ್ದಾರಿಯನ್ನು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ವಹಿಸಿದ್ದರು. ಭಕ್ತರಿಗೆ ಯಾವುದೇ ತೊಂದರೆ ಉಂಟಾಗದಂತೆ — ವಾಹನ ವ್ಯವಸ್ಥೆ — ಸುರಕ್ಷತೆ — ನೀರು ಹಾಗೂ ವಿಶ್ರಾಂತಿ ವ್ಯವಸ್ಥೆ — ವಿಶೇಷ ಪ್ರಸಾದ ವಿತರಣಾ ವ್ಯವಸ್ಥೆ —ಉಪಹಾರ ವ್ಯವಸ್ಥೆ ಎಲ್ಲವನ್ನೂ ಅಧ್ಯಕ್ಷರೇ ನೇರವಾಗಿ ಮೇಲ್ವಿಚಾರಣೆ ಮಾಡಿ ಸುಸಜ್ಜಿತ ವ್ಯವಸ್ಥೆ ಕಲ್ಪಿಸಿದ್ದರು. ಯಾತ್ರೆ ಮುಗಿಸಿ ಕ್ಷೇತ್ರಕ್ಕೆ ಹ...

ಕುಮಾರಧಾರೆಯಲ್ಲಿ ದೇವರ ಮೀನುಗಳಿಗೆ ದೈವದ ನೈವೇದ್ಯ – ಜಾತ್ರೋತ್ಸವ ಸಂಪೂರ್ಣ.

Image
ಕುಕ್ಕೆ ಸುಬ್ರಹ್ಮಣ್ಯ ,ಭಾರತದ ಹೆಸರಾಂತ ನಾಗಕ್ಷೇತ್ರಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಈ ಬಾರಿಯ ಚಂಪಾ ಷಷ್ಠಿ ಜಾತ್ರೆ ಭಕ್ತಿಭಾವದಿಂದ, ವೈಭವದಿಂದ ಸಂಪನ್ನಗೊಂಡಿತು. ಲಕ್ಷಾಂತರ ಭಕ್ತರನ್ನು ಆಕರ್ಷಿಸುವ ಈ ಜಾತ್ರೆಯ ಪ್ರಮುಖ ವೈಶಿಷ್ಟ್ಯವೆಂದರೆ— ಕುಮಾರಧಾರಾ ನದಿಗೆ ದೂರದ ಏನೆಕಲ್ಲು–ಸಂಕಪಾಲ ಸುಬ್ರಹ್ಮಣ್ಯ ಪ್ರದೇಶದಿಂದ ದೇವರ ಮೀನುಗಳು ಬರುವ ಅದ್ಭುತ ಪವಾಡ. ಮೀನುಗಳ ಮಂತ್ರಮುಗ್ಧ ಆಗಮನ – ಜಾತ್ರೆಯ ಅತ್ಯಂತ ವೈಶಿಷ್ಟ್ಯ ಪ್ರತಿವರ್ಷದಂತೆ, ಈ ಬಾರಿ ಕೂಡ ಕೊಪ್ಪರಿಗೆ ಏರುವ ದ್ವಾದಶಿಯಂದು ವಿಶಿಷ್ಟವಾಗಿ ಗುರುತಿಸಲ್ಪಡುವ ದೇವರ ಮೀನುಗಳು ಕುಮಾರಧಾರಾ ಸ್ನಾನಘಟ್ಟದಲ್ಲಿ ಕಾಣಿಸಿಕೊಂಡವು. ಜಾತ್ರೆ ಆರಂಭವಾದ ದಿನದಿಂದ ಕೊನೆಯ ದಿನದವರೆಗೆ ನದಿಯಲ್ಲಿ ತಂಗುವ ಈ ಮೀನುಗಳು, ಜಾತ್ರೋತ್ಸವ ಆರಂಭಕ್ಕೆ ಸಾಕ್ಷಿಯಾಗುತ್ತವೆ ದೈವದ ಕೋಲದೊಂದಿಗೆ ನೈವೇದ್ಯ ಸ್ವೀಕರಿಸುತ್ತವೆ ಜಾತ್ರೆಯ ಅಂತ್ಯದೊಂದಿಗೆ ತಮ್ಮ ಸ್ವಸ್ಥಾನಕ್ಕೆ ಹಿಂತಿರುಗುತ್ತವೆ ಇದು ಇಲ್ಲಿ ಶತಮಾನಗಳಿಂದ ನಡೆಯುತ್ತಿರುವ ತಾಂತ್ರಿಕ ಪ್ರವಾದಿ, ಭಕ್ತರ ಮನ ಸೆಳೆಯುವ ಅದ್ಭುತ ಸಂಪ್ರದಾಯ. ದೈವದ ನೈವೇದ್ಯ – ಜಾತ್ರೆಯ ಪವಿತ್ರ ಸಮಾಪ್ತಿ ಇಂದು ದೇವಸ್ಥಾನದ ಆವರಣದಲ್ಲಿ ಪುರುಷರಾಯ ದೈವದ ಕೋಲು ಅದ್ಧೂರಿಯಾಗಿ ನೆರವೇರಿತು. ಕೋಲದ ನಂತರ, ದೈವವು ಎರಡು ಕಿಲೋಮೀಟರ್ ದೂರದಲ್ಲಿರುವ ಕುಮಾರಧಾರಾ ಸ್ನಾ...