Posts

Showing posts from March, 2026

ಕಡಬ ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಉದ್ಘಾಟನೆ – ಪ್ರಯಾಣಿಕರಿಗೆ ಸೌಲಭ್ಯ ವಿಸ್ತರಣೆ.

Image
ಕಡಬ: (31/03/2026) ಬೆಳಿಗ್ಗೆ ಸುಮಾರು 10:30ಕ್ಕೆ ಕಡಬದ ಬಸ್ ತಂಗುದಾಣದಲ್ಲಿ ನೂತನ ಸೌಲಭ್ಯಗಳ ಉದ್ಘಾಟನಾ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು. ಪ್ರಯಾಣಿಕರ ಅನುಕೂಲಕ್ಕಾಗಿ ಅಳವಡಿಸಲಾದ ಅಕ್ವಾಗಾರ್ಡ್ ಅಲ್ಕಾಲೈನ್ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಕುಳಿತುಕೊಳ್ಳುವ ಆಶನಗಳ (ಬೆಂಚ್) ವ್ಯವಸ್ಥೆಯನ್ನು ಈ ಸಂದರ್ಭದಲ್ಲಿ ಅಧಿಕೃತವಾಗಿ ಉದ್ಘಾಟಿಸಲಾಯಿತು.  ಪಟ್ಟಣ ಪಂಚಾಯತ್ ಅಧ್ಯಕ್ಷೆಯವರ ಕೋರಿಕೆ ಮೇರೆಗೆ ಕಡಬದ ಇಬ್ಬರು ಸ್ಥಳೀಯ ವರ್ತಕರು ಈ ವ್ಯವಸ್ಥೆ ಮಾಡಿಕೊಟ್ಟು ಸಹಕರಿಸಿದ್ದು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು JMJ ಆಸ್ಪತ್ರೆ ಕಡಬ ನೀಡಿರುವುದು ಗಮನಾರ್ಹವಾಗಿದೆ. ಇದರೊಂದಿಗೆ, ಪಟ್ಟಣ ಪಂಚಾಯತ್ ವತಿಯಿಂದ ಬಸ್ ನಿಲ್ದಾಣದ ದುರಸ್ತಿ ಕಾರ್ಯ, ಸುಣ್ಣ-ಬಣ್ಣ ಬಳಿದು ನವೀಕರಣ, ಹಾಗೂ ಹೊಸ ನೀರಿನ ಟ್ಯಾಂಕ್ ಅಳವಡಿಸುವ ಕಾರ್ಯ ಕೈಗೊಳ್ಳಲಾಗಿದೆ. ಇದರಿಂದ ಸಾರ್ವಜನಿಕರಿಗೆ ಸ್ವಚ್ಛ ಹಾಗೂ ಸುಸಜ್ಜಿತ ವಾತಾವರಣದಲ್ಲಿ ಬಸ್ ಸೇವೆ ಪಡೆಯುವ ಅವಕಾಶ ಲಭಿಸಿದೆ. ಈ ಕಾರ್ಯವು ಸ್ಥಳೀಯ ಅಭಿವೃದ್ಧಿಯತ್ತ ಸಾಗುತ್ತಿರುವ ಮಹತ್ವದ ಹೆಜ್ಜೆಯಾಗಿದೆ. ಕಾರ್ಯಕ್ರಮವನ್ನು ಪಟ್ಟಣ ಪಂಚಾಯತ್ ಅಧ್ಯಕ್ಷೆ ತಮ್ಮನ್ನಾ ಜಬೀನ್ ಉದ್ಘಾಟಿಸಿದರು.  ಈ ವೇಳೆ ಸ್ಥಾಯಿ ಸಮಿತಿ ಅಧ್ಯಕ್ಷ ಅನಿಫ್ ಕೆ.ಎಂ., ಪಟ್ಟಣ ಪಂಚಾಯತ್ ಉಪಾಧ್ಯಕ್ಷೆ ಲೀಲಾವತಿ ಶಿವರಾಮ್, ಸದಸ್ಯರಾದ ದಯಾನಂದ ಪಿಜಕ್ಕಳ, ಕೃಷ್ಣಪ್ಪ ಬೈಲಂಗಡಿ...

*ಕೆ.ಎಸ್. ಎಸ್ ಕಾಲೇಜಿನ ಪ್ರಾಕೃತ ಪ್ರವೇಶ ಮತ್ತು ಡಿಪ್ಲೋಮಾ ಕೋರ್ಸಿಗೆ ಉತ್ತಮ ಫಲಿತಾಂಶ*

Image
ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದ ಇತಿಹಾಸ ವಿಭಾಗ ಹಾಗೂ ರಾಷ್ಟ್ರೀಯ ಪ್ರಾಕೃತ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ಶ್ರವಣಬೆಳಗೊಳ ಜಂಟಿಯಾಗಿ ಪ್ರಾಕೃತ ಪ್ರವೇಶ ಮತ್ತು ಡಿಪ್ಲೋಮ ಕೋರ್ಸ್ ನ್ನು ಇತಿಹಾಸ ವಿಭಾಗದ ಮುಖ್ಯಸ್ಥರು ಡಾ ಪ್ರಸಾದ. ಎನ್ ಹಾಗೂ ಇತಿಹಾಸ ವಿಭಾಗದ ಉಪನ್ಯಾಸಕಿ ನಮಿತಾ ಎಂ ಎ ಅವರ ಮಾರ್ಗದರ್ಶನದಲ್ಲಿ ಪ್ರತಿ ವರ್ಷವೂ ನಡೆಸಲಾಗುತ್ತದೆ. ಈ ಕೋರ್ಸಿಗೆ 28 ವಿದ್ಯಾರ್ಥಿಗಳು ದಾಖಲಾಗಿ ಉತ್ತಮ ಫಲಿತಾಂಶವನ್ನು ಪಡೆದಿದ್ದಾರೆ. ಪ್ರಾಕೃತ ಪ್ರವೇಶ ಪರೀಕ್ಷೆಯಲ್ಲಿ ಪ್ರಥಮ ಪದವಿ ವಿದ್ಯಾರ್ಥಿಗಳಾದ ರಶ್ಮಿ ಮೂರನೇ ರ್‍ಯಾಂಕ್ ನೊಂದಿಗೆ ಕಂಚಿನ ಪದಕ, ಚಿಂತನಾ ಮತ್ತು ಅಂಕಿತ ಎಂ. ಐದನೇ ರ್‍ಯಾಂಕ್ , ಹಾಗೂ ಶ್ರೇಯ ಕೆ ಮತ್ತು ಯಕ್ಷಿತ ನಾಲ್ಕನೇ ರ್‍ಯಾಂಕ್ ಪಡೆದು ಒಂದು ವಿದ್ಯಾರ್ಥಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಡಿಪ್ಲೋಮಾ ಪರೀಕ್ಷೆಯಲ್ಲಿ ಚೈತನ್ಯ , ಪೂಜಾ ಕೆ, ಬ್ರಾಹ್ಮರಿ.ಕೆ, ಪ್ರೀತಿ ಯು ಎಸ್ ನಾಲ್ಕನೇ ರ್‍ಯಾಂಕ್ ಪಡೆದಿರುತ್ತಾರೆ ಮತ್ತು 19 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ನಲ್ಲಿ ಉತ್ತೀರ್ಣರಾಗಿರುತ್ತಾರೆ.

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಹುಂಡಿ ಕಳವು ಪ್ರಕರಣ: 7 ವರ್ಷಗಳ ಬಳಿಕ ಆರೋಪಿಗೆ ಶಿಕ್ಷೆ.

Image
ಸುಬ್ರಹ್ಮಣ್ಯ , ಮಾ.25: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹುಂಡಿಯಿಂದ ಹಣ ಕಳವು ಮಾಡಿದ ಪ್ರಕರಣದಲ್ಲಿ ಸುಮಾರು 7 ವರ್ಷಗಳ ಬಳಿಕ ಆರೋಪಿಗೆ ನ್ಯಾಯಾಲಯ ಶಿಕ್ಷೆ ವಿಧಿಸಿರುವ ಘಟನೆ ಬೆಳಕಿಗೆ ಬಂದಿದೆ. 2019ರ ಮೇ 16ರಂದು ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಸುಳ್ಯ ತಾಲೂಕು ಸುಬ್ರಹ್ಮಣ್ಯ ಗ್ರಾಮದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಸನ್ನಿಧಿಯ ಮುಂಭಾಗದಲ್ಲಿ ಇಡಲಾಗಿದ್ದ ಹುಂಡಿಯಿಂದ ₹1,885 ಹಣ ಕಳವು ಮಾಡಲಾಗಿತ್ತು. ಈ ಕುರಿತು ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಮೇ 17, 2019ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನಂತರ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಬಳಿಕ ವಿಚಾರಣೆ ನಡೆಸಿದ ಸುಳ್ಯ ಪ್ರಥಮ ದರ್ಜೆ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ನ್ಯಾಯಾಲಯವು 2025ರ ಮೇ 17ರಂದು ಆರೋಪಿಯನ್ನು ತಪ್ಪಿತಸ್ಥನೆಂದು ತೀರ್ಪು ನೀಡಿತ್ತು. ನಂತರ ಆರೋಪಿಯನ್ನು ಪ್ರೊಬೇಶನ್ ಆಫ್ ಆಫೆಂಡರ್ಸ್ ಕಾಯ್ದೆ (PO Act) ಅಡಿಯಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ ನಂತರ ಆರೋಪಿಯು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದರಿಂದ, ನ್ಯಾಯಾಲಯವು ವಾರೆಂಟ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ಹೆಡ್ ಕಾಂಸ್ಟೇಬಲ್ ಮಹೇಶ್ (HC 369) ಮತ್ತು ಪೊಲೀಸ್ ಕಾಂಸ್ಟೇಬಲ್ ಕಿರಣ್ (PC 475) ಅವರು 2026ರ ಮಾರ್ಚ್ 24ರಂದು ತುಮಕೂರು ಜಿಲ...

ಸುಬ್ರಹ್ಮಣ್ಯದಲ್ಲಿ ಪರವಾನಿಗೆ ವಿವಾದ: ನೋಟಿಸ್ ಬಳಿಕವೂ ಅಂಗಡಿಗಳ ಕಾರ್ಯಾಚರಣೆ ಮುಂದುವರಿದೆಯೇ?

Image
ಕುಕ್ಕೆ ಸುಬ್ರಹ್ಮಣ್ಯದ ಆದಿ ಸುಬ್ರಹ್ಮಣ್ಯ ಪ್ರದೇಶದ ಸರ್ವೆ ನಂ. 82/5ರಲ್ಲಿ ಕಾರ್ಯಾಚರಿಸುತ್ತಿರುವ ಕೆಲವು ವಾಣಿಜ್ಯ ಅಂಗಡಿಗಳು ಮತ್ತು ವಸತಿಗೃಹಗಳ ಕುರಿತು ಸ್ಥಳೀಯ ವಲಯದಲ್ಲಿ ಪ್ರಶ್ನೆಗಳು ಉದ್ಭವಿಸಿರುವುದಾಗಿ ತಿಳಿದುಬಂದಿದೆ. ಸ್ಥಳೀಯ ಮೂಲಗಳ ಪ್ರಕಾರ, ಈ ಸ್ಥಳದಲ್ಲಿ ಕೆಲವು ಅಂಗಡಿಗಳು ಪಂಚಾಯತ್ ಪರವಾನಿಗೆ ಸಂಬಂಧಿಸಿದ ವಿಷಯದಲ್ಲಿ ವಿವಾದಕ್ಕೆ ಒಳಪಟ್ಟಿವೆ ಎಂಬ ಆರೋಪ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವತಿಯಿಂದ ಜನವರಿ 8ರಂದು ಭೂ ಮಾಲೀಕರಿಗೆ ನೋಟಿಸ್ ನೀಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ, ನೋಟಿಸ್ ನೀಡಿದ ನಂತರವೂ ಅಂಗಡಿಗಳ ಕಾರ್ಯಾಚರಣೆ ಮುಂದುವರಿದಿದೆಯೇ ಎಂಬ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಕೆಲವರು ಪಂಚಾಯತ್ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಸೂಚನೆ ನೀಡಿದ ವಿಚಾರವನ್ನೂ ಉಲ್ಲೇಖಿಸಿದ್ದಾರೆ. ಈ ಕುರಿತು ಅಧಿಕೃತ ಸ್ಪಷ್ಟೀಕರಣಕ್ಕಾಗಿ ಪ್ರಯತ್ನಿಸಲಾಗಿದೆ. ಇನ್ನೊಂದೆಡೆ, ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಕೇಳಿದ ಕೆಲವು ದಾಖಲೆಗಳ ಕುರಿತು ಪಂಚಾಯತ್ ನೀಡಿದ ಉತ್ತರದ ಬಗ್ಗೆ ಸಹ ಪ್ರಶ್ನೆಗಳು ಕೇಳಿಬರುತ್ತಿವೆ ಎಂದು ದೂರುದಾರರು ತಿಳಿಸಿದ್ದಾರೆ. ಈ ವಿಷಯದಲ್ಲಿ ಸಂಪೂರ್ಣ ವಿವರಗಳನ್ನು ಅಧಿಕಾರಿಗಳಿಂದ ಪಡೆಯಲು ಪ್ರಯತ್ನಗಳು ನಡೆಯುತ್ತಿವೆ. ಇದಲ್ಲದೆ, ಭೂ ಬಳಕೆ ಬದಲಾವಣೆ (Conversion) ಸಂಬಂಧಿಸಿದ ಪ್ರಕ್ರಿಯೆಗಳ ಬಗ್ಗೆ ಕೆ...

*ಶ್ರೀ ಗಣೇಶ್ ಆಯಿಲ್ ಮಿಲ್ ಮತ್ತು ಡ್ರೈ ಫ್ರೂಟ್ಸ್ ನೂತನ ಶಾಖೆ ಶುಭಾರಂಭ....*

Image
ನೆಲ್ಯಾಡಿ ಗಣೇಶ್ ಆಯಿಲ್ ಮಿಲ್ ನ ನೂತನ ಶಾಖೆ ಮಾರ್ಚ್ 21ರಂದು ಎಂಜಿರ ಮಲ್ನಾಡ್ ಹೋಟೆಲ್ ಸಮೀಪ ವಿಶ್ವ ಕರ್ಮ ಕಾಂಪ್ಲೆಕ್ಸ್ ನಲ್ಲಿ ಶುಭಾರಂಭ ಗೊಳ್ಳಲಿದೆ. ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕರು ಕುಮಾರಿ ಭಾಗೀರಥಿ ಮುರುಳ್ಯ ಉದ್ಘಾಟನೆ ಮಾಡಲಿದ್ದು , ಹಿರಿಯ ಉದ್ಯಮಿ ಸುಬ್ರಮಣ್ಯ ಆಚಾರ್ಯ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಸರ್ವೋತ್ತಮ ಗೌಡ, ಕೊಕ್ಕಡ ಸಿ. ಎ. ಬ್ಯಾಂಕ್ ಅಧ್ಯಕ್ಷರು ಕುಶಾಲಪ್ಪ ಗೌಡ ಪೂವಾಜೆ, ಬೆಥನಿ ವಿದ್ಯಾಸಂಸ್ಥೆಯ ಸಂಚಾಲಕರು ಡಾ. ವರ್ಗಿಸ್ ಕೈಪನಡ್ಕ, ಪಿ.ಎಲ್. ಡಿ. ಬ್ಯಾಂಕ್ ಅಧ್ಯಕ್ಷರು ಭಾಸ್ಕರ್ ಗೌಡ ಇಚಲಂಪಾಡಿ, ನೆಲ್ಯಾಡಿ ಗ್ರಾಮ ಪಂಚಾಯತ್ ನಿಕಟ ಪೂರ್ವ ಸದಸ್ಯರು ರವಿಪ್ರಸಾದ್ ಶೆಟ್ಟಿ ರಾಮನಗರ, ಕಾಮಧೇನು ಮಹಿಳಾ ಸಹಕಾರಿ ಸಂಘದ ಅಧ್ಯಕ್ಷರು ಶ್ರೀಮತಿ ಉಷಾ ಅಂಚನ್, ಸೌತಡ್ಕ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು ಪ್ರಮೋದ್ ಕುಮಾರ್ ರೈ, ನೂಜಿ ಬಾಳ್ತೀಲ ಗ್ರಾಮ ಪಂಚಾಯತ್ ನಿಕಟ ಪೂರ್ವ ಉಪಾಧ್ಯಕ್ಷರು ಚಂದ್ರ ಶೇಖರ್, ಇಚಲಂಪಾಡಿ ದುರ್ಗಾಪರಮೇಶ್ವರಿ ದೇವಸ್ಥಾನದ ಅಧ್ಯಕ್ಷರು ಜಯರಾಜ್ ಕೊರಮೇರು,ಕಟ್ಟಡದ ಮಾಲಕರು ಶ್ರೀಮತಿ ರೇಷ್ಮಾ, ಶ್ರೀಯುತ ಶಶಿ ಕೆ, ನೆಲ್ಯಾಡಿ ಹಾಲು ಉದ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷರು ಹೇಮಂತ್ ಗೌಡ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದು ಸಂಸ್ಥೆಯ ಮಾಲಕರಾದ ಶ್ರೀಮತಿ ಚಂದ್ರಿಕಾ ಮತ್ತು ಕೌಕ್ರಾಡಿ ಗ್ರಾಮ ಪಂಚಾಯತ್ ನಿಕಟ ಪೂರ್ವ ಅಧ್ಯಕ್ಷರು ಉದಯ್ ಕುಮಾರ್ ಗೌಡ...

ಸುಬ್ರಹ್ಮಣ್ಯದಲ್ಲಿ ಕಳವು ಪ್ರಕರಣ: ಆರೋಪಿಗೆ 7 ತಿಂಗಳ ಜೈಲು ಶಿಕ್ಷೆ.

Image
ಸುಬ್ರಹ್ಮಣ್ಯ : ಕಡಬ ತಾಲೂಕು ಐನೇಕಿದು ಗ್ರಾಮದ ಹಾಲಿನ ಡೈರಿ ಹಾಗೂ ದಿನಸಿ ಅಂಗಡಿಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಸುಳ್ಯ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ. 2025 ಆಗಸ್ಟ್ 17 ರಂದು ರಾತ್ರಿ 11 ಗಂಟೆಯ ಸುಮಾರಿಗೆ, ಆರೋಪಿಯು ಹಾಲಿನ ಡೈರಿಯ ಕಬ್ಬಿಣದ ಶಟರ್ ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿ, ಡ್ರಾವರ್ನಲ್ಲಿದ್ದ ₹3000 ನಗದು ಕಳವು ಮಾಡಿದ್ದಾನೆ. ಬಳಿಕ ಪಕ್ಕದಲ್ಲಿದ್ದ ದಿನಸಿ ಅಂಗಡಿಯ ಶಟರ್ ಬೀಗವನ್ನೂ ಮುರಿದು ಒಳನುಗ್ಗಿ ₹2357 ಚಿಲ್ಲರೆ ಹಣ ಕಳವು ಮಾಡಿದ್ದಾನೆ. ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು (ಕ್ರೈಂ ನಂ. 44/2025), ಆರೋಪಿಯು ತಲೆಮರೆಸಿಕೊಂಡಿದ್ದನು. ನಂತರ ಸುಬ್ರಹ್ಮಣ್ಯ ಠಾಣೆಯ ಪಿಎಸ್ಐ ಕಾರ್ತಿಕ್ ಕಾತರಕಿ ಹಾಗೂ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿ 2025 ಆಗಸ್ಟ್ 20 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಪ್ರಕರಣದ ವಿಚಾರಣೆ ಬಳಿಕ, 2026 ಮಾರ್ಚ್ 18 ರಂದು ಆರೋಪಿಯ ತಪ್ಪೊಪ್ಪಿಗೆ ಮೇರೆಗೆ ಸುಳ್ಯ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶಿವಣ್ಣ ಹೆಚ್.ಆರ್ ಅವರು ತೀರ್ಪು ನೀಡಿದರು. ಕೋರ್ಟ್ ಆದೇಶದಂತೆ: BNS ಕಲಂ 331(4) ಅಡಿ 6 ತಿಂಗಳ ಸಾದಾರಣ ಜೈಲು ಶಿಕ್ಷೆ ಹಾಗೂ ₹500 ದಂಡ BNS ಕಲಂ 305 ಅಡಿ 7 ತಿಂಗಳ ಸಾದಾರಣ ಜೈಲು ಶಿಕ್ಷೆ ಹಾಗೂ ₹500...

*ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಗೆ ಯಾಕೆ ಪ್ರಾಮುಖ್ಯತೆ ಕೊಡಬೇಕು?!!!*

Image
ರಾಜ್ಯದಲ್ಲಿ 2026ನೇ ಸಾಲಿನ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯನ್ನು ಎದುರಿಸಲು ವಿದ್ಯಾರ್ಥಿಗಳು ತಯಾರಿ ನಡೆಸುತ್ತಿದ್ದಾರೆ.ಈ ಪರೀಕ್ಷೆಗೆ ಯಾಕೆ ಪ್ರಾಮುಖ್ಯತೆ ನೀಡಬೇಕು ಅನ್ನುವ ಪ್ರಶ್ನೆ ವಿದ್ಯಾರ್ಥಿಗಳಲ್ಲಿ ಮೂಡುತ್ತದೆ.ಈ. ಪ್ರಶ್ನೆಗೆ ವಿದ್ಯಾರ್ಥಿಗಳು ಗಮನಿಸ ಬೇಕಾದ ಅಂಶಗಳು ಅಂದರೆ- ಸಾಮಾನ್ಯವಾಗಿ ಹತ್ತು ವರ್ಷಗಳ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಉನ್ನತ ಶಿಕ್ಷಣಕ್ಕೆ ಹಾಗೂ ಭವಿಷ್ಯದಲ್ಲಿ ಉತ್ತಮ ಉದ್ಯೋಗವನ್ನು ಪಡೆಯಲು ಅಗತ್ಯವಾದ ಪ್ರಮುಖ ಹಂತವೇ ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ. ಆದ್ದರಿಂದ ಈ ಪರೀಕ್ಷೆ ವಿದ್ಯಾರ್ಥಿಗಳ ಜೀವನದಲ್ಲಿ ಅತ್ಯಂತ ಮಹತ್ವಪೂರ್ಣವಾಗಿದೆ. ಎಸ್‌.ಎಸ್‌.ಎಲ್‌.ಸಿ ಪರೀಕ್ಷೆ ಶಾಲಾ ಶಿಕ್ಷಣದ ಅಂತಿಮ ಹಂತದ ಪರೀಕ್ಷೆಯಾಗಿದ್ದು, ವಿದ್ಯಾರ್ಥಿಗಳ ಜ್ಞಾನ, ಸಾಮರ್ಥ್ಯ, ಪರಿಶ್ರಮ ಮತ್ತು ಶಿಸ್ತುಗಳನ್ನು ಅಳೆಯುವ ಮಹತ್ವದ ಹಂತವಾಗಿದೆ. ಈ ಪರೀಕ್ಷೆಯ ಫಲಿತಾಂಶವು ವಿದ್ಯಾರ್ಥಿಗಳ ಮುಂದಿನ ಶಿಕ್ಷಣದ ದಾರಿಗೆ ದಿಕ್ಕು ತೋರಿಸುತ್ತದೆ. ಎಸ್‌.ಎಸ್‌.ಎಲ್‌.ಸಿ ಪರೀಕ್ಷೆಯಲ್ಲಿ ಯಶಸ್ವಿಯಾದ ವಿದ್ಯಾರ್ಥಿಗಳು ಪಿಯುಸಿ, ಡಿಪ್ಲೊಮಾ, ಐಟಿಐ ಹಾಗೂ ಇತರೆ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ಅವಕಾಶಗಳನ್ನು ಹೊಂದುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಈ ಪರೀಕ್ಷೆಗೆ ವಿಶೇಷ ತಯಾರಿ ಮಾಡಿಕೊಂಡು ಆತ್ಮವಿಶ್ವಾಸದಿಂದ ಎದುರಿಸಬೇಕು. ಪೋಷಕರು ಹಾಗೂ ಶಿಕ್ಷಕರ ಮಾರ್ಗದರ್ಶನದಲ್ಲಿ ನಿಯಮಿತ ಅಧ...

*ಶ್ರೀ ಶಾಸ್ತಾರೇಶ್ವರ ದೇವಸ್ಥಾನ ಕುತ್ರಾಡಿ ಹಾರ್ಪಳ ಇದರ 10 ನೇ ವರ್ಷದ ಪ್ರತಿಷ್ಠಾ ವಾರ್ಷಿಕೋತ್ಸವ ಸಮಿತಿ ರಚನೆ*

Image
ದಿನಾಂಕ 6.03.2026 ನೇ ಶುಕ್ರವಾರದಂದು, ದೇವಸ್ಥಾನದಲ್ಲಿ ನಡೆದ ಗ್ರಾಮಸ್ಥರ ಸಭೆಯಲ್ಲಿ,ಏಪ್ರಿಲ್ 22, 23 ತಾರೀಖಿಗೆ ನಡೆಯಲಿರುವ ಪ್ರತಿಷ್ಠಾ ವಾರ್ಷಿಕೋತ್ಸವದ ಸಮಿತಿಯನ್ನು ರಚನೆ ಮಾಡಲಾಯಿತು  ಆದ್ಯಕ್ಷರಾಗಿ.. ನಿತೇಶ್ ಪುಳಿತ್ತಡಿ  ಉಪಾಧ್ಯಕ್ಷರುಗಳಾಗಿ ಶೇಸಪ್ಪ ಪಡಿಪಂಡ, ಗುಡ್ಡಪ್ಪ ಗೌಡ ಪೊಣ್ಣೆತ್ತಿಮಾರು, ತಿಮರಡ್ದ ಕಾರ್ಯದರ್ಶಿಯಾಗಿ.. ದಿನೇಶ್ ನಾಯ್ಕ್ ಪಡುಬೆಟ್ಟು, ಜತೆ ಕಾರ್ಯದರ್ಶಿ ಯಾಗಿ ಸಂದೀಪ್ ರಾಮನಗರ  ಹಾಗೂ ಸದಸ್ಯರಾಗಿ,ಚಂದ್ರಶೇಖರ್ ಡೆಂಜ, ಸತೀಶ್ಚಂದ್ರ ಆತ್ರಿಜಾಲು,ಶೀನಪ್ಪ ಗಾಣಂತಿ,ನಾಗೇಶ್ ಗಡಿಕಲ್ಲು,ನಾರಾಯಣ ಮರ್ವೋಡಿ,ದೀಪಕ್ ಬಟ್ಟಿಗದ್ದೆ,ಬಾಲಕೃಷ್ಣ ಮಕ್ಕಿಗದ್ದೆ, ಶಿವಪ್ರಸಾದ್ ಮೂಲೆಮನೆ,ಮನೋಜ್, ಜನಾರ್ಧನ ಹೊಸಮನೆ,ಪುರಂದರ ಗೌಡ ಪಟ್ಟೆಮಜಲು, ಶಂಕರ್ ಪಡುಬೆಟ್ಟು, ಅಣ್ಣಿ ಮೇಲಿನಮಕ್ಕಿ,ಸುಶಾಂತ್ ರಾಮನಗರ,ವಿಶ್ವನಾಥ ಗೌಡ ಹುಣ್ಸೆಬೆಟ್ಟು,ದೇಜಪ್ಪ ಗೌಡ ಹೊಸಮನೆ,ಗಿರೀಶ್ ಪಡುಬೆಟ್ಟು,    ಆಯ್ಕೆಯಾದರು ಸಭೆಯಲ್ಲಿ ಶ್ರೀ ಶಾಸ್ತಾರೇಶ್ವರ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಸುಂದರ ಗೌಡ ಆತ್ರಿಜಾಲು, ಕಾರ್ಯದರ್ಶಿ ಸುರೇಶ್ ಪಡಿಪಂಡ, ಕೋಶಾದಿಕಾರಿ ಸೀತರಾಮ ಗೌಡ ಕಾನಮನೆ, ಹಾಗೂ ಆರ್ಚಕರಾದ ಶ್ರೀಧರ್ ನೂಜೀನ್ನಾಯ, ಬಾಲಕೃಷ್ಣ ಗೌಡ ಹಾರ್ಪಳ, ರವಿಪ್ರಸಾದ್ ಶೆಟ್ಟಿ ರಾಮನಗರ, ಚಂದ್ರ ಶೇಖರ್ ರೈ ರಾಮನಗರ, ಅನಿಲ್ ರೈ ಹಾರ್ಪಳ, ಯಾದವ ಶೆಟ್ಟಿ ರಾಮನಗರ, ರವಿಚಂದ್ರ ಗೌಡ ಆತ್ರಿಜಾಲು, ಧನಂ...

.*ಶ್ರೀರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿ**ದೀಪ ಪ್ರದಾನ*

Image
ಶ್ರೀರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿಯಲ್ಲಿ ಮಾರ್ಚ್ 4 ಬುಧವಾರದಂದು *ಹತ್ತನೇ ತರಗತಿ ವಿದ್ಯಾರ್ಥಿಗಳ ದೀಪ ಪ್ರದಾನ ಬೀಳ್ಕೊಡುಗೆ ಕಾರ್ಯಕ್ರಮವು* ಹಲವು ಗಣ್ಯರ ಸಮ್ಮುಖದಲ್ಲಿ ನೆರವೇರಿತು. ಅತಿಥಿಗಳನ್ನು ಮೊದಲು ಆರತಿ ಬೆಳಗುವುದರ ಮೂಲಕ ಬರಮಾಡಿಕೊಳ್ಳಲಾಯಿತು. ನಂತರ ದೀಪ ಪ್ರಜ್ವಲನೆ ಮಾಡುವುದರ ಮೂಲಕ ಅತಿಥಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ಸರಸ್ವತಿ ವಂದನೆ ಮಾಡಿದರು. ರಮ್ಯ ಮಾತಾಜಿಯವರು ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ *ಶ್ರೀಮತಿ ಸುಧಾ ಕಶೆಕೋಡಿ ಶಿಶು ವ್ಯವಸ್ಥಾಪಕಿ ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ* ಇವರು *ಮಾತಾಪಿತೃಗಳ ಬಾಂಧವ್ಯವನ್ನು ಬೆಸೆಯುವ ಭಾವನಾತ್ಮಕ ಕಾರ್ಯಕ್ರಮ ಪಾದ ಪೂಜೆ* ಯನ್ನು ವಿದ್ಯಾರ್ಥಿಗಳಿಂದ ಮಾಡಿಸಿ ಅದರ ಮಹತ್ವವನ್ನು ಶ್ಲೋಕಗಳ ಮೂಲಕ ಮನಮುಟ್ಟುವಂತೆ ಸವಿವರವಾಗಿ ತಿಳಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಭಾವುಕರಾದರು. ವಿದ್ಯಾರ್ಥಿಗಳು ಅನಿಸಿಕೆಯನ್ನು ವ್ಯಕ್ತಪಡಿಸಿ ದೇಶಭಕ್ತಿ ಗೀತೆಯನ್ನು ಹಾಡಿದರು.10ನೇ ತರಗತಿ ವಿದ್ಯಾರ್ಥಿಗಳು 9ನೇ ತರಗತಿ ವಿದ್ಯಾರ್ಥಿಗಳಿಗೆ ದೀಪ ಹಸ್ತಾಂತರಿಸುವ ಮೂಲಕ ತಮ್ಮ ಜವಾಬ್ದಾರಿಯನ್ನು ಹಸ್ತಾಂತರಿಸಿದರು . ಹತ್ತನೇ ತರಗತಿ ವಿದ್ಯಾರ್ಥಿಗಳು ವಿದ್ಯಾಲಯಕ್ಕೆ ಕೊಡುಗೆಯನ್ನು ನೀಡಿದರು. ಪಾದಪೂಜೆಯ ನಂತರ ವಿದ್ಯಾರ್ಥಿಗಳು ಭಾರತ ಮಾತೆಯ ಭಾವಚಿತ್ರದ ಮ...

ಕುಕ್ಕೆ: ಆಟೋ ಚಾಲಕ-ಮಾಲಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ.

Image
ಸುಬ್ರಹ್ಮಣ್ಯ: ಕುಕ್ಕೆಶ್ರೀ ಆಟೋ ಚಾಲಕ-ಮಾಲಕರ ಸಂಘ, ಸುಬ್ರಹ್ಮಣ್ಯ ಇದರ 2026-27ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಶುಕ್ರವಾರ ನಡೆದ ಸಂಘದ ಸಭೆಯಲ್ಲಿ ನಡೆಯಿತು. ಸಂಘದ ನೂತನ ಅಧ್ಯಕ್ಷರಾಗಿ ಭುವನೇಶ್ ಅಗೋಳಿಕಜೆ ಆಯ್ಕೆಯಾದರು. ಗೌರವಾಧ್ಯಕ್ಷರಾಗಿ ಉಮೇಶ್ ಕೆ.ಎನ್ ಅವರನ್ನು ನೇಮಕ ಮಾಡಲಾಯಿತು. ಕಾರ್ಯದರ್ಶಿಯಾಗಿ ವಿಘ್ನೇಶ್ ದೇವರಗದ್ದೆ, ಕೋಶಾಧಿಕಾರಿಯಾಗಿ ಗಣೇಶ್ ಅಗೋಳಿಕಜೆ, ಉಪಾಧ್ಯಕ್ಷರಾಗಿ ಶರತ್ ದೇವರಗದ್ದೆ, ಜತೆ ಕಾರ್ಯದರ್ಶಿಯಾಗಿ ಸದಾನಂದ ದೇವರಗದ್ದೆ ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಕುಮಾರ್ ನಾಯ್ಕ್ ನೂಚಿಲ ಆಯ್ಕೆಯಾದರು. ನಿರ್ದೇಶಕರಾಗಿ ಪ್ರಶಾಂತ್ ಮೂಜೂರು, ದಿನೇಶ್ ಗಾಂಗೇಯ, ಮಹೇಶ್ ಗುಡ್ಡೆಮನೆ, ಉಷಾಕುಮಾರ್ ಕುಲ್ಕುಂದ, ತೇಜಕುಮಾರ್ ಅಗೋಳಿಕಜೆ ಮತ್ತು ಮಹೇಶ್ಚಂದ್ರ ನೂಚಿಲ ಅವರನ್ನು ನೇಮಕ ಮಾಡಲಾಗಿದೆ. ಸಭೆಗೆ ಸಂಘದ ಅಧ್ಯಕ್ಷ ಸಂತೋಷ್ ಕುಲ್ಕುಂದ ಅಧ್ಯಕ್ಷತೆ ವಹಿಸಿದ್ದರು. ಈ ವೇಳೆ ಸಂಘದ ವಾರ್ಷಿಕೋತ್ಸವ ಸೇರಿದಂತೆ ವಿವಿಧ ವಿಷಯಗಳ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.

ಸುಳ್ಯದಲ್ಲಿ ಆನೆ ಕಾರ್ಯಪಡೆ ರಚನೆಗೆ ಸರ್ಕಾರದ ಆದೇಶ: ಶಾಸಕಿ ಭಾಗೀರಥಿ ಮುರುಳ್ಯ ಮನವಿಗೆ ಸ್ಪಂದನೆ.

Image
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ವಿಭಾಗಕ್ಕೆ ಕೇಂದ್ರೀಕೃತ ಆನೆ ಕಾರ್ಯಪಡೆ (Elephant Task Force) ರಚಿಸಲು ಕರ್ನಾಟಕ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ. ಸುಳ್ಯ ಹಾಗೂ ಕಡಬ ತಾಲೂಕುಗಳಲ್ಲಿ ಹೆಚ್ಚುತ್ತಿರುವ ಕಾಡಾನೆ ಹಾವಳಿಯಿಂದ ಮಾನವ ಸಾವು–ನೋವು ಮತ್ತು ಬೆಳೆ ಹಾನಿ ಪ್ರಕರಣಗಳು ಏರಿಕೆಯಾಗುತ್ತಿದ್ದ ಹಿನ್ನೆಲೆ, ಈ ಕಾರ್ಯಪಡೆಯನ್ನು ಶೀಘ್ರ ಕಾರ್ಯಗತಗೊಳಿಸಲು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದರು. ಏಕೆ ಅಗತ್ಯವಾಯಿತು ಕಾರ್ಯಪಡೆ? ಮಂಗಳೂರು ವಿಭಾಗದ ಉಪ್ಪಿನಂಗಡಿ, ಸುಳ್ಯ, ಬೆಳ್ತಂಗಡಿ, ಪುತ್ತೂರು, ಪಂಜ ಹಾಗೂ ಸುಬ್ರಹ್ಮಣ್ಯ ವಲಯಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಾಗಿದ್ದು, ಪ್ರತೀ ವರ್ಷವೂ ಮಾನವ ಸಾವುಗಳು ಮತ್ತು ಬೆಳೆ ಪರಿಹಾರದ ಪ್ರಕರಣಗಳು ಹೆಚ್ಚುತ್ತಿವೆ. ಆನೆಗಳನ್ನು ಅರಣ್ಯ ಪ್ರದೇಶಕ್ಕೆ ಹಿಮ್ಮೆಟ್ಟಿಸಲು ಬೇರೆ ಜಿಲ್ಲೆಯಿಂದ ಕಾರ್ಯಪಡೆ ಕರೆದೊಯ್ಯಬೇಕಾಗುತ್ತಿದ್ದು, ತುರ್ತು ಕ್ರಮದಲ್ಲಿ ವಿಳಂಬವಾಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಸರ್ಕಾರ ಪ್ರಸ್ತಾವನೆಯನ್ನು ಸಮಗ್ರವಾಗಿ ಪರಿಶೀಲಿಸಿ, ಮಂಗಳೂರು ವಿಭಾಗಕ್ಕೆ ಹೊಸ ಆನೆ ಕಾರ್ಯಪಡೆ ರಚಿಸಲು ಆದೇಶಿಸಿದೆ. ಕಾರ್ಯಪಡೆಯ ರಚನೆ ಹೇಗೆ? ಸರ್ಕಾರದ ಆದೇಶದಂತೆ ಒಟ್ಟು 28 ಸಿಬ್ಬಂದಿಗ...

ನೆಟ್ಟಣ ರೈಲು ನಿಲ್ದಾಣಕ್ಕೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ದಿಢೀರ್ ಭೇಟಿ – ವ್ಯವಸ್ಥೆ ಸುಧಾರಣೆಗೆ ಸೂಚನೆ.

Image
ಕಡಬ: ಸಾರ್ವಜನಿಕರಿಂದ ವಿವಿಧ ರೀತಿಯ ದೂರುಗಳು ಬಂದ ಹಿನ್ನೆಲೆಯಲ್ಲಿ ನೆಟ್ಟಣ ರೈಲು ನಿಲ್ದಾಣಕ್ಕೆ ಭಾಗೀರಥಿ ಮುರುಳ್ಯ ಅವರು ದಿಢೀರ್ ಭೇಟಿ ನೀಡಿ ಸ್ಥಳೀಯವಾಗಿ ಪರಿಶೀಲನೆ ನಡೆಸಿದರು. ರೈಲು ನಿಲ್ದಾಣದ ಸ್ವಚ್ಛತೆ, ಕುಡಿಯುವ ನೀರಿನ ವ್ಯವಸ್ಥೆ, ಪ್ರಯಾಣಿಕರ ನಿರೀಕ್ಷಣಾ ಕೋಣೆ, ಬೆಳಕು ವ್ಯವಸ್ಥೆ ಸೇರಿದಂತೆ ಮೂಲಭೂತ ಸೌಲಭ್ಯಗಳ ಬಗ್ಗೆ ಪರಿಶೀಲಿಸಿದ ಶಾಸಕಿ, ಪ್ರಯಾಣಿಕರಿಗೆ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಅಗತ್ಯ ಕ್ರಮಗಳನ್ನು ತಕ್ಷಣ ಕೈಗೊಳ್ಳುವಂತೆ ಸ್ಟೇಷನ್ ಮಾಸ್ಟರ್ ಹಾಗೂ ಸಿಬ್ಬಂದಿಗಳಿಗೆ ಸೂಚನೆ ನೀಡಿದರು. ಸಾರ್ವಜನಿಕರಿಂದ ಬಂದಿರುವ ದೂರುಗಳನ್ನು ಗಂಭೀರವಾಗಿ ಪರಿಗಣಿಸಿ ಶೀಘ್ರದಲ್ಲಿ ಸರಿಪಡಿಸುವ ಭರವಸೆ ಕೂಡ ನೀಡಿದರು. ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೃಷ್ಣ ಶೆಟ್ಟಿ ಕಡಬ, C.A ಬ್ಯಾಂಕ್ ಬಿಳಿನೆಲೆ ಅಧ್ಯಕ್ಷ ವಾಡ್ಯಪ್ಪ ಗೌಡ, ಕೊಂಬಾರು ಗ್ರಾಮ ಪಂಚಾಯತ್ ಅಧ್ಯಕ್ಷ ಮಧುಸೂದನ್, ಪ್ರಮುಖರಾದ ಕಿಶೋರ್ ಶಿರಾಡಿ, ಪ್ರಸಾದ್ ನೆಟ್ಟಣ, ದೀಕ್ಷಿತ್ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಸ್ಥಳೀಯ ಪ್ರಯಾಣಿಕರು ಮತ್ತು ನಾಗರಿಕರು ಶಾಸಕರ ತಕ್ಷಣದ ಭೇಟಿ ಹಾಗೂ ಸ್ಪಂದನೆಯನ್ನು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಬಿಳಿನೆಲೆ ಗಾಳಿ ಮಳೆ ಹಾನಿ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ, ಶೀಘ್ರ ಪರಿಹಾರಕ್ಕೆ ಸೂಚನೆ.

Image
ಕಡಬ: ಬಿಳಿನೆಲೆ ಗ್ರಾಮದಲ್ಲಿ ಇತ್ತೀಚೆಗೆ ಸುರಿದ ಭಾರೀ ಗಾಳಿ ಮಳೆಯಿಂದ ಹಲವಾರು ಕೃಷಿ ತೋಟಗಳು ಹಾನಿಗೊಳಗಾದ ಹಿನ್ನೆಲೆ ಮಾರ್ಚ್ 3 ರಂದು ಭಾಗೀರಥಿ ಮುರುಳ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಡಬ ತಹಶೀಲ್ದಾರರು ಹಾಗೂ ಪುತ್ತೂರು ತೋಟಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಹಾನಿಗೊಳಗಾದ ತೋಟಗಳನ್ನು ವೀಕ್ಷಿಸಿದ ಶಾಸಕಿ, ಬೆಳೆ ನಷ್ಟದ ಸಂಪೂರ್ಣ ಮಾಹಿತಿಯನ್ನು ಪಡೆದು ತಕ್ಷಣ ಸಮಗ್ರ ಸರ್ವೆ ನಡೆಸುವಂತೆ ಸೂಚಿಸಿದರು. ಗಾಳಿ ಮಳೆಯಿಂದ ಅಡಿಕೆ, ತೆಂಗು ಸೇರಿದಂತೆ ವಿವಿಧ ಬೆಳೆಗಳಿಗೆ ಹಾನಿಯಾಗಿದ್ದು, ಕೃಷಿಕರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಪ್ರಕಾರ ಸೂಕ್ತ ಪರಿಹಾರವನ್ನು ಶೀಘ್ರವಾಗಿ ಮಂಜೂರು ಮಾಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಶಾಸಕಿ ಸೂಚಿಸಿದರು. ಈ ಸಂದರ್ಭದಲ್ಲಿ ಬಿಳಿನೆಲೆ C.A ಬ್ಯಾಂಕ್ ಅಧ್ಯಕ್ಷ ವಾಡ್ಯಪ್ಪ ಗೌಡ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕೃಷ್ಣ ಶೆಟ್ಟಿ ಕಡಬ, ಕಡಬ ಭೂಮಾಪನಾ ಅಧಿಕಾರಿ ಪೃಥ್ವಿ, ಗ್ರಾಮ ಲೆಕ್ಕಾಧಿಕಾರಿ ಸಂತೋಷ್, ಪ್ರಮುಖರಾದ ಮಧುಸೂದನ್ ಕೊಂಬಾರು, ಕಿಶೋರ್ ಶಿರಾಡಿ, ಪ್ರಸಾದ್ ನೆಟ್ಟಣ, ದೀಕ್ಷಿತ್ ಸೇರಿದಂತೆ ಹಲವಾರು ಕಾರ್ಯಕರ್ತರು ಉಪಸ್ಥಿತರಿದ್ದರು. ಕೃಷಿಕರು ಕೂಡ ತಕ್ಷಣ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

ಕೆಟಿಡಿಒ ಯೂನಿಯನ್ ದ.ಕ ಜಿಲ್ಲಾ ವಾರ್ಷಿಕ ಕ್ರೀಡಾಕೂಟ ಸಮಾರೋಪ: ಶಾಸಕಿ ಭಾಗೀರಥಿ ಮುರುಳ್ಯರಿಂದ ಸಾಧಕರಿಗೆ ಸನ್ಮಾನ

Image
ದಕ್ಷಿಣ ಕನ್ನಡ: ಕೆಟಿಡಿಒ (KTDO) ಯೂನಿಯನ್ ದ.ಕ ಜಿಲ್ಲಾ ಘಟಕದ ವತಿಯಿಂದ ಸಂಘದ ಸದಸ್ಯರಿಗಾಗಿ ಹಮ್ಮಿಕೊಳ್ಳಲಾದ ವಾರ್ಷಿಕ ಕ್ರೀಡಾಕೂಟದ ಸಮಾರೋಪ ಸಮಾರಂಭವು ಉತ್ಸಾಹಭರಿತವಾಗಿ ನಡೆಯಿತು. ಕಾರ್ಯಕ್ರಮದಲ್ಲಿ ಸುಳ್ಯ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸದಸ್ಯರಿಗೆ ಸನ್ಮಾನ ನೆರವೇರಿಸಿ ಶುಭಹಾರೈಸಿದರು. ಮಾತನಾಡಿದ ಅವರು, ಕ್ರೀಡೆಗಳು ಆರೋಗ್ಯದ ಜೊತೆಗೆ ಶಿಸ್ತು, ಸಹಕಾರ ಮತ್ತು ತಂಡಭಾವವನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ ಎಂದರು. ಸಂಘಟನೆಗಳ ಮೂಲಕ ಇಂತಹ ಕ್ರೀಡಾಕೂಟಗಳನ್ನು ಆಯೋಜಿಸುವುದು ಸದಸ್ಯರ ಮಧ್ಯೆ ಏಕತೆ ಮತ್ತು ಆತ್ಮೀಯತೆಯನ್ನು ಹೆಚ್ಚಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಈ ಸಂದರ್ಭದಲ್ಲಿ ಯೂನಿಯನ್‌ನ ಜಿಲ್ಲಾ ಕ್ರೀಡಾ ಕಾರ್ಯದರ್ಶಿ ಸಾದೀಕ್ ಕುಳಾಯಿ, ನ್ಯಾಯವಾದಿ ಚೇತನ್ ಪುತ್ತೂರು, ರವಿ ಕಕ್ಕೆಪದವು, ಹರೀಶ್ ಪುತ್ರನ್, ಕಿಶೋರ್ ನೆಟ್ಟಣ, ಜಯಂತ್ ಎಲಿಮಲೆ, ಗ್ರಾಮಪಂಚಾಯತ್ ಸದಸ್ಯ ಗೀರಿಶ್ ಪೈಲಾಜೆ, ದೀಲಿಪ್ ಉಪ್ಪಲಿಕೆ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವಿಭಿನ್ನ ಕ್ರೀಡಾ ಸ್ಪರ್ಧೆಗಳು ಹಾಗೂ ಬಹುಮಾನ ವಿತರಣೆ ಕಾರ್ಯಕ್ರಮಗಳೊಂದಿಗೆ ಸಮಾರೋಪ ಸಮಾರಂಭ ಯಶಸ್ವಿಯಾಗಿ ನೆರವೇರಿತು.

*ನೆಲ್ಯಾಡಿ ಜ್ಞಾನೋದಯ ಬೆಥನಿಯಲ್ಲಿ AI-STEM ಪ್ರದರ್ಶನ ...*

Image
ಮಾರ್ಚ್ 2ರಂದು ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳಿಂದ ನೂತನ ತಂತ್ರಜ್ಞಾನ ಆಧಾರಿತ AI ಮತ್ತು STEM ಪ್ರದರ್ಶನ ನಡೆಯಿತು. ಪ್ರದರ್ಶನ ಉದ್ಘಾಟಿಸಿ ಮಾತನಾಡಿ ದ ಸಂಸ್ಥೆಯ ಪ್ರಾಂಶುಪಾಲರಾದ ಡಾ. ವರ್ಗಿಸ್ ಕೈಪನಡ್ಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೇ ಪ್ರಥಮಬಾರಿಗೆ AI ಶಿಕ್ಷಣವನ್ನು 1 ನೇ ತರಗತಿಯಿಂದಲೇ ಪರಿಚಯಿಸಿದ ಶಿಕ್ಷಣ ಸಂಸ್ಥೆ ನಮ್ಮದು,ಅಲ್ಲದೆ ಸುಸಜ್ಜಿತ STEM ಲ್ಯಾಬ್ ಕೂಡ ಹೊಂದಿದ್ದೇವೆ, 1ನೇ ತರಗತಿಯಿಂದ 9ನೇ ತರಗತಿಯವರೆಗೆ ವಿದ್ಯಾರ್ಥಿಗಳಿಗೆ AI ಶಿಕ್ಷಣ ನೀಡುವುದಲ್ಲದೆ ವಿದ್ಯಾರ್ಥಿಗಳಿಂದಲೇ ವಿವಿಧ ಮಾದರಿಯ ತಂತ್ರಜ್ಞಾನ ಆಧಾರಿತ ಮಾದರಿಗಳನ್ನು ಮಾಡಲಾಗಿದೆ, ಬೆಂಗಳೂರಿನ How N why ಸಂಸ್ಥೆ ಯ ಸಹಕಾರದಿಂದ ತರಗತಿಗಳು ನಡೆಯುತ್ತಿದ್ದುಹೌ N ವೈ ಸಂಸ್ಥೆಯು ದೇಶದಾಧ್ಯಂತ ಸುಮಾರು 1,50,000 ಕ್ಕೂ ಮಿಕ್ಕಿವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿದೆ ಸಂಸ್ಥೆಯ ಇಂಜಿನಿಯರ್ ಸಂಸ್ಥೆಯ ಕ್ಯಾಂಪಸ್ನಲ್ಲಿದ್ದು ಶಿಕ್ಷಕ ಜುಬಿನ್ ಪ್ರಸ್ತುತ ವಿದ್ಯಾರ್ಥಿಗಳಿಗೆ ಬೋಧಿಸುತ್ತಿದ್ದಾರೆ ಎಂದರು. ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ಸುಮಾರು 25 ಕ್ಕೂ ಮಿಕ್ಕಿ ವಿವಿಧ ಮಾದರಿಯ ಪ್ರಾಜೆಕ್ಟ್ಗಳನ್ನು ಪ್ರದರ್ಶಿಸಿದರು.ಕಾಡನೆಗಳ ಬರವನ್ನು ಎಚ್ಚರಿಸುವ ಸೈರನ್,ಗ್ರಾಸ್ ಕಟ್ಟರ್,ಸೆನ್ಸರ್ ಸ್ಟ್ರೀಟ್ ಲೈಟ್,ಮೊಬೈಲ್ ವೈಫೈ ಸೆನ್ಸರ್,ಮನೆಗೆ ಉಪಯೋಗಿಸಬಹುದಾದ ಸ...