ಸುಬ್ರಹ್ಮಣ್ಯದಲ್ಲಿ ಕಳವು ಪ್ರಕರಣ: ಆರೋಪಿಗೆ 7 ತಿಂಗಳ ಜೈಲು ಶಿಕ್ಷೆ.

ಸುಬ್ರಹ್ಮಣ್ಯ: ಕಡಬ ತಾಲೂಕು ಐನೇಕಿದು ಗ್ರಾಮದ ಹಾಲಿನ ಡೈರಿ ಹಾಗೂ ದಿನಸಿ ಅಂಗಡಿಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಸುಳ್ಯ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.
2025 ಆಗಸ್ಟ್ 17 ರಂದು ರಾತ್ರಿ 11 ಗಂಟೆಯ ಸುಮಾರಿಗೆ, ಆರೋಪಿಯು ಹಾಲಿನ ಡೈರಿಯ ಕಬ್ಬಿಣದ ಶಟರ್ ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿ, ಡ್ರಾವರ್ನಲ್ಲಿದ್ದ ₹3000 ನಗದು ಕಳವು ಮಾಡಿದ್ದಾನೆ. ಬಳಿಕ ಪಕ್ಕದಲ್ಲಿದ್ದ ದಿನಸಿ ಅಂಗಡಿಯ ಶಟರ್ ಬೀಗವನ್ನೂ ಮುರಿದು ಒಳನುಗ್ಗಿ ₹2357 ಚಿಲ್ಲರೆ ಹಣ ಕಳವು ಮಾಡಿದ್ದಾನೆ.
ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು (ಕ್ರೈಂ ನಂ. 44/2025), ಆರೋಪಿಯು ತಲೆಮರೆಸಿಕೊಂಡಿದ್ದನು. ನಂತರ ಸುಬ್ರಹ್ಮಣ್ಯ ಠಾಣೆಯ ಪಿಎಸ್ಐ ಕಾರ್ತಿಕ್ ಕಾತರಕಿ ಹಾಗೂ ಸಿಬ್ಬಂದಿಗಳು ಆರೋಪಿಯನ್ನು ಬಂಧಿಸಿ 2025 ಆಗಸ್ಟ್ 20 ರಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಪ್ರಕರಣದ ವಿಚಾರಣೆ ಬಳಿಕ, 2026 ಮಾರ್ಚ್ 18 ರಂದು ಆರೋಪಿಯ ತಪ್ಪೊಪ್ಪಿಗೆ ಮೇರೆಗೆ ಸುಳ್ಯ ಪ್ರಿನ್ಸಿಪಲ್ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶಿವಣ್ಣ ಹೆಚ್.ಆರ್ ಅವರು ತೀರ್ಪು ನೀಡಿದರು.
ಕೋರ್ಟ್ ಆದೇಶದಂತೆ:
BNS ಕಲಂ 331(4) ಅಡಿ 6 ತಿಂಗಳ ಸಾದಾರಣ ಜೈಲು ಶಿಕ್ಷೆ ಹಾಗೂ ₹500 ದಂಡ
BNS ಕಲಂ 305 ಅಡಿ 7 ತಿಂಗಳ ಸಾದಾರಣ ಜೈಲು ಶಿಕ್ಷೆ ಹಾಗೂ ₹500 ದಂಡ
ದಂಡ ಪಾವತಿಸದಿದ್ದಲ್ಲಿ ಹೆಚ್ಚುವರಿ 10 ದಿನಗಳ ಜೈಲು ಶಿಕ್ಷೆ ವಿಧಿಸುವಂತೆ ಆದೇಶಿಸಲಾಗಿದೆ.

Comments

Popular posts from this blog

ಕುಕ್ಕೆ ಸುಬ್ರಹ್ಮಣ್ಯ ರಥಬೀದಿಯಲ್ಲಿ ಭಕ್ತನ ಮೇಲೆ ಸೌಟಿನಿಂದ ಹಲ್ಲೆ – ವೈರಲ್ ವಿಡಿಯೋ, ದೇವಸ್ಥಾನ ಮೆನೇಜರ್ ಮೌನಕ್ಕೆ ಸಾರ್ವಜನಿಕ ಆಕ್ರೋಶ!

ರಾಮಕುಂಜದಲ್ಲಿ ಹೀಗೊಂದು ಬೇನರ್ - ಬೇನರ್ ಅಳವಡಿಸಿ ತಾಕತ್ತು ತೋರಿದ ಜನರು!

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಕಲಿ ವಸತಿಗೃಹ ವೆಬ್‌ಸೈಟ್ ಮೂಲಕ ಸೈಬರ್ ವಂಚನೆ ಆರೋಪ: ಭಕ್ತರು ಎಚ್ಚರ ವಹಿಸುವಂತೆ ಮನವಿ