ನಕಲಿ ಉದ್ದಿಮೆ ಪರವಾನಿಗೆ, ಆಸ್ತಿ ತೆರಿಗೆ ದಾಖಲೆ ಸೃಷ್ಠಿ: ಪೃಥ್ವಿರಾಜ್ ಶೆಟ್ಟಿ ಬಂಧನ.
ಮಂಗಳೂರು : ಮಂಗಳೂರು ಮಹಾ ನಗರ ಪಾಲಿಕೆಯ ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ರಶೀದಿಗಳ ನಕಲಿ ಸೃಷ್ಠಿ ಹಾಗೂ ವಂಚನೆ ಪ್ರಕರಣದಲ್ಲಿ ಪೃಥ್ವಿರಾಜ್ ಶೆಟ್ಟಿ ಎಂಬಾತನನ್ನು ಕಂಕನಾಡಿ ನಗರ ಠಾಣೆ ಪೊಲೀಸರು ಜುಲೈ 25ರಂದು ಬಂಧಿಸಿದ್ದಾರೆ. ಕಂಕನಾಡಿ ಠಾಣಾ ವ್ಯಾಪ್ತಿಯ "ಶ್ರೀ ರಾಜ ದುರ್ಗಾ ಫರ್ನಿಚರ್ ವರ್ಕ್ಸ್" ಅಂಗಡಿಯ ಮಾಲೀಕರಾದ ಬಾಲಕೃಷ್ಣ ಸುವರ್ಣ ಅವರು ತಮ್ಮ ಉದ್ದಿಮೆಗೆ ಸಂಬಂಧಿಸಿದ ದಾಖಲೆಗಳನ್ನು ಪಡೆಯಲು ಮಹಾನಗರ ಪಾಲಿಕೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಉದ್ದಿಮೆ ಪರವಾನಿಗೆ ಹಾಗೂ ಆಸ್ತಿ ತೆರಿಗೆ ದಾಖಲಾತಿಗಳು ನವೀಕರಿಸಿಲ್ಲ ಎಂಬುದು ಬೆಳಕಿಗೆ ಬಂದಿದೆ. ಆದರೆ, ಅವರ ಬಳಿ ಸದ್ಯದ ಉದ್ದಿಮೆ ಪರವಾನಿಗೆ ಮತ್ತು ತೆರಿಗೆ ರಶೀದಿಗಳ ನಕಲಿ ಪ್ರತಿಗಳು ಇರುತ್ತದೆ. ವಿಚಾರಣೆ ವೇಳೆ ಈ ದಾಖಲೆಗಳನ್ನು ಪೃಥ್ವಿರಾಜ್ ಶೆಟ್ಟಿ @ ಮುನ್ನ ಎಂಬಾತನು ರೂಪಿಸಿ ನೀಡಿದ್ದನು ಎಂಬ ಮಾಹಿತಿ ಲಭಿಸಿತು. ಈತನಿಂದ ₹27,990 ಹಣ ಪಡೆದು ನಕಲಿ ದಾಖಲೆಗಳನ್ನು ನೀಡಲಾಗಿದೆ ಎಂಬ ಆರೋಪವೂ ಇದೆ. ಇದೇ ರೀತಿಯಲ್ಲಿ ಪಂಪ್ ವೆಲ್‌ನ ಲಕ್ಷ್ಮೀ ಹಾರ್ಡ್‌ವೇರ್ ಅಂಗಡಿಯ ಮಾಲೀಕರಾದ ದೇವಾಂಗ್ ಕೆ. ಪಟೇಲ್ ಅವರಿಗೂ ಈತನು ನಕಲಿ ಪರವಾನಿಗೆ ಹಾಗೂ ಆಸ್ತಿ ತೆರಿಗೆ ರಶೀದಿಗಳನ್ನು ನೀಡಿದ್ದನು. ಈ ಸಂಬಂಧ ಬರ್ಕೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕವಾಗಿ ಪ್ರಕರಣವೂ ದಾಖಲಾಗಿದೆ. ಆರೋಪಿ ವಿವರ: ಹೆಸರು: ಪೃಥ್ವಿರಾಜ್ ಶೆಟ್ಟಿ @ ಮುನ್ನ ವಯಸ್ಸು: 25 ವರ್ಷ ತಂದೆ: ಗ...