ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಕಲಿ ವಸತಿಗೃಹ ವೆಬ್‌ಸೈಟ್ ಮೂಲಕ ಸೈಬರ್ ವಂಚನೆ ಆರೋಪ: ಭಕ್ತರು ಎಚ್ಚರ ವಹಿಸುವಂತೆ ಮನವಿ
ಸುಬ್ರಹ್ಮಣ್ಯ : ಪ್ರಸಿದ್ಧ ಪುಣ್ಯಕ್ಷೇತ್ರಗಳಿಗೆ ಆಗಮಿಸುವ ಭಕ್ತರನ್ನು ಗುರಿಯಾಗಿಸಿಕೊಂಡು ನಕಲಿ ವೆಬ್‌ಸೈಟ್‌ಗಳ ಮೂಲಕ ವಸತಿಗೃಹಗಳ ಕೊಠಡಿ ಬುಕ್ಕಿಂಗ್ ಹೆಸರಿನಲ್ಲಿ ಸೈಬರ್ ವಂಚನೆ ನಡೆಸುತ್ತಿರುವ ಆರೋಪಗಳು ಹೆಚ್ಚಾಗುತ್ತಿದ್ದು, ಇದೀಗ ಕುಕ್ಕೆ ಸುಬ್ರಹ್ಮಣ್ಯದಲ್ಲಿಯೂ ಇಂತಹದ್ದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ. ಕುಕ್ಕೆ ಸುಬ್ರಹ್ಮಣ್ಯದ ವಸತಿಗೃಹವೊಂದರ ಹೆಸರಿನಲ್ಲಿ ನಕಲಿ ವೆಬ್‌ಸೈಟ್ ಸೃಷ್ಟಿಸಿ, ಅದರಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರ ಫೋಟೋ ಹಾಗೂ ಸ್ಥಳೀಯ ವಸತಿಗೃಹದ ಮಾಹಿತಿಯನ್ನು ಬಳಸಿಕೊಂಡು ಭಕ್ತರನ್ನು ನಂಬಿಸಿ ಹಣ ವರ್ಗಾವಣೆ ಮಾಡಿಸಿಕೊಂಡಿರುವ ಆರೋಪ ಕೇಳಿಬಂದಿದೆ. ಲಭ್ಯವಾದ ದಾಖಲೆಗಳ ಪ್ರಕಾರ, ಎಸ್. ಸುನಿಲ್ ಎಂಬವರು ಅವದೇಶ್ ಕುಮಾರ್ ಎಂಬವರಿಗಾಗಿ ಕೊಠಡಿ ಬುಕ್ಕಿಂಗ್ ಮಾಡುವ ಉದ್ದೇಶದಿಂದ ಜುಲೈ 30ರಂದು ಮಧ್ಯಾಹ್ನ 12.42ಕ್ಕೆ ₹2,100 ಹಾಗೂ ಅದೇ ದಿನ ಮಧ್ಯಾಹ್ನ 12.54ಕ್ಕೆ ₹2,550 ಸೇರಿದಂತೆ ಒಟ್ಟು ₹4,650 ಹಣವನ್ನು ಆನ್‌ಲೈನ್ ಮೂಲಕ ಪಾವತಿಸಿದ್ದಾರೆ ಎನ್ನಲಾಗಿದೆ. ಹಣ ಪಾವತಿಸಿದ ಬಳಿಕ ಕುಕ್ಕೆ ಸುಬ್ರಹ್ಮಣ್ಯ ದೇವರ ಫೋಟೋ ಹೊಂದಿರುವ ‘ಅನಘ ಗೆಸ್ಟ್ ಹೌಸ್, ನಿಯರ್ ಆದಿ ಸುಬ್ರಹ್ಮಣ್ಯ ಟೆಂಪಲ್’ ಎಂಬ ವಿವರಗಳಿರುವ ಬಿಲ್‌ವೊಂದನ್ನು ಕಳುಹಿಸಲಾಗಿದ್ದು, ಅದರಲ್ಲಿ ಆಗಸ್ಟ್ 2, 2026ರಂದು ಚೆಕ್-ಇನ್ ಹಾಗೂ ಆಗಸ್ಟ್ 3ರಂದು ಚೆಕ್-ಔಟ್ ಎಂದು ನಮೂದಿಸಲಾಗಿತ್ತು ಎನ್ನಲಾಗಿದ...