ಮಂಗಳೂರು ದಸರಾ 2025: ಕುದ್ರೋಳಿ ಮೆರವಣಿಗೆ ಸಮಯ ವಾಹನ ಸಂಚಾರ ಮಾರ್ಗ ಮತ್ತು ಸಾರ್ವಜನಿಕರಿಗೆ ಮಹತ್ವದ ಸಲಹೆಗಳು.
ಮಂಗಳೂರು ನಗರದ ಕುದ್ರೋಳಿ ದಸರಾ 2025 ಮೆರವಣಿಗೆಯ ಸಂದರ್ಭದಲ್ಲಿ ಸಾರ್ವಜನಿಕರ ಸುರಕ್ಷತೆ ಮತ್ತು ಸಂಚಾರ ಸುಗಮತೆಗೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಅವರು ಹೀಗೆ ಸೂಚಿಸಿದ್ದಾರೆ: ಮೆರವಣಿಗೆ ದಿನಾಂಕ ಮತ್ತು ಸಮಯ: ದಿನಾಂಕ: 02-10-2025 ಸಂಜೆ 4:00 ಗಂಟೆಯಿಂದ 03-10-2025 ಬೆಳಿಗ್ಗೆ 6:00 ಗಂಟೆವರೆಗೆ ಸ್ಥಳ : ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದಿಂದ ಮೆರವಣಿಗೆ ರಸ್ತೆ ಮೂಲಕ ಸುಂದರವಾಗಿ ಸಾಗುತ್ತದೆ. ಮೆರವಣಿಗೆ ಮಾರ್ಗ: ಕುದ್ರೋಳಿ ದೇವಸ್ಥಾನದ ದ್ವಾರ → ದುರ್ಗಾಮಹಲ್ ಜಂಕ್ಷನ್ → ಮಣ್ಣಗುಡ್ಡೆ ಜಂಕ್ಷನ್ → ನಾರಾಯಣಗುರು ವೃತ್ತ → ಲಾಲ್‌ಭಾಗ್ → ಬಳ್ಳಾಲ್ ಭಾಗ್ → ಕೊಡಿಯಲ್ ಗುತ್ತು ಜಂಕ್ಷನ್ → ಬಿ.ಜಿ.ಸ್ಕೂಲ್ ಜಂಕ್ಷನ್ → ಪಿ.ವಿ.ಎಸ್. ಜಂಕ್ಷನ್ → ನವಭಾರತ್ ವೃತ್ತ → ಬಿಷಪ್ ಹೌಸ್ → ಸಿಟಿ ಸೆಂಟರ್ → ಹಂಪನಕಟ್ಟೆ → ಕೆಬಿ ಕಟ್ಟೆ → ಸಾಫ್ರಾನ್ ಹೊಟೇಲ್ → ಟೆಂಪಲ್ ಸ್ಕ್ವೆರ್ → ಕಾರ್ ಸ್ಟ್ರೀಟ್ → ಬಾಲಾಜಿ ಜಂಕ್ಷನ್ → ನ್ಯೂಚಿತ್ರಾ ಜಂಕ್ಷನ್ → ಅಳಕೆ ಬ್ರಿಡ್ಜ್ → ಕುದ್ರೋಳಿ ದ್ವಾರ. ಸಾರಿಗೆ ಮಾರ್ಪಾಡುಗಳು: ಕೋಟ್ಟಾರ ಚೌಕಿ → ಲೇಡಿಹಿಲ್ ಮುಖಾಂತರ ನಗರದ ಕಡೆಗೆ ಬರುವ ವಾಹನಗಳು: ಕುಂಟಿಕಾನ – ಕೆಪಿಟಿ – ನಂತೂರು ಮುಖಾಂತರ ಸಂಚರಿಸಬೇಕು. ಬಂಟ್ಸ್ ಹಾಸ್ಟೆಲ್ → ಪಿವಿಎಸ್ ಮುಖಾಂತರ ಎಂ.ಜಿ. ರಸ್ತೆ: ಬಂಟ್ಸ್ ಹಾಸ್ಟೆಲ್ – ಭಾರತ್ ಬೀಡಿ – ಬಟ್ಟಗುಡ್ಡ – ಕೆಪಿಟಿ ಅಥವಾ ಮಲ್ಲಿಕಟ್ಟೆ ಮೂಲಕ ಸಂಚರಿಸಬೇಕು. ಕೆ...