Posts

Showing posts from January, 2026

*ಫೆಬ್ರವರಿ 1 ರಂದು ನೆಲ್ಯಾಡಿಯಲ್ಲಿ ಹಿಂದೂ ಸಂಗಮ....*

Image
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನೂರರ ಸಂಭ್ರಮವನ್ನು ಆಚರಿಸಿ ಹಿಂದೂ ಸಮಾಜವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ, ಸಾಮಾಜಿಕ ಪಂಚ ಕಾರ್ಯಗಳನ್ನು ಜಾಗೃತಿ ಗೊಳಿಸುವ ಕಾರ್ಯಕ್ರಮ ವಾಗಿ ಫೆಬ್ರವರಿ 1ರಂದು ನೆಲ್ಯಾಡಿ ಗಾಂಧಿ ಮೈದಾನ ದಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿ ಕಡಬ ಇವರ ನೇತೃತ್ವದಲ್ಲಿ ಗೊಳಿತೊಟ್ಟು, ಕೊಣಾಲು, ನೆಲ್ಯಾಡಿ, ಕೌಕ್ರಾಡಿ, ಇಚಂಪಾಡಿ ಗ್ರಾಮಗಳನೊಳಗೊಂಡ ನೆಲ್ಯಾಡಿ ಮಂಡಲದ ವತಿಯಿಂದ ಬ್ರಹತ್ ಹಿಂದೂ ಸಂಗಮ ಕಾರ್ಯಕ್ರಮ ವನ್ನು ಆಯೋಜಿಸಲಾಗಿದೆ.   ಸಂಜೆ 3ರಿಂದ ಭಜನಾ ಕಾರ್ಯಕ್ರಮ, ವಿಷ್ಣು ಸಹಸ್ರ ನಾಮ ಪಠಣ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಯಲಿದ್ದು ಪಟ್ಲಡ್ಕ ಆದಿ ಮೋಗೇರರ್ಕಳ ಸ್ವಾಮಿ ಕೊರಗಜ್ಜ ದೇವಸ್ಥಾನದ ಉಪಾಧ್ಯಕ್ಷರು ಹರೀಶ್ ಪಟ್ಲಡ್ಕ ಅಧ್ಯಕ್ಷತೆ ವಹಿಸಲಿದ್ದು, ಬೆಂಗಳೂರು ಸತ್ಯ ಸಾಯಿ ಆಸ್ಪತ್ರೆ ಯ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ವಸಂತಿ ರುಕ್ಮಯ ಗೌಡ ದಗ್ಗೋಡಿ, ದೊಂತಿಲ ಸುಬ್ರಮಣ್ಯ ಸ್ವಾಮಿ ದೇವಸ್ಥಾನದ ಆಡಳಿತ ಮೋಕ್ತೆಸರ ಸುಬ್ರಮಣ್ಯ ಬಾಳ್ತೀಲ್ಲಾಯ, ಪಡುಬೆಟ್ಟು ಶ್ರೀ ವಿಷ್ಣು ಮೂರ್ತಿ ದೇವಸ್ಥಾನದ ಆಡಳಿತ ಮೋಕ್ತೆಸರ ಡಾ. ಸುಬ್ರಮಣ್ಯ ಶಬರಾಯ, ಇಚಲಂಪಾಡಿ ಬೀಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೋಕ್ತೆಸರ ಶುಭಕರ ಹೆಗ್ಡೆ, ಕೊಣಾಲು ವಿಷ್ಣು ಮೂರ್ತಿ ದೇವಸ್ಥಾನದ ಆಡಳಿತ ಮೋಕ್ತೆಸರ ಮಾದವ ಸರಳಾಯ, ಕಾವು ಕೌಕ್ರಾಡಿ ತ್ರಿಗುಣಾತ್ಮಿಕ ದುರ್ಗಾಪರಮೇಶ್ವರಿ ದೇವಳದ ಅಧ್ಯಕ್ಷರು ಕುಶಾಲ...

ಕುಕ್ಕೆ ಸುಬ್ರಹ್ಮಣ್ಯ ದೇವರ ಗದ್ದೆಯಲ್ಲಿ ಹರಕೆಯ ಕೊರಗಜ್ಜ ಕೋಲ: ಜ್ಯೋತಿಷಿ ಡಾ.ದ್ವಾರಕನಾಥ್ ಭಾಗಿ.

Image
ಕುಕ್ಕೆ ಸುಬ್ರಹ್ಮಣ್ಯ | ಜನವರಿ 26 ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವರ ಗದ್ದೆಯಲ್ಲಿ ಜನವರಿ 26ರಂದು ಹರೀಶ್ ಇಂಜಾಡಿ ಹಿತೈಷಿಗಳ ಬಳಗದಿಂದ ಆಯೋಜಿಸಲಾದ ಹರಕೆಯ ಕೊರಗಜ್ಜ ಕೋಲ ಭಕ್ತಿಭಾವದಿಂದ ನೆರವೇರಿತು. ಈ ವಿಶೇಷ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರಸಿದ್ಧ ಜ್ಯೋತಿಷಿ ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೇರಿದಂತೆ ರಾಜ್ಯ ರಾಜಕೀಯ ಹಾಗೂ ಪ್ರಸಿದ್ಧ ಗಣ್ಯ ವ್ಯವ್ಯಕ್ತಿಗಳ ಧಾರ್ಮಿಕ ಸಲಹೆಗಾರರಾದ ಡಾ.ದ್ವಾರಕನಾಥ್ ಅವರು ಭಾಗವಹಿಸಿ, ದೈವ ಆರಾಧನೆಯಲ್ಲಿ ಶ್ರದ್ಧಾಪೂರ್ವಕವಾಗಿ ಪಾಲ್ಗೊಂಡರು. ಹರೀಶ್ ಇಂಜಾಡಿ ಅವರ ಆಪ್ತರಾಗಿರುವ ದ್ವಾರಕನಾಥ್ ಅವರು, ಈ ಪವಿತ್ರ ಕೋಲ ಸೇವೆಯಲ್ಲಿ ಉಪಸ್ಥಿತರಿರುವುದು ಕಾರ್ಯಕ್ರಮಕ್ಕೆ ಇನ್ನಷ್ಟು ಧಾರ್ಮಿಕ ಮಹತ್ವವನ್ನು ನೀಡಿತು. ಈ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿ ಅವರು ಸಹ ಕಾರ್ಯಕ್ರಮದಲ್ಲಿ ಹಾಜರಿದ್ದು, ದೈವ ಸೇವೆಗೆ ಸಾಕ್ಷಿಯಾದರು. ಸ್ಥಳೀಯ ಭಕ್ತರು, ಹರಕೆಯೊಂದಿಗೆ ಭಾಗವಹಿಸಿದವರು ಮತ್ತು ಹಿತೈಷಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ದೈವಕ್ಕೆ ಪೂಜೆ ಸಲ್ಲಿಸಿದರು. ಕೊರಗಜ್ಜ ದೈವದ ಕೋಲವು ತುಳುನಾಡಿನ ಪರಂಪರೆ, ನಂಬಿಕೆ ಹಾಗೂ ಶ್ರದ್ಧೆಯ ಪ್ರತೀಕವಾಗಿದ್ದು, ಕುಕ್ಕೆ ಸುಬ್ರಹ್ಮಣ್ಯದ ಪವಿತ್ರ ಪರಿಸರದಲ್ಲಿ ಈ ಸೇವೆ ನಡೆಯುವುದರಿಂದ ಭಕ್ತರಲ್ಲಿ ವಿಶೇಷ ಭಕ್ತಿಭಾವ ಮೂಡಿತು.

ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಕೊರಗಜ್ಜ ದೈವಸ್ಥಾನಕ್ಕೆ ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬೇಟಿ.

Image
ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಕೊರಗಜ್ಜ ದೈವಸ್ಥಾನಕ್ಕೆ ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ ಕುಕ್ಕೆ ಸುಬ್ರಹ್ಮಣ್ಯ, ದಕ್ಷಿಣ ಕನ್ನಡ: ಪವಿತ್ರ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮೈಸೂರು ಮಹಾರಾಜರಾದ ಶ್ರೀ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಭೇಟಿ ನೀಡಿ, ದೇವರ ಗದ್ದೆಯಲ್ಲಿರುವ ಪ್ರಸಿದ್ಧ ಕೊರಗಜ್ಜ ದೈವಸ್ಥಾನಕ್ಕೆ ವಿಶೇಷ ಬೇಟಿ ನೀಡಿದರು. ಮಹಾರಾಜರು ಕೊರಗಜ್ಜ ದೈವಕ್ಕೆ ಪೂಜೆ ಸಲ್ಲಿಸಿ ಭಕ್ತಿಭಾವದಿಂದ ಪ್ರಾರ್ಥನೆ ನೆರವೇರಿಸಿದರು. ಈ ವೇಳೆ ದೈವದ ಪರಂಪರೆ ಮಹತ್ವ ಹಾಗೂ ತುಳುನಾಡಿನ ಸಾಂಸ್ಕೃತಿಕ ಆಚರಣೆಗಳ ಕುರಿತು ಮಾಹಿತಿ ಪಡೆದುಕೊಂಡರು. ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಹರೀಶ್ ಇಂಜಾಡಿ ಅವರು ಮಹಾರಾಜರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಅಲ್ಲದೆ ಅನೇಕ ಭಗವದ್ಭಕ್ತರು ಹಾಗೂ ಭಕ್ತ ಸಮುದಾಯದವರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಧಾರ್ಮಿಕ ಗೌರವ ಹೆಚ್ಚಿಸಿದರು. ಮೈಸೂರು ಮಹಾರಾಜರ ಭೇಟಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಮತ್ತೊಮ್ಮೆ ಪ್ರಸ್ತಾಪಿಸುವಂತಾಗಿದ್ದು, ಭಕ್ತರಲ್ಲಿ ಸಂತೋಷ ಹಾಗೂ ಭಕ್ತಿಭಾವವನ್ನು ಮೂಡಿಸಿದೆ.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಮೈಸೂರು ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭೇಟಿ.

Image
ಕುಕ್ಕೆ ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮೈಸೂರು ಮಹಾರಾಜರಾದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಜನವರಿ 27ರಂದು ಭೇಟಿ ನೀಡಿ ದೇವರ ದರ್ಶನ ಪಡೆದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ದೇಶದ ಸೌಹಾರ್ದತೆ, ಜನಕಲ್ಯಾಣ ಹಾಗೂ ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಮಹಾರಾಜರ ಆಗಮನದ ಹಿನ್ನೆಲೆಯಲ್ಲಿ ದೇವಸ್ಥಾನ ಆವರಣದಲ್ಲಿ ಭಕ್ತಿಭಾವ ತುಂಬಿದ ವಾತಾವರಣ ನಿರ್ಮಾಣವಾಗಿತ್ತು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿ ಹಾಗೂ ದೇವಾಲಯದ ಅಧಿಕಾರಿಗಳು ಮೈಸೂರು ಮಹಾರಾಜರಿಗೆ ಅದ್ಭುತ ಪೂರ್ವ ಸ್ವಾಗತ ನೀಡಿ ಗೌರವಿಸಿದರು. ದೇವಾಲಯದ ಪರಂಪರೆಯಂತೆ ಶಾಲು ಹೊದಿಸಿ, ಫಲಪುಷ್ಪಗಳನ್ನು ಅರ್ಪಿಸಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಮೈಸೂರು ರಾಜವಂಶದ ಮಹಾರಾಜರ ಈ ಭೇಟಿ ಕ್ಷೇತ್ರದ ಭಕ್ತರಲ್ಲಿ ವಿಶೇಷ ಸಂತಸ ಮೂಡಿಸಿದ್ದು, ಶ್ರೀ ಕ್ಷೇತ್ರದ ಧಾರ್ಮಿಕ ಮಹತ್ವಕ್ಕೆ ಮತ್ತೊಂದು ಗೌರವ ಸೇರ್ಪಡೆಗೊಂಡಂತಾಗಿದೆ ಎಂದು ಭಕ್ತರು ಅಭಿಪ್ರಾಯಪಟ್ಟರು.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೊರಗಜ್ಜ ದೈವಕ್ಕೆ ವಿಶೇಷ ಕೋಲ ಸೇವೆಹರೀಶ್ ಇಂಜಾಡಿ ಹಿತೈಷಿ ಬಳಗದಿಂದ ಭಕ್ತಿಪೂರ್ಣ ಅರ್ಪಣೆ.

Image
ಕುಕ್ಕೆ ಸುಬ್ರಹ್ಮಣ್ಯ , ಜನವರಿ 26: ಕುಕ್ಕೆ ಸುಬ್ರಹ್ಮಣ್ಯದ ದೇವರಗದ್ದೆ ಕೊರಗಜ್ಜ ದೈವಸ್ಥಾನದಲ್ಲಿ ಜನವರಿ 26ರ ರಾತ್ರಿ ಏಳು ಗಂಟೆಗೆ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿ ಅವರ ಹಿತೈಷಿಗಳ ಬಳಗದಿಂದ ಕೊರಗಜ್ಜ ದೈವಕ್ಕೆ ವಿಶೇಷ ಕೋಲ ಸೇವೆ ಭಕ್ತಿಭಾವದಿಂದ ಜರಗಿತು. ಸುಮಾರು 15 ವರ್ಷಗಳಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ರಾಜಕೀಯ ಹಾಗೂ ಸಾರ್ವಜನಿಕ ಕ್ಷೇತ್ರದಲ್ಲಿ ಸಕ್ರಿಯ ಸೇವೆ ಸಲ್ಲಿಸಿರುವ ಹರೀಶ್ ಇಂಜಾಡಿ ಅವರು, ಗ್ರಾಮ ಪಂಚಾಯತ್ ಸದಸ್ಯರಾಗಿ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅರಣ್ಯ ಸಮಿತಿ ಅಧ್ಯಕ್ಷರಾಗಿ ಹಲವು ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿರ್ವಹಿಸಿಕೊಂಡು ಬಂದಿದ್ದಾರೆ. ಅವರ ಸೇವಾ ಮನೋಭಾವ ಮತ್ತು ಸಮಾಜಮುಖಿ ಕಾರ್ಯಗಳನ್ನು ಗಮನಿಸಿ, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷರಾಗಿ ನೇಮಕವಾಗಬೇಕೆಂಬ ಹರಕೆಯನ್ನು ಹಿತೈಷಿ ಬಳಗವು ಈ ಹಿಂದೆ ಕೊರಗಜ್ಜ ದೈವದ ಬಳಿ ಬೇಡಿಕೊಂಡಿದ್ದರು. ಹರಕೆ ಪೂರೈಸಿದ ಹಿನ್ನೆಲೆಯಲ್ಲಿ, ಕೊರಗಜ್ಜ ದೈವಕ್ಕೆ ಕೃತಜ್ಞತೆಯ ಸೂಚಕವಾಗಿ ಜನವರಿ 26ರಂದು ವಿಶೇಷ ಕೋಲ ಸೇವೆಯನ್ನು ಅರ್ಪಿಸಲಾಯಿತು. ಈ ಧಾರ್ಮಿಕ ಕಾರ್ಯಕ್ರಮದಲ್ಲಿ ಹರೀಶ್ ಇಂಜಾಡಿ ಅವರ ನೂರಾರು ಸಂಖ್ಯೆಯ ಹಿತೈಷಿಗಳು, ಭಕ್ತರು ಹಾಗೂ ಗ್ರಾಮಸ್ಥರು ಪಾಲ್ಗೊಂಡು, ಕೊರಗಜ್ಜ ದೈವಕ್ಕೆ ವಿಶೇಷ ಸೇವೆ ಸಲ್ಲಿಸಿ ಧಾರ್ಮಿಕ ಶ್ರದ್ಧೆಯನ್ನು ವ್ಯಕ್ತಪಡಿಸಿದರು. ಸಂಪೂರ್ಣ ಕಾರ್ಯಕ್ರಮ ಭಕ್ತಿ,...

ಕುಕ್ಕೆ ಸುಬ್ರಹ್ಮಣ್ಯದಲ್ಲಿ ವೈಭವದ ವಿಶ್ವಸಂಭ್ರಮ.

Image
ಕುಕ್ಕೆ ಸುಬ್ರಹ್ಮಣ್ಯ :ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಸುಬ್ರಹ್ಮ ಪೂರ್ಣಪ್ರಜ್ಞ ವಿದ್ಯಾಪೀಠದ ಶ್ರೀಮದ್ ಬ್ರಹ್ಮಸೂತ್ರ–ಅನುವ್ಯಾಖ್ಯಾನ–ನ್ಯಾಯಸುಧಾಮಂಗಳ ಮಹೋತ್ಸವದ ಎರಡನೇ ದಿನ ವಿವಿಧ ಧಾರ್ಮಿಕ, ಶಾಸ್ತ್ರೀಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಹಾಗೂ ವಿಜೃಂಭಣೆಯಿಂದ ನೆರವೇರಿದವು. ಬೆಳಿಗ್ಗೆ 7.30 ರಿಂದ ಅನೇಕ ಪಂಡಿತರು ಹಾಗೂ ಮಹಿಳಾಮಣಿಗಳಿಂದ ಶ್ರೀವಿಷ್ಣುಸಹಸ್ರನಾಮ ಪಾರಾಯಣ ನಡೆಯಿತು. ನಂತರ ಬೆಳಿಗ್ಗೆ 8.30 ರಿಂದ ಶ್ರೀ ನ್ಯಾಯಸುಧಾ ವಿದ್ಯಾರ್ಥಿಗಳಿಂದ ಸುಧಾನುವಾದ ಪಂಡಿತರ ಸಮಕ್ಷಮದಲ್ಲಿ ನೆರವೇರಿತು. ಅನಂತರ ನವದೆಹಲಿಯ ರಾಷ್ಟ್ರೀಯ ವಿಶ್ವವಿದ್ಯಾಲಯ, ಸುಬ್ರಹ್ಮಣ್ಯ ಮಠದ ವೇದವ್ಯಾಸ ಸಂಶೋಧನ ಕೇಂದ್ರಗಳ ಸಹಯೋಗದಲ್ಲಿ ರಾಷ್ಟ್ರೀಯ ವಿದ್ವತ್ ಸಮ್ಮೇಳನ ಆಯೋಜಿಸಲಾಯಿತು. ಈ ಸಂದರ್ಭದಲ್ಲಿ ಪರಮಪೂಜ್ಯ ಸುಬ್ರಹ್ಮಣ್ಯ ಮಠಾಧೀಶರಾದ ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದರು ಹಾಗೂ ಪೇಜಾವರ ಮಠಾಧೀಶರಾದ ಶ್ರೀ ವಿಶ್ವ ಪ್ರಸನ್ನತೀರ್ಥ ಶ್ರೀಪಾದರು ದಿವ್ಯ ಸಾನಿಧ್ಯ ವಹಿಸಿದ್ದರು. “ಮಧ್ವ ಸಿದ್ಧಾಂತದ ಅಸಾಧಾರಣ ಕೊಡುಗೆಗಳು” ಎಂಬ ವಿಷಯದಡಿ ನಡೆದ ಪ್ರಥಮ ಸಮ್ಮೇಳನದ ಅಧ್ಯಕ್ಷತೆಯನ್ನು ವಿದ್ವಾಂಸರಾದ ಡಾ. ಆನಂದತೀರ್ಥ ನಾಗಸಂಪಿಗೆ ವಹಿಸಿದ್ದರು. ಸುಬ್ರಹ್ಮಣ್ಯ ಭಟ್ ಗುಂಡಿಬೈಲು ಅವರು ಮಧ್ವ ಸಿದ್ಧಾಂತದಲ್ಲಿನ ತಂತ್ರಶಾಸ್ತ್ರದ ಕುರಿತು, ಡಾ. ವಂಶಿಕೃಷ್ಣ ಆಚಾರ್ಯರು ಅಷ್ಟಾಂಗ ಯೋಗ...

*ನೆಲ್ಯಾಡಿ 2028 ನೇ ಮದ್ಯ ವರ್ಜನ ಶಿಬಿರಕ್ಕೆ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಬೇಟಿ,ಸಂಭ್ರಮದ ಸ್ವಾಗತ*

Image
ನೆಲ್ಯಾಡಿ: ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ನೆಲ್ಯಾಡಿ-ಕೌಕ್ರಾಡಿ ಇದರ ಆಶ್ರಯದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಡಬ ತಾಲೂಕು, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಬೆಳ್ತಂಗಡಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಕಡಬ ತಾಲೂಕು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ನೆಲ್ಯಾಡಿ-ಕೌಕ್ರಾಡಿ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಸಭಾಂಗಣದಲ್ಲಿ ನಡೆಯುತ್ತಿರುವ ೨೦೩೮ನೇ ಮದ್ಯವರ್ಜನ ಶಿಬಿರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು ಜ.೨೫ರಂದು ಭೇಟಿ ನೀಡಿದರು. ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರು, ಮದ್ಯವರ್ಜನ ಶಿಬಿರದ ಮೂಲಕ ಪಾನಮುಕ್ತರಾದವರ ಕುಟುಂಬದ ಹೆಣ್ಣು ಮಕ್ಕಳ ಮುಖದಲ್ಲಿ ನಗು ಕಾಣುತ್ತಿದ್ದೇವೆ. ಇಂತಹ ಶಿಬಿರಗಳ ಬಗ್ಗೆ ಮಹಿಳೆಯರು ಹೆಚ್ಚು ಸಂತಸ ಪಡುತ್ತಿದ್ದಾರೆ. ಶಿಬಿರದಲ್ಲಿ ಮದ್ಯ ವ್ಯಸನಿಗಳು ವ್ಯಕ್ತಪಡಿಸುವ ಅನಿಸಿಕೆ ಕೇಳುವಾಗ ತುಂಬಾ ವ್ಯಥೆಯಾಗುತ್ತಿದೆ. ಆದ್ದರಿಂದ ಮದ್ಯವರ್ಜನ ಶಿಬಿರದಲ್ಲಿ ಪಾಲ್ಗೊಂಡವರೆಲ್ಲರೂ ಮನಸ್ಸು ಗಟ್ಟಿ ಮಾಡಿಕೊಂಡಿರಬೇಕು. ಮತ್ತೆ ಮದ್ಯ ವ್ಯಸನಿಗಳು ಆಗಬಾರದು. ಯಾವುದೋ ತ್ಯಾಗಕ್ಕೂ ಸಿದ್ಧರಾಗಿರಬೇಕು ಎಂದು ಡಾ| ಡಿ.ವೀರೇಂದ್ರ ಹೆಗ್ಗಡೆ ಕರೆ ನೀಡಿದರು. ಪಾನಮುಕ್ತರಾದವರ ಮಕ್ಕಳೂ ಉನ್ನತ ವ್ಯಾಸಂಗ ಪಡೆದು ಉದ್ಯೋಗದಲ್ಲಿದ್ದಾರೆ....

ಖ್ಯಾತ ನಿರ್ದೇಶಕ ಆಟ್ಲೀ ಕುಟುಂಬ ಸಮೇತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದರ್ಶನ – ಅನ್ನದಾನ ನಿಧಿಗೆ ₹10 ಲಕ್ಷ ದೇಣಿಗೆ

Image
ಸುಬ್ರಹ್ಮಣ್ಯ (ದಕ್ಷಿಣ ಕನ್ನಡ):ಭಾರತೀಯ ಚಿತ್ರರಂಗದ ಖ್ಯಾತ ನಿರ್ದೇಶಕ, ‘ಜವಾನ್’ ಚಿತ್ರದ ನಿರ್ದೇಶಕ ಆಟ್ಲೀ (ಅರುಣ್ ಕುಮಾರ್) ಅವರು ಪತ್ನಿ ಪ್ರಿಯಾ ಹಾಗೂ ಕುಟುಂಬದೊಂದಿಗೆ ಪ್ರಸಿದ್ಧ ಶ್ರೀ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದರು. ದೇವಾಲಯದ ಪವಿತ್ರ ವಾತಾವರಣದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಆಟ್ಲೀ ದಂಪತಿ, ಶ್ರೀ ದೇವರ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿದರು. ಈ ವೇಳೆ ದೇವಸ್ಥಾನದ ಆಡಳಿತ ಸಮಿತಿ ಪದಾಧಿಕಾರಿಗಳು ಹಾಗೂ ಭಕ್ತರ ನಡುವೆ ಅವರು ದೇವರ ದರ್ಶನ ಪಡೆದರು. ಈ ಭೇಟಿ ಸಂದರ್ಭದಲ್ಲೇ ಆಟ್ಲೀ ಅವರು ದೇವಸ್ಥಾನದ ಅನ್ನದಾನ ನಿಧಿಗೆ ₹10 ಲಕ್ಷ ಮೊತ್ತದ ದೇಣಿಗೆಯನ್ನು ಚೆಕ್ ಮೂಲಕ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರು ಶಾಲು ಹೊದಿಸಿ ಆಟ್ಲೀ ಅವರನ್ನು ಗೌರವಿಸಿದರು. ಗಮನಾರ್ಹವಾಗಿ, ಆಟ್ಲೀ ಅವರು ಈ ಹಿಂದೆ ಸಂತಾನ ಪ್ರಾಪ್ತಿಗಾಗಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದರು. ದೇವರ ಅನುಗ್ರಹದಿಂದ ಸಂತಾನ ಲಭಿಸಿದ ಹಿನ್ನೆಲೆ, ಕೃತಜ್ಞತೆಯೊಂದಿಗೆ ಪುನಃ ಕುಕ್ಕೆಗೆ ಆಗಮಿಸಿ ದೇವರ ಆಶೀರ್ವಾದ ಪಡೆದಿದ್ದಾರೆ ಎಂದು ತಿಳಿದುಬಂದಿದೆ. ಪೂಜೆಯ ಬಳಿಕ ಆಟ್ಲೀ ಅವರು ಕೆಲ ಸಮಯ ದೇವಸ್ಥಾನ ಆವರಣದಲ್ಲಿ ಭಕ್ತರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿದರು. ಈ ಕ್ಷಣಗಳ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗ...

ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಸುಮಾರು ₹9 ಲಕ್ಷ ಮೌಲ್ಯದ ಬೆಳ್ಳಿ ದಾನ; ಬೆಂಗಳೂರು ವೈದ್ಯ ದಂಪತಿಯಿಂದ ವಿಶೇಷ ಸೇವೆ.

Image
ಕುಕ್ಕೆ ಶ್ರೀ ಸುಬ್ರಹ್ಮಣ್ಯ:ಸುಮಾರು 9 ಲಕ್ಷ ರೂಪಾಯಿ ಮೌಲ್ಯದ 3 ಕೆ.ಜಿ ಬೆಳ್ಳಿ ದಾನವನ್ನು ಬೆಂಗಳೂರು ನಿವಾಸಿಗಳಾದ ಡಾ. ಕುಶಾಲ್ ಲಕ್ಷ್ಮಣ್ ಹಾಗೂ ಅವರ ಪತ್ನಿ ಡಾ. ಗೃತ ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಮರ್ಪಿಸಿದರು. ಜನವರಿ 24ರಂದು ದೇವಸ್ಥಾನಕ್ಕೆ ಆಗಮಿಸಿದ ವೈದ್ಯ ದಂಪತಿಗಳು ಶ್ರೀ ಸುಬ್ರಹ್ಮಣ್ಯ ದೇವರಿಗೆ ವಿಶೇಷ ಪೂಜೆ ಹಾಗೂ ಸೇವೆ ಸಲ್ಲಿಸಿದರು. ಈ ಸಂದರ್ಭದಲ್ಲಿ ದೇವರಿಗೆ ಸಮರ್ಪಿಸಲಾದ ಬೆಳ್ಳಿ ದಾನವನ್ನು ದೇವಾಲಯದ ಆಡಳಿತದ ಮೂಲಕ ಸ್ವೀಕರಿಸಲಾಯಿತು. ಕಾರ್ಯಕ್ರಮದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಸತೀಶ್ ಕುಜುಗೋಡು, ಸುಳ್ಯ ವೆಂಕಟರಮಣ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಪಿ. ವಿಶ್ವನಾಥ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ವೆಂಕಟರಮಣ ಸೊಸೈಟಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಪಿ. ವಿಶ್ವನಾಥ್ ಅವರ ಆಪ್ತರಾಗಿರುವ ಡಾ. ಕುಶಾಲ್ ಲಕ್ಷ್ಮಣ್ ಹಾಗೂ ಡಾ. ಗೃತ ಅವರು ಭಕ್ತಿಭಾವದಿಂದ ಶ್ರೀ ದೇವರಿಗೆ ಸೇವೆ ಸಲ್ಲಿಸಿ ದಾನ ಸಮರ್ಪಿಸಿದ್ದು ಭಕ್ತರ ಮೆಚ್ಚುಗೆಗೆ ಪಾತ್ರವಾಯಿತು. ದಾನ ಮತ್ತು ಸೇವೆಯ ಹಿನ್ನೆಲೆಯಲ್ಲಿ ವೈದ್ಯ ದಂಪತಿಗಳನ್ನು ದೇವಸ್ಥಾನದ ವತಿಯಿಂದ ವಿಶೇಷವಾಗಿ ಗೌರವಿಸಲಾಯಿತು.

ಪಂಜದಲ್ಲಿ ಮಯೂರ ಸಿವಿಲ್ ಕನ್ಸ್ಟ್ರಕ್ಷನ್ ಹಾಗೂ ಕನ್ಸಲ್ಟೆನ್ಸಿ ಸೇವಾ ಕೇಂದ್ರ ಶುಭಾರಂಭ.

Image
ಸುಬ್ರಹ್ಮಣ್ಯ ಜನವರಿ 23: ಪಂಜದ ನಾಯರ್ಕೆರೆ ಸಿರಿ ಕಾಂಪ್ಲೆಕ್ಸ್ ನಲ್ಲಿ ಶುಕ್ರವಾರ ಅಭಿಷೇಕ್ ನಡುತೋಟ ಮಾಲಕತ್ವದ ಮಯೂರ ಸಿವಿಲ್ ಕನ್ಸ್ಟ್ರಕ್ಷನ್ಸ್ ಹಾಗೂ ಕನ್ಸಲ್ಟೆನ್ಸಿ ಸೇವಾ ಕೇಂದ್ರ ಶುಭಾರಂಭಗೊಂಡಿತು.  ಸುಬ್ರಹ್ಮಣ್ಯ ದ ನಿವೃತ್ತ ಪ್ರಾಂಶುಪಾಲ ನೀಲಪ್ಪ ಗೌಡ ನಡು ತೋಟ ಸೇವಾ ಕೇಂದ್ರವನ್ನ ದೀಪ ಬೆಳಗಿಸುವುದರ ಮೂಲಕ ವಿದ್ಯುಕ್ತವಾಗಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಪಂಜ ಸಿಎ ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇಮಿರಾಜ ಪಲ್ಲೋಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಸುಮತಿ ದಿವಾಕರ ನಡುತೋಟ,ಕಾರ್ತಿಕ್ ನಡುತೋಟ, ಹೇಮ ವಸಂತ ಚಿದ್ಗಲ್, ಶ್ರೀಮತಿ ಶಾಂತಿ ನೀಲಪ್ಪಗೌಡ  ನಡು ತೋಟ, ಶ್ರೀಮತಿ ಲೀಲಾಕುಮಾರಿ ವಿಶ್ವನಾಥ ನಡುತೋಟ, ಅನಿತಾ ಗಿರಿಧರ ನಡುತೋಟ ಗೀತಾ ವಿಜಯಕುಮಾರ ನಡುತೋಟ , ಗಿರಿಧರ ನಡು ತೋಟ, ಸಿರಿಕಾಂಪ್ಲೆಕ್ಸ್ ಸಿಬ್ಬಂದಿ ವರ್ಗದವರು ಸ್ನೇಹಿತರು ಉಪಸ್ಥಿತರಿದ್ದರು.  ನಿವೃತ್ತ ಉಪನ್ಯಾಸಕ ವಿಶ್ವನಾಥ ನಡು ತೋಟ ಸ್ವಾಗತಿಸಿ ನಿರೂಪಿಸಿದ ಕಾರ್ಯಕ್ರಮದ ಕೊನೆಯಲ್ಲಿ ಮುಖ್ಯ ನಿವೃತ್ತ ಮುಖ್ಯ ಶಿಕ್ಷಕ ವಿಜಯಕುಮಾರ ನಡುತೋಟ ಧನ್ಯವಾದ ಸಮರ್ಪಿಸಿದರು.

ಸುಬ್ರಹ್ಮಣ್ಯದಲ್ಲಿ ತಾಲೂಕು ಭಜನಾ ಉತ್ಸವದ ಪೂರ್ವಭಾವಿ ಸಭೆ.

Image
ಸುಬ್ರಮಣ್ಯ ಜನವರಿ 23 : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ , ಸುಳ್ಯ ತಾಲೂಕು, ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ, ಶ್ರೀ ಮಂಜುನಾಥೇಶ್ವರ ಬಜನಾ ಪರಿಷತ್ ಸುಳ್ಯ ತಾಲೂಕು, ಭಜನಾೋತ್ಸವ 2026 ಸಮಿತಿ ಸುಬ್ರಹ್ಮಣ್ಯ ವಲಯ, ಮತ್ತು ಸ್ಥಳೀಯ ಎಲ್ಲಾ ಸಂಘ ಸಂಸ್ಥೆಗಳ ಹಾಗೂ ಭಜಕರ ಸಹಯೋಗದಲ್ಲಿ ಜನವರಿ 8ರಂದು ಆದಿತ್ಯವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ರಥಬೀದಿ ಸಭಾಂಗಣದಲ್ಲಿ ಫೆಬ್ರವರಿ 8 ಆದಿತ್ಯವಾರದಂದು ನಡೆಯುವ ತಾಲೂಕು ಭಜನೋತ್ಸವದ ಪೂರ್ವಭಾವಿ ಸಭೆಯು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಶುಕ್ರವಾರ ನಡೆಯಿತು.  ಕಾರ್ಯಕ್ರಮವನ್ನು ರವಿಕಕ್ಕೆ ಪದವು ಸಮಾಜ ಸೇವಾ ಟ್ರಸ್ಟ್ ನ ಸಂಸ್ಥಾಪಕ ಡಾl ರವಿ ಕಕ್ಕೆ ಪದವು ಅವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಸಭಾಧ್ಯಕ್ಷತೆಯನ್ನ ತಾಲೂಕು ಭಜನಾ ಉತ್ಸವದ ಗೌರವಾಧ್ಯಕ್ಷ ಗಿರಿಧರ ಸ್ಕಂದ ವಹಿಸಿದ್ದರು. ಧರ್ಮಸ್ಥಳ ಗ್ರಾಮಾ ಅಭಿವೃದ್ಧಿ ಯೋಜನೆಯ ಸುಳ್ಯ ತಾಲೂಕು ಯೋಜನಾಧಿಕಾರಿ ಮಾಧವ ಗೌಡ ಅವರು ಪ್ರಾಸ್ತಾವಿಕ ಮಾತುಗಳೊಂದಿಗೆ ಭಜನೋತ್ಸವದ ರೂಪರೇಷೆಗಳನ್ನು ವಿವರವಾಗಿ ಸಭೆಗೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕು ಬಜನೋತ್ಸವದ ಸುಬ್ರಹ್ಮಣ್ಯ ವಲಯದ ಪ್ರಮುಖರಾದ ವಿಮಲ ರಂಗಯ್ಯ ಗಿರೀಶ್ ಪೈಲಾಜ್, ಸತೀಶ ಟಿ ಎನ್,ಚಂದ್ರಶೇಖರ ಬಸವನ ಮೂಲ ಕುಲಕುಂದ, ಬಾಲಕೃಷ್ಣ ಕೊಪ್ಪಡ್ಕ ತೀರ್ಥರಾಮ ದೋಣಿಪಳ್ಳ ಗಂಗಾಧರ ಭಟ್ ಕಲ್ಮ ಕಾರು, ಗಿರೀಶ...

ಸಂಗೀತ ಸರಸ್ವತಿಯ ಆರಾಧನೆಗೆ ಬಜತ್ತೂರಿನಲ್ಲಿ ಮಹಾ ವೇದಿಕೆಕಾಂಚನ ಗುರುಗಳ 105ನೇ ಜನ್ಮವರ್ಷಕ್ಕೆ ಅಮರ ಸಂಗೀತ ನಮನ.

Image
ಫೆ.5ರಿಂದ 7ರವರೆಗೆ ನೂತನ ಸಂಗೀತಶಾಲೆ, ಸಭಾಭವನ ಲೋಕಾರ್ಪಣೆ – ರಾಷ್ಟ್ರಮಟ್ಟದ ಗಣ್ಯರ ಪಾಲ್ಗೊಳ್ಳಿಕೆ** ಬಜತ್ತೂರು (ಪುತ್ತೂರು): ಸ್ಥಾಪಕಗುರು ಸಂಗೀತರತ್ನ ಕಾಂಚನ ವೆಂಕಟಸುಬ್ರಹ್ಮಣ್ಯಂ ಅವರ 105ನೇ ಜನ್ಮವರ್ಷ ಮಹೋತ್ಸವ ಹಾಗೂ 72ನೇ ವರ್ಷದ ಕಾಂಚನೋತ್ಸವದ ಅಂಗವಾಗಿ, ಕಾಂಚನ ಶ್ರೀ ಲಕ್ಷ್ಮೀನಾರಾಯಣ ಸಂಗೀತ ಮ್ಯೂಸಿಕ್ ಅಕಾಡೆಮಿ ಟ್ರಸ್ಟ್ (ರಿ.) ವತಿಯಿಂದ ಬಜತ್ತೂರು ಗ್ರಾಮದಲ್ಲಿ ನಿರ್ಮಿಸಲಾದ ನೂತನ ಸಂಗೀತಶಾಲೆ, ಸಭಾಭವನ ಹಾಗೂ ಭೋಜನಶಾಲೆಗಳ ಲೋಕಾರ್ಪಣೆ ಫೆಬ್ರವರಿ 5ರಿಂದ 7, 2026ರವರೆಗೆ ವಿಜೃಂಭಣೆಯಿಂದ ನಡೆಯಲಿದೆ. ಮೂರು ದಿನಗಳ ಕಾಲ ನಡೆಯುವ ಈ ಐತಿಹಾಸಿಕ ಸಂಗೀತ ಹಬ್ಬದಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ಸಂಗೀತ ಕಛೇರಿಗಳು, ಪ್ರಶಸ್ತಿ ಪ್ರದಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಫೆಬ್ರವರಿ 5, 2026 (ಗುರುವಾರ) ಸಂಜೆ 5 ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಸಂಗೀತ ಕಾರ್ಯಕ್ರಮಗಳಿಗೆ ಚಾಲನೆ ದೊರೆಯಲಿದೆ. ಫೆಬ್ರವರಿ 6, 2026 (ಶುಕ್ರವಾರ) ಸಂಜೆ 4.30ಕ್ಕೆ ನೂತನ ಸಂಗೀತಶಾಲೆ ಕಟ್ಟಡ ಮತ್ತು ಸಭಾಭವನದ ಉದ್ಘಾಟನಾ ಸಮಾರಂಭ ನಡೆಯಲಿದ್ದು, ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಪರಮಪೂಜ್ಯ ಪದ್ಮವಿಭೂಷಣ ಡಾ. ವೀರೇಂದ್ರ ಹೆಗ್ಗಡೆಯವರು ವಹಿಸಲಿದ್ದಾರೆ. ಉದ್ಘಾಟನೆ ಮಾಡುವವರು ಉಪಮುಖ್ಯಮಂತ್ರಿ ಶ್ರೀ ...

ಕುಲಕುಂದದಲ್ಲಿ ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ – ವಿಚಾರಗೋಷ್ಠಿ, ಪರಿಕರಗಳ ಪ್ರಾತ್ಯಕ್ಷತೆ

Image
ಸುಬ್ರಹ್ಮಣ್ಯ, ಜನವರಿ 19: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಪಶುಪಾಲನ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಮಂಗಳೂರು, ಶ್ರೀ ಬಸವೇಶ್ವರ ಚಾರಿಟೇಬಲ್ ಟ್ರಸ್ಟ್ ಹಾಗೂ ಶ್ರೀ ಬಸವೇಶ್ವರ ದೇವಸ್ಥಾನ ಬಸವನ ಮೂಲ ಕುಲಕುಂದ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ, ಶ್ರೀ ಸುಬ್ರಹ್ಮಣ್ಯ ಮಠ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್, ಪಶು ಆಸ್ಪತ್ರೆ ಸುಬ್ರಹ್ಮಣ್ಯ ಹಾಗೂ ಯೆಣ್ಣೆಕಲ್ಲು, ಐನೆಕೀದು, ಬಳ್ಪ, ಕಾಯುತ್ತಡ್ಕ, ಬೀದಿಗುಡ್ಡೆ ಹಾಲು ಉತ್ಪಾದಕರ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಜನವರಿ 19 ಸೋಮವಾರ ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ, ವಿಚಾರಗೋಷ್ಠಿ ಹಾಗೂ ಪಶುಪಾಲನಾ ಪರಿಕರಗಳ ಪ್ರಾತ್ಯಕ್ಷತೆ ಕಾರ್ಯಕ್ರಮ ಶ್ರೀ ಬಸವೇಶ್ವರ ದೇವಸ್ಥಾನ ಬಸವನ ಮೂಲ ಕುಲಕುಂದದಲ್ಲಿ ನಡೆಯಿತು. ಕಾರ್ಯಕ್ರಮದ ಆರಂಭದಲ್ಲಿ ದೇವಳದ ಪ್ರಧಾನ ಅರ್ಚಕ ಗಣೇಶ ದೀಕ್ಷಿತ್ ಅವರು ಗೋವುಗಳಿಗೆ ಪೂಜೆ ಸಲ್ಲಿಸಿದರು. ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನವನ್ನು ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ನಿರ್ದೇಶಕ ಭರತ್ ನೆಕ್ರಾಜ ಅವರು ಗೋವುಗಳಿಗೆ ಹೂವಿನ ಹಾರ ಹಾಕುವ ಮೂಲಕ ಉದ್ಘಾಟಿಸಿದರು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಕಲ್ಲಾಜ ಅಧ್ಯಕ್ಷತೆ ವಹಿಸಿದ್ದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಇಂ...

ಕುಕ್ಕೆ ಸುಬ್ರಹ್ಮಣ್ಯ: ಅಧ್ಯಕ್ಷ ಹರೀಶ್ ಇಂಜಾಡಿ ಮನೆಯಲ್ಲಿ ದಕ್ಷ ಪೊಲೀಸ್ ಅಧಿಕಾರಿ ಕಾರ್ತಿಕ್‌ಗೆ ಸನ್ಮಾನ.

Image
ಕುಕ್ಕೆ ಸುಬ್ರಹ್ಮಣ್ಯ: ದಕ್ಷ ಪೊಲೀಸ್ ಅಧಿಕಾರಿ ಕಾರ್ತಿಕ್ ಅವರಿಗೆ ಗೌರವ ಸಮರ್ಪಣೆ ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿ ಹಾಗೂ ಠಾಣಾಧಿಕಾರಿಯಾಗಿ ಸುಮಾರು ಎರಡು ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ದಕ್ಷ ಹಾಗೂ ಪ್ರಾಮಾಣಿಕ ಪೊಲೀಸ್ ಅಧಿಕಾರಿ ಕಾರ್ತಿಕ್ ಅವರಿಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿ ಅವರಿಂದ ವಿಶೇಷ ಗೌರವ ಅರ್ಪಿಸಲಾಯಿತು. ಇಂಜಾಡಿ ಅವರ ನಿವಾಸದಲ್ಲಿ ಸರಳವಾಗಿ ಆಯೋಜಿಸಲಾದ ಗೌರವ ಸಮಾರಂಭದಲ್ಲಿ, ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಕರ್ತವ್ಯ ನಿರ್ವಹಿಸಿದ ಜನಸ್ನೇಹಿ ಪೊಲೀಸ್ ಅಧಿಕಾರಿಯಾಗಿ ಕಾರ್ತಿಕ್ ಅವರು ಜನಸಾಮಾನ್ಯರ ಮನೆಗೆದ್ದಿದ್ದು, ನ್ಯಾಯ ಒದಗಿಸುವಲ್ಲಿ ತೋರಿದ ಪ್ರಾಮಾಣಿಕ ಪ್ರಯತ್ನಕ್ಕೆ ಅಭಿನಂದನೆ ಸಲ್ಲಿಸಲಾಯಿತು. ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಕಾರ್ಯನಿರ್ವಹಿಸುವ ಅವಧಿಯಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಹಾಗೂ ಕಾನೂನು ಜಾರಿಗೆ ನಿಷ್ಠೆಯಿಂದ ಸೇವೆ ಸಲ್ಲಿಸಿದ ಅಧಿಕಾರಿಯಾಗಿ ಕಾರ್ತಿಕ್ ಅವರು ಎಲ್ಲ ವರ್ಗಗಳ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಈ ಗೌರವ ಸಮಾರಂಭದ ಸಂದರ್ಭದಲ್ಲಿ ಹರೀಶ್ ಇಂಜಾಡಿ ಅವರ ಪತ್ನಿ ಶ್ರೀಮತಿ ಚೇತನ ಹರೀಶ್, ಇಂಜಾಡಿ ಅವರ ತಂದೆ ನಿವೃತ್ತ ಶಿಕ್ಷಕ ಪುಂಗವ ಗೌಡ, ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶ್ರೀಮತಿ ಸೌಮ್ಯ ಭರತ್, ಅಜಿತ...

ಕುಮಾರಧಾರಾ ನದಿಯಲ್ಲಿ ಮುಳುಗಿ ಇಬ್ಬರ ದುರ್ಮರಣ!

Image
ಕುಕ್ಕೆ ಸುಬ್ರಹ್ಮಣ್ಯ :ಹರಿಪ್ರಸಾದ್ (39) ಹಾಗೂ ಸುಜೀತ್ ಗೋಳಿಯಾಡಿ (28) ಅವರು ಕುಮಾರಧಾರಾ ನದಿಯಲ್ಲಿ ಮುಳುಗಿ ಮೃತಪಟ್ಟಿರುವ ದುರ್ಘಟನೆ ರವಿವಾರ ಮಧ್ಯಾಹ್ನ ಸಂಭವಿಸಿದೆ. ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನುಗ್ರಹ ಎಂಟರ್ಪ್ರೈಸಸ್ ಹಾರ್ಡ್‌ವೇರ್ ಅಂಗಡಿಯ ಮಾಲಕರಾಗಿದ್ದ ಹರಿಪ್ರಸಾದ್ ಹಾಗೂ ಅದೇ ಅಂಗಡಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಸುಜೀತ್, ತಮ್ಮ ಪರಿಚಿತರಾದ ಸುಮಾರು 10 ಜನರೊಂದಿಗೆ ಕಾಲೋನಿ ಕೊನೆಯಲ್ಲಿ ಇರುವ ಕುಮಾರಧಾರಾ ನದಿಯ ಬಳಿ ವನಭೋಜನಕ್ಕೆ ತೆರಳಿದ್ದರು. ಮಧ್ಯಾಹ್ನ ಊಟದ ಬಳಿಕ ಸ್ನಾನಕ್ಕಾಗಿ ನದಿಗೆ ಇಳಿದ ಸಂದರ್ಭ ಸುಮಾರು 2.30ರ ವೇಳೆಗೆ ಈ ದುರ್ಘಟನೆ ಸಂಭವಿಸಿದ್ದು, ಹರಿಪ್ರಸಾದ್ ಹಾಗೂ ಸುಜೀತ್ ನೀರಿನ ಆಳಕ್ಕೆ ಸಿಲುಕಿ ಮುಳುಗಿದ್ದಾರೆ ಎನ್ನಲಾಗಿದೆ. ಘಟನೆಯ ಮಾಹಿತಿ ಪಡೆದ ತಕ್ಷಣ ಕುಕ್ಕೆ ಸುಬ್ರಹ್ಮಣ್ಯ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಹೊರತೆಗೆದು ಮುಂದಿನ ಕ್ರಮ ಕೈಗೊಂಡಿದ್ದಾರೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಆದಿ ಸುಬ್ರಹ್ಮಣ್ಯ: ಅನಧಿಕೃತ ಅಂಗಡಿ ತೆರವುಗೊಳಿಸಲು ಗ್ರಾಮ ಪಂಚಾಯತ್ ನೋಟಿಸ್!

Image
ಕುಕ್ಕೆ ಸುಬ್ರಹ್ಮಣ್ಯ :ಕುಕ್ಕೆ ಸುಬ್ರಹ್ಮಣ್ಯ ಗ್ರಾಮದ ಆದಿ ಸುಬ್ರಹ್ಮಣ್ಯ ಪ್ರದೇಶದ ಸರ್ವೆ ನಂಬರ್ 85/5ರ ಸ್ವಾಧೀನದ ಜಾಗದಲ್ಲಿ ಭೂ ಪರಿವರ್ತನೆ ಗೊಳಿಸದೆ ಹಾಗೂ ಈ-ಖಾತೆ ಪಡೆಯದೆ ವಾಣಿಜ್ಯ ಉದ್ದೇಶದ ಕಟ್ಟಡಗಳು ಕಾರ್ಯನಿರ್ವಹಿಸುತ್ತಿವೆ ಎಂಬ ಆರೋಪದ ಕುರಿತು ಸುಬ್ರಹ್ಮಣ್ಯ ಗ್ರಾಮ ಪಂಚಾಯತಿಗೆ ದೂರು ದಾಖಲಾಗಿತ್ತು. ಈ ಹಿನ್ನೆಲೆ, ಸದರಿ ಜಾಗದಲ್ಲಿನ ಅನಧಿಕೃತ ಕಟ್ಟಡಗಳಲ್ಲಿ ಯಾವುದೇ ರೀತಿಯ ವ್ಯಾಪಾರ ವಹಿವಾಟು ನಡೆಸದಂತೆ ಸೂಚಿಸಿ, ಜಾಗದ ಮಾಲಕರಾದ ಎಂ.ವಿ. ಮಂಜುನಾಥ ಹಾಗೂ ಎಂ.ವಿ. ಶ್ರೀವತ್ಸ ಬಳ್ಪ ಅವರಿಗೆ ದಿನಾಂಕ 08-01-2026ರಂದು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೋಟಿಸ್ ಜಾರಿಗೊಳಿಸಿದ್ದಾರೆ. ಈ ವಿಷಯವನ್ನು ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಚರ್ಚಿಸಲಾಗಿದ್ದು, ಸದರಿ ಜಾಗವು ಈ ಹಿಂದೆ ನ್ಯಾಯಾಲಯದ ವಿಚಾರಣೆಯಲ್ಲಿದ್ದು, ಪ್ರಸ್ತುತ ನ್ಯಾಯಾಲಯದ ಆದೇಶದಂತೆ ಜಾಗದ ಪರಿಪೂರ್ಣ ಮಾಲಕತ್ವ ಎಂ.ವಿ. ಮಂಜುನಾಥ ಹಾಗೂ ಎಂ.ವಿ. ಶ್ರೀವತ್ಸ ಬಳ್ಪ ಅವರಿಗೆ ಲಭಿಸಿದೆ ಎಂಬ ಮಾಹಿತಿ ಸಭೆಯಲ್ಲಿ ತಿಳಿದುಬಂದಿದೆ. ಆದಾಗ್ಯೂ, ಜಾಗದಲ್ಲಿನ ನಿವೇಶನಗಳಿಗೆ ನಿಯಮಾನುಸಾರ ಭೂ ಪರಿವರ್ತನೆ ಪಡೆದು, ಈ-ಖಾತೆ ನೋಂದಣಿ ಮಾಡಿಕೊಂಡು, ಸುಬ್ರಹ್ಮಣ್ಯ ಗ್ರಾಮ ಪಂಚಾಯತಿಯಿಂದ ವ್ಯಾಪಾರ ಪರವಾನಿಗೆ ಪಡೆಯುವವರೆಗೆ ಯಾವುದೇ ವಾಣಿಜ್ಯ ಚಟುವಟಿಕೆ ನಡೆಸಬಾರದು ಎಂದು ಪಂಚಾಯತ್ ಸ್ಪಷ್ಟ ಸೂಚನೆ ನೀಡಿದೆ. ನೋಟಿಸ್‌ನಲ್ಲಿ ನೀಡಿದ ಸೂಚನೆಗಳನ್...

ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವಕ್ಕೆ ಧ್ವಜಾರೋಹಣದೊಂದಿಗೆ ಪ್ರಾರಂಭ.

Image
ನೆಲ್ಯಾಡಿ :ಬೆಳ್ತಂಗಡಿ ಧರ್ಮ ಪ್ರಾಂತ್ಯದ ಏಕೈಕ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರ ನೆಲ್ಯಾಡಿ ಯಲ್ಲಿ ವಾರ್ಷಿಕ ಮಹೋತ್ಸವ ಕ್ಕೆ ಭಕ್ತಿ ಪೂರ್ವಕ ವರ್ಣ ರಂಜಿತ ಪ್ರಾರಂಭ ವನ್ನು ಸಹನೆ ಮಾತೆ ಸಂತ ಅಲ್ಫೋನ್ಸ ರವರ ಭಾವ ಚಿತ್ರ ಹೊಂದಿದ ಧ್ವಜವನ್ನು ಚರ್ಚಿನ ಧರ್ಮ ಗುರುಗಳಾದ ವಂದನಿಯ ಫಾ ಶಾಜಿ ಮಾತ್ಯು, ಫಾ. ಅಲೆಕ್ಸ್ ಹಾಗೂ ಫಾ. ಇಮ್ಮಾನುವೆಲ್ ಆರೋಹಿಸುವ ಮೂಲಕ ವಿಧಿ ಯುಕ್ತ ವಾಗಿ ಪ್ರಾರಂಭ ನೀಡಲಾಯಿತು. ನವ ದಿನಗಳ ಈ ಮಹೋತ್ಸವ ವವುದಿನಾಂಕ 24ನೇ ಶನಿವಾದ ಆಕರ್ಷಕ, ವರ್ಣ ರಂಜಿತ ಶೋಭಾ ಯಾತ್ರೆ,ವಿಸ್ಮಯ- 2026 ಸಾಂಸ್ಕೃತಿಕ ಸಂಜೆ ಹಾಗೂ 25ನೇ ಬಾನುವಾದ ವಿಧಾನ ಪೂರ್ವಕ ರಾಸ ಬಲಿಪೂಜೆ ಯ ಮೂಲಕ ಕೊನೆಗೊಳ್ಳಲಿದೆ. ಧ್ವಜಾರೋಹಣದಲ್ಲಿ ಚರ್ಚಿನ ಪಾಲನಾ ಸಮಿತಿ ಯ ರೆಜಿ ಕೊಳಂಗರಾತ್ ರಾಜೇಶ್ ತೆಕ್ಕನಾಟ್ಟ್, ಜೋನ್ಸನ್ ಪುಳಿಕ್ಕಲ್, ಜೋಯ್ ಪುತ್ತೇನ್ ಪರಂಭಿಲ್ ಉಪಸ್ಥಿತರಿದ್ದರು. ಪ್ರತಿದಿನ ಸಂಜೆ 4.30ರಿಂದ ಪೂಜಾ ವಿಧಿಗಳು ಪ್ರಾರಂಭ ವಾಗಲಿದೆ. ಹರಕೆಯ ಉಪಹಾರವನ್ನು ಪ್ರತಿದಿನ ನೀದಾಲಗುತ್ತಿದೆ.

*.ನೆಲ್ಯಾಡಿ ಜ್ಞಾನೋದಯ ಬೆಥನಿ ವಿದ್ಯಾಸಂಸ್ಥೆಯಲ್ಲಿ ಜಿಲ್ಲಾ ಮಟ್ಟದ ಚೆಸ್ ಚಾಂಪಿಯನ್ ಟ್ರೋಫಿ 2026....*

Image
ನೆಲ್ಯಾಡಿ ಜನವರಿ 15ರಂದು ಜ್ಞಾನೋದಯ ಬೆಥನಿ ಪಿ. ಯು ಕಾಲೇಜು ಮತ್ತು ಉಬಾರ್ ಚೆಸ್ ಅಕಾಡೆಮಿ ಸಹಯೋಗದಲ್ಲಿ ದ. ಕ. ಜಿಲ್ಲಾ  ಶಾಲಾ ಮಟ್ಟದ 8 ರಿಂದ 16ರ ವಯೋವರ್ಗದ ಹುಡುಗಿಯರ ಮತ್ತು ಹುಡುಗರ 5 ವಿಭಾಗದ ಚೆಸ್ ಚಾಂಪಿಯನ್ ಶಿಪ್ ಸ್ಪರ್ಧೆಗಳು ನಡೆದವು.        ಬೆಳಿಗ್ಗೆ ನಡೆದ ಉದ್ಘಾಟನಾ ಸಮಾರಂಭದಲ್ಲಿ ಹಿರಿಯ ರಾಷ್ಟ್ರಿಯ ವಾಲಿಬಾಲ್ ಆಟಗಾರ ಜೂಲಿಯಾನ ಪೀಟರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಹಾರೈಸಿದರು, ಬೆಥನಿ ವಿದ್ಯಾ ಸಂಸ್ಥೆಯ ಸಂಚಾಲಕ-ಪ್ರಾಂಶುಪಾಲ ಡಾ. ವರ್ಗಿಸ್ ಕೈಪನಡ್ಕ ಸಭಾಧ್ಯಕ್ಷತೆ ವಹಿಸಿ ಮಾತನಾಡುತ್ತ ವಿದ್ಯಾರ್ಥಿಗಳ ಮಾನಸಿಕ ಬೆಳವಣಿಗೆಯೊಂದಿಗೆ, ಏಕಾಗ್ರತೆಗೆ ಪೂರಕವಾಗಬಲ್ಲ ಚೆಸ್ ನಂತಹ ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವುದು ಅಗತ್ಯವಾಗಿದೆ ಎಂದರು. ವೇದಿಕೆಯ ಲ್ಲಿ ಉಬಾರ್ ಚೆಸ್ ಅಕಾಡೆಮಿಯ ನಿರ್ದೇಶಕ ಜಗನ್ನಾಥ ಅಡಪ,ಕರ್ನಾಟಕ ಚೆಸ್ ಅಸೋಸಿಯೇಷನ್ ಉಪಾಧ್ಯಕ್ಷರು ರಮೇಶ್ ಕೋಟೆ, ಭಗತ್ ರಾಮ್,ಬೆಥನಿ ವಿದ್ಯಾ ಸಂಸ್ಥೆಯ ಬರ್ಸರ್ ಸ್ಯಾಮವೆಲ್ ಜಾರ್ಜ್, ಸಹಾಯಕ ಬರ್ಸರ್ ವರ್ಗಿಸ್ ಉಪಸ್ಥಿತರಿದ್ದರು, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ಸನ್ನಿ ಕೆ. ಎಸ್ ಸ್ವಾಗತಿಸಿ, ಮುಖ್ಯ ಶಿಕ್ಷಕ ಜಾರ್ಜ್ ಎಂ. ಜೆ ಧನ್ಯವಾದ ಸಮರ್ಪಿಸಿದರು. ಬೆಳಿಗ್ಗೆಯಿಂದಲೇ ಆರಂಭವಾದ ಸ್ಪರ್ಧೆಗಳು 5 ವಿಭಾಗದಲ್ಲಿ ನಡೆದವು, ಸುಮಾರು 450ಕ್ಕೂ ಮಿಕ್ಕಿಸ್ಪರ್ಧಾಳುಗಳು ಜಿಲ್ಲೆಯ ವಿವಿಧ ಭಾಗಗಳಿಂದ ಭಾಗವಹಿಸಿ ದರು.

ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಮೋಹಿನಿ ಯತೀಶ್ ಗೋಳ್ಯಾಡಿ ಆಯ್ಕೆ.

Image
ಮಡಪ್ಪಾಡಿ ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸದಸ್ಯರಾದ ಶ್ರೀಮತಿ ಮೋಹಿನಿ ಯತೀಶ್ ಗೋಳ್ಯಾಡಿ ಅವರು ಕ್ಷೀರಾಸಂಜೀವಿನಿ ಯೋಜನೆಯ ದಶಮಾನೋತ್ಸವದ ಪ್ರಯುಕ್ತ ಜನವರಿ 17, 2026ರಂದು ಬೆಂಗಳೂರಿನ ಜಿ.ಕೆ.ವಿ.ಕೆ.ಯಲ್ಲಿ ನಡೆಯಲಿರುವ ಪ್ರಗತಿಪರ ಹೈನುಗಾರರ ಸಮಾವೇಶ ಹಾಗೂ ತಾಂತ್ರಿಕ ವಿಚಾರಗೋಷ್ಠಿಯಲ್ಲಿ ನೀಡಲಾಗುವ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ತಾಲೂಕು ಮಟ್ಟದಲ್ಲಿ ಆಯ್ಕೆಯಾಗಿದ್ದಾರೆ. ಹೈನುಗಾರಿಕೆಯಲ್ಲಿ ಸಾಧನೆಯ ಹಾದಿ ಸುಲಭವಿರಲಿಲ್ಲ. ಹಳದಿ ರೋಗದಿಂದ ಸುಮಾರು 2000 ಅಡಿಕೆ ಮರಗಳು ನಾಶವಾದ ಕಠಿಣ ಪರಿಸ್ಥಿತಿಯ ನಡುವೆಯೂ ಹೈನುಗಾರಿಕೆಯನ್ನು ಪರ್ಯಾಯ ಜೀವನೋಪಾಯವಾಗಿ ಸ್ವೀಕರಿಸಿ, ಶ್ರಮ, ನಿಷ್ಠೆ ಹಾಗೂ ಆಧುನಿಕ ಪದ್ಧತಿಗಳ ಮೂಲಕ ದಾಖಲೆ ಮಟ್ಟದ ಸಾಧನೆ ಮಾಡಿದ್ದಾರೆ. ಈ ಸಾಧನೆಯ ಹಿಂದೆ ಪತಿ ಯತೀಶ್ ಅವರ ನಿರಂತರ ಬೆಂಬಲವೇ ಬೆನ್ನೆಲುಬಾಗಿದ್ದು, ಕುಟುಂಬದ ಸಹಕಾರದಿಂದ ಹೈನುಗಾರಿಕೆಯನ್ನು ಯಶಸ್ವಿಯಾಗಿ ಮುನ್ನಡೆಸಿದ್ದಾರೆ. ಹಾಲು ಉತ್ಪಾದನೆ, ಜಾನುವಾರುಗಳ ಆರೈಕೆ ಹಾಗೂ ಸಹಕಾರಿ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಇತರ ರೈತರಿಗೆ ಮಾದರಿಯಾಗಿದ್ದಾರೆ. ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಆಯ್ಕೆಯಾದ ಹಿನ್ನೆಲೆಯಲ್ಲಿ ಸ್ಥಳೀಯ ರೈತ ಸಮುದಾಯ, ಸಹಕಾರಿ ಸಂಘದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಹರ್ಷ ವ್ಯಕ್ತಪಡಿಸಿದ್ದು, ಶ್ರೀಮತಿ ಮೋಹಿನಿ ಯತೀಶ್ ಅವರಿಗೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ.

ಕೆಡಿಪಿ ಸಭೆ ಕರೆಯದಿರುವ ಆರೋಪ: ಒಂದು ವಾರದೊಳಗೆ ಸಭೆ ನಡೆಸದಿದ್ದರೆ ಹೋರಾಟ ಎಚ್ಚರಿಕೆ!

Image
ಕಡಬ :ಕಡಬ ತಾಲ್ಲೂಕು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ (ಕೆಡಿಪಿ) ಸಭೆಯನ್ನು ನಿಯಮಾನುಸಾರ ಪ್ರತಿ ಮೂರು ತಿಂಗಳಿಗೊಮ್ಮೆ ಕರೆಯಬೇಕಿದ್ದರೂ, ಕಳೆದ ಐದು ತಿಂಗಳು ಕಳೆದರೂ ಸಭೆ ನಡೆಸಲಾಗಿಲ್ಲ ಎಂದು ಕೆಡಿಪಿ ಸದಸ್ಯರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಕೆಡಿಪಿ ಕಡಬ ತಾಲ್ಲೂಕಿನ ಸದಸ್ಯರಾದ ಶಿವರಾಮ್ ರೈ, ಅಶ್ರಫ್ ಸೇಡಿಗುಂಡಿ, ಉಷಾ ಸೇರಿದಂತೆ ಇತರ ಸದಸ್ಯರು ಕಡಬ ತಾಲ್ಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯಲ್ಲಿ, ಕರ್ನಾಟಕ ಸರ್ಕಾರದ ಅಭಿವೃದ್ಧಿ ಉದ್ದೇಶದೊಂದಿಗೆ ರಚಿಸಲಾದ ಕೆಡಿಪಿ ಸಮಿತಿಯ ನಿಯಮಾವಳಿಯನ್ನು ಉಲ್ಲಂಘಿಸಿ ಸಭೆ ನಡೆಸದಿರುವುದು ಸರಿಯಾದ ಕ್ರಮವಲ್ಲ ಎಂದು ಅವರು ಆರೋಪಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವುದರಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬರಬಾರದೆಂಬ ಉದ್ದೇಶದಿಂದ ಅಭಿವೃದ್ಧಿ ಕಾರ್ಯಗಳನ್ನು ಕುಂಠಿತಗೊಳಿಸುವ ನಿಟ್ಟಿನಲ್ಲಿ ಸಭೆ ನಡೆಸಲಾಗಿಲ್ಲವೋ ಎಂಬ ಅನುಮಾನವೂ ವ್ಯಕ್ತಪಡಿಸಲಾಗಿದೆ. ಇದಕ್ಕೆ ಕೆಲವು ಅಧಿಕಾರಿಗಳು ಸಹ ಕೈಜೋಡಿಸಿರುವ ಮಾಹಿತಿ ದೊರೆತಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ ತಕ್ಷಣವೇ ಕೆಡಿಪಿ ಸಭೆಗೆ ದಿನಾಂಕ ನಿಗದಿಪಡಿಸಿ, ಒಂದು ವಾರದೊಳಗೆ ಸಭೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಇದಲ್ಲದೆ, ಕೆಡಿಪಿ ಸಭೆಗೆ ಭೂ ಅಭಿವೃದ್ಧಿ ಬ್ಯಾಂಕಿನ ಕಾರ್ಯದರ್ಶಿಗಳು ಮಾತ್ರ ಕಡ್ಡಾಯವಾಗಿ ಹಾಜರಿರಬೇಕೆಂದು ...

ಕುಕ್ಕೆ ಸುಬ್ರಹ್ಮಣ್ಯ ರಥಬೀದಿಯಲ್ಲಿ ಭಕ್ತನ ಮೇಲೆ ಸೌಟಿನಿಂದ ಹಲ್ಲೆ – ವೈರಲ್ ವಿಡಿಯೋ, ದೇವಸ್ಥಾನ ಮೆನೇಜರ್ ಮೌನಕ್ಕೆ ಸಾರ್ವಜನಿಕ ಆಕ್ರೋಶ!

Image
ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ರಥ ಬೀದಿಯಲ್ಲಿ ಭಕ್ತನೊಬ್ಬನ ಮೇಲೆ ಸೌಟಿನಿಂದ ಹಲ್ಲೆ ನಡೆಸಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವೈರಲ್ ಆಗಿರುವ ವಿಡಿಯೋದಲ್ಲಿ, ರಥ ಬೀದಿಯಲ್ಲಿ ಬೀದಿಬದಿ ವ್ಯಾಪಾರ ನಡೆಸುತ್ತಿದ್ದ ವ್ಯಕ್ತಿಯೊಬ್ಬ ಭಕ್ತನಿಗೆ ಸೌಟಿನಿಂದ ಹೊಡೆಯುತ್ತಿರುವ ದೃಶ್ಯಗಳು ಸ್ಪಷ್ಟವಾಗಿ ಕಾಣುತ್ತಿವೆ. ಪವಿತ್ರ ಕ್ಷೇತ್ರದಲ್ಲಿ ಭಕ್ತರ ಮೇಲೆಯೇ ಈ ರೀತಿಯ ದೈಹಿಕ ಹಲ್ಲೆ ನಡೆಸಿರುವುದು ಅತ್ಯಂತ ಖಂಡನೀಯ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ರಥ ಬೀದಿ ತುಂಬಾ ಅನಧಿಕೃತ ಹಾಗೂ ನಿಯಂತ್ರಣವಿಲ್ಲದ ಬೀದಿಬದಿ ವ್ಯಾಪಾರಿಗಳಿದ್ದು, ಇವರು ಭಕ್ತರಿಗೆ ಕಿರಿಕಿರಿ ಉಂಟುಮಾಡುವುದರ ಜೊತೆಗೆ ಹಲ್ಲೆ ನಡೆಸುತ್ತಿದ್ದಾರೆ ಎಂಬ ಆರೋಪಗಳು ಹಿಂದಿನಿಂದಲೂ ಕೇಳಿಬರುತ್ತಿವೆ. ಇಂತಹ ಘಟನೆಗಳು ಕ್ಷೇತ್ರದ ಪಾವಿತ್ರ್ಯ ಮತ್ತು ಭಕ್ತರ ಸುರಕ್ಷತೆಯ ಮೇಲೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿವೆ. ಇಷ್ಟೆಲ್ಲ ಬೆಳವಣಿಗೆಗಳ ನಡುವೆಯೂ, ಈ ರೀತಿಯ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ವಹಿಸಬೇಕಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ಈವರೆಗೂ ಮೌನ ವಹಿಸಿರುವುದು ಯಾಕೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಕ್ಷೇತ್ರದ ಶಾಂತಿ, ಭಕ್ತರ ಭದ್ರತೆ ಮತ್ತು ನಿಯಂತ್ರಣ ವ...

ಕುಕ್ಕೆ ಸುಬ್ರಹ್ಮಣ್ಯ ಬೈಪಾಸ್ ರಸ್ತೆ ಬದಿಗಳಲ್ಲಿ ಕಸದ ರಾಶಿ ರಾಶಿ.ಸ್ವಚ್ಛತಾ ಕಾರ್ಯ ಕೈಗೊಂಡ ರವಿಕಕ್ಕೆ ಪದವು ಸಮಾಜ ಸೇವ ಟ್ರಸ್ಟ್.

Image
ಸುಬ್ರಮಣ್ಯ ಜನವರಿ 11 : ಭಾರತ ದೇಶದ ಪ್ರಮುಖ ನಾಗರಾಧನೆಯ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಡಿಸೆಂಬರ್ ಹಾಗೂ ಜನವರಿ ತಿಂಗಳಲ್ಲಿ ದೂರದ ರಾಜ್ಯಗಳಿಂದ ಹಾಗೂ ಊರುಗಳಿಂದ ಅತ್ಯಧಿಕ ಭಕ್ತರು ಬಂದು ದೇವರ ದರ್ಶನ, ಸೇವೆ ಸಲ್ಲಿಸಿ ಪ್ರಸಾದ ಸ್ವೀಕರಿಸಿ ಹೋಗುತ್ತಿದ್ದಾರೆ. ಆದರೆ ಅಷ್ಟೇ ಕಸದ ರಾಶಿ ರಾಶಿಗಳು ಸುಬ್ರಹ್ಮಣ್ಯ ಪಾರ್ಕಿಂಗ್ ಪ್ರದೇಶ ಬೈಪಾಸ್ ರಸ್ತೆಯ ಇಕ್ಕಲಗಳಲ್ಲಿ ತುಂಬುತ್ತಿದ್ದು ಅದನ್ನ ಸ್ವಚ್ಛಗೊಳಿಸುವುದು ಸವಲಾಗಿರುತ್ತದೆ. ದಿನನಿತ್ಯ ಸಾವಿರಾರು ವಾಹನಗಳು ಪಾರ್ಕಿಂಗ್ ಪ್ರದೇಶದಲ್ಲಿ ಪಾರ್ಕಿಂಗ್ ಮಾಡಲಾಗಿದ್ದು ಅಲ್ಲಿ ಹಾಗೂ ರಸ್ತೆ ಇಕ್ಕೆಲಗಳಲ್ಲಿ ಎಲ್ಲೆಂದರಲ್ಲಿ ಕಸವನ್ನು ಹಾಕುತ್ತಿರುವುದು ಕಂಡುಬಂದಿದೆ. ಕಳೆದ 523 ವಾರಗಳಿಂದ ನಿರಂತರವಾಗಿ ಸ್ವಚ್ಛತಾ ಕಾರ್ಯವನ್ನ ಕೈಗೊಂಡಿರುವ ರವಿಕಕ್ಕೆ ಪದವು ಸಮಾಜ ಸೇವ ಟ್ರಸ್ಟ್ ನ ಸುಮಾರು 60ಕ್ಕೂ ಮಿಕ್ಕಿ ಸ್ವಯಂಸೇವಕರು ಡಾಕ್ಟರ್ ರವಿ ಕಕ್ಕೆ ಪದವು ಅವರ ನೇತೃತ್ವದಲ್ಲಿ ಸ್ವಚ್ಛಗೊಳಿಸುತ್ತಾ ಬಂದಿರುತ್ತಾರೆ. ಇಂದು ರವಿವಾರ ಬೆಳ್ಳಂಬೆಳಗ್ಗೆಯಲ್ಲಿ ಟ್ರಸ್ಟ್ ನ ಸ್ವಯಂಸೇವಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದು ಹಲವು ಗಂಟೆಗಳ ಕಾಲ ಸೇವೆಯನ್ನು ಸಲ್ಲಿಸಿರುವುದನ್ನ ಇಲ್ಲಿ ಗಮನಿಸಬಹುದು.  ಶ್ರೀ ಕ್ಷೇತ್ರಕ್ಕೆ ದಿನನಿತ್ಯ ಸಾವಿರಾರು ಭಕ್ತಾದಿಗಳು ಬರುತ್ತಿದ್ದು ಪ್ಲಾಸ್ಟಿಕ್ ಬಾಟಲುಗಳು ಪ್ಲಾಸ್ಟಿಕ್ ಚೀಲ ಪ್ಲಾಸ್ಟಿಕ್ ತಟ್ಟೆಗಳು ಇತ್ಯಾದಿಗಳನ್ನು ಎಷ್ಟೇ ಜಾಗೃತ...

ಪಡ್ಡಿನಂಗಡಿ ಶಿವಗೌರಿ ಕಲ್ಯಾಣ ಮಂಟಪದ ಮಾಲಕ ಸುರೇಶ್ ಕುಮಾರ್ ನಡ್ಕ ನಿಧನ.

Image
ಸುಬ್ರಹ್ಮಣ್ಯ :ಪಡ್ಡಿನಂಗಡಿ ಶಿವಗೌರಿ ಕಲ್ಯಾಣ ಮಂಟಪದ ಮಾಲಕ ಹಾಗೂ ಸಮಾಜ ಸೇವಕ ಸುರೇಶ್ ಕುಮಾರ್ ನಡ್ಕ (60) ಅವರು ಅಲ್ಪಕಾಲದ ಅಸೌಖ್ಯದಿಂದ ಭಾನುವಾರ ಮಧ್ಯಾಹ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೆಲವು ತಿಂಗಳುಗಳ ಹಿಂದೆ ಸುರೇಶ್ ಕುಮಾರ್ ನಡ್ಕ ಅವರಿಗೆ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಹೃದಯ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಶಸ್ತ್ರಚಿಕಿತ್ಸೆಯ ಬಳಿಕ ಮೂರು ತಿಂಗಳ ವಿಶ್ರಾಂತಿ ಪಡೆದು ಮನೆಗೆ ಮರಳಿದ್ದರು. ಆದರೆ ಇತ್ತೀಚೆಗೆ ಮತ್ತೆ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದರು. ಆರೋಗ್ಯ ಸ್ಥಿತಿ ಮತ್ತಷ್ಟು ಹದಗೆಟ್ಟ ಹಿನ್ನೆಲೆಯಲ್ಲಿ ಅವರನ್ನು ಪುನಃ ಬೆಂಗಳೂರಿಗೆ ಕರೆದೊಯ್ಯಲಾಗಿದ್ದು, ಅಲ್ಲಿ ಭಾನುವಾರ ಮಧ್ಯಾಹ್ನ ಅವರು ಕೊನೆಯುಸಿರೆಳೆದರು. ಹಿರಿಯ ಜಾನಪದ ವಿದ್ವಾಂಸ ಡಿ. ಜಿ. ನಡ್ಕರವರ ಪುತ್ರರಾಗಿದ್ದ ಸುರೇಶ್ ಕುಮಾರ್ ನಡ್ಕ ಅವರು ನಾಯಕತ್ವ ಗುಣ, ಸಮಾಜಮುಖಿ ಚಟುವಟಿಕೆಗಳಿಂದ ಚಿರಪರಿಚಿತರಾಗಿದ್ದರು. ಅವರು ಕಲ್ಮಡ್ಕ ಗ್ರಾಮ ಪಂಚಾಯತ್ ಸದಸ್ಯರಾಗಿಯೂ, ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದು, ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಹಾಗೂ ಉಪಾಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಪಂಜ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಹಾಗೂ ಪಂಜ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಸಮಾಜ ಸೇವೆಯಲ್ಲಿ ಸಕ್ರಿ...

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೋಟಿ ಕೋಟಿ ರೂ. ಭಂಡಾರ ಇದ್ದರೂ ಅಭಿವೃದ್ಧಿ ಯಾಕೆ ಇಲ್ಲ?

Image
ಕುಕ್ಕೆ ಸುಬ್ರಹ್ಮಣ್ಯದಲ್ಲಿ ಕೋಟಿ ಕೋಟಿ ರೂ. ಭಂಡಾರ ಇದ್ದರೂ ಅಭಿವೃದ್ಧಿ ಯಾಕೆ ಇಲ್ಲ? ಶ್ರೀದೇವರ ಭಂಡಾರದಲ್ಲಿ ಅಪಾರ ಹಣ ಇದ್ದರೂ ಕ್ಷೇತ್ರದ ಮೂಲಸೌಕರ್ಯ,ಭಕ್ತರ ಸೌಲಭ್ಯಗಳಲ್ಲಿ ಏಕೆ ಹಿನ್ನಡೆ? 👉 ಅಭಿವೃದ್ಧಿಗೆ ಅಡ್ಡಿಪಡಿಸುವವರು ಯಾರು? 👉 ಆಡಳಿತ ಮಂಡಳಿ ಮತ್ತು ಅಧಿಕಾರಿಗಳ ಮಧ್ಯೆ ಗೊಂದಲವೇ ಕಾರಣವೇ? 👉 ಜವಾಬ್ದಾರಿ ಯಾರದು? 👉 ಭಕ್ತರ ಪ್ರಶ್ನೆಗಳಿಗೆ ಉತ್ತರ ಯಾವಾಗ? ಭಕ್ತರ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ನಂಬಿಕೆ, ಭಕ್ತಿ ಮತ್ತು ಭಾವನೆಗಳ ನಡುವೆ ಸಿಲುಕಿರುವ ಕುಕ್ಕೆ ಸುಬ್ಬಪ್ಪನ ಕಣ್ಣೀರು ಇಂದು ಮಾತಾಡುತ್ತಿದೆ. 📢 ಸತ್ಯ ಶೀಘ್ರದಲ್ಲೇ ನಿಮ್ಮ ಮುಂದೆ… ಇದು ಕೇವಲ ಪ್ರಶ್ನೆ ಅಲ್ಲ – ಕ್ಷೇತ್ರದ ಭವಿಷ್ಯದ ಹೋರಾಟ!

ಕುಕ್ಕೆ ಸುಬ್ರಹ್ಮಣ್ಯ ಭೇಟಿ ಮಾಡಿದ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪಲ್ಲವಿ ಜಿ.; ಮಲೆ ಕುಡಿಯ ಸಮುದಾಯಕ್ಕೆ ಸಮುದಾಯ ಭವನ ಭರವಸೆ.

Image
ಸುಬ್ರಹ್ಮಣ್ಯ :ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮ, ಬೆಂಗಳೂರು ಇದರ ಅಧ್ಯಕ್ಷೆ ಶ್ರೀಮತಿ ಪಲ್ಲವಿ ಜಿ. ಅವರು ಇಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ಕ್ಷೇತ್ರಕ್ಕೆ ಆಗಮಿಸಿದ ಅವರನ್ನು ದೇವಳದ ವತಿಯಿಂದ ವಿಶೇಷವಾಗಿ ಶಾಲು ಹೊದಿಸಿ ಪ್ರಸಾದ ನೀಡಿ ಗೌರವಿಸಲಾಯಿತು. ಇದೇ ವೇಳೆ ಸ್ಥಳೀಯ ಮಲೆ ಕುಡಿಯ ಸಮುದಾಯದ ವತಿಯಿಂದ ವಿಶೇಷ ಸನ್ಮಾನ ಕಾರ್ಯಕ್ರಮವೂ ನಡೆಯಿತು. ಬಳಿಕ ಶ್ರೀಮತಿ ಪಲ್ಲವಿ ಜಿ. ಅವರು ಸುಬ್ರಹ್ಮಣ್ಯದ ಮಹರ್ಷಿ ವಾಲ್ಮೀಕಿ ಆದಿವಾಸಿ ಬುಡಕಟ್ಟು ವಸತಿ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಸತಿ ಶಾಲೆಯ ಪುಟಾಣಿ ಮಕ್ಕಳೊಂದಿಗೆ ಕೆಲಕಾಲ ಆತ್ಮೀಯವಾಗಿ ಸಮಯ ಕಳೆಯುತ್ತಾ ಅವರ ವಿದ್ಯಾಭ್ಯಾಸ ಹಾಗೂ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಇದೇ ಸಂದರ್ಭದಲ್ಲಿ ಸುಬ್ರಹ್ಮಣ್ಯ ಆಸುಪಾಸಿನ ಮಲೆ ಕುಡಿಯ ಸಮುದಾಯದ ಮನೆಗಳಿಗೆ ಭೇಟಿ ನೀಡಿ ಜನಾಂಗದ ಸಮಸ್ಯೆಗಳು, ಅಗತ್ಯಗಳು ಹಾಗೂ ಸೌಲಭ್ಯಗಳ ಕೊರತೆ ಕುರಿತು ವಿಚಾರಣೆ ನಡೆಸಿದರು. ಸಮುದಾಯದ ಸಮಸ್ಯೆಗಳಿಗೆ ಪರಿಹಾರ ಒದಗಿಸುವುದರ ಜೊತೆಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಭರವಸೆಯನ್ನು ನೀಡಿದರು. ವಿಶೇಷವಾಗಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಮಲೆ ಕುಡಿಯ ಜನಾಂಗಕ್ಕಾಗಿ ಶೀಘ್ರದಲ್ಲೇ ಸಮುದಾಯ ಭವನ ನಿರ್ಮಿಸುವ ಭರವಸೆಯನ್ನು ನೀಡಿದ್ದು, ಸಮುದಾಯದವರಲ್ಲಿ ಸಂತಸ ಮೂಡಿಸಿದೆ. ಈ ಸಂದ...

ಚಲನಚಿತ್ರ ನಟಿ ರಕ್ಷಿತಾ ಕುಕ್ಕೆ ಸುಬ್ರಹ್ಮಣ್ಯ ಭೇಟಿ.

Image
ಸುಬ್ರಹ್ಮಣ್ಯ ಜನವರಿ 8 : ಕನ್ನಡ ಚಲನಚಿತ್ರ ರಂಗದ ಖ್ಯಾತ ನಟಿ ರಕ್ಷಿತಾ ಅವರು ಕುಟುಂಬ ಸಮೇತರಾಗಿ ಇಂದು ಗುರುವಾರ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಶ್ರೀ ದೇವಳದಲ್ಲಿ ದೇವರ ದರ್ಶನ ಮಾಡಿ ಮಹಾಪ್ರಸಾದ ಸ್ವೀಕರಿಸಿದರು.ತದನಂತರ ಕ್ಷೇತ್ರದ ದೈವ ಹೊಸಳ್ಳಿಗಮ್ಮ ಗುಡಿಯಲ್ಲಿ ದರ್ಶನ ಮಾಡಿ ಅಲ್ಲಿಂದ ಮುಂದೆ ಶ್ರೀ ದೇವಳದ ಆಡಳಿತ ಕಚೇರಿಗೆ ತೆರಳಿದರು. ಅಲ್ಲಿ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿಯವರು ರಕ್ಷಿತಾ ಅವರನ್ನು ಶಾಲು ಹೊಂದಿಸಿ ಗೌರವಿಸಿದರು.ಈ ಸಂದರ್ಭದಲ್ಲಿ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಏಸುರಾಜ್ ಜೊತೆಗಿದ್ದರು.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಅಭಿವೃದ್ಧಿಗೆ ಅಡ್ಡಿ: ಅಧಿಕಾರಿಗಳ ವಿರುದ್ಧ ಹೋರಾಟಕ್ಕೆ ಹಿಂದೂ ರಕ್ಷಣಾ ವೇದಿಕೆ ನಿರ್ಧಾರ!

Image
ಸುಬ್ರಹ್ಮಣ್ಯ :ಶ್ರೀ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಅಭಿವೃದ್ಧಿ ಕಾಮಗಾರಿಗಳು ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳದೆ ವಿಳಂಬವಾಗುತ್ತಿರುವುದು ಹಾಗೂ ಧಾರ್ಮಿಕ-ಶೈಕ್ಷಣಿಕ ಕಾರ್ಯಗಳಲ್ಲಿ ಗಂಭೀರ ಲೋಪಗಳಾಗುತ್ತಿರುವುದನ್ನು ಖಂಡಿಸಿ ಹಿಂದೂ ರಕ್ಷಣಾ ವೇದಿಕೆ ಕಡಬ ಮತ್ತು ಸುಳ್ಯ ತಾಲೂಕು ದಕ್ಷಿಣ ಕನ್ನಡ ಘಟಕವು ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕ್ಷೇತ್ರದ ಅಭಿವೃದ್ಧಿಗೆ ಅಡ್ಡಿಯಾಗಿರುವ ಅಧಿಕಾರಿಗಳು ಮತ್ತು ಇತರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಹಿಂದೂ ರಕ್ಷಣಾ ವೇದಿಕೆಯ ಅಧ್ಯಕ್ಷರು ಹಾಗೂ ಸದಸ್ಯರು ಜನವರಿ,08, ರಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಆಡಳಿತ ಮಂಡಳಿಗೆ ಹಾಗೂ ಕಾರ್ಯನಿರ್ವಹಣಾಧಿಕಾರಿಗಳಿಗೆ ಹಕ್ಕೊತಾಯ ಮನವಿ ಸಲ್ಲಿಸಿದ್ದಾರೆ. ಕ್ಷೇತ್ರದ ಸಮಗ್ರ ಅಭಿವೃದ್ಧಿ ಯೋಜನೆಯ ಕಡತ ಸರಕಾರದ ಕಾರ್ಯದರ್ಶಿಗಳ ಕಚೇರಿಯಲ್ಲಿ ಸ್ಥಗಿತಗೊಂಡಿರುವುದು, ದೇವಸ್ಥಾನದ ಧಾರ್ಮಿಕ ಕಾರ್ಯಗಳಲ್ಲಿ ದಿಟ್ಟಂ ಬದಲಾವಣೆ, ಕ್ಷೇತ್ರದ ಅಧೀನದಲ್ಲಿರುವ ಕಾಲೇಜಿನ ಉಪನ್ಯಾಸಕರ ವೇತನ ಪಾವತಿಯಲ್ಲಿ ವಿಳಂಬ, ಹಾಗೂ ಆಡಳಿತ ಮಂಡಳಿ ನಿರ್ಣಯಿಸಿದ ಸಣ್ಣ-ಪುಟ್ಟ ಕೆಲಸಗಳನ್ನು ತುರ್ತಾಗಿ ಕೈಗೊಳ್ಳದೆ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ದೇವರ ಭಕ್ತರಾಗಿ ಪ್ರಶ್ನಿಸುವುದು ನಮ್ಮ ಕರ್ತವ್ಯ ಎಂದು ವೇದಿಕೆ ತಿಳಿಸಿದೆ. ಈ ಕುರಿತು ಮಾನ್ಯ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಧಾರ್ಮಿಕ ದತ್ತಿ ಸಚಿವರನ್ನು ನೇರವಾಗಿ ಭೇಟಿ ಮಾಡಿ ತಪ್ಪಿತಸ್ಥ ...

ಚಲನಚಿತ್ರ ನಟಿ ಶ್ರುತಿ ಕುಕ್ಕೆ ಸುಬ್ರಹ್ಮಣ್ಯ ಭೇಟಿ.

Image
ಸುಬ್ರಹ್ಮಣ್ಯ ಜನವರಿ 8 : ಕನ್ನಡ ಚಲನಚಿತ್ರ ರಂಗದ ಖ್ಯಾತ ನಟಿ ಶ್ರುತಿ ಅವರು ಕುಟುಂಬ ಸಮೇತರಾಗಿ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನಕ್ಕೆ ಗುರುವಾರ ಭೇಟಿ ನೀಡಿದರು. ಶೃತಿ ಅವರೊಂದಿಗೆ ಅವರ ಅಪ್ಪ, ಅಮ್ಮ, ಚಿಕ್ಕಮ್ಮ ಹಾಗೂ ಕುಟುಂಬಸ್ಥರು ಜೊತೆಗಿದ್ದರು. ಶ್ರೀ ದೇವಳದಲ್ಲಿ ಪಂಚಾಮೃತ ಮಹಾಅಭಿಷೇಕ ಸೇವೆ ಸಲ್ಲಿಸಿದರು. ಸತ್ಯನಾರಾಯಣ ಅಸ್ರನ್ನ ಅವರು ತೀರ್ಥ ಹಾಗೂ ಶ್ರೀ ದೇವರ ಪ್ರಸಾದ ನೀಡಿದರು. ಅಲ್ಲಿಂದ ಹೊ ಸಳಿಗಮ್ಮ ದೈವದ ಗುಡಿಯಲ್ಲಿ ದರ್ಶನ ಮಾಡಿದರು. ತದನಂತರ ಶ್ರೀ ದೇವಳದ ಆಡಳಿತ ಕಚೇರಿಯಲ್ಲಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ ಇಂಜಾಡಿ ಅವರು ಶಾಲು ಹೊಂದಿಸಿ ಶೃತಿ ಅವರನ್ನು ಗೌರವಿಸಿದರು. ಈ ಸಂದರ್ಭದಲ್ಲಿ ವ್ಯವಸ್ಥಾಪನ ಸಮಿತಿ ಸದಸ್ಯರುಗಳಾದ ಅಜಿತ್ ಪಾಲೇರಿ,ಸೌಮ್ಯ ಭರತ್, ಲೀಲಾ ಮನಮೋಹನ್,ಪ್ರವೀಣ ರೈ, ಮಾಸ್ಟರ್ ಪ್ಲಾನ್ ಸಮಿತಿಯ ಅಚ್ಚುತ ಗೌಡ ಬಳ್ಪ, ಕಾರ್ಯ ನಿರ್ವಾಹಕ ಅಧಿಕಾರಿ ಅರವಿಂದ ಅಯ್ಯಪ್ಪ ಸುತಗೊಂಡಿ, ಸಹಾಯಕ ಅಧಿಕಾರಿ ಯೇಸುರಾಜ್, ಶಿಷ್ಟಾಚಾರ ಅಧಿಕಾರಿ ಜಯರಾಮರಾವ್ ಶಿಷ್ಟಾಚಾರ ವಿಭಾಗದ ಪ್ರಮೋದ್ ಮತ್ತಿತರರು ಉಪಸ್ಥಿತರಿದ್ದರು. ನಂತರ ಶ್ರೀ ದೇವಳದ ಅಲ್ಲಿ ಭೋಜನ ಪ್ರಸಾದ ಸ್ವೀಕರಿಸಿ ತೆರಳಿದರು.

ಕಾರ್ತಿಕೇಯನ ಕ್ಷೇತ್ರಕ್ಕೆ ಕಾವಲಾಗಿದ್ದ ನಿಷ್ಠಾವಂತ ಪೊಲೀಸ್ ಅಧಿಕಾರಿ – ಕಾರ್ತಿಕ್ ಎಸ್ಐಗೆ ಕುಕ್ಕೆ ಸುಬ್ರಹ್ಮಣ್ಯದಿಂದ ಆತ್ಮೀಯ ಬೀಳ್ಕೊಡುಗೆ.

Image
ಕುಕ್ಕೆ ಸುಬ್ರಹ್ಮಣ್ಯ :ಯಾವುದೇ ಊರಿನಲ್ಲಾದರೂ ಪೊಲೀಸ್ ಇಲಾಖೆ ಹಾಗೂ ಮಾಧ್ಯಮಗಳ ನಡುವೆ ಉತ್ತಮ ಸಂಬಂಧ ಇರುವುದು ಆ ಪ್ರದೇಶದ ಸಾರ್ವಜನಿಕ ಹಿತದೃಷ್ಟಿಯಿಂದ ಅತ್ಯಂತ ಅಗತ್ಯ. ಸಾರ್ವಜನಿಕರಿಗೆ ಸತ್ಯ ಹಾಗೂ ನಿಖರ ಮಾಹಿತಿ ತಲುಪಿಸುವ ಕಾರ್ಯದಲ್ಲಿ ಪೊಲೀಸರು ಮತ್ತು ಮಾಧ್ಯಮಗಳು ಪರಸ್ಪರ ಸಹಕಾರದೊಂದಿಗೆ ಕೆಲಸ ಮಾಡುತ್ತವೆ. ಈ ನಿಟ್ಟಿನಲ್ಲಿ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿಯೂ ಪೊಲೀಸ್–ಮಾಧ್ಯಮ ಸಂಬಂಧ ಸದಾ ಸೌಹಾರ್ದಯುತವಾಗಿದ್ದು, ಅದಕ್ಕೆ ಕಾರಣರಾದ ಅಧಿಕಾರಿಗಳಲ್ಲಿ ಕಾರ್ತಿಕ್ ಎಸ್ಐ ಪ್ರಮುಖರಾಗಿದ್ದಾರೆ. ಕುಕ್ಕೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಸುಮಾರು ಎರಡು ವರ್ಷಗಳ ಕಾಲ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಕಾರ್ತಿಕ್ ಅವರು ಇದೀಗ ಮಂಗಳೂರಿಗೆ ವರ್ಗಾವಣೆಯಾಗಿ ತೆರಳುತ್ತಿದ್ದಾರೆ. ತಮ್ಮ ಸೇವಾ ಅವಧಿಯಲ್ಲಿ ಅವರು ನಿಷ್ಠಾವಂತ, ಜನಸ್ನೇಹಿ ಹಾಗೂ ಕಾನೂನು ಅರಿವಿನಿಂದ ಕೂಡಿದ ಅಧಿಕಾರಿಯಾಗಿ ಜನಮಾನಸದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದಿದ್ದಾರೆ. ಕಾರ್ತಿಕ್ ಎಸ್ಐ ಅವರು ಯಾವುದೇ ಪ್ರಕರಣ ಬಂದರೂ ಅದನ್ನು ಆಳವಾಗಿ ಪರಿಶೀಲಿಸಿ, ಕಾನೂನಿನ ಚೌಕಟ್ಟಿನಲ್ಲಿಯೇ ನ್ಯಾಯಯುತವಾಗಿ ನಿಭಾಯಿಸುವ ಅಪೂರ್ವ ಸಾಮರ್ಥ್ಯ ಹೊಂದಿದ್ದರು. ಅವರ ಬಳಿ ಬಂದ ಪ್ರಕರಣಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿ ಜನಸಾಮಾನ್ಯರಿಗೆ ನ್ಯಾಯ ಒದಗಿಸುವಲ್ಲಿ ಸದಾ ಮುಂಚೂಣಿಯಲ್ಲಿದ್ದರು. ಈ ಬಗ್ಗೆ ನಾವು ಹೇಳುವುದಕ್ಕಿಂತ, ಸುಬ್ರಹ್ಮಣ್ಯದ ಜನಸಾಮಾನ್ಯರೇ ಅವರ...