Posts

Showing posts from November, 2025

ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಕೇಂದ್ರ ಸಹಕಾರಿ ಬ್ಯಾಂಕಿನಿಂದ ಸಹಾಯಧನ.

Image
ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ಮಂಗಳೂರು ಇದರ ಅಧ್ಯಕ್ಷ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿರುವ ಶ್ರೀ ಶಶಿಕುಮಾರ್ ರೈ ಬಾಲ್ಯೊಟ್ಟು ನವಂಬರ್ 24ರಂದು ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಭೇಟಿ ನೀಡಿ ಸಂಘದಲ್ಲಿ ಅಳವಡಿಸಿರುವ ನೂತನ ಲಿಫ್ಟ್ ಹಾಗೂ ಇತರ ಕಾಮಗಾರಿಗಳಿಗೆ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ನೀಡಲಾದ 5 ಲಕ್ಷ ಮೊತ್ತದ ಸಹಾಯಧನದ ಚೆಕ್ಕನ್ನು ಸಂಘದ ಉಪಾಧ್ಯಕ್ಷ ಶ್ರೀ ರವಿಚಂದ್ರ ಹೊಸವಕ್ಲು ರವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಶಶಿಕುಮಾರ್ ರೈ ಅವರು ಸಂಘವು ಹೊಸತನದೊಂದಿಗೆ ಸದಸ್ಯರಿಗೆ ಸೇವೆಯನ್ನು ನೀಡುತ್ತಿರುವುದು ಮತ್ತು ಹೆಚ್ಚಿನ ವ್ಯವಹಾರವಿದ್ದರೂ ಶೇಕಡ 100 ಸಾಲ ವಸೂಲಾತಿ ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಘದ ವತಿಯಿಂದ ಅವರನ್ನು ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಯಾಕರ.ರೈ.ಕೆ.ಯಂ ವ್ಯವಸ್ಥಾಪಕ ಮಹೇಶ್ ಎಂ.ಟಿ ಸಿಬ್ಬಂದಿಗಳಾದ ಸಂದೀಪ್ ಶೆಟ್ಟಿ , ಧನುಷ್. ಶ್ರೀಮತಿ ಪ್ರಜ್ಞ ಮಾರ್ಲ, ವನಿತ ಶೆಟ್ಟಿ , ಪ್ರಮೋದ್ ರವರುಗಳು ಉಪಸ್ಥಿತರಿದ್ದರು.

ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ವಿಶ್ರಾಂತ ಧರ್ಮಾಧ್ಯಕ್ಷ ಪರಮ ಪೂಜ್ಯ ಲಾರೆನ್ಸ್ ಮುಕ್ಕುಯಿಗೆ ಭಕ್ತಿ ಪೂರ್ವಕ ನುಡಿ ನಮನ

Image
ನೆಲ್ಯಾಡಿ :ನೆಲ್ಯಾಡಿಯ ಪವಿತ್ರ ಸಂತ ಅಲ್ಫೋನ್ಸ ಕ್ಷೇತ್ರ ದಲ್ಲಿ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಾಗಿ ಇಪ್ಪತಾ ರು ವರ್ಗಳ ಸುದೀರ್ಘ ಸೇವೆ ಯ ನಂತರ ನಿವೃತ್ತರಾದ ಪರಮ ಪೂಜ್ಯ ಅತಿವಂದನಿಯ ಮಾರ್ ಲಾರೆನ್ಸ್ ಮುಕ್ಕುಯಿ ಅವರಿಗೆ. ಶನಿವಾರ ನಡೆದ ಕಾರ್ಯಕ್ರಮದಲ್ಲಿ ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದ ಸರ್ವ ಸದಸ್ಯರು ಹಾಗೂ ನಾಡಿನ ಗಣ್ಯರ ಉಪಸ್ಥಿತಿಯಲ್ಲಿ ಗೌರವ ಸಮರ್ಪಸಿ ವಿಶ್ರಾಂತ ಜೀವನಕ್ಕೆ ಶುಭವನ್ನು ಹಾರೈಸಲಾಯಿತು. ಕರಾವಳಿಯಲ್ಲಿ ಸೌಹಾರ್ದತೆ, ಶಾಂತಿ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಲು ಶ್ರೀ ಗಳು ನೀಡಿದ ಸೇವೆ ಯನ್ನು ಗಣ್ಯರು ಸ್ಮರಿಸಿದರು.ನೂತನ ಧರ್ಮಾದ್ಯಕ್ಷ ರಾದ ಅತಿ ವಂದನಿಯ ಪರಮ ಪೂಜ್ಯ ಮಾರ್ ಜೇಮ್ಸ್ ಪಟ್ಟೆರಿಲ್ ಚರ್ಚ್ ನ ಧರ್ಮ ಗುರುಗಳಾದ ವಂದನಿಯ. ಫಾದರ್. ಶಾಜಿ ಮಾತ್ಯು, ಫಾ. ಅಲೆಕ್ಸ್, ರೇಜಿಯನಲ್ ಸುಪಿರಿಯರ್ ಸಿಸ್ಟೆರ್ ಲಿಸ್ ಮಾತ್ಯು ಎಸ್ ಎಚ್ ಟ್ರಸ್ಟಿಗಳಾದ ಜೋನ್ಸನ್ ಪುಳಿಕ್ಕಲ್, ರಾಜೇಶ್ ತೆಕ್ಕಿನಾಟ್ಟು,ರೆಜಿ ಕೊಳಂಗರಾತ್, ಜೋಯ್ ಪುತ್ತೆನ್ಪರಂಭಿಲ್, ಸಂಯೋಜಕರಾಗಿ ಶ್ರೀ ಜೋರ್ಜ್ ಕುಟ್ಟಿ ಆಯಾಮ್ ಕುಡಿ ಮೊದಲಾದವರು ನೇತೃತ್ವವಹಿಸಿದ್ದರು. ವಿವಿದ ಸಂಘಟನೆಗಳಪದಾಧಿಕಾರಿಗಳು ಗೌರವ ಕಾಣಿಕೆಯನ್ನು ಸಮರ್ಪಸಿದರರು

ಬೆಳ್ತಂಗಡಿ ಧರ್ಮ ಪ್ರಾಂತ್ಯದ ನೂತನ ಧರ್ಮಾಧ್ಯಕ್ಷರಿಗೆ ನೆಲ್ಯಾಡಿ ಯ ವಿವಿಧ ಸಂಘ ಟನೆಗಳಿಂದ ಗೌರವ ಅರ್ಪಣೆ.

Image
ನೆಲ್ಯಾಡಿ :ಬೆಳ್ತಂಗಡಿ ಧರ್ಮ ಪ್ರಾಂತ್ಯದ ನೂತನ  ಧರ್ಮಾ ಧ್ಯಕ್ಷ ರಾಗಿ ಪೀಠಾ ರೋಹಣ ಪರಮ ಪೂಜ್ಯ  ಅತಿ ವಂದನಿಯ ಮಾರ್ ಜೇಮ್ಸ್ ಪಟ್ಟೆರಿಲ್ ಸಿ ಎಂ ಎಫ್ ಅವರಿಗೆ ನೆಲ್ಯಾಡಿ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರದಲ್ಲಿ ನಡೆದ ಸಮಾರಂಭದಲ್ಲಿ ಪೂಜ್ಯರನ್ನು ನೆಲ್ಯಾಡಿ ಪೇಟೆ ಹಾಗೂ ಸಮೀಪದ ವಿವಿಧ ಸಂಘ ಸಂಸ್ಥೆಗಳ ನೇತೃ ತ್ವದಲ್ಲಿ ಸನ್ಮಾನಿಸಿ ಗೌರವ ಸೂಚಿಸಲಾಯಿತು. ವರ್ತಕ ಸಂಘ, ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿ, ಕಟ್ಟಡ ಮಾಲಕ ರ ಸಂಘ, ರಿಕ್ಷಾ ಚಾಲಕ ಮಾಲಕ ಸಂಘ ಟಾಕ್ಸಿ ವಾಹನಗಳ ಸಂಘ ಹಾಗೂ ಇತರೆ ಸಾಮಾಜಿಕ ಮತ್ತು ಹಾಗೂ ರಾಜಕೀಯ ಮುಖಂಡರು ಬಾಗವಹಿಸಿ ಶುಭ ಹಾರೈಸಿದರು.ಶ್ರೀ ಟೋಮಿ ಮಟ್ಟಮ್, ರಘು ಲಾಲ್, ಗಣೇಶ್ ರಶ್ಮಿ, ರಫೀಕ್ ಸೀಗಲ್, ಮುತಾಲಿಬ್ ಎಂ ಆರ್, ದಿನೇಶ್ ಎಂ ಟಿ, ಪ್ರಶಾಂತ್ ನೇಸರ, ರಿಚರ್ಡ್ ಫೆರ್ನಾಂಡಿಸ್, ಜೋಸೆಫ್ ಡಿ ಸೋಜಾ ಸಂತೋಷ್ ಹೊಸಮಜಾಲು ಉಪಸ್ಥಿತರಿದ್ದರು.

ಕುಕ್ಕೆ ಚಂಪಾ ಷಷ್ಠಿ ಕೃಷಿ ಮೇಳದ ಯಶಸ್ಸಿಗೆ ‘ಲೀಲಾ ಮನೋಮೋಹನ್’ ಅಧ್ಯಕ್ಷೆ– ಮಾದರಿ ನಾಯಕತ್ವಕ್ಕೆ ಭಾರಿ ಮೆಚ್ಚುಗೆ.

Image
ಕುಕ್ಕೆ ಸುಬ್ರಹ್ಮಣ್ಯ :ಈ ವರ್ಷದ ಚಂಪಾ ಷಷ್ಠಿ ಉತ್ಸವದ ಪ್ರಮುಖ ಆಕರ್ಷಣೆಯಾಗಿದ್ದ ಕೃಷಿ ಮೇಳ ಭರ್ಜರಿ ಯಶಸ್ಸನ್ನು ಕಂಡಿದ್ದು, ಅದರ ಸಂಪೂರ್ಣ ಶ್ರೇಯಸ್ಸು ವ್ಯವಸ್ಥಾಪನಾ ಸಮಿತಿ ಸದಸ್ಯೆ ಶ್ರೀಮತಿ ಲೀಲಾ ಮನೋಮೋಹನ್ ಅವರಿಗೆ ಸಲ್ಲುತ್ತದೆ ಎಂದು ಸಾರ್ವಜನಿಕರು ಹಾಗೂ ಆಯೋಜಕರು ಏಕಕಂಠದಿಂದ ಪ್ರಶಂಸಿಸಿದ್ದಾರೆ. ಕಳೆದ ಹಲವು ತಿಂಗಳಿನಿಂದ ಈ ಮೇಳದ ಯೋಜನೆ, ತಯಾರಿ, ಪ್ರದರ್ಶನದ ವಿನ್ಯಾಸ, ರೈತರ ಆಹ್ವಾನ, ಸನ್ಮಾನ ಕಾರ್ಯಕ್ರಮ, ಮತ್ತು ವ್ಯವಸ್ಥಾಪಕ ತಂಡಗಳ ಸಂಯೋಜನೆ—ಎಲ್ಲವನ್ನು ಲೀಲಾ ಮನೋಮೋಹನ್ ಅವರು ಸ್ವತಃ ಮುನ್ನಡೆಸಿ ನಿರ್ವಹಿಸಿದ್ದಾರೆ. ವಿವಿಧ ಇಲಾಖೆಗಳ ಜೊತೆ ಸಂಯೋಜನೆ, ರೈತರ ಅಗತ್ಯಗಳನ್ನು ಅರಿತು ವೇದಿಕೆ ಕಲ್ಪಿಸುವುದು, ಮತ್ತು ಮೇಳದಲ್ಲಿ ಕೃಷಿ ತಂತ್ರಜ್ಞಾನ ಹಾಗೂ ನೈಸರ್ಗಿಕ ಪದ್ದತಿಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವಲ್ಲಿ ಅವರು ತೋರಿಸಿದ ಪರಿಶ್ರಮ ವಿಶೇಷವಾಗಿ ಗಮನ ಸೆಳೆದಿದೆ. ಸಮಿತಿಯ ವಿಶ್ವಾಸಕ್ಕೆ ತಕ್ಕ ಕಾರ್ಯಕ್ಷಮತೆ ಲೀಲಾ ಮನೋಮೋಹನ್ ಅವರ ಉಪಕ್ರಮದಿಂದ ಈ ಬಾರಿ ಮೇಳವು: ಉತ್ತಮ ಮಾದರಿ ಸ್ಟಾಲ್‌ಗಳ ವ್ಯವಸ್ಥೆ ಜೈವಿಕ ಉತ್ಪನ್ನಗಳ ಪ್ರದರ್ಶನ ನೈಸರ್ಗಿಕ ಕೃಷಿಯ ಮಾಹಿತಿ ಕ್ಯಾಂಪ್‌ಗಳು ಜೇನು ಕೃಷಿ, ಪರಂಪರೆ ಬೀಜ, ಮಣ್ಣು ಸಂರಕ್ಷಣೆ ಕುರಿತ ಪ್ರದರ್ಶನ ಮತ್ತು ಪ್ರಗತಿಪರ ರೈತರ ಗೌರವ ಇವುಗಳ ಮೂಲಕ ಹೆಚ್ಚು ಸಮೃದ್ಧಿಯನ್ನೂ, ಹೊಸತನವನ್ನೂ ತಂದಿದೆ. ಜನಮೆಚ್ಚ...

ಕುಕ್ಕೆ ಜಾತ್ರೆಯಲ್ಲಿ ಮಹಿಳೆಯ ಮಾಂಗಲ್ಯ ಸರ ಕಳವು — ₹6 ಲಕ್ಷ ಮೌಲ್ಯದ ಆಭರಣ ಕಳ್ಳತನ.

Image
ಸುಬ್ರಹ್ಮಣ್ಯ , ನವೆಂಬರ್ 26: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಚಂಪಾ ಷಷ್ಠಿ ಜಾತ್ರಾ ಮಹೋತ್ಸವಕ್ಕೆ ಬಂದಿದ್ದ ಮಹಿಳೆಯೊಬ್ಬರ ಸರ ಸುಮಾರು ₹6 ಲಕ್ಷ ಮೌಲ್ಯದ ಚಿನ್ನದ ಮಾಂಗಲ್ಯ ಕಳುವಾಗಿದೆ. ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಫಿರ್ಯಾದಿ ಹೇಮಲತಾ ಯು (52), ನಿವಾಸ ತುಂಬೆತ್ತಡ್ಕ ಮನೆ, ಕಡಬ ಗ್ರಾಮ, ಅವರು ಬೆಳಗ್ಗೆ 6.50ಕ್ಕೆ ದೇವರ ದರ್ಶನಕ್ಕಾಗಿ ದೇವಸ್ಥಾನ ಪ್ರವೇಶಿಸಿದ್ದರು. ನಂತರ ರಥಬೀದಿಯ ಬಲ ಭಾಗದಲ್ಲಿ ನಿಂತು ಉತ್ಸವ ವೀಕ್ಷಿಸುತ್ತಿದ್ದ ವೇಳೆ ಭಾರೀ ಜನಸಂದಣಿ ಕಂಡು ದೇವಸ್ಥಾನದ ಒಳಗೆ ತೆರಳುತ್ತಾರೆ. ದೇವಾಲಯದೊಳಗೆ ತಮ್ಮ ಪರಿಚಿತರಾದ ಬೇಬಿ ಬಿದ್ದಪ್ಪ ಅವರು “ನಿಮ್ಮ ಕತ್ತಿನಲ್ಲಿದ್ದ ಸರ ಕಾಣುತ್ತಿಲ್ಲ” ಎಂದು ಹೇಳಿದಾಗ, ಹೇಮಲತಾ ಅವರು ತಕ್ಷಣ ಪರಿಶೀಲಿಸಿದ್ದು, ತಮ್ಮ ಮಾಂಗಲ್ಯ ಸರ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಈ ಘಟನೆ ಬೆಳಗ್ಗೆ 8.50ರ ಸುಮಾರಿಗೆ ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ. ಜಾತ್ರೆಯಲ್ಲಿ ಹೆಚ್ಚು ಜನಸಂದಣಿ ಇರುವುದನ್ನು ದುರುಪಯೋಗಪಡಿಸಿಕೊಂಡು, ಅಪರಿಚಿತರು ಹೇಮಲತಾ ಅವರ ಗಮನಕ್ಕೆ ಬಾರದಂತೆ ಮಾಂಗಲ್ಯವನ್ನು ಕಳವು ಮಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳವಾಗಿರುವ ಸರದ ತೂಕ ಸುಮಾರು 100 ಗ್ರಾಂ ಆಗಿದ್ದು, ಅದರ ಅಂದಾಜು ಮೌಲ್ಯ ರೂ. 6,00,000 ಎಂದು ಅಂದಾಜಿಸಲಾಗಿದೆ. ಈ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂ. 59/20...

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಟಿ ಬ್ರಹ್ಮರಥೋತ್ಸವ ನವೆಂಬರ್ 26ರಂದುಪ್ರಾತಃ 7.29ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ರಥೋತ್ಸವ.

Image
ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ವಾರ್ಷಿಕ ಚಂಪಾಷಷ್ಟಿ ಜಾತ್ರಾಮಹೋತ್ಸವದ ಪ್ರಮುಖ ಆಕರ್ಷಣೆಯಾದ ಬ್ರಹ್ಮರಥೋತ್ಸವ ಈ ಬಾರಿ ನವೆಂಬರ್ 26, ಮಂಗಳವಾರ, ಪ್ರಾತಃ 7.29ರ ವೃಶ್ಚಿಕ ಲಗ್ನ ಸುಮುಹೂರ್ತದಲ್ಲಿ ಜರುಗಲಿರುವುದು. ಈ ಕುರಿತು ಮಾಹಿತಿ ಹಂಚಿಕೊಂಡ ಆಡಳಿತ ಮಂಡಳಿ ಅಧ್ಯಕ್ಷ ಹರೀಶ್ ಇಂಜಾಡಿ, ಜಾತ್ರಾ ಅವಧಿಯಲ್ಲಿ ಸಾವಿರಾರು ಭಕ್ತರು ದೇಶದ ವಿವಿಧ ಭಾಗಗಳಿಂದ ಆಗಮಿಸುವ ನಿರೀಕ್ಷೆಯಿದ್ದು, ದೇವಸ್ಥಾನ ಆಡಳಿತವು ಎಲ್ಲಾ ವ್ಯವಸ್ಥೆಗಳನ್ನೂ ಸಿದ್ಧಪಡಿಸಿದೆ ಎಂದು ಹೇಳಿದ್ದಾರೆ. ಬ್ರಹ್ಮರಥಸವಾರಿ ಸುರಕ್ಷಿತವಾಗಿ ನಡೆಯುವಂತೆ ವಿಶೇಷ ಭದ್ರತಾ ಕ್ರಮಗಳು ಕೈಗೊಳ್ಳಲಾಗಿದೆ. ದೇವಸ್ಥಾನದ ಒಳಾಂಗಣ ಹಾಗೂ ಹೊರಾಂಗಣಗಳಲ್ಲಿ ಅಗತ್ಯ ವೈದ್ಯಕೀಯ, ಕುಡಿಯುವ ನೀರು, ನಿಯಂತ್ರಿತ ಪ್ರವೇಶ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಭಕ್ತರ ಸುಗಮ ದರ್ಶನ ಹಾಗೂ ರಥ ಎಳೆಯುವ ಮಾರ್ಗದಲ್ಲಿ ಟ್ರಾಫಿಕ್ ನಿಯಂತ್ರಣಕ್ಕೆ ಪೊಲೀಸರೊಂದಿಗೆ ಸಮನ್ವಯ ಮಾಡಲಾಗಿದೆ ಎಂದು ತಿಳಿಸಿದರು. ಪ್ರಾತಃಕಾಲ ಮಂಗಳ ವಾದ್ಯ, ಧಾರ್ಮಿಕ ವಿಧಿ–ವಿಧಾನಗಳೊಂದಿಗೆ ರಥೋತ್ಸವ ಪ್ರಾರಂಭವಾಗಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಜಾತ್ರಾಮಹೋತ್ಸವದ ಅಂಗವಾಗಿ ವಿಶೇಷ ಅನ್ನಸಂತರ್ಪಣೆ, ನೈವೇದ್ಯ ಪೂಜೆಗಳು ನಡೆಯಲಿದ್ದು, ದೇಗುಲದಲ್ಲಿ ಧಾರ್ಮಿಕ ವಾತಾವರಣ ಮನೆ ಮಾಡಿದೆ.

ಕುಕ್ಕೆ ಸುಬ್ರಹ್ಮಣ್ಯ ದೇವಳಕ್ಕೆ ಭಕ್ತರಿಂದ ವೀಲ್‌ಚೇರ್‌ ದಾನ.

Image
ಸುಬ್ರಹ್ಮಣ್ಯ : ಭಕ್ತರ ಸೇವಾಭಾವದಿಂದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮತ್ತೆ ಮಾನವೀಯತೆ ಮೂಡಿಬಂದಿದೆ. ವೃದ್ಧರು ಹಾಗೂ ನಡೆದಾಡಲು ತೊಂದರೆ ಅನುಭವಿಸುವ ಭಕ್ತರಿಗೆ ನೆರವಾಗುವ ಉದ್ದೇಶದಿಂದ ಶಿವಮೊಗ್ಗದ ಕುಕ್ಕೆ ಕ್ಷೇತ್ರದ ಭಕ್ತರು ದಾನವಾಗಿ ನೀಡಿದ ಎರಡು ವೀಲ್ ಚೇರ್‌ಗಳನ್ನು ದೇವಳಕ್ಕೆ ಅಧಿಕೃತವಾಗಿ ಹಸ್ತಾಂತರಿಸಲಾಯಿತು. ಮಂಗಳವಾರ ನಡೆದ ಈ ಕಾರ್ಯಕ್ರಮದಲ್ಲಿ ಶಿವಮೊಗ್ಗದ ತರಿಕೇರಿ ಸರ್ಕಾರಿ ಪಿಯು ಕಾಲೇಜಿನ ಆಂಗ್ಲಭಾಷಾ ಉಪನ್ಯಾಸಕ ಕಿರಣ್ ಕುಮಾರ್ ಹಾಗೂ ಗಜಾನನ ಮೆಡಿಕಲ್ ಮಾಲೀಕರಾದ ವಿನಾಯಕ ಸ್ವಾಮಿ ಅವರು ವೀಲ್‌ಚೇರ್‌ಗಳನ್ನು ಕೊಡುಗೆಯಾಗಿ ನೀಡಿದರು. ಅವರ ಪರವಾಗಿ ಎಸ್.ಎಸ್.ಪಿ.ಯು. ಕಾಲೇಜಿನ ಉಪನ್ಯಾಸಕ ಸೋಮಶೇಖರ ನಾಯಕ್ ಅವರು ವೀಲ್ ಚೇರ್‌ಗಳನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರಿಗೆ ಹಸ್ತಾಂತರಿಸಿದರು. ಈ ವೇಳೆ ಹರೀಶ್ ಇಂಜಾಡಿ ಅವರು ದಾನಿಗಳ ಸೇವಾಸ್ಪೂರ್ತಿಯನ್ನು ಮೆಚ್ಚಿ, ದೇವಳದ ವತಿಯಿಂದ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯೆ ಲೀಲಾ ಮನಮೋಹನ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಲೋಲಾಕ್ಷ ಕೈಕಂಬ, ಎಸ್.ಎಸ್.ಪಿ.ಯು. ಕಾಲೇಜಿನ ಪ್ರಾಂಶುಪಾಲ ಸೋಮಶೇಖರ ನಾಯಕ್, ವಸಂತ ಕೆದಿಲ, ಪ್ರದೀಪ್ ಕಳಿಗೆ, ವಿಜಯಕುಮಾರ್ ನಡುತೋಟ ಮತ್ತಿತರರು ಭಾಗವಹಿಸಿದ್ದರು.

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಪಂಚ ಗ್ಯಾರಂಟಿ ಅನುಷ್ಠಾನ ಸಮಾಲೋಚನಾ ಸಭೆ.

Image
ಸುಬ್ರಹ್ಮಣ್ಯ : ಕರ್ನಾಟಕ ರಾಜ್ಯ ಪಂಚ ಗ್ಯಾರಂಟಿ ಅನುಷ್ಠಾನ ಯೋಜನೆಯ ರಾಜ್ಯ ಉಪಾಧ್ಯಕ್ಷರು ಹಾಗೂ ಮೈಸೂರು ವಿಭಾಗ–ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಡಾ. ಪುಷ್ಪ ಅಮರನಾಥ್ ಅವರ ಅಧ್ಯಕ್ಷತೆಯಲ್ಲಿ ಸಮಾಲೋಚನಾ ಸಭೆ ಮತ್ತು ಪಲಾನುಭವಿಗಳೊಂದಿಗೆ ನೇರ ಸಂವಾದ ಕಾರ್ಯಕ್ರಮ, ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಸಭಾಂಗಣದಲ್ಲಿ ಭಾನುವಾರ ನಡೆಯಿತು. ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಕುಕ್ಕೆ ಸುಬ್ರಹ್ಮಣ್ಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಕಡಬ ತಾಲೂಕು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುದೀರ್ ಕುಮಾರ್ ಶೆಟ್ಟಿ, ಸುಳ್ಯ ತಾಲೂಕು ಅದೇ ಸಮಿತಿ ಅಧ್ಯಕ್ಷ ಹಮೀದ್, ಕಡಬ ತಾಲೂಕು ಕಾರ್ಯ ನಿರ್ವಹಣಾಧಿಕಾರಿ ನವೀನ್ ಭಂಡಾರಿ, ಸಂಬಂಧಿಸಿದ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಅನೇಕ ಸಂಖ್ಯೆಯ ಫಲಾನುಭವಿಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಮಾತನಾಡಿದ ಡಾ. ಪುಷ್ಪ ಅಮರನಾಥ್ ಅವರು, “ಪಂಚ ಗ್ಯಾರೆಂಟಿ ಯೋಜನೆ ಯಶಸ್ವಿಯಾಗಲು ಜೋಡೆತ್ತುಗಳ ಅಧಿಕಾರಿಗಳು ಹಾಗೂ ಅನುಷ್ಠಾನ ಪ್ರಾಧಿಕಾರಗಳು ಸಮನ್ವಯದಿಂದ, ದೃಢವಾಗಿ ಕೆಲಸ ಮಾಡಬೇಕು. ಗ್ಯಾರೆಂಟಿ ಯೋಜನೆಗಳು ಆರಂಭಗೊಂಡು ಈಗ ಮುಕ್ಕಾಲು ವರ್ಷ ಪೂರೈಸಿದೆ. ಈ ಅವಧಿಯಲ್ಲಿ ಜಿಲ್ಲೆಯಲ್ಲಿ ಗ್ಯಾರೆಂಟಿಗಳ ತಲುಪುವಿಕೆಯನ್ನು ಪರಿಣಾಮಕಾರಿಯಾಗಿ ನಿರ್ವಹಿಸಿರುವುದಕ್ಕಾಗಿ ಎಲ್ಲಾ ಅಧಿಕಾರಿಗಳಿಗೂ ಹಾಗೂ ಸಮಿತಿಗಳಿಗೆ ಅಭಿನಂದನೆ...

ಡಾ. ಪುಷ್ಪ ಅಮರನಾಥ್ ಕುಕ್ಕೆ ಸುಬ್ರಹ್ಮಣ್ಯ ಭೇಟಿ – ಜಾತ್ರಾ ಸಂಭ್ರಮದಲ್ಲಿ ಪಾಲ್ಗೊಂಡರು.

Image
ಕುಕ್ಕೆ ಸುಬ್ರಹ್ಮಣ್ಯ , ನ. 22,ಕರ್ನಾಟಕ ರಾಜ್ಯ ಪಂಚ ಗ್ಯಾರಂಟಿ ಅನುಷ್ಠಾನ ಯೋಜನೆಯ ರಾಜ್ಯ ಉಪಾಧ್ಯಕ್ಷರು ಹಾಗೂ ಮೈಸೂರು ವಿಭಾಗ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಡಾ. ಪುಷ್ಪ ಅಮರನಾಥ್ ಅವರು ಇಂದು ಕುಕ್ಕೆ ಸುಬ್ರಹ್ಮಣ್ಯ ಶ್ರೀ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ ಜಾತ್ರಾ ಮಹೋತ್ಸವದಲ್ಲಿ ವಿಶೇಷವಾಗಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಪಂಚಾಯತ್ ಗ್ಯಾರಂಟಿ ಅನುಷ್ಠಾನ ಯೋಜನೆಯ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಕಡಬ ತಾಲೂಕು ಪಂಚಾಯಿತಿ ಅನುಷ್ಠಾನ ಯೋಜನೆ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ, ಸದಸ್ಯರು ಅಶೋಕ್ ನೆಕ್ರಾಜೆ, ಡಾ. ರಘು, ಮಾಸ್ಟರ್ ಪ್ಲಾನ್ ಸದಸ್ಯ ಸತೀಶ್ ಕುಜುಗೋಡು, ಲೋಕಕ್ಷ ಕೈಕಂಬ ಪವನ್ ಎಂ.ಡಿ, ಮಾಜಿ ವ್ಯವಸ್ಥಾಪನಾ ಸಮಿತಿ ಸದಸ್ಯ ಕೃಷ್ಣಮೂರ್ತಿ ಸೇರಿದಂತೆ ಗಣ್ಯರು ಜೊತೆಯಿದ್ದರು. ದೇವರ ದರ್ಶನ ಹಾಗೂ ಜಾತ್ರಾ ಕಾರ್ಯಕ್ರಮದ ವೇಳೆ ಗಣ್ಯರಿಗೆ ಅಗತ್ಯವಾದ ಎಲ್ಲಾ ಸೌಲಭ್ಯ ಮತ್ತು ವ್ಯವಸ್ಥೆಯನ್ನು ಸ್ಥಳೀಯ ಸಮಿತಿ ಸದಸ್ಯರು ಸಮರ್ಪಕವಾಗಿ ನಿರ್ವಹಿಸಿದರು. ಡಾ. ಪುಷ್ಪ ಅಮರನಾಥ್ ಅವರು ದೇವರ ದರ್ಶನದ ನಂತರ ಮಾತನಾಡಿ, “ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಕರ್ನಾಟಕದ ಧಾರ್ಮಿಕ ಪರಂಪರೆಯ ಪ್ರಮುಖ ಕೇಂದ್ರ. ಜಾತ್ರೆಯ ಶ್ರದ್ಧೆ ಹಾಗೂ ಭಕ್ತಿ ವಾತಾವರಣ ಮನಸೂರೆಗೊಂಡಿದೆ,” ಎಂದು ಹೇಳಿದರು. ಜಾತ್ರಾ ಸಂಭ್ರಮದ ಹಿನ್ನೆಲೆಯಲ್ಲಿ ದೇವಳ ಪ್...

ಕುಕ್ಕೆ: ಎಸ್‌ಎಸ್‌ಪಿಯು ಕಾಲೇಜು ವಿದ್ಯಾರ್ಥಿಗಳಿಂದ ಶ್ರೀ ದೇವಳಕ್ಕೆ ಬೃಹತ್ ಹಸಿರು ಕಾಣಿಕೆ ಸಮರ್ಪಣೆ

Image
ಸುಬ್ರಹ್ಮಣ್ಯ : ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾ ಷಷ್ಠಿ ಜಾತ್ರೋತ್ಸವದ ಅಂಗವಾಗಿ, ಶ್ರೀ ದೇವಳದ ಆಡಳಿತಕ್ಕೊಳಪಟ್ಟ ಎಸ್‌ಎಸ್‌ಪಿಯು ಕಾಲೇಜಿನ ವಿದ್ಯಾರ್ಥಿಗಳು ಶನಿವಾರ ಬೃಹತ್ ಹಸಿರು ಕಾಣಿಕೆಯನ್ನು ಶ್ರೀ ದೇವರಿಗೆ ಅರ್ಪಿಸಿದರು. ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಸಿಬ್ಬಂದಿ ವರ್ಗದಿಂದ ಸಂಗ್ರಹಿಸಿದ ಸುವಸ್ತುಗಳನ್ನು ಅಲಂಕರಿಸಿದ ವಾಹನಗಳಲ್ಲಿ ದೇವಳಕ್ಕೆ ಕೊಂಡೊಯ್ಯುವ ಮೂಲಕ ಅದ್ಭುತ ಸೇವೆ ಸಲ್ಲಿಸಲಾಯಿತು. ವಿದ್ಯಾರ್ಥಿಗಳಿಂದ ಸಲ್ಲಿಸಲಾದ ವಸ್ತುಗಳು 1290 ಕೆಜಿ (12 ಕ್ವಿಂಟಾಲ್ 90 ಕೆಜಿ) ಸೋನಮಸುೂರಿ ಅಕ್ಕಿ 1650 ಕೆಜಿ (16 ಕ್ವಿಂಟಾಲ್ 50 ಕೆಜಿ) ತರಕಾರಿ 1850 ತೆಂಗಿನಕಾಯಿ 261 ಕೆಜಿ ಬೆಲ್ಲ 200 ಕೆಜಿ ಸಕ್ಕರೆ 700 ಹಣ್ಣು ಅಡಿಕೆ 1.5 ಕೆಜಿ ಏಲಕ್ಕಿ, ಹಿಂಗಾರ, ದನದ ತುಪ್ಪ, ಜೇನು ತುಪ್ಪ ಬಾಳೆಹಣ್ಣು, ಬಾಳೆ ಎಲೆ, ಬಾಳೆಗೊನೆ ಕಾಳು ಮೆಣಸು, ಸೀಯಾಳ ಇತ್ಯಾದಿ ತರಕಾರಿಗಳಲ್ಲಿ ಸೌತೆ, ಕುಂಬಳಕಾಯಿ, ಸೀಮೆ ಬದನೆ, ಆಲೂಗಡ್ಡೆ, ಟೊಮೇಟೋ, ಹೀರೆಕಾಯಿ, ಅಲಸಂಡೆ, ಸಹಿಗೆಣಸು, ಚೀನಿಕಾಯಿ, ಕ್ಯಾರೆಟ್, ಬದನೆಕಾಯಿ ಸೇರಿದಂತೆ ಒಟ್ಟು 1650 ಕೆಜಿ ತರಕಾರಿ ಸಲ್ಲಿಸಲಾಯಿತು. ವಿದ್ಯಾರ್ಥಿ–ಬೋಧಕ ವರ್ಗದ ಸೇವೆ ವಿದ್ಯಾರ್ಥಿಗಳು ತಮ್ಮ ಮನೆಗಳಿಂದ ತಂದ ಸುವಸ್ತುಗಳನ್ನು ತರಗತಿಗಳಲ್ಲಿ ಸಂಗ್ರಹಿಸಿ ಬಳಿಕ ರಂಗಮಂದಿರದಲ್ಲಿ ಒಟ್ಟುಗೂಡಿಸಿದರು. ಉಪನ್ಯಾಸಕರು, ಸಿಬ್ಬಂದಿ ವರ್...

*ಹಳ್ಳಿಗಾಡಿನಲ್ಲಿ ಬೆಳೆದು ನಿಂತ ದೈತ್ಯ ಕಲಾ ಪ್ರತಿಭೆ* *ಪಿ ಎಸ್ ಪುಣಚಿತ್ತಾಯ*

Image
ಕಲಾ ಲೋಕದ ಧ್ರುವತಾರೆ ಅವರು........ ತನ್ನ ಕಲಾ ಪ್ರತಿಭೆಯಿಂದಲೇ ಮಿನುಗುತಾರೆಯಂತಿರುವರು...... ಅವರೊಬ್ಬ ಜಮೀನ್ದಾರ. ಕೃಷಿಕ. ಲೋಕದ ಅನ್ನದಾತ... ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಬೆಟ್ಟಗುಡ್ಡಗಳ ಕಣಿವೆಯ ನಟ್ಟನಡುವೆ ಅವರು ಹುಟ್ಟಿ ಬೆಳೆದ ಊರು.... ಒಂದೇ ಒಂದು ವಾಹನ ಸಾಗುವಷ್ಟು ಅಗಲದ ರಸ್ತೆ..... ಒಂದಿಷ್ಟು ಎಚ್ಚರ ತಪ್ಪಿದರೂ ಪ್ರಪಾತಕ್ಕೆ ಉರುಳುವಂತಿರುವ ಹಾದಿ...... ಆದರೆ ರಮಣೀಯ ದೃಶ್ಯ.  ಕಲಾ ಲೋಕದ ಆ ಹಿರಿಯ ದಿಗ್ಗಜನನ್ನು ಒಮ್ಮೆ ಭೇಟಿ ಮಾಡಬೇಕು.... ಅವರ ಕೈಚಳಕದಿಂದ ಹೊರಹೊಮ್ಮಿದ ಚಿತ್ರಗಳನ್ನು ಕಣ್ತುಂಬಿಸಿಕೊಳ್ಳಬೇಕು ಎಂಬ ಮಹಾದಾಸೆಯಿಂದ ಅಲ್ಲಿ ಹೋದೆವು.........  ಗೂಗಲ್ ಮ್ಯಾಪ್ ಹಾಕುತ್ತಾ ಹೋದರೆ ಪ್ರಪಾತಕ್ಕೆ ಕರೆದುಕೊಂಡು ಹೋಗಬಹುದೋ ಎಂಬ ಭಯದಿಂದಲೇ ರಸ್ತೆಯ ಬದಿಯಲ್ಲಿ ಸಿಕ್ಕ ಸಿಕ್ಕ ಮಳೆಯಾಳಿಗರಲ್ಲಿ, ಅರೆಬರೆ ಮಳೆಯಾಲ ಭಾಷೆಯಲ್ಲಿ ಅವರ ಮನೆಯ ದಾರಿ ಯಾವುದೆಂದು ಕೇಳುತ್ತಲೇ ಸಾಗಿದೆವು. ಅವರ ಅರಿಯದವರಿಲ್ಲ. ಆರ್ಟಿಸ್ಟ್ ಪುಣಚಿತ್ತಾಯರೆಂದೇ ಊರ ಮಂದಿ ಕರೆವ ಹೆಸರು. ಕಲಾವಿದರೊಬ್ಬರಿಗೆ ಇದಕ್ಕಿಂತ ಹೆಚ್ಚು ಗೌರವ ನೀಡಲು ಹಳ್ಳಿಗರಿಂದ ಸಾಧ್ಯವಿಲ್ಲ. ಎಲ್ಲರೂ ಕಲಾಗ್ರಾಮದ ಕಡೆಗೆ ಕೈ ತೋರಿ ಮುನ್ನಡೆಸಿದರು. ಮೊಬೈಲ್ ಮೂಲಕ ಸಂಪರ್ಕಿಸಿದ ನಮ್ಮನ್ನು ದಂಪತಿಗಳು ದಾರಿ ನೋಡುತ್ತಿದ್ದರು. ಆ ಕಲಾಮಂದಿರಕ್ಕೆ ಕಾಲಿಡುತ್ತಿದ್ದಂತೆ ಶಾಲು ಹೊದಿಸಿ ಆಶೀರ್ವದಿಸಿದರು. 82 ವರ್ಷದ ಆ ಹಿರಿಯ ಜೀವ ಲವ...

ಐವತ್ತೊಕ್ಲು ಗ್ರಾಮದಲ್ಲಿ ಅನಧಿಕೃತ ಜಾನುವಾರು ವಧೆ ಮನೆ ದಾಳಿ – 102.5 ಕೆ.ಜಿ. ಮಾಂಸ ವಶ, ಮೂವರು ಪರಾರಿ

Image
ಸುಳ್ಯ , ನವೆಂಬರ್ 18, 2025: ಐವತ್ತೊಕ್ಲು ಗ್ರಾಮದ ಚಾಮುಂಡಿ ಮೂಲೆ ಪ್ರದೇಶದಲ್ಲಿ ಅನಧಿಕೃತವಾಗಿ ಜಾನುವಾರುಗಳನ್ನು ವಧೆ ಮಾಡಿ ಮಾಂಸ ಮಾರಾಟ ಮಾಡುತ್ತಿರುವ ಕುರಿತು ಬಂದ  ಮಾಹಿತಿಯ ಮೇರೆಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯ ತಂಡವು ಸಂಜೆ ದಾಳಿ ನಡೆಸಿ, ದೊಡ್ಡ ಪ್ರಮಾಣದ ಜಾನುವಾರು ಮಾಂಸ ಮತ್ತು ಸಂಬಂಧಿತ ವಸ್ತುಗಳನ್ನು ವಶಪಡಿಸಿಕೊಂಡಿದೆ. ಪೋಲೀಸ್ ಉಪನಿರೀಕ್ಷಕ ಕಾರ್ತಿಕ್ ಕೆ (ಕಾ&ಸು) ಅವರ ನೇತೃತ್ವದಲ್ಲಿ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದಾಗ, ಶೆಡ್‌ನಲ್ಲಿ ಒಬ್ಬ ವ್ಯಕ್ತಿ ಕತ್ತಿಯಿಂದ ಮಾಂಸ ಕತ್ತರಿಸುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದೆ. ಪೊಲೀಸರ ಆಗಮನವನ್ನು ಗಮನಿಸಿದ ಮೂವರು ವ್ಯಕ್ತಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಸ್ಥಳದಲ್ಲೇ ಬಂಧಿತರಾದ ವ್ಯಕ್ತಿ: ಹಮೀದ್ (45), ಕಡಬ ಗ್ರಾಮದ ನಿವಾಸಿ ಅವರ ವಿಚಾರಣೆಯಲ್ಲಿ ಪರಾರಿಯಾಗಿರುವವರು ಮುಸ್ತಾಫ, ಶರೀಫ್ ಮತ್ತು ಜುಬೇರ್ ಎಂದು ತಿಳಿದುಬಂದಿದೆ. ಸ್ಥಳ ಪರಿಶೀಲನೆ ವೇಳೆ ಪತ್ತೆಯಾದವು: ಒಟ್ಟು 102.5 ಕೆ.ಜಿ. ಜಾನುವಾರು ಮಾಂಸ ಜಾನುವಾರುಗಳ ಅಂಗಾಂಗಗಳು ಮತ್ತು ತ್ಯಾಜ್ಯ ಮಾಂಸ ಮಾಡಲು ಬಳಸಿದ ಕತ್ತಿ, ತೂಕದ ಯಂತ್ರ, ಇತರೆ ಸಲಕರಣೆಗಳು ವಧೆಗೆ ತರಲಾಗಿದ್ದ ಮೂರು ಜಾನುವಾರುಗಳು ಕೃತ್ಯಕ್ಕೆ ಬಳಸಿದ ಒಂದು ಕಾರು ಮತ್ತು ಒಂದು ದ್ವಿಚಕ್ರವಾಹನ ಎಲ್ಲಾ ವಸ್ತುಗಳನ್ನು ಹಾಗು ಜಾನುವಾರುಗಳನ್ನು ಪೋಲೀಸರು ವಶಪಡಿಸಿಕೊಂಡಿದ್ದಾರೆ. ಘಟನೆ ಸಂಬಂಧ ಸುಬ್ರಹ್ಮಣ್ಯ ಪೊಲೀಸ್ ಠ...

ಕುಕ್ಕೆ ಸುಬ್ರಹ್ಮಣ್ಯ: ಖ್ಯಾತ ನಟ ಜಗ್ಗೇಶ್ ದರ್ಶನ – ಶ್ರೀಗಳ ಆಶೀರ್ವಾದ.

Image
ಕುಕ್ಕೆ ಸುಬ್ರಹ್ಮಣ್ಯ , 19 ನವೆಂಬರ್ — ಖ್ಯಾತ ಕನ್ನಡ ಚಲನಚಿತ್ರ ನಟ ಜಗ್ಗೇಶ್ ಅವರು ಇಂದು ಪವಿತ್ರ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದರು. ಬೆಳಗ್ಗೆ ಕ್ಷೇತ್ರ ಪ್ರವೇಶಿಸಿದ ಜಗ್ಗೇಶ್ ಅವರನ್ನು ಭಕ್ತರು ಆತ್ಮೀಯವಾಗಿ ಸ್ವಾಗತಿಸಿದರು. ದೇವರ ದರ್ಶನದ ನಂತರ ಜಗ್ಗೇಶ್ ಅವರು ಸುಬ್ರಹ್ಮಣ್ಯ ಮಠಕ್ಕೆ ಭೇಟಿ ನೀಡಿ ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಶ್ರೀಗಳ ದಿವ್ಯ ಆಶೀರ್ವಾದ ಪಡೆದರು. 

ಕುಕ್ಕೆ ಸುಬ್ರಹ್ಮಣ್ಯ: ನವೆಂಬರ್ 19 — ಆಟೋ ರಿಕ್ಷಾ ಹಾಗೂ ಟೂರಿಸ್ಟ್ ಕಾರು ನಿಲ್ದಾಣಗಳ ಉದ್ಘಾಟನೆ

Image
ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಇಂದು (19 ನವೆಂಬರ್) ಎರಡು ಹೊಸ ಆಟೋ ರಿಕ್ಷಾ ನಿಲ್ದಾಣಗಳು ಮತ್ತು ಟೂರಿಸ್ಟ್ ಕಾರು ನಿಲ್ದಾಣವನ್ನು ಉದ್ಘಾಟಿಸಲಾಯಿತು. ಕ್ಷೇತ್ರಕ್ಕೆ ಭೇಟಿ ನೀಡುವ ಲಕ್ಷಾಂತರ ಭಕ್ತರಿಗೆ ಸುಗಮ ಸಂಚಾರ ಮತ್ತು ಸುಲಭ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ದೇವಸ್ಥಾನ ಆಡಳಿತ ಕೈಗೊಂಡಿರುವ ಮಹತ್ವದ ಸೌಕರ್ಯ ವಿಸ್ತರಣೆ ಇದು. ರಥಬೀದಿ ಕೊನೆಯಲ್ಲಿ ನಿರ್ಮಾಣವಾದ ಮೊದಲ ನಿಲ್ದಾಣ ಉದ್ಘಾಟನೆ ದೇವಸ್ಥಾನದ ರಥ ಬೀದಿ ಕೊನೆಯಲ್ಲಿ ನಿರ್ಮಿಸಲಾದ ಕುಕ್ಕೇಶ್ರೀ ಆಟೋ ನಿಲ್ದಾಣವನ್ನು ನಿವೃತ್ತ ಹಿರಿಯ ಶಿಕ್ಷಕರಾದ ಬಿ. ಪುಂಗವ ಗೌಡ ಅವರು ಉದ್ಘಾಟನೆ ಮಾಡಿದರು. 1975ರಲ್ಲಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಮೊದಲ ಬಾರಿಗೆ ಆಟೋ ರಿಕ್ಷಾವನ್ನು ತಂದವರು ಇವರು ಎಂಬುದು ಇಂದಿನ ಕಾರ್ಯಕ್ರಮದ ವಿಶೇಷತೆ. 👉 ಇಲ್ಲೇ ಮತ್ತೊಂದು ಮಹತ್ವದ ಸಂಗತಿ ಬಿ. ಪುಂಗವ ಗೌಡ — ನಿವೃತ್ತ ಹಿರಿಯ ಶಿಕ್ಷಕರಾಗಿರುವ ಇವರು ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮೊದಲ ಆಟೋ ರಿಕ್ಷಾ ಚಾಲಕ–ಮಾಲಕರೂ ಆಗಿದ್ದಾರೆ. ಕಾಕತಾಳೀಯವೆಂದರೆ, ಇವರ ಮಗನೇ ಇಂದಿನ ಕುಕ್ಕೆ ಸುಬ್ರಹ್ಮಣ್ಯ ಶ್ರೀ ಕ್ಷೇತ್ರದ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ. ಈಗ ಸಂಪೂರ್ಣ ಕ್ಷೇತ್ರದ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿರುವ ಅಧ್ಯಕ್ಷರ ತಂದೆಯೇ ಇಂದು ಹೊಸ ಆಟೋ ನಿಲ್ದಾಣವನ್ನು ಉದ್ಘಾಟಿಸಿದ್ದು ವಿಶೇಷ ಸಂಭ್ರಮಕ್ಕೆ ಕಾರಣವಾಯಿತು. ಈ ಸಂದರ್ಭ ಅಧ್ಯಕ...

*ನೆಲ್ಯಾಡಿ ಗ್ರಾಮದ ಕೊಪ್ಪ ಮಾದೇರಿಯಲ್ಲಿ ಶಾರ್ಟ್ ಸರ್ಕ್ಯುಟ್ ಮನೆ ಬೆಂಕಿಗಾಹುತಿ...*

Image
ಮಾದೇರಿ ನಿವಾಸಿ ಕೊಪ್ಪ ಮಾದೇರಿ ನಿವಾಸಿ ಕೆ. ವಿ. ಜೋಸೆಫ್ ರವರ ಪುತ್ರ ಅಧ್ಯಾಪಕರಾದ ಜೋಸ್ ಪ್ರಕಾಶ್ ರವರ ಮನೆಯಲ್ಲಿ ಇಂದು ಮದ್ಯಾಹ್ನ ಹೊತ್ತಿನಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯುಟ್ ನಿಂದಾಗಿ ಬೆಂಕಿ ಕಾಣಿಸಿ ಕೊಂಡಿದ್ದು ಮನೆಯ ವಿದ್ಯುತ್ ಸಲಕರಣೆ, ಮತ್ತು ಮನೆಯ ಹೊರಭಾಗದಲ್ಲಿ ನಿಲ್ಲಿಸಿರುವ ಹೊಸ ಸ್ಕೂಟರ್ ಸೇರಿದಂತೆ ಹಲವು ವಸ್ತುಗಳು ಬೆಂಕಿಯಿಂದ ಪೂರ್ತಿ ಸುಟ್ಟು ಹೋಗಿರುತ್ತದೆ ಅಲ್ಲದೆ ಸುಮಾರು 4ಲಕ್ಷಕ್ಕೂ ಮಿಕ್ಕಿ ನಷ್ಟ ಸಂಭವಿಸಿದೆ, ಅಕ್ಕ ಪಕ್ಕದವರು ಬೆಂಕಿ ಆರಿಸಿದ್ದರಿಂದ ಹೆಚ್ಚಿನ ಹಾನಿಯಾಗುವುದು ತಪ್ಪಿದೆ, ಮನೆಯಲ್ಲಿ ಯಾರು ಇಲ್ಲದೇ ಇರುವುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ, ಉಳಿದ ವಿಷಯಗಳು  ಇನ್ನಷ್ಟೇ ತಿಳಿದು ಬರಬೇಕಿದೆ.ಈ ಸಂದರ್ಭದಲ್ಲಿ ಬೆಥನಿ ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ವರ್ಗಿಸ್ ಕೈಪನಡ್ಕ, ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷರು ಸಲಾಂ ಬಿಲಾಲ್, ಪಂಚಾಯತ್ ಸಿಬ್ಬಂದಿ ಪ್ರಸಾದ್, ಫಾ. ಶಾಜಿ ಮತ್ತಿತರರು ಭೇಟಿ ನೀಡಿದರು.

*ನೆಲ್ಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ-- ಸಹಕಾರಿ ಸಪ್ತಾಹದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ*

Image
ನವಂಬರ್ 14ರಂದು ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕೇಂದ್ರಮತ್ತು ಶಾಖೆಗಳಲ್ಲಿ ಸಹಕಾರಿ ಸಪ್ತಾಹದ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ನಡೆಸಲಾಯಿತು ಕೇಂದ್ರ ಕಚೇರಿಯಲ್ಲಿ ಧ್ವಜಾರೋಹಣವನ್ನು ಸಂಘದ ನಿರ್ದೇಶಕರಾದ ಜಯಂತ ಬಂಟ್ರಿಯಾಲ್, ಸರ್ವೋತ್ತಮ ಗೌಡ, ಉಷಾ ಅಂಚನ್, ಭಾಸ್ಕರ್ ರೈ ನೆರವೇರಿಸಿದರು.ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಯಾಕರ ರೈ ಸ್ವಾಗತಿಸಿ, ಮ್ಯಾನೇಜರ್ ಮಹೇಶ್ ಎಂ. ಟಿ ವಂದಿಸಿದರು, ಕ್ಯಾಂಪ್ಕೊ ಹಾಗೂ ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು, ಸಂಘದ ಗೊಳಿತೊಟ್ಟು ಶಾಖೆಯಲ್ಲಿ ಸಂಘದ ನಿರ್ದೇಶಕರಾದ ಬಾಬು ನಾಯ್ಕ್ ಧ್ವಜಾರೋಹಣವನ್ನು ನೆರವೇರಿಸಿದರು ಕಾರ್ಯಕ್ರಮಕ್ಕೆ ಸಂಘದ ಮ್ಯಾನೇಜರ್ ರತ್ನಾಕರ ಬಂಟ್ರಿಯಾಲ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು, ಶಿರಾಡಿ ಶಾಖೆಯಲ್ಲಿ ಧ್ವಜಾರೋಹಣ ಸಂದರ್ಭದಲ್ಲಿ ಸಂಘದ ಸದಸ್ಯರಾದ ದಿನಕರ್, ಸುರೇಂದ್ರ, ಮೆನೇಜರ್ ರಮೇಶ್ ನಾಯ್ಕ್ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.

*ಸಮಾಜಮುಖಿ ಸೇವೆಯಲ್ಲಿ ಮೌನಯೋಧ – ಜಿಲ್ಲೆಯಲ್ಲಿ ಸೇವಾ ನಿಷ್ಠೆಗೆ ಹೆಸರಾಗಿರುವ ಶ್ರೀಯುತ ಲೋಕೇಶ್ *

Image
  ಜಿಲ್ಲೆಯಲ್ಲಿ ಜೆಸಿ, ರೋಟರಿ, ಲಯನ್ಸ್ ಸೇರಿದಂತೆ ಹಲವಾರು ಸಮಾಜಮುಖಿ ವೇದಿಕೆಗಳ ಮೂಲಕ ಬಹುಕಾಲದಿಂದ ಸೇವೆ ಸಲ್ಲಿಸುತ್ತಾ ಬಂದಿರುವ ಶ್ರೀಯುತ ಲೋಕೇಶ್ ಅಣ್ಣಾ ಅವರು, ಮೌನ ಸೇವೆಯ ಮೂಲಕ ಜನಮನ ಗೆದ್ದ ವ್ಯಕ್ತಿತ್ವ. ಪ್ರಚಾರ ಬಯಸದ ಸರಳ ನಡತೆ, ಮನುಷ್ಯತ್ವದ ಮೌಲ್ಯಗಳು ಮತ್ತು ನಿಸ್ವಾರ್ಥ ಕಾರ್ಯಶೀಲತೆಯಿಂದ ಅವರು ಸಮಾಜದಲ್ಲಿ ವಿಶಿಷ್ಟ ಸ್ಥಾನ ಗಳಿಸಿದ್ದಾರೆ. ಜಿಲ್ಲಾ ಮಟ್ಟದ ಸಂಘಟನೆಗಳಲ್ಲಿ ಪರಿಣಾಮಕಾರಿ ನಾಯಕತ್ವ ಪೋಟೋಗ್ರಾಫರ್‌ ಅಸೋಸಿಯೇಷನ್ ಹಾಗು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಜಿಲ್ಲಾ ನಾಯಕತ್ವ ವಹಿಸಿರುವ ಲೋಕೇಶ್ ಅಣ್ಣಾ ಅವರು, ಸಹೋದ್ಯೋಗಿಗಳ ಹಿತಚಿಂತಕರು ಮತ್ತು ಮಾರ್ಗದರ್ಶಕರಾಗಿ ಪ್ರಸಿದ್ಧ. ವೃತ್ತಿಜೀವನದ ಜೊತೆಗೆ ಸಂಘಟನೆಯ ಬೆಳವಣಿಗೆಯಲ್ಲಿಯೂ ಅವರು ನೀಡಿರುವ ಕೊಡುಗೆ ಗಮನಾರ್ಹ. ವರ್ಷಪೂರ್ತಿಯೂ ಉಚಿತ ಸೇವೆ — ಜನಪರ ನಿಷ್ಠೆಯ ಕಾರ್ಯ ಸಾಮಾನ್ಯವಾಗಿ ಯಾರೂ ಮಾಡದ ರೀತಿಯಲ್ಲಿ, ವರ್ಷಕ್ಕೆ 365 ದಿನಗಳೂ ಪತ್ರಕರ್ತರು, ಸಂಘಟನೆಗಳು ಮತ್ತು ಸಾರ್ವಜನಿಕರಿಗೆ ಉಚಿತವಾಗಿ ಗುಣಮಟ್ಟದ ಫೋಟೋಗಳನ್ನು ನೀಡುವ ಸೇವೆಯನ್ನು ನಿರಂತರವಾಗಿ ನಿರ್ವಹಿಸುತ್ತಿರುವುದು ಇವರ ವಿಶೇಷತೆ. ಯಾವುದೇ ಸಂದರ್ಭದಲ್ಲಿ ಕರೆ ಮಾಡಿದರೆ ತಕ್ಷಣ ಹಾಜರಾಗುವ ಅವರ ಸೇವಾಭಾವನೆ, ಜಿಲ್ಲೆಯಲ್ಲಿ ಹಲವರಿಗೆ ಆಶ್ರಯವಾಗಿಸಿದೆ. ಪ್ರಚಾರವಿಲ್ಲದ ಸೇವೆಯೇ ಅವರ ಗುರುತು ಕೀರ್ತಿ, ಬಿರುದು, ಪ್ರಚಾರ—ಇವುಗಳತ್ತ ಯಾವಾಗಲೂ ದೂರವಾಗಿರುವ ಲೋಕೇಶ್ ಅಣ್ಣಾ ಅವರು...

KA05AF8097 ಇನೋವಾ: ನದಿಗೆ ಕಸ ಎಸೆದ ವ್ಯಕ್ತಿ ಮತ್ತು ಚಾಲಕನ ವಿರುದ್ಧ ಕ್ರಮಕ್ಕೆ ಬೇಡಿಕೆ.

Image
ಸುಬ್ರಹ್ಮಣ್ಯ :ಪ್ರಕೃತಿ ಸೌಂದರ್ಯಕ್ಕೆ ಹೆಸರುವಾಸಿಯಾದ ಕುಮಾರಧಾರಾ ನದಿಯ ತೀರದಲ್ಲಿ ನವೆಂಬರ್,17 ರಂದು ನಡೆದ  ಘಟನೆ ಸ್ಥಳೀಯರಲ್ಲಿ ತೀವ್ರ ಆಕ್ರೋಶ ಮೂಡಿಸಿದೆ. KA05AF8097 ಸಂಖ್ಯೆಯ ಇನೋವಾ ವಾಹನದಲ್ಲಿ ಬಂದ ವ್ಯಕ್ತಿಯೊಬ್ಬನು ತನ್ನೊಂದಿಗೆ ತಂದಿದ್ದ ಪ್ಲಾಸ್ಟಿಕ್, ಹಳೆ ವಸ್ತುಗಳು ಸೇರಿದಂತೆ ದೊಡ್ಡ ಚೀಲದಷ್ಟು ತ್ಯಾಜ್ಯವನ್ನು ನೇರವಾಗಿ ನದಿಗೆ ಎಸೆದಿದ್ದಾನೆ, ಪರಿಸರಕ್ಕೆಹಾನಿ ಉಂಟು ಮಾಡಿದ್ದಾನೆ. ಸ್ಥಳೀಯರು ಹಾಗೂ ಪತ್ರಕರ್ತ ಲೋಕೆಶ್ ಅವರು ಘಟನೆ ಗಮನಿಸಿ ಎಚ್ಚರಿಸಿದಾಗ, ಜವಾಬ್ದಾರಿ ಇಲ್ಲದ ಆ ವ್ಯಕ್ತಿ ಕೆಟ್ಟ ಉತ್ತರ ನೀಡಿ ಎಚ್ಚರಿಕೆಯನ್ನು ನಿರ್ಲಕ್ಷಿಸಿ ಮುಂದುವರಿದು ಕಸವನ್ನು ನದಿಗೆ ಎಸೆದು ಓಡಿಹೋದ ಎಂದು ಸ್ಥಳೀಯರು ತಿಳಿಸಿದ್ದಾರೆ. --- ಟೂರಿಸ್ಟ್ ಇನೋವಾ ಕಾರಿನ ಚಾಲಕರ ನಿರ್ಲಕ್ಷ, ಬೇಜವಾಬ್ದಾರಿ ಕೂಡ ಬೆಳಕಿಗೆ ಕೇವಲ ಕಸ ಎಸೆದ ವ್ಯಕ್ತಿಯಷ್ಟೇ ಅಲ್ಲ, ಈ ಘಟನೆಯಲ್ಲಿ ಟೂರಿಸ್ಟ್ ವಾಹನದ ಚಾಲಕರ ನಡವಳಿಕೆಯೂ ಸಮಾನವಾಗಿ ಖಂಡನೀಯವಾಗಿದೆ. ಚಾಲಕನು ಸೇತುವೆ ಮೇಲೆಯೇ ವಾಹನ ನಿಲ್ಲಿಸಿ, ಕಸ ಎಸೆಯಲು ಅವಕಾಶ ನೀಡಿರುವುದು ಕಾನೂನು ಉಲ್ಲಂಘನೆಯಲ್ಲದೆ, ಸಮಾಜದ ಮೇಲಿನ ಜವಾಬ್ದಾರಿಯಿಲ್ಲದ ವರ್ತನೆ. ಒಬ್ಬ ಟೂರಿಸ್ಟ್ ಚಾಲಕನು – ಪ್ರವಾಸಿಗರಿಗೆ ಮಾರ್ಗದರ್ಶಕ, ಸ್ಥಳೀಯ ಸಂಪ್ರದಾಯ-ಶಿಸ್ತು ತೋರಿಸುವ ವ್ಯಕ್ತಿ, ಪರಿಸರ ಸಂರಕ್ಷಣೆಯ ಅರಿವು ನೀಡುವ ಜವಾಬ್ದಾರಿ ಹೊಂದಿರಬೇಕು. ಆದರೆ ...

ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಗಳ ಕುಕ್ಕೆ ಸುಬ್ರಮಣ್ಯ ದೇವರ ದರ್ಶನಪಡೆದರು.

Image
ಕುಕ್ಕೆ ಸುಬ್ರಹ್ಮಣ್ಯ, ನ. — ಕೇರಳದ ಕಾಸರಗೋಡು ಜಿಲ್ಲೆಯ ಪ್ರಸಿದ್ಧ 400 ವರ್ಷಗಳ ಇತಿಹಾಸ ಹೊಂದಿರುವ ಎಡನೀರು ಮಠದ ಪೀಠಾಧ್ಯಕ್ಷರಾದ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಗಳು ಇಂದು ಮಹತೋಭಾರ ಕುಕ್ಕೆ ಶ್ರೀ ಸುಬ್ರಮಣ್ಯ ದೇವಸ್ಥಾನಕ್ಕೆ ಆಗಮಿಸಿ ಶ್ರೀ ದೇವರ ದರ್ಶನ ಪಡೆದರು. ಸ್ವಾಮೀಜಿಗಳು ದೇವಸ್ಥಾನ ಪ್ರವೇಶಿಸಿದ ಸಂದರ್ಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರು ಶಿಷ್ಟಾಚಾರದ ಪ್ರಕಾರ ಪೂರ್ಣ ಗೌರವ ನೀಡಿ ಸ್ವಾಗತಿಸಿ, ದೇವರ ದರ್ಶನ ವ್ಯವಸ್ಥೆ ಮಾಡಿಕೊಟ್ಟರು. ನಂತರ ಸ್ವಾಮೀಜಿಗಳಿಗೆ ದೇವರ ವಿಶೇಷ ದರ್ಶನ ಹಾಗೂ ಆಶೀರ್ವಚನ ಸ್ವೀಕರಿಸುವ ಅವಕಾಶ ಒದಗಿಸಲಾಯಿತು. ಈ ಸಂದರ್ಭದಲ್ಲಿ ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ನೆಕ್ರಜೆ, ಉದ್ಯಮಿ ಕಿಶೋರ್ ಆರಂಪಾಡಿ, ರವೀಂದ್ರ ಕೆ., ಶಿಷ್ಟಾಚಾರ ವಿಭಾಗದ ಮುಖ್ಯಸ್ಥ ಜಯರಾಮ್ ಉಪಸ್ಥಿತರಿದ್ದು, ಸ್ವಾಮೀಜಿಗಳಿಗೆ ಗೌರವಯುತವಾಗಿ ದೇವರ ದರ್ಶನ ನೆರವೇರಿಸಿದರು. ಎಡನೀರು ಮಠದ ಪರಂಪರೆ ಮತ್ತು ಸ್ವಾಮೀಜಿಗಳ ಹಿನ್ನೆಲೆ ಎಡನೀರು ಮಠವು ಆದಿ ಶಂಕರಾಚಾರ್ಯರ ಶಿಷ್ಯರಾದ ಟೋಟಕಾಚಾರ್ಯರ ಪರಂಪರೆ ಅನುಸರಿಸುವ ಪ್ರಸಿದ್ಧ ಸ್ಮಾರ್ತ ಮಠವಾಗಿದ್ದು, ಕಲಾ–ಸಂಸ್ಕೃತಿ ಮತ್ತು ಧಾರ್ಮಿಕ ಅಧ್ಯಯನದ ಪ್ರಮುಖ ಕೇಂದ್ರವಾಗಿದೆ. 2020ರ ಅಕ್ಟೋಬರ್ 28ರಂದು ನಡೆದ ಪೀಠಾರೋಹಣ ಸಮಾರಂಭದಲ್ಲಿ ಸಚ್ಚಿದಾನಂದ ಭಾರತಿ ಸ್ವಾಮೀಜ...