Posts

Showing posts from November, 2024

ಕುಕ್ಕೆ ಶ್ರೀ ಸುಬ್ರಹ್ಮಣ್ಯದಲ್ಲಿ ಅದ್ದೂರಿ ಲಕ್ಷದೀಪೋತ್ಸವ ರಥ ಬೀದಿಯುದ್ದಕ್ಕೂ ಹಬ್ಬವೋ ಹಬ್ಬ-ಕೆಟ್ಟ ಮನಸ್ಸುಗಳ ನಾಶವಾಗಿ ಒಳ್ಳೆಯ ಮನಸ್ಸುಗಳ ಮೆಲೈಸಲಿ-ಸಹಾಯಕ ಜುಬಿನ್ ಮಹಾಪತ್ರ..

Image
ಕುಕ್ಕೆ ಸುಬ್ರಹ್ಮಣ್ಯ; ನ,30,ಕೆಟ್ಟ ಮನಸ್ಸುಗಳ ನಾಶವಾಗಿ ಒಳ್ಳೆಯ ಮನಸ್ಸುಗಳ ಮೆಲೈಸಲಿ ಸುಬ್ರಹ್ಮಣ್ಯ ನ ಷಷ್ಠಿ ಮಹೋತ್ಸವ ದ ಸಂದೇಶವೇ ಅದು ಕೆಟ್ಟದನ್ನು ಮಾಡುವರರನ್ನು ನಾಶ ಮಾಡಿದೆ ಎಂದು ಸಹಾಯಕ ಆಯುಕ್ತ ಜುಬಿನ್ ಮಹಾಪತ್ರ ನುಡಿದರು. ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಷಷ್ಠಿ ಮಹೋತ್ಸವದ ಲಕ್ಷ ದೀಪೋತ್ಸವ ದಂದು ಕುಣಿತಾ ಭಜನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು‌. ವೇದಿಕೆಯಲ್ಲಿ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಯೇಸುರಾಜ್, ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರುಗಳಾದ ಸತೀಶ್ ಕೂಜುಗೋಡು, ಲೋಲಾಕ್ಷ ಕೈಕಂಬ, ಅಚ್ಚುತ ಆಲ್ಕಬೆ ಪವನ್ ಎಂ.ಡಿ, ಸುದೀರ್ ಶೆಟ್ಟಿ, ವಿಮಾಲ ರಂಗಯ್ಯ, ಶಿವರಾಮ ರೈ, ಗಣೇಶ್ ಮತ್ತಿತರು ಉಪಸ್ಥಿತರಿದ್ದರು. ಸುಮಾರು 120 ಕ್ಕಿಂತಲೂ ಅಧಿಕ ಭಜನಾ ತಂಡಗಳು ಕುಣಿತ ಭಜನೆ ಯಲ್ಲಿ ಭಾಗವಹಿಸಿದ್ದವು.   ಸುಧೀರ್ಘ2.30 ಗಂಟೆಗಳ ಕುಣಿತಾ ಭಜನಾ ಕಾರ್ಯಕ್ರಮ ಜರುಗಿತ್ತು. ರಾಜಗೋಪುರದಿಂದ ಆರಂಭಗೊಂಡು ಕೆ.ಎಸ್.ಆರ್. ಟಿ ಸಿ ಬಸ್ ತಂಗುದಾಣ ಹೋಗುವಲ್ಲಿ ವರೆಗೆ ಕುಣಿತ ಭಜನೆ ನಡೆಯಿತು. ಕೆ.ಯೋಗೀಶ್ ಕಿಣಿ ಕಾರ್ಕಳ ಅವರು ಕುಣಿತ ಭಜನೆ ನಡೆಸಿಕೊಟ್ಟರು.

ಯುವಕ ನಾಪತ್ತೆ ಪ್ರಕರಣ ಕಡಬ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಕೆಲಸಕ್ಕೆ ಹೋಗುತ್ತೇನೆ ಎಂದು ಮನೆ ಬಿಟ್ಟಿದ್ದ ಯುವಕ ನಾಪತ್ತೆ.

Image
ಕಡಬ : ಶಾಮಿಯಾನದ ಕೆಲಸಕ್ಕೆಂದು ಹೋದ ಯುವಕನೋರ್ವ ಮನೆಗೆ ಬಾರದೆ ಕಾಣೆಯಾಗಿದ್ದು ಕಡಬ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ. ಬಿಳಿನೆಲೆ ಗ್ರಾಮದ ಮುಂಗ್ಲಿ ನಿವಾಸಿ ಶಾಂತಪ್ಪ ಎಂಬವರ ಮಗ ಸಂದೀಪ್ ( ವ 30) ಕಾಣೆಯಾದ ಯುವಕ. ಮರ್ದಾಳದಲ್ಲಿ ವಿನಯ ಎಂಬವರಿಗೆ ಸೇರಿದ ಶಾಮಿಯಾನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಈತ ನ.27 ರಂದು ಕೆಲಸಕ್ಕೆ ಬಂದು ಸಾಯಂಕಾಲ ನೆಟ್ಟಣದ ಪ್ರತೀಕ್ ಎಂಬಾತನ ಜೊತೆ ಕಾರಲ್ಲಿ ಹೋಗಿರುವುದಾಗಿ ಶಾಮಿಯಾನ ಮಾಲಕರರು ಮನೆಯವರಿಗೆ ತಿಳಿಸಿದ್ದಾರೆ. ಕಾಣೆಯಾದ ತನ್ನ ಮಗನನ್ನು ಹುಡುಕಿಕೊಡುವಂತೆ ತಾಯಿ ಸರೋಜ ಅವರು ನೀಡಿದ ದೂರಿನಂತೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

ಕುಕ್ಕೆ ಸುಬ್ರಹ್ಮಣ್ಯ ಶ್ರೀ ಕ್ಷೇತ್ರದಲ್ಲಿ ಅದ್ದೂರಿಯ ಲಕ್ಷ ದೀಪೋತ್ಸವ ಹಾಗೂ ಕುಣಿತ ಭಜನೆ ಸಮಾರಂಭ.

Image
ಕುಕ್ಕೆ ಸುಬ್ರಮಣ್ಯ; ನ,30, ಮಾನ್ಯ ಆಡಳಿತ ಅಧಿಕಾರಿ ಜುಬಿನ್ ಮಹಾಪಾತ್ರ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತ್ತ ಗುಂಡಿ ಅವರು ಕುಣಿತ ಭಜನೆ ಕಾರ್ಯಕ್ರಮಕ್ಕೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದ್ದರು. ಉದ್ಘಾಟನೆ ಬಳಿಕ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಗೋಪುರದಿಂದ ರಥ ಬೀದಿ ಯುದ್ಧಕ್ಕೂ ಭಜನಾ ತಂಡಗಳು ಕುಣಿತ ಭಜನೆ ಕಾರ್ಯಕ್ರಮವನ್ನು ನಡೆಯಿತು.  ಮಹಿಳೆಯರು, ಮಕ್ಕಳು, ಪುರುಷರು ಸೇರಿದಂತೆ ಸಾವಿರಾರು ಭಗವದ್ಭಕ್ತರು ಕುಕ್ಕೆ ಸುಬ್ರಮಣ್ಯ ಚಂಪಾ ಷಷ್ಠಿ ಮಹೋತ್ಸವದ ಈ ಒಂದು ವಿಶೇಷ ಕುಣಿತ ಭಜನೆ ಕಾರ್ಯಕ್ರಮದಲ್ಲಿ ಸುಮಧುರ ಭಜನೆಗೆ ತಾಳ ಹಿಡಿದು ಹೆಜ್ಜೆ ಹಾಕಿದರು.  ಶ್ರೀ ಸುಬ್ರಹ್ಮಣ್ಯ ಶ್ರೀ ದೇವರ ಉತ್ಸವ ನಡೆಯಿತು, ಈ ಸಂದರ್ಭದಲ್ಲಿ ಆಗಮಿಸಿದ ಎಲ್ಲ ಭಗವದ್ಭಕ್ತರು ಶ್ರೀ ದೇವರಿಗೆ ದೀಪ ಹಚ್ಚುವುದರೊಂದಿಗೆ ಶ್ರೀ ದೇವರಿಗೆ ದೀಪೋತ್ಸವ ನಡೆಸಿದರು. ಈ ಸಂದರ್ಭ ಊರ ಹಾಗೂ ಪರವೂರ ಸಾವಿರಾರು ಮಂದಿ ಭಗವದ್ಭಕ್ತರು ಆಗಮಿಸಿ ಶ್ರೀ ದೇವರ ದರ್ಶನ ಪಡೆದು ದೇವರ ಪ್ರಸಾದ ಸ್ವೀಕರಿಸಿದರು.

ಲಕ್ಷ ದೀಪೋತ್ಸವ ಹಾಗೂ ಕುಣಿತ ಭಜನೆ ಕಾರ್ಯಕ್ರಮದ ನಿಮಿತ್ತ ಸ್ವಚ್ಛತಾ ಕಾರ್ಯಕ್ರಮ.

Image
ಕುಕ್ಕೆ ಸುಬ್ರಮಣ್ಯ; ನ,30, ಲಕ್ಷದೀಪ ಉತ್ಸವದ ನಿಮಿತ್ತ ದೇವಸ್ಥಾನದ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳನ್ನು ಸ್ವಚ್ಛತೆ ನಡೆಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೇತೃತ್ವದಲ್ಲಿ ದೇವಾಲಯದ ಎಲ್ಲಾ  ಸಿಬ್ಬಂದಿಗಳು ಸ್ವಚ್ಛತಾ ಕಾರ್ಯದಲ್ಲಿ ಭಾಗವಹಿಸಿದ್ದಾರೆ. ಕುಕ್ಕೆ ಸುಬ್ರಮಣ್ಯ ದೇವಾಲಯದ ಸುತ್ತಮುತ್ತಲಿನ ಪ್ರದೇಶಗಳನ್ನು ಹಾಗೂ ರಸ್ತೆಯನ್ನು, ಸ್ವಚ್ಛತೆ ನಡೆಸಿದ್ದಾರೆ. ಈ ಬಗ್ಗೆ ಆಡಳಿತ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಹಾಗೂ ಭಗವದ್ಬಕ್ತರು  ಅಧಿಕಾರಿಗಳ ಈ ಒಂದು ಸೇವೆಗೆ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.