.*ಶ್ರೀರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿ**ದೀಪ ಪ್ರದಾನ*

ಶ್ರೀರಾಮ ವಿದ್ಯಾಲಯ ಸೂರ್ಯನಗರ ನೆಲ್ಯಾಡಿಯಲ್ಲಿ ಮಾರ್ಚ್ 4 ಬುಧವಾರದಂದು *ಹತ್ತನೇ ತರಗತಿ ವಿದ್ಯಾರ್ಥಿಗಳ ದೀಪ ಪ್ರದಾನ ಬೀಳ್ಕೊಡುಗೆ ಕಾರ್ಯಕ್ರಮವು* ಹಲವು ಗಣ್ಯರ ಸಮ್ಮುಖದಲ್ಲಿ ನೆರವೇರಿತು. ಅತಿಥಿಗಳನ್ನು ಮೊದಲು ಆರತಿ ಬೆಳಗುವುದರ ಮೂಲಕ ಬರಮಾಡಿಕೊಳ್ಳಲಾಯಿತು. ನಂತರ ದೀಪ ಪ್ರಜ್ವಲನೆ ಮಾಡುವುದರ ಮೂಲಕ ಅತಿಥಿಗಳು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳು ಸರಸ್ವತಿ ವಂದನೆ ಮಾಡಿದರು. ರಮ್ಯ ಮಾತಾಜಿಯವರು ಎಲ್ಲರನ್ನು ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ *ಶ್ರೀಮತಿ ಸುಧಾ ಕಶೆಕೋಡಿ ಶಿಶು ವ್ಯವಸ್ಥಾಪಕಿ ಶ್ರೀರಾಮ ವಿದ್ಯಾ ಕೇಂದ್ರ ಕಲ್ಲಡ್ಕ* ಇವರು *ಮಾತಾಪಿತೃಗಳ ಬಾಂಧವ್ಯವನ್ನು ಬೆಸೆಯುವ ಭಾವನಾತ್ಮಕ ಕಾರ್ಯಕ್ರಮ ಪಾದ ಪೂಜೆ* ಯನ್ನು ವಿದ್ಯಾರ್ಥಿಗಳಿಂದ ಮಾಡಿಸಿ ಅದರ ಮಹತ್ವವನ್ನು ಶ್ಲೋಕಗಳ ಮೂಲಕ ಮನಮುಟ್ಟುವಂತೆ ಸವಿವರವಾಗಿ ತಿಳಿಸಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಭಾವುಕರಾದರು. ವಿದ್ಯಾರ್ಥಿಗಳು ಅನಿಸಿಕೆಯನ್ನು ವ್ಯಕ್ತಪಡಿಸಿ ದೇಶಭಕ್ತಿ ಗೀತೆಯನ್ನು ಹಾಡಿದರು.10ನೇ ತರಗತಿ ವಿದ್ಯಾರ್ಥಿಗಳು 9ನೇ ತರಗತಿ ವಿದ್ಯಾರ್ಥಿಗಳಿಗೆ ದೀಪ ಹಸ್ತಾಂತರಿಸುವ ಮೂಲಕ ತಮ್ಮ ಜವಾಬ್ದಾರಿಯನ್ನು ಹಸ್ತಾಂತರಿಸಿದರು . ಹತ್ತನೇ ತರಗತಿ ವಿದ್ಯಾರ್ಥಿಗಳು ವಿದ್ಯಾಲಯಕ್ಕೆ ಕೊಡುಗೆಯನ್ನು ನೀಡಿದರು. ಪಾದಪೂಜೆಯ ನಂತರ ವಿದ್ಯಾರ್ಥಿಗಳು ಭಾರತ ಮಾತೆಯ ಭಾವಚಿತ್ರದ ಮುಂದೆ ದೀಪವನ್ನು ಬೆಳಗಿಸಿ ಗಣ್ಯರಿಂದ ಆಶೀರ್ವಾದವನ್ನು ಪಡೆದುಕೊಂಡರು. ನಂತರ ವಿದ್ಯಾರ್ಥಿಗಳಿಗೆ ವಿದ್ಯಾಲಯದ ಸವಿನೆನಪಿಗಾಗಿ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಅತಿಥಿಗಳಾಗಿ ಆಗಮಿಸಿದಂತಹ *ಶ್ರೀ ರವೀಂದ್ರ ಟಿ ಶ್ರೀಮಾನ್ ನಿವೃತ್ತ ಮುಖ್ಯ ಗುರುಗಳು ಸಂತ ಜಾರ್ಜ್ ಪ್ರೌಢಶಾಲೆ ನೆಲ್ಯಾಡಿ* ಇವರು ಎಸ್ ಎಸ್ ಎಲ್ ಸಿ ಪರೀಕ್ಷಾ ಪೂರ್ವಸಿದ್ಧತೆ ಮತ್ತು ಪರೀಕ್ಷೆಯನ್ನು ಎದುರಿಸುವ ಬಗೆಯನ್ನು ತಿಳಿಸಿದರು. ಕನ್ನಡ ಮಾಧ್ಯಮದ ಮುಖ್ಯೋಪಾಧ್ಯಾಯರಾದ ಗಣೇಶ್ ವಾಗ್ಲೆ ಶ್ರೀಮಾನ್ ರವರು ವಿದ್ಯಾರ್ಥಿಗಳ ಜೊತೆ ಕಳೆದ ನೆನಪುಗಳನ್ನು ಮೆಲುಕು ಹಾಕುತ್ತಾ ವಿದ್ಯಾರ್ಥಿಗಳ ಕುರಿತು ಅನಿಸಿಕೆಯನ್ನು ವ್ಯಕ್ತಪಡಿಸಿ ಅವರ ಮುಂದಿನ ಜೀವನಕ್ಕೆ ಶುಭ ಹಾರೈಸಿದರು. ಆಂಗ್ಲ ಮಾಧ್ಯಮದ ಶಿಕ್ಷಕಿಯಾದ ಕಾವ್ಯ ಮಾತಾಜಿಯವರು, "ಸದಾ ಈ ವಿದ್ಯಾಲಯದ ಬಾಗಿಲು ನಿಮಗಾಗಿ ತೆರೆದಿದೆ ನಿಮ್ಮ ಮುಂದಿನ ಜೀವನ ಉಜ್ವಲವಾಗಲಿ"ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ *ಶ್ರೀರಾಮ ವಿದ್ಯಾಲಯದ ಅಧ್ಯಕ್ಷರು ಡಾ| ಮುರುಳಿಧರ ಶ್ರೀಮಾನ್* ರವರು ಅವರ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುತ್ತಾ ಭಾವುಕರಾಗಿ ವಿದ್ಯಾರ್ಥಿಗಳಿಗೆ ಆಶೀರ್ವದಿಸಿದರು.ಶ್ರೀಮತಿ ಸುಜನ ಮಾತಾಜಿ ಕಾರ್ಯಕ್ರಮವನ್ನು ನಿರೂಪಿಸಿದರು. ಶ್ರೀಮತಿ ಅಶ್ವಿನಿ ಮಾತಾಜಿ ವಂದಿಸಿದರು. ನಂತರ ಬಾಳೆ ಎಲೆಯ ಊಟದೊಂದಿಗೆ *ಪೋಷಕರು ತಮ್ಮ ಮಕ್ಕಳಿಗೆ ಕೈ ತುತ್ತನ್ನು* ನೀಡುವುದರ ಮೂಲಕ ಸಂಭ್ರಮಿಸಿದರು.

Post a Comment

Previous Post Next Post