*ಶಿವಾರು ಮಹಿಳಾ ಹಾಲು ಉತ್ಪಾದಕರ ಸಹಕಾರಿ ಸಂಘ ಉದ್ಘಾಟನಾ ಕಾರ್ಯಕ್ರಮ*
ಗೋಳಿತ್ತೊಟ್ಟು: ಆಲಂತಾಯ ಗ್ರಾಮದ ಶಿವಾರಿನಲ್ಲಿ ಶಿವಾರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ ನಿಯಮಿತದ ನೂತನ ಶಾಖೆಯನ್ನು ಉದ್ಘಾಟನೆಯನ್ನು ದಕ್ಷಿಣಕನ್ನಡ ಸಹಕಾರ ಹಾಲು ಒಕ್ಕೂಟ (ನಿ.) ಮಂಗಳೂರು ಇದರ ಅಧ್ಯಕ್ಷರಾದ ಶ್ರೀ ರವಿರಾಜ ಹೆಗ್ಡೆ ಕೂಡವೂರು ಅವರು ನೆರವೇರಿಸಿದರು.
ಬಳಿಕ ಮಾತನಾಡಿದ ಅವರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಮೂಲಕ ಮಹಿಳಾ ಸಹಕಾರಿಗಳು ಸಬಲೀಕರಣಗೊಳ್ಳುತ್ತಿದ್ದಾರೆ. ಹಾಲು ಉತ್ಪಾದನೆಯಲ್ಲಿ ಇನ್ನಷ್ಟು ಹೆಚ್ಚಿನ ಸಾಧನೆಯನ್ನು ಮಾಡುವ ಮೂಲಕ ಗ್ರಾಮೀಣ ಭಾಗದಲ್ಲಿ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಬೇಕು. ಗುಣಮಟ್ಟದ ಹಾಲನ್ನು ಸಂಘಕ್ಕೆ ಹಾಕುವುದರ ಮೂಲಕ ಎಲ್ಲ ಸದಸ್ಯರು ಸಹಕರಿಸುವಂತೆ ಶುಭ ಹಾರೈಸಿದರು. ಸಭೆಯ ಅಧ್ಯಕ್ಷತೆಯನ್ನು ಶಿವಾರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘ (ನಿ.) ಇದರ ಅಧ್ಯಕ್ಷರಾದ ಶ್ರೀಮತಿ ಮಾಲತಿ ಜಿ. ಇವರು ವಹಿಸಿದ್ದರು. ದಕ್ಷಿಣ ಕನ್ನಡ ಸಹಕಾರ ಹಾಲು ಒಕ್ಕೂಟ ನಿಯಮಿತ ಮಂಗಳೂರು ಇದರ ನಿರ್ದೇಶಕರುಗಳಾದ ಶ್ರೀಮತಿ ಸವಿತಾ ಎನ್. ಶೆಟ್ಟಿ, ಶ್ರೀ ಕೆ. ಚಂದ್ರಶೇಖರ್ ರಾವ್, ಭರತ್ ನೆಕ್ರಾಜೆ, ವ್ಯವಸ್ಥಾಪಕ ನಿರ್ದೇಶಕರಾದ ವಿವೇಕ. ಡಿ. ವ್ಯವಸ್ಥಾಪಕರಾದ ಡಾ|| ರವಿರಾಜ್ ಉಡುಪ ಮುಂತಾದವರು ಶುಭಹಾರೈಸಿದರು.
ದ.ಕ. ಜಿಲ್ಲಾ ಹಾಲು ಒಕ್ಕೂಟ ನಿಯಮಿತದ ಉಪವ್ಯವಸ್ಥಾಪಕರಾದ ಡಾ. ಬಿ.ಆರ್. ಸತೀಶ್ ರಾವ್, ಕಡಬ ತಾಲೂಕು ವಿಸ್ತರಣಾಧಿಕಾರಿಗಳಾದ ನಿರಂಜನ್ ಬಿ.ಎನ್., ಶಿವಕುಮಾರ್, ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಕಿ ಲೀಲಾವತಿ ಆರ್. ಕಾರ್ಯಕಾರಿ ಮಂಡಳಿಯ ಉಪಾಧ್ಯಕ್ಷರಾದ ಶ್ರೀಮತಿ ದೀಪಿಕಾ, ನಿರ್ದೇಶಕರಾದ ಶ್ರೀಮತಿ ಭಾರತಿ ಕೆ., ಶ್ರೀಮತಿ ಸುಧಾ, ಶ್ರೀಮತಿ ತ್ರಿವೇಣಿ ವೈ.ಕೆ., ಶ್ರೀಮತಿ ರುಕ್ಮಿಣಿ, ಶ್ರೀಮತಿ ಕುಮುದಾಕ್ಷಿ ಎನ್., ಶ್ರೀಮತಿ ರೇವತಿ, ಶ್ರೀಮತಿ ತ್ರಿವೇಣಿ, ಶ್ರೀಮತಿ ಪ್ರಮೀಳ ಕೆ., ಶ್ರೀಮತಿ ಚಿತ್ರ, ಶ್ರೀಮತಿ ಪರಮೇಶ್ವರಿ, ಶ್ರೀಮತಿ ಜಾನಕಿ, ಹಾಗೂ ಹಾಲು ಪರೀಕ್ಷಕರಾದ ಶ್ರೀಮತಿ ಕಾವೇರಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಶಿವಪ್ರಸಾದ್ ಶಿವಾರು ಪ್ರಮುಖರಾದ ಜಿನ್ನಪ್ಪ ಗೌಡ ಶಿವಾರು, ರಾಮಚಂದ್ರ ನಾಯ್ಕ್ ಶಿವಾರು, ಊರಿನ ಪ್ರಮುಖರು ಹಾಗೂ ಶಿವಾರು ಹಾಲು ಉತ್ಪಾದಕರ ಮಹಿಳಾ ಸಹಕಾರಿ ಸಂಘದ ಸದಸ್ಯರುಗಳು ಉಪಸ್ಥಿತರಿದ್ದರು. ಕಾರ್ಯನಿರ್ವಾಹಕಿ ಶ್ರೀಮತಿ ಲೀಲಾವತಿ ಆರ್. ಸ್ವಾಗತಿಸಿದರು , ಉಪಾಧ್ಯಕ್ಷರಾದ ಶ್ರೀಮತಿ ದೀಪಿಕಾ ವಂದಿಸಿದರು, ಶ್ರೀಮತಿ ವೇದಾವತಿ ಪ್ರಾರ್ಥಿಸಿದರು. ಇದೇ ವೇಳೆ ಉಚಿತವಾಗಿ ಕಟ್ಟಡ ನೀಡಿ ಸಹಕರಿಸಿದ ಶಿವಪ್ರಸಾದ್ ಶಿವಾರು ಇವರಿಗೆ ಅಭಿನಂದನೆ ನೀಡಲಾಯಿತು.
Comments
Post a Comment