*ಪಟ್ಲಡ್ಕ ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ವಾರ್ಷಿಕೋತ್ಸವ, ಆಹ್ವಾನಿತ ತಂಡಗಳಿಂದ ಭಜನಾ ಕಾರ್ಯಕ್ರಮ ಮತ್ತು ಉಚಿತ ಪುಸ್ತಕ ವಿತರಣೆ.*

ಕಡಬ ತಾಲೂಕು ಕೌಕ್ರಾಡಿ ಗ್ರಾಮದ ಪಟ್ಲಡ್ಕ ಗಡಿಯಾಡಿ ಆದಿ ಮೊಗೇರ್ಕಳ ಸ್ವಾಮಿ ಕೊರಗಜ್ಜ ಹಾಗೂ ಪರಿವಾರ ದೈವಗಳ ದೈವಸ್ಥಾನದ ವಠಾರದಲ್ಲಿ ಮೇ 30ರಂದುಚಾಮುಂಡೇಶ್ವರಿ ಭಜನಾ ಮಂಡಳಿಯ ವಾರ್ಷಿಕೋತ್ಸವ,ಆಹ್ವಾನಿತ ತಂಡಗಳಿಂದ ಭಜನಾ ಕಾರ್ಯಕ್ರಮ, ಉಚಿತ ಪುಸ್ತಕ ವಿತರಣೆ ನಡೆಯಿತು.ಹಿರಿಯ ಭಜಕರಾದ ಪುರುಷೋತ್ತಮ ಉಪ್ಪಿನಂಗಡಿ ದೀಪ ಬೆಳಗಿ ಉದ್ಘಾಟಿಸಿದರು. ಚಾಮುಂಡೇಶ್ವರಿ ಭಜನಾ ಮಂಡಳಿಯ ಅಧ್ಯಕ್ಷರು ಗೀತಾ ನೆಲ್ಯಡ್ಕ ಸಭಾಧ್ಯಕ್ಷತೆ ವಹಿಸಿದ್ದರು, ಕಡಬ ಭಜನಾ ಪರಿಷತ್ ಅಧ್ಯಕ್ಷರು ಸುಂದರ ಗೌಡ ಒಗ್ಗು,ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಕಾರ್ಯನಿರ್ವಾಹಣಾಧಿಕಾರಿ ದಯಾಕರ ರೈ, ಭಜನಾ ತರಬೇತಿ ದಾರ ಹರೀಶ್ ನೆರಿಯ,
 ಶ್ರೀ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷರು ತುಕ್ರಪ್ಪ ಶೆಟ್ಟಿ ನೂಜಿ ಮಾತನಾಡಿ ಶುಭ ಹಾರೈಸಿದರು. ಪುರುಷೋತ್ತಮ ಗೌಡ ಮಡ್ಯಾಲ ಗುಂಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಜಿಲ್ಲಾ ಸಮನ್ವಯ ಅಧಿಕಾರಿ ಸಂತೋಷ್ ಅಳಿಯೂರು,ಪಟ್ಲಡ್ಕ ಕ್ಷೇತ್ರದ ಉಪಾಧ್ಯಕ್ಷರು ಹರೀಶ್ ಪಿ,ಮೊದಲಾದವರು ಉಪಸ್ಥಿತರಿದ್ದರು.
ಸಾಧಕರಾದ ಹರೀಶ್ ಪಿ, ಪ್ರಕಾಶ್ ರಾವ್, ನವೀನ್, ಸತೀಶ್ ಪಿ,ಬಾಬಣ್ಣ, ಸುಶೀಲ, ಲೀಲಾವತಿ, ಮತ್ತು ದಾನಿಗಳಾದ ಬೆಂಗಳೂರಿನ ತಗ್ಗಟ್ಟಿ ಚೆನ್ನಾಚಾರಿ ಚಂದ್ರಮ್ಮ ಇವರನ್ನು ಸನ್ಮಾನಿಸಲಾಯಿತು.

ಶ್ರೀ ಕ್ಷೇತ್ರ ಮಾಣಿಲದ ಪರಮ ಪೂಜ್ಯ ಶ್ರೀ ಶ್ರೀ ಮೋಹನದಾಸ ಸ್ವಾಮೀಜಿಗಳು ಆಶೀರ್ವಚನ ನೀಡಿ
ಸಾತ್ವಿಕಗುಣಭರಿತ, ಪ್ರಬುದ್ಧ ಸಮಾಜ ನಿರ್ಮಾಣದ ಕಲ್ಪನೆಯೊಂದಿಗೆ ಮುಂದಿನ ಪೀಳಿಗೆಗೆ ಭಜನೆಯ ಕಡೆಗೆ ಸೆಳೆತವನ್ನು ತುಂಬುವ ಪ್ರಯತ್ನ ಶ್ರೀ ಕ್ಷೇತ್ರ ಧರ್ಮಸ್ಥಳದ ಮೂಲಕ ನಡೆದಿದೆ ಅದರ ಮೂಲಕ ಈಗ ಎಲ್ಲೆಡೆಯು ಭಜನೆಯ ನಿನಾದ ಪ್ರತಿಧ್ವನಿಸುತಿದೆ, ಭಜನೆಗೆ ಶಿಸ್ತು, ಪ್ರಬುದ್ಧತೆ ನೀಡಿದ ಕೀರ್ತಿ ಶ್ರೀ ಕ್ಷೇತ್ರ ಕ್ಕೆ ಸಲ್ಲಬೇಕು,ಚೈತನ್ಯ ಪ್ರಭುಗಳು ಇಸ್ಕಾನ್ ಮೂಲಕ ದೇವರ ನಾಮ ಸಂಕೀರ್ತನೆಯನ್ನು ಹಾಡುವ ಭಕ್ತಿಯ ಕಲ್ಪನೆಯನ್ನು ಆರಂಭಿಸಿದ್ದು ಇದೀಗ ಜಗತ್ತಿನ ಗಮನ ಸೆಳೆದಿದೆ ಇದು ಸನಾತನ ಹಿಂದೂ ಸಂಸ್ಕೃತಿಗೆ ಸಂದ ಗೌರವ ಎಂದರು.
    ಕಾರ್ಯಕ್ರಮದಲ್ಲಿ ಸುಮಾರು 500 ಮಕ್ಕಳಿಗೆ ಉಚಿತ ಪುಸ್ತಕ ವಿತರಿಸಲಾಯಿತು.ದೀಕ್ಷಾ ಸಾಲಿಯಾನ್ ಸ್ವಾಗತಿಸಿ, ಲತಾ ವಿಠ್ಠಲ ಪಟ್ಲಡ್ಕ ಧನ್ಯವಾದ ಸಮರ್ಪಿಸಿದರು.

Comments

Popular posts from this blog

ಕುಕ್ಕೆ ಸುಬ್ರಹ್ಮಣ್ಯ ರಥಬೀದಿಯಲ್ಲಿ ಭಕ್ತನ ಮೇಲೆ ಸೌಟಿನಿಂದ ಹಲ್ಲೆ – ವೈರಲ್ ವಿಡಿಯೋ, ದೇವಸ್ಥಾನ ಮೆನೇಜರ್ ಮೌನಕ್ಕೆ ಸಾರ್ವಜನಿಕ ಆಕ್ರೋಶ!

ಕುಕ್ಕೆ ಸುಬ್ರಹ್ಮಣ್ಯ: ಸಾರಿಗೆ ವ್ಯವಸ್ಥೆಯಲ್ಲಿ ಖಾಸಗಿ ಬಸ್ ಸಂಸ್ಥೆಯ ನೂತನ ಹೆಜ್ಜೆ – ಗ್ರಾಮೀಣ ಭಾಗದ ಅಭಿವೃದ್ಧಿಗೆ ಬಲ.

ರಾಮಕುಂಜದಲ್ಲಿ ಹೀಗೊಂದು ಬೇನರ್ - ಬೇನರ್ ಅಳವಡಿಸಿ ತಾಕತ್ತು ತೋರಿದ ಜನರು!