ರಾಮಕುಂಜ: ತಮ್ಮ ಮಗಳು ಡಾ. ಮೌಲಿಕಾ ಮತ್ತು ಅಳಿಯ ಡಾ. ಆದರ್ಶ ಅವರ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವದಿಸಿದ ಬಂಧುಗಳು, ಆಪ್ತರು ಹಾಗೂ ಸ್ನೇಹಿತರಿಗೆ ಶ್ರೀಮತಿ ಸಂಧ್ಯಾ ಮತ್ತು ಟಿ. ನಾರಾಯಣ ಭಟ್ ಅವರು ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದ್ದಾರೆ.
ಮಕ್ಕಳ ವಿವಾಹವನ್ನು ಬಂಧು–ಬಳಗದ ಸಮ್ಮುಖದಲ್ಲಿ ಸಂತೋಷದಿಂದ ನೆರವೇರಿಸಬೇಕೆಂಬುದು ಪ್ರತಿಯೊಬ್ಬ ಪೋಷಕರ ಜೀವಮಾನ ಕನಸು. ದೇವರ ಅನುಗ್ರಹ ಹಾಗೂ ಮನಸ್ಸುಗಳ ಬಾಂಧವ್ಯದಿಂದಲೇ ಇಂತಹ ಸಮಾರಂಭಗಳು ಯಶಸ್ವಿಯಾಗುತ್ತವೆ ಎಂದು ಅವರು ತಿಳಿಸಿದ್ದಾರೆ. ಒಂದೇ ಶುಭ ಮುಹೂರ್ತದಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲೂ, ದೂರದೂರಿನಿಂದ ಪ್ರಯಾಣಿಸಿ ವಿವಾಹಕ್ಕೆ ಆಗಮಿಸಿ ಶುಭಾಶಯ ಕೋರಿರುವುದು ತಮ್ಮ ಕುಟುಂಬಕ್ಕೆ ಅಪಾರ ಸಂತೋಷ ತಂದಿದೆ ಎಂದು ತಿಳಿಸಿದ್ದಾರೆ.
ನೂರಾರು ಮೈಲುಗಳ ಅಂತರವಿದ್ದರೂ, ವ್ಯಸ್ತತೆಯ ನಡುವೆಯೂ ಸಮಯ ಮೀಸಿ ಆಗಮಿಸಿದ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಪ್ರಮುಖರು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಸಮಾರಂಭದಲ್ಲಿ ಪಾಲ್ಗೊಂಡು ಹೃದಯಸ್ಪರ್ಶಿ ಮಾತುಗಳ ಮೂಲಕ ಆಶೀರ್ವಾದ ಹಾಗೂ ಬಲ ತುಂಬಿದ ಎಲ್ಲರಿಗೂ ಕುಟುಂಬದ ಪರವಾಗಿ ಶಿರೋನಮನ ಸಲ್ಲಿಸಿರುವುದಾಗಿ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಬಂಧುಗಳ ಪ್ರೀತಿ, ಸಹಕಾರ ಹಾಗೂ ಆಶೀರ್ವಾದವೇ ತಮ್ಮ ಕುಟುಂಬದ ಶಕ್ತಿ ಎಂದು ಉಲ್ಲೇಖಿಸಿರುವ ಸಂಧ್ಯಾ ಮತ್ತು ನಾರಾಯಣ ಭಟ್ ದಂಪತಿ, ಈ ಮಧುರ ಬಾಂಧವ್ಯ ಜೀವನಪರ್ಯಂತ ಮುಂದುವರಿಯಲಿ ಎಂದು ಆಶಿಸಿದ್ದಾರೆ.
Post a Comment