ನಾಳೆಯಿಂದ (ಫೆಬ್ರವರಿ.28) ದ್ವಿತೀಯ ಪಿಯುಸಿ ಪರೀಕ್ಷೆ-1 ಆರಂಭ: ಆತ್ಮವಿಶ್ವಾಸ, ಶಿಸ್ತು ಮತ್ತು ಸಮರ್ಪಕ ತಯಾರಿಯೇ ಯಶಸ್ಸಿನ ಗುಟ್ಟು!!

ಫೆಬ್ರವರಿ 28, 2026 ರಿಂದ ಮಾರ್ಚ್ 17, 2026 ರವರೆಗೆ ನಡೆಯುವ ದ್ವಿತೀಯ ಪಿಯುಸಿ ಪರೀಕ್ಷೆ–1 ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಹಾರ್ದಿಕ ಶುಭಾಶಯಗಳು!
ಇಡೀ ರಾಜ್ಯದ ವಿದ್ಯಾರ್ಥಿಗಳು ಈ ಮಹತ್ವದ ಪರೀಕ್ಷೆಯನ್ನು ಆತ್ಮವಿಶ್ವಾಸದಿಂದ ಎದುರಿಸಲು ಸಜ್ಜಾಗಿದ್ದಾರೆ. ಎರಡು ವರ್ಷಗಳ ನಿರಂತರ ಪರಿಶ್ರಮ, ಶಿಸ್ತುಬದ್ಧ ಅಧ್ಯಯನ ಮತ್ತು ಗುರುಗಳ ಮಾರ್ಗದರ್ಶನದ ಫಲಶ್ರುತಿಯೇ ಈ ಪರೀಕ್ಷೆ. ಉನ್ನತ ಶಿಕ್ಷಣದ ದಾರಿಯಲ್ಲಿಯೂ ಹಾಗೂ ಸರ್ಕಾರಿ–ಖಾಸಗಿ ಉದ್ಯೋಗಾವಕಾಶಗಳ ದೃಷ್ಟಿಯಿಂದಲೂ ಇದು ಮಹತ್ವದ ಹಂತವಾಗಿದೆ.
ವಿದ್ಯಾರ್ಥಿಗಳೇ, ಪರೀಕ್ಷೆಯ ಅಂತಿಮ ಹಂತದಲ್ಲಿ ಸಮಾಧಾನ, ಆತ್ಮವಿಶ್ವಾಸ ಮತ್ತು ಧೈರ್ಯ ನಿಮ್ಮ ಬಲವಾಗಿರಲಿ. ಯಶಸ್ಸು ನಿಮ್ಮ ಪರಿಶ್ರಮಕ್ಕೆ ಖಚಿತ ಪ್ರತಿಫಲ ನೀಡುತ್ತದೆ.
ಪರೀಕ್ಷಾ ತಯಾರಿಯ ಅಂತಿಮ ಸೂಚನೆಗಳು:
✓ ಈಗಾಗಲೇ ಉತ್ತಮ ತಯಾರಿ ಮಾಡಿಕೊಂಡಿರುವ ನೀವು ಯಾವುದೇ ಆತಂಕಕ್ಕೆ ಒಳಗಾಗಬೇಡಿ.
✓ ಹೊಸ ವಿಷಯಗಳನ್ನು ಕಲಿಯಲು ಯತ್ನಿಸುವುದಕ್ಕಿಂತ, ಓದಿರುವ ಪಾಠಗಳ ಪುನರಾವರ್ತನೆಗೆ ಹೆಚ್ಚು ಆದ್ಯತೆ ನೀಡಿ.
✓ ಸಂಕ್ಷಿಪ್ತ ನೋಟ್ಸ್‌ಗಳನ್ನು ಓದಿ, ಪ್ರಮುಖ ಅಂಶಗಳನ್ನು ಮನನ ಮಾಡಿ.
✓ ಮೊಬೈಲ್ ಫೋನ್ ಮತ್ತು ಲ್ಯಾಪ್‌ಟಾಪ್ ಬಳಕೆಯನ್ನು ಕಡಿಮೆ ಮಾಡಿ; ಆರೋಗ್ಯಕರ ಆಹಾರ ಸೇವಿಸಿ, ಸಾಕಷ್ಟು ನೀರು ಕುಡಿಯಿರಿ.
✓ ಪ್ರತಿದಿನ ಕನಿಷ್ಠ 6–7 ಗಂಟೆಗಳ ಸಮರ್ಪಕ ನಿದ್ರೆ ಪಡೆಯಿರಿ.
✓ ಪರೀಕ್ಷೆಯ ದಿನ ಕನಿಷ್ಠ 30 ನಿಮಿಷಗಳ ಮುಂಚಿತವಾಗಿ ಪರೀಕ್ಷಾ ಕೇಂದ್ರಕ್ಕೆ ತಲುಪಿರಿ.
✓ ನಿಮ್ಮ ನೋಂದಣಿ ಸಂಖ್ಯೆ ಹಾಲ್ ಟಿಕೆಟ್‌ನಲ್ಲಿರುವ ಸಂಖ್ಯೆಗೆ ಸರಿಹೊಂದಿದೆಯೇ ಎಂದು ಖಚಿತಪಡಿಸಿಕೊಳ್ಳಿ.
✓ ಕೊಠಡಿ ಮೇಲ್ವಿಚಾರಕರ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ.
✓ ಪ್ರಶ್ನೆ ಪತ್ರಿಕೆಯನ್ನು ಸಂಪೂರ್ಣವಾಗಿ ಓದಿ, ಸುಲಭ ಪ್ರಶ್ನೆಗಳಿಂದ ಉತ್ತರ ಬರೆಯಲು ಪ್ರಾರಂಭಿಸಿ.
✓ ಉತ್ತರಗಳು ಅಂದವಾಗಿ, ಸ್ಪಷ್ಟವಾಗಿ ಮತ್ತು ಕ್ರಮಬದ್ಧವಾಗಿ ಇರಲಿ. ಪ್ರಶ್ನೆ ಸಂಖ್ಯೆಯನ್ನು ಸರಿಯಾಗಿ ನಮೂದಿಸಿ.
✓ ಯಾವುದೇ ಒತ್ತಡಕ್ಕೆ ಒಳಗಾಗದೆ, ಶಾಂತ ಮನಸ್ಸಿನಿಂದ ಉತ್ತರ ಬರೆಯಿರಿ.
✓ ಪರೀಕ್ಷೆ ಮುಗಿಯುವ ಮೊದಲು ಉತ್ತರ ಪತ್ರಿಕೆಯನ್ನು ಪರಿಶೀಲಿಸಿ, ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ.
ಪರೀಕ್ಷೆ ಎಂದರೆ ಭಯವಲ್ಲ – ಅದು ನಿಮ್ಮ ಸಾಮರ್ಥ್ಯವನ್ನು ತೋರಿಸುವ ಅವಕಾಶ. ಧೈರ್ಯದಿಂದ ಮುಂದೆ ಸಾಗಿರಿ. ನಿಮ್ಮ ಪರಿಶ್ರಮಕ್ಕೆ ಖಂಡಿತವಾಗಿಯೂ ಯಶಸ್ಸಿನ ಮುದ್ರೆ ಸಿಗಲಿದೆ.
ಪರೀಕ್ಷೆ ಬರೆಯುವ ಎಲ್ಲಾ ವಿದ್ಯಾರ್ಥಿಗಳಿಗೆ ಹಾರ್ದಿಕ ಶುಭಾಶಯಗಳು.
ಯಶಸ್ಸು ನಿಮ್ಮದಾಗಲಿ, ಭವಿಷ್ಯ ಉಜ್ವಲವಾಗಲಿ!
— ಜೇಸಿ ಮೋಹನ್ ಚಂದ್ರ
ತೋಟದ ಮನೆ
ಉಪನ್ಯಾಸಕರು ಹಾಗೂ ವ್ಯಕ್ತಿತ್ವ ವಿಕಸನ ತರಬೇತಿದಾರರು

Post a Comment

Previous Post Next Post