ಕುಕ್ಕೆ:ಎಸ್‌ಎಸ್‌ಪಿಯುನ ರಾಜ್ಯ ಮಟ್ಟದ ಕ್ರೀಡಾಳುಗಳಿಗೆ ಗೌರವಾರ್ಪಣೆ.

ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಎಸ್.ಎಸ್.ಪಿ.ಯು ಕಾಲೇಜಿನ ನಾಲ್ಕು ಮಂದಿ ವಿದ್ಯಾರ್ಥಿಗಳು ಟೆನ್ನಿಕಾಯ್ಟ್ ಮತ್ತು ಟ್ವೆಕಾಂಡೋ ಟೇಕ್ವಾಂಡೋ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಿದ್ದರು.ಇವರಿಗೆ ಕಾಲೇಜಿನ ಪ್ರಾಚಾರ್ಯ ಸೋಮಶೇಖರ ನಾಯಕ್ ಪದಕ ಮತ್ತು ಪ್ರಮಾಣ ಪತ್ರ ನೀಡಿ ಶುಕ್ರವಾರ ಗೌರವಿಸಿದರು ಮತ್ತು ಆಶೀರ್ವದಿಸಿದರು.
 ಪದವಿಪೂರ್ವ ಕಾಲೇಜು ಬಾಲಕರ ವಿಭಾಗದ ರಾಜ್ಯ ಮಟ್ಟದ ಟೆನ್ನಿಕಾಯ್ಟ್ ಸ್ಪರ್ಧೆಯಲ್ಲಿ ದ.ಕ ಜಿಲ್ಲಾ ತಂಡವು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿತ್ತು.ಈ ತಂಡದಲ್ಲಿದ್ದ ಕಾಲೇಜಿನ ಪ್ರಥಮ ಕಲಾ ವಿಭಾಗದ ವಿದ್ಯಾರ್ಥಿ ಯಜ್ಞೇಶ್ ದೇವರಗದ್ದೆ ಅವರನ್ನು ಆರಂಭದಲ್ಲಿ ಗೌರವಿಸಿದರು.ಬಳಿಕ ರಾಜ್ಯ ಮಟ್ಟದ ಬಾಲಕಿಯರ ವಿಭಾಗದ ಟೆನ್ನಿಕಾಯ್ಟ್ ಪಂದ್ಯಾಟದಲ್ಲಿ ಭಾಗವಹಿಸಿದ್ದ ಸುಪ್ರಿಯಾ ಸುಬ್ರಹ್ಮಣ್ಯ ಮತ್ತು ಕೃತೀಕ್ಷಾ ಹಾಗೂ ರಾಜ್ಯ ಮಟ್ಟದ ಟೇಕ್ವಾಂಡೋ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಚಾಣಸ್ಯ ಕಟುವಾಲ್ ಛೇತ್ರಿ ಅವರನ್ನು ಪ್ರಾಚಾರ್ಯರು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕಾಲೇಜಿನ ಹಿರಿಯ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್, ದೈಹಿಕ ಶಿಕ್ಷಣ ಉಪನ್ಯಾಸಕ ರಾಧಾಕೃಷ್ಣ ಚಿದ್ಗಲ್, ಹಿರಿಯ ಉಪನ್ಯಾಸಕಿ ಜಯಶ್ರೀ.ವಿ.ದಂಬೆಕೋಡಿ, ಉಪನ್ಯಾಸಕರಾದ ಮನೋಜ್ ಕುಮಾರ್ ಬಿ.ಎಸ್, ಪ್ರವೀಣ್.ಎ, ರತ್ನಾಕರ ಸುಬ್ರಹ್ಮಣ್ಯ, ಉಪನ್ಯಾಸಕಿಯರಾದ ಸವಿತಾ ಕೈಲಾಸ್,ಸುಧಾ, ಸೌಮ್ಯಾ ದಿನೇಶ್, ಶ್ರುತಿ, ಸೌಮ್ಯಕೀರ್ತಿ, ಪೂರ್ಣಿಮಾ, ಭವ್ಯಶ್ರೀ ಹರೀಶ್ ಕುಲ್ಕುಂದ ಮಾನಸ ಭಟ್ ಕ್ರೀಡಾಸಾಧಕರನ್ನು ಅಭಿನಂದಿಸಿದರು.

Comments

Popular posts from this blog

ಕುಕ್ಕೆ ಸುಬ್ರಹ್ಮಣ್ಯ ರಥಬೀದಿಯಲ್ಲಿ ಭಕ್ತನ ಮೇಲೆ ಸೌಟಿನಿಂದ ಹಲ್ಲೆ – ವೈರಲ್ ವಿಡಿಯೋ, ದೇವಸ್ಥಾನ ಮೆನೇಜರ್ ಮೌನಕ್ಕೆ ಸಾರ್ವಜನಿಕ ಆಕ್ರೋಶ!

ಕುಕ್ಕೆ ಸುಬ್ರಹ್ಮಣ್ಯ: ಸಾರಿಗೆ ವ್ಯವಸ್ಥೆಯಲ್ಲಿ ಖಾಸಗಿ ಬಸ್ ಸಂಸ್ಥೆಯ ನೂತನ ಹೆಜ್ಜೆ – ಗ್ರಾಮೀಣ ಭಾಗದ ಅಭಿವೃದ್ಧಿಗೆ ಬಲ.

ರಾಮಕುಂಜದಲ್ಲಿ ಹೀಗೊಂದು ಬೇನರ್ - ಬೇನರ್ ಅಳವಡಿಸಿ ತಾಕತ್ತು ತೋರಿದ ಜನರು!