ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ನೂತನ ಬೆಳ್ಳಿಯ ಪಲ್ಲಕಿ ಸೇವೆ -ಶ್ರೀ ದೇವಳಕ್ಕೆ ನೂತನ ಬೆಳ್ಳಿಯ ಪಲ್ಲಕಿಯ ಆಗಮನ.

ಕುಕ್ಕೆ ಸುಬ್ರಹ್ಮಣ್ಯ; ಡಿ ,15, ಬಾಗಲಕೋಟೆ  ಉದ್ಯಮಿ ನಾಗರಾಜ ಕುಲಕರ್ಣಿ, ಭಾರ್ಗವಿ ಕುಲಕರ್ಣಿ, ಭೀಮಾಜಿ, ವೈ.ಎಸ್. ಗಲಗಲಿ ಜಮಖಂಡಿ ಮತ್ತು ಕುಟುಂಬಸ್ಥರು ಸೇರಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಶ್ರೀ ದೇವರಿಗೆ ನೂತನ ಬೆಳ್ಳಿಯ ಪಲ್ಲಕಿಯ ಸೇವೆ,ನೀಡಲಿದ್ದು ಅದರ ಪುರಪ್ರವೇಶ ಇಂದು (ಡಿ.15 ) ರಂದು ನಡೆಯಿತು.



ಅದ್ದೂರಿ ಮೆರವಣಿಗೆಯಲ್ಲಿ ಅದನ್ನು ದೇವಸ್ಥಾನಕ್ಕೆ ತರಲಾಯಿತು. ಕಾಶಿಕಟ್ಟೆಯಿಂದ ಆನೆ ಬಿರುದಾವಲಿಗಳಿದ್ದು ಮೆರವಣಿಗೆಯಲ್ಲಿ ಬರಲಾಯಿತು.
ಈ ಸಂದರ್ಭ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಪಲ್ಲಕಿ ದಾನಿಗಳ ಕುಟುಂಬ ಸ್ನೇಹಿತ ಶ್ರೀಕುಮಾರ್ ಬಿಲದ್ವಾರ, ಮಾಸ್ಟರ್ ಪ್ಲಾನ್ ಸದಸ್ಯ ಸತೀಶ್ ಕೂಜುಗೋಡು ಮತ್ತಿತರರು ಉಪಸ್ಥಿತರಿದ್ದರು.
ನಾಳೆ (ಡಿ.16) ರಂದು ಇದರ ಸಮರ್ಪಣೆ ಆಗಲಿರುವುದಾಗಿ ತಿಳಿದು ಬಂದಿದೆ. 

Comments

Popular posts from this blog

ಕುಕ್ಕೆ ಸುಬ್ರಹ್ಮಣ್ಯ ರಥಬೀದಿಯಲ್ಲಿ ಭಕ್ತನ ಮೇಲೆ ಸೌಟಿನಿಂದ ಹಲ್ಲೆ – ವೈರಲ್ ವಿಡಿಯೋ, ದೇವಸ್ಥಾನ ಮೆನೇಜರ್ ಮೌನಕ್ಕೆ ಸಾರ್ವಜನಿಕ ಆಕ್ರೋಶ!

ರಾಮಕುಂಜದಲ್ಲಿ ಹೀಗೊಂದು ಬೇನರ್ - ಬೇನರ್ ಅಳವಡಿಸಿ ತಾಕತ್ತು ತೋರಿದ ಜನರು!

ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಕಲಿ ವಸತಿಗೃಹ ವೆಬ್‌ಸೈಟ್ ಮೂಲಕ ಸೈಬರ್ ವಂಚನೆ ಆರೋಪ: ಭಕ್ತರು ಎಚ್ಚರ ವಹಿಸುವಂತೆ ಮನವಿ