ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ, ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಂದ ಅಧ್ಯಯನ ಭೇಟಿ.

ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯ ಸುಬ್ರಹ್ಮಣ್ಯ ವಾಣಿಜ್ಯ ಮತ್ತು ಉದ್ಯಮಾಡಳಿತ ವಿಭಾಗ ಹಾಗೂ ಆಂತರಿಕ ಗುಣಮಟ್ಟ ಭರವಸಾ ಕೋಶ ಇದರ ಸಹಯೋಗದೊಂದಿಗೆ ಒಂದು ದಿನದ ಅಧ್ಯಯನ ಭೇಟಿಯನ್ನು ಪ್ರಥಮ ವರ್ಷದ ವಾಣಿಜ್ಯ ಪದವಿಯ ವಿದ್ಯಾರ್ಥಿಗಳಿಗೆ ಹಮ್ಮಿಕೊಳ್ಳಲಾಯಿತು. ಮುರುಳ್ಯದ ಕ್ಷೀರ ಎಂಟರ್ಪ್ರೈಸಸ್ ಇಲ್ಲಿಗೆ ಭೇಟಿ ನೀಡಿ ಈ ಸಂಸ್ಥೆಯ ಸಂಸ್ಥಾಪಕರಾದ ಶ್ರೀ ರಾಘವ ಗೌಡ ಅವರ ಸಂಶೋಧನೆ ಮತ್ತು ಸಾಧನೆ, ಸಂಸ್ಥೆಯ ಈಗಿನ ಉತ್ಪನ್ನಗಳು ಹಾಗೂ ಯುವ ಪೀಳಿಗೆಗೆ ಪೂರಕವಾದ ವಿಚಾರಗಳನ್ನು ಸಂಸ್ಥೆಯ ಮಾಲಕರಾದ ಶ್ರೀಮತಿ ಮೈನಾ ಮತ್ತು ಶ್ರೀಮತಿ ಮಧು ಅವರು ವಿದ್ಯಾರ್ಥಿಗಳಿಗೆ ತಿಳಿಸಿದರು.
 ಪಂಜದ ವನಸಿರಿ ಇಲ್ಲಿಗೆ ಭೇಟಿ ನೀಡಿ, ಇದರ ಮಾಲಕರಾದ ಶ್ರೀ ದಯಾಪ್ರಸಾದ್ ಚೀಮುಳ್ಳು ಇವರು ತಮ್ಮ ತೋಟದಲ್ಲಿ ಲಭ್ಯವಿರುವ ಸುಮಾರು ಒಂದು ಸಾವಿರಕ್ಕಿಂತ ಹೆಚ್ಚಿನ ವಿವಿಧ ಬಗೆಯ ಹಣ್ಣಿನ ತಳಿಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮವನ್ನು ವಾಣಿಜ್ಯಶಾಸ್ತ್ರ ಉಪನ್ಯಾಸಕ ರಮನಾಥ್ ಹಾಗೂ ಅಶ್ವಿನಿ ಎಸ್ .ಎನ್ ಸಂಯೋಜಿಸಿದರು.

Comments

Popular posts from this blog

ಕುಕ್ಕೆ ಸುಬ್ರಹ್ಮಣ್ಯ ರಥಬೀದಿಯಲ್ಲಿ ಭಕ್ತನ ಮೇಲೆ ಸೌಟಿನಿಂದ ಹಲ್ಲೆ – ವೈರಲ್ ವಿಡಿಯೋ, ದೇವಸ್ಥಾನ ಮೆನೇಜರ್ ಮೌನಕ್ಕೆ ಸಾರ್ವಜನಿಕ ಆಕ್ರೋಶ!

ಕುಕ್ಕೆ ಸುಬ್ರಹ್ಮಣ್ಯ: ಸಾರಿಗೆ ವ್ಯವಸ್ಥೆಯಲ್ಲಿ ಖಾಸಗಿ ಬಸ್ ಸಂಸ್ಥೆಯ ನೂತನ ಹೆಜ್ಜೆ – ಗ್ರಾಮೀಣ ಭಾಗದ ಅಭಿವೃದ್ಧಿಗೆ ಬಲ.

ರಾಮಕುಂಜದಲ್ಲಿ ಹೀಗೊಂದು ಬೇನರ್ - ಬೇನರ್ ಅಳವಡಿಸಿ ತಾಕತ್ತು ತೋರಿದ ಜನರು!